ಬೆಲ್ಲದಿಂದ ಇಷ್ಟೆಲ್ಲಾ ಲಾಭಗಳಿವೆ ಅಂತ ಗೊತ್ತಾದ್ರೆ ಅದರ ಸಿಹಿ ಸವಿಯಕ್ಕೆ ಸಂಕ್ರಾಂತಿ ತನಕ ಕಾಯ್ಬೇಕಾಗಿಲ್ಲ

ಚಳಿಗೆ ಸಕತ್ತಾಗಿ ತಿನ್ಬೇಕು ಅನ್ನಿಸತ್ತೆ!

ಎಳ್ಳು, ನೆಲಗಡಲೆ, ಬೆಲ್ಲ ಇವೆಲ್ಲ ದೇಹದಲ್ಲಿ ಉಷ್ಣತೆ ಹೆಚ್ಚಾಗೋಹಾಗೆ ಮಾಡುತ್ತೆ. ಸಂಕ್ರಾಂತಿ ಬಂತು ಅಂತ ಎಳ್ಳು ಬೆಲ್ಲದ ಬಗ್ಗೆ ಹೇಳ್ತಿದ್ದಾರೆ ಅನ್ಕೊಂಡ್ರಾ? ನಾವು ಇವತ್ತು ಮಾತಾಡ್ತಿರೋದು ಬರಿ ಬೆಲ್ಲದ ಬಗ್ಗೆ.

ಕಬ್ಬು, ಖರ್ಜೂರ ಅಥವಾ ತಾಳೆಯಿಂದ ಬೆಲ್ಲ ಮಾಡ್ತಾರೆ. ಇವೆಲ್ಲದರಲ್ಲೂ ಸಿಹಿ ಅಂಶ ಇರುತ್ತೆ. ಈ ಬೆಲ್ಲ ಯಾವುದ್ರಿಂದ ಮಾಡಿರ್ತಾರೆ ಅನ್ನೋದರ ಮೇಲೆ ಅದರ ಬಣ್ಣ ಇರುತ್ತೆ. ಬೆಲ್ಲದಲ್ಲಿ ತುಂಬಾನೇ ಔಷಧಿ ಗುಣಗಳಿವೆ. ಅದ್ಯಾವುದು ತಿಳ್ಕೊಳಿ, ಇಲ್ಲಿ 10 ಮಾತ್ರ ಪಟ್ಟಿ ಮಾಡಿದ್ದೀವಿ…

1. ವಯಸ್ಸಾದವರಂತೆ ಕಾಣದೆ ಇರೋಹಾಗೆ ಮಾಡುತ್ತೆ.

ಬೆಲ್ಲದಲ್ಲಿ ಝಿನ್ಕ್ , ಸೆಲೆನಿಯಮ್ ನಂತಹ ಮಿನರಲ್ಗಳು ಇವೆ. ಇದಕ್ಕೆ ನಮ್ಮ ದೇಹದಲ್ಲಿ ವಯಸ್ಸಾದ ಹಾಗೆ ಮಾಡೋ ಗುಣಗಳನ್ನ ತಡೆಯೋ ಶಕ್ತಿ ಇದೆ. ವಯಸ್ಸಾದಂತೆ ಕಾಣೋ ಸೋಂಕಿನ ವಿರುದ್ಧ ಹೊರಡೋ ಶಕ್ತಿ ಇದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿನೂ ಹೆಚ್ಚಿಸುತ್ತೆ.

2. ಮಲಬದ್ದತೆಗೆ ಒಳ್ಳೆ ಪರಿಹಾರ ಸಿಗತ್ತೆ.

ಬೆಲ್ಲ ತಿನ್ನೋದ್ರಿಂದ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತೆ. ಕರುಳಿನ ಚಲನವಲನ ಚೆನ್ನಾಗಿ ಆಗುವಂತೆ ಮಾಡುತ್ತೆ. ಇದ್ರಿಂದ ಮಲಬದ್ಧತೆ ಆಗೋದನ್ನ ತಪ್ಪಿಸುತ್ತೆ.

3. ದೇಹದಿಂದ ವಿಷಪದಾರ್ಥಗಳ್ನ ಹೊರಹಾಕಕ್ಕೆ ಸಹಾಯ ಮಾಡುತ್ತೆ.

ಬೆಲ್ಲ ನಮ್ಮ ದೇಹ, ಲಿವರ್ ಎರಡನ್ನೂ ಕ್ಲೀನ್ ಮಾಡಿ ಅಲ್ಲಿಂದ ವಿಷದ ಪದಾರ್ಥಗಳು ಹೊರಗೆ ಹೋಗೋಹಾಗೆ ಮಾಡುತ್ತೆ. ಹೀಗೆ ಆಗ್ಬೇಕು ಅಂದ್ರೆ ಚೂರು ಚೂರು ಬೆಲ್ಲ ತಿನ್ನುತ್ತಾ ಇರಿ.

cambodiatours.info

4. ಜ್ವರದ ಲಕ್ಷಣ ಇದ್ದಾಗ ತಿಂದ್ರೆ ಒಳ್ಳೆ ಮದ್ದು.

ಶೀತ, ನೆಗಡಿ, ಕೆಮ್ಮು  ಇದ್ದಾಗ ಇದನ್ನ ತಿನ್ನೋದ್ರಿಂದ ಜ್ವರ ಬರೋದನ್ನ ತಪ್ಪಿಸುತ್ತೆ

5. ರಕ್ತ ಶುದ್ದಿ ಮಾಡಕ್ಕೂ ಸಹಾಯ ಮಾಡುತ್ತೆ.

ಬೆಲ್ಲದಲ್ಲಿರೋ ಎಲ್ಲಕ್ಕಿಂತ ಮುಖ್ಯದ ಗುಣ ಅಂದ್ರೆ ರಕ್ತ ಶುದ್ದಿ ಮಾಡೋದು. ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ದಿನನಿತ್ಯ ತಿನ್ನುತ್ತಾ ಬಂದ್ರೆ ಇದು ರಕ್ತ ಶುದ್ದಿ ಮಾಡುತ್ತೆ, ನಮ್ಮ ದೇಹದ ಆರೋಗ್ಯಾನೂ ಕಾಪಾಡುತ್ತೆ.

6. ಮೊಡವೆ ಕಮ್ಮಿ ಆಗುತ್ತೆ.

ಬೆಲ್ಲಕ್ಕೆ ಚರ್ಮದಲ್ಲಿ ಸುಕ್ಕು ಕಾಣಿಸದ ಹಾಗೆ ಮಾಡೋ ಗುಣ ಅಷ್ಟೇ ಅಲ್ಲದೆ ಮೊಡವೆ ಹಾಗೂ ಯಾವುದೇ ಕಲೆ ಇಲ್ಲದಹಾಗೆ ಮಾಡುತ್ತೆ.

healthyliving.natureloc.com

7. ಮುಟ್ಟಿನ ಪೂರ್ವ ಲಕ್ಷಣಗಳನ್ನ ಕಮ್ಮಿ ಮಾಡುತ್ತೆ.

ಮುಟ್ಟು ಕಾಣಿಸಿಕೊಳ್ಳೋದಕ್ಕೆ ಮುಂಚೆ ನಿಮಗೆ ನಿಮ್ಮ ಮೂಡ್ ಆಗಾಗ ಬದಲಾಗೋ ಲಕ್ಷಣ ಕಾಣಿಸುತ್ತ? ಇದು ಹಾರ್ಮೋನುಗಳ ವ್ಯತ್ಯಾಸದಿಂದ ಆಗೋದು. ಆಗಾಗ ಸ್ವಲ್ಪ ಬೆಲ್ಲ ತಿನ್ನಿ.ಇದ್ರಿಂದ ನಿಮ್ಮ ದೇಹದಲ್ಲಿ ಸಂತೋಷ ಉಂಟುಮಾಡುವ ರಸಗಳನ್ನ ಇದು ಉತ್ಪತ್ತಿ ಮಾಡುತ್ತೆ. ನಿಮ್ಮ ದೇಹಕ್ಕೆ ವಿಶ್ರಾಂತಿ ಸಿಕ್ಕಹಾಗೂ ಆಗುತ್ತೆ.

8. ಎಳ್ಳುಲ್ಲ + ಬೆಲ್ಲ ಉಸಿರಾಟದ ತೊಂದರೆ ಕಮ್ಮಿ ಮಾಡತ್ತೆ

ಬೆಲ್ಲ ತಿನ್ನೋದ್ರಿಂದ ಅಸ್ತಮಾದಂತಹ ಉಸಿರಾಟದ ತೊಂದರೆಗೆ ಪರಿಹಾರ ಸಿಗುತ್ತೆ. ನುರಿತ ತಜ್ಞರು ಹೇಳೋ ಪ್ರಕಾರ ಬೆಲ್ಲದ ಜೊತೆ ಎಳ್ಳು ಸೇರಿಸ್ಕೊಂಡು ತಿಂದ್ರೆ ತುಂಬಾನೇ ಒಳ್ಳೇದಂತೆ.

9. ತೂಕ ಕಮ್ಮಿ ಮಾಡ್ಕೊಳಕ್ಕೆ ಸಹಾಯ ಮಾಡುತ್ತೆ.

ದೇಹದ ತೂಕ ಕಮ್ಮಿ ಮಾಡ್ಕೊಳದಕ್ಕೂ ಇದು ಸಹಾಯ ಮಾಡುತ್ತೆ. ಬೆಲ್ಲದಲ್ಲಿ ಪೊಟ್ಯಾಸಿಯಂ ಅಂಶ ಇದೆ. ಇದು ನಮ್ಮ ದೇಹದ ಮೆಟಬಾಲಿಸಂ ಹೆಚ್ಚಾಗಿರೋಹಾಗೆ ಮಾಡಿ ದೇಹದಲ್ಲಿ ಹೆಚ್ಚು ನೀರು ಇಲ್ಲದಹಾಗೆ ಮಾಡುತ್ತೆ. ಇದ್ರಿಂದ ನಮ್ಮ ದೇಹದ ಕಾಪಾಡ್ಕೊಳೋದಕ್ಕೆ ಸಹಾಯ ಆಗುತ್ತೆ.

healthnparambariym.com

10. ಅನಿಮಿಯಾ / ರಕ್ತಹೀನತೆ ತಡೆಯತ್ತೆ.

ಬೆಲ್ಲದಲ್ಲಿ ಕಬ್ಬಿನ ಹಾಗೂ ವಿಟಮಿನ್ ಬಿ ಅಂಶ ಹೆಚ್ಚಾಗಿದೆ.ಬೆಲ್ಲ ತಿಂನ್ನೋದ್ರಿಂದ ರಕ್ತ ಹೀನತೆ ಆಗದೆ ನಮ್ಮ ದೇಹದಲ್ಲಿ ಕೊಂಪು ರಕ್ತ ಕಣಗಳು ಸರಿಯಾದ ಪ್ರಮಾದಲ್ಲಿ ಇರೋದಕ್ಕೆ ಸಹಾಯ ಮಾಡುತ್ತೆ. ಗರ್ಭಿಣಿಯರಿಗಂತೂ ತುಂಬಾನೇ ಒಳ್ಳೇದು. ದೇಹಕ್ಕೆ ತಕ್ಷಣ ಶಕ್ತಿ ಬರೋಹಾಗೆ ಮಾಡಿ ಆಯಾಸ ಹೋಗೋಹಾಗೆ ಮಾಡಿ, ಬಲಹೀನತೆ ಹೋಗಿಸುತ್ತೆ.

ಇಷ್ಟೆಲ್ಲಾ ಒಳ್ಳೆ ಗುಣ ಇರೋದ್ರಿಂದಾನೆ ನಮ್ಮಲ್ಲಿ ಸಾಮಾನ್ಯವಾಗಿ ದಿನನಿತ್ಯ ಅಡುಗೇಲೂ ಉಪಯೋಗಿಸೋದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಮ್ಮ ದೇಶದ ಬಗ್ಗೆ ಈ 13 ಸಂಗತಿಗಳ್ನ ತಿಳ್ಕೊಂಡ್ರೆ ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಾಗತ್ತೆ

ಸಕ್ಕರೆ ಉತ್ಪಾದನೆ ಕಂಡುಹಿಡಿದದ್ದು ನಮ್ಮ ದೇಶ!

ನಮ್ಮ ದೇಶ, ನಮಗೆ ಉಳಿಯಲು ನೆಲ, ಮಾಡಲು ಕೆಲಸ, ಹೊಟ್ಟೆಗೆ ಊಟ ಕೊಟ್ಟ ದೇಶ ನಮ್ಮ ದೇಶ. ನಮ್ಮ ದೇಶದ ಬೆಗ್ಗೆ ಕೆಲವು ವಿಷಯ ಚೆನ್ನಾಗೆ ತಿಳ್ಕೊಂಡಿರ್ತೀವಿ, ಆದ್ರೆ ಕೆಲವು ವಿಷಯ ಕೇಳಿದರೆ ನಮಗೆ ಹೌದಾ ಅಂತ ಆಶ್ಚರ್ಯ ಆಗತ್ತೆ. ಕೆಲವು ಅಂತ ವಿಷಯಗಳನ್ನ ನಾವಿಲ್ಲಿ ಹೇಳಿದೀವಿ. ನೋಡ್ಕೊಂಡ್ ಬನ್ನಿ 

1. ಪ್ರಪಂಚದಲ್ಲಿ ಅತಿ ಹೆಚ್ಚು ಅಂಚೆ ವ್ಯವಸ್ಥೆ ಇರೋದು ನಮ್ಮ ದೇಶದಲ್ಲೇ

1 ಲಕ್ಷದ 55 ಸಾವಿರ ಅಂಚೆ ಕಚೇರಿ ಇದೆ ನಮ್ಮ ದೇಶದಲ್ಲಿ. ಶ್ರೀನಗರದಲ್ಲಿ ತೆಲಾಡೋ ಅಂಚೆ ಕಚೇರಿ ಕೂಡ ಇದೆ 

amazingindiablog.in

2. ಕುಂಭಮೇಳಕ್ಕೆ ಸೇರೋ ಜನರ ಹಿಂದೂ ಬಾಹ್ಯಾಕಾಶದಿಂದ ಕಾಣಿಸತ್ತೆ 

2011ರ ಕುಂಭಮೇಳದಲ್ಲಿ 75 ಲಕ್ಷ ಜನ ಸೇರಿದ್ದರು. ಹಾಗೆ ಇಷ್ಟು ಜನರ ಹಿಂಡನ್ನು ಬಾಹ್ಯಾಕಾಶದಿಂದ ಗುರುತಿಸಲಾಗಿತ್ತು 

festivalsherpa-wpengine.netdna-ssl.com

3. ಪ್ರಪಂಚದಲ್ಲಿ ಅತಿ ಹೆಚ್ಚು ಮಳೆ ಬೀಳೋ ಜಾಗ : ಮಿಝೋರಾಂ, ಚಿರಾಪುಂಜಿ 

ಯಾವಾಗ್ಲೂ ಮಳೆ ಸುರಿಯೋದು ಇಲ್ಲೇನೇ.

cdn.pixabay.com

4. ಅತೀ ಎತ್ತರದಲ್ಲಿ ಕ್ರಿಕೆಟ್ ಮೈದಾನ ಇರೋದು ನಮ್ಮ ದೇಶದಲ್ಲಿ 

ಹಿಮಾಚಲ ಪ್ರದೇಶದ ಚೈಲ್ ಅಲ್ಲಿ ಇರೋದು 

statics.sportskeeda.com

5. ಶಾಂಪೂ ಅನ್ನೋದನ್ನ ಕಂಡು ಹಿಡಿದದ್ದು ನಮ್ಮವರೇ 

ಬಾಟಲಿನಲ್ಲಿರೋ, ಮರೆಕೆಟ್ನಲ್ಲಿ ಸಿಗೋ ಶಾಂಪೂ ಅಲ್ಲದೆ ಇದ್ರೂ ಗಿಡಮೂಲಿಕೆಗಳ ಮೂಲಕ ತಲೆಗೆ ಮಸಾಜ್ ಮಾಡ್ಕೊಳೋದನ್ನ ನಮ್ಮವರು ಕಂಡು ಹಿಡಿದದ್ದು. ಮೂಲತಃ ಶಾಂಪೂ ಅನ್ನೋ ಶಬ್ದ ಸಂಸ್ಕೃತದ ಚಂಪೂ ಅನ್ನೋ ಶಬ್ದದಿಂದ ಹುಟ್ಟಿರೋದು.

balancemebeautiful.com

6. ನಮ್ಮ ದೇಶದ ಕಬ್ಬಡ್ಡಿ ತಂಡ ಇಲ್ಲಿ ವರೆಗೂ ಎಲ್ಲ ವಿಶ್ವ ಕಪ್ ಗೆದ್ದಿದೆ 

ste.india.com

7. ಚಂದ್ರನ ಮೇಲೆ ನೀರಿದೆ ಅಂತ ಕಂಡುಹಿಡಿದದ್ದು ನಮ್ಮ ದೇಶದವರು 

ISRO ಚಂದ್ರಯಾನ-1 ಮೂಲಕ ಇದನ್ನು 2009 ರಲ್ಲಿ ಸಾಧಿಸಲಾಯಿತು 

svs.gsfc.nasa.gov

8. ನಮ್ಮ ಮಾಜಿ ಪ್ರಧಾನಿ ಅಬ್ದುಲ್ ಕಲಾಂ ಅವರಿಗೆ ಮುಡಿಪಾಗಿ ಸ್ವಿಟ್ಜರ್ಲ್ಯಾಂಡ್ ತನ್ನ ಸೈನ್ಸ್ ದಿನವನ್ನ ಆಚರಿಸತ್ತೆ 

ಅಬ್ದುಲ್ ಕಲಾಂ ಅವರು ಮೇ 26 ಸ್ವಿಟ್ಜರ್ಲ್ಯಾಂಡ್ಗೆ ಭೇಟಿ ಕೊಟ್ಟ ದಿನ. ಈ ದಿನ ಅಲ್ಲಿನ ಸೈನ್ಸ್ ದಿನವನ್ನ  ಎಂದು ಆಚರಿಸುತ್ತಾರೆ 

images.indianexpress.com

9. ನಮ್ಮ ದೇಶದಿಂದ ಹಾರಿಸಿದ ಮೊದಲನೇ ರಾಕೆಟ್ ಸಾಗಿಸಿದ್ದು ಸೈಕಲ್ಲಿನಲ್ಲಿ 

ಮೊದಲ ರಾಕೆಟ್ ಸಿಕ್ಕಾಪಟ್ಟೆ ಸಣ್ಣದು, ಇದನ್ನ ಕೆರೆಳದ "ತುಂಬಾ" ಲಾಂಚಿಂಗ್ ಸ್ಟೇಷನ್ನಿಗೆ ಸೈಕಲ್ಲಿನಲ್ಲಿ ತೊಗೊಂಡು ಹೋಗಿದ್ರು 

s-media-cache-ak0.pinimg.com

10. ಅತಿ ಹೆಚ್ಚು ಸಸ್ಯಹಾರಿ ಆಹಾರ ತಿನ್ನೋರು ನಮ್ಮ ದೇಶದಲ್ಲೇ ಇರೋದು 

scontent-frt3-2.cdninstagram.com

11. ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡೋ ದೇಶ ನಮ್ಮದು 

media.istockphoto.com

12. ಸಕ್ಕರೆ ಉತ್ಪಾದನೆ ಕಂಡುಹಿಡಿದದ್ದು ನಮ್ಮ ದೇಶ 

besthealthmag.ca

13. ವಜ್ರಗಳ ಗಣಿಗಾರಿಕೆ ಮೊದಲ ನಡೆದದ್ದು ನಮ್ಮ ದೇಶದಲ್ಲೇ

ಗುಂಟೂರ್ ಮತ್ತು ಕೃಷ್ಣ ನದಿಯ ತೀರದ ಜಿಲ್ಲೆಯಲ್ಲಿ. ಆಮೇಲೆ ದಕ್ಷಿಣ ಆಫ್ರಿಕಾದಲ್ಲಿ ಶುರುವಾಗಿದ್ದು 

scientificamerican.com
ನಿಮಗೆಷ್ಟು ಗೊತ್ತಿತ್ತು? ಇನ್ನು ಗೊತ್ತಿದ್ದರೆ ನಮಗೂ ತಿಳಿಸಿ...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: