ನಮ್ಮ ದೇಶದಲ್ಲಿ ಬಳಸೋ 6 ರೀತಿಯ ನಂಬರ್ ಪ್ಲೇಟುಗಳ ಹಿಂದಿನ ರಹಸ್ಯ ತಿಳ್ಕೊಂಡು ಆಶ್ಚರ್ಯ ಪಡ್ತೀರಿ

ಇಷ್ಟ ಬಂದಂಗೆ ಹಾಕ್ಕೊಳಕ್ಕಾಗಲ್ಲ

ಎಲ್ಲಾ ತರದ ಮೋಟಾರು ವಾಹನಗಳಿಗೂ ನಂಬರ್ ಪ್ಲೇಟ್ ಇರ್ಲೇ ಬೇಕು. ಇದನ್ನ ವೆಹಿಕಲ್ ರಿಜಿಸ್ಟ್ರೇಷನ್ ನಂಬರ್ ಅಂತಾನೂ ಹೇಳ್ತಾರೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಇರೋ RTO ಆಫೀಸಲ್ಲಿ ಈ ನಂಬರ್ ಕೊಡ್ತಾರೆ. ಭಾರತದಲ್ಲಿ ಈ ಕೆಳ್ಗಿರೋ 6 ತರದ ನಂಬರ್ ಪ್ಲೇಟ್ ನೋಡ್ಬೋದು.

1. ಹಳದಿ ಅಕ್ಷರಗಳಿರೋ ಕಪ್ಪು ಬಣ್ಣದ ಪ್ಲೇಟ್ 

ಈ ರೀತಿ ನಂಬರ್ ಪ್ಲೇಟ್ ಸಾಮಾನ್ಯವಾಗಿ ಕಾರಲ್ಲಿ ನೋಡೀರ್ತ್ತೀರಿ. ಇವುಗಳನ್ನ ಬಾಡಿಗೆಗೆ ತೊಗೊಂಡು ನೀವೇ ಡ್ರೈವ್ ಮಾಡ್ಕೊಂಡು ಹೋಗ್ಬೇಕು. ಅಂತಾ ವಾಹನಗಳು ಮಾತ್ರ ಈ ಬೋರ್ಡ್ ಹಾಕ್ಕೋಬಹುದು. ಝೂಮ್ ಕಾರ್, ಮೈಲ್ಸ್ ಕಾರ್, ಜಸ್ಟ್ ರೈಡ್ ಇನ್ನೂ ಮುಂತಾದ ಕಂಪನಿಗಳು ಈ ತರ ಬ್ಯ್ಸಿನೆಸ್ ಶುರು ಮಾಡಿವೆ.

2. ಹಳದಿ ಬಣ್ಣದ ನಂಬರ್ ಪ್ಲೇಟ್

ಬಾಡಿಗೆಗೆ ಓಡಿಸೋ, ವ್ಯಾಪಾರಕ್ಕೆ ಬಳಸೋ ಯಾವುದೇ ವಾಹನಗಳನ್ನ ನೋಡಿದ್ರೂ ನಿಮಗೆ ಈ ನಂಬರ್ ಪ್ಲೇಟ್ ಕಾಣ್ಸುತ್ತೆ. ಹಳದಿ ಪ್ಲೇಟ್ ಮೇಲೆ ಕಪ್ಪು ಅಕ್ಷರದಿಂದ ಬರ್ದಿರ್ತಾರೆ. ಆಟೋ, ಟ್ಯಾಕ್ಸಿ, ಕ್ಯಾಬ್, ಲಾರಿಗಳ ಮೇಲೆ ಇದನ್ನ ಸಾಮಾನ್ಯವಾಗಿ ಗಮನಿಸಿರ್ತೀರ.

3. ಬಿಳಿ ಬಣ್ಣದ ನಂಬರ್ ಪ್ಲೇಟ್

ಯಾರು ವಾಹನಗಳನ್ನ ಸ್ವಂತ ಉಪಯೋಗಕ್ಕಾಗಿ ಬಳಸ್ತಾರೋ ಅವ್ರು ಈ ನಂಬರ್ ಪ್ಲೇಟ್ ಹಾಕ್ಕೋಬೇಕು.

4. ಕೆಂಪು ಬಣ್ಣದ ನಂಬರ್ ಪ್ಲೇಟ್

ಹೊಸ ವಾಹನಗಳನ್ನ ಮಾರ್ಕೆಟ್ಗೆ ಬಿಡೋವಾಗ ಟೆಸ್ಟ್ ಡ್ರೈವ್ ಮಾಡಕ್ಕೆ ಅಂತ ಉಪಯೋಗಿಸೋ ವಾಹನಗಳಿಗೆ ಈ ಕೆಂಪು ನಂಬರ್ ಪ್ಲೇಟ್ ಮೇಲೆ ಬಿಳಿ ಅಕ್ಷರದಲ್ಲಿ ಬರ್ದಿರೋ ಬೋರ್ಡ್ ಹಾಕ್ಕೊಳೋ ಅವಕಾಶ ಇದೆ.

5. ಮೇಲಕ್ಕೆ ಹೋಗ್ತಿರೋ ಬಾಣದ ಗುರ್ತಿರೋ ನಂಬರ್ ಪ್ಲೇಟ್

ಭಾರತೀಯ ಸೇನೆ/ ಮಿಲಿಟರಿಗೆ ಸಂಭಂದಪಟ್ಟ ವಾಹನಗಳು ಮಾತ್ರ ಈ ತರದ ನಂಬರ್ ಪ್ಲೇಟ್ ಹಾಕ್ಕೊಂಡಿರುತ್ವೆ. ಮಿಲಿಟರಿಗೆ ಸೇರಿದ ಎಲ್ಲಾ ವಾಹನಗಳೂ ದೆಹಲಿಯಲ್ಲೇ ರಿಜಿಸ್ಟರ್ ಆಗೋದು. ಸಾಮಾನ್ಯವಾಗಿ ಮಿಲಿಟರಿ ಎಲ್ಲಾ ವಾಹನಗಳಲ್ಲೂ ಕಪ್ಪು ಪ್ಲೇಟ್ ಮೇಲೆ ಬಿಳಿ ಅಕ್ಷರ ಇರುತ್ತೆ. ಸಾಮಾನ್ಯವಾಗಿ 1 ಅಥವಾ 3 ನೇ ಅಕ್ಷರ ಮೇಲ್ಮುಖವಾಗಿ ಹೋಗ್ತಿರೋ ಬಾಣ ಆಗಿರುತ್ತೆ. 

6. ನೀಲಿ ಬಣ್ಣದ ನಂಬರ್ ಪ್ಲೇಟ್ 

ನೀಲಿ ಬಣ್ಣದ ಪ್ಲೇಟ್ ಮೇಲೆ ಬಿಳಿ ಅಕ್ಷರ ಇರೋ ಬೋರ್ಡ್ನ ವಿದೇಶಿ ಮಷೀನ್ ಇರೋ ವಾಹನಗಳು ಹಾಕ್ಕೋಬಹುದು. ಇವುಗಳಲ್ಲಿ UN , CC , CD ಈ ತರದ ವಿಶೇಷ ಕೋಡ್ ಇರುತ್ತೆ. (UN - ಯುನೈಟೆಡ್ ನೇಶನ್ , CC -ಕಾನ್ಸುಲಾರ್ ಕಾರ್ಪ್ಸ್  ಹೀಗೆ).

ನಮ ಹತ್ರ ವೆಹಿಕಲ್ ಇದೆ ಅಂತ ನಮಗಿಷ್ಟವಾದ ಬಣ್ಣದ ನಂಬರ್ ಪ್ಲೇಟ್ ಹಾಕ್ಕೊಳಕ್ಕಾಗಲ್ಲ. ಯಾರ್ಯಾರು ಯಾವತರದ್ದು ಹಾಕ್ಕೋಬೇಕು ಅಂತ ಈಗ ಗೊತ್ತಾಯ್ತಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಲೈಫಲ್ಲಿ ಉದ್ಧಾರ ಆಗಬೇಕಾದ್ರೆ ಈ 10 ಕುಂಟು ನೆಪಗಳ್ನ ಇವತ್ತೇ ಅಲ್ಲ ಈಗಲೇ ಬಿಟ್ಟುಬಿಡಿ

ಆಗದು ಎಂದು ಕೈಕಟ್ಟಿ ಕುಳಿತರೆ...

ನೆಪ

ಕೆಲ್ವೊಂದ್ ಸಲ ಏನಾದ್ರೂ ಕೆಲ್ಸ ಮಾಡಕ್ಕಾಗ್ದೇ ಹೋದ್ರೆ ಯಾಕ್ ಮಾಡಕ್ಕಾಗ್ಲಿಲ್ಲ ಅಂತ ನೆಪ ಹೇಳ್ತಿರ್ತೀವಿ. ಅದ್ರಲ್ಲಿ ಕೆಲವು ನಿಜವಾದ ಕಾರಣಗಳೇ ಆಗಿದ್ರೂ ತುಂಬಾ ಸಲ ನಾವ್ ಹೇಳೋದು ಕುಂಟು ನೆಪಗಳೇ... ದೊಡ್ಡ ಸಾಧನೆ ಮಾಡ್ತಿನಿ ಅನ್ನೋರು ಈ ಥರ ನೆಪ ಹೇಳ್ಕೊಂಡು ಕೂತ್ರೆ ಆಗಲ್ಲ. ಇಲ್ನೋಡೀ ಕೆಲವು ನೆಪಗಳು ಇಲ್ಲಿವೆ... 

1. "ನನ್ ಕೈಲಾಗಲ್ಲ"

ಕೆಲ್ವೊಂದ್ ಸಲ ಸರಿಯಾದ ಪ್ರಯತ್ನ ಮಾಡ್ದೇನೆ "ಇದಾಗಲ್ಲ... ಅದಾಗಲ್ಲ..." ಅಂತ ಮಾತಾಡ್ತೀವಿ. ಈ ಥರ ಮಾಡೋದ್ರಿಂದ ಹಿಂದೆಂದೂ ಯಾರೂ ಮಾಡಿಲ್ದೇ ಇರೋ ಸಾಧನೇನ ನಾವು ಮಾಡೋ ಅವಕಾಶಾನ ನಾವ್ ಕಳ್ಕೋತೀವಿ.

2. "ನಾನ್ ಜಾಸ್ತಿ ಓದಿಲ್ಲ, ಅದಕ್ಕೇ ನಂಗೆ ಬೆಲೆ ಇಲ್ಲ..."

ಓದು ಜೀವನಕ್ಕೆ ತುಂಬಾ ಮುಖ್ಯ, ನಿಜ. ಆದ್ರೆ ಹೆಚ್ಚಿಗೆ ಅದಿಲ್ದೇ ಹೋದ್ರೆ ಏನೂ ಸಾದ್ಸಕ್ಕಾಗಲ್ಲ ಅನ್ನೋದು ಸುಳ್ಳು. ಸಮಾಜದಲ್ಲಿ ಹೆಚ್ಚಿಗೆ ಓದಿಲ್ಲದವರೂ ಸಾದ್ಸೋ ಅಂತಾದ್ದು ಬೇಕಾದಷ್ಟಿದೆ. ಹಾಗ್ ನೋಡಿದ್ರೆ ಹೆಚ್ಚಾಗಿ ಓದ್ದೇ ಇರೋರೇ ದೊಡ್ ದೊಡ್ ಸಾಧನೆಗಳನ್ನ ಮಾಡಿರೋ ಉದಾಹರಣೆಗಳು ಬೇಕಾದಷ್ಟಿವೆ. 

3. "ನಾನೇನಕ್ಕೂ ಪ್ರಯೋಜನ ಇಲ್ಲ..."

ತುಂಬಾ ಜನ್ರು ಈಥರ ಔರೌರಿಗೇ ಏನೋ ಹೇಳ್ಕೊಂಡು ಏನೂ ಮಾಡಲ್ಲ. ಇನ್ ಕೆಲುವ್ರು ಅಂಗವಿಕಲತೇನೋ ಇನ್ಯಾವ್ದೇ ಸಮಸ್ಯೆಗೋ ಸಿಕ್ಕಿ ಈ ಥರ ಮನಸ್ಸು ಮಾಡ್ಕೊಂಡಿರ್ಬೋದು. ಆದ್ರೆ ಒಂದ್ ವಿಷ್ಯ ನೆನಪಿಟ್ಕೊಳಿ. ಹುಟ್ತಾನೇ ಯಾರೂ ಯಾವುದ್ರಲ್ಲೂ ಪಂಟ್ರಾಗಿರಲ್ಲ. ಕೆಲ್ಸ ಮಾಡ್ತಾ ಮಾಡ್ತಾ ಎಲ್ರೂ ಕಲೀತಿವಿ, ಹಾಗೇ ಬೆಳೀತೀವಿ. ನೀಮ್ಮನ್ನ ಜಗತ್ತು ಕೈಲಾಗದೋರು ಅಂದ್ಕೊಂಡಷ್ಟೂ ನಿಮ್ಗೇ ಒಳ್ಳೇದು. ಯಾಕಂದ್ರೆ ನಿಮ್ಮಿಂದ ಅವರ ನಿರೀಕ್ಷೆ ಕಮ್ಮೀನೇ ಇರುತ್ತೆ. ಆಗ ನೀವಿಡೋ ಚಿಕ್ಕ ಚಿಕ್ಕ ಹೆಜ್ಜೇನೂ ಜಗತ್ತಿನ ಪಾಲಿಗೆ ದೊಡ್ಡದೇ ಆಗಿರುತ್ತೆ.

4."ನನ್ನತ್ರ ದುಡ್ಡಿಲ್ಲ.. ಅದಕ್ಕೇ ಏನೂ ಮಾಡಕ್ಕಾಗ್ತಿಲ್ಲ..."

ಸಮಾಜದಲ್ಲಿ ತುಂಬಾ ಜನ ದುಡ್ಡಿಲ್ದೇ ಇರೋರು ಇದಾರೆ. ಆದ್ರೆ ಎಲ್ಲಾರೂ ಹೀಗೇ ಹೇಳ್ಕೊಂಡು ಕೂತಿರಕ್ಕಾಗಲ್ಲ. ಏನಾದ್ರೂ ಸಣ್ಣಾಪುಟ್ಟ ಕೆಲ್ಸ ಮಾಡ್ಕೊಂಡು ನಿಮ್ ಸಾಧನೆಗೆ ಬೇಕಾದ್ ದುಡ್ಡನ್ನ ಕೂಡಿಡಿ, ಎಷ್ಟೊರ್ಷ್ ಹೀಗೆ ನೆಪ ಹೇಳ್ತಿರೀರಿ?

5. "ನೋಡ್ದೋರ್ ಏನನ್ಕೋತಾರೋ...!?"

ನೀವೇನಾದ್ರೂ ದೊಡ್ಡ ಸಾಧನೆ ಮಾಡ್ಬೇಕು ಅಂತಿದ್ರೆ, ಅವ್ರಿವ್ರು ಏನನ್ಕೋತಾರೋ ಅನ್ನೋದನ್ನ ತಲೆಯಿಂದ ಮೊದ್ಲು ತೆಗೆದಾಕಿ. ಯಾರೂ ಏನೂ ಅನ್ಕೊಳಲ್ಲ. ಅದನ್ನೇ ನೆಪ ಮಾಡ್ಕೊಬೇಡಿ. ಅದೂ ಅಲ್ದೇ ನಿಮ್ ಲೈಫಲ್ಲಿ ಏನ್ ನಡೀತಿದೆ ಅಂತ ನೋಡ್ಕೊಂಡು ಕೂತ್ಕೊಳೋವಷ್ಟು ಟೈಮು ಯಾರ್ಗೂ ಇರಲ್ಲ. ಎಲ್ಲಾರೂ ಔರೌರ್ ಕೆಲಸ್ದಲ್ಲಿ ಬಿಜಿ ಇರ್ತಾರೆ. ಇಷ್ಟಕ್ಕೂ ಯಾರಾದ್ರೂ ಏನಾದ್ರೂ ಅನ್ಕೋತಿದ್ರೆ ಅದು ಸೊಲ್ಪ ದಿನ ಮಾತ್ರ. ನೀವು ದೊಡ್ಡದೇನಾದ್ರೂ ಸಾಧಿಸ್ದಾಗ ಎಲ್ಲಾ ಮರ್ತೋಗತ್ತೆ.

6."ನನ್ ಹಣೇಬರ ಸರಿಯಿಲ್ಲ..."

ನಿಮ್ಮ ತಯಾರಿ ಮತ್ತು ಅವಕಾಶ ಎರಡೂ ಸೇರಿ ಅದೃಷ್ಟ ಅನ್ನುಸ್ಕೊಳೋದು. ನಿಮ್ಮ ತಯಾರಿ ನೀವ್ ಬಿಡ್ದೇ ಮಾಡ್ಕೊಳಿ. ಅವಕಾಶ ಹುಡುಕ್ತಾ ಇರಿ. ಅವೆರಡೂ ಸೇರ್ತಿದ್ದಂಗೆ ನಿಮ್ ಹಣೆಬರಹ ಸರಿಹೋಗುತ್ತೆ. ಲಕ್ಕಿದ್ರೆ ಎಲ್ಲಾ ಆಗೋಗುತ್ತೆ ಅನ್ನಕ್ಕೆ ಯಶಸ್ಸು ಅನ್ನೊದು ಜೂಜಾಟ ಅಲ್ಲ. ಅದನ್ನ ಬೆವರು ಸುರಿಸಿ ಪಡ್ಕೋಬೇಕು, ಆಗ್ಲೇ ಅದು ಸಾಧನೆ ಅನ್ನಿಸ್ಕೊಳ್ಳೋದು.

7. "ನಾನಿರೋದೇ ಹೀಗೆ, ನನ್ನ ನ್ನಾನು ಬದಲಾಯಿಸ್ಕೊಳಕ್ಕಾಗಲ್ಲ..."

ಯಾಕಾಗಲ್ಲ? ಬದಲಾವಣೆ ಅನ್ನೊದು ಎಲ್ಲಾ ಕಡೆ ಎಲ್ಲಾರಲ್ಲೂ ಆಗ್ತಾನೇ ಇರುತ್ತೆ. ಕಾಲಕ್ಕೆ ತಕ್ಕಂತೆ ಬದಲಾಗದೇ ಇರೋರಿಗೆ ಜಗತ್ತಲ್ಲಿ ಜಾಗ ಇಲ್ಲ - ನೆನಪಿರ್ಲಿ.

8. "ಮನೇಲಿ ಮದ್ವೆ ಮಾಡ್ಕೋ ಅಂತಿದ್ದಾರೆ, ಮದ್ವೆ ಆದ್ರೆ ಸಾಧನೆ ಮಾಡಕ್ ಆಗಲ್ಲ..."

ಲೈಫಲ್ಲಿ ಬರೋ ಎಷ್ಟೋ ಮೈಲಿಗಲ್ಲುಗಳ ಥರ ಮದುವೆನೂ ಒಂದು. ನೀವು ದೊಡ್ಡ ಸಾಧನೆ ಏನಾದ್ರು ಮಾಡ್ಬೇಕು ಅಂತಿದ್ರೆ, ನೀವು ಮದುವೆ ಆಗ್ತಿರೋ ಹುಡುಗ/ಹುಡುಗಿ ಜೊತೆ ಅದರ ಬಗ್ಗೆ ಚರ್ಚೆ ಮಾಡಿ ಔರ ಸಪೋರ್ಟ್ ತಗೊಳ್ಳಿ. ನಿಮಗೆ ನಿಮ್ಮ ಸಾಧನೆ ಎಷ್ಟು ಮುಖ್ಯ ಅನ್ನೋದನ್ನ ಹೇಳಿ. ಅವರ ಬೆಂಬಲಾನೂ ನಿಮಿಗ್ ಸಿಗುತ್ತೆ. ಅದನ್ ಬಿಟ್ಟು ಮದುವೆ ಆಗ್ತಿರೋದ್ರಿಂದ ಅದಾಗಲ್ಲ ಇದಾಗಲ್ಲ ಅನ್ನೋ ನೆಪ ಬೇಡ.

9. "ನಂಗ್ ವಯಸ್ಸಾಯ್ತು, ಇನ್ನೇನ್ ಸಾಧನೆ ಮಾಡ್ಲಿ?"

ನಿಮಿಗ್ ಗೊತ್ತಾ ಕರ್ನಲ್ ಸ್ಯಾಂಡರ್ಸ್ ಅನ್ನೋನು ಔನ್ಗೆ 62 ವರ್ಷ ಆಗಿದ್ದಾಗ  KFC ಅನ್ನೋ ಬ್ರಾಂಡನ್ನ ಶುರು ಮಾಡಿದ್ದು. ನೀವನ್ಕೊಂಡಿದ್ದನ್ನ ಸಾದ್ಸಕ್ಕೆ ಯಾವ್ದೇ ವಯಸ್ಸಿಲ್ಲ. ಮುಂದಕ್ ಓದ್ಬೇಕನ್ಸಿದ್ರೆ ಓದಿ, ಬಿಸಿನೆಸ್ ಶುರು ಮಾಡ್ಬೇಕನ್ಸಿದ್ರೆ ಮಾಡಿ, ಎಷ್ಟೇ ವಯಸ್ಸಾಗಿದ್ರೂ ತಲೆ ಕೆಡಿಸ್ಕೋಬೇಡಿ. 

10. "ಸಿಕ್ಕಾಪಟ್ಟೆ ಬಿಜಿ.. ಟೈಮಿಲ್ಲ..."

ಲೈಫಲ್ಲಿ ನಮಗೆ ನಿಜವಾಗ್ಲೂ ಯಾವುದು ಮುಖ್ಯ ಅನ್ನೊದರ ಪಟ್ಟಿ ಬರ್ಕೊಂಡು ನಮಗೆ ಮುಖ್ಯ ಯಾವ್ದೋ ಅದಕ್ ಮಾತ್ರ ಟೈಂ ಕೊಟ್ರೆ ಎಲ್ಲಾದಕ್ಕೂ ಟೈಂ ಇರುತ್ತೆ. ನಿಮಗೆ ನಿಮ್ಮ ಸಾಧನೆನೇ ಎಲ್ಲದಕ್ಕಿಂತ ಮುಖ್ಯ ಅನ್ನಿಸ್ದಾಗ ಅದಕ್ಕೆ ಟೈಂ ಇದ್ದೇ ಇರುತ್ತೆ. ಟೈಂ ಇಲ್ಲ ಅನ್ನೋ ನೆಪ ಸಲ್ಲ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: