ಮನೇಲಿ ಇದ್ದು ಇದ್ದೂ ಬೇಜಾರಾಗಿದೆ ಅಂದ್ರೆ ಈ 5 ಜಾಗಕ್ಕೆ ಹೋಗಿ ಸುತ್ತಾಡ್ಕೊಂಡ್ ಬನ್ನಿ

ಕನಸಿನ ಲೋಕಕ್ಕೆ ಹೋಗಿ ಬಂದ ಹಾಗಿರುತ್ತೆ‌:-)

ಯಾವುದಾದರೂ ಹೊಸ ಜಾಗ ನೋಡೋದು ಅಂದರೆ ಯಾರಿಗಾದರೂ ಇಷ್ಟ ಆಗೇ ಆಗುತ್ತೆ. ಅದರಲ್ಲೂ ಅಲ್ಲಿ ಇಲ್ಲಿ ಸಾಮಾನ್ಯವಾಗಿರೋ ಜಾಗಗಳೇ ಅಲ್ಲದೇ ವಿಶೇಷವಾಗಿರೋ ಜಾಗಗಳನ್ನ ನೋಡೋದು ಎಲ್ಲರಿಗೂ ಇಷ್ಟ ಹಾಗಿದ್ದಾಗ ನಾವು ಹೇಳ್ತಿರೋ ಜಾಗಗಳ ಬಗ್ಗೆ ತಿಳಿದಾಗ ಎದ್ದು ಕುಣಿಯೋದ್ರಲ್ಲಿ ಆಶ್ಚರ್ಯ ಇಲ್ಲ.

1. ಫಿನ್ ಲ್ಯಾಂಡ್ ನ ಕಕ್ಸ್ಲೌಟನಿಯನ್ ಆರ್ಟಿಕ್ ರೆಸಾರ್ಟ್

ಉರ್ಹೂ ಕೆಕ್ಕೋನಿಯನ್ ನ್ಯಾಷನಲ್ ಪಾರ್ಕ್ ಹತ್ತಿರ ಇರೋ ಈ ರೆಸಾರ್ಟನ್ನ ವಿಶೇಷವಾಗಿ ನಿರ್ಮಿಸಲಾಗಿದ್ಯಂತೆ.

ಸುತ್ತಲೂ ಹಾಲಿನಂತಿರೋ ಮಂಜಿಂದ ಸುತ್ತುವರೆದಿರೋ ಈ ಜಾಗದಲ್ಲಿರೋ ರೂಂ ಗಳಲ್ಲಿ ಬೆಚ್ಚಗೆ ಮಲಗೋ ಅನುಭವನೇ ಬೇರೆ ಅಂತಾರೆ ಅಲ್ಲಿ ಹೋದವರು.

d27k8xmh3cuzik.cloudfront.net

2. ಪಲಾಸಿಯೋ ಡಿ ಸಾಲ್ ಹೋಟೆಲ್

ಬರೀ ಉಪ್ಪಿನಿಂದ ಆಗಿರೋ ಹೋಟೆಲ್ ಇದು, ಸಲಾರ್ ಡಿ ಉಯೂನಿ ಅನ್ನೋ ಜಾಗದಲ್ಲಿ ಬೊಲೀವಿಯನ್ ಉಪ್ಪಿನಿಂದ ಆಗಿರೋ ಕಟ್ಟಡ ಇದು.

ಈ ಕಟ್ಟಡದ ವಿಶೇಷ ಅಂದರೆ ಗೋಡೆಯಿಂದ ಮೇಲ್ಚಾವಣಿ ವರೆಗೂ ಎಲ್ಲವೂ ಉಪ್ಪಿನಿಂದಲೇ ಆಗಿರೋದು.

rutaverdebolivia.com

3. ಸ್ವೀಡೆನ್ನಿನ ಐಸ್ ಹೋಟೆಲ್

ಕಲೆಗೆ ಇದೊಂದು ಒಳ್ಳೆ ಉದಾಹರಣೆ ಅಲ್ಲದೇ ಅತೀ ಶ್ರೀಮಂತಿಕೆಯ ಹೋಟೆಲ್ ಇದು.

ಬೇಸಿಗೇಲಿ ಐಸ್ ಕರಗದ ಹಾಗೆ ನೋಡಿಕೊಳ್ಳೋಕೆ ಇಲ್ಲಿ ಸೋಲಾರ್ ಪಾನೆಲ್ ಗಳನ್ನ ಬಳಸಲಾಗುತ್ತಂತೆ.

ಇಲ್ಲಿ ತಣ್ಣಗಿರೋ ಹಾಗೆ ಬೆಚ್ಚಗಿರೋ ಎರಡೂ ತರದ ರೂಂ ಗಳು ದೊರೆಯುತ್ತವೆಯಂತೆ. ಒಂದು ರಾತ್ರಿಗಿಂತ ಹೆಚ್ಚು ತಣ್ಣಗಿರೋ ರೂಂ ನಲ್ಲಿ ಮಲಗೋಕೆ ಬಿಡಲ್ವಂತೆ.

icehotel.com

4. ಕೋಸ್ಟ ರೀಕ ರೇನ್ ಫಾರೆಸ್ಟ್ ಸೆಂಟ್ರಲ್ ಅಮೇರಿಕಾ

ಸಮುದ್ರದಿಂದ ಸ್ವಲ್ಪ ದೂರದಲ್ಲೇ ಏರೋಪ್ಲೇನ್ ನಂತೆ ಕಾಣೋ ಕೋಸ್ಟಾ ವರ್ಡಾದ ಬೋಯಿಂಗ್ 727 ಅನ್ನೋ ಈ ಜಾಗದಲ್ಲಿ ಮರದಿಂದ ಕೋಣೆಗಳನ್ನ ಮಾಡಲಾಗಿದೆಯಂತೆ.

travelmyne.com

5. ತಾನ್ಜೇನಿಯಾದ ಪೆಂಬಾ ದ್ವೀಪದಲ್ಲಿ ನೀರಡಿಯಲ್ಲಿರೋ ಮಂತಾ ರೆಸಾರ್ಟ್

ಪ್ರಪಂಚದಲ್ಲಿ ಹೀಗೂ ಜಾಗಗಳಿವೆಯಾ ಅನ್ನಿಸಬಹುದು ನಿಮಗೆ. ನೀರೊಳೊಗೊಂದು ಮನೆ ಮಾಡಬಹುದು ಅನ್ನೋ ಅಂತೆಕಂತೆನ ನೀವು ನಂಬ್ತೀರೋ ಇಲ್ಲವೋ ಗೊತ್ತಿಲ್ಲ ಆದರೆ ಈ ಜಾಗ ಇರೋದಂತೂ ನಿಜ.

ಮಲಗೋವಾಗ ನಿಮ್ಮ ಸುತ್ತಲೂ ಮೀನುಗಳಿದ್ದರೆ ಬೆಳಗಾಗೋದು ಕೋಳಿ ಕೂಗಿ ಅಲ್ಲ ನೀರಿನ ಅಲೆಗಳ ಶಬ್ಧದಿಂದ. ದಡದಿಂದ 100 ಮೀಟರ್ ದೂರದಲ್ಲಿರೋ ಈ ಜಾಗಕ್ಕೆ ಜೀವನದಲ್ಲಿ ಒಮ್ಮೆಯಾದರೂ ಹೋಗಿ ಬರಬೇಕು ಕಣ್ರೀ.

cdn3-www.liveoutdoors.com

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಕತ್ತಲೆ ಅಂತ ಕೈಕಟ್ಟಿ ಕೂರದೆ ಒಬ್ಬ ಬಾಳೆ ದಿಂಡಿಂದ ಹೆಂಗೆ ಕರೆಂಟ್ ಬರಿಸ್ತಾ ಇದಾನೆ ನೋಡಿ

ಕುತೂಹಲ ಇದ್ದಷ್ಟೂ ಒಳ್ಳೆದು

ಯಾವಾಗ ಯಾರ ತಲೇಗೆ ಹೊಸ ಐಡಿಯಾ ಬರುತ್ತೆ ಅಂತ ಹೇಳಕ್ಕೇ ಆಗಲ್ಲ. ಒಂದು ಹೊಸ ಐಡಿಯಾದಿಂದ ಎಷ್ಟೋ ಸಮಸ್ಯೆ ಬಗೆಹರಿಯುತ್ವೆ. ಹಳ್ಳೀಲಿ ಕರೆಂಟ್ ತೊಂದರೆ ಎಲ್ಲಿ ಇಲ್ಲ ಹೇಳಿ? ಅದಲ್ಲದೇ ರೈತರು ಬೆಳೆನಾಶ ಅಂತ ಪಾಡು ಪಡ್ತಾರೆ. ಇಲ್ಲಿ ಒಬ್ಬ ಸಾಧಾರಣ 12ನೇ ತರಗತಿ ಹುಡ್ಗ ಈ ಎರಡೂ ತೊಂದರೆಗೆ ಒಂದೊಳ್ಳೆ ಸಿಂಪಲ್ ಪರಿಹಾರ ಮಾಡಿದ್ದಾನೆ ನೋಡಿ.

ಗೋಪಾಲ್.ಜೇ 12ನೇ ತರಗತಿ, ಮಾಡೆಲ್ ಹೈಸ್ಕೂಲಲ್ಲಿ ಓದ್ತಿದಾನೆ. ಬಿಹಾರದಲ್ಲಿರೋ ಬಗಲ್ ಪುರ್ ಜಿಲ್ಲೆಯ ನೌಗಾಚಿಯ ಅನ್ನೋ ಊರಿನ ಈ ಹುಡ್ಗ ಬಾಳೆದಿಂಡಿಂದ ವಿದ್ಯುತ್ ತಯಾರಿಸಿದ್ದಾನೆ. ಇದನ್ನ ಸೈನ್ಸ್ ಅಂಡ್ ಟೆಕ್ನಾಲಜಿ ಸ್ಪರ್ಧೇಲಿ ಪ್ರದರ್ಸಶಿಸಿದ್ದಾನೆ.

 

ಬಾಳೇದಿಂಡಿಂದ ಬಟ್ಟೆ ಕರೆ ಆದಾಗ ಈ ಐಡಿಯಾ ಬಂದಿದ್ದಂತೆ

9ನೇ ತರಗತಿಲಿದ್ದಾಗ ಬಾಳೇದಿಂಡಿಂದ ಬಟ್ಟೆ ಕರೆ ಆಗಿತ್ತಂತೆ. ಇದಕ್ಕೆ ಕಾರಣ ಅದ್ರಲ್ಲಿರೋ ಆಸಿಡ್ ಕಾರಣ ಅಂತ ಶಿಕ್ಷಕರಿಂದ ತಿಳ್ಕೊಂಡ್ನಂತೆ. ಆಗಲೇ ಬ್ಯಾಟರಿಲೆಲ್ಲಾ ಉಪಯೋಗಿಸೋ ಆಸಿಡ್ ಬದ್ಲು ಬಾಳೆದಿಂಡಲ್ಲಿರೋ ಆಸಿಡ್ ಬಳಸಿ ವಿದ್ಯುತ್ ತಯಾರಿಸ್ಬೋದಾ ಅಂತ ಐಡಿಯಾ ಬಂದಿದ್ದು.

ಬಾಳೆ ಬೆಳೆ ನಾಶ ಆದಾಗ ಅದ್ರಿಂದ ವಿದ್ಯುತ್ ತಯಾರಿಸ್ತಾನೆ

ಗೋಪಾಲ್ ತಂದೆ ಪ್ರೇಮ್ ರಂಜನ್ ಅವರ ಬಾಳೇತೋಟ ಇತ್ತು. 2008ರಲ್ಲಿ ತುಂಬಾ ಮಳೆ ಆಗಿ ಬೆಳೆಯಲ್ಲಾ ನಾಶ ಆಗೋಗಿತ್ತು. ಆಗ ಒಂದು ಝಿಂಕ್ ಮತ್ತೆ ಕಾಪರ್(ತಾಮ್ರ) ಇಂದ ಇಲೆಕ್ಟೋಡ್ ಮಾಡಿ ಬಾಳೇದಿಂಡಿಗೆ ಕನೆಕ್ಟ್ ಮಾಡಿ ವಿದ್ಯುತ್ ತಯಾರಿಸ್ತಾನೆ. ಒಂದ್ ಅಡಿ ಬಾಳೇದಿಂಡಿಂದ 3 ವೋಲ್ಟ್ ವಿದ್ಯುತ್ ತಯಾರಾಗುತ್ತೆ. ಇದ್ರಿಂದ ಒಂದು LED ಬಲ್ಬ್ 3 ಗಂಟೆ ಉರಿಯುತ್ತೆ. ಇದನ್ನ ಹೆಚ್ಸಕ್ಕೆ ಅಂತ ಇನ್ನೊಂದ್ ಬಾಳೇದಿಂಡ್ ಉಪಯೋಗಿಸಿ 12 ವೋಲ್ಟ್ ತಂಕ ವಿದ್ಯುತ್ ತಾನೇ ತಯಾರಿಸ್ತಾನೆ. ಇದ್ರಿಂದ ಅವನಿಗೆ ಮತ್ತೆ ಅವನ ತಂಗಿಗೆ ಕರೆಂಟ್ ಇಲ್ದೇದ್ದಾಗ್ಲೂ ಓದಕ್ಕೆ ಸಹಾಯ ಆಗುತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: