ಹುಡುಗುರ ಒಳಗ ಈ 11 ಗುಣಾ ಇದ್ರ ಹುಡುಗೀರಿಗೆ ಭಾಳ ಇಷ್ಟ, ಆದ್ರ ಯಾ ಹುಡಗೀನೂ ಬಾಯ್ಬಿಟ್ಟ ಹೇಳಂಗಿಲ್ಲಾ ನೋಡಿ

ಇಲ್ಲೋಂದ ಕಣ್ಣ ಹಾಯಿಸರಿ, ದಿಲ್ ಖುಷ್ ಆಗತತಿ.

ಮೀನಿನ ಹೆಜ್ಜಿ, ಹೆಣ್ಣಿನ ಮನಸ್ಸು ಎರಡನ್ನೂ ತಿಳಕೊಳ್ಳೋದು ತ್ರಾಸ ಅಷ್ಟ ಅಲ್ಲಾ ಅಸಾಧ್ಯವಾದ ಮಾತು. ಇವತ್ತ ಹಿಂಗ ಇರು ಅಂದಿರತಾರ, ನಾಳೆ ಹಿಂಗ್ಯಾಕ ಅದೀದಿ ಅಂತಾರ. ಈಗರ ಇದು ನಂಗ ಭಾಳ ಸೇರತೇತಿ ಅಂದಿರತಾರ, ಆಗಲೆ ಇದನ್ನ ಕಂಡ್ರ ನನಗ ಆಗೂದಿಲ್ಲ ನೋಡ ಅಂತಾರ. ಆದರ ನಾವೂ ಏನ್ ಸೋಲೊಪ್ಪಕೊಳ್ಳೋದಿಲ್ಲ. ಏನೇನೋ ಮಾಡಿ ಹುಡಗರಿಗೆ ಎಂತಾ ಹುಡುಗ ಇಷ್ಟಾ ಆಗತಾರ ಅಂತ ತಿಳಕೊಣಡ ಬಂದೇವಿ. ಖಾಸ್ ನಿಮ್ಮ ಸಲುವಾಗಿ.

1. ಹುಡುಗೂರು 'ಅರ್ಧಾ ಮುಚ್ಚಿದ್ದ ಪುಸ್ತಕ'ದಂಗ ಇರಬೇಕಂತ 

ಹುಡಗೀರು ಯಾವಾಗಲೂ ತೆರೆದಿಟ್ಟ ಪುಸ್ತಕಾ ಇಷ್ಟಾ ಪಡಂಗಿಲ್ಲಾ, ಔರ ಕಷ್ಟ ಪಟ್ಟ ತಕ್ಕೋಬೇಕು. ಅಂದ್ರ ಅವರ ಕಷ್ಟಪಟ್ಟು ನಿಂ ಬಗ್ಗೆ ತಿಳಕೋಬೇಕು. ಅಂಥಾ ಹುಡಗರ ಇಷ್ಟಾ ಅವರಿಗೆ. ನಿಂ ಬಗ್ಗೆ ಏನರ ತಿಳಕೋಬೇಕು ಅಂತ ಅಲ್ಲೆ-ಇಲ್ಲೆ ವಿಚಾರಸಾ ಕತ್ತಾರಾ ಅಂದ್ರ ತಲಿ ಕೆಡಸಿಕೊಂಡಾರಾ, ಅರ್ಧಾ ಇಷ್ಟಾ ಪಟ್ಟಾರಾ ಅಂತನ ಅರ್ಥಾ.

2. ಚಾಷ್ಟಿ ಮಾಡೋ  ಹುಡುಗುರು ಇಷ್ಟ ಆಗ್ತಾರ ನೋಡ್ರಿ

ಯಾವಾಗೂ ಗುಂ... ಅಂತ ಇರೋರು ಹುಡಗೀರಿಗೆ ಅಲ್ಲಾ ಯಾರಿಗೂ ಇಷ್ಟಾ ಆಗಂಗಿಲ್ಲ ತಗೀರಿ. ಹುಡಗೂರು ಅಂದ್ರ ಚಾಷ್ಟಿ ಮಾಡಕೋತ ನಕ್ಕೋತ ಕೆಲಕೋತ ಇರಬೇಕು. ಹಂಗಂತ ಯಾರಿಗೂ ತಿಳಿಲಾರದ್ದ ಜೋಕ ಹೊಡದ ಒಬ್ಬರ ನಗೋದಲ್ಲ, ನಿಂ ನಡವಳಿಕಿಯಿಂದಾ ಹುಡಗೀ ಮುಖದಾಗ ಮದಹಾಸ ಮೂಡಬೇಕು. ಹಂಗ ಇರಬೇಕು ಹುಡುಗಂದ್ರ. 

3. ತಮ್ಮ ಮ್ಯಾಲ ತಮಗ ನಂಬಿಕಿ ಇರೋ ಹುಡುಗುರ ಇಷ್ಟ ಆಗ್ತಾರ

ಆತ್ಮ ವಿಶ್ವಾಸಾ, ಧೈರ್ಯ, ವಿವೇಕಾ, ವಿವೇಚನೆ ಇರೂ ಹುಡಗೂರು ಎಲ್ಲಾರಿಗೂ ಇಷ್ಟ ಆಗ್ತಾರ. ನಾನು ಇರೋದ ಹಿಂಗ, ನೀವು ಹಂಗ ಇರ್ರಿ... ಅಂತ ಹೇಳೊಹುಡುಗೂರು, ಹುಡಗೀರ ಜೋಡಿ ಧೈರ್ಯವಾಗಿ ಮಾತಾಡೋ ಹುಡಗೂರು ಹುಡಗೀರಿಗೆ ಇಷ್ಟಾ ಆಗತಾರ.  

4. ಇವತ್ತಿಂದಿವತ್ತು ನಾಳೆದ ನಾಳೆ ಅನ್ನೋ ಹುಡುಗುರು ಇಷ್ಟ ಆಗ್ತಾರೆ

ಏನೂ ಚಿಂತಿಲ್ಲದ ಆರಾಮಾಗಿ ಇರೋ ಹುಡುಗುರು ಹುಡಗೀರಿಗೆ ಇಷ್ಟ ಆಗ್ತಾರಂತ.  ಭವಿಷ್ಯದ ಬಗ್ಗೆ ಜಾಸ್ತಿ ತಲಿ ಕೆಡುಸ್ಕೊಳ್ಳೊವರಿಗಿಂತಾ ವರ್ತಮಾನದಾಗ ಬದಕೋರನ್ನ ಇಷ್ಟಾ ಪಡತಾರ ಔರು.

5. ಭಾವನೇನ ಸಲೀಸಾಗಿ ವ್ಯಕ್ತಪಡಿಸೋ ಹುಡುಗುರು ಇಷ್ಟ ಅಂತ

ಮನಸ್ಸಿನ ಮಾತನ್ನ ಯಾವದೇ ಹೆದರಿಕಿ, ಹಿಂಜರಿಕಿ ಇಲ್ಲದ  ಹೇಳ್ಕೊಳೋ ಹುಡುಗುರು ಲೊಗೂ ಇಷ್ಟ ಆಗ್ತಾರಂತ. ಎಲ್ಲರ ಮುಂದ ಮಾತಾಡೋವಾಗ ಸಲೀಸಾಗಿ, ಗಡಿಬಿಡಿ ಮಾಡ್ಕೊಳ್ಳಾರದೇ, ಎಲ್ಲಾರಿಗೂ ಇಷ್ಟಾ ಆಗೋಹಂಗ  ಮಾತಾಡೋರು ಹುಡಗೀರಿಗೆ ಭಾಳ ಹತ್ರ ಆಗತಾರಂತ .

6. ಯಾವದಕ್ಕೂ ಅಡ್ಡಿ ಮಾಡಲಾರದ ಹುಡಗೂರು ಇಷ್ಟ ಆಗ್ತಾರಂತ

ತಮ್ಮನ್ನ ತಾವಾಗಿ ಇರಾಕ ಬಿಡೋ ಹುಡುಗರು ಇಷ್ಟಾ ಆಗ್ತಾರಂತ ಹುಡಗೀರಿಗೆ. ಎಲ್ಯದೀದಿ, ಯಾರಜೋಡಿ ಅದೀದಿ,  ಯಾವಾಗ ಬರ್ತೀ, ಏನು ಎತ್ತ ಅಂತ ದಿನಕ್ಕ 100 ಸಲಾ ಫೋನ್ ಮಾಡಿ ತಲಿ ತಿನ್ನೋ ಹುಡುಗರನ್ನ ಯಾವ ಹುಡಗೀನೂ ಮೂಸಿನೋಡಂಗಿಲ್ಲಾ.

 

7. ಬುದ್ದಿವಂತರು ಇಷ್ಟ ಆಗ್ತಾರ

ಬುದ್ದಿವಂತರು ಅಂದ್ರ ಪುಸ್ತಕದ ಹುಳಗಳಲ್ಲ, ದೇಶ ಸುತ್ತಿ ಕೋಶ ಓದಿರೋರು. ಮಾತಾಡೋವಾಗ ಹುಡುಗೂರು ಅವರ ಅನುಭವಾ ಹೇಳೋದನ್ನ ಕೇಳಾಕ ಹುಡಗೀರಿಗೆ ಭಾಳ ಖುಷಿಯಂತ. ಏನು ಗೊತ್ತಿಲ್ದ  ಸುಮ್ಮನ ಪೆದ್ದನಂಗ ಕೂತಿರೋರು ಚೂರು ಇಷ್ಟ ಆಗಲ್ಲಂತ ಔರಿಗೆ.

8. ಸೊನ್ನಿ ಸೂಕ್ಷ್ಮ ಇರೋ ಹುಡುಗುರು ಅಂದ್ರ ಹುಡಗೀರಿಗೆ ಇಷ್ಟ ಆಗ್ತಾರ

ಹುಂಬರನ್ನ ಇಷ್ಟಾ ಪಡೋರು ಸಲ್ಪ ಕಮ್ಮಿನ. ಹುಡಗೇರಿಗಂತೂ ಹುಂಬರು ವಟ್ಟ ಸೇರಂಗಿಲ್ಲಂತ ನೋಡ್ರಿ. ತಂ ಭಾವನೆ ಅರ್ಥಾ ಮಾಡಕೊಳ್ಳೊ, ಸ್ಪಂದಿಸೋ ಅಂತ ಹುಡಗರನ್ನ ಹುಡಗೀರು ಇಷ್ಟ ಪಡ್ತಾರಂತ. ಸೂಕ್ಷ್ಮವಾದ ವಿಚಾರಾನ ಟಕ್ ಅಂತ ಅರ್ಥ ಮಾಡ್ಕೊಂಡು ಕಾರ್ಯೋನ್ಮುಖ ಆಗೊರನ್ನ ಹುಡಗೀರು ಇಷ್ಟಾ ಪಡೋದು.

9. ಇಷ್ಟವಾದ ಕೆಲಸದ ಗುಂಗನ್ಯಾಗ  ಮುಳುಗೋ ಹುಡುಗೂರು ಇಷ್ಟ ಅಂತ

ತಮಗ ಭಾಳ ಇಷ್ವಾ ಆಗಿದ್ದ ಕೆಲಸದ ಬಗ್ಗೆ ಭಾಳ ಆಸಕ್ತಿ  ಕೊಡೋರು,  ತಮ್ಮ ಕೆಲಸದ ಹುಚ್ಚು ಹಿಡಸ್ಕೊಳೋರು, ಇದ ನ್ನ ಜೀವನ ಅಂತ ನಿರ್ಧಾರ ಮಾಡಿರೋ ಹುಡಗುರು ಅಂದ್ರ ಹುಡಗೀರಿಗೆ ಭಾಳ ಇಷ್ಟಾ ಅಂತ ನೋಡ್ರಿಪಾ.

10. ಹುಡುಗೀರ್ನ ಛೊಲೊ ನೋಡ್ಕೊಳೋ ಹುಡುಗುರು ಇಷ್ಟ ಆಗ್ತಾರ

ಹೆಣ್ಣಿಗೆ ಮರ್ಯಾದೆ ಕೊಡೊ ಹುಡುಗುರು, ಹುಡ್ಗೀನ ಕಾಪಾಡ್ಕೊಳೋರು, ಬರೀ ದೇಹದ ತಾಕತ್ತಲ್ಲ, ಮಾನಸಿಕವಾಗಿ ಅಕಿಗೆ ಬಲ ಕೊಡೋರು, ಧೈರ್ಯವಾಗಿ ತನ್ನನ್ನ ತಾನು ಏನು ಅಂತ ಹೇಳ್ಕೊಳೋರು ಹುಡಗೀರಿಗೆ ಇಷ್ಟ ಆಗ್ತಾರಂತ.

11. ಚಂದ ಕಾಣೋ ಹುಡುಗುರು ಇಷ್ಟ ಆಗ್ತಾರ

(ಇದನ್ನೇನ ಹೇಳ ಬೇಕಾಗಿಲ್ಲಾ ಅಲ್ಲಾ !)

ಚಂದಾಗಿ, ನೀಟಾಗಿ, ತಂ ವ್ಯಕ್ತಿತ್ವಕ್ಕ ಹೋಲೋ ಹಂಗ  ರೆಡಿ ಆಗೋರು,  ಗಡ್ಡ ಮೀಸಿ ಬಿಟ್ರು ಅದರೊಳಗ ಒಂದ ಸ್ಟೈಲ ಇರೋಹಂತವರು,ಒಳ್ಳೆ ಹೀರೋ ನಂಗ  ಅಲಂಕಾರ ಮಾಡ್ಕೊಳೋ ಹುಡುಗುರು ಎಲ್ಲಾದ್ರೂ ಹೋದಾಗ ನಾಕ ಮಂದಿ ಕಣ್ಣಿಗೆ ಚಂದ  ಕಾಣೋ ಹುಡುಗೂರು ಹುಡಗರಿಗೆ ಭಾಳ ಇಷ್ಟ ಆಗ್ತಾರಂತ.

ನೋಡಿದ್ರೆಲ್ಲಪ್ಪಾ, ಇನ್ಯಾಕ ತಡಾ ಸುರು ಹಚ್ಚಕೋರ್ರಿ. ನಿಂ ಹುಡಗೀಗೆ ಇಷ್ಟಾ ಆಗೋಹಂಗ ನಿಮ್ಮನ್ನ ನೀವು ಬದಲಾಯಿಸಿಕೋರಿ.

ಆಲ ದಿ ಬೆಸ್ಟ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಹುಡುಗನ/ಗಂಡನ ಮೇಲೆ ಎಷ್ಟೇ ಪ್ರೀತಿ ಇದ್ರೂ ಅವರಿಗಾಗಿ ಈ 6 ಕೆಲಸ ಮಾಡದಿದ್ರೆ ಒಳ್ಳೇದು

ಹುಡುಗೀರೆ ಕೇಳಿ!

ಹೆಣ್ಣುಮಕ್ಕಳಿಗೆ ಪ್ರೀತಿ ಜಾಸ್ತಿ. ಕೆಲವೊಂದು ಸಲ ತಾವು ಪ್ರೀತಿಸೋ ಹುಡುಗನಿಗೋಸ್ಕರ ಎಂಥ ತ್ಯಾಗ ಮಾಡೋಕು ಯೋಚನೆ ಮಾಡಲ್ಲ. ಆದ್ರೆ ಅತಿಯಾದರೆ ಅಮೃತಾನೂ ವಿಷ ಆಗತ್ತೆ ಅನ್ನೋ ಮಾತು ನೆನಪಿರಬೇಕು. ಇಲ್ಲಿವೆ ಅಂಥ ವಿಷಯಗಳು. ನೀವು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸೋ ಹುಡುಗನಿಗೂ/ ಗಂಡನಿಗೂ ಕೂಡ ಈ ಕೆಲಸಗಳು ಮಾಡಬೇಡಿ.

1. ಅವರ ಎಲ್ಲಾ ಸಮಸ್ಯೆಗೂ ಪರಿಹಾರ ಹುಡುಕೋದು…

onlineloveproblemsolutionastrologer.com

ಅವರಿಗೂ ಕೈಕಾಲು, ಕಣ್ಣು, ಮೂಗು, ಬಾಯಿ, ಬುದ್ಧಿ ಎಲ್ಲಾ ಇರುವಾಗ, ನೀವು ಅವರ ಎಲ್ಲಾ ಕಷ್ಟಕ್ಕೂ ಪರಿಹಾರ ಹುಡುಕೋದ್ರಲ್ಲಿ ಅರ್ಥ ಇಲ್ಲ. ಕಷ್ಟದಲ್ಲಿದ್ದಾಗ ನಾಲ್ಕು ಒಳ್ಳೇ ಮಾತಾಡಿ. ಧೈರ್ಯ ತುಂಬಿ. ಅದನ್ನ ಬಿಟ್ಟು ನೀವೇ ಬಲಿಪಶು ಆಗೋಕೆ ಹೋಗಬೇಡಿ.

2. ಯಾವಾಗ್ಲೂ ದುಬಾರಿ ಉಡುಗೊರೆ ಕೊಡೋದು…

blog.woohoo.in
ಇದರಿಂದ ನಿಮ್ಮ ಮೇಲೆ ಅವಲಂಬನೆ ಜಾಸ್ತಿ ಆಗತ್ತೆ. ಅವರು ಮೋಸ ಮಾಡೋಕೆ ನೀವೇ ದಾರಿ ಮಾಡಿಕೊಟ್ಟ ಹಾಗೆ ಆಗತ್ತೆ. ಸ್ವಾಭಿಮಾನಿಗಳಿಗೆ ಇದರಿಂದ ಮುಜುಗರ ಆಗತ್ತೆ. ಒಟ್ಟಿನಲ್ಲಿ ದುಬಾರಿ ಉಡುಗೊರೆ ನಿಮ್ಮ ಪರ್ಸಿಗೂ ಒಳ್ಳೇದಲ್ಲ. ಸಂಬಂಧಕ್ಕೂ ಒಳ್ಳೇದಲ್ಲ.

3. ಅವರು ಅತ್ತರೆ ನೀವು ಅಮ್ಮನ ತರ ಕಣ್ಣೀರು ಒರೇಸೋದು…

aconsciousrethink.com
ನಿಮಗೇನೋ ಅವರ ಕಣ್ಣೀರೊರೆಸಿ, ಸಮಾಧಾನ ಮಾಡಿ, ಮಗು ತರ ಜೋಪಾನ ಮಾಡ್ಬೇಕು ಅನ್ನಿಸಬೋದು. ಆದ್ರೆ ಅವರಿಗೆ ಅಳುವಿನಲ್ಲಿ ಪಾಲು ಕೇಳೋ ಹುಡುಗಿ ಬೇಕಿಲ್ಲ. ಅವರನ್ನ ಬೇರೆ ವಿಚಾರದ ಕಡೆ ಮನಸ್ಸು ಸೆಳೆಯೋ, ಕೆಚ್ಚು ಹೆಚ್ಚಿಸೋ ಹುಡುಗೀನ ಇಷ್ಟಪಡ್ತಾರೆ.

4. ನಾನು ಮುಂಚೆನೇ ಹೇಳಿದ್ದೆ ಅನ್ನೋ ಮಾತು ಆವಾಗಾವಾಗ ಹೇಳೋದು

loveandrelationshipclinic.files.wordpress.com

ನಿಮಗೇನೋ ನಿಮ್ಮ ಊಹೆ ನಿಜ ಆಯ್ತು ಅನ್ನೋ ಸಂಭ್ರಮ. ಆದರೆ ಅವರಿಗೆ ನಿಮ್ಮ ಈ ಗುಣ ಅಹಂಕಾರದ ತರ ಕಾಣತ್ತೆ. ನಿಮಗಿಂತ ಅವರಿಗೇ ಬುದ್ಧಿ ಜಾಸ್ತಿ ಅನ್ಕೊಳ್ಳೋದ್ರಲ್ಲೇ ಗಂಡಸರಿಗೆ ಖುಷಿ. 

5. ಎಲ್ಲಾರನ್ನೂ ಬಿಟ್ಟು, ನಂಗೆ ನೀನೊಬ್ನೇ ಇರೋದು ಅನ್ನೋದು

ak2.picdn.net

ನಿಮ್ಮ ಪ್ರೀತಿಯ ಹುಡುಗ ಸಿಕ್ಕಿದ ಮಾತ್ರಕ್ಕೆ, ನಿಮ್ಮ ಆಸೆ, ಕನಸು, ಕೆಲಸ, ಸ್ನೇಹಿತರು ಎಲ್ಲರನ್ನೂ ಬಿಡೋ ತಪ್ಪು ಮಾಡಬೇಡಿ. ಎಲ್ಲರ ಜೊತೆ ಬೆರೆಯೋ, ಚುರುಕಾಗಿ ಕೆಲಸ ನಿಭಾಯಿಸೋ, ಕನಸುಗಳನ್ನ ಬೆನ್ನಟ್ಟಿ ಹೋಗೋ ಹುಡುಗಿಯನ್ನೇ ಅವರು ಮೆಚ್ಚೋದು. ಆದ್ರೆ ಇದನ್ನೂ ಇತಿ ಮಿತಿಯಲ್ಲಿ ಇಟ್ಕೊಳ್ಳಿ.

6.ಅವರ ಆಸೆಗೆ ತಕ್ಕಂತೆ ಅಗಾಗ ನಿಮ್ಮ ಅಪಿಯರೆನ್ಸ್ ಬದಲಾಯಿಸೋದು…

http://www.telugupopular.com/wp-content/uploads/2015/01/girlbeautiful.jpg

ಚೂರುಪಾರು ಬದಲಾವಣೆಗೆ ಒಪ್ಪಿಕೊಂಡ್ರೆ ತಪ್ಪಿಲ್ಲ. ಆದರೆ ಪೂರ್ತಿಯಾಗಿ ಬದಲಾಗಬೇಕು ಅನ್ನೋ ಹುಡುಗನ್ನ/ ಗಂಡನ್ನ ಸ್ವಲ್ಪ ವಿಚಾರಿಸ್ಕೊಳ್ಳಿ. ನಿಮ್ಗೆ ಆ ರೀತಿ ಬಲವಂತ ಮಾಡೊ ಹಕ್ಕು ಯಾರಿಗೂ ಇರಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: