ನಿಮ್ಮನ್ನ ಇಷ್ಟಪಡದೆ ಇರೋರನ್ನ ಇಟ್ಕೊಳಕ್ಕೆ ಹರಸಾಹಸ ಪಡೋದು ಬೇಕಾಗಿಲ್ಲ, ಕಾರಣ ತಿಳ್ಕೊಳಿ

ಕತ್ತೆ ಬಾಲ ಕುದುರೆ ಜುಟ್ಟು ಅನ್ಕೊಂಡು ಸುಮ್ಮಗಿರಿ

ಪ್ರೀತಿ ಕುರುಡು ಅಂದ ಮಾತ್ರಕ್ಕೆ, ನಿಮ್ಮನ್ನ ಕೀಳಾಗಿ ಕಂಡು ಬಿಟ್ಟು ಹೋಗೋ ಜನರ ಕಾಲಿಗೆ ಬೀಳೋ ಅಗತ್ಯ ಇಲ್ಲ. ಜೊತೆಯಾಗಿ ಎಷ್ಟೋ ಕನಸು ಕಟ್ಟಿರಬೋದು. ಒಬ್ಬರನ್ನ ಬಿಟ್ಟು ಮತ್ತೊಬ್ರು ಇರೋಕೇ ಸಾಧ್ಯ ಇಲ್ಲ ಅಂತ ಭಾವನೆ ಬಂದಿರಬೋದು. ಆದ್ರೆ ಒಂದು ಸಲ ಒಡೆದ ಹೃದಯ ಮತ್ತೆ ಸೇರೋಲ್ಲ ಅಂತ ನಾವು ಒಪ್ಪಿಕೊಂಡ್ರೆ ನೆಮ್ಮದಿಯಾಗಿರಬೋದು. ಯಾಕೆ ಅನ್ನೋಕೆ ಇಲ್ಲಿದೆ ನೋಡಿ ಕಾರಣ.

1. ನಿಮ್ಮನ್ನ ಬಿಡಲೇಬೇಕು ಅನ್ನೋ ತೀರ್ಮಾನಕ್ಕೆ ಬಂದ ಮೇಲೆ, ಮಾತಾಡಿ ಪ್ರಯೋಜನ ಇಲ್ಲ.

assets.blog.bible

ನಿಮ್ಮ ಮಾತು, ಮನಸು ಅರ್ಥ ಮಾಡ್ಕೊಳ್ಳೋಕೆ ಅವರಿಗೆ ಇಷ್ಟ ಇಲ್ಲದಿರುವಾಗ, ನಿಮ್ಮ ಪ್ರಯತ್ನಕ್ಕೆ ಅರ್ಥ ಇರಲ್ಲ. ಸುಮ್ಮನೆ ಮಾತಾಡಿದ್ರೆ, ನಿಮಗೇ ನೋವು ಜಾಸ್ತಿ. ಅವಮಾನ, ದುಃಖ, ನಿರಾಸೆ ಹೆಚ್ಚಾಗತ್ತೆ ಹೊರತು ಕಮ್ಮಿ ಆಗಲ್ಲ. ಹಾಗಾಗಿ ಮಾತಾಡಿ ನೀವೇ ಕೀಳಾಗಬೇಡಿ.

2. ನಿಮ್ಮ ಸ್ವಾಭಿಮಾನಕ್ಕಿಂತ ಹಳಸಲು ಸಂಬಂಧ ಮುಖ್ಯ ಅಲ್ಲ.

psychologyandi.com

ಅವರನ್ನ ಕಾಡಿ ಬೇಡಿ ಅತ್ತರೆ, ನಿಮ್ಮ ಗೌರವಕ್ಕೆ ಕಡಿಮೆ. ಯಾಕಂದ್ರೆ, ನಿಮ್ಮ ಮೇಲೆ ಅವರಿಗೆ ಗೌರವ ಇದ್ದಿದ್ರೆ, ಖಂಡಿತ ಬಿಟ್ಟು ಹೋಗ್ತಿರಲಿಲ್ಲ. ಸ್ವಾಭಿಮಾನ ಬಿಟ್ಟು ಅವರ ಮುಂದೆ ಅಂಗಲಾಚೋದ್ರಿಂದ, ನಿಮ್ಮ ಘನತೆ ನೀವೇ ಹಾಳು ಮಾಡ್ಕೋತೀರಿ. ಹೋದ್ರೆ, ಕತ್ತೆ ಬಾಲ ಕುದುರೆ ಜುಟ್ಟು ಅನ್ಕೊಂಡು ಸುಮ್ಮನಾಗಿ.

3. ಅವರ ಜೊತೆ ಜಗಳ ಆಡಿದ್ರೆ ಸಮಯ ದಂಡ.

http://www.fakingnews.firstpost.com/fnimages/

ಟ್ರೈನ್ ಹೋದ ಮೇಲೆ ಟಿಕೆಟ್ ತೊಗೊಂಡು ಏನು ಪ್ರಯೋಜನ? ಜಗಳ ಆಡಿ, ರಂಪ ಮಾಡಿ ಮಯರ್ಾದೆ ಹರಾಜಾಕೊಳ್ಳೋಕಿಂತ, ಮೌನವಾಗಿರೋದು ಒಳ್ಳೇದು. ಸುಮ್ಮನೆ ಮುಖ ಮುರ್ಕೊಂಡ ಸಂಬಂಧ ಸರಿ ಮಾಡೋ ಸಾಹಸ ಮಾಡಬೇಡಿ. ಅದು ಆಗದ ಕೆಲಸ.

4. ಎಲ್ಲಾ ನಿಮ್ಮ ತಪ್ಪು ಅನ್ಕೋಬೇಡಿ. ಅವರ ಯೋಗ್ಯತೆ ಅವರು ತೋರಿಸಿದ್ರು ಅಂತ ತಿಳ್ಕೊಳ್ಳಿ.

http://www.enews.sg/wp-content/uploads/1200x600-1024x512.jpg

ನಿಮ್ಮನ್ನ ನೀವೇ ಬೈಕೊಳ್ಳೋದು ಸರಿ ಅಲ್ಲ. ಅಷ್ಟಕ್ಕೂ ಅವರ ಬುದ್ಧಿಗೆ ನೀವು ಯಾಕೆ ಹೊಣೆ ಆಗ್ತೀರ? ಕಾಲ ಎಲ್ಲಾ ಮರಸತ್ತೆ. ನಿಮ್ಮನ್ನ ಕ್ಷಮಿಸಿ. ಅವರನ್ನ ಮರೆತುಬಿಡಿ.

5. ನಾನೆಲ್ಲಿ ಎಡವಿದೆ ಅಂತ ಯೋಚನೆ ಮಾಡಿ ಅರ್ಥ ಇಲ್ಲ.

cdn.psychologytoday.com

ಮುಂಚೇನೇ ಹೇಳಿದ ಹಾಗೆ, ಆದ ಪ್ರತಿ ತಪ್ಪಿಗೂ ನೀವೇ ಹೊಣೆ ಅಲ್ಲ. ಕೆಲವೊಂದು ಜೀವನದಲ್ಲಿ ನಡೆಯತ್ತೆ. ಬಂದದ್ದೆಲ್ಲಾ ಬರಲಿ. ಗೋವಿಂದನ ದಯೆ ಇರಲಿ ಅಂತ ಮುಂದೆ ಹೋಗಬೇಕು. ಇದನ್ನೇ ಹಿಡಕೊಂಡು ಯೋಚನೆ ಮಾಡಿದ್ರೆ, ಹೋದವರು ವಾಪಸ್ಸು ಬರಲ್ಲ.

ಇಷ್ಟು ಕಾರಣ ಸಾಕು. ಇದ್ರಲ್ಲಿ ಒಂದನ್ನ ನೀವು ಮನಸಾರೆ ಅರ್ಥ ಮಾಡ್ಕೊಂಡ್ರೂ ಅವರ ಕಾಲಿಗೆ ಬೀಳೋ ತಪ್ಪು ಮಾಡಲ್ಲ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಲೈಫಲ್ಲಿ ಉದ್ಧಾರ ಆಗಬೇಕಾದ್ರೆ ಈ 10 ಕುಂಟು ನೆಪಗಳ್ನ ಇವತ್ತೇ ಅಲ್ಲ ಈಗಲೇ ಬಿಟ್ಟುಬಿಡಿ

ಆಗದು ಎಂದು ಕೈಕಟ್ಟಿ ಕುಳಿತರೆ...

ನೆಪ

ಕೆಲ್ವೊಂದ್ ಸಲ ಏನಾದ್ರೂ ಕೆಲ್ಸ ಮಾಡಕ್ಕಾಗ್ದೇ ಹೋದ್ರೆ ಯಾಕ್ ಮಾಡಕ್ಕಾಗ್ಲಿಲ್ಲ ಅಂತ ನೆಪ ಹೇಳ್ತಿರ್ತೀವಿ. ಅದ್ರಲ್ಲಿ ಕೆಲವು ನಿಜವಾದ ಕಾರಣಗಳೇ ಆಗಿದ್ರೂ ತುಂಬಾ ಸಲ ನಾವ್ ಹೇಳೋದು ಕುಂಟು ನೆಪಗಳೇ... ದೊಡ್ಡ ಸಾಧನೆ ಮಾಡ್ತಿನಿ ಅನ್ನೋರು ಈ ಥರ ನೆಪ ಹೇಳ್ಕೊಂಡು ಕೂತ್ರೆ ಆಗಲ್ಲ. ಇಲ್ನೋಡೀ ಕೆಲವು ನೆಪಗಳು ಇಲ್ಲಿವೆ... 

1. "ನನ್ ಕೈಲಾಗಲ್ಲ"

ಕೆಲ್ವೊಂದ್ ಸಲ ಸರಿಯಾದ ಪ್ರಯತ್ನ ಮಾಡ್ದೇನೆ "ಇದಾಗಲ್ಲ... ಅದಾಗಲ್ಲ..." ಅಂತ ಮಾತಾಡ್ತೀವಿ. ಈ ಥರ ಮಾಡೋದ್ರಿಂದ ಹಿಂದೆಂದೂ ಯಾರೂ ಮಾಡಿಲ್ದೇ ಇರೋ ಸಾಧನೇನ ನಾವು ಮಾಡೋ ಅವಕಾಶಾನ ನಾವ್ ಕಳ್ಕೋತೀವಿ.

2. "ನಾನ್ ಜಾಸ್ತಿ ಓದಿಲ್ಲ, ಅದಕ್ಕೇ ನಂಗೆ ಬೆಲೆ ಇಲ್ಲ..."

ಓದು ಜೀವನಕ್ಕೆ ತುಂಬಾ ಮುಖ್ಯ, ನಿಜ. ಆದ್ರೆ ಹೆಚ್ಚಿಗೆ ಅದಿಲ್ದೇ ಹೋದ್ರೆ ಏನೂ ಸಾದ್ಸಕ್ಕಾಗಲ್ಲ ಅನ್ನೋದು ಸುಳ್ಳು. ಸಮಾಜದಲ್ಲಿ ಹೆಚ್ಚಿಗೆ ಓದಿಲ್ಲದವರೂ ಸಾದ್ಸೋ ಅಂತಾದ್ದು ಬೇಕಾದಷ್ಟಿದೆ. ಹಾಗ್ ನೋಡಿದ್ರೆ ಹೆಚ್ಚಾಗಿ ಓದ್ದೇ ಇರೋರೇ ದೊಡ್ ದೊಡ್ ಸಾಧನೆಗಳನ್ನ ಮಾಡಿರೋ ಉದಾಹರಣೆಗಳು ಬೇಕಾದಷ್ಟಿವೆ. 

3. "ನಾನೇನಕ್ಕೂ ಪ್ರಯೋಜನ ಇಲ್ಲ..."

ತುಂಬಾ ಜನ್ರು ಈಥರ ಔರೌರಿಗೇ ಏನೋ ಹೇಳ್ಕೊಂಡು ಏನೂ ಮಾಡಲ್ಲ. ಇನ್ ಕೆಲುವ್ರು ಅಂಗವಿಕಲತೇನೋ ಇನ್ಯಾವ್ದೇ ಸಮಸ್ಯೆಗೋ ಸಿಕ್ಕಿ ಈ ಥರ ಮನಸ್ಸು ಮಾಡ್ಕೊಂಡಿರ್ಬೋದು. ಆದ್ರೆ ಒಂದ್ ವಿಷ್ಯ ನೆನಪಿಟ್ಕೊಳಿ. ಹುಟ್ತಾನೇ ಯಾರೂ ಯಾವುದ್ರಲ್ಲೂ ಪಂಟ್ರಾಗಿರಲ್ಲ. ಕೆಲ್ಸ ಮಾಡ್ತಾ ಮಾಡ್ತಾ ಎಲ್ರೂ ಕಲೀತಿವಿ, ಹಾಗೇ ಬೆಳೀತೀವಿ. ನೀಮ್ಮನ್ನ ಜಗತ್ತು ಕೈಲಾಗದೋರು ಅಂದ್ಕೊಂಡಷ್ಟೂ ನಿಮ್ಗೇ ಒಳ್ಳೇದು. ಯಾಕಂದ್ರೆ ನಿಮ್ಮಿಂದ ಅವರ ನಿರೀಕ್ಷೆ ಕಮ್ಮೀನೇ ಇರುತ್ತೆ. ಆಗ ನೀವಿಡೋ ಚಿಕ್ಕ ಚಿಕ್ಕ ಹೆಜ್ಜೇನೂ ಜಗತ್ತಿನ ಪಾಲಿಗೆ ದೊಡ್ಡದೇ ಆಗಿರುತ್ತೆ.

4."ನನ್ನತ್ರ ದುಡ್ಡಿಲ್ಲ.. ಅದಕ್ಕೇ ಏನೂ ಮಾಡಕ್ಕಾಗ್ತಿಲ್ಲ..."

ಸಮಾಜದಲ್ಲಿ ತುಂಬಾ ಜನ ದುಡ್ಡಿಲ್ದೇ ಇರೋರು ಇದಾರೆ. ಆದ್ರೆ ಎಲ್ಲಾರೂ ಹೀಗೇ ಹೇಳ್ಕೊಂಡು ಕೂತಿರಕ್ಕಾಗಲ್ಲ. ಏನಾದ್ರೂ ಸಣ್ಣಾಪುಟ್ಟ ಕೆಲ್ಸ ಮಾಡ್ಕೊಂಡು ನಿಮ್ ಸಾಧನೆಗೆ ಬೇಕಾದ್ ದುಡ್ಡನ್ನ ಕೂಡಿಡಿ, ಎಷ್ಟೊರ್ಷ್ ಹೀಗೆ ನೆಪ ಹೇಳ್ತಿರೀರಿ?

5. "ನೋಡ್ದೋರ್ ಏನನ್ಕೋತಾರೋ...!?"

ನೀವೇನಾದ್ರೂ ದೊಡ್ಡ ಸಾಧನೆ ಮಾಡ್ಬೇಕು ಅಂತಿದ್ರೆ, ಅವ್ರಿವ್ರು ಏನನ್ಕೋತಾರೋ ಅನ್ನೋದನ್ನ ತಲೆಯಿಂದ ಮೊದ್ಲು ತೆಗೆದಾಕಿ. ಯಾರೂ ಏನೂ ಅನ್ಕೊಳಲ್ಲ. ಅದನ್ನೇ ನೆಪ ಮಾಡ್ಕೊಬೇಡಿ. ಅದೂ ಅಲ್ದೇ ನಿಮ್ ಲೈಫಲ್ಲಿ ಏನ್ ನಡೀತಿದೆ ಅಂತ ನೋಡ್ಕೊಂಡು ಕೂತ್ಕೊಳೋವಷ್ಟು ಟೈಮು ಯಾರ್ಗೂ ಇರಲ್ಲ. ಎಲ್ಲಾರೂ ಔರೌರ್ ಕೆಲಸ್ದಲ್ಲಿ ಬಿಜಿ ಇರ್ತಾರೆ. ಇಷ್ಟಕ್ಕೂ ಯಾರಾದ್ರೂ ಏನಾದ್ರೂ ಅನ್ಕೋತಿದ್ರೆ ಅದು ಸೊಲ್ಪ ದಿನ ಮಾತ್ರ. ನೀವು ದೊಡ್ಡದೇನಾದ್ರೂ ಸಾಧಿಸ್ದಾಗ ಎಲ್ಲಾ ಮರ್ತೋಗತ್ತೆ.

6."ನನ್ ಹಣೇಬರ ಸರಿಯಿಲ್ಲ..."

ನಿಮ್ಮ ತಯಾರಿ ಮತ್ತು ಅವಕಾಶ ಎರಡೂ ಸೇರಿ ಅದೃಷ್ಟ ಅನ್ನುಸ್ಕೊಳೋದು. ನಿಮ್ಮ ತಯಾರಿ ನೀವ್ ಬಿಡ್ದೇ ಮಾಡ್ಕೊಳಿ. ಅವಕಾಶ ಹುಡುಕ್ತಾ ಇರಿ. ಅವೆರಡೂ ಸೇರ್ತಿದ್ದಂಗೆ ನಿಮ್ ಹಣೆಬರಹ ಸರಿಹೋಗುತ್ತೆ. ಲಕ್ಕಿದ್ರೆ ಎಲ್ಲಾ ಆಗೋಗುತ್ತೆ ಅನ್ನಕ್ಕೆ ಯಶಸ್ಸು ಅನ್ನೊದು ಜೂಜಾಟ ಅಲ್ಲ. ಅದನ್ನ ಬೆವರು ಸುರಿಸಿ ಪಡ್ಕೋಬೇಕು, ಆಗ್ಲೇ ಅದು ಸಾಧನೆ ಅನ್ನಿಸ್ಕೊಳ್ಳೋದು.

7. "ನಾನಿರೋದೇ ಹೀಗೆ, ನನ್ನ ನ್ನಾನು ಬದಲಾಯಿಸ್ಕೊಳಕ್ಕಾಗಲ್ಲ..."

ಯಾಕಾಗಲ್ಲ? ಬದಲಾವಣೆ ಅನ್ನೊದು ಎಲ್ಲಾ ಕಡೆ ಎಲ್ಲಾರಲ್ಲೂ ಆಗ್ತಾನೇ ಇರುತ್ತೆ. ಕಾಲಕ್ಕೆ ತಕ್ಕಂತೆ ಬದಲಾಗದೇ ಇರೋರಿಗೆ ಜಗತ್ತಲ್ಲಿ ಜಾಗ ಇಲ್ಲ - ನೆನಪಿರ್ಲಿ.

8. "ಮನೇಲಿ ಮದ್ವೆ ಮಾಡ್ಕೋ ಅಂತಿದ್ದಾರೆ, ಮದ್ವೆ ಆದ್ರೆ ಸಾಧನೆ ಮಾಡಕ್ ಆಗಲ್ಲ..."

ಲೈಫಲ್ಲಿ ಬರೋ ಎಷ್ಟೋ ಮೈಲಿಗಲ್ಲುಗಳ ಥರ ಮದುವೆನೂ ಒಂದು. ನೀವು ದೊಡ್ಡ ಸಾಧನೆ ಏನಾದ್ರು ಮಾಡ್ಬೇಕು ಅಂತಿದ್ರೆ, ನೀವು ಮದುವೆ ಆಗ್ತಿರೋ ಹುಡುಗ/ಹುಡುಗಿ ಜೊತೆ ಅದರ ಬಗ್ಗೆ ಚರ್ಚೆ ಮಾಡಿ ಔರ ಸಪೋರ್ಟ್ ತಗೊಳ್ಳಿ. ನಿಮಗೆ ನಿಮ್ಮ ಸಾಧನೆ ಎಷ್ಟು ಮುಖ್ಯ ಅನ್ನೋದನ್ನ ಹೇಳಿ. ಅವರ ಬೆಂಬಲಾನೂ ನಿಮಿಗ್ ಸಿಗುತ್ತೆ. ಅದನ್ ಬಿಟ್ಟು ಮದುವೆ ಆಗ್ತಿರೋದ್ರಿಂದ ಅದಾಗಲ್ಲ ಇದಾಗಲ್ಲ ಅನ್ನೋ ನೆಪ ಬೇಡ.

9. "ನಂಗ್ ವಯಸ್ಸಾಯ್ತು, ಇನ್ನೇನ್ ಸಾಧನೆ ಮಾಡ್ಲಿ?"

ನಿಮಿಗ್ ಗೊತ್ತಾ ಕರ್ನಲ್ ಸ್ಯಾಂಡರ್ಸ್ ಅನ್ನೋನು ಔನ್ಗೆ 62 ವರ್ಷ ಆಗಿದ್ದಾಗ  KFC ಅನ್ನೋ ಬ್ರಾಂಡನ್ನ ಶುರು ಮಾಡಿದ್ದು. ನೀವನ್ಕೊಂಡಿದ್ದನ್ನ ಸಾದ್ಸಕ್ಕೆ ಯಾವ್ದೇ ವಯಸ್ಸಿಲ್ಲ. ಮುಂದಕ್ ಓದ್ಬೇಕನ್ಸಿದ್ರೆ ಓದಿ, ಬಿಸಿನೆಸ್ ಶುರು ಮಾಡ್ಬೇಕನ್ಸಿದ್ರೆ ಮಾಡಿ, ಎಷ್ಟೇ ವಯಸ್ಸಾಗಿದ್ರೂ ತಲೆ ಕೆಡಿಸ್ಕೋಬೇಡಿ. 

10. "ಸಿಕ್ಕಾಪಟ್ಟೆ ಬಿಜಿ.. ಟೈಮಿಲ್ಲ..."

ಲೈಫಲ್ಲಿ ನಮಗೆ ನಿಜವಾಗ್ಲೂ ಯಾವುದು ಮುಖ್ಯ ಅನ್ನೊದರ ಪಟ್ಟಿ ಬರ್ಕೊಂಡು ನಮಗೆ ಮುಖ್ಯ ಯಾವ್ದೋ ಅದಕ್ ಮಾತ್ರ ಟೈಂ ಕೊಟ್ರೆ ಎಲ್ಲಾದಕ್ಕೂ ಟೈಂ ಇರುತ್ತೆ. ನಿಮಗೆ ನಿಮ್ಮ ಸಾಧನೆನೇ ಎಲ್ಲದಕ್ಕಿಂತ ಮುಖ್ಯ ಅನ್ನಿಸ್ದಾಗ ಅದಕ್ಕೆ ಟೈಂ ಇದ್ದೇ ಇರುತ್ತೆ. ಟೈಂ ಇಲ್ಲ ಅನ್ನೋ ನೆಪ ಸಲ್ಲ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: