ನಿಜವಾದ ಗಂಡಸರು ಯಾವುದೇ ಕಾರಣಕ್ಕೂ ಹೆಂಗಸರ ಜೊತೆ ಈ 8 ರೀತಿಯಲ್ಲಿ ನಡ್ಕೊಳಲ್ಲ

ಬರಿ ಗಡ್ಡ ಮೀಸೆ ಇದ್ರೆ ಗಂಡ್ಸಾಗಕ್ಕಾಗಲ್ಲ

ಗಡ್ಡ ಮೀಸೆ ಬಂತಕ್ಷಣ ಗಂಡಸು ಅಂತ ಅನ್ನಕ್ ಆಗಲ್ಲ ಸ್ವಾಮಿ, ಗಂಡಸು ತನ್ನ ಜೀವನದಲ್ಲಿ ಯಾವತ್ತು ನಿಜ್ವಾಗ್ಲೂ ಗಂಡ್ಸಾಗ್ತಾನೆ? ಎಷ್ಟೋ ಜನ ಸಣ್ಣ ವಯ್ಸಲ್ಲೆ ದೊಡ್ಡೋರಾಗ್ತಾರೆ, ಎಷ್ಟೋ ಜನ ಎಷ್ಟ್ ವಯಸ್ಸಾದ್ರೂ ಇನ್ನು ಎಳ್ಸ್ ಎಳಸಾಗ್ ಆಡ್ತಿರ್ತಾರೆ. ನಿಜವಾಗಿ ಗಂಡ್ಸಾದೋನು ಹೆಂಗಿರ್ತಾನೆ ಅಂತ ಗೊತ್ತಾ, ಅವ್ನು ಯಾವತ್ತು ಈ ೮ ಕೆಲ್ಸಾನ ಮಾಡಲ್ಲ. ಯಾವ್ದು ಅಂತ ತಿಳ್ಕೊಳಿ.

1. ಹೆಂಗಸಿಗೆ ನೀನು ನೋಡಕ್ಕೆ ಹಾಗಿರ್ಬೇಕು, ಹೀಗಿರ್ಬೇಕು ಅಂತ ಹೇಳಲ್ಲ 

ನಿಜ್ವಾದ್ ಗಂಡ್ಸಾದೋನು ಹೆಂಗಸಿಗೆ ನಿನ್ ತಲೆಕೂದ್ಲು ಹಿಂಗ್ ಮಾಡ್ಕೋ, ನೀ ಈ ಡ್ರೆಸ್ಸೆ ಹಾಕ್ಕೊ, ನೀ ಸಣ್ಣ ಆಗು, ನೀ ಈ ತರಾನೆ ಇರ್ಬೇಕು, ಹೀಗೆಲ್ಲ ಯಾವತ್ತು ಹೇಳೋದಿಲ್ಲ. ತನ್ನ ಸ್ವಾರ್ಥಕ್ಕೋಸ್ಕರ ಹೆಂಗಸಿನ ಆತ್ಮವಿಶ್ವಾಸಾನ ಸ್ವಾಭಿಮಾನಾನ ಯಾವತ್ತು ಹಾಳುಮಾಡೋದಿಲ್ಲ.

2. ಹೆಂಗಸಿನ ಸ್ವಂತ ವಿಷಯ ಸುಮ್ ಸುಮ್ನೆ ಕೆದುಕಲ್ಲ

ನಿಮ್ಮ ಮಧ್ಯೆ ಯಾವುದೇ ಗುಟ್ಟಿರಲ್ಲ, ಎಲ್ಲ ವಿಷಯಾನು ಹೇಳ್ಕೋತೀರಾ. ನಿಜವಾದ ಗಂಡಸು ಯಾವತ್ತು ಹೆಂಗಸಿನ  ಫೋನು, ಡೈರಿ ಇವನ್ನೆಲ್ಲ ಚೆಕ್ ಮಾಡಲ್ಲ. ಸುಮ್ ಸುಮ್ನೆ ಸಂಶಯ ಪಡಲ್ಲ.

3. ಎಂಥ ಕಷ್ಟ ಬಂದರೂ ಓಡೋಗಲ್ಲ 

ನಾವೆಲ್ಲಾ ಟೀನೇಜಲ್ಲಿ ಏನಾದ್ರು ಕಷ್ಟ ಬಂದ್ರೆ ತಪ್ಪುಸ್ಕೊಳಕ್ಕೆ ನೋಡ್ತಿದ್ವಿ, ಆದ್ರೆ ಒಬ್ಬ ಜವಾಬ್ದಾರಿ ಇರೋ ಗಂಡಸು ತಪ್ಪುಸ್ಕೊಳಲ್ಲ. ಕಷ್ಟ ಬಂದಾಗ ಅದನ್ನ ಎದುರಿಸಿ ನಿಲ್ಲಬೇಕು ಅಂತ ಅವನಿಗೆ ಗೊತ್ತಿರತ್ತೆ. ಯಾವತ್ತೂ ಓಡೋಗೋಬುದ್ದಿ ಅವ್ನಿಗೆ ಇರಲ್ಲ.

4. ಭಾವನೆ ವ್ಯಕ್ತಪಡಿಸೋದನ್ನ ದೌರ್ಬಲ್ಯ ಅಂದ್ಕೊಳಲ್ಲ

ಗಂಡಸು ಅಳ್ತಿದ್ರೆ, ಥು ಅಳ್ತಿದೀಯಾ ಗಂಡ್ಸ ನೀನು ಅಂತ ಕೇಳ್ತಾರೆ. ಆದ್ರೆ ನಿಜವಾದ ಗಂಡಸು ಖುಷಿಯಾದಾಗ ಖುಷಿ ಪಡ್ತಾನೆ, ನೋವಾದಾಗ ಅಳ್ತಾನೆ, ತನ್ನ ಭಾವನೇನ ವ್ಯಕ್ತಪಡುಸ್ತಾನೆ. ಅಳೋರೆಲ್ಲ ಕೈಲಾಗ್ದೋರು ಅಂತ ಯಾವತ್ತೂ ಅಂದುಕೊಳಲ್ಲ.

5. ಬರಿ ಇವತ್ತಿನ ಬಗ್ಗೆ ಯೋಚ್ನೆ ಮಾಡಲ್ಲ 

ಯರ್ರಾ ಬಿರ್ರಿ ಬೇಡದೆ ಇರೋದಕ್ಕೆಲ್ಲ ಖರ್ಚ್ ಮಾಡಲ್ಲ. ದುಂದು ವ್ಯಚ್ಚ ಮಾಡಲ್ಲ. ನಾಳೆ ಬಗ್ಗೆ, ಮುಂದಿನ ದಿನಗಳ ಬಗ್ಗೆ ಯೋಚ್ನೆ ಮಾಡಿ ದುಡ್ಡನ್ನ ಖರ್ಚ್ ಮಾಡ್ತಾನೆ. ಸುಮ್ನೆ ಪಾರ್ಟಿ ಮಾಡದು, ಅವಶ್ಯಕತೆ ಇಲ್ಲದೆ ಇದ್ರೂ ತೊಗೊಳೋದು ಹೀಗೆಲ್ಲ ದುಡ್ಡನ್ನ ಉಡಾಯ್ಸಲ್ಲ.

6. ಹೆಂಡ್ತೀಗಿಂತ ಸ್ನೇಹಿತರೇ ಮುಖ್ಯ ಅಂತ ಹೇಳಲ್ಲ 

ಸ್ನೇಹಿತರ ಜೊತೆ ಅಷ್ಟೇ ಚೆನ್ನಾಗಿರ್ತಾನೆ, ಅಷ್ಟೇ ಮಜಾ ಮಾಡ್ತಾನೆ, ಸುತ್ತಾಡ್ತಾನೆ ಆದ್ರೆ ಹೆಂಡ್ತೀಗೂ ಅಷ್ಟೇ ಪ್ರಾಮುಖ್ಯತೆ ಕೊಡ್ತಾನೆ. ಯಾವತ್ತೂ ಸ್ನೇಹಿತರು ಹೇಳಿದ್ದೆ ವೇದವಾಕ್ಯ ಅಂತ ಆಡಲ್ಲ. ಹೆಂಡತಿ ಮಾತಿಗೆ ಗೌರವ ಕೊಡ್ತಾನೆ.

7. ಯಾವತ್ತೂ ಅಮ್ಮ ಹೇಳಿದ ಮಾತಿಗೆ ಬೆಲೆ ಕೊಡದೆ ಇರಲ್ಲ 

ಅಮ್ಮ ಹೇಳಿದ ಮಾತಿಗೆ ಅಷ್ಟ್ ಬೆಲೆ ಕೊಡ್ತಾನೆ. ಏನೇ ಆಗ್ಲಿ ತಾಯೀನೇ ಸರ್ವಸ್ವ. ಅಮ್ಮ ಅಂದ್ರೆ ಜೀವ ಕೊಡಕ್ಕೂ ಸಿದ್ದ. ಯಾವತ್ತೂ ಅಮ್ಮ ಹಾಕಿದ್ ಗೆರೆ ದಾಟಲ್ಲ.

8. ಹೆಂಗಸಿಗೆ ತುಂಬಾ ಮರ್ಯಾದೆ ಕೊಡ್ತಾನೆ, ಯಾವದೇ ಕಾರಣಕ್ಕೂ ಕೈ ಮಾಡಲ್ಲ 

ನಿಜವಾದ ಗಂಡಸು ಯಾವತ್ತೂ ಹೆಣ್ಣಿನ ಮೇಲೆ ಕೈ ಮಾಡಲ್ಲ, ಅಷ್ಟೇ ಅಲ್ಲ ಯಾವದೇ ರೀತಿ ಹಿಂಸೆ ಮಾಡಲ್ಲ. ಬರಿ ಹೊಡಿಯೋದು, ಬಯ್ಯೋದು ಅಂತಲ್ಲ, ಯಾವತ್ತೂ ಹೆಣ್ಣಿನ ಮನಸನ್ನ ನೋಯಿಸೋಲ್ಲ.

ಇಂಥ ಗಂಡಸರು ಬೇಕು. ಸರೀನಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಮನಸಲ್ಲಿ ಇಲ್ಲ ಅಂತಿದ್ರೂ ಹೊರಗೆ ಹೂಂ ಅಂತಿದ್ದೀರಾ? ಇಲ್ಲ ಅನ್ನೋದು ಹೇಗೆ ಅಂತ ಕಲೀರಿ

"ಅಯ್ಯೋ ಬೇಜಾರು ಮಾಡ್ಕೊಂಡು ಬಿಟ್ರೆ"

ನಮ್ಮಲ್ಲಿ ಸುಮಾರು ಜನ ಬೇರೇವ್ರಿಗೆ ಅಂತಾನೇ ಬದುಕ್ತಾರೆ. ಎಲ್ಲರಿಗೂ ಸಮಯ ಮಾಡ್ಕೊತಾರೆ, ಎಲ್ಲರ ಬೇಡಿಕೆ ಪೂರೈಸ್ತಾರೆ, ಮಿತಿ ಮೀರಿ ತಮಗೆ ಆಗದಿದ್ರೂ ಒಪ್ಕೊಂಡ ಕೆಲಸ ಮಾಡ್ತಾರೆ, ಕಡೆಗೆ ತಮಗೆ ಅಂತ ತಮ್ಮ ಜೀವನದಲ್ಲೇ ಸ್ವಲ್ಪ ಸಮಯ ಇಲ್ದೆ ಆಗತ್ತೆ. ಇದೆಲ್ಲದಕ್ಕೂ ಕಾರಣ ’ಇಲ್ಲ’ ಅನ್ನೋಕ್ಕೆ ಹಿಂಜರಿಕೆ.

ನೀವೂ ಹೀಗೇ ಮಾಡ್ತೀರಾ? ಹಾಗಾದ್ರೆ ನೀವು ನಿಮ್ಮ ಜೀವನದಲ್ಲಿ ನಿಜವಾಗಿ ಮಾಡಬೇಕು ಅನ್ಕೊಂಡಿದ್ದೇ ಬೇರೆ, ನೀವು ಮಾಡ್ತಿರೋದೇ ಬೇರೆ ಆಗಿರತ್ತೆ. ಇಡೀ ದಿನ ಪುರಸೊತ್ತಿಲ್ಲದೇ ದುಡಿದ್ರೂ ನಿಮ್ಮಲ್ಲಿ ತೃಪ್ತಿ ಕಮ್ಮಿ ಆಯಾಸ ಜಾಸ್ತಿ ಕಾಣ್ಸತ್ತೆ. ಇದಕ್ಕೆ ಪರಿಹಾರ ಏನಂದ್ರೆ, ’ಇಲ್ಲ’, ’ಆಗಲ್ಲ’ ಅಂತ ಹೇಳೋ ಅಭ್ಯಾಸ ಮಾಡ್ಕೊಳೋದು. ಆಗ ಬೇರೇವ್ರ ಕೆಲಸ ಮಾಡೋದು ಕಮ್ಮಿ ಆಗಿ ನಮಗೆ ಬೇಕಾದ ಕೆಲಸ ಮಾಡೋಕ್ಕೆ ಸಮಯ ಸಿಗತ್ತೆ. ತುಂಬಾ ಕೆಲಸಗಳನ್ನ ಮಾಡೋ ಬದಲು ಮುಖ್ಯವಾದ ಕೆಲಸಗಳನ್ನ ಖುಷಿಯಿಂದ ಮಾಡಬಹುದು. ಹೀಗೆ ಮಾಡೋದ್ರಿಂದ ನೀವೂ ಖುಷಿಯಾಗಿರ್ತೀರಿ, ಯಾರಿಗೂ ನಿಮ್ಮಿಂದ ನಿರಾಸೆ ಕೂಡ ಆಗಲ್ಲ.

ಯಶಸ್ವಿಯಾದೋರು ’ಇಲ್ಲ’ ಅನ್ನೋಕ್ಕೆ ಭಯ ಪಡಲ್ಲ

’ಇಲ್ಲ’ ಅನ್ನೋದ್ರಿಂದ ನಿಮ್ಮ ದೃಷ್ಟಿಕೋನ ಬದಲಾಗತ್ತೆ. ಏನು ಮಾಡ್ಬೋದು ಅನ್ನೋಕ್ಕಿಂತ ಏನು ಮಾಡಬೇಕು ಅಂತ ಯೋಚಿಸ್ತೀರಿ. ಜೀವನ ಬಂದ ಹಾಗೆ ತೊಗೊಳೋ ಬದಲು, ನಿಮಗೆ ಬೇಕಾದ ಜೀವನ ರೂಪಿಸ್ಕೊಳೋ ಕಡೆ ಗಮನ ಹರಿಸ್ತೀರಿ. ಓಪ್ರಾ ವಿನ್ಫ್ರೀ ಅವರೂ ಸಹ ಹೂಂ ಅಂದೂ ಅಂದೂ ಅನುಭವಿಸಿ, ಬಹಳ ತಡವಾಗಿ ತಮಗೇನು ಬೇಕು ಅನ್ನೋ ಕಡೆ ಗಮನ ಹರಿಸಿದ್ದಂತೆ. ವಾರೆನ್ ಬುಫೆ ಪ್ರಕಾರ ಯಶಸ್ವಿ ವ್ಯಕ್ತಿಗಳು ಹೂಂ ಅನ್ನೋಕ್ಕಿಂತ ಇಲ್ಲ ಅನ್ನೋದೇ ಹೆಚ್ಚಂತೆ.

ಯಾಕೆ ಹೂಂ ಅನ್ನೋ ಒತ್ತಡ?

i.kinja-img.com

ಚಿಕ್ಕಂದಿನಿಂದ ಸ್ಕೂಲ್ ಮುಗಿಸೋಕ್ಕೆ, ಕಾಲೇಜ್ ಅಲ್ಲಿ ಪಾಸಾಗೋಕ್ಕೆ, ಕೆಲಸ ಪಡೆಯೋಕ್ಕೆ, ಪ್ರೋಮೋಶನ್ ಪಡೆಯೋಕ್ಕೆ, ಸಂಬಂಧ ಬೆಳೆಸೋಕ್ಕೆ, ಸ್ನೇಹಿತರನ್ನ ಉಳಿಸಿಕೊಳ್ಳೋಕ್ಕೆ ಹೀಗೆ ಎಲ್ಲದಕ್ಕು ಹೂಂ ಅಂತ ಹೇಳ್ತಾನೇ ಬಂದಿದೀವಿ. ನಮ್ಮನ್ನ ಬೆಳ್ಸಿರೋದು ಹಾಗೇನೆ. ಬೇರೇವ್ರಿಗೆ ಸಹಾಯ ಮಾಡಬೇಕು, ಇಲ್ಲ ಅನ್ನೋದು ತಪ್ಪು, ಕೈಲಾಗೋದಕ್ಕಿಂತ ಜಾಸ್ತಿ ಮಾಡಿದ್ರೆ ಯಶಸ್ಸು ಸಿಗತ್ತೆ, ದೊಡ್ದವರಿಗೆ ಇಲ್ಲ ಅನ್ಬಾರ್ದು, ಇಂಥ ಮಾತುಗಳನ್ನೇ ಪಾಲಿಸ್ತಾ ಇದ್ದೀವಿ. ಬೇರೇವ್ರ ಮಾತು ಅಷ್ಟೇ ಅಲ್ಲ, ನಮ್ಮ ಮೇಲೆ ನಾವೇ ಒತ್ತಡ ಹೇರಿಕೊಳ್ತೀವಿ ಕೂಡ. ಬೇರೇವ್ರಿಗಿಂತ ಜಾಸ್ತಿ ಕೆಲಸ ಮಾಡಬೇಕು ಅನ್ನೋ ತುಡಿತ, ಎಲ್ಲರಿಗೂ ಸಾಕಷ್ಟು ಸಮಯ ಕೊಡಬೇಕು ಅನ್ನೋ ಆಸೆ ನಮ್ಮ ಬಾಯಿಗೆ ಬೀಗ ಹಾಕತ್ತೆ. ಒಟ್ನಲ್ಲಿ ಎಷ್ಟೇ ಮಾಡಿದ್ರೂ ಇನ್ನೂ ಮಾಡಬಹುದಿತ್ತು ಅಂತಾನೇ ಅನ್ಸತ್ತೆ.

'ಇಲ್ಲ' ಅನ್ನೋದು ಹೇಗೆ?

’ಇಲ್ಲ’ ಅನ್ನೋದು ಅಷ್ಟು ಸುಲಭ ಅಲ್ಲ. ಆದರೆ ಅದರಿಂದ ಆಗೋ ಲಾಭಗಳು ಬಹಳಷ್ಟು. ’ಇಲ್ಲ’ ಅನ್ನೋದು ರೂಢಿ ಮಾಡ್ಕೊಳೋಕ್ಕೆ ಈ ಸಲಹೆಗಳನ್ನ ಪಾಲಿಸಿ:

1. ಯಾರದ್ದೋ ಹಂಗಿಗೆ ಸಿಲುಕಿ ಹೂಂ ಅನ್ಬೇಡಿ

ಯಾರದ್ದೋ ಹಂಗಿಗೆ ಸಿಲುಕಿ, ’ಇಲ್ಲ ಅಂದ್ರೆ ಏನ್ ಅನ್ಕೊಳ್ತಾರೋ’ ಅಂತ ಹೂಂ ಅಂತಿದ್ದೀರಾ? ನಿಜವಾಗಿ ಅದು ನಿಮ್ಮ ಜವಾಬ್ದಾರಿ ಹೌದಾ ಅಲ್ವಾ ಅಂತ ಯೋಚಿಸಿ. ಅದಕ್ಕೂ ಮುಖ್ಯವಾದ, ನಿಮಗೆ ಸಂಬಂಧ ಪಟ್ಟ ಜವಾಬ್ದಾರಿಗಳು ಇದ್ಯಾ ಅಂತ ಯೋಚನೆ ಮಾಡಿ.

2. ವಿಷಯಗಳನ್ನ ತಿಳ್ಕೊಳೋ ಅವಕಾಶ ತಪ್ಪಿ ಹೋಗತ್ತೆ ಅನ್ನೋ ಭಯ ಬೇಡ

ಕೆಲಸ ಮಾಡಿಲ್ಲ ಅಂದ್ರೆ ವಿಷಯಗಳು ತಿಳಿಯಲ್ಲ, ಏಳಿಗೆ ಆಗಲ್ಲ ಅನ್ನೋ ಭಯ. ಕುಟುಂಬ, ಸ್ನೇಹಿತರಿಗೆ ಸಮಯ ಕೊಡದೆ ಇದ್ರೆ ಅವರ ಜೊತೆ ಮಜಾ ಮಾಡೋಕ್ಕಾಗಲ್ಲ ಅನ್ನೋ ಕೊರಗು ನಿಮ್ಮಲ್ಲಿದ್ರೆ ’ಇಲ್ಲ’ ಅನ್ನೋದು ಕಷ್ಟಾನೇ. ನಾವು ಮನಸ್ಸಿಂದ ಹೂಂ ಅಂತಿದೀವಾ ಅಥವಾ ಈ ಭಯದಿಂದಾನಾ ಅಂತ ಯೋಚನೆ ಮಾಡೋದು ಮುಖ್ಯ. ಇಂಥ ಭಯಗಳಿಂದ ಒಳ್ಳೇದೇನೂ ಆಗಲ್ಲ.

3. ಏನ್ ಅನ್ಕೊಳ್ತಾರೋ ಅನ್ನೋ ಅಳುಕು ಬೇಡ

’ಇಲ್ಲ’ ಅಂದ್ರೆ ಏನ್ ಅನ್ಕೊಳ್ತಾರೋ, ಎಷ್ಟು ಬೇಜಾರು ಮಾಡ್ಕೊಳ್ತಾರೋ ಅಂತ ಹೂಂ ಅನ್ನಬೇಡಿ. ಯಾರಿಗೋ ನಿರಾಸೆ ಆಗಬಾರದು ಅಂತೆ ನೀವೇ ನಿರಾಶರಾಗೋದು ಸರಿಯೇ? ’ಇಲ್ಲ’ ಅಂದ್ರೆ ನಿಮಗೆ ಅಷ್ಟು ಸಮಯ ಕೊಡೋಕ್ಕಾಗಲ್ಲ ಅನ್ಕೊತಾರೆ ಅಷ್ಟೆ.

4. ಕೇಳಿದ ತಕ್ಷಣ ಹೂಂ ಅನ್ಬೇಡಿ

sarumbear.com
ಆ ಸಮಯದಲ್ಲಿ ಸರಿ ಅನ್ಸಿ ಅಥವಾ ಒತ್ತಡದಲ್ಲಿ ಹೂಂ ಅನ್ನೋದರ ಬದಲು ಸ್ವಲ್ಪ ಯೋಚನೆ ಮಾಡಿ. ನಿಮ್ಮ ಕೈಯಲ್ಲಿ ಈ ಕೆಲಸ ಆಗತ್ತಾ? ಅದಕ್ಕೆ ಸಾಕಷ್ಟು ಸಮಯ ಇದ್ಯಾ? ಎಲ್ಲಾ ಯೋಚನೆ ಮಾಡಿ ಆಮೇಲೆ ನಿಮ್ಮ ಉತ್ತರ ಹೇಳಿ.

5. ’ಇಲ್ಲ’ ಅಂತ ವಿನಯದಿಂದ ಹೇಳಿ

’ಇಲ್ಲ’ ಅಂತ ಹೇಳೋ ನಿರ್ಧಾರ ಮಾಡಿದ್ರೆ ಅದನ್ನ ಹೇಗೆ ಹೇಳೋದು ಅಂತ ಕೂಡ ಸರಿಯಾಗಿ ಯೋಚಿಸಿ. ನಿಮ್ಮ ಬಳಿ ಸಮಯ ಇಲ್ಲ, ಅದಕ್ಕೆ ನೀವು ನಿರಾಕರಿಸ್ತಿದೀರ ಅನ್ನೋದು ಆ ವ್ಯಕ್ತಿಗೆ ಸ್ಪಷ್ಟವಾಗಿ ಅರ್ಥ ಆಗಬೇಕು. ಏನೂ ಹೇಳದೇ ಸುಮ್ಮನೆ ಇರೋದು ತಪ್ಪು. ಹಾಗಂತ ತುಂಬಾ ಉದ್ದ ಕಾರಣಗಳನ್ನ ಕೊಡೋದೂ ತಪ್ಪು. ಚಿಕ್ಕದಾಗಿ, ಚೊಕ್ಕವಾಗಿ ವಿನಯದಿಂದ ಮಾತಾಡಿ. ಮತ್ತೊಮ್ಮೆ ಸಮಯ ಇದ್ದಾಗ ಅವರ ಕೆಲಸ ಮಾಡೋಕ್ಕೆ ಸಿದ್ಧ ಅನ್ನಿ. ಆಗ ಮುಂಬರೋ ಅವಕಾಶಗಳು ತಪ್ಪಿ ಹೋಗಲ್ಲ.

6. ’ಇಲ್ಲ’ ಅನ್ನೋ ಬದಲು ’ಆದರೆ’ ಅಂತ ಹೇಳಿ ನೋಡಿ

hrinasia.com
ಒಂದೇ ಸಲ ’ಇಲ್ಲ’ ಅನ್ನೋ ಬದಲು. ’ಸರಿ, ಆದರೆ..’ ಅಂತ ನಿಮ್ಮ ಬೇಡಿಕೆ ಅವರ ಮುಂದೆ ಇಡಿ. “ಈಗಲೇ ಆಗಲ್ಲ ಆದರೆ ಮುಂದೆ ಮಾಡ್ತೀನಿ” ಅಂತ ಅಥವಾ “ಮಾಡ್ತೀನಿ, ಆದರೆ ಒಂದು ಭಾಗ ಮಾತ್ರ ಸಾಧ್ಯ” ಅಂತ ಹೇಳಿ.

’ಇಲ್ಲ’ ಅನ್ನೋದು ಒಂದು ಕಲೆ

’ಇಲ್ಲ’ ಅನ್ನೋ ಕಲೆ ಆರಾಮ ಅಥವಾ ಸುಲಭ ಅಲ್ಲ. ಅದನ್ನ ರೂಢಿ ಮಾಡ್ಕೊಳ್ಳೋಕ್ಕೆ ಸಮಯ ಮತ್ತು ಸಮಾಧಾನ ಬೇಕು. ಎಲ್ಲಾದಕ್ಕೂ ಹೂಂ ಅನ್ನೋ ಅಭ್ಯಾಸದೋರಿಗೆ ಇದು ಕಷ್ಟ.

ನಿಮ್ಮ ಸಮಯ ನಿಮ್ಮ ಸ್ವತ್ತು

ablueribbonresume.com
ನಿಮಗಿರೋ ಸಮಯದಲ್ಲಿ ಏನೇನು ಕೆಲಸ ಮಾಡಬೇಕು, ಯಾವ್ದಕ್ಕೆ ಎಷ್ಟು ಸಮಯ ಕೊಡ್ಬೇಕು ಎಲ್ಲ ನಿಮಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿರಲ್ಲ.

ಬೇಡದ್ದಕ್ಕೆ ಇಲ್ಲ ಅಂದ್ರೆ ಬೇಕಾದ್ದು ಮಾಡಕ್ಕೆ ಸಮಯ ಸಿಗತ್ತೆ

ನಿಮ್ಮ ಅಮೂಲ್ಯವಾದ ಸಮಯವನ್ನ ಸರಿಯಾಗಿ ಬಳಸೋ ಅವಕಾಶ ನಿಮಗೆ ನೀವು ಕೊಟ್ಕೊಳಿ. ಇಲ್ಲ ಅನ್ನಿಸ್ದಾಗ ’ಇಲ್ಲ’ ಅನ್ನೋದ್ರಿಂದ ಅದು ಸಾಧ್ಯ.

ನಿಮ್ಮ ಒಳ್ಳೆಯತನ ದುರುಪಯೋಗ ಪಡೆಸ್ಕೊಳೋ ಸ್ನೇಹಿತರಿಗೆ, ಮಿತಿ ಮೀರಿ ಕೆಲಸ ಕೊಡೋ ಬಾಸ್, ಸಾಲ ವಾಪಸ್ ಮಾಡದೇ ಇರೋ ಸಂಬಂಧಿಗೆ ಈ ಸಲ ಇಲ್ಲ ಅನ್ನೋದನ್ನ ಮರೀಬೇಡಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: