ಈ 10 ಪ್ರಾಣಿಗಳು ಮಲ್ಗೋ ರೀತಿ ನೋಡಿ ನೀವ್ ಆಶ್ಚರ್ಯ ಪಡೋದು ಖಂಡಿತ

ನಾವ್ ಮಲ್ಗೋದು ಇವ್ರೆಲ್ಲಾಕ್ಕಿಂತ ಡಿಫರೆಂಟ್ :-)

ಮನುಷ್ಯ ಹೇಗ್ ನಿದ್ದೆ ಮಾಡ್ತಾನೆ ಹೇಳಿ ? ಇದೇನಪ್ಪಾ ಹೀಗ್ ಕೇಳಿದ್ರಿ ತಲೆಗಿಲೆ ಸರ್ಯಾಗಿದೆಯಾ ಎನು ಅಂದ್ರಾ ? ಎಲ್ಲ ತರಾನೂ ನಿದ್ದೆ ಮಾಡ್ತಾನ್ರೀ. ಅದೇನೋ ಹೇಳ್ತಾರಲ್ಲ ಚಿಂತೆ ಇಲ್ದೇ ಇದ್ದವ್ನಿಗೆ ಸಂತೇಲೂ ನಿದ್ದೆ ಅಂತ ಹಂಗೆ ಎಲ್ ಬೇಕಂದ್ರಲ್ಲಿ ಮಲಗ್ತಾನೆ ಬಿಡಿ. ಕೂತ್ಕಂಡು , ನಿತ್ಕೊಂಡು , ಮಲ್ಕೊಂಡು ಎಲ್ಲಾ ತರದಲ್ಲೂ ಈ ಮನುಷ್ಯ ಎಕ್ಸ್ಪರ್ಟ್ ಬಿಡಿ. ಆದ್ರೆ ಪ್ರಾಣಿಗಳು ಹೇಗ್ ಮಲಗ್ತಾವೆ ಅನ್ನೋದ್ ಗೊತ್ತಾ ನಿಮ್ಗೆ ? ಎಲ್ಲಾ ಪ್ರಾಣಿಗಳು ಬೆನ್ನಮೇಲೇನೆ ಅಥ್ವಾ ಬಲಕ್ಕೋ ಎಡಕ್ಕೋ ಮಲ್ಗಿ ನಿದ್ದೆ ಮಾಡಲ್ಲಾರೀ ಅದ್ರದ್ದೇ ಆದ ಒಂದೊಂದ್ ಭಂಗಿ ಇರತ್ತೆ. ಹಾಗಾದ್ರೆ ಯಾವ್ದೆಲ್ಲಾ ಪ್ರಾಣಿಗಳು ಯಾವ್ ಯಾವ್ ರೀತಿಯಲ್ಲಿ ಮಲಗ್ತಾವೆ ಅನ್ನೋದ್ನ ಇವತ್ತು ತಿಳಿಯೋಣ ಬನ್ನಿ. 

1) ಸಮುದ್ರದಲ್ಲಿ ನೀರು ನಾಯಿಗಳು ಕೈ ಕೈ ಹಿಡ್ಕೊಂಡು ಮಲಗ್ತಾವಂತೆ ಯಾವ್ದೇ ಕಾರಣಕ್ಕೂ ಮುಳಗ್ಬಾರ್ದಂತ 

cdn.list25.com

2)  ಕೆಲ್ವೊಂದು ವಲಸೆ ಹಕ್ಕಿಗಳು ಹಾರಾಡ್ತಾ ಇದ್ದಾವಾಗ್ಲೇ ಮಲಗ್ತಾವಂತೆ

ಅದ್ರಲ್ಲೂ ಸ್ವಾನಿಸನ್ ಅನ್ನೋ ಹಾಡು ಹಕ್ಕಿ ನೂರಕ್ಕಿಂತಲೂ ಹೆಚ್ಚು ಪವರನ್ಯಾಪ್ ತಗೊಳ್ತವಂತೆ ಆ ಪವರ್ ನ್ಯಾಪ್ಗಳು ಬರೇ ಒಂದೆರೆಡು ಸೆಕೆಂಡ್ ಅಂತೆ. 

eurodiaconia.org

3) ಆನೆ ನಿಂತಲ್ಲೇ ನಿದ್ರಿಸ್ತವಂತೆ ಮಲಗಿಯೂ ಕೂಡಾ ನಿದ್ರಿಸಬಹುದಂತೆ

ಆದ್ರೆ ಜಾಸ್ತಿ ಮಲಗಿ ನಿದ್ರೆ ಮಾಡಿದ್ರೆ ,  ಅದ್ರ ಆಂತರಿಕ ಅಂಗಾಂಗಳಿಗೆ ದೊಡ್ಡ ಪ್ರಮಾಣದ ತೊಂದ್ರೆ ಬರತ್ತಂತೆ 

3.bp.blogspot.com

4) ಬಾತುಕೋಳಿಗಳು ಗುಂಪಲ್ಲಿರೋವಾಗ ಮಾತ್ರ ನಿದ್ರೆ ಮಾಡ್ತವಂತೆ

ಮಲಗಿರುವ ಬಾತುಕೋಳಿಗಳ ಪಕ್ಕದಲ್ಲಿರೋ ಒಂದು ಬಾತುಕೋಳಿ ಯಾವಾಗ್ಲೂ ಎಚ್ಚರಿಕೆಯಿಂದ ಇರತ್ತಂತೆ ಎನಾದ್ರೂ ಅಪಾಯ ಬಂದ್ರೆ ತಕ್ಷಣ ಹೇಳೋದಕ್ಕೆ 

upload.wikimedia.org

5) ಕುದುರೆ , ಜೀಬ್ರಾ , ಜಿರಾಫೆ , ಆನೆ ಎಲ್ಲಾ ನಿಂತೇ ನಿದ್ರಿಸ್ತಾವಂತೆ

ವೈರಿಗಳ ಭಯಕ್ಕೆ ಈ ರೀತಿ ನಿದ್ರಿಸೋದಂತೆ. 

3.bp.blogspot.com

6) ನಾಯಿಮರಿಗಳು, ಅಳಿಲು, ಬೆಕ್ಕುಗಳು ಒಂದರ ಮೇಲೊಂದರಂತೆ ಮಲಗ್ತಾವಂತೆ

ಬೆಚ್ಚಗಿರ್ಲಿಕ್ಕೆ. 

cdn.list25.com

7) ಚಿಂಪಾಂಜಿ, ಒರಾಂಗುಟನ್, ಗೊರಿಲ್ಲಾಗಳು ಮನುಷ್ಯರ ತರಾನೇ ಮಲಗ್ತವಂತೆ 

ಯಾರು ತೊಂದ್ರೆ ಕೊಡ್ದೇ ಇರೋ ಜಾಗದಲ್ಲಿ ರಾಶಿ ರಾಶಿ ಸೊಪ್ಪು ಗಳನ್ನ ತಕೊಂಡ್ ಬಂದು ಒಳ್ಳೆ ಬೆಡ್ ತರ ಮಾಡಿ  ಆರಾಂಗಿ ಮಲಗ್ತಾವೆ. 

techietonics.com

8) ಮರುಳುಗಾಡಿನ ಬಸವನ ಹುಳ ಮಲಗಿದ್ರೆ ಎಳೋದೆ ವರ್ಷ ಆದ್ಮೇಲೆ

ನೀವ್ ನಂಬ್ತೀರೋ ಬಿಡ್ತೀರೋ ಗೊತ್ತಿಲ್ಲ , ಮರುಳುಗಾಡಿನ ಬಸವನ ಹುಳ ವರ್ಷಾನುಗಟ್ಟಲೇ ಮಲಗ್ತಾವಂತೆ. ಇದೇ ತರ ಒಂದ್ ಬಸವನ ಹುಳ ಸತ್ತಿದೆ ಅನ್ಕೊಂಡು ಈಜಿಪ್ಟಲ್ಲಿ ಅದ್ನ ತಗೊಂಡೋಗಿ ಒಂದ್ ಮ್ಯೂಸಿಯಂನಲ್ಲಿಟ್ರಂತೆ ನಾಲ್ಕ್ ವರ್ಷ ಆದ್ಮೇಲೆ ಅದು ನಿಧಾನಕ್ಕೆ ತೆವ್ಳಕೊಂಡ್ ಹೋಗ್ತಾ ಇದೆಯಂತೆ

cdn4.list25.com

9) ರೋಡೆಂಟ್ಸಗಳು ಅರ್ಧ ವರ್ಷದವರೆಗೆ ಮಲಗ್ತಾವಂತೆ

ಈ ಪ್ರಾಣಿಗೆ ಚಳಿಗಾಳದಲ್ಲಿ ಒಡಾಡೋದ್ ತುಂಬಾ ಕಷ್ಟ. ಅದ್ಕೆ ಚಳಿಗಾಲದ ಸಮಯದಲ್ಲಿ ಮಲ್ಗಿದ್ರೆ ಇದು ಅರ್ಧ ವರ್ಷದವರೆಗೆ ಎಳೋದ್ ಡೌಟಂತೆ. ಚಳಿಗಾಲವನ್ನ ತಪ್ಪಿಸಿಕೊಳ್ಳಲಿಕ್ಕೆ ಮಾಡೋ ಉಪಾಯ ಇದು. 

demeliou.files.wordpress.com

10) ಬಾವಲಿ ತಲೆಕೆಳಗಾಕಿ ಮಲಗ್ತಾವೆ

ಬಾವಲಿ ದಿನಕ್ಕೆ 20 ಗಂಟೆಗಳ ಕಾಲ ಮಲಗತ್ತೆ. ತಲೆಕೆಳಗೆ ಹಾಕಿ ಮಲ್ಗೋ ಭಂಗಿಯಿದೆಯಲ್ಲಾ ಅದು ತುಂಬಾನೇ ಆರಾಂ ಅನ್ಸತ್ತಂತೆ ಅವಕ್ಕೆ. 

desibucket.com
ಸೃಷ್ಟಿ ನಿಯಮ ಎಷ್ಟೂ ವಿಚಿತ್ರ ಅಲ್ವಾ? ಗಾಡ್ ಇಸ್ ಗ್ರೇಟ್.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಹೆಚ್ಚುಕಮ್ಮಿ ನೀವೆಲ್ಲಾ ಇಷ್ಟಪಡೋ ಈ 10 ಬೈಕ್ ಬಗ್ಗೆ ಸ್ವಲ್ಪ ತಿಳ್ಕೊಂಡ್ರೆ ಜಮಾನದ ನೆನಪೆಲ್ಲಾ ವಾಪಸ್ಸು ಬರತ್ತೆ

ಇವುಗಳ ಗಮ್ಮತ್ತು ಪ್ರತಿಯೊಬ್ಬನಿಗೂ ಗೊತ್ತು

ನಮ್ಮ ದೇಶದಲ್ಲಿ ಮೊದಲಿಂದ ಕೆಲವು ಬೈಕ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಆದರು ಜಮಾನದಿಂದ ಒಂಥರಾ ರೂಲ್ ಮಾಡ್ಕೊಂಡ್ ಬಂದಿರೋ ಗಾಡಿಗಳು ಸುಮಾರಿವೆ ಅಂತಾ ಗಾಡಿಗಳಲ್ಲಿ ಯಾವತ್ತೂ ನಮ್ಮ ನೆನಪಲ್ಲಿ ಉಳಿಯೋ ಕೆಲವು ಗಾಡಿಗಳು ಇಲ್ಲಿವೆ. ನಿಮ್ಮ ಫೆವರೇಟ್ ಗಾಡಿ ಯಾವ್ದು ಅಂತ ಹೇಳಿ 

1 ರಾಯಲ್ ಎನ್ಫೀಲ್ಡ್ 

ಈ ಬೈಕನ್ನ ಭಾರತ ಪಾಕಿಸ್ತಾನದ ಗಡಿ ಕಾಯಕ್ಕೆ ಪೆಟ್ರೋಲಿಂಗಿಗೆ ಅಂತ ನಮ್ಮ ಭಾರತ ಸರ್ಕಾರ್ರ ೧೯೫೫ ರಲ್ಲಿ ಇಂಗ್ಲೆಂಡಿನಿಂದ ೮೦೦ ಬೈಕ್ ತರಿಸಿತು. ಇವತ್ತಿಗೂ ಬುಲೆಟ್ ಬೈಕ್ ಅಂದ್ರೆ ಭಯಂಕರ ಕ್ರೇಜ್...

images.thrillophilia.com

2 ಜಾವ 

ಇದರಂತ ಅದ್ಬುತ ಗಾಡಿ ಇನ್ನೊಂದಿಲ್ಲ, ಗಾಡಿಮೇಲೆ ಕೂತು ಹೋಗ್ತಿದ್ರೆ ಆ ಗತ್ತೇ ಬೇರೆ.

assets.catawiki.n

3 ಎಜ್ಡಿ 

ಇವತ್ತಿಗೂ ಅಲ್ಲೊಂದು ಇಲ್ಲೊಂದು ಕಾಣತ್ತೆ, ಎಜ್ಡಿ ರೋಡ್ಕಿಂಗ್ ಇದ್ರಲ್ಲಿ ಭಯಂಕರ ಫೇಮಸ್ಸು

rediff.com

4 ರಾಜದೂತ್ 

ಬುಲೆಟ್ ಮತ್ತು ಎಜ್ಡಿ ಇವೆರಡಕ್ಕಿಂತ ರೇಟ್ ಕಮ್ಮಿ, ಇದನ್ನ ನಟ ಧರ್ಮೇಂದ್ರ ಪ್ರಮೋಟ್ ಮಾಡಿದ್ರು. ಇದು ಭಯಂಕರ ಕ್ರೇಜ್ ಹುಟ್ಟಿಹಾಕಿತ್ತು 

zamroo.com

5 ಯಮಹಾ RD350

ಬುಲೆಟ್, ಎಜ್ಡಿ, ರಾಜದೂತ್ ಇವುಗಳ ಮಧ್ಯೆ ಅದ್ಭುತವಾದ ಪರ್ಫಾರ್ಮೆನ್ಸ್ ಇಟ್ಕೊಂಡು ಗೆದ್ದ ಬೈಕ್ ಇದು.

cdn7.bigcommerce.com

6 ಯಮಹಾ RX 100

ಸಕತ್ ಬ್ಯಾಲೆನ್ಸ್ ಈ ಬೈಕಿಗೆ. ಸಿನೆಮಾ ಸ್ಟಂಟ್, ಸರ್ಕಸ್ ಇಲ್ಲೆಲ್ಲಾ ಜಾಸ್ತಿ ಬಳಕೆಯಾದ ಬೈಕ್ ಇದು. ಎಲ್ಲರಿಗೂ ಇಷ್ಟ ಆಗ್ತಿತ್ತು 

qph.fs.quoracdn.net

7 ಹೀರೋ ಹೋಂಡಾ ಸಿ.ಡಿ 100

ನಮ್ಮ ದೇಶದ ಮೊದಲ 4 ಸ್ಟ್ರೋಕ್ ಇಂಜಿನ್ ಬೈಕ್ ಇದು 

bikes4sale.in

8 ಬಜಾಜ್ ಚೇತಕ್ 

ರಾಜ ಮಹಾರಾಣಾ ಪ್ರತಾಪ್ ಓಡಿಸುತ್ತಿದ್ದ ಕುದುರೆ ಹೆಸರು ಚೇತಕ್, ಹೆಚ್ಚುಕಮ್ಮಿ ಎಲ್ಲರಿಗೂ ಈ ಗಾಡಿಯಲ್ಲಿ ಕೂತಿರೋ ನೆನಪಿರತ್ತೆ

3.bp.blogspot.com

9 ಹೀರೋ ಪುಕ್ 

ಹೆಚ್ಚುಕಮ್ಮಿ ಅತಿ ಹೆಚ್ಚು ಸೇಲ್ ಕಂಡಿದ್ದು ಇದೆ ಗಾಡಿ, ಇದ್ರಲ್ಲಿ ಮಾಡೆಲ್ ಇತ್ತು. ಆಟೊಮ್ಯಾಟಿಕ್ಕು, ಶಕ್ತಿ ಮತ್ತೆ 3G ಅಂತ 

mlstatic.com

10 ಲ್ಯಾಂಬ್ರೆಟ್ಟಾ

ನಮ್ಮ ದೇಶದಲ್ಲೇ ತಯಾರಾದ ಮೊದಲ ದ್ವಿಚಕ್ರ ವಾಹನ ಇದು. ಇದು ಸುಮಾರ್ ದಿನ ಚಾಲ್ತಿಯಲ್ಲಿ ಇತ್ತು 

i.ndtvimg.com

ಎಲ್ಲ ಒಂಥರಾ ಲೆಜೆಂಡರಿ ಬೈಕುಗಳೇ :-)

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: