ನಿಮ್ಮ ರಕ್ತದ ಗುಂಪು ಏನೇನ್ ತೀರ್ಮಾನಿಸುತ್ತೆ ಅಂತ ತಿಳ್ಕೊಂಡಿರಿ, ಬೇಕಾಗುತ್ತೆ

ಒಂದು ಹನಿ ರಕ್ತದಲ್ಲಿ ನಿಮ್ಮ ಗುಟ್ಟೆಲ್ಲ ಇದೆ

ರಕ್ತದಲ್ಲಿ ನಾಲ್ಕು ಗುಂಪು ಅನ್ನೋ ವಿಷಯ ಎಲ್ಲರಿಗೂ ಗೊತ್ತೇ ಇದೆ - A, B, AB, O.

ಪ್ರತಿಯೊಂದು ರಕ್ತದ ಗುಂಪಿಗೆ ಅದರದ್ದೇ ಆದ ಗುಣ ಇದೆ. ಕೆಲವೊಂದು ರಕ್ತದ ಗುಂಪಿಗೆ ಇದೇ ತರಹದ ಆಹಾರ ತಗೊಳ್ಳಬೇಕು ಅಂತಿರತ್ತೆ. ಅದರ ವಿರುದ್ದವಾಗಿ ತೊಗೊಂಡ್ರೆ ಜೀವನ ಶೈಲಿಯಲ್ಲಿ ವ್ಯತ್ಯಾಸ ಕಾಣ್ಸತ್ತೆ. ನಿಮ್ಗೇ ಗೊತ್ತಿರಲ್ಲ ನೀವ್ಯಾಕೆ ಆ ರೀತಿ ಆಡ್ತೀರಿ ಅಂತ? ಯಾವ ಯಾವ ರಕ್ತದ ಗುಂಪಿಗೆ ಯಾವ ತರದ ಅಂತ ನೋಡೊಣ...

1) ಇಂಥ ರಕ್ತದ ಗುಂಪಿರೋರು ಇಂಥ ಆಹಾರ ತೊಗೊಬೇಕು ಅಂತ ಇರುತ್ತೆ

"A" ಗುಂಪಿನ ವ್ಯಕ್ತಿಗಳಿಗೆ ಮಾಂಸ ಸೇವನೆ ಒಳ್ಳೆದಲ್ಲ. ಹಣ್ಣು ತರ್ಕಾರಿ (ಸಸ್ಯಹಾರ) ಹೆಚ್ಚು ಉಪಯುಕ್ತ.

"O" ಗುಂಪಿಗೆ ಹೆಚ್ಚು ಪ್ರಮಾಣದಲ್ಲಿ ಪ್ರೋಟೀನ್ ಅವಶ್ಯಕತೆ ಇರೋದ್ರಿಂದ ಅವರು ಮೀನು, ಮಾಂಸ ಸೇವನೆ ಮಾಡೋದು ಒಳ್ಳೆದು.

"AB " ಗುಂಪಿನವರಿಗು ಇದು ಅನ್ವಯವಾಗುತ್ತೆ.

"B" ಗುಂಪಿನವರಿಗೆ  ಚಿಕನ್ ಆಗಲ್ವಂತೆ. ಇದರ ಬದಲು ಪೋರ್ಕ್ ತಗೊಳ್ಬೇಕಂತೆ.

lifehealthandbeauty.com

2) ರಕ್ತದ ಗುಂಪಿಗೂ ನಮ್ಮ ಆರೋಗ್ಯಕ್ಕೂ ಸಂಬಂಧ ಇದೆ

ನಮಗೆ ಬರುವಂತಹ ಕಾಯಿಲೆಗಳಿಗೂ ನಮ್ಮ ರಕ್ತದ ಗುಂಪಿಗೂ ಹೆಚ್ಚು / ಕಡಿಮೆ ಒಂದು ರೀತಿ ಸಂಬಂಧ ಇದೆ. ಡಾಕ್ಟರಗಳು ಏನಕ್ಕೂ ರಕ್ತದ ಪರೀಕ್ಷೆ ಮಾಡಿಸಿ ಅಂತಾರೆ. ಆ ಸಮಯದಲ್ಲಿ ಕಾಯಿಲೆಯ ಸ್ವರೂಪ ಹೇಗಿದೆ ಅಂತ ತಿಳ್ಕೋಬೋದು ಅಂತ. 

i.huffpost.com

3) ರಕ್ತದ ಗುಂಪಿಗೂ ನಿಮ್ಮ ಗುಣಕ್ಕೂ ಸಂಬಂಧ ಇದೆ

"O" ರಕ್ತದ ಗುಂಪಿನವರು ಹೆಚ್ಚು ಕ್ರಿಯೇಟಿವ್ ಆಗಿರುತ್ತಾರೆ. ಇವರುಗಳಲ್ಲಿ ಆತ್ಮ ವಿಶ್ವಾಸ ಅಧಿಕವಾಗಿರತ್ತೆ. ಕಮ್ಯುನಿಕೇಶನ್ ( ಸಂವಹನ) ಮಾಡೋದ್ರಲ್ಲಿ ಇವರದು ಎತ್ತಿದ ಕೈ.

" B " ಗುಂಪಿನ ಜನರು ಯಾವುದಾದರು ಒಂದು ವಿಷಯಕ್ಕೆ ಕಮಿಟ್ ಆದರೆ ಮುಗೀತು ಮತ್ತೆ ಏನೇ ಆದ್ರೂ ಅದನ್ನ ಬದಲು ಮಾಡೋದಿಲ್ಲ. ಇವರುಗಳು ತುಂಬಾನೇ ಧೈರ್ಯಶಾಲಿಗಳಾಗಿರುತ್ತಾರೆ.  

"AB" ಗುಂಪಿನವರು ಬಹಳಾನೇ ಅಂತರಮುಖಿಗಳಾಗಿರ್ತಾರೆ ಜೊತೆಗೆ ನಂಬಿಕಸ್ತರು. ಸಹಾನುಭೂತಿಯ ಗುಣ ಇವರಲ್ಲಿ ಎದ್ದು ತೋರುತ್ತೆ. 

articulate-heroes.s3.amazonaws.com

4) ರಕ್ತದ ಗುಂಪಿಗೂ ಒತ್ತಡಕ್ಕೂ ಸಂಬಂಧ ಇದೆ

"O" ರಕ್ತದ ಗುಂಪಿನವರಿಗೆ ಸಿಟ್ಟು ಬೇಗ ಬರತ್ತೆ. ಚಿಕ್ಕ ಚಿಕ್ಕ ವಿಷಯಕ್ಕೆ ಅವರುಗಳು ಕೋಪ ಮಾಡ್ಕೋತಾರೆ. ಇವರು ಮಾನಸಿಕವಾಗಿ ವಿಶ್ರಾಂತಿ ಆಗಬೇಕಾದರೆ ತುಂಬಾ ಸಮಯ ಬೇಕಾಗತ್ತೆ. ಮಾಂಸ ಆಹಾರ ಹೆಚ್ಚಾಗಿ ತೊಗೊಳ್ಳೊರಿಗಂತೂ ಆ ಪ್ರಾಣಿಯ ಗುಣ ಆಹಾರದ ಮೂಲಕ ಇವರನ್ನ ಸಿಟ್ಟು ಮಾಡುವಂತೆ ಮಾಡಿಸುತ್ತೆ.

northamericanpharmacal.com

5) ರಕ್ತದ ಗುಂಪಿಗೂ ಬಸುರಿಯಾಗೋದಕ್ಕೂ ಸಂಬಂಧ ಇದೆ

ರಿಸರ್ಚ್ ಪ್ರಕಾರ ಬಸುರಿಯಾಗೋದು ರಕ್ತದ ಗುಂಪಿನ ಮೇಲೆ ನಿರ್ಧಾರವಾಗತ್ತೆ. ಗರ್ಭಕುಳಿಯನ್ನ ಉತ್ತೇಜಿಸೋ ಹಾರ್ಮೋನು "AB" ಗುಂಪಿನವರಲ್ಲಿ ಕಡಿಮೆ ಇರತ್ತೆ. 

cdn2.stylecraze.com

6) ರಕ್ತದ ಗುಂಪಿಗೂ ಹುಟ್ಟೋ ಮಕ್ಕಳಿಗೂ ಸಂಬಂಧ ಇದೆ

ರಕ್ತದಲ್ಲಿರೋ Rh ಫ್ಯಾಕ್ಟರ್ ಇದನ್ನ ನಿರ್ಧರಿಸುತ್ತೆ. ಇದರಲ್ಲಿ Rh ಪಾಸಿಟಿವ್ ಮತ್ತೆ Rh ನೆಗಟಿವ್ ಎನ್ನುವ ಎರಡು ತರ ಇದೆ. ಪ್ರಪಂಚದ 80% ಜನರು Rh ಪಾಸಿಟಿವ್.

ಒಂದು ವೇಳೆ ತಾಯಿ Rh ನೆಗಟಿವ್ ಇದ್ದು ತಂದೆ Rh ಪಾಸಿಟಿವ್ ಇದ್ದರೆ ಹುಟ್ಟೋ ಮಗು ಜೀವನ ಪರ್ಯಂತ ಕಾಯಿಲೆಗಳಿಂದ ಬಳಲಬೇಕಾಗುತ್ತೆ.

insightiitb.org

7) ನಿಮ್ಮ ದೇಹದ ತೂಕಕ್ಕೂ ರಕ್ತದ ಗುಂಪಿಗೂ ಸಂಬಂಧವಿದೆ

ನೀವು ಅತಿಯಾದ ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದಕ್ಕೆ ರಕ್ತದ ಗುಂಪು ಒಂದು ಕಾರಣ. "O" ಗುಂಪಿನವರಿಗೆ ಈ ಸಮಸ್ಯೆ ಸಾಮಾನ್ಯ. "A" ಗುಂಪಿನವರಲ್ಲಿ ಈ ಸಮಸ್ಯೆ ಅಷ್ಟೊಂದು ಕಾಣಿಸಲ್ಲ.

johnnyoneal.org

8) ನಿಮ್ಮ ದೇಹಕ್ಕೆ ಎಷ್ಟರಮಟ್ಟಿಗೆ ಕಸರತ್ತು ಬೇಕು ಅನ್ನೋದನ್ನೂ ಕೂಡ ರಕ್ತದ ಗುಂಪು ನಿರ್ಧಾರ ಮಾಡತ್ತೆ

ಆರೋಗ್ಯ ಅಂದ್ರೇನು ಅಂತ ಒಂದು ವಾಕ್ಯದಲ್ಲಿ ಹೇಳಬೇಕಂದ್ರೆ " ಒಳ್ಳೆ ಉಸಿರಾಟ ಮತ್ತು ಒಳ್ಳೆ ರಕ್ತ ಸಂಚಾರ". ಒಳ್ಳೆ ರಕ್ತ ಸಂಚಾರ ಆಗಬೇಕಂದ್ರೆ ಉತ್ತಮ ದೈಹಿಕ ಕಸರತ್ತು ಬೇಕು. ಇದು ಎಲ್ಲ ರಕ್ತದ ಗುಂಪಿನವರಿಗೆ ಅನ್ವಯಿಸುತ್ತೆ. ಆದಾಗ್ಯೂ ಕೂಡ  "B" ರಕ್ತದ ಗುಂಪಿನವರು ದೈಹಿಕ ಕಸರತ್ತು ಮಾಡೋದರಲ್ಲಿ ಎಲ್ರುಗಿಂತ ಮುಂದೆ. ಸಾಮಾನ್ಯವಾಗಿ ಕರಾಟೆ, ಟೆನ್ನಿಸ್, ಬೆಟ್ಟ ಹತ್ತೋದು ಇವರ ಮೆಚ್ಚಿನ ಹವ್ಯಾಸ.

mdanderson.org

ನಿಮ್ಮ ರಕ್ತದ ಗುಂಪು ಯಾವುದು ಎನ್ನುವ ಮಾಹಿತಿ ಸಿಗೋ ತರಹ ಏನಾದರೊಂದು ದಾಖಲೆ ಕಿಸೆಯಲ್ಲಿಟ್ಟುಕೊಳ್ಳೋದು ಒಳ್ಳೆದು. ಯಾಕೆಂದರೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮRh ಫ್ಯಾಕ್ಟರ್ ಅನ್ನ ಪರೀಕ್ಷೆ ಮಾಡ್ತಾ ಕೂರಕ್ಕಾಗಲ್ಲ. ಯಾವುದು ಅಂತಾ ಗೊತ್ತಾದರೆ ಏನಾದರು ಮಾಡಬಹುದು .

2.bp.blogspot.com

ಇಷ್ಟೆಲ್ಲ ಓದಿದ ಮೇಲೆ ಇನ್ನಾದರು ರಕ್ತದ ಗುಂಪು ಯಾವುದು ಅಂತ ಗೊತ್ತಿಲ್ಲದಿದ್ದವರು ಆದಷ್ಟು ಬೇಗ ಮಾಡಿಸಿಕೊಳ್ಳಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಎಳ್ಳಿಂದ ಆರೋಗ್ಯದಲ್ಲಿ ಈ 10 ನಂಬಲಾರದ ಬದಲಾವಣೆ ಆಗುತ್ತೆ ನೋಡಿ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಎಳ್ಳು ಮೊದಲು ಬೆಳೆಸಿದ್ದು ಭಾರತದಲ್ಲೇ. ನಮ್ಮ ಪುರಾಣ ಪುಣ್ಯಕಥೇಲೆಲ್ಲಾ ಎಳ್ಳಿನ ಬಗ್ಗೆ ಹೇಳಿದಾರೆ. ಭಾರತದಿಂದ ಇದು ಬೇರೆ ದೇಶಗಳಿಗೆ, ಆಫ್ರಿಕಾ, ಏಷ್ಯಾ ಮತ್ತೆ ಅರಬ್ ದೇಶಗಳಿಗೆ ಹೋಯ್ತಂತೆ. ಇವತ್ತು ಭಾರತ, ಚೈನಾ ಮತ್ತೆ ಮೆಕ್ಸಿಕೋ ದೇಶಗಳು ಎಳ್ಳನ್ನ ತುಂಬಾ ಬೆಳ್ಯೋ ದೇಶಗಳಾಗಿವೆ. ಎಳ್ಳಿನಲ್ಲಿ ಕಾಪರ್, ಮ್ಯಾಂಗನೀಸ್ ಮಾತ್ರ ಅಲ್ಲ ಕ್ಯಾಲ್ಷಿಯಂ, ಮಗ್ನೀಷಿಯಂ, ಕಬ್ಬಿಣ, ಫಾಸ್ಪರಸ್, ವಿಟಮಿನ್ ಬಿ1, ಇನ್ನೂ ಏನೇನೋ ಇದೆ. ಇದರ ಜೊತೆ ಸೆಸಾಮಿನ್ ಮತ್ತೆ ಸೆಸಮೊಲಿನ್ ಅನ್ನೋ ಎರಡು ವಸ್ತು ಎಳ್ಳಲ್ಲಿದೆ. ಇದ್ರಲ್ಲಿರೋ ಲಿಗ್ನಾನ್ ಅನ್ನೋ ನಾರಿನಂಶ ಕೊಲೆಸ್ಟ್ರಾಲ್ ಕಮ್ಮಿ ಮಾಡುತ್ತೆ.

1. ಎಳ್ಳಲ್ಲಿರೋ ಕಾಪರ್ ಕೀಲುನೋವು ಕಮ್ಮಿ ಮಾಡತ್ತೆ

ಕಾಪರ್ ರುಮಾಟಿಡ್ ಆಥ್ರಿಟಿಸ್ ಗೆ ಒಳ್ಳೇ ಔಷಧಿ. ಇದು enzyme system ಅಲ್ಲಿನ ಊತ ಕಮ್ಮಿ  ಮಾಡತ್ತೆ. ಅಲ್ಲದೇ ರಕ್ತನಾಳ, ಮೂಳೆ ಮತ್ತು ಕೀಲುಗಳಿಗೆ ಶಕ್ತಿ ಕೊಡೋ ಕೊಲ್ಲಾಜಿನ್ ಮತ್ತೆ ಎಲಾಸ್ಟಿಕ್ ಗೆ ಲಿಂಕ್ ಮಾಡತ್ತೆ.

greatlifeandmore.com

2. ಮೆಗ್ನೀಷಿಯಂ ರಕ್ತನಾಳ ಮತ್ತೆ ಉಸಿರಾಟಕ್ಕೆ ಶಕ್ತಿ ಕೊಡತ್ತೆ

ಮಗ್ನೀಷಿಯಂ ಆಸ್ತಮಾಗೆ ಒಳ್ಳೇ ಔಷಧ. ರಕ್ತದೊತ್ತಡ, ಸ್ಟ್ರೋಕ್ ಮತ್ತೆ ಡಯಾಬಿಟಿಸ್ ಕೂಡ ಇದ್ರಿಂದ ಕಮ್ಮಿ ಆಗತ್ತೆ. ಮೈಗ್ರೇನ್ ತಲೆನೋವು ಬರಿಸೋ trigeminal blood vessel spasm ನ ಕೂಡ ಕಮ್ಮಿ ಮಾಡತ್ತೆ. ಅಲ್ಲದೆ ಮುಟ್ಟುನಿಲ್ಲೋ ಸಮಯದಲ್ಲಿ ಹೆಂಗಸರಿಗೆ ಆಗೋ ತೊಂದ್ರೆಗಳನ್ನೂ ಕಮ್ಮಿ ಮಾಡತ್ತೆ.

images.wisegeek.com

3. ವಿಟಮಿನ್-ಬಿ ಆತಂಕದ ಸ್ವಭಾವವನ್ನ ಕಮ್ಮಿ ಮಾಡತ್ತೆ

ಎಳ್ಳಿನಲ್ಲಿ ಆತಂಕ ಕಮ್ಮಿ ಮಾಡೋ ಎಷ್ಟೊಂದು ಗುಣಗಳಿವೆ. ಇದರಲ್ಲಿರೋ ಮಗ್ನೀಷಿಯಂ ಮತ್ತೆ ಕ್ಯಾಲ್ಷಿಯಂ ಸ್ನಾಯುಗಳು ಬಿಗಿಯೋದು ಮತ್ತೆ ಬಿಟ್ಟುಕೊಳ್ಳೋದಿಕ್ಕೆ ಸಹಾಯ ಮಾಡತ್ತೆ. ಇದರಲ್ಲಿರೋ ಥಯಾಮಿನ್ ಖಿನ್ನತೆ, ಮೂಡಿ ಆಗೋದು, ಸ್ನಾಯುಗಳ ಬಿಗಿತ ಎಲ್ಲಾ ಕಮ್ಮಿ ಮಾದತ್ತೆ.

media.newindianexpress.com

4. ಕೊಲೋನ್ ಕ್ಯಾನ್ಸರ್, ಆಸ್ಟಿಯೋಪೊರೋಸಿಸ್, ಮೈಗ್ರೇನ್ ಮತ್ತು ಮುಟ್ಟಿನ ನೋವುಗಳ್ನ ಕಮ್ಮಿ ಮಾಡತ್ತೆ

ಎಳ್ಳಲ್ಲಿರೋ ಕ್ಯಾಲ್ಷಿಯಂ ಕೊಲೊನ್ ಕಣಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ಸ್ ನ ಕಮ್ಮಿ ಮಾಡತ್ತೆ. ಆಥ್ರಿಟಿಸ್, ಮುಟ್ಟುನಿಲ್ಲೋದು, ಇಂತಾ ಟೈಮಲ್ಲಿ ಮೂಳೆ ಸವೆಯೋದನ್ನ ತಪ್ಪಿಸತ್ತೆ. ಮೈಗ್ರೇನ್ ತಲೆನೋವು ಮತ್ತೆ ಮುಟ್ಟಿನ ನೋವುಗಳನ್ನ ಕೂಡ ಕಮ್ಮಿ ಆಗತ್ತೆ.

il3.picdn.net

5. ಮೂಳೆಗಳ್ನ ಗಟ್ಟಿ ಮಾಡತ್ತೆ

ಎಳ್ಳಿನಂತ ಜಿಂಕ್ ಜಾಸ್ತಿ ಇರೋ ಆಹಾರ ತಿಂದ್ರೆ ಮೂಳೆ ಗಟ್ಟಿ ಆಗತ್ತೆ. ಆಸ್ಟಿಯೋಪೊರೊಸಿಸ್ ಅಂತಾ ಮೂಳೆ ಸವೆತದ ರೋಗಗಳು ಹೆಂಗಸರಲ್ಲಿ ಜಾಸ್ತಿ ಇದ್ರೂ, ವಯಸ್ಸಾದ ಗಂಡಸರಿಗೂ ಬರತ್ತೆ. ಜಿಂಕ್ ಕಮ್ಮಿ ಆದಷ್ಟೂ ಈ ರೋಗ ಬರೋ ಛಾನ್ಸಸ್ ಜಾಸ್ತಿ. ಎಳ್ಳಲ್ಲಿರೋ ಜಿಂಕ್ ಇದನ್ನ ಕಮ್ಮಿ ಮಾಡತ್ತೆ.

finedininglovers.cdn.crosscast-system.com

6. ಕೊಲೆಸ್ಟ್ರಾಲ್ ಕಮ್ಮಿ ಮಾಡತ್ತೆ

ಕಪ್ಪು ಎಳ್ಳಿನಲ್ಲಿ ಫೈಟೋಸ್ಟಿರಾಲ್ ಅನ್ನೋ ಒಂದು ವಸ್ತು ಇರತ್ತೆ. ಇದು ಕೊಲೆಸ್ಟ್ರಾಲ್ ತರಾನೇ ಇರತ್ತಂತೆ. ಇದನ್ನ ತಿಂದ್ರೆ ರಕ್ತದಲ್ಲಿರೋ ಕೊಲೆಸ್ಟ್ರಾಲ್ ಕಮ್ಮಿ ಆಗೋದ್ ಮಾತ್ರ ಅಲ್ಲ; ಕೆಲವು ಕ್ಯಾನ್ಸರ್ ಬೆಳ್ಯೋದೂ ತಪ್ಪತ್ತೆ.

img.allw.mn

7. ಬ್ಯಾಕ್ಟಿರೀಯ, ಫಂಗಸ್ ಮತ್ತೆ ಯೀಸ್ಟ್ ಇನ್ ಫೆಕ್ಷನ್ ಕಮ್ಮಿ ಮಾಡತ್ತೆ

ಎಳ್ಳೆಣ್ಣೆ ಊತ ಕಮ್ಮಿ ಮಾಡತ್ತೆ. ಅದಿಕ್ಕೆ ಸಣ್ಣಪುಟ್ಟ ಗಾಯಗಳಿಗೆ ಹಚ್ಚಿದ್ರೆ, ಬೇಗ ವಾಸಿ ಆಗತ್ತೆ. ಇದು ಬ್ಯಾಕ್ಟಿರೀಯಾ ಮತ್ತೆ ಫಂಗಸ್ ಬೆಳ್ಯೋದನ್ನ ಕೂಡ ತಡ್ಯೋದ್ರಿಂದ ಇವುಗಳಿಂದ ಬರೋ ಎಷ್ಟೋ ರೋಗಗಳನ್ನ ಕಮ್ಮಿ ಮಾಡತ್ತೆ. ಬೆಚ್ಚಗಿರೋ ನೀರಿಗೆ ಎಳ್ಳೆಣ್ಣೆ ಹಾಕಿಕೊಂಡು ಆ ಜಾಗದಲ್ಲೆಲ್ಲಾ ಹಚ್ಕೊಂಡ್ರೆ, ಯೀಸ್ಟ್ ಇನ್ ಫೆಕ್ಷನ್ ಕಮ್ಮಿ ಆಗತ್ತೆ.

2.wlimg.com

8. ಎಳ್ಳೆಣ್ಣೆ ಚರ್ಮಕ್ಕೆ ಹೊಳಪು ನೀಡತ್ತೆ

ಎಳ್ಳೆಣ್ಣೆ ಹಚ್ಕೊಳ್ಳೋದ್ರಿಂದ ಚರ್ಮದ ಹೊಳಪು ಜಾಸ್ತಿ ಆಗತ್ತೆ. ಚರ್ಮದಲ್ಲಿರೋ ಸಣ್ಣಪುಟ್ಟ ಗಾಯಗಳು ಮತ್ತೆ ಗೀರುಗಳೂ ಮಾಯ ಆಗತ್ವೆ. ಮುಖದ ಚರ್ಮ ಗಟ್ಟಿ ಮಾಡಿ, ಚರ್ಮದ pores ಗಳು ದೊಡ್ಡದಾಗೋದನ್ನ ಎಳ್ಳೆಣ್ಣೆ ತಡ್ಯತ್ತೆ. ಎಳ್ಳೆಣ್ಣೆಯಿಂದ ಮುಖ ಚೆನ್ನಾಗಿ ತಿಕ್ಕಿ ಅಕ್ಕಿ ಅಥವಾ ಕಡ್ಲೆಹಿಟ್ಟಿನಿಂದ ಉಜ್ಜಿ ತೊಳೆದುಕೊಂಡ್ರೆ ಇಂತಾ pore ಎಲ್ಲಾ ಮುಚ್ಚೋಗತ್ತೆ.

mojepedzelki.blog.pl

9. ತಲೆಬುರುಡೆಯ ಸಮಸ್ಯೆಗಳನ್ನ ಎಳ್ಳೆಣ್ಣೆ ಕಮ್ಮಿ ಮಾಡತ್ತೆ

ತಲೆಬುರುಡೆ ಆರೋಗ್ಯವಾಗಿರಕ್ಕೆ ಬೇಕಾದ ವಿಟಮಿನ್ ಮಿನರಲ್ ಎಲ್ಲಾ ಎಳ್ಳೆಣ್ಣೆಯಿಂದ ಸಿಗತ್ತೆ. ಎಳ್ಳೆಣ್ಣೆ ಹಾಕ್ಕೊಂಡು ತಲೆ ಮಸಾಜ್ ಮಾಡಿದ್ರೆ ತಲೆಹೊಟ್ಟು, ಒಣಒಣ ಅನ್ನೋದು ಎಲ್ಲಾ ಕಮ್ಮಿ ಆಗತ್ತೆ. ಕೂದಲು ಉದುರೋದು ಕಮ್ಮಿ ಆಗತ್ತೆ.

healthadvisorgroup.com

10. ಎಳ್ಳೆಣ್ಣೆ ರೇಡಿಯೇಷನ್ ಡ್ಯಾಮೇಜಿಂದ ರಕ್ಷಣೆ ಕೊಡತ್ತೆ

ಎಳ್ಳೆಣ್ಣೆ ಮತ್ತೆ ಎಳ್ಳಿನ ಬೀಜಗಳಲ್ಲಿರೋ ಸೆಸಾಮೋಲ್ ರೇಡಿಯೇಷನ್ ನಿಂದ DNAಗೆ ಹಾನಿ ಆಗೋದನ್ನ ತಪ್ಪಿಸತ್ತೆ. ಇದು ಕರುಳು ಮತ್ತು ಸ್ಪ್ಲೀನ್ಗೆ ಹಾನಿ ಆಗೋದನ್ನೂ ತಡಿಯತ್ತೆ.

dosaikal.files.wordpress.com

ಗೊತ್ತಿತ್ತಾ?? ಇನ್ನೇನು ಮತ್ತೆ? ಎಳ್ಳುಂಡೆ ಜಮಾಯಿಸಿ ಮತ್ತೆ!!! ಎಳ್ಳಿಗೆ ಎಳ್ಳು ನೀರು ಬಿಡೋ ಬದ್ಲು ಗೊಜ್ಜು ಮಾಡಿ ಉಡಾಯಿಸಿ!!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: