ನಿಮಗೆ ನಾಯಿ ಇಷ್ಟವಿಲ್ಲದಿದ್ದರೂ ಮುಧೋಳ್ ನಾಯಿ ಬಗ್ಗೆ ಈ 19 ವಿಷಯಗಳ್ನ ಕೇಳಿ ಹೆಮ್ಮೆ ಪಡ್ತೀರಿ

ಶಿವಾಜಿ ಸೈನ್ಯದಲ್ಲಿತ್ತು ಅಂದ್ಮೇಲೆ ಕೇಳಬೇಕಾ?

ಮನುಷ್ಯನಿಗೂ ನಾಯಿಗೂ ಅನಾದಿಕಾಲದಿಂದಲೂ ನಂಟು ತಪ್ಪಿದ್ದಲ್ಲ. ನಾಯಿಗಳು ಮನುಷ್ಯರನ್ನು ಅರ್ಥ ಮಾಡಿಕೊಳ್ಳುವ ರೀತಿ ಬೇರೆ ಯಾವ ಪ್ರಾಣಿಯೂ ಮಾಡ್ಕೊಳಲ್ಲ. ನಾಯಿ ತನಗೆ ಊಟ ಹಾಕಿದ ಒಡೆಯನಿಗೆ ಎಂದಿಗೂ ಮೊಸ ಮಾಡಲ್ಲ, ನಿಯತ್ತು ತಪ್ಪಲ್ಲ. ಮನೇಲಿ ಒಂದು ನಾಯಿ ಇದ್ರೆ ಮನೆ ಕಾಯತ್ತೆ, ಚಿಕ್ಕ ಮಕ್ಕಳಿಗೆ ಆಟಕ್ಕೆ ಜೊತೆ ಆಗತ್ತೆ, ಚಿಕ್ಕ ಚಿಕ್ಕ ಕೆಲಸ ಮಾಡ್ಕೊಡತ್ತೆ. ಪ್ರೀತಿಯಿಂದ ಕುಟುಂಬದಲ್ಲಿ ಒಂದಾಗಿ ತನ್ನ ಜೀವನ ಪೂರ್ತಿ ಬದುಕತ್ತೆ. ಇಂಥಾ ಒಂದು ನಾಯಿಯ ತಳಿ "ಮುಧೋಳ" ನಾಯಿ. ತೀಕ್ಷ್ಣ ಕಣ್ಣು, ಚಿರತೆ ವೇಗ, ತೆಳುವಾದ ಚಪ್ಪಟೆ ತಲೆ, ಅಗಲವಾದ ಕಾಲು, ತೆಳ್ಳನೆ ದೇಹ, ಬಿಳಿ ಮತ್ತು ಕಂದು ಬಣ್ಣಗಳಲ್ಲಿ ಕಂಡು ಬರುವ ಮುಧೋಳ ನಾಯಿಯ ಚರಿತ್ರೆ ಇಲ್ಲಿದೆ.

1. ಕ್ರಿ.ಪೂ. 500 ರಲ್ಲೇ ಮುಧೋಳ್ ನಾಯಿ ನಮ್ಮ ಕರ್ನಾಟಕದವರಿಗೆ ಪರಿಚಯವಾಗಿತ್ತು.

ಮಧ್ಯ ಏಶಿಯ ಹಾಗೂ ಅರೇಬಿಯದಿಂದ ಈ ನಾಯಿ ಭಾರತಕ್ಕೆ ಬಂದಿತ್ತು.

mudhol-frontline.in_.jpg

2. ಬಾಗಲಕೋಟೇಲಿರೋ ಮುಧೋಳ್ ಜಿಲ್ಲೇಲಿ ಈ ನಾಯೀನ ಹೆಚ್ಚಾಗಿ ಸಾಕ್ತಾ ಇದ್ದಿದ್ದ್ರಿಂದ ಇದಕ್ಕೆ ‘ಮುಧೋಳ್’ ನಾಯಿ ಅಂತ ಹೆಸ್ರು ಬಂತು.

ಈ ನಾಯಿನ "ಕ್ಯಾರವಾನ್" ಅಂತ ಕರೀತಿದ್ರು ಬ್ರಿಟೀಷರು.

m-muliti-doglib.com_.jpg

3. ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಈ ನಾಯಿ ತಳಿ ನಶಿಸಿ ಹೋಗ್ದೆ ಇರೋಹಂಗೆ ಮಾಡಿದರು

ಹಲಗಲಿ ಬೇಡರು ತಮ್ಮ ಬೇಟೆಗಾಗಿ ಈ ನಾಯಿಯನ್ನು ಇಟ್ಟುಕೊಂಡಿದ್ದರು. ರಾಜ ಇದನ್ನು ನೋಡಿ ತನ್ನ ಆಸ್ತಿ ಕಾಯೋಕ್ಕೆ ನೇಮಿಸಿಕೊಂಡಿದ್ದ.

raja-frontline.in_.jpg

4. ಅದೇ ಘೋರ್ಪಡೆ 1900ರಲ್ಲಿ ಇಂಗ್ಲೆಂಡ್ ದೊರೆ ಐದನೇ ಜಾರ್ಜ್ಗೆ ಒಂದು ಜೊತೆ ಮುಧೋಳ್ ನಾಯಿ ಉಡುಗೊರೆಯಾಗಿ ಕೊಟ್ಟಿದ್ದರಂತೆ

ಇದರಿಂದ ಈ ನಾಯಿಯ ತಳಿ ಹೆಚ್ಚು ಪ್ರಸಿದ್ದಿಗೆ ಬಂತು.

Kinggeorgev1923-wiki.jpg

5. ಈಗಲೂ ಮುಧೋಳದಲ್ಲಿ ಸುಮಾರು 750 ಕುಟುಂಬಗಳು ಈ ನಾಯೀನ ಸಾಕಿ, ಸಲಹಿ ಮಾರಾಟ ಮಾಡ್ತಿದಾರೆ

ಈ ನಾಯಿಗೆ ಬಾರಿ ಬೇಡಿಕೆ ಇದೆ.

dog-bhaskarmanagoli.blogspot.com_.JPG

6. ಓಡೋದ್ರಲ್ಲಿ ಮುಧೋಳ್ ನಾಯೀನ ಯಾರೂ ಮೀರ್ಸಕ್ಕೆ ಆಗಲ್ಲ.

ಇದರ ಮುಂದೆ ಮಿಕ್ಕ ತಳಿಯ ನಾಯಿಗಳು ಸೋತು ಸುಣ್ಣವಾಗತ್ತೆ.

 

mudhol-resting-mudhol-hound-dog-breed-doglib.com_.jpg

7. ಅಪಾರ್ಟ್ಮೆಂಟ್-ಗಿಪಾರ್ಟ್ಮೆಂಟಲ್ಲಿ ಇದನ್ನ ಸುಮ್ನೆ ಒಂದು ಕಡೆ ಕಟ್ಟಿ ಹಾಕಿದ್ರೆ ಸಪ್ಪೆಯಾಗ್ಬಿಡತ್ತೆ.

ಸಕತ್ತಾಗಿ ವಾಕಿಂಗ್ ಮಾಡಿಸ್ಬೇಕು. ನಮ್ಗೂ ಸಕತ್ ವ್ಯಾಯಾಮ ಮಾಡ್ಸತ್ತೆ.

caravan-hounds-dehradun_3-dogspot.in_.jpg

8. ಮುಧೋಳ್ ನಾಯಿಯ ಸ್ವಾಮಿನಿಷ್ಠೆ ಬೇರೆ ಎಲ್ಲಾ ನಾಯಿಗಳನ್ನು ಮೀರ್ಸತ್ತೆ.

ಅದನ್ನು ದಯೆ, ಪ್ರೀತಿ, ಕರುಣೆಯಿಂದ ಸಾಕಿದರೆ ಮಾತ್ರ. ಇಲ್ಲಾ ಅಂದ್ರೆ ಅದು ಕೋಪ ಮಾಡ್ಕೊಳತ್ತೆ. ಮತ್ತೆ ಕಾಲ ಕಳೆದಂತೆ ಅದರ ಮನಸ್ಸು ಮುದುಡಿಹೋಗಿ ಖಿನ್ನತೆಗೆ ಒಳಗಾಗತ್ತೆ.

Mudhol-Hound-Waiting-for-His-Family-petpaw.com_.au_.jpg

9. ಮುಧೋಳ್ ನಾಯಿಗೆ ಸಾಕಿದೋರು ಬಿಟ್ಟು ಬೇರೆ ಯಾರಾದ್ರೂ ಮುಟ್ಟಿದ್ರೆ ಇಷ್ಟ ಆಗಲ್ಲ.

ಹಾರಿ ಪರ್ಚತ್ತೆ. ಇಲ್ಲಾ ಅಂದ್ರೆ ಬೊಗಳತ್ತೆ.

m-caravanhound.wordpress.com_.jpg

10. ಮುಧೋಳ್ ನಾಯಿ 13 ರಿಂದ 14 ವರ್ಷ ಬದುಕಿರತ್ತೆ.

ಹುಟ್ಟಿದ 18 ತಿಂಗಳಲ್ಲಿ ಅದರ ಪೂರ್ತಿ ಮೈಕಟ್ಟು ಳೆಯತ್ತೆ. ಸುಮಾರು 1.8 ಅಡಿಯಿಂದ 2.3 ಅಡಿ ಉದ್ದ ಬೆಳೆಯತ್ತೆ.

m-doglib.com_.jpg

11. ಮುಧೋಳ್ ನಾಯೀನ ಚೆನ್ನಾಗಿ ಸಾಕ್ಬೇಕು ಅಂದ್ರೆ ತಿಂಗಳಿಗೆ 2000-4500 ರೂಪಾಯಿ ಖರ್ಚಾಗತ್ತೆ.

ಅದಕ್ಕೆ ಸ್ಪೆಶಲ್ ಆಗಿ ಏನೂ ಹಾಕ್ಬೇಕಾಗಿಲ್ಲ. ನಾವು ತಿನ್ನೋ ರೊಟ್ಟಿ, ಅನ್ನ, ಹಾಲು ಹಾಕಿದ್ರೂ 25 ರಿಂದ 50 ಕೇಜಿ ತೂಕ ಬೆಳೆಯತ್ತೆ.

watch dog-speakzeasy.wordpress.com_.jpg

12. ಮುಧೋಳ್ ನಾಯಿ ಗ್ರೇಹೌಂಡ್ ಅನ್ನೋ ಹೆಸರಿನ ಇನ್ನೊಂದು ನಾಯೀನ ತುಂಬಾ ಹೋಲತ್ತೆ.

ಗ್ರೇಹೌಂಡ್ ನಾಯಿ ಎಲ್ಲರ ಜೊತೆ ಸ್ನೇಹದಿಂದ ನಡ್ಕೊಳತ್ತೆ.

greyhound1-wiki.jpg

13. ಮುಧೋಳ್ ನಾಯಿಗೆ ಸಾಮಾನ್ಯವಾಗಿ ಯಾವ ಅರೋಗ್ಯದ ಸಮಸ್ಯೆನೂ ಬರೋಲ್ಲ.

ಭಾರತದ ಯಾವುದೇ ಮೂಲೆಯ ಹವಾಮಾನಕ್ಕೆ ಹೊಂದಿಕೊಳ್ಲತ್ತೆ.

last-dogspot.JPG

14. ಮುಧೋಳ್ ನಾಯಿ ಕಣ್ ದೃಷ್ಟಿಯಿಂದ ಎಂಥಾ ಚಿಕ್ಕ ಪ್ರಾಣಿನೂ ತಪ್ಪಿಸಿಕೊಳಕ್ಕೆ ಆಗಲ್ಲ.

ಮೊಲ, ಇಲಿ, ಹಾವು ಯಾವುದೇ ಇರ್ಲಿ ತನ್ನ ಹಿಂದೆ ಇದ್ರೂ ಕೂಡ ಈ ನಾಯಿಗೆ ಕಾಣ್ಸತ್ತಂತೆ. ಅದಕ್ಕೆ ಮುಧೋಳ್ ನಾಯಿಗೆ 270 ಡಿಗ್ರೀ ದೃಷ್ಟಿ ಇದೆ ಅಂತ ಹೇಳ್ತಾರೆ. ಇದಕೆಲ್ಲಾ ಕಾರಣ ಅದರ ಉದ್ದನೆಯ ಮುಖದಲ್ಲಿ ಕಣ್ಣು ಇರುವ ಜಾಗ. 

cute-mudhol-hound-dog-dogwallpapers.net_.jpg

15. ಮುಧೋಳ್ ನಾಯಿ ಏನಾದರೂ ಹುಡುಕಬೇಕಾದ್ರೆ ಕಣ್ಣಿಂದ ನೋಡಿ ಹುಡುಕತ್ತೆ, ಮೂಸಿಕೊಂಡಲ್ಲ.

ಇದರ ಕಣ್ಣು  ಬಹಳ ಚುರುಕು.

caravan-dogbreedstandards.com_.jpg

16. ಮುಧೋಳ್ ನಾಯಿ ಛತ್ರಪತಿ ಶಿವಾಜಿ ಸೈನ್ಯದಲ್ಲಿ ಇರ್ತಾ ಇತ್ತು

ಅದಕ್ಕೆ ಆಗ ‘ಸಮರವೀರ’ ಅಂತಿದ್ರು.

shivaji1-aseema_net_in.jpg

17. ಹೆಮ್ಮೆ ಸುದ್ದಿ ಏನಂದ್ರೆ... ಭಾರತದ ಸೇನೆ ಕೂಡ ಮುಧೋಳ್ ನಾಯಿನ ತನ್ನ ಪಡೆಗೆ ಸೇರಿಸಿಕೊಂಡಿದೆ.

ಶಿವಾಜಿ ಸೈನ್ಯದಿಂದ ಇವತ್ತಿನ ಪ್ರಜಾಪ್ರಭುತ್ವದ ಸೈನ್ಯೆಗೆ ಬಂದಿದೆ!

 

army-huffingtonpost.in_.jpg

18. ಮುಧೋಳ್ ನಾಯೀನ ಸೇನೆಗೆ ಸೇರ್ಸೋ ಐಡಿಯಾ ಕೊಟ್ಟಿದ್ದು ಕೇಂದ್ರ ಪಶುಸಂಗೋಪನೆ ಇಲಾಖೆ ಆಯುಕ್ತ, ಕನ್ನಡಿಗರಾದ ಡಾ. ಸುರೇಶ್ ಹೊನ್ನಪ್ಪಗೊಳ್ ಅವರು.

suresh-infah.org_.jpg

19. ಫಾರಿನ್ ನಾಯಿಗಳ ಜೊತೆ ದೇಸಿ ನಾಯಿ ಇದೇ ಮೊದಲ ಸಲ ಭಾರತದ ರಕ್ಷಣೆಗೆ ಸೆಲೆಕ್ಟ್ ಆಗಿರೋದು!

armydogs-blogs.wsj_.com_.jpg

ನಮ್ಮ ಕರ್ನಾಟಕದ ಈ ನಾಯಿ ಎಂಥದ್ದು ಅಂತ ಗೊತ್ತಾಯ್ತಾ? ಅದರ ಮಹಿಮೆ ಎಂಥದ್ದು ಅಂತ ಅರಿವಾಯ್ತಾ? ಎದೆ ತಟ್ಟಿ ಎಲ್ಲರಿಗೂ ಹೇಳ್ಕೊಳಿ!

ಹೊರಚಿತ್ರ: caravanhound

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಏಕಾಂಗಿಯಾಗಿ ಪ್ರವಾಸ ಮಾಡೋದಕ್ಕೆ ಇಷ್ಟಪಡೋ ಹುಡುಗೀರು ಹೋಗಬಹುದಾದ 15 ಜಾಗಗಳು

ಅಡ್ಡಿ ಆತಂಕಗಳಿಲ್ಲದೆ!

"ನನ್ಗಂತೂ ಒಬ್ಳಿಗೇ ಹಾಯಾಗಿ ಟ್ರಿಪ್ ಹೋಗ್ಬರೋದೂಂದ್ರೆ ಭಾಳಾ ಇಷ್ಟ" ಅನ್ನೋ ಮನೋಭಾವ ಇರೋ ಹೆಣ್ಮಕ್ಳು, ಪ್ರವಾಸ ಹೋಗೋಕ್ಕೆ ಲಾಯಕ್ಕಾಗಿರೋ ಭಾರತದ ಕೆಲವು ಬೆಸ್ಟ್ ಪ್ಲೇಸ್ ಗಳ್ನ ನಾವಿಲ್ಲಿ ಪಟ್ಟಿ ಮಾಡಿದ್ದೀವಿ ನಿಮ್ಗಾಗಿ:

1. ಮೈಸೂರು

ನಮ್ಮ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಕೇಂದ್ರ ಅಂತಾ ಹೆಮ್ಮೆಯಿಂದ ಕರೆಸಿಕೊಳ್ಳೋ ಮೈಸೂರು ನಗರಾನೂ, ಒಬ್ಬಂಟಿಯಾಗಿ ಪ್ರವಾಸ ಮಾಡೋಕೆ ಇಷ್ಟ ಪಡೋ ಹೆಣ್ಮಕ್ಳು ಪಾಲ್ಗೆ ಭಾಳಾ ಸೇಫ್ ಆದ ಸಿಟಿ ಅಂತಾ  ಹೇಳ್ಬೋದು.  ಸೂರ್ಯ ಮುಳುಗೋವರ್ಗೂ ಮೈಸೂರು ರಸ್ತೆಗಳು ಜನಜಂಗುಳಿಯಿಂದ ಗಿಜಿಗುಟ್ತಾನೇ ಇರ್ತಾವೆ.  ಮೈಸೂರು ಒಂದು ಜನಪ್ರಿಯವಾಗಿರೋ ಪ್ರವಾಸೀ ತಾಣ ಆಗಿರೋದ್ರಿಂದ, ರಾತ್ರಿ ಹೊತ್ನಲ್ಲೂ ಜನಾ ಇಲ್ಲಿ ಓಡಾಡ್ಕೊಂಡೇ ಇರ್ತಾರೆ. ನಮ್ಮ ಭಾರತೀಯ ಸಂಸ್ಕೃತಿ ಮತ್ತೆ ಇತಿಹಾಸಗಳ ಬಗ್ಗೆ ಅಭಿರುಚಿ ಇರೋ ಪ್ರತಿಯೊಬ್ಳು ಹೆಣ್ಮಗಳೂ ಕೂಡಾ ಮೈಸೂರು ನಗರಾನಾ ಅಗತ್ಯವಾಗಿ ನೋಡ್ಲೇಬೇಕು.

theholidayindia.com

2. ನೈನಿತಾಲ್

ಉತ್ತರಾಖಂಡದ ಪ್ರಶಾಂತ್ವಾಗಿರೋ ಕಣಿವೆಗಳ ಮಧ್ಯ ಇರೋ ನೈನಿತಾಲ್ ಹೆಂಗಿದ್ಯಪ್ಪಾ ಅಂದ್ರೆ, "ಧರೆಗಿಳ್ದಿರೋ ಸ್ವರ್ಗ" ಅಂತಾರಲ್ಲಾ ಹಂಗೆ...!  ಕುಮೌನಿ ಜನಾಂಗ ಅಂತಾ ಕರೆಸಿಕೊಳ್ಳೋ ಇದೇ ಊರಿನ ಜನಗಳೇ ಹೆಚ್ಚಾಗಿ ಇಲ್ಲಿ ವಾಸ ಮಾಡ್ತಿರೋರು.  ಸ್ನೇಹಪರ ಸ್ವಭಾವ ಮತ್ತೆ ಹಾಗೆ ಆತ್ಮೀಯ ಮುಗುಳ್ನಗೆಗಳ್ಗೆ ಇಲ್ಲಿನ ಜನ ಭಾಳಾ ಮನೆಮಾತಾಗಿರೋರು.  ಇಂಥಾ ನೈನಿತಾಲ್ ಅನ್ನೋ ಪುಟ್ಟ ಪಟ್ಟಣ, ಒಬ್ಬಂಟಿಯಾಗಿ ಅಡ್ಡಾಡೋಕೆ ಇಷ್ಟಾಪಡೋ ಹೆಣ್ಮಕ್ಳಿಗೆ ನಂಬೋಕೇ ಆಗಲ್ಲವೇನೋ ಅನ್ನೋವಷ್ಟು ಸುರಕ್ಷಿತ್ವಾದ ತಾಣಾನೂ ಹೌದು ಹಾಗೇನೇ ಜೊತೇನಲ್ಲಿ ಜಾಲಾಡೋಕ್ಕೆ ನಿಜ್ವಾಗ್ಲೂನೂ ಭಾಳಾ ಖುಶೀ ಕೊಡೋ ತಾಣಾನೂ ಹೌದು.

c1.hiqcdn.com

3.  ಶಿಮ್ಲಾ

ಭೇಟಿ ಕೊಡೋ ಜನರ ಸಂಖ್ಯೇನ ಮನಸ್ಸಲ್ಲಿಟ್ಕೊಂಡು ಹೇಳೋದಾದ್ರೆ, ಗಿರಿಧಾಮ ಪ್ರದೇಶಗಳು ಸರ್ವೇಸಾಮಾನ್ಯವಾಗಿ ಸೇಫ್ ಆಗೇ ಇರ್ತಾವೆ.  ಬೆಟ್ಟದ ಮೇಲಿರೋ ಈ ಪಟ್ಟಣ, ನಿಜವಾಗ್ಲೂ ಭಾಳಾನೇ ಮಜಾ ಕೊಡೋವಂಥಾ ತಾಣ ಆಗಿದೆ.  ಭಾರತದ ಸೊಗಸಾದ ತಾಣಗಳ ಮುಕುಟಮಣಿ ಈ ಶಿಮ್ಲಾ ಗಿರಿಧಾಮ ಅಂತ್ಯಾರಾದ್ರೂ ಹೇಳಿದ್ರೆ ಅದ್ರಲ್ಲೇನೂ ತಪ್ಪಿಲ್ಲ ಬಿಡಿ.  ಒಬ್ಬಂಟಿಯಾಗಿ ಇಲ್ಲಿಗೆ ಪ್ರವಾಸ ಬರೋ ಹೆಣ್ಮಕ್ಳಿಗೆ ಹೇಳಿ ಮಾಡ್ಸಿದ ಹಾಗಿರೋ ಸೇಫ್ ಆದ ಮತ್ತೆ ಹಾಗೇನೇ ಸಖತ್ ಬೊಂಬಾಟಾಗಿರೋ ಲಾಡ್ಜಿಂಗ್ ವ್ಯವಸ್ಥೆಗಳು ಇಲ್ಲಿ ಬೇಜಾನ್ ಇದ್ದಾವೆ.  ಹಿಂಗಾಗಿ, ಏಕಾಂಗಿಯಾಗಿ ಪ್ರವಾಸ ಮಾಡೋದಕ್ಕೆ ಇಷ್ಟ ಪಡೋ ಹೆಣ್ ಹೈಕ್ಳು ಆರಾಮ್ವಾಗಿ ಶಿಮ್ಲಾಕ್ಕೊಂದು ಟ್ರಿಪ್ಪನ್ನ ಹಾಕ್ಕೋಬೌದು.

holidaystonepal.com
4.  ಖಜುರಾಹೊ

ಯುನೆಸ್ಕೋದವ್ರು ಜಾಗತಿಕ ಪರಂಪರೆಯ ತಾಣ ಅಂತಾ ಗುರ್ತಿಸಿರೋ ಖಜುರಾಹೊದ ದೇವಸ್ಥಾನಗಳು ನಿಜ್ವಾಗ್ಲೂನೂ ಕಣ್ತುಂಬ್ಕೋಬೇಕಾಗಿರೋವಂತಾ ದೃಶ್ಯಗಳೇ ಆಗಿದ್ದಾವೆ.  ಖಜುರಾಹೊದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕ್ ಮಾಡೋ ಪುಂಡುಪೋಕ್ರಿಗಳ ಬಗ್ಗೆ ಪುಕಾರಿದೆಯಾದ್ರೂನೂವೇ, ಗೈಡ್ಗಳ ಜೊತೆ ಮತ್ತೆ ವ್ಯಾಪಾರಿಗಳ ಜೊತೆ ಹೇಗೆ ನಡ್ಕೋಬೇಕು ಅನ್ನೋದನ್ನ ನೀವು ಒಂದ್ಸಲ ಕಲ್ತುಕೊಂಡ್ರಿ ಅಂತಾದ್ರೆ, ವಾರಾಂತ್ಯಾನಾ ಆರಾಮ್ವಾಗಿ ಕಳೆಯೋಕೆ ದೇಶ್ದಲ್ಲೇ ಖಜುರಾಹೊ ಭಾಳಾ ಸುರಕ್ಷಿತವಾಗಿರೋ ಜಾಗ ಅಂತಾ ಅನ್ನಿಸಿಕೊಳ್ಳತ್ತೆ.

ಖಜುರಾಹೊದಲ್ಲಿ ನೀವು ಲಕ್ಷ್ಮಣ ದೇವಸ್ಥಾನ, ಕಂದಾರಿಯಾ ಮಹಾದೇವ್ ದೇವಸ್ಥಾನ, ಹಳೇ ಗ್ರಾಮ, ಲಕ್ಷ್ಮೀ ದೇವಸ್ಥಾನ, ಮಾತಂಗೇಶ್ವರ್ ಮಹಾದೇವ್ ದೇವಸ್ಥಾನ, ಪಾರ್ಶ್ವನಾಥ್ ದೇವಸ್ಥಾನ, ಭಗ್ವಾನ್ ಮಹಾವೀರ ದೇವಸ್ಥಾನ, ಮತ್ತೆ ಆದಿನಾಥ ದೇವಸ್ಥಾನಗಳ್ನ ಸುತ್ತಾಡ್ಕೊಂಡು ಬರ್ಬೋದು.

i.ytimg.com
5. ಉದಯ್ ಪುರ್

ಸಹಾಯ ಹಸ್ತ ಚಾಚೋ ಗುಣಸ್ವಭಾವ ಇರೋ ಜನ್ರು ಸರ್ವೇಸಾಮಾನ್ಯವಾಗಿ ನಿಮ್ಗೆ ಕಾಣಕ್ಕೆ ಸಿಗೋದು ರಾಜಸ್ಥಾನದಲ್ಲಿ.  ಈ ವಿಚಾರ್ವಾಗಿ, ರಾಜಸ್ಥಾನದಲ್ಲಿರೋ ಉದಯ್ ಪುರ್ ಪಟ್ಟಣಕ್ಕಿಂತ ಒಳ್ಳೇ ಉದಾಹರ್ಣೆ ನಿಮ್ಗೆ ಬೇರ್ಯಾವುದೂನೂ ಸಿಗೋದಿಲ್ಲ.  ಉದಯ್ ಪುರ್ ಪಟ್ಣದ ನರನಾಡಿಗಳಲ್ಲಿ ಹರಿದಾಡೋ ಇಲ್ಲಿನ ಶ್ರೀಮಂತ ಸಂಸ್ಕೃತಿನಾ ನೀವಿಲ್ಲಿ ಕಾಲಿಡೋ ರಸ್ತೆರಸ್ತೆಗಳಲ್ಲಿ ಕಂಡ್ಕೋಬೌದು.  ಉದಯ್ ಪುರ್ ನಲ್ಲಿ ನೀವು ಎದುರ್ಸ್ಬೋದಾದ ಒಂದೇ ಒಂದು ಸಮಸ್ಯೆ ಏನಪ್ಪಾ ಅಂದ್ರೆ, ಉದಯ್ ಪುರ್ ಗೆ ಸಾಮಾನ್ಯವಾಗಿ ಭೇಟಿ ಕೊಡೋರು ಜೋಡಿಗಳಾಗಿರ್ತಾರೆ.  ಹಿಂಗಾಗಿ, ಇಲ್ಲಿ ಒಬ್ಳಿಗೇ ಅಡ್ಡಾಡೋದು ಒಂದೊಂದ್ಸಲ ಬೋರ್ ಅನ್ನಿಸ್ಬೋದು.  ಆದ್ರೂನೂ, ಒಂದ್ವೇಳೆ ನಿಮ್ಮಲ್ಲಿರೋ ಸಾಹಸೀ ಮನೋವೃತ್ತಿ, ಈ ಬೋರಿಂಗ್ನಾ ಮೆಟ್ಟಿ ನಿಲ್ಲತ್ತೆ ಅಂತಾದ್ರೆ, ನಿಮ್ಮ ಜೀವ್ನಾ ಪೂರ್ತಿ ನೀವು ಮರೆಯೋಕೇ ಆಗ್ದೇ ಇರೋವಂತಾ ಜಾಗಕ್ಕೆ ನೀವು ಬಂದಿದ್ದೀರಾ ಅಂತಾನೇ ಅದರರ್ಥ.

lonelyplanetimages.imgix.ne

6.  ಕಾಝಿರಂಗಾ, ಅಸ್ಸಾಂ

ಅಭಯಾರಣ್ಯಗಳು ಹೆಣ್ಮಕ್ಳಿಗೆ ಎಂದೂ ಕೈಗೆಟುಕುವಂತವಲ್ಲ ಅಂತ ಎಲ್ಲೂ ಯಾರೂ ಹೇಳಿಲ್ಲಾ ಅಲ್ವಾ ?!  ಒಂದೇ ಕೊಂಬಿರೋ ಘೇಂಡಾಮೃಗಗಳು ಕಾಝಿರಂಗಾ ಅಭಯಾರಣ್ಯದಲ್ಲಿ ಧಾರಾಳವಾಗಿ ನೋಡೋಕೆ ಸಿಗ್ತಾವೆ.  ಹೀಗಾಗಿ, ಒಬ್ಬಂಟಿಗ್ಳಾಗಿ ಅಡ್ಡಾಡೋವಾಗ, ಕಾಡುಪ್ರಾಣಿಗಳ್ನ ಭಾಳಾ ಹತ್ರದಿಂದ, ಪ್ರತ್ಯಕ್ಷವಾಗಿ ಕಣ್ತುಂಬ್ಕೊಳ್ಳೋ ನಿಟ್ನಲ್ಲಿ, ಕಾಝಿರಂಗಾ ಅಭಯಾರಣ್ಯಾ ಇದ್ಯಲ್ಲಾ, ನಿಜ್ವಾಗ್ಲೂನೂವೇ ಭಲೇ ದೊಡ್ ಭಾರತೀಯ ಆಕರ್ಷಣೇ ಅಂತಾನೇ ಹೇಳ್ಬೋದು.  ಸರ್ಕಾರ ನಡೆಸ್ತಾ ಇರೋ ಈ ಅಭಯಾರಣ್ಯದಲ್ಲಿ ಖಾಸಗೀ ಜೀಪ್ ಸಫಾರಿ ಕೈಗೊಳ್ಳೋಕೂ ಅವ್ಕಾಶ ಇದ್ದು, ಜೊತೆಗೆ ಎಲಿಫೆಂಟ್ ಟೂರ್ ಗಳನ್ನೂ ಇಲ್ಲಿ ಏರ್ಪಾಡು ಮಾಡ್ತಾರೆ.  ಪ್ರವಾಸಿಗರು ಅಭಯಾರಣ್ಯಾನ ಚೆನ್ನಾಗಿ ಜಾಲಾಡೋದುಕ್ಕೆ ಸಹಾಯ ಆಗ್ಲಿ ಅಂತಾ ಸರ್ಕಾರ ಇಷ್ಟೆಲ್ಲಾ ಏರ್ಪಾಟುಗಳ್ನ ಕೈಗೊಂಡಿರೋದು.  ನಿಜ್ವಾಗ್ಲೂ ಪ್ರವಾಸ ಹೋಗೋದುಕ್ಕೆ ಭಾಳಾ ಪ್ರಶಸ್ತವಾಗಿರೋ ಜಾಗ ಈ ಕಾಝಿರಂಗಾ ಅಭ್ಯಾರಣ್ಯ.

ಇಲ್ಲಿ ನೀವು ಏನೇನು ಮಾಡ್ಬೋದು ಗೊತ್ತಾ ?:  ಒಂದೇ ಕೊಂಬಿರೋ ಘೇಂಡಾಮೃಗ, ಚಿರ್ತೆ, ಮೀನು ಹಿಡಿಯೋ ಬೆಕ್ಕು, ಸೈವೆಟ್, ಭಾರತೀಯ ತಳಿಯ ಚಿಕ್ಕು ಸೈವೆಟ್, ಸಾಂಬಾರ್ (ಒಂದು ಥರದ ಜಿಂಕೆ), ಬೊಗ್ಳೋ ಜಿಂಕೆ, ಹಾಗ್ ಜಿಂಕೆ, ಗೌರ್, ಹೋಗ್ ಬ್ಯಾಡ್ಜರ್, ಹೂಲೋಕ್ ಗಿಬ್ಬನ್, ಕ್ಯಾಪ್ಡ್ ಲಾಂಗೂರ್, ಅಸ್ಸಾಮೀ ಕೋತಿ, ರೇಸಸ್ ಕೋತಿ ಥರದ ನಾನಾ ಪ್ರಾಣಿಗಳ್ನ ಕಣ್ತುಂಬ್ಕೋಬೋದು.

kaziranga-national-park.com

7.  ವಾರಣಾಸಿ

ವಾರಣಾಸಿ ಅಥ್ವಾ ಕಾಶಿ ಪಟ್ಣದ ಹೆಸರನ್ನ ಯಾರ್ ತಾನೇ ಕೇಳಿಲ್ಲಾ ಹೇಳಿ? ಉತ್ತರ ಭಾರತದ ಧಾರ್ಮಿಕ ಕೇಂದ್ರ ಅಂತಾನೇ ಅನ್ನಿಸ್ಕೊಂಡಿದೆ ಕಾಶೀ ಅನ್ನೋ ಈ ಪವಿತ್ರ ಯಾತ್ರಾಸ್ಥಳ.  ದೇವಾಲಯಗಳ ನಗರ ಅಂತಾನೇ ಮನೆಮಾತಾಗಿರೋ ಈ ಕಾಶೀ ಕ್ಷೇತ್ರದಲ್ಲಿ ಪ್ರವಹಿಸುತ್ತೆ ಪವಿತ್ರ ಗಂಗಾ ನದಿ.  ಗಂಗಾ ನದಿ ತೀರದುದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಕಟ್ಸಿರೋ ಘಾಟ್ ಗಳಿಗೆ ಹೆಸರುವಾಸಿಯಾಗಿದೆ ಕಾಶಿ ಕ್ಷೇತ್ರ.   ವಾರಣಾಸಿ ಪಟ್ಟಣದ ಜನಗಳಂತೂ ಭಾಳಾ ಸ್ನೇಹಮಯಿಗುಳಾಗಿದ್ದು, ಸಹಾಯ ಹಸ್ತ ಚಾಚೋ ಸ್ವಭಾವ್ದೋರು.  ಅಪರಿಚಿತರಿಗೆ ತೀರಾ ಅಗತ್ಯ ಬಿದ್ದಾಗ ಕೆಲವ್ಸಲ ತಮ್ಮ ಶಕ್ತಿಮೀರಿ ಸಹಾಯ ಮಾಡೋ ಉದಾರಿಗಳು ಇಲ್ಲಿನ ಜನ್ರು.  ಪ್ರವಾಸೋದ್ಯಮದ ಮೇಲೇನೇ ಈ ಪಟ್ಟಣ ಬೆಳ್ದು ನಿಂತಿರೋದ್ರಿಂದ, ಹಿಂದೂ ಸಂಸ್ಕೃತಿನಲ್ಲಿ ಮಿಂದೇಳೋದಕ್ಕೆ ಹೇಳಿ ಮಾಡ್ಸಿರೋ ಥರಾ ಇರೋ ವಾರಾಣಾಸೀನಾ ಪ್ರವಾಸಿಗರ ಪಾಲಿನ ಅತ್ಯಂತ ಸುರಕ್ಷಿತವಾಗಿರೋ ಜಾಗ ಅಂತಾನೇ ಹೇಳ್ತಾರೆ.

content.makaan.com

8.  ಪಾಂಡಿಚೆರಿ

ಕೇಂದ್ರಾಡಳಿತ ಪ್ರದೇಶಾ ಅಂತನ್ನುಸ್ಕೊಂಡಿರೋ ಪಾಂಡಿಚೇರಿಲೀ, ದೇಶದ ಭಾಳಾ ಜಾಗಗಳಲ್ಲಿ ಸಿಕ್ದೇ ಇರೋ ಅಂತಾ ಶಾಂತಿ, ನೆಮ್ಮದಿಯ ಕ್ಷಣಗಳ್ನ ಇಲ್ಲಿ  ಕಂಡ್ಕೋಬೋದು ನೋಡಿ.  ಇಲ್ಲಿನ ನೀರವ ಮತ್ತೆ ಪ್ರಶಾಂತ್ವಾಗಿರೋ ಸೆಟ್ಟಿಂಗನ್ನಾ ನೋಡ್ತಾಯಿದ್ರೆ, ಭಾರತದ ಯಾವ್ದೇ ಒಂದು ಮಾರ್ಡನ್ ತಾಣಕ್ಕಿಂತ ತೀರಾ ಬೇರೆ ಥರಾ ಇರೋವಂಥಾ ಗತಕಾಲದ ಫ಼್ರೆಂಚ್ ಸಿಟಿ ಥರಾ ಕಾಣತ್ತೆ.  ಶಾಪಿಂಗ್ ಮಾಡೋದಕ್ಕೆ ಮತ್ತೆ ಸ್ವಾಧಿಷ್ಟವಾಗಿರೋ ಫ಼್ರೆಂಚ್ ಪಾಕವೈವಿಧ್ಯಾನಾ ಸವಿಯೋದಕ್ಕೆ ಹೇಳಿ ಮಾಡಿಸಿದಂಗಿರೋ ಜಾಗ ಇದು.  ಸರಳ ಜೀವ್ನಾನಾ ಸಂತೋಷ್ದಿಂದ ನಡ್ಸೋವಂತಾ ಸ್ನೇಹಮಯೀ ಜನ್ರಿಂದ ತುಂಬ್ಕೊಂಡಿರೋ ಊರು ಈ ಪಾಂಡಿಚೆರಿ.

tourism.pondicherry.gov.in

9. ಸಿಕ್ಕಿಂ

ದೇಶದ ಈಶಾನ್ಯ ಭಾಗ ಇದ್ಯಲ್ಲಾ, ಅದಂತೂ ನಿಮ್ಮನ್ನ ಎಲ್ಲೋ ಕಳ್ದೋಗೋ ಹಾಗೆ ಮಾಡ್ಬಿಡೋವಷ್ಟು ಸುಂದರವಾಗಿದೆ ನೋಡಿ.  ಅದ್ರಲ್ಲೂ ವಿಶೇಷ್ವಾಗಿ ಹೇಳ್ಬೇಕೂಂತಂದ್ರೆ, ಈಶಾನ್ಯ ಸಿಕ್ಕಿಂ ಭಾಗವಂತೂ ಅತ್ಯಂತ ಮನಸೂರೆಗೈಯ್ಯೋ ಜಾಗ.  ಕತ್ತೆತ್ತಿ ನೋಡಿದ್ರೆ ತುದಿ ಕಣ್ಣಿಗೆ ಕಾಣಿಸ್ದೇ ಇರೋವಷ್ಟು ಅಗಾಧ್ವಾಗಿರೋ ಎತ್ತರ್ವಾದ ಪರ್ವತಗಳಿಂದ್ಲೇ ತುಂಬ್ಕೊಂಡು ಬಿಟ್ಟಿದೆ ಸಿಕ್ಕಿಂ.  ಇವುಗಳ ಮಧ್ಯಾ ಆಳ್ವಾಗಿರೋ ಕಣಿವೆಗಳು ಮತ್ತೆ ಅಲ್ಲಲ್ಲಿ ಕಾಣ್ಸೋ ಅತೀ ಸುಂದರ್ವಾದ ಬೌದ್ಧ ಸನ್ಯಾಸಾಶ್ರಮಗಳು ಬೇರೆ.  ಅತಿಥಿಗಳ್ನ ಮನೆಯವ್ರ ಥರಾನೇ ಸತ್ಕರಿಸೋವಂಥಾ ಶ್ರೀಮಂತ ಸಂಸ್ಕೃತಿ ಹಾಸುಹೊಕ್ಕಾಗಿದೆ ಸಿಕ್ಕಿಂನಲ್ಲಿ.   ಹಿಂಗಾಗಿ, ಸಿಕ್ಕಿಂಗೆ ಒಂಟಿ ಹೆಣ್ಮಕ್ಳಿಗೆ ಭೇಟಿ ಕೊಡೋದು ಕಿರ್ಕಿರಿ ಅಂಥಾ ಅನ್ಸೋ ಛಾನ್ಸೇ ಇಲ್ಲಾ.

esikkimtourism.in

10. ಲಡಾಖ್

ಒಬ್ಬೊಬ್ಬ್ರೇ ಪ್ರವಾಸ ಹೋಗೋಕೆ ಇಷ್ಟಾಪಡೋ ಅಂಥಾವ್ರಿಗೆ ಹೇಳಿಮಾಡಿಸಿದಂತಹ ಅಲ್ಟಿಮೇಟ್ ಜಾಗ ನೋಡಿ ಲಡಾಖ್.  ಆದ್ರೆ ಒಂದು ವಿಷ್ಯ ಇಲ್ಲಿ ಗಮ್ನಿಸ್ಬೇಕು.  ಅದೇನಾಪ್ಪ ಅಂದ್ರೆ, ಮೊದಲ್ನೇ ಸಾರಿ ಹೋಗ್ತಿರೋರಾಗಿದ್ರೆ ಖಂಡಿತ್ವಾಗ್ಲೂ ಒಬ್ಬೊಬ್ಬ್ರೇ ಹೋಗೋದು ಸರಿಯಲ್ಲ.  ಆದ್ರೆ ಒಂದ್ಸಲ ನಿಮ್ಮ ಲಗೇಜುಗಳ್ನ ಹೇರ್ಕೊಂಡು ಇಲ್ಲಿ ಅಡ್ಡಾಡೋದು ನಿಮ್ಗೆ ರೂಢಿಯಾದ್ಮೇಲಂತೂ ಖಂಡಿತ್ವಾಗ್ಲೂನೂ ನಿಮ್ಗೆ ಮತ್ತೆ ಮತ್ತೆ ಅಲ್ಲಿಗೆ ಹೋಗ್ತಾನೇ ಇರ್ಬೇಕು ಅಂತಾ ಅನ್ಸೋವಂತಾ ತಾಣ ಇದು.  ಇಲ್ಲಿರೋ ಕಣಿವೆಗಳ ಪ್ರಶಾಂತ ವಾತಾವರಣ ಹೆಂಗಸ್ರು, ಗಂಡಸ್ರು ಅನ್ನೋ ಯಾವ ಭೇದಭಾವಾನೂ ಇಲ್ದಂಗೆ ಇಬ್ರು ಮೇಲೂ ಸಮಾನ್ವಾಗೇ ಮೋಡಿ ಮಾಡ್ಬಿಡತ್ತೆ. 

nirmalatravels.com

11. ಚುರು, ರಾಜಸ್ಥಾನ

ಮೊದ್ಲೇ ನಾವ್ ಹೇಳಿರೋ ಪ್ರಕಾರ, ಬಹುಶ: ದೇಶ್ದಲ್ಲೇ ರಾಜಸ್ಥಾನಿಗ್ರು ಅತ್ಯಂತ ಸ್ನೇಹಭಾವದ ಮುಖಗಳ್ನ ಹೊತ್ಕೋಂಡಿರೋರು.  ಹಿಂಗಾಗಿರೋದ್ರಿಂದ್ಲೇ, ಚುರುನಂತಹ ಒಂದು ಪುಟ್ ಪಟ್ಣಾನಾ ಹುಡುಕ್ಕೊಂಡು ಹೋಗೋದು ಏನೇನೂ ಕಷ್ಟವಾಗಲ್ಲ.  ಆಗ ಪರಿಚಯವಾಗೋ ರಾಜಸ್ಥಾನಿಗರ ನಿಜ್ವಾದ ಅಂತರಂಗ ಮತ್ತೆ ಅವ್ರ ನಿಜ್ವಾದ ಸಂಸ್ಕೃತಿ ಏನೂಂತಾ ಆವಾಗ್ಲೇ ನಿಮ್ಗೆ ತಿಳಿದು ಹೋಗತ್ತೆ.    ಆದ್ರೆ ಒಂದು ವಿಚಾರ ನೆನ್ಪಿರ್ಲಿ, ನೀವು ಚುರು ಪಟ್ಣಕ್ಕೆ ಕಡ್ಡಾಯ್ವಾಗಿ ಹಗ್ಲು ಹೊತ್ತಲ್ಲೇ ಹೋಗ್ಬೇಕು.  ಯಾಕಂದ್ರೆ, ಅಲ್ಲಿನ ಸ್ಥಳೀಯರ ಜೊತೆ ಒಂದಿಷ್ಟು ಕಾಲಾ ಕಳೆಯೋದನ್ನ ಬಿಟ್ರೆ ಅಲ್ಲಿ ಮಾಡೋವಂತಾ ಅಂಥಾ ಚಟುವಟಿಕೆಗಳೇನೂ ಇಲ್ಲಾ.  ಅಲ್ಲಿನ ಸಂಸ್ಕೃತೀನಾ ಪರಿಚಯ ಮಾಡ್ಕೊಂಡಾದ ಮೇಲೆ, ನಿಮ್ಮ ಪ್ರಯಾಣದ ಮುಂದಿನ ಭಾಗದ ರೂಪ್ದಲ್ಲಿ, ಅಲ್ಲೇ ಸುತ್ತಮುತ್ತ ಇರೋ ಹೆಸರಾಂತ ಪಟ್ಟಣಗಳ್ಗೆ ಒಂದು ಚಿಕ್ಕ ಪ್ರವಾಸಾನಾ ಕೈಗೆತ್ಕೊಳಿ.

ಇಲ್ಲಿ ಏನೇನೇಲ್ಲಾ ಮಾಡ್ಬೋದು ?:  ಇಲ್ಲಿನ ಜನರ ಜೊತೆ ಬೆರ್ತು ಅವ್ರ ಸಂಸ್ಕೃತಿ, ಸಂಪ್ರದಾಯಗಳ್ನ ತಿಳ್ಕೋಬೋದು, ರಾಜಸ್ಥಾನೀ ಅಡುಗೆ ಮಾಡೋದು ಹೇಗೆ ಅಂತಾ ಕಲ್ತುಕೋಬೋದು, ಮತ್ತೆ ಹಾಗೇ ಮಣ್ಣಿನ ಪಾತ್ರೆಗಳ್ನ ಹೇಗೆ ಮಾಡೋದೂ ಅಂತಾನೂ ಕಲಿತುಕೋಬೋದು.

indiamike.com

12.  ಮುನ್ನಾರ್, ಕೇರಳ

ಸುಂದರವಾಗಿರೋ ಚಹಾ ತೋಟಗಳಿಗೆ ಮುನ್ನಾರ್ ಫ಼ೇಮಸ್ಸು ಅನ್ನೋ ಸಂಗ್ತಿ ಎಲ್ರಿಗೂ ಗೊತ್ತಿರೋವಂಥಾದ್ದೇ.  ಅದರ ಜೊತೆಗೆ ಮುನ್ನಾರ್, ನಿಬ್ಬೆರಗಾಗ್ಸೋ ಸೌಂದರ್ಯ ಮತ್ತೆ ಹಾಗೇನೇ ಮಾತೇ ಹೊರಡದಂಗೆ ಮಾಡ್ಬಿಡೋವಷ್ಟು ಚೆಂದದ ಭೂಪ್ರದೇಶಗಳಿಂದ್ಲೂ ತುಂಬ್ಕೊಂಡಿದೆ.  ಇಲ್ಲಿರೋ ಪ್ರತ್ಯೊಂದು ದೃಶ್ಯವೈಭವಕ್ಕೂನೂವೇ ಒಂದೊಂದು ಹಚ್ಚಹಸುರಾಗಿರೋ ಬೆಟ್ಟಾಗುಡ್ಡಗಳ ಹಿನ್ನೆಲೆ ಇದ್ದು, ಇವು ಇಲ್ಲಿನ ಒಟ್ಟಾರೆ ಸೌಂದರ್ಯಾನಾ ನೂರು ಪಟ್ಟು ಜಾಸ್ತಿ ಮಾಡ್ಬಿಡ್ತಾವೆ.  ಕೇರಳ ರಾಜ್ಯದಲ್ಲಿರೋ ಮುನ್ನಾರ್ ನಲ್ಲಿ ಪ್ರವಾಸ ಮಾಡೋದು ಭಾಳಾ ಸೇಫ಼್ ಅಂತಾ ಪ್ರವಾಸಿಗರ ನಂಬ್ಕೆ.  ಯಾಕಂದ್ರೆ, ಇಲ್ಲಿನ ಜನ ಭಾಳಾ ಶ್ರಮಜೀವಿಗಳು ಮತ್ತೆ ಅಷ್ಟೇ ಪ್ರಾಮಾಣಿಕ್ರೂ ಕೂಡಾ.  ಒಬ್ಬಂಟಿಗ್ರಾಗಿ ಇಲ್ಲಿಗೆ ಭೇಟಿ ಕೊಡೋಕೆ ಇಷ್ಟ ಪಡೋರಿಗೆ ಮುನ್ನಾರ್ ಸುತ್ತಾಮುತ್ತಾ ಥರಥರದ ರೆಸಾರ್ಟ್ ಗಳಿದ್ದಾವೆ.  ಈ ರೆಸಾರ್ಟ್ ಗಳು ಕೊಡಮಾಡೋವಂತಾ ಆಕರ್ಷಕ ಆಯ್ಕೆಗಳು ಹೀಗೆ ಒಬ್ಬಂಟಿಗ್ರಾಗಿ ಬರೋವಂಥಾವ್ರಿಗೆ ಹೇಳಿಮಾಡಿಸಿದ ಹಾಗೆ ಇರ್ತಾವೆ.

yatramantra.com

13.  ಹಂಪಿ

ಭಾರತ ದೇಶದ ಬಗ್ಗೆ ನಿಮ್ಗಿರೋ ಅನಿಸಿಕೆ, ಅಭಿಪ್ರಾಯಗಳ್ನ ಈ ಪುಟ್ಟ ಗ್ರಾಮೀಣ ತಾಣ, ಸಂಪೂರ್ಣವಾಗಿ ಬದ್ಲಾಯಿಸ್ಬಿಡುತ್ತೆ.  ಯಾಕಂದ್ರೆ, ಹಳ್ಳಿಯಾದ್ರೂನೂವೇ ಹಂಪಿಯಲ್ಲಿರೋವಷ್ಟು ವಸ್ತು, ವಿಷಯಗಳು ನಿಮ್ಗೆ ಪಟ್ಣದಲ್ಲೂ ಕಾಣಕ್ಕೆ ಸಿಗೋದಿಲ್ಲ!  ಅತಿಥಿಗಳ ಸ್ವಾಗತಕ್ಕೆ ಮುಂದಾಗೋವಂತಾ, ಸ್ನೇಹಮಯೀ ಮನೋಭಾವ ಇರೋವಂತಾ, ಮತ್ತೆ ಹಾಗೆನೇ ಸಾಂಸ್ಕೃತಿಕವಾಗಿ ಶ್ರೀಮಂತ್ರಾಗಿರೋವಂತಾ ಜನ್ಗಳೇ ನಿಮ್ಗಿಲ್ಲಿ ಎದುರಾಗೋದು.  ಯುನೆಸ್ಕೋ ಜಾಗತಿಕ ಪರಂಪರೆಯ ತಾಣ ಅಂತಾ ಅನ್ನಿಸ್ಕೊಂಡಿರೋ ಮತ್ತೊಂದು ತಾಣ ಈ ಹಂಪಿ.  ಹೆಗಲ ಮೇಲೆ ಸರಕು ಸರಂಜಾಮುಗಳಿರೋ ಚೀಲಾನಾ ಹೊತ್ಕೊಂಡು ಪ್ರವಾಸ ಹೊರಡೋವಂಥೋರು ನೀವಾಗಿದ್ರೆ, ಖಂಡಿತ್ವಾಗ್ಲೂ ಹಂಪಿ ನಿಮ್ಗೆ ತುಂಬಾನೇ ಇಷ್ಟ ಆಗತ್ತೆ.  ಯಾಕಂದ್ರೆ, ಇಲ್ಲಿ ಉಳ್ಕೋಳ್ಳೋಕೆ ಜಾಗ ತುಂಬಾ ಕಡ್ಮೆ ರೇಟಲ್ಲಿ ಸಿಗತ್ತೆ, ಬೇರ್ಬೇರೆ ದೇಶ್ಗಳಿಂದ ಬಂದಿರೋ ಜನ್ರನ್ನ ಭೇಟಿಯಾಗೋ ಅವ್ಕಾಶ ಸಿಗುತ್ತೆ, ಮತ್ತೆ ಜೊತೆಗೆ ನಿಮ್ಗೆ ಸ್ವತಂತ್ರ ಸಿಕ್ಕಿರೋ ಮನೋಭಾವಾನೂ ಇಲ್ಲಿ ಉಂಟಾಗತ್ತೆ.

https://c1.staticflickr.com/3/2797/4478796901_5e5553efcf_b.jpg

14. ರಿಷಿಕೇಶ್

ಮೋಜು-ಮಸ್ತಿ ಮತ್ತೆ ಹಾಗೇನೆ ಸಾಹಸಗಳ್ನ ಇಷ್ಟಾಪಡೋ ಅಂಥಾವ್ರ ಮನಸ್ಸಿಗೆ ಹತ್ತಿರವಾಗೋ ಸ್ಥಳ ರಿಷಿಕೇಶ್ ಆಗಿದೆ.  ವೈಟ್ ವಾಟರ್ ರಿವರ್ ರಾಪ್ಟಿಂಗ್, ರಾಫೆಲ್ಲಿಂಗ್ ಚಟುವಟಿಕೆಗಳ್ನ ಕೈಗೆತ್ಕೊಳ್ಳೋಕೆ ಅವಕಾಶ ಮಾಡ್ಕೊಡೋದರ ಮೂಲಕ, ರಿಷಿಕೇಶ್ ಒಂದು ಅತ್ಯದ್ಭುತ್ವಾದ ಸಾಹಸೀ ಪ್ಯಾಕೇಜ್ ಅನ್ನ ಕೊಡಮಾಡೋ ತಾಣ ಅಂತನ್ಸಿಕೊಳ್ಳತ್ತೆ.  ಈ ಸಾಹಸಗಳ್ನ ನೀವು ಒಬ್ಬಂಟಿಯಾಗಿನೋ ಇಲ್ಲಾ ನಿಮ್ಮ ಫ಼್ರೆಂಡ್ಸ್ ಗಳ ಜೊತೆಗೂ ಆನಂದಿಸ್ಬೋದು..  "ನಂಗಿಂತಾ ಸಾಹಸಗಳೆಲ್ಲಾ ಆಗ್ಬರೋಲ್ಲ" ಅಂತಾ ಅನ್ನೋರು ನೀವಾಗಿದ್ರೆ, ಇಲ್ಲಿ ನಡೆಯೋ ಒಳ್ಳೊಳ್ಳೆ ಯೋಗಾ ಕ್ಲಾಸ್ ಗಳಿಗೂ ನೀವು ಸೇರ್ಕೋಬೌದು.  ಹಿಮಾಲಯ ಪರ್ವತಗಳ ಮನಮೋಹಕವಾದ ಹಿನ್ನೆಲೆನಲ್ಲಿ ಈ ಯೋಗಾ ಕ್ಲಾಸ್ ಗಳು ನಡೀತಾವೆ.

rishikeshschoolofyoga.org

15. ಝಿರೋ ಕಣಿವೆ, ಅರುಣಾಚಲ ಪ್ರದೇಶ

ಅತೀ ಹೆಚ್ಚು ಪ್ರಕೃತಿ ಸೌಂದರ್ಯದಿಂದ್ಲೇ ತುಂಬ್ಕೋಂಡಿರೋವಂತಾ ಭಾರತ ದೇಶದ ತಾಣಗಳ ಪೈಕಿ ಒಂದು ಅರುಣಾಚಲ ಪ್ರದೇಶದ ಝಿರೋ ಕಣಿವೆ.  ನಿಜ ಹೇಳ್ಬೇಕೂಂದ್ರೆ ಜೀವನ್ದಲ್ಲಿ ಒಂದ್ಸಲನಾದ್ರೂ ಝಿರೋ ಕಣಿವೆನಾ ನೋಡ್ಲೇಬೇಕು ಕಣ್ರೀ.  ಎಲ್ಲೆಲ್ಲಿ ನೋಡಿದ್ರೂನೂ, ಕಣ್ಣು ಹಾಯಿಸಿದಷ್ಟೂ ದೂರಾ ಕಾಣ್ಸೋ ಹಚ್ಚಹಸುರು, ತೊನೆದಾಡೋ ಪೈರುಗುಳಿಂದ ತುಂಬ್ಕೊಂಡಿರೋ ಭತ್ತದ ಗದ್ದೆಗಳು, ಒಳ್ಳೇ ಹಾವಿನ ಥರಾ ಅಂಕುಡೊಂಕಾಗಿ ಹರಿಯೋ ತೊರೆಗಳು, ಗ್ರಾಮೀಣ ಸೊಗಡಿರೋವಂಥಾ ಇಲ್ಲಿನ ಗುಡಿಸಲುಗಳು, ಇವೆಲ್ಲಾನ್ನೂ ನೋಡ್ತಾಯಿದ್ರೆ ಯಾವ್ದೋ ಮಾಯಾಲೋಕಕ್ಕೆ ಬಂದ್ಬಿಟ್ವೇನೋ ಅಂತಾ ಆನ್ನಿಸಿಬಿಡತ್ತೆ.  ಇಲ್ಲೇ ಒಂದಿಷ್ಟು ಕಾಲ ಕಳೆದ್ರೆ, ಇಲ್ಲಿನ ಬುಡಕಟ್ಟು ಜನಾಂಗದೋರ, ಅವರದ್ದೇ ಆದ ಆಳ್ವಾದ ಸಂಸ್ಕೃತಿ ಮತ್ತೆ ಸಂಪ್ರದಾಯಗಳ್ನ ಸುಲಭವಾಗಿ ಅರ್ಥಮಾಡ್ಕೋಬೋದು.  ಒಬ್ಬಂಟಿಯಾಗಿ ಪ್ರವಾಸ ಹೋಗೋಕೆ ಇಷ್ಟಾಪಡೋ ಪ್ರತಿಯೊಬ್ರ ಪಟ್ಟಿನಲ್ಲೂ ಇರ್ಲೇಬೇಕಾಗಿರೋ ಮತ್ತೆ ಹಾಗೆನೇ ಭಾಳಾ ಜನಕ್ಕೆ ಗೊತ್ತಿಲ್ದೇ ಇರೋವಂಥಾ ಜಾಗ ಈ ಝಿರೋ ಕಣಿವೆ ಆಗಿದೆ.

ಇಲ್ಲಿ ನೀವು ಏನೇನೆಲ್ಲಾ ನೋಡ್ಬೋದು ?:  ಹೋಂಗ್, ಹಿಜಾ, ಬಾಮಿನ್, ದುತ್ತಾ, ಝಿರೋ ಪುಟು, ತಾರಿನ್ ಫ಼ಿಶ್ ಫ಼ಾರ್ಮ್, ಟ್ಯಾಲ್ಲಿ ಕಣಿವೆ, ಟ್ಯಾಪ್ಯೋ ಸಾಲ್ಟ್, ಡೊಲೋ ಮಾಂಡೋ, ಕಿಲೇ ಪಕೋ, ದಿಲೊಪೊಲ್ಯಾಂಗ್ ಮನೀಪೋಲ್ಯಾಂಗ್, ಮತ್ತೆ ಕಾರ್ಡೋ ಕಾಡಲ್ಲಿರೋ ಶಿವಲಿಂಗ.

lostwithpurpose.com

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: