ಈ 9 ಐತಿಹಾಸಿಕ ಕಟ್ಟಡಗಳು ಆಗಿನ ಕಾಲದ ರಾಣಿಯರು ಕಟ್ಟಿಸಿದ್ದು ಅಂತ ಜಾಸ್ತಿ ಜನಕ್ಕೆ ಗೊತ್ತಿಲ್ಲ

ತಾವೇ ಮುಂದೆ ನಿಂತ್ಕೊಂಡು ಕಟ್ಟಿಸಿದ್ದು…

ಹೆಣ್ಣು ಅಬಲೆಯಲ್ಲ ಅನ್ನೋ ಮಾತು ಈ 21 ನೇ ಶತಮಾನದಲ್ಲಿ ಸ್ವಲ್ಪ ಜಾಸ್ತೀನೇ ನಿಜವಾಗ್ತಾ ಇದೆ. ಒಂದ್ಸಲ ನಮ್ ಇತಿಹಾಸಗಳನ್ನ ಕೆದಕ್ತಾ ಹೋದ್ರೆ ಎಲ್ಲ  ಕ್ಷೇತ್ರದಲ್ಲೂ ಗಂಡಸಿನದ್ದೇ ಕಾರ್ ಬಾರು. ಅದ್ನ ಮಾಡ್ದವ್ನು ಅವ್ನು , ಇದ್ನ ಮಾಡಿದ್ದು ಇವ್ನು ಅಂತ ಬರೇ ಗಂಡಸರ ಬಗ್ಗೇನೇ ಒದ್ತಾ ಬಂದಿದ್ದೀವಿ. ಇದೇ ಸಮಯದಲ್ಲಿ ಒಂದಿಷ್ಟು ಗಟ್ಟಿಗಿತ್ತಿಯರು ಮಾಡಿರೋ ಕೆಲ್ವೊಂದ್ ಕೆಲ್ಸಗಳು ಗಂಡಸರ ಸಾಧನೆ, ಪ್ರಚಾರದ ಮುಂದೆ ಜನ್ರಿಗೆ ಗೊತ್ತಾಗ್ಲೇ ಇಲ್ಲ. ಶಿಲ್ಪಕಲೆಯ ವಿಷ್ಯಕ್ಕೆ ಬಂದಾಗ ಅದ್ನ ಮಾಡ್ಸೋದು ಮತ್ತೆ ಮಾಡೋದು ಎರಡು ಗಂಡಸರ ಕೈಲೇ ಇದೆಯಂತ ಎಲ್ಲಾ ಜನ್ರ ನಂಬಿಕೆ. ಆದ್ರೆ ನೀವ್ ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ ಹಲವಾರು ಐತಿಹಾಸಿಕ ಸ್ಮಾರಕಗಳನ್ನ ತಾವೇ ಮುಂದೆ ನಿಂತ್ಕೊಂಡು ಕಟ್ಟಿಸಿದ ಮಹಿಳಾಮಣಿಗಳು ನಮ್ಮಲ್ಲಿದ್ದಾರೆ.

1) ಇತ್ಮಾದ್ ಉದ್ ದೌಲವನ್ನ ಕಟ್ಸಿದ್ದು ರಾಣಿ ನೂರ್ ಜಹಾನ್ 

ಮಾರ್ಬಲ್ನಿಂದ ಕಟ್ಟಿರೋ ಮೊದಲ ಭವ್ಯ ಸಮಾಧಿ ಇತ್ಮಾದ್ ಉದ್ ದೌಲ . ಇದ್ನ ಕಟ್ಟಿರೋದು ನೂರ್ ಜಹಾನ್. ಇದು ಯಮುನಾ ನದಿಯ ದಡದಲ್ಲಿದೆ. ಇದ್ನ ತನ್ನ ತಂದೆಯಾದ ಮಿರ್ಜಾ ಗಿಯಾಸ್ ಬೇಗ್ ನೆನಪಲ್ಲಿ ಕಟ್ಸಿರೋದಂತೆ. ಸುಂದರವಾಗಿರೋ ಈ ಸಮಾಧಿಯನ್ನ ಬಹಳ ಎಚ್ಚರಿಕೆಯಿಂದ ಕೆತ್ತನೆ ಮಾಡ್ಸಿದ್ದಾರೆ. ಒಂದು ಹೆಂಗಸು ಕೆಲ್ಸವೊಂದ್ ಕೈಗ್ ತಗೊಂಡ್ರೆ ಅದ್ನ ಎಷ್ಟು ಅಚ್ಚುಕಟ್ಟಾಗಿ ಮಾಡ್ತಾಳೆ ಅನ್ನೋದಕ್ಕೆ ಈ ಸಮಾಧಿನೇ ಸಾಕ್ಷಿ. ಈ ಸಮಾಧಿಯನ್ನ ಕಟ್ಟೋವಾಗ ಕೆಂಪು ಮತ್ತೆ ಹಳದಿ ಸ್ಯಾಂಡ್ ಸ್ಟೋನನ್ನ ಬಳ್ಸಿದ್ದಾರಂತೆ. ಇದ್ರಿಂದ ಈ ಸಮಾಧಿ ಚಿನ್ನದ ಆಭರಣದ ತರ ತೋರತ್ತೆ.  

static.panoramio.com

2) ವಿರುಪಾಕ್ಷ ದೇವಸ್ಥಾನವನ್ನ ಕಟ್ಸಿದ್ದು ರಾಣಿ ಲೋಕಮಾದೇವಿ

ವಿರುಪಾಕ್ಷ ದೇವಸ್ಥಾನ ಅಂದ್ ಕೂಡ್ಲೇ ನಮಗೆ ನೆನಪಾಗೋದು ಹಂಪಿ. ಆದ್ರೆ ಈ ವಿರುಪಾಕ್ಷ ದೇವಸ್ಥಾನ ಹಂಪಿದಲ್ಲ ಇದು ಪಟ್ಟದಕಲ್ಲಿದು. ಇದ್ನ ಲೋಕಮಾದೇವಿ ರಾಣಿ ಕಟ್ಸಿರೋದು. ತನ್ನ ಗಂಡ 2ನೇ ವಿಕ್ರಮಾದಿತ್ಯ ಪಲ್ಲವರ ಮೇಲೆ ಗೆದ್ದಾಗ ಅದ್ರ ನೆನಪಿಗೋಸ್ಕರ ಇದ್ನ ಕಟ್ಸಿರೋದಂತೆ. ಉತ್ತರಭಾರತದ ನಾಗರ ಮತ್ತೆ ದಕ್ಷಿಣ ಭಾರತದ ದ್ರಾವಿಡ ಶೈಲಿಯ ಮಿಶ್ರಣದೊಂದಿಗೆ ನೆಲೆನಿಂತಿರೋ ಈ ಭವ್ಯ ದೇವಸ್ಥಾನವನ್ನ ಲೋಕೇಶ್ವರ ದೇವಸ್ಥಾನ ಅಂತಲೂ ಕರೀತಾರೆ. 

upload.wikimedia.org

3) ಹುಮುಯಾನ್ ಸಮಾಧಿಯನ್ನ ಜಗತ್ತಿಗೆ ಕೊಟ್ಟಿರೋದು  ಹಮೀದಾ ಬಾನು ಬೇಗಂ

ದೇಶದ ಮೊದಲ ಉದ್ಯಾನವನದ ಸಮಾಧಿ ಅಂತೇನಾದ್ರು ಇದ್ರೆ ಅದು ಹುಮುಯಾನ್ ಸಮಾಧಿಯಂತೆ. ಇದ್ನ ಹುಮುಯಾನನ ಮಡದಿ ಹಮೀದಾ ಬಾನು ಬೇಗಂ ಮುಂದಾಳತ್ವದಲ್ಲಿ ಕಟ್ಸಿರೋದು. ಪರ್ಷಿಯಾ ಮತ್ತೆ ಭಾರತದ ಶಿಲ್ಪಕಲೆಯ ಮಿಶ್ರಣದಿಂದ ಕೆತ್ತಲಾಗಿರೋ ಈ ಸಮಾಧಿಯಲ್ಲಿ ಕೆಂಪು ಬಣ್ಣದ ಸ್ಯಾಂಡ್ ಸ್ಟೋನನ್ನ ಬಳ್ಸಿದ್ದಾರೆ. ಇದ್ರ ಒಳ್ಗಡೆಯಲ್ಲ ಅಚ್ಚುಕಟ್ಟಾಗಿ ಕೆತ್ತಲಾಗಿರೋ ಕಲ್ಲಿನ ಶಿಲ್ಪಗಳು , ನೋಡಿದವ್ರ ಕಣ್ಣು ಕುಕ್ಕತ್ತೆ. ಹಾಗೇ ಈ ಹುಮಯಾನನ ಸಮಾಧಿ ಎರಡು ಗುಮ್ಮಟ ಹೊಂದಿರೋ ಮೊದಲ ಸಮಾಧಿಯಂತೆ. 

thebetterindia.com

4)  "ರಾಣಿ ಕಾ ವಾವ್" ಅನ್ನೋ ಕಟ್ಟಡವನ್ನ 11ನೇ ಶತಮಾನದಲ್ಲಿ ಕಟ್ಸಿದ್ದು ರಾಣಿ ಉದಯಮತಿ 

ಸೋಲಂಕಿ ಸಾಮ್ರಜ್ಯವನ್ನಾಳಿದ ಮೊದಲ ಭೀಮದೇವನ ಮಡದಿ , ಉದಯಮತಿ ಈ  "ರಾಣಿ ಕಾ ವಾವ್" ಅನ್ನೋ ಕಟ್ಟಡವನ್ನ 11 ನೇ ಶತಮಾನದಲ್ಲಿ ಕಟ್ಸಿದ್ರು. ಸಂಕೀರ್ಣವಾಗಿ ಕಟ್ಟಲ್ಪಟ್ಟಿರುವ ಈ ಕಟ್ಟಡಕ್ಕೆ ನೀರಿನ ಪೂರೈಕೆ ಆಗೋದು ನೆಲದಡಿಯಲ್ಲೇ ಇರೋ ಒಂದು ಗುಪ್ತ ಸ್ಥಳದಿಂದ.  ಇದ್ನ ಮರು ಗುರ್ಜರ ಅನ್ನೋ ಶೈಲಿಯಲ್ಲಿ ಕಟ್ಟಲಾಗಿದೆ. ಸುಮಾರು 7 ಮೆಟ್ಟಿಲುಗಳಷ್ಟು ಎತ್ತರದಲ್ಲಿ ಕಟ್ಟಲಾಗಿದೆ. ಒಂದೊಂದು ಮೆಟ್ಟಿಲುಗಳ ಅಂತಸ್ತಿನಲ್ಲಿ ಅನೇಕ ಚಿಕ್ಕ ಚಿಕ್ಕ ಶಿಲ್ಪಗಳಿವೆಯಂತೆ. ಅದ್ರಲ್ಲಿ 500 ಶಿಲ್ಪಗಳನ್ನ ಪ್ರಮುಖ ಶಿಲ್ಪ ಅಂತ ಗುರುತಿಸಿದ್ದಾರೆ. ಇದ್ನ ಬಿಟ್ಟು ಇನ್ನೂ 1000 ಚಿಕ್ಕ ಚಿಕ್ಕ ಶಿಲ್ಪಗಳಿವೆಯಂತೆ. ಇದೇ ಸಾಕು ಅನ್ಸತ್ತೆ ಭಾರತೀಯರು ಶಿಲ್ಪಕಲೆಯಲ್ಲಿ ಉತ್ತುಂಗದಲ್ಲಿದ್ದಾರೆ ಅನ್ನೋದಕ್ಕೆ. 

http://www.backpackertravel.org/wp-content/uploads/2016/11/Rani-ki-vav-Patan.jpg

5) ಭವ್ಯವಾಗಿರೋ ಡೆಲ್ಲಿಯ ಕಯಾರ್ ಅಲ್ ಮನ್ಜಿಲ್ ಮಸೀದಿಯನ್ನ ಕಟ್ಸಿದ್ದು ದಾದಿ ಮಹಾಮ್ ಅಂಗ್ 

ಪುರಾನ ಕಿಲಾದ ಎದ್ರಗಡೆನೇ ಇದೆ. ಇದ್ನ 1561 ರಲ್ಲಿ ಮಹಾಮ್ ಅಂಗ್ ಅನ್ನೋ ಅಕ್ಬರನ ದಾದಿ ಕಟ್ಸಿರೋದಂತೆ. ಈ ಮಹಿಳೆ ದಾದಿಯಾದ್ರೂ ಇಡೀ ರಾಜ್ಯದಲ್ಲಿ ತುಂಬಾನೇ ಪ್ರಭಾವಿ ಮಹಿಳೆಯಂತ ಅನ್ಸಕೊಂಡಿದ್ದಾಳಂತೆ. ಅಕ್ಬರ ಚಿಕ್ಕವನಿದ್ದಾಗ ಇಡೀ ಮೊಗಲ್ ಸಾಮ್ರಾಜ್ಯವನ್ನ ಇದೇ ಮಹಿಳೆ ಆಳ್ತಾ ಇದ್ದಂತೆ. ಈ ಮಸೀದಿ ಐದು ದೊಡ್ಡ ದೊಡ್ಡದಾಗಿರೋ ಕಮಾನುಗಳನ್ನ ಹೊಂದಿದೆ. ಇದೆಲ್ಲವನ್ನ ದಾಟಿ ಬಂದ್ರೆ ನಿಮ್ಗೆ ಮುಖ್ಯ ಪ್ರಾರ್ಥನ ಮಂದಿರ ಸಿಗತ್ತಂತೆ. ಕೆಂಪು ಬಣ್ಣದ ಸ್ಯಾಂಡ್ ಸ್ಟೋನನಿಂದ ಕಟ್ಟಲ್ಪಟ್ಟಿರೋ ಮುಖ್ಯದ್ವಾರವೇ ಇಲ್ಲಿನ ಆಕರ್ಷಣೆ. 

thebetterindia.com

6) ಮಿರ್ಜಾನ್ ಕೋಟೆಯನ್ನ ಕಟ್ಸಿರೋದು ರಾಣಿ ಚೆನ್ನಭೈರದೇವಿ 

ಕುಮುಟಾದ ಅಘನಾಶಿನ ದಡದಲ್ಲಿ ಕುಳಿತ್ಕೊಂಡು ಒಂದ್ಸಲ ಕಣ್ಣಾಯ್ಸಿದ್ರೆ ನಿಮ್ಗೆ ಸಿಗೋದೆ ಮಿರ್ಜಾನ್ ಕೋಟೆ. ಇದ್ನ ರಾಣಿ ಚೆನ್ನಭೈರದೇವಿ ಕಟ್ಸಿರೋದು. ಯುದ್ದರಂಗದಲ್ಲಿ ಪಲಾಯನ ಮಾಡಿ ಬಂದಿರೋ ಕುಶಲಕರ್ಮಿಗಳಿಗೆ ಈ ರಾಣಿಯ ಸಾಮ್ರಾಜ್ಯದಲ್ಲಿ ಉಳ್ಕೊಳ್ಳೋದಕ್ಕೆ ಅವಕಾಶ ಕೊಟ್ಟಿರೋದಕ್ಕೆ ಅವ್ರೆಲ್ಲಾ ಸೇರಿ ಬಲಿಷ್ಟವಾಗಿರೋ ಮಿರ್ಜಾನ್ ಕೋಟೆಯನ್ನ ರಾಣಿಗಾಗಿ ಕಟ್ಸಿಕೊಟ್ರು. ಪೋರ್ಚುಗೀಸರು ಚೆನ್ನಭೈರದೇವಿಯನ್ನ ಕಾಳುಮೆಣಸಿನ ರಾಣಿಯಂತಲೂ ಕರೀತಾರೆ.  ರೈನಾದೇ ಪಿಮೆಂಟಾ ಅಂತಲೂ ಕರೀತಾರೆ. ಯಾಕಂದ್ರೆ ಇಲ್ಲಿ ಜಗತ್ತಲ್ಲೇ ಅತ್ಯುತ್ತಮವಾಗಿ ಬೆಳಿಯೋ ಕಾಳು ಮೆಣಸು ಸಿಗತ್ತಂತೆ ಅದ್ಕೋಸ್ಕರ. ಈ ಮಿರ್ಜಾನ್ ಕೋಟೆಯಲ್ಲಿ ರಾಣಿ ಸುಮಾರು 54 ವರ್ಷಗಳನ್ನ ಕಳೆದಿದ್ದಾಳಂತೆ. 

4.bp.blogspot.com

7) ಲಾಲ್ ದರ್ವಾಜಾ ಮಸ್ಜೀದನ್ನ ಕಟ್ಸಿರೋದು ರಾಜ್ಯೇ ಬೀಬಿ 

ಜಾನ್ಪುರದ ಸುಲ್ತಾನ್ ಮಹಮ್ಮದ ಶಾರಿಕನ ಪಟ್ಟದರಸಿಯಾಗಿರೋ ರಾಜ್ಯೇ ಬೀಬಿ ಇದ್ನ ಕಟ್ಸಿರೋದು 1447ರಲ್ಲಿ. ಇದ್ನ ಅವ್ರ ಗುರುಗಳಾದ ಸೈಯದ್ ಅಲಿ ದಾವೂದ್ ಕುತ್ಬುದ್ದೀನವರ ನೆನಪಲ್ಲಿ ಕಟ್ಸಿರೋದಂತೆ. ಇದು ಅಥಲಾ ಮಸೀದಿಯನ್ನೇ ಹೋಲುತ್ತಿದ್ರೂ ಕುಂಕುಮ ಬಣ್ಣದಿಂದ ಕೂಡಿರೋ ಮುಖ್ಯದ್ವಾರ ಎಲ್ಲರ ಕಣ್ಣುಕುಕ್ಕೋದ್ರಲ್ಲಿ ಸಂಶಯವೇ ಇಲ್ಲ. ಮಸೀದಿ ಅಲ್ಲದೇ ಹೆಣ್ಣುಮಕ್ಕಳಿಗಾಗಿ ಮದ್ರಸಾವನ್ನ ಕೂಡಾ ಕಟ್ಸಿದ್ದಾರಂತೆ. ಅದ್ರ ಹೆಸ್ರೇ ಜಾಮಿಯಾ ಹುಸೈನಿಯಾ ಅಂತ. 

tybarchhistory.weebly.com

8) ಮೋಹಿನೀಶ್ವರ ಶಿವಾಲಯ ದೇವಸ್ಥಾನವನ್ನ ಕಟ್ಸಿರೋದು ಮಹಾರಾಣಿ ಮೋಹಿನಿ ಬಾಯಿ ಸೀಸೋಡಿಯಾ 

ಮಹಾರಾಣಿ ಮೋಹಿನಿ ಬಾಯಿ ಸೀಸೋಡಿಯಾ  ಮೋಹಿನೀಶ್ವರ ಶಿವಾಲಯ ದೇವಸ್ಥಾನವನ್ನ ಕಟ್ಸಿರೋದು 1915ರಲ್ಲಿ. ಮೋಹಿನಿ ಬಾಯಿ ಸೀಸೋಡಿಯಾ ಕಾಶ್ಮೀರದ ರಾಜ ಹರಿಸಿಂಗನ ಹೆಂಡ್ತಿ. ಇದು ಗುಲ್ಮಾರ್ಗದ ಸಣ್ಣ ಬೆಟ್ಟದ ತಪ್ಪಲಿನಲ್ಲಿದೆ.ಈ ದೇವಸ್ಥಾನ ಡೋಗ್ರಾ ರಾಜವಂಶದಲ್ಲೇ ತುಂಬಾನೇ ಪ್ರಸಿದ್ದ ಅಂತೆ. ಹಿಮಭರಿತ ವಾತಾವರಣದಲ್ಲಿ ಅಚ್ಚ ಕೆಂಪುಬಣ್ಣದಿಂದ ಕೂಡಿರೋ ಇದ್ರ ಮುಕುಟ ಮತ್ತೆ  ದೇವಸ್ಥಾನದ ಇರುವಿಕೆಯನ್ನ ಗುಲ್ಮಾರ್ಗದ ಯಾವ ಮೂಲೆಯಲ್ಲಿ ನಿಂತ್ಕೊಂಡ್ ನೋಡಿದ್ರೂ ತೋರತ್ತೆ. 

thebetterindia.com

9) ಮಹಿಮ್ ಕಾಸ್ವೇಯನ್ನ ಕಟ್ಸಿರೋದು ಅವಬಾಯ್ ಜಮ್ಶೆಡ್ ಜೀ

1843 ರಲ್ಲಿ ಮಹಿಮ್ ಕಾಸ್ವೇಯನ್ನ ಸುಮಾರು 1. 67 ಲಕ್ಷದಲ್ಲಿ ಕಟ್ಟಲಾಯ್ತಂದೆ. ಅಷ್ಟೂ ಹಣವನ್ನ ಅವಬಾಯ್ ಜಮ್ಶೆಡ್ಜಿ ಕೊಟ್ಟಿದ್ರಂತೆ. ಇವ್ರು ಬಹುದೊಡ್ಡ ಪಾರ್ಸಿ ವ್ಯಾಪರಸ್ಥ ಜಮ್ಶೆಡ್ಜಿ ಜೀಜೀಬಾಯ್ ಅವ್ರ ಹೆಂಡತಿ.

ಇದನ್ನ ಕಟ್ಟಿಸಕ್ಕೆ ಕಾರಣವಾಗಿದ್ದು…ಸುಮಾರು 20 ಬೋಟ್ಗಳು ತಲೆಕೆಳಾಗಿ ಮಹಿಮ್ ಖಾರಿಯ ನೀರಿನ ಸುಳಿಯಲ್ಲಿ ಸಿಕ್ಕಿದ ದುರಂತ, ಜನರ ಸಾವು. ಇವಾಗ್ಲೂ ಈ ಕಾಸ್ವೇ ಮುಂಬೈನ ಲೈಫ್ ಲೈನ್ ಪ್ರದೇಶ ಅಂತಲೇ ಕರೀತಾರೆ.

https://www.thebetterindia.com/wp-content/uploads/2016/06/4-614x747.jpg

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಕೈಯಿಲ್ಲದಿದ್ರೂ ಈತ ಕಾರು ಓಡಿಸ್ತಾನೆ ಅಂತ ತಿಳ್ಕೊಂಡ್ರೆ ಹೆಂಗೆ ಲೈಸೆನ್ಸ್ ಸಿಕ್ತು ಅಂತ ಆಶ್ಚರ್ಯಪಡ್ತೀರಿ

ನಮ್ ದೇಶ್ದಲ್ಲಿ ಈ ತರ ಇದೇ ಮೊದಲು!

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.