ಸೈಕಾಲಜಿ ಪ್ರಕಾರ ತುಂಬಾ ಹತ್ತಿರದೋರು ಮನಸ್ಸಿಗೆ ನೋವು ಕೊಟ್ಟಾಗ ಕ್ಷಮಿಸೋದು ಹೇಗೆ ತಿಳ್ಕೊಂಡ್ರೆ ಜಾಣರಾಗ್ತೀರಿ

ಹಿಡ್ಕೊಳಕ್ಕೂ ಆಗಲ್ಲ ಬಿಡಕ್ಕೂ ಆಗಲ್ಲ ಅನ್ನೋ ಪರಿಸ್ಥಿತಿ

ನಮ್ಮ ಜೊತೆ ಯಾರೇ ಆಗ್ಲಿ ಸರಿಯಾಗಿ ನಡ್ಕೊಂಡಿಲ್ಲ ಅಂದಾಗ ಮನ್ನಸ್ಸಿಗೆ ತುಂಬಾನೇ ನೋವಾಗುತ್ತೆ.

ಕೆಟ್ಟ ಅನುಭವಗಳು ನಮ್ಮ ಮನಸ್ಸಿನಲ್ಲಿ ತುಂಬಾ ಆಳವಾಗಿ ಬೇರೂರುತ್ತೆ, ಯಾಕೆ ಅಂದ್ರೆ ಈ ಕೆಟ್ಟ ಅನುಭವಗಳ ದೀರ್ಘಾವಧಿಯ ಪರಿಣಾಮ ಕೆಟ್ಟದಾಗಿರುತ್ತೆ. ಅದು ನಮ್ಮ ಮೆದುಳಲ್ಲಿ ಅಚ್ಚಾಗಿ ಉಳಿಯುತ್ತೆ. ಸುಲಭವಾಗಿ ಮರೆಯೋದಕ್ಕಾಗಲ್ಲ. ಉದ್ವೇಗ ನಮ್ಮ ಮನಸ್ಸನ್ನ ತುಂಬಿಕೊಳ್ಳುತ್ತೆ. ಹಾಗಾಗೇ ಯಾವುದೇ ರೀತಿಯ ಕಹಿ ಅನುಭವಗಳು, ಅದರಲ್ಲೂ ನಮ್ಮ ಯಾವ ಘಟನೆಗಳು ನಮ್ಮ ಭಾವನೆಗಳ ಜೊತೆ ಬೆಸೆದಿರುತ್ತೋ ಅದು ನೆನಪಲ್ಲಿ ಇದ್ದೆ ಇರುತ್ತೆ.

ಬೇರೆಯವರಿಂದಾದ ನೋವಿಗೆ ಇರೋ ಒಂದೇ ಒಂದು ಪರಿಹಾರ ಅಂದ್ರೆ ಕ್ಷಮೆ.

ಕ್ಷಮೆ ಅಂದ ಮಾತ್ರಕ್ಕೆ ನೀವು ಎಲ್ಲ ಮರೆತು ಮುಂದುವರಿತೀರಿ ಅಂತಾನೂ ಅಲ್ಲ ಹಾಗೆ ಅವರು ಮಾಡಿರೋ ನೋವಿಂದ ಅವರನ್ನ ಮುಕ್ತಗೊಳಿಸ್ತೀರಿ ಅಂತಾನೂ ಅಲ್ಲ. ಬದಲಿಗೆ ಕ್ಷಮಾಪಣೆ ಅನ್ನೋದು ಆಗಿರೋ ಘಟನೆಗೆ ನಿಮ್ಮನ್ನ ಅಥವಾ ಬೇರೆಯವರನ್ನ ಶಿಕ್ಷೆಗೆ ಗುರಿಪಡಿಸಬೇಕಾ ಅಥವಾ ಸಹಾನುಭೂತಿಯಿಂದ ಬಿಟ್ಟು ಬಿಡಬೇಕಾ ಅನ್ನೋ ಆಯ್ಕೆ ಅಷ್ಟೇ.

thoughtsfreak.files.wordpress.com

ನಮ್ಮನ್ನ ನಾವು ಕ್ಷಮಿಸಿಕೊಳ್ಳೋದಕ್ಕೆ, ಬೇರೆಯವರನ್ನ ಕ್ಷಮಿಸೋದಕ್ಕೆ ಎರಡಕ್ಕೂ ಸಹಾಯ ಮಾಡಕ್ಕೆ ಈ ಕೆಳಗಿನ 10 ಉಪಾಯಗಳ್ನ ನೆನಪಲ್ಲಿಟ್ಕೊಳ್ಳಿ. ನೀವೇ ಜಾಣರಾಗ್ತೀರಿ. ಆಗೋ ಡ್ಯಾಮೇಜ್ ಕಮ್ಮಿಯಾಗತ್ತೆ!

1. ಕ್ಷಮೆ ಅನ್ನೊದು ಎಲ್ಲಾ ಸಂದರ್ಭದಲ್ಲೂ ಸಾಧ್ಯ, ನೆನಪಿರ್ಲಿ

ಯಾರನ್ನಾದ್ರೂ ಕ್ಷಮಿಸಬೇಕು ಅಂದ್ರೆ, ಕ್ಷಮೆ ಸಾಧ್ಯ ಅನ್ನೋದು ಗೊತ್ತಿರಬೇಕು. ಕನಿಷ್ಠ ಪಕ್ಷ ಕ್ಷಮೆ ಅನ್ನೋದು ನಮ್ಮ ತೊಂದರೆಗೆ ಒಂದು ಪರಿಹಾರ ಅನ್ನೋದು ಗೊತ್ತಿರಬೇಕು.

2. ಏನು ಮಾಡಬೇಕು ಅನ್ನೋ ಆಯ್ಕೆ ಬಂದಾಗ, ಕ್ಷಮಿಸಿ

ಕ್ಷಮೆ ಅನ್ನೋದು ಬಲವಂತವಾಗಿ ಬರ್ಬಾರ್ದು, ಅದು ಮನಃಪೂರ್ವಕವಾಗಿ ಬರ್ಬೇಕು. ಕ್ಷಮಿಸಿದ್ದಿವೆ ಅಂದ ಮಾತ್ರಕ್ಕೆ ಅವರು ನೋವು ಮಾಡಿರೋದನ್ನೆಲ್ಲ ಮರೆತು ಮುಂದುವರಿತಿದ್ದೀವಿ ಅಂತ ಅಲ್ಲ. ಇದನ್ನ ಅರ್ಥ ಮಾಡ್ಕೊಂಡು ಕ್ಷಮಿಸಿದರೆ ನಿಮ್ಮ ಮನಸ್ಸಿನಲ್ಲಿ ಒಳ್ಳೆ ಭಾವನೆಗಳು ಬೆಳೆಯುತ್ತೆ. ಅಷ್ಟೇ ಅಲ್ಲ ನಾವು ಕ್ಸಮಿಸಿದ್ದು ಒಳ್ಳೇದೇ ಅಂತ ಅನ್ನಿಸೋಹಾಗೂ ಮಾಡುತ್ತೆ.

3. ನೋವಿಗೆ ಕಾರಣರಾದವರ ಪಟ್ಟಿ ಮಾಡಿ, ಕಮ್ಮಿ ನೋವು ಕೊಟ್ಟವರನ್ನ ಮೊದ್ಲು ಕ್ಷಮಿಸಿ

ಚಿಕ್ಕವಯಸ್ಸಿನಿಂದನೂ ನಿಮಗೆ ನೋವು ಕೊಟ್ಟವರ ಪಟ್ಟಿ ಮಾಡ್ಕೊಳಿ. ಆಮೇಲೆ ನಿಮಗೆ ಯಾರು ತುಂಬಾ ಹೆಚ್ಚು ನೋವು ಕೊಟ್ರೋ ಅವರನ್ನು 1, 2 ಅಂತ ಸ್ಥಾನಮಾನ ಕೊಡ್ತಾ ಬನ್ನಿ.

ನಿಮಗೆ ತುಂಬಾ ಕಮ್ಮಿ ನೋವು ಕೊಟ್ಟವರನ್ನ ಮೊದಲು ಕ್ಷಮಿಸಿ ಆಮೇಲೆ ಮುಂದುವರೀರಿ. ನಿಮ್ಮ ಭಾವನೆಗಳು ಇದಕ್ಕೆ ಹೊಂದಿಕೊಳ್ಳೋದಕ್ಕೆ  ಸ್ವಲ್ಪ ಟೈಮ್ ಕೊಡಿ.

ಆಮೇಲೆ ನಿಮ್ಮ ಪಟ್ಟಿಯಲ್ಲಿ ಕೊನೆಯಿಂದ 2 ಸ್ಥಾನ ಪಡೆದವರನ್ನ ಕ್ಷಮಿಸೋದಕ್ಕೆ ಮುಂದುವರೀರಿ.

webservicesct.com

4. ಕೋಪ ತಡ್ಕೊಬೇಡಿ, ಹೊರಕ್ಕೆ ಹಾಕಿ

ಇದು ಒಂದುತರ ಚೆಕ್ಲಿಸ್ಟ್ ಇದ್ದಹಾಗೆ. ಕೋಪ ಬಂದಾಗ ನೀವು ಹೇಗಿರ್ತೀರಿ? ಕೋಪ ಬಂದಾಗ ಅದನ್ನ ಹೇಗೆ ಕಂಟ್ರೋಲ್ ಮಾಡ್ಕೋತೀರಿ? ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಕೋಪ ಬಂತಾ? ಕೋಪ ಬಂದಾಗ ನಿಮ್ಮಲ್ಲಿ ಏನು ದೈಹಿಕ ಬದಲಾವಣೆ ಆಯ್ತು ?

ಒಂದುಸಲ ನೀವು ನಿಮ್ಮ ಕೋಪದಿಂದ ಆಗೋ ಪರಿಣಾಮದ ಬಗ್ಗೆ ಯೋಚನೆ ಮಾಡಿದ್ರೆ ಸಾಕು, ಕೋಪ ಒಳ್ಳೇದಾ ಅಲ್ವಾ? ನೀವು ಕೋಪ ಬಿಡ್ಬೇಕಾ ಬೇಡ್ವಾ ಅನ್ನೋದು ಅರ್ಥ ಆಗುತ್ತೆ.

5. ಮಾತಿಗೆ ತಕ್ಕಂತೆ ನಡ್ಕೊಳಿ

ಈ ಮೇಲಿನ ಹಂತ ದಾಟಿದ ಮೇಲೆ ನೀವು ಕ್ಷಮಿಸೋದಕ್ಕೆ ರೆಡಿ ಆಗ್ಬೇಕು. ತುಂಬಾ ಜನಕ್ಕೆ ಈ ಹಂತ ದಾಟಿದಮೇಲೆ ಕೋಪದಿಂದ ಎಷ್ಟು ದುಃಖ ಆಗಿತ್ತು, ಈಗ ಕ್ಷಮಿಸೋದ್ರಿಂದ ಏನು ಬದಲಾವಣೆ ಆಗುತ್ತೆ ನೋಡೋಣ ಅಂತ ಅನ್ಸೇ ಅನ್ಸುತ್ತೆ.

6. ಬೇರೆಯವರನ್ನೂ ಲೆಕ್ಕಕ್ಕೆ ಇಟ್ಕೊಳಿ.

ನಿಜವಾದ ಕ್ಷಮಿಸೋ ಕೆಲಸ ಇಲ್ಲೇ ಶುರು ಆಗೋದು. ಯಾಕೆ ಅಂದ್ರೆ ಇಲ್ಲಿ ನೀವು ಬೇರೆಯವರನ್ನ ನೋಡೋ ರೀತೀನೇ ಬದಲಾಗುತ್ತೆ. ಅವರಿಗೆ ಏನಾದ್ರು ನೋವು, ಬೇಜಾರು ಆಗಿತ್ತಾ? ಅದಕ್ಕೆ ಅವರು ನಿಮಗೆ ನೋವಾಗೋ ಹಾಗೆ ನಡೆದುಕೊಂಡ್ರ? ಈ ಎಲ್ಲ ವಿಷಯಗಳನ್ನ ಯೋಚಿಸಬೇಕಾಗುತ್ತೆ.

rd.com

7. ಮನುಷ್ಯತ್ವಕ್ಕೆ , ಬೇರೆಯವರ ವ್ಯಕ್ತಿತ್ವಕ್ಕೆ ಗೌರವ ಕೊಡಿ.

ಎಲ್ಲರೂ ಹುಟ್ಟಿದ್ದೀವಿ, ಎಲ್ಲರೂ ಒಂದಲ್ಲ ಒಂದು ದಿನ ಸಾಯ್ತೀವಿ, ಪೆಟ್ಟಾದ್ರೆ ನಮಗೂ ರಕ್ತ ಬರುತ್ತೆ, ಬೇರೆಯವರಿಗೂ ರಕ್ತ ಬರುತ್ತೆ. ಇಬ್ಬರ  ಡಿಎನ್ಎ ಬೇರೆ ಇರುತ್ತೆ. ನಾವು ಸತ್ತಮೇಲೆ ನಮ್ಮ ತರಾನೇ ಮತ್ತೊಬ್ರು ಹುಟ್ಟೋದಿಲ್ಲ. ನಿಮ್ಮ ಮತ್ತು ಅವರ ವ್ಯಕ್ತಿತ್ವ, ವಿಶೇಷತೆ, ಎಲ್ಲ ಬೇರೆ ಬೇರೆ ಇರುತ್ತೆ. ನಿಮ್ಮ ಹಾಗೆ ಅವರನ್ನೂ, ಅವರಲ್ಲಿರೋ ಗುಣಾನೂ, ವ್ಯಕ್ತಿತ್ವಾನೂ ಬೇರೆ ಯಾರೂ ತುಂಬಕ್ಕೆ ಆಗದೆ ಇರೋದು ಅನ್ನೋದು ಗಮನದಲ್ಲಿ ಇರ್ಲಿ.

8. ಮನಸ್ಸು ಹಗುರ ಮಾಡ್ಕೊಳಿ.

ಗೊತ್ತಿದ್ದೋ ಗೊತ್ತಿಲ್ದೇನೂ ನಿಮಗೆ ಬೇರೆಯವರಿಂದ ನೋವಾಗಿದ್ರೆ ನಿಮ್ಮ ಮನಸ್ಸು ಆ ನೋವಿಂದ ಕಲ್ಲಾಗಿರುತ್ತೆ. ಆದ್ರೆ ಕ್ಷಮಿಸೋದ್ರಿಂದ, ಕೆಟ್ಟ ಕೋಪದಿಂದ ನಿಮ್ಮ ಮೇಲೆ, ನಿಮ್ಮ ಮನಸ್ಸಿನ ಮೇಲೆ ಆಗೋ ಕೆಟ್ಟ ಪರಿಣಾಮ ತಪ್ಪುತ್ತೆ. ಕೋಪ, ನೋವು ಕಮ್ಮಿಯಾಗಿ ಮನಸ್ಸು ಹಗುರ ಆಗುತ್ತೆ.

9. ನೋವನ್ನ ನುಂಗಿಬಿಡಿ.

ಬೇಜಾರಾದಾಗ ಕಠಿಣ ಭಾವನೆಗಳು ಬರೋದು ಸಹಜ. ಏನೇ ಆಗಿದ್ರೂ ಕ್ಷಮಿಸಬೇಕು ಅಂದಾಗ ನೋವೂ ಆಗುತ್ತೆ. ಆದ್ರೆ ಈ ನೋವನ್ನ ನುಂಗೋದ್ರಿಂದ ನಾವು ಮುಂದುವರಿಯೋದಕ್ಕೆ ಸಹಾಯ ಆಗುತ್ತೆ.

ನಮಗೆ ಯಾರು ನೋವೂ ಕೊಟ್ರೋ ಅವರಿಗೆ ನೋವೂ ಕೊಡದೆ ಇರೋದು, ನಮ್ಮಲ್ಲಿ ಮನುಷ್ಯತ್ವನೆ ಇಲ್ಲ ಅಂದುಕೊಂಡವರಲ್ಲಿ ನಾವು ಮನುಷ್ಯತ್ವ ಗುರುತಿಸ್ತಾ ಇದ್ದಿವಿ ಅಂದ್ರೆ, ಯಾರಿಗೆ ನಮ್ಮ ಬಗ್ಗೆ ಮೃದು ಭಾವನೆ ಇರಲಿಲ್ವೋ ಅವರಿಗೆ ನಾವು ಮೃದುಭಾವನೆ ತೋರಿಸ್ತಿದ್ದೀವಿ ಅಂದ್ರೆ ನಾವು ಯಾರು? ಖಂಡಿತವಾಗಿಯೂ ನಾವು ಅಂದುಕೊಂಡಿದ್ದಕ್ಕಿಂತಾನೂ ಹೆಚ್ಚು ಗಟ್ಟಿ ಮನಸ್ಸು, ಹೆಚ್ಚು ಆತ್ಮ ವಿಶ್ವಾಸ ಇರೋವ್ರು.

https://228main.files.wordpress.com/2017/06/canstockphoto16671762.jpg?w=620

10. ಮನಸ್ಸು ಗಟ್ಟಿಯಾಗುತ್ತೆ ಸಂತೋಷಾನೂ ಸಿಗುತ್ತೆ.

ನೋವಾಗಿರೋವ್ರು ಅದೇ ರೀತಿ ಇರೋವ್ರನ್ನ ನೋಡಿದಾಗ ತುಂಬಾ ಹತ್ತಿರ ಆಗ್ತಾರೆ. ತಮ್ಮ ಸುತ್ತ ಮುತ್ತ ಅಂತದೇ ಜನ ಇದ್ದಾರೆ ಅಂತ ಗೊತ್ತಾದಾಗ ಅವರಿಗೆ ಸಮಾಧಾನ ಹೇಳೋ ಪ್ರಯತ್ನ ಮಾಡ್ತಾರೆ. ಆಗಿರೋ ನೋವೂ ಮರೆಯೋದಕ್ಕೆ ತುಂಬಾನೇ ಸಮಯ ಬೇಕಾಗುತ್ತೆ, ಆದ್ರೆ ದಿನ ಕೆಳೆದಹಾಗೆ ನಿಮ್ಮ ಮನಸ್ಸು ಗಟ್ಟಿಯಾಗುತ್ತೆ, ಸಂತೋಷಾನೂ ಸಿಗುತ್ತೆ.

11. ರಿಪೀಟ್ ಮಾಡಿ.

ನೀವು ಮಾಡಿರೋ ಪಟ್ಟಿ ನೆನಪಿದೆ ಅಲ್ವಾ, ಈಗ ನೀವು ತುಂಬಾ ಕಮ್ಮಿ ನೋವು ಮಾಡಿರೋವ್ರನ್ನ ಕ್ಷಮಿಸಿ ಆಮೇಲೆ ಅವರಿಗಿಂತ ಮೇಲಿರೋವ್ರನ್ನ ಹೀಗೆ ಸೆಲೆಕ್ಟ್ ಮಾಡ್ಕೊಂಡು ಅವರನ್ನ ಕ್ಷಮಿಸೋದನ್ನ ರಿಪೀಟ್ ಮಾಡ್ತಾ ಇರಿ. ಹೀಗೆ ಮಾಡ್ತಾ ಮಾಡ್ತಾ ನಿಮ್ಮ ಪಟ್ಟಿಯಲ್ಲಿ ಇನ್ನು ಯಾರೂ ಇರೋದಿಲ್ಲ.

ನೀವು ಅಂದುಕೊಂಡಿದ್ದಕ್ಕಿಂತ ಬೇಗಾನೆ ನೀವು ನಿಮಗೆ ನೋವು ಕೊಟ್ಟವರನ್ನ ಕ್ಷಮಿಸಿರ್ತೀರಿ. ಒಳ್ಳೆಯ, ಸಂತೋಷದ ಸಾರ್ಥಕ ಜೀವನ ನಡೆಸ್ತಿರ್ತೀರಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಹುಟ್ಟಿದ ದಿನದ ಪ್ರಕಾರ ಯಾವ ತರದ ಉದ್ಯೋಗ ಮಾಡಿದ್ರೆ ನಿಮಗೆ ಸರಿಹೋಗತ್ತೆ ಅಂತ ತಿಳ್ಕೊಳಿ

ಆ ತರ ಮಾಡಿದ್ರೆ ಸಲೀಸು ಇಲ್ಲಾಂದ್ರೆ ತುಂಬಾ ಕಷ್ಟ ಅನ್ಸತ್ತೆ

ಎಲ್ಲೋ ಮನುಷ್ಯನಿಗೂ ಅವನು ಹುಟ್ಟಿದ ಸಮಯ್, ದಿನ ಘಳಿಗೆ, ಅವನು ಮಾಡೋ ಕೆಲಸ ಎಲ್ಲದಕ್ಕೂ ಒಂದು ಲಿಂಕ್ ಇದೆ ಅಂತ ಅನ್ಸಲ್ವಾ? ಖಂಡಿತ ಇದ್ದೆ ಇದೆ. ಕೆಲವೊಮ್ಮೆ ಕೆಲವೊಂದಕ್ಕೆ ಕೈ ಹಾಕಿ ಯಾಕೋ ಅಷ್ಟಾಗಿ ಸರಿ ಹೋಗಿಲ್ಲ ಅಂದಾಗ ನಾವೇ ಅಂದ್ಕೊಂಡಿರಲ್ವ ಯಾಕೋ ಈ ಟೈಮ್, ಈ ನಂಬರ್ ನನಗೆ ಆಗ್ಬರಲ್ಲ ಅಂತ. ಹಾಗೆ ಎಲ್ಲಾದಕ್ಕೂ ಒಂದು ಲಿಂಕ್ ಇದ್ದೆ ಇರತ್ತೆ.

ಹುಟ್ಟಿದ ದಿನದ ಪ್ರಕಾರ ನೀವು ಯಾವ ತರದ ಉದ್ಯೋಗ ಮಾಡಿದ್ರೆ ನಿಮಗೆ ಸರಿಹೋಗತ್ತೆ ಅಂತ ಇವತ್ತು ತಿಳ್ಕೊಳಿ...

1, 10, 19, 28ನೇ ತಾರೀಕು

ನೀವೊಂಥರ ಹುಟ್ಟುತ್ತಾನೆ ನಾಯಕರು. ಯಾವದಕ್ಕೂ ಆಗಲ್ಲ ಅಂತ ಹೇಳದೆ ಇಲ್ಲ. ನೀವು ಸುಲಭವಾಗಿ ರಿಸ್ಕ್ ತೊಗೊಳಕ್ಕೆ ರೆಡಿ ಆಗ್ತೀರಿ. ನಿಮಗೆ ಬಿಸಿನೆಸ್ ಸರಿಯಾದ ಕೆಲಸ. ಅಂಬಾನಿ, ಟಾಟಾ, ಬಿಲ್ ಗೇಟ್ಸ್ ಎಲ್ಲ ಈ ದಿನಾಂಕಕ್ಕೆ ಸೇರಿದೋರು.

images.newindianexpress.com

2, 11, 20, 29

ನೀವು ಕ್ರಿಯೇಟಿವ್ ಜನ. ಕಲೆ, ನೃತ್ಯ, ಆಕ್ಟಿಂಗ್ ಇದ್ರಲ್ಲಿ ನೀವು ಹೋದ್ರೆ ನಿಮಗೆ ಒಳ್ಳೆ ಭವಿಷ್ಯ ಇರತ್ತೆ. ಗಣೇಶ್, ಎಂ.ಪಿ ಶಂಕರ್ ಇವ್ರೆಲ್ಲ ಇದೆ ದಿನಾಂಕಕ್ಕೆ ಸೇರಿದೋರು 

3, 12, 21, 30

ನಿಮಗೆ ಲೆಕ್ಕ ಅಂದ್ರೆ ನೀರ್ ಕುಡಿದಷ್ಟು ಸುಲಭ. ನಿಮಗೆ ಫೈನಾನ್ಸ್, ಬ್ಯಾಂಕ್, ರಿಟೈಲ್ ಕೆಲಸ ಸಿಕ್ಕಾಪಟ್ಟೆ ಸರಿಹೊಂದತ್ತೆ. 

akm-img-a-in.tosshub.com

4, 13, 22, 31

ನಿಮ್ಮದು ಸ್ವಲ್ಪ ವಿಶೇಷವಾದ ವ್ಯಕ್ತಿತ್ವ, ನೀವು ರಿಸ್ಕ್ ತೊಗೊಳಕ್ಕೆ ಹಿಂದೇಟಾಕಲ್ಲ ಆದ್ರೆ ಸುಮಾರ್ ಸತಿ ನಿಮ್ಮ ತಪ್ಪು ನಿರ್ಧಾರದಿಂದ ಒಳ್ಳೆ ಪಾಠ ಕಲಿತೀರಿ. ನಿಮಗೆ ಆಕ್ಟಿಂಗ್, ಕಲೆ ವಿಭಾಗದಲ್ಲಿ ಒಳ್ಳೆ ಬೆಳವಣಿಗೆ ಇರತ್ತೆ  

5, 14, 23

ಒಳ್ಳೆ ಮಾತಾಡ್ತೀರಿ ನೀವು. ಸಿಕ್ಕಾಪಟ್ಟೆ ಹುಮ್ಮಸ್ಸು ನಿಮಗೆ. ಪಟ-ಪಟ ಅಂತ ಮಾತಾಡ್ತೀರಿ. ಶೇರ್ ಮಾರ್ಕೆಟ್, ಮಾರ್ಕೆಟಿಂಗ್, ಸ್ಪೋರ್ಟ್ಸ್ ಕ್ಷೇತ್ರದಲ್ಲಿ ನಿಮಗೆ ಒಳ್ಳೆ ಬೆಳವಣಿಗೆ ಇರತ್ತೆ 

wigzo.com

6, 15, 24

ನಿಮ್ಮ ವ್ಯಕ್ತಿತ್ವ ಹೆಂಗೆ ಅಂದ್ರೆ ಯಾರಾದ್ರೂ ನಿಮ್ಮನ್ನ ನೋಡಿದರೆ "ವಾವ್" ಅಂತ ಅನ್ನದೆ ಸುಮ್ಮನೆ ಇರಲ್ಲ. ನಿಮಗೆ ದೊಡ್ಡ ಹೋಟೆಲ್, ಸಿನೆಮಾ ಕ್ಷೇತ್ರ ಸಕತ್ತಾಗಿ ಹೊಂದಿಕೊಳ್ಳತ್ತೆ.  

7, 16, 25

ನೀವ್ ಸಿಕ್ಕಾಪಟ್ಟೆ ಟಾಲೆಂಟೆಡ್. ನಿಮಗೆ ಸಿಕ್ಕಾಪಟ್ಟೆ ಬುದ್ದಿವಂತಿಕೆ ಇದೆ. ಆದಷ್ಟು ನೀವು ಜಾಸ್ತಿ ಓದಿನ ಕ್ಷೇತ್ರಕ್ಕೆ ಹೋಗ್ಬೇಕು. ರಿಸರ್ಚ್, ವಿಜ್ಞಾನ ಕ್ಷೇತ್ರದಲ್ಲಿ ನಿಮಗೆ ಒಳ್ಳೆ ಬೆಳವಣಿಗೆ ಸಿಗತ್ತೆ 

orwh.od.nih.gov

8, 17, 26

ನಿಮಗೆ ಹೆಚ್ಚು ಕಮ್ಮಿ 35ನೇ ವರ್ಷ ಆಗೋತನಕ ಸ್ವಲ್ಪ ಕಷ್ಟ ಇದ್ದೆ ಇರತ್ತೆ. ನೀವು ಶ್ರಮ ಜೀವಿ ಅದಕ್ಕೆ ನಿಮಗೆ ಯಾವತ್ತೂ ಮೋಸ ಆಗಲ್ಲ, ನಿಧಾನ ಆದ್ರೂ 35ರ ನಂತರ ಗೆದ್ದೇ ಗೆಲ್ತೀರಿ. ರಾಜಕೀಯ, ಕಬ್ಬಿಣದ ಕಾಮಗಾರಿ, ರಿಯಲ್ ಎಸ್ಟೇಟ್ ನಿಮಗೆ ಕೈ ಹಿಡಿಯೋ ಕ್ಷೇತ್ರಗಳು. 

9, 18, 27

ನೀವು ಸಕತ್ ಫಿಟ್. ಸ್ಪೋರ್ಟ್ಸ್ ಕ್ಷೇತ್ರಕ್ಕೆ ಹೋಗಬಹುದು. ಇಲ್ಲ ಅಂತ ಅಂದ್ರೆ ನಿಮಗೆ ಡಿಫೆನ್ಸ್, ಕೆಮಿಕಲ್, ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಸಕತ್ತಾಗಿ ಹೊಂದತ್ತೆ 

blog.playo.co

ನಿಮಗೆ ಸರಿ ಅನ್ನಿಸ್ತಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: