ನಿಮ್ಮ ರಕ್ತದ ಗುಂಪು ಏನೇನ್ ತೀರ್ಮಾನಿಸುತ್ತೆ ಅಂತ ತಿಳ್ಕೊಂಡಿರಿ, ಬೇಕಾಗುತ್ತೆ

ಒಂದು ಹನಿ ರಕ್ತದಲ್ಲಿ ನಿಮ್ಮ ಗುಟ್ಟೆಲ್ಲ ಇದೆ

ರಕ್ತದಲ್ಲಿ ನಾಲ್ಕು ಗುಂಪು ಅನ್ನೋ ವಿಷಯ ಎಲ್ಲರಿಗೂ ಗೊತ್ತೇ ಇದೆ - A, B, AB, O.

ಪ್ರತಿಯೊಂದು ರಕ್ತದ ಗುಂಪಿಗೆ ಅದರದ್ದೇ ಆದ ಗುಣ ಇದೆ. ಕೆಲವೊಂದು ರಕ್ತದ ಗುಂಪಿಗೆ ಇದೇ ತರಹದ ಆಹಾರ ತಗೊಳ್ಳಬೇಕು ಅಂತಿರತ್ತೆ. ಅದರ ವಿರುದ್ದವಾಗಿ ತೊಗೊಂಡ್ರೆ ಜೀವನ ಶೈಲಿಯಲ್ಲಿ ವ್ಯತ್ಯಾಸ ಕಾಣ್ಸತ್ತೆ. ನಿಮ್ಗೇ ಗೊತ್ತಿರಲ್ಲ ನೀವ್ಯಾಕೆ ಆ ರೀತಿ ಆಡ್ತೀರಿ ಅಂತ? ಯಾವ ಯಾವ ರಕ್ತದ ಗುಂಪಿಗೆ ಯಾವ ತರದ ಅಂತ ನೋಡೊಣ...

1) ಇಂಥ ರಕ್ತದ ಗುಂಪಿರೋರು ಇಂಥ ಆಹಾರ ತೊಗೊಬೇಕು ಅಂತ ಇರುತ್ತೆ

"A" ಗುಂಪಿನ ವ್ಯಕ್ತಿಗಳಿಗೆ ಮಾಂಸ ಸೇವನೆ ಒಳ್ಳೆದಲ್ಲ. ಹಣ್ಣು ತರ್ಕಾರಿ (ಸಸ್ಯಹಾರ) ಹೆಚ್ಚು ಉಪಯುಕ್ತ.

"O" ಗುಂಪಿಗೆ ಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್ ಅವಶ್ಯಕತೆ ಇರೋದ್ರಿಂದ ಅವರು ಮೀನು, ಮಾಂಸ ಸೇವನೆ ಮಾಡೋದು ಒಳ್ಳೆದು.

"AB " ಗುಂಪಿನವರಿಗು ಇದು ಅನ್ವಯವಾಗುತ್ತೆ.

"B" ಗುಂಪಿನವರಿಗೆ  ಚಿಕನ್ ಆಗಲ್ವಂತೆ. ಇದರ ಬದಲು ಪೋರ್ಕ್ ತಗೊಳ್ಬೇಕಂತೆ.

lifehealthandbeauty.com

2) ರಕ್ತದ ಗುಂಪಿಗೂ ನಮ್ಮ ಆರೋಗ್ಯಕ್ಕೂ ಸಂಬಂಧ ಇದೆ

ನಮಗೆ ಬರುವಂತಹ ಕಾಯಿಲೆಗಳಿಗೂ ನಮ್ಮ ರಕ್ತದ ಗುಂಪಿಗೂ ಹೆಚ್ಚು / ಕಡಿಮೆ ಒಂದು ರೀತಿ ಸಂಬಂಧ ಇದೆ. ಡಾಕ್ಟರಗಳು ಏನಕ್ಕೂ ರಕ್ತದ ಪರೀಕ್ಷೆ ಮಾಡಿಸಿ ಅಂತಾರೆ. ಆ ಸಮಯದಲ್ಲಿ ಕಾಯಿಲೆಯ ಸ್ವರೂಪ ಹೇಗಿದೆ ಅಂತ ತಿಳ್ಕೋಬೋದು ಅಂತ. 

i.huffpost.com

3) ರಕ್ತದ ಗುಂಪಿಗೂ ನಿಮ್ಮ ಗುಣಕ್ಕೂ ಸಂಬಂಧ ಇದೆ

"O" ರಕ್ತದ ಗುಂಪಿನವರು ಹೆಚ್ಚು ಕ್ರಿಯೇಟಿವ್ ಆಗಿರುತ್ತಾರೆ. ಇವರುಗಳಲ್ಲಿ ಆತ್ಮ ವಿಶ್ವಾಸ ಅಧಿಕವಾಗಿರತ್ತೆ. ಕಮ್ಯುನಿಕೇಶನ್ ( ಸಂವಹನ) ಮಾಡೋದ್ರಲ್ಲಿ ಇವರದು ಎತ್ತಿದ ಕೈ.

" B " ಗುಂಪಿನ ಜನರು ಯಾವುದಾದರು ಒಂದು ವಿಷಯಕ್ಕೆ ಕಮಿಟ್ ಆದರೆ ಮುಗೀತು ಮತ್ತೆ ಏನೇ ಆದ್ರೂ ಅದನ್ನ ಬದಲು ಮಾಡೋದಿಲ್ಲ. ಇವರುಗಳು ತುಂಬಾನೇ ಧೈರ್ಯಶಾಲಿಗಳಾಗಿರುತ್ತಾರೆ.  

"AB" ಗುಂಪಿನವರು ಬಹಳಾನೇ ಅಂತರಮುಖಿಗಳಾಗಿರ್ತಾರೆ ಜೊತೆಗೆ ನಂಬಿಕಸ್ತರು. ಸಹಾನುಭೂತಿಯ ಗುಣ ಇವರಲ್ಲಿ ಎದ್ದು ತೋರುತ್ತೆ. 

articulate-heroes.s3.amazonaws.com

4) ರಕ್ತದ ಗುಂಪಿಗೂ ಒತ್ತಡಕ್ಕೂ ಸಂಬಂಧ ಇದೆ

"O" ರಕ್ತದ ಗುಂಪಿನವರಿಗೆ ಸಿಟ್ಟು ಬೇಗ ಬರತ್ತೆ. ಚಿಕ್ಕ ಚಿಕ್ಕ ವಿಷಯಕ್ಕೆ ಅವರುಗಳು ಕೋಪ ಮಾಡ್ಕೋತಾರೆ. ಇವರು ಮಾನಸಿಕವಾಗಿ ವಿಶ್ರಾಂತಿ ಆಗಬೇಕಾದರೆ ತುಂಬಾ ಸಮಯ ಬೇಕಾಗತ್ತೆ. ಮಾಂಸ ಆಹಾರ ಹೆಚ್ಚಾಗಿ ತೊಗೊಳ್ಳೊರಿಗಂತೂ ಆ ಪ್ರಾಣಿಯ ಗುಣ ಆಹಾರದ ಮೂಲಕ ಇವರನ್ನ ಸಿಟ್ಟು ಮಾಡುವಂತೆ ಮಾಡಿಸುತ್ತೆ.

northamericanpharmacal.com

5) ರಕ್ತದ ಗುಂಪಿಗೂ ಬಸುರಿಯಾಗೋದಕ್ಕೂ ಸಂಬಂಧ ಇದೆ

ರಿಸರ್ಚ್ ಪ್ರಕಾರ ಬಸುರಿಯಾಗೋದು ರಕ್ತದ ಗುಂಪಿನ ಮೇಲೆ ನಿರ್ಧಾರವಾಗತ್ತೆ. ಗರ್ಭಕುಳಿಯನ್ನ ಉತ್ತೇಜಿಸೋ ಹಾರ್ಮೋನು "AB" ಗುಂಪಿನವರಲ್ಲಿ ಕಡಿಮೆ ಇರತ್ತೆ. 

cdn2.stylecraze.com

6) ರಕ್ತದ ಗುಂಪಿಗೂ ಹುಟ್ಟೋ ಮಕ್ಕಳಿಗೂ ಸಂಬಂಧ ಇದೆ

ರಕ್ತದಲ್ಲಿರೋ Rh ಫ್ಯಾಕ್ಟರ್ ಇದನ್ನ ನಿರ್ಧರಿಸುತ್ತೆ. ಇದರಲ್ಲಿ Rh ಪಾಸಿಟಿವ್ ಮತ್ತೆ Rh ನೆಗಟಿವ್ ಎನ್ನುವ ಎರಡು ತರ ಇದೆ. ಪ್ರಪಂಚದ 80% ಜನರು Rh ಪಾಸಿಟಿವ್.

ಒಂದು ವೇಳೆ ತಾಯಿ Rh ನೆಗಟಿವ್ ಇದ್ದು ತಂದೆ Rh ಪಾಸಿಟಿವ್ ಇದ್ದರೆ ಹುಟ್ಟೋ ಮಗು ಜೀವನ ಪರ್ಯಂತ ಕಾಯಿಲೆಗಳಿಂದ ಬಳಲಬೇಕಾಗುತ್ತೆ.

insightiitb.org

7) ನಿಮ್ಮ ದೇಹದ ತೂಕಕ್ಕೂ ರಕ್ತದ ಗುಂಪಿಗೂ ಸಂಬಂಧವಿದೆ

ನೀವು ಅತಿಯಾದ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ರಕ್ತದ ಗುಂಪು ಒಂದು ಕಾರಣ. "O" ಗುಂಪಿನವರಿಗೆ ಈ ಸಮಸ್ಯೆ ಸಾಮಾನ್ಯ. "A" ಗುಂಪಿನವರಲ್ಲಿ ಈ ಸಮಸ್ಯೆ ಅಷ್ಟೊಂದು ಕಾಣಿಸಲ್ಲ.

johnnyoneal.org

8) ನಿಮ್ಮ ದೇಹಕ್ಕೆ ಎಷ್ಟರಮಟ್ಟಿಗೆ ಕಸರತ್ತು ಬೇಕು ಅನ್ನೋದನ್ನೂ ಕೂಡ ರಕ್ತದ ಗುಂಪು ನಿರ್ಧಾರ ಮಾಡತ್ತೆ

ಆರೋಗ್ಯ ಅಂದ್ರೇನು ಅಂತ ಒಂದು ವಾಕ್ಯದಲ್ಲಿ ಹೇಳಬೇಕಂದ್ರೆ " ಒಳ್ಳೆ ಉಸಿರಾಟ ಮತ್ತು ಒಳ್ಳೆ ರಕ್ತ ಸಂಚಾರ". ಒಳ್ಳೆ ರಕ್ತ ಸಂಚಾರ ಆಗಬೇಕಂದ್ರೆ ಉತ್ತಮ ದೈಹಿಕ ಕಸರತ್ತು ಬೇಕು. ಇದು ಎಲ್ಲ ರಕ್ತದ ಗುಂಪಿನವರಿಗೆ ಅನ್ವಯಿಸುತ್ತೆ. ಆದಾಗ್ಯೂ ಕೂಡ  "B" ರಕ್ತದ ಗುಂಪಿನವರು ದೈಹಿಕ ಕಸರತ್ತು ಮಾಡೋದರಲ್ಲಿ ಎಲ್ರುಗಿಂತ ಮುಂದೆ. ಸಾಮಾನ್ಯವಾಗಿ ಕರಾಟೆ, ಟೆನ್ನಿಸ್, ಬೆಟ್ಟ ಹತ್ತೋದು ಇವರ ಮೆಚ್ಚಿನ ಹವ್ಯಾಸ.

mdanderson.org

ನಿಮ್ಮ ರಕ್ತದ ಗುಂಪು ಯಾವುದು ಎನ್ನುವ ಮಾಹಿತಿ ಸಿಗೋ ತರಹ ಏನಾದರೊಂದು ದಾಖಲೆ ಕಿಸೆಯಲ್ಲಿಟ್ಟುಕೊಳ್ಳೋದು ಒಳ್ಳೆದು. ಯಾಕೆಂದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮRh ಫ್ಯಾಕ್ಟರ್ ಅನ್ನ ಪರೀಕ್ಷೆ ಮಾಡ್ತಾ ಕೂರಕ್ಕಾಗಲ್ಲ. ಯಾವುದು ಅಂತಾ ಗೊತ್ತಾದರೆ ಏನಾದರು ಮಾಡಬಹುದು .

2.bp.blogspot.com

ಇಷ್ಟೆಲ್ಲ ಓದಿದ ಮೇಲೆ ಇನ್ನಾದರು ರಕ್ತದ ಗುಂಪು ಯಾವುದು ಅಂತ ಗೊತ್ತಿಲ್ಲದಿದ್ದವರು ಆದಷ್ಟು ಬೇಗ ಮಾಡಿಸಿಕೊಳ್ಳಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಮಕ್ಕಳು ಸ್ಕೂಲಿಗೆ ಹೋಗೇ ಕಲೀಬೇಕೋ ಅಥ್ವಾ ಬೇರೆ ದಾರೀನೂ ಇದ್ಯೊ? ಉತ್ತರ ಇಲ್ಲಿದೆ

ಇತ್ತೀಚೆಗೆ ಚರ್ಚೆ ಆಗ್ತಿರೋ ವಿಷಯ.

ಸಾಮಾನ್ಯವಾಗಿ ಕಲಿಬೇಕು ಅಂದ್ರೆ ಮಕ್ಕಳು ಎಲ್ರ ಥರ ಸ್ಕೂಲ್ಗೆ ಹೋಗ್ಲೇಬೇಕು ಅಂದ್ಕೋತಾರೆ ಅಪ್ಪ-ಅಮ್ಮ. ಆದ್ರೆ, ಮಗು ನಂಗೆ ಎಲ್ಲರ ಥರ ಕಲ್ಯಕ್ ಆಗಲ್ಲ; ನಂಗೆ ಅವ್ರು-ಇವ್ರು ಕಲೀತಾರೆ ನೀನ್ ಮಾತ್ರ ಕಲೀತಿಲ್ಲ ಅಂದ್ರೆ ಕಷ್ಟ ಆಗತ್ತೆ; ಸ್ಕೂಲಲ್ ಕಲ್ಸೋ ಎಷ್ಟೋ ವಿಷಯ ಬೋರ್ ಆಗತ್ತೆ ಅಂದ್ರೆ ಏನ್ ಗತಿ? ಗಾಬರಿ ಆಗ್ಬೇಡಿ, ಅಂಥ  ಮಕ್ಕಳ್ಗಾಗೆ ಸರ್ಕಾರ ಶುರು ಮಾಡಿರೋ ಕಾರ್ಯಕ್ರಮದ ಬಗೆ ತಿಳಿಸ್ತೀವಿ. ಓದಿ...

1) ಮಕ್ಕಳು ಶಾಲೆ ಬಿಡಕ್ಕೆ ದುಡ್ಡೊಂದೇ ಕಾರಣ ಅಲ್ಲ

ತುಂಬಾ ಮಕ್ಕಳು ದುಡ್ಡಿಲ್ದೇನೋ, ಬೇರೆ ಯಾವ್ದೋ ಸಾಮಾಜಿಕ ಕಾರಣಕ್ಕೋ ಸ್ಕೂಲ್ ಬಿಡ್ತಿದ್ದಾರೆ. ಇನ್ನೂ ಕೆಲವ್ರು ಗಣಿತ, ವಿಜ್ಞಾನದಂಥ ಕಡ್ಡಾಯ ವಿಷಯ ಪಾಸಾಗ್ದೆ ಆಚೆ ಹೋಗ್ತಿದ್ದಾರೆ.

https://antekante.com/sites/default/files/images/e2b9befc3c6a3729c61e61487edd402c_1.jpg

2)  ಬಿಟ್ಟ ಮೇಲೆ ಮನಸ್ಸು ಬದ್ಲಾಯ್ತು ಅಂದರೆ ಏನ್ ಮಾಡೋದು ?

ಸ್ಕೂಲ್ ಒಂದ್ ಸರ್ತಿ ಬಿಟ್ಟ ಮೇಲೆ ಮತ್ತೆ ಸೇರ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಹೆಚ್ಚಿನ ಓದಿಗಾಗಿ ಕಾಲೇಜು ಸೇರ್ಕೊಳ್ಳಕ್ಕೆ ಇನ್ನೂ ಪರದಾಡಬೇಕು. ಕೈಕಾಲು, ಆರೋಗ್ಯ ಎಲ್ಲ ಸರಿ ಇದ್ದು, ದುಡ್ಡು ಇದ್ದು, ದೊಡ್ಡ ಊರು ಹತ್ತಿರ ಇದ್ರೆ ಮಾತ್ರ ಹೇಗೋ ಓದು ಮುಗಿಸ್ಬೋದು. ಇಲ್ಲ ಅಂದ್ರೆ ಬೋ ಕಷ್ಟ.

opensocietyfoundations.org

3) ಸ್ಕೂಲ್ಗ್ ಹೋಗಿ ಓದಕ್ಕೆ ಆಗಲ್ಲ ಅನ್ನೋರ್ಗೆ ಅಂತಾನೇ ಸರ್ಕಾರ "ನ್ಯಾಷನಲ್  ಇನ್ಸ್ಟಿಟ್ಯೂಟ್ ಆಫ್  ಓಪನ್ ಸ್ಕೂಲ್" (NIOS) ತೆಗ್ದಿದೆ

ಹೀಗೆ, ಸ್ಕೂಲ್ ಬಿಟ್ಟೋರ್ಗೆ, ಸ್ಕೂಲ್ಗೆ ಸೇರ್ದೆ ಇರೋರ್ಗೆ, ಶಾಲೆಗಿಂತ ಬೇರೆ ರೀತಿ ಓದ್ಗೆ ಅವಕಾಶ ಮಾಡ್ಕೊಡ್ಬೇಕಿತ್ತು. ಇದಕ್ಕಾಗಿ ಓಪನ್ ಸ್ಕೂಲಿಂಗ್ ಎಂಬ ಬೇರೆ ಥರಾ ಕಲಿಸೋ ಯೋಜನೆ ಶುರು ಆಯ್ತು. ಇದೇ ಮುಂದೆ ೨೦೦೨ರಲ್ಲಿ "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್"(NIOS) ಅಂತ ಹೊಸ ಹೆಸ್ರು ತೊಗೋತು.

4) ಬಲವಂತ, ಒತ್ತಾಯ ಇಲ್ದೆ ಈ ಥರ ಕಲಿಯೋದು ಎಷ್ಟು ಆರಾಮ್ ಅಲ್ವ?

ಸುಲಭವಾಗಿ ಅರ್ಥ ಆಗೋ ಅಂತ ರೀತಿ ಮತ್ತು ಒಳ್ಳೇ ಕಲಿಕೆ ಎಲ್ಲಾರ್ಗೂ ಸಿಗ್ಬೇಕು, ಬೇಕಾದೋರ್ಗೆಲ್ಲಾ ತಲುಪಬೇಕು ಅನ್ನೋದೊಂದೇ ಉದ್ದೇಶ. ಪಿ.ಯು.ಸಿ.ವರೆಗೆ ಮಕ್ಕಳು ತಂತಂ ಭಾಷೇಲೇ, ಯಾವುದೇ ಬಲವಂತ, ಒತ್ತಾಯ ಇಲ್ದೆ ಕಲಿಯಕ್ಕೆ ಇರೋ ಒಳ್ಳೆ ಅವಕಾಶ.


5) ನಮ್ಗೆ ಇಷ್ಟವಾದ 5 ವಿಷಯ ಆಯ್ಕೆ ಮಾಡ್ಕೋಬೋದು. ಅಂದ್ರೆ, ಸ್ಕೂಲಲ್ ಕಲಿಸೊ ಯಾವ್ದಾದ್ರೂ ವಿಷಯ ಬೇಡ ಅನ್ಸಿದ್ರೆ ಕೈ ಬಿಡ್ಬೋದು !

ಸ್ಕೂಲಲ್ಲಿ ಬಲವಂತವಾಗಿ 6 ವಿಷಯ ಕಲೀಬೇಕು ಅನ್ನದು ಮಾಮೂಲಿ ಆದ್ರೆ, ಇಲ್ಲಿ ಯಾವ್ದಾದ್ರೂ 5 ವಿಷಯಾನ ಆರಿಸ್ಕೊಬೋದು—ಒಂದು ಭಾಷೆ ಕಡ್ಡಾಯ, ಬೇಕು ಅನ್ಸಿದ್ರೆ ಎರಡು ತೊಗೋಬೋದು. ಜಾಸ್ತಿ ವಿಷಯ ಬೇಕು ಅಂದ್ರೂನೂ ಕಲೀಬೋದು. ಮಧ್ಯೆ ಬೋರಾದ್ರೆ ಬದ್ಲಾಯಿಸ್ಕೋಬೋದು. ಯಾವ್ದು ಸುಲಭಾನೋ ಅದ್ರಲ್ಲಿ ಪರೀಕ್ಷೇಗೆ ಕೂತ್ಕೋಬೋದು.


6) ಮೂರು ಹಂತದಲ್ಲಿ ಈ ಕಾರ್ಯಕ್ರಮ ನಡೆಯತ್ತೆ.  ಜೀವನೋಪಾಯಕ್ಕಾಗಿ ಏನು ಬೇಕೋ ಅದನ್ ಕಲಿಯೋ ಅವಕಾಶಾನೂ ಇರುತ್ತೆ.

 

NIOS ಕಾರ್ಯಕ್ರಮ ಹೀಗಿರುತ್ತೆ, ನೋಡಿ: 3, 5 ಮತ್ತು 8ನೇ ತರಗತಿಗೆ ಸಮವಾಗಿ 3 ಹಂತ ಇರುತ್ತೆ. 4 ಎಸ್.ಎಸ್.ಎಲ್.ಸಿ. ಮತ್ತೆ, 5 ಪಿ.ಯು.ಸಿ. ಪ್ರತಿ ಹಂತ ದಾಟಿದ್ದಕ್ಕೆ NIOS ಪರೀಕ್ಷೆ ಮಾಡಿ, ಪಾಸಾದ್ರೆ ಪ್ರಮಾಣಪತ್ರಾನೂ ಕೊಡತ್ತೆ. ಈ ಪ್ರಮಾಣಪತ್ರಕ್ಕೆ ಬೇರೆ ಬೋರ್ಡ್ಗಳ ಪ್ರಮಾಣಪತ್ರದಷ್ಟೇ ಪವರ್ರು.

 

7)  ಆನ್ಲೈನ್ ಮೂಲಕ ಕೋರ್ಸ್ ಸೇರ್ಬೋದು, ಒಂದು ಕೋರ್ಸ್ ಮುಗ್ಸಕ್ಕೆ 5 ವರ್ಷ ಸಮಯ ಇದೆ, ಪಾಸ್ ಮಾಡೋಕೆ ಬೇಜಾನ್ ಅವಕಾಶ ಇದೆ.

ಈ ಕಾರ್ಯಕ್ರಮನ್ನ ನಡೆಸೋ ರೀತೀನೂ ಬೇರೇನೇ: ಮಾಧ್ಯಮಗಳ ಮೂಲಕ ಪುಕ್ಕಟೆ ಕಲಿಸೋ ಕಾರ್ಯಕ್ರಮಗಳು ಇರತ್ತೆ. ನೀವ್ ಕಲೀತಿದ್ದೀರೋ ಇಲ್ವೋ ಅಂತ ನೀವೆ ಕಂಡ್ಕೋಬೋದು. ನೀವ್ ಬೇಕು ಅಂದ್ರೆ, ಓದ್ಗೆ ಬೇಕಾಗೋ ಪುಸ್ತಕ, ವೀಡಿಯೋ, ಆಡಿಯೋ ಎಲ್ಲ NIOS ಪೂರೈಸತ್ತೆ. ಕನ್ನಡ್ದೋರಿಗೆ ಇದೆಲ್ಲ ಬರೀ ಇಂಗ್ಲೀಷಲ್ ಸಿಗತ್ತೆ. ಆದ್ರೆ ಎಸ್.ಎಸ್.ಎಲ್.ಸಿ. ಮತ್ತೆ ಪಿ.ಯು.ಸಿ. ಪರೀಕ್ಷೇನ ಮಾತ್ರ ಇಂಗ್ಲಿಷಲ್ಲೇ ಬರೀಬೇಕು ಅಂತಿಲ್ಲ, ಕನ್ನಡದಲ್ಲೂ ಬರೀಬೋದು.

8) ಪರೀಕ್ಷೆ ಹೇಗಿರತ್ತೆ ಅಂದ್ರೆ, ಮಕ್ಕಳು ಎಲ್ಲಾ ವಿಷಯಾನು ಒಂದೇ ಸಲ ಬರ್ದು ಮುಗಿಸ್ಬೇಕು ಅಂತೇನಿಲ್ಲ.

ವರ್ಷಕ್ಕೆ ಎರ್ಡು ಸರ್ತಿ ಪರೀಕ್ಷೆ ನಡೆಸ್ತಾರೆ. ಬೇಕು ಅನ್ನಿಸಿದಾಗ, ನಾನು ತಯಾರಾಗಿದೀನಿ ಅನ್ನಿಸ್ದಾಗ ಪರೀಕ್ಷೆಗ್ ಕೂತ್ಕೋಬೋದು. ಪಾಸಾಗಕ್ಕೆ 33% ಬೇಕೇ ಬೇಕು. ಆದ್ರೆ, ಜಾಸ್ತಿ ಬರ್ಬೇಕು ಅಂತ ಅನ್ಸಿದ್ರೆ ಮತ್ತೆ-ಮತ್ತೆ ಪರೀಕ್ಷೆ ತೊಗೋಬೋದು.

ಇನ್ನೂ ಹೆಚ್ಚು ಮಾಹಿತಿ ಬೇಕಿದ್ರೆ ಈ ವೆಬ್ ಸೈಟ್ ನೋಡಿ: www.nios.ac.in  ಅಥ್ವಾ ಇಲ್ಲಿಗೆ ಮಿಂಚಂಚೆ ಬರ್ದು ವಿಚಾರ್ಸಿ: rcdelhi@nios.ac.in, rcbengaluru@nios.ac.in.

ಇದಲ್ದೆ,  ದುಡ್ಡಿಲ್ದೆ ಈ ನಂಬರ್ಗೆ ಫೋನ್ ಮಾಡಿ ಕೇಳಿ: 18001809393.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: