ಹನುಮಂತ ಮದುವೆ ಆದ್ರೂ ಹೇಗೆ ಬ್ರಹ್ಮಚಾರಿ ಅಂತ ಕೇಳಿ ಅವನ ಬಗ್ಗೆ ನಿಮ್ಮ ಗೌರವ ಇನ್ನಷ್ಟು ಹೆಚ್ಚುತ್ತೆ

ಅವಳು ತುಂಬಾ ಸುಂದರಿ

ಇದೇನಿದು ವಿಚಿತ್ರ? ಹನುಮಂತಂಗೆ ಎಲ್ಲಾದ್ರೂ ಮದ್ವೆ ಆಗಿದ್ದುಂಟಾ? ಆಜನ್ಮ ಬ್ರಹ್ಮಚಾರಿ ಅಂತ ಎಲ್ಲಾ ಕಡೆ ಹೇಳಿದೆ! ಲಂಕೆ ದ್ವಂಸ ಮಾಡಿ... ಲಂಕಾ ಸಾಗರದಲ್ಲಿ ಮಿಂದೆದ್ದ ಹನುಮಂತನ ಬೆವರು ನುಂಗಿದ ಮೀನಿಗೆ ಹುಟ್ಟಿದ ಮಕರಧ್ವಜನ ಕತೆ ಆಗಾಗ ಕೇಳಿರ್ತೀವಿ. ಆದರೆ ಹನುಮಂತಂಗೆ ಒಬ್ಬಳು ಹೆಂಡತಿ ಇದ್ದಳು, ಅವಳಿಗೊಂದು ದೇವಸ್ಥಾನ ಈಗ್ಲೂ ಇದೆ. ಪೂರ್ತಿ ಕಥೆ ಓದಿ…

ಪರಾಶರ ಸಂಹಿತೆಯಲ್ಲಿದೆ ಈ ಕಥೆ - ಹನುಮಂತನ ಹೆಂಡತಿ ಸೂರ್ಯನ ಮಗಳು ಸುವರ್ಚಲಾದೇವಿ…

ಪರಾಶರ ಸಂಹಿತೆಯಲ್ಲಿ ಪರಾಶರ ಮಹರ್ಷಿ ಪ್ರಕಾರ, ಸೂರ್ಯದೇವ ಹನುಮಂತನ ಗುರು. ಏಲ್ಲಾ ವೇದಾಭ್ಯಾಸಾನೂ ಮಾಡಿರೋ ಹನುಮಂಗೆ "ನವ ವ್ಯಾಕರಣ" ಒಂದು ಓದೋಕೆ ಸಾಧ್ಯ ಆಗ್ತಿರಲ್ಲ. ಯಾಕಂದ್ರೆ ಅದನ್ನ ಓದೋಕೆ ಮದುವೆ ಆಗಿರಲೇಬೇಕಿತ್ತಂತೆ. ಇನ್ನು ಲೋಕದ ಕಲ್ಯಾಣಕ್ಕಾಗಿ ಹನುಮಂತ ಈ ಗ್ರಂಥವನ್ನ ಓದಲೇ ಬೇಕಿರುತ್ತೆ. ಹಾಗಾಗಿ ತ್ರಿಮೂರ್ತಿಗಳು ಸೂರ್ಯದೇವಂಗೆ ಮೊರೆ ಹೋಗ್ತಾರೆ.

ಆಗ ಸೂರ್ಯದೇವ ಒಂದ್ ಉಪಾಯ ಮಾಡಿ, ಹನುಮಂತನ ಹೆಂಡತಿಯಾಗಕ್ಕೆ ಒಬ್ಬ ಸೌಂದರ್ಯವತಿಯನ್ನ ತನ್ನ ರಶ್ಮಿಯಿಂದ ಹುಟ್ಟಿಸ್ತಾನೆ. ಅವಳೇ ಸುವರ್ಚಲಾದೇವಿ.

ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನ ಮದುವೆಯಾಗು ಅಂತ ಕೇಳ್ತಾನೆ…

ಅಯೋನಿಜೆಯಾಗಿ ಹುಟ್ಟಿದ ಸುವರ್ಚಲಾ ದೇವಿಯ ಮದುವೆ ಸುಲಭವಾಗಿ ಆಗ್ಲಿಲ್ಲ. ಅವಳ ಸುವರ್ಚಸ್ಸು ತಂದೆ ಸೂರ್ಯನಿಂದ ಬಂದಿದ್ದು. ಆ ವರ್ಚಸ್ಸನ್ನ ತಡ್ಕೊಳ್ಳೊ ಶಕ್ತಿ ಇದ್ದದ್ದು ಜೀವನಾಪರ್ಯಂತ ಬ್ರಹ್ಮಚರ್ಯ ಪಾಲಿಸಿ ಬಂದ ಹನುಮಂತಂಗೆ ಮಾತ್ರ. ಎಲ್ರೂ ಹನುಮನ್ನ ಮದುವೆಗೆ ಒಪ್ಪಿಸೋಕ್ಕೆ ಹರಸಾಹಸ ಮಾಡ್ಬೇಕಾಯ್ತು. ಯಾರೆಷ್ಟೇ ಹೇಳಿದ್ರೂ ಹನುಮಂತ ಒಪ್ಪದೇ ಇದ್ದಾಗ, ಸೂರ್ಯದೇವ ತನ್ನ ಗುರುದಕ್ಷಿಣೆಯಾಗಿ ತನ್ನ ಮಗಳನ್ನ ಮದುವೆಯಾಗು ಅಂತ ಕೇಳ್ತಾನೆ. ಹನುಮಂತ ಹಿಂಜರೀತಾನೆ.

ಮದುವೆಯಾದ್ಮೇಲೂ ಹನುಮಂತ ಬ್ರಹ್ಮಚಾರಿಯಾಗಿಯೇ ಉಳಿಯೋ ಹಾಗೆ ಸೂರ್ಯದೇವ ವರ ಕೊಡ್ತಾನೆ.

ಲೋಕ ಕಲ್ಯಾಣಕ್ಕೋಸ್ಕರ ನಿನ್ನ ಈ ಮದ್ವೆ ಅಷ್ಟೆ. ಮುಂದೆ ನೀನು ಬ್ರಹ್ಮನಾದಾಗ ನಿನ್ನ "ವಾಣಿ"ಯಾಗ್ತಾಳೆ ನನ್ನ ಮಗಳು ಅಂತ ಹೇಳ್ತಾನೆ. ಹನುಮಂತ ಒಪ್ಕೊತಾನೆ.

ಮದುವೆಯಾದ ಮರುಕ್ಷಣಾನೇ ಸುವರ್ಚಲಾದೇವಿ ತಪಸ್ಸಿಗೆ ಹೊರಟು ಹೋಗ್ತಾಳೆ…

ಜ್ಯೇಷ್ಟ ಶುದ್ಧ ದಶಮಿ ದಿನ ಇಬ್ಬರ ಮದ್ವೆ ಆಗತ್ತೆ. ಇಂದಿಗೂ ದಕ್ಷಿಣ ಭಾರತದಲ್ಲಿ ಈಕೇನಾ ಪೂಜೆ ಮಾಡ್ತಾರೆ.

ತೆಲಂಗಾಣದ ಹೈದ್ರಾಬಾದಲ್ಲಿದೆ ಸುವರ್ಚಲಾದೇವಿ ದೇವಸ್ಥಾನ

ಹೈದರಾಬಾದಿಂದ 220 ಕಿ.ಮೀ ದೂರದಲ್ಲಿ ಸುವರ್ಚಲಾದೇವಿ ದೇವಸ್ಥಾನ ಇದೆ. ಈ ದೇವಿ ಮತ್ತು ಹನುಮಂತನ್ನ ಈ ರೂಪದಲ್ಲಿ ಪೂಜೆ ಮಾಡಿದ್ರೆ ಯಾವತ್ತೂ ಗಂಡ-ಹೆಂಡ್ತಿ ಮಧ್ಯೆ ಭಿನ್ನಾಭಿಪ್ರಾಯ ಬರದೇ ಜೀವನ ಪೂರ್ತಿ ಸಂಸಾರದಲ್ಲಿ  ಖುಷಿಯಾಗಿರ್ತಾರಂತೆ.

ಇಷ್ಟಿದೆ ನೋಡಿ ಸುವರ್ಚಲಾದೇವಿ ಕಥೆ ಮತ್ತು ಮಹಿಮೆ. ನೀವೂ ನಿಮ್ಮ ಸಂಸಾರ ಸುಖವಾಗಿರಕ್ಕೆ, ಒಂದ್ಸರ್ತಿ ಈ ದೇವಿ ದರ್ಶನ ಮಾಡ್ಕೊಂಡ್ ಬನ್ನಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನದಿಯಲ್ಲಿರೋ ಕಲ್ಲುಗಳೆಲ್ಲಾ ಶಿವಲಿಂಗಗಳಾಗಿರೋ ಜಾಗ ನಿಮಗೆ ಗೊತ್ತಾ?

ನಿಮಗಿಲ್ಲಿ ನೋಡೋಕೆ ಸಾವಿರಕ್ಕೂ ಹೆಚ್ಚು ಶಿವಲಿಂಗಗಳಿವೆ!

ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲೂಕಿನಲ್ಲಿ ಶಲ್ಮಲ ನದಿ ನೀರಿಂದ ಸುಮಾರು ಸಾವಿರಾರು ಶಿವಲಿಂಗಗಳು ನದಿ ನೀರಿನ ರಭಸಕ್ಕೆ ತಾನೇ ಸೃಷ್ಟಿಯಾಗಿವೆ.

ಇದು ಉತ್ತರಕನ್ನಡ ಜಿಲ್ಲೆಯ ಸಿರಸಿ ತಾಲೂಕಿನ ಶಾಲ್ಮಲ ನದಿ ದಡದಲ್ಲಿದ್ಯಂತೆ. ಇನ್ನು ಇಲ್ಲಿನ ನದಿ ನೀರಿನ ರಭಸಕ್ಕೆ ಹಲಾವಾರು ಶಿವಲಿಂಗಗಳು ಮೂಡಿದ್ದು ನದಿಯಲ್ಲಿ ನೀರು ಕಡಿಮೆ ಆದಾಗ ಇದನ್ನ ಸ್ಪಷ್ಟವಾಗಿ ನೋಡಬಹುದಂತೆ.

ಇದಕ್ಕೆ ಸಹಸ್ರಲಿಂಗ ಅನ್ನೋ ಹೆಸರು ಇದಕ್ಕೆ ಸರಿಯಾಗೇ ಹೋಲುತ್ತೆ ಅಂತಾರೆ ಇದನ್ನ ನೋಡಿದೋರು.

ancient-origins.net

1969 ರಲ್ಲಿ ಈ ಸ್ಥಳವನ್ನ ಜೀನ್ ಬಾಲ್ಬೆಟ್ ಅನ್ನೋರು ಕಂಡುಹಿಡಿದರಂತೆ

ಕಾಂಬೋಡಿಯಾದಲ್ಲಿ ಯುದ್ಧ ಆಗದೇ ಹೋಗಿದ್ದರೆ ಇನ್ನೂ ಇಪ್ಪತ್ತು ವರ್ಷ ಮುಂಚೆಯೇ ನಮಗೆ ಸಿಗ್ತಿತ್ತೇನೋ ಅನ್ನೋ ಅಂತೆಕಂತೆ ಕೂಡ ಇದೆ.

ಇತ್ತೀಚೆಗೆ ಏರ್ತಿರೋ ತಾಪಮಾನದಿಂದ ನೀರಿನ ಪ್ರಮಾಣ ಕಡಿಮೆಯಾಗಿ ಇಲ್ಲಿ ಲಿಂಗಗಳು ನೋಡೋಕೆ ಸಿಕ್ಕಿದ್ದವಂತೆ.

ಇನ್ನು ಇತಿಹಾಸದ ಪ್ರಕಾರ ಇಲ್ಲಿನ ರಾಜ ಸದಾಶಿವರಾಯ 1000 ಲಿಂಗಗಳನ್ನ ಕೆತ್ತಿಸಿದರೆ ತನಗೆ ಮಗು ಹುಟ್ಟುತ್ತದೆ ಅನ್ನೋ ಕಾರಣ ಇಲ್ಲಿ ಲಿಂಗಗಳನ್ನ ಕೆತ್ತೋಕೆ ಆಜ್ಞೆ ಮಾಡಿದ್ದನಂತೆ. ಈ ವಿಗ್ರಹಗಳನ್ನ 1678-1718 ಅವಧೀಲಿ ಕೆತ್ತಿರಬಹುದು ಅನ್ನಲಾಗುತ್ತೆ.

ancient-code.com

ಕಾಂಬೋಡಿಯಾದಲ್ಲೂ ಇದೇ ತರ ಸಾಕಷ್ಟು ಲಿಂಗಗಳಿವೆ

ಕಾಂಬೋಡಿಯಾದ ಪ್ರಸಿದ್ಧ ದೇವಸ್ಥಾನ ಅಂಕೋರ್ ವಾಟ್ ನಿಂದ 25 ಕಿ.ಮೀ ದೂರದಲ್ಲೊಂದ ಸಹಸ್ರಲಿಂಗ ಜಾಗ ಇದ್ಯಂತೆ. ಇದರ ಹೆಸರು ಕೆಬಲ್ ಸ್ಪೀನ್ , ಇಲ್ಲಿ ಕೂಡ ನದಿಯಡಿಯಲ್ಲಿ ಸಾವಿರ ಲಿಂಗಗಳಿವೆ. ಆದರೆ ಇಲ್ಲಿಗೆ ತಲುಪೋ ದಾರಿ ಸ್ವಲ್ಪ ಕಷ್ಟ ಆಗಿರೋದ್ರಿಂದ ಇಲ್ಲಿಗೆ ಜನ ಹೋಗೋದುಬ್ ಕಡಿಮೆ.

ಹಿಂದಿನ ಕಾಲದಲ್ಲಿ ರಾಜರೆಲ್ಲಾ ಇಲ್ಲಿ ಸ್ನಾನ ಮಾಡೋಕೆ ಅಂತ ಬರೋರಂತೆ. ಈ ಲಿಂಗಗಳನ್ನ ಯಾರು ಯಾಕೆ ಕೆತ್ತಿತ್ತು ಅಂತ ತಿಳೀದೇ ಹೋದರೂ ಈ ಲಿಂಗಗಳನ್ನ ಸ್ಪರ್ಷಿಸಿ ಬರೋ ನೀರಿಂದಲೇ ಇಲ್ಲಿನ ಬೆಳೆ ಅಷ್ಟು ಸೊಂಪಾಗಿ ಬೆಳೆಯೋಕೆ ಕಾರಣ ಅನ್ನೋ ಅಂತೆಕಂತೆ ಇದೆ. ಕಾಂಬೋಡಿಯಾದ ಯುದ್ಧದ ಸಮಯದಲ್ಲಿ ಎಲ್ಲ ಹಿಂದೂ ದೇವಸ್ಥಾನಗಳು ನಾಶವಾದರೂ ಈ ಜಾಗದ ಸುತ್ತ ದಟ್ಟ ಕಾಡಿರೋ ಕಾರಣ ಕಾರಣ ಇದನ್ನ ಯಾರಿಗೂ ನಾಶಮಾಡೋಕಾಗಿಲ್ಲ ಅನ್ನಲಾಗುತ್ತೆ.

ಇಲ್ಲಿರೋ ಮತ್ತೊಂದು ಅದ್ಭುತವಾದ ಕೆತ್ತನೆ ಅಂದರೆ ವಿಷ್ಣುವಿನ ನಾಭಿಕಮಲದಿಂದ ಬ್ರಹ್ಮನ ಸೃಷ್ಟಿ ಆಗುತ್ತಿರೋ ಕೆತ್ತನೆ.

ancientpages.com

ಶಿವಲಿಂಗಕ್ಕೆ ತನ್ನದೇ ಆದ ಮಹತ್ವವಿದೆ

ಲಿಂಗವನ್ನ ಶಿವನ ಶಕ್ತಿರೂಪ ಅನ್ನಲಾಗುತ್ತೆ. ಕೆಲವರಿಗೆ ಅದು ಇಡೀ ಬ್ರಹ್ಮಾಂಡದ ಪ್ರತೀಕವಾಗಿ ಕಾಣುತ್ತೆ.

ಇನ್ನು ಶಿವ ಪ್ರತಿಯೊಬ್ಬ ಭಕ್ತನಿಗೂ ಒಂದೊಂದು ರೂಪದಲ್ಲಿ ಕಾಣ್ತಾನೆ.

lokaso.in
 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: