ಈ 17 ಕೆಲಸಗಳ್ನ ಈಗಲೇ ಮಾಡದೆ ಹೋದ್ರೆ ಇನ್ನು ಹತ್ತು ವರ್ಷ ಆದ್ಮೇಲೆ ಬೇಜಾರ್ ಮಾಡ್ಕೋತೀರಿ

ಹುಡುಗಿ ಇಷ್ಟ ಆದ್ರೆ ಮುಲಾಜಿಲ್ದೆ ಹೇಳಿಬಿಡಬೇಕು

ಜೀವನ ಯಾವಾಗ್ಲೂ ಒಂದೇ ತರ ಇರೋದಕ್ಕೆ ಸಾಧ್ಯಾನಾ? ಈ ಕ್ಷಣ ಇದ್ದ ಹಾಗೆ ಮತ್ತೊಂದು ಕ್ಷಣ ಇರೋದಿಲ್ಲ. ಹಾಗೆ ಈ ದಿವ್ಸ ಮಾಡೋಕೆ ಆಗ್ದೇ ಇರೋ ಕೆಲಸ ಮತ್ತೆ ಯಾವತ್ತೂ ಮಾಡೋದಕ್ಕೆ ಆಗದೆನೆ ಹೋಗ್ಬೋದು. ಹೇಗ್ ಹೇಗೋ ಜೀವನ ಸವಿಬೇಕು ಅಂತ ಯೋಚ್ನೆ ಮಾಡ್ತಾ ಹೀಗೆ ಇರ್ಬೇಕು ಅಂತ ಪ್ಲಾನ್ ಮಾಡ್ತಾ ನಿಜವಾಗ್ಲೂ ಇವತ್ತೇನ್ ಮಾಡ್ಬೇಕು ಅನ್ನೋದನ್ನೇ ಮರ್ತೇ ಹೋಗ್ತೀವಿ. ಆದ್ರೆ ಮುಂದೊಂದಿನ ನಾನ್ ಏನೂ ಮಾಡ್ಲಿಲ್ವಲ್ಲ ಅಂತ ಕೊರಗೋ ಸಮಯ ಬಂದೇಬಿಡುತ್ತೆ. 20 ವರ್ಷದ ನಂತ್ರ ಕೊರಗಬಾರ್ದು ಅಂದ್ರೆ ನಾವ್ ಹೇಳೋ ಈ 17 ಕೆಲ್ಸಗಳನ್ನ ತಡ ಮಾಡ್ಬೇಡಿ.

1. ದಿನಾಗ್ಲೂ ವ್ಯಾಯಾಮ ಮಾಡಿ

ಪ್ರಪಂಚಕ್ಕೋಸ್ಕರ ಸುಂದರವಾಗಿ ಫಿಟ್ ಆಗಿರೋದಲ್ಲ, ನಿಮಗೋಸ್ಕರ ನೀವು ಫಿಟ್ ಆಗಿರ್ಬೇಕು. ನಿಮ್ಮನ್ನ ನೀವೇ ಪ್ರೀತ್ಸೋದು, ಪೋಷಣೆ ಮಾಡೋದು ಮುಖ್ಯ ಅಲ್ವಾ? ನಿಮ್ಮ ಜೀವನದುದ್ದಕ್ಕೂ ಎಷ್ಟೋ ಜನ ಬರ್ತಾರೆ ಹೋಗ್ತಾರೆ ಆದ್ರೆ ನಿಮ್ಮ ಜೊತೆ ಯಾವಾಗ್ಲೂ ಇರೋದು ನೀವ್ ಮಾತ್ರ. ನಿಮ್ಮನ್ನ ಒಂದೊಳ್ಳೆ ಶೇಪ್ನಲ್ಲಿ ನೀವೇ ನೋಡೋದಕ್ಕೆ ಇಷ್ಟ ಪಡ್ತೀರಾ ? ಹಾಗಾದ್ರೆ ಈ ತಕ್ಷಣ ನಿರ್ಧಾರ ಮಾಡಿ ದಿನಾಗ್ಲೂ ವ್ಯಾಯಾಮ ಮಾಡಿ. 40 ರ ನಂತ್ರ ಕೂಡ ಯಂಗ್ ಆಗಿ ಕಾಣ್ತೀರಿ.

photos.filmibeat.com

2.  ದುಡ್ಡು ಕಾಸು ಕೂಡಿಡಿ

ಬದುಕು ಮುಗ್ದೋಯ್ತು ಅನ್ನೋ ವಯಸ್ನಲ್ಲಿ "ಛೆ ನಾನೂ ವಯಸ್ನಲ್ಲಿದ್ದಾಗ ಸ್ವಲ್ಪ ಜಾಸ್ತಿನೇ ದುಡ್ಡು ಕಾಸು ಕೂಡಿಡಬೇಕಿತ್ತು" ಅನ್ಸೇ ಅನ್ಸುತ್ತೆ. ಜೀವನ ಅಷ್ಟು ಸುಲಭ ಅಲ್ವೇ ಅಲ್ಲ. ದುಡಿಯೋದೇನೂ ಕಷ್ಟ ಅಲ್ಲ ಆದ್ರೆ ದುಡಿದಿರೋದನ್ನ ಕೂಡಿಡೋದು ಜೋಪಾನ ಮಾಡೋದೇ ಕಷ್ಟ ಅಂತಾರೆ. ಅದಿಕ್ಕೆ ಇವತ್ತಿಂದಾನೆ ಹಣ ಕೂಡಿಡೋದಕ್ಕೆ ಶುರು ಹಚ್ಕೊಳ್ಳಿ.

assets.hudsonvalleynewsnetwork.com

3. ನಿಮ್ಮ ಕಾಳಜಿ ನೀವೇ ಮಾಡ್ಕೊಳಿ

ಮುಂದೊಂದಿನ  ನಿಮ್ಮ  ಕೂದಲಿಗೆ ಬಣ್ಣ ಹಚ್ಚೊವಾಗ ಅಯ್ಯೋ ನಾನು ಮೊದ್ಲೇ ನನ್ನ ಕೂದಲಿಗೆ ಚೆನ್ನಾಗ್  ಆರೈಕೆ ಮಾಡ್ಕೋಬೇಕಿತ್ತು. ಅಂದ್ಕೊಳ್ತಿರಿ. ಕೂದಲು ಉದುರೋದ್ರಂತೂ ಅದೆಷ್ಟು ವ್ಯಥೆ ಪಡ್ತೀರೋ ಯೊಚ್ಸಿ. ಅದಿಕ್ಕೆ ಹೇಳಿದ್ದು ಈ ಕೂಡ್ಲೇ ನಿರ್ಧಾರ ಮಾಡಿ ಮುಂದೆ ೩೫ ವರ್ಷ ಆದ್ಮೇಲೆ ಹೀಗಾಗ್ಬಾರ್ದಾಗಿತ್ತ್ತು ಅಂತ ಪೇಚಾಡೋದು ತಪ್ಪುತ್ತೆ. ಹಳದಿ ಹಲ್ಲು, ವಾಸನೆ ಇರೋ ಉಸಿರು,ಕೂದಲಿಲ್ದೆ  ಇರೋ ತಲೆ ಇದ್ಯಾವ್ದೂ ನೀವ್ ಇವತ್ತೇ  ಕಾಳಜಿ ಮಾಡದಿದ್ರೆ ತಡಿಯೋಕಾಗಲ್ಲ.

cdn.tinybuddha.com

4. ಮನಸಾರೆ ಯಾರ್ನಾದ್ರೂ ಪ್ರೀತಿಸಿ

ತುಂಬಾ ಸಲ ಇಷ್ಟ ಇದ್ಯೋ ಇಲ್ವೋ ಕೆಲಸ ಮಾತ್ರ ಮಾಡ್ತಾ ಇರ್ತೀವಿ. ನನ್ನ ಇಷ್ಟನೇ ಬೇರೆ ಇನ್ನೇನೋ ಮಾಡಬಲ್ಲೆ ಅನ್ನಿಸಿದ್ರೆ ಅದನ್ನ ಮಾಡೋ ಕಡೆ ಗಮನ ಕೊಡಿ. ಯಾಕಂದ್ರೆ ನಾವ್ ಹೀಗೆ ಏನೋ ಆಗ್ಬೇಕು ಅನ್ನೋದನ್ನ ಚಿಕ್ಕ ವಯಸ್ಸಿನಿಂದಾನೇ ಕನಸು ಕಂಡಿರ್ತೀವಿ. ನಿಮ್ಮ ಯೌವ್ವನದಲ್ಲಿ ಚಾಲೆಂಜನ್ನ ತೊಗೊಳ್ದೆ ಹೋದ್ರೆ ಮುಂದೊಂದಿನ ನಾನು ಹತ್ತು ವರ್ಷದ ಮೊದ್ಲೇ ಮನಸ್ಸು ಮಾಡಿದ್ರೆ ಇದನ್ನ ಮಾಡಬೋದಿತ್ತು ಆದ್ರೆ ಈಗ ಸಮಯ ಮಿರೋಯ್ತು ಅನ್ನೋ ಸಂದರ್ಭ ಬರದೇ ಇರೋ ಹಾಗೆ ಮಾಡಬೋದು.

az616578.vo.msecnd.net

5. ನಿಮಗೆ ಸರಿಯಿಲ್ಲದೋರ್ನ ಪ್ರೀತಿಸಿ

ಸರಿಯಾದೋರ್ಗೂ ಸರಿಯಿಲ್ಲದೋರ್ಗೂ ವ್ಯತ್ಯಾಸ ಗೊತ್ತಾಗೋದು ಹೇಗೆ? ಇದೂ ಒಂದು ವಿಧಾನ. ನನಗೆ ಎಂಥವರು ಇಷ್ಟ ಆಗಲ್ಲ ಅಂತ ಗೊತ್ತಾಗಿಬಿಟ್ಟರೆ ಅಂಥವರನ್ನ ಮುಂದೆ ಕೈಬಿಡಬಹುದು.

qalam.ch/wp-content

6. ಎಷ್ಟಾಗುತ್ತೋ‌ ಅಷ್ಟು ಪ್ರಪಂಚ ಸುತ್ತಿ

ಈ ಬದುಕಲ್ಲಿ ಯಾವತ್ತೂ ನೀವು ಅಂದ್ಕೊಳ್ಳೋ ತಾರಾ ಫ್ರೀ ಟೈಮ್ ಅನ್ನೋದು ಬರೋದೇ ಇಲ್ಲ. ಇವತ್ತೆ ನೀವ್ ಪ್ಲಾನ್ ಮಾಡದಿದ್ರೆ ಕೆಲಸ ಆಗೋದಕ್ಕೆ ಛಾನ್ಸೇ ಇರಲ್ಲ. ಎಲ್ಲಿಗಾದ್ರೂ ಹೋಗ್ಬೇಕು ಏನಾದ್ರೂ ಅಡ್ವೆಂಚರಸ್ ಆಗಿ ಮಾಡ್ಬೇಕು ಅನ್ನಿಸ್ತಾ ಇದ್ರೆ ಇವತ್ತೇ ಪ್ಲಾನ್ ಮಾಡೋಕೆ ಶುರು ಮಾಡಿ. ನೀವು ಫ್ರೀ ಟೈಮ್ ಗೋಸ್ಕರ ಕಾಯ್ತಾ ಕಾಸಿಗೆ ಕಾಸು ಕೂಡಿಡ್ತಾ ಆ ವಿಷ್ಯ ಮುಂದೆ ಹಾಕ್ತಾ ಬಂದ್ರೆ ಹಣ ಇರುತ್ತೆ ಆದ್ರೆ ಎಂಜಾಯ್ ಮಾಡೋದಕ್ಕೆ ಆರೋಗ್ಯ ಸಾಥ್ ಕೊಡೋದಿಲ್ಲ.

campusville.in

7.  ಮನೆಯೋರ ಜೊತೆ ಕಾಲ ಕಳೀರಿ

ಬೆಳಿತಾ ಬೆಳಿತಾ ನಮ್ಮ ತಂದೆ ತಾಯಿಗೆ ಸಮಯ ಕೊಡೋದನ್ನೇ ಮರ್ತೇ ಬಿಡ್ತಿವಿ. ಆದ್ರೆ ನಮ್ಮದೇ ಮದ್ವೆ ಮಕ್ಕಳು ಸಂಸಾರ ಅಂತ ಆದ್ಮೇಲೂ ಅವರ ಜೊತೆ ಸಮಯ ಕಲಿಯೋದಕ್ಕೂ ಕಷ್ಟ ಪಡ್ತೀವಿ. ನಮ್ಮ ಮಗು ಹೇಗೆ ಬೆಳೆದು ದೊಡ್ಡದಾಯ್ತು ಅನ್ನೋದೇ ನೆನಪಿಲ್ಲಅಂದ್ರೆ ಎಂಥಾ ಅಪರೂಪದ ಕ್ಷಣ ಕಳ್ಕೊಂಡ ಹಾಗೆ ಅಲ್ವಾ? ಹಾಗೆ ನಮ್ಮನ್ನ ಬೆಳೆಸಿದವರೂ ಬೇಜಾರ್ ಮಾಡ್ಕೊಳ್ಳೋದು ಎಷ್ಟು ಸಂಕಟ ಕೊಡೊ ವಿಷ್ಯ ಅಲ್ವಾ? ಯೋಚ್ಸಿ ನಿಮಗೋಸ್ಕರ ನಿಮ್ಮ ಮನೆಯವರ ಜೊತೆ ಸಮಯ ಕಳಿಯೋ ಅಭ್ಯಾಸ ಮಾಡ್ಕೊಳಿ.

il4.picdn.net

8. ಕೆಲಸಕ್ಕೆ ಕೊಡಬೇಕಾದ ಸ್ಥಾನ ಮಾತ್ರ ಕೊಡಿ, ಜಾಸ್ತಿ ಬೇಡ

ಆಫಿಸಲ್ಲಿ ತಡ ರಾತ್ರಿವರ್ಗೂ ಕೂತಿದ್ದು ಕೆಲ್ಸಮಾಡೋದು ಈಗೊಂತರ ಟ್ರೆಂಡ್ ಆಗೋಗಿದೆ. ನಿಜ ಹಾಗೆ ನೀವು ಶ್ರಮ ಪಟ್ಟು ಕೆಲಸ ಮಾಡೋದ್ರಿಂದ ಇವತ್ತಿನ ಮಟ್ಟಿಗೆ ನಿಮಗೆ ಯಶಸ್ಸು ಸಿಗುತ್ತೆ. ಆದ್ರೆ ೧೦ ವರ್ಷ ಆದ್ಮೇಲೆ ನೀವು ಈಗ ಕಳೆದುಕೊಂಡ ಸಮಯ ಮತ್ತೆ ಬರೋದಿಲ್ಲ. ಸ್ನೇಹಿತರು, ಫ್ಯಾಮಿಲಿ, ಸಿನಿಮಾ , ಪಾರ್ಟಿ  ಅಂತೆಲ್ಲಾ ಈಗ ಸಮಯ ಮಾಡ್ಕೊಳ್ದೆ ಹೋದ್ರೆ ಮುಂದೆ ಯಾರೂ ಕಾರ್ಯೋದೂ ಇಲ್ಲ ನಿಮಗೋಸ್ಕರ ಕಾಯೋದೂ ಇಲ್ಲ.  ಸಂತೋಷವನ್ನ ಸವಿಯೋದನ್ನ ಮುಂದೆ ಹಾಕ್ಬಾರ್ದು.

livemint.com

9. ಮದುವೆ ಆಗಿ

ತುಂಬಾ ಲೇಟಾಗಿ ಮದುವೆ ಆದ್ರೆ ಅದರ ತೊಂದರೆಗಳು ಒಂದಲ್ಲ ಎರಡಲ್ಲ. ವಯಸ್ಸಾಗ್ತಾ ಆಗ್ತಾ ಮಕ್ಕಳು ಆಗೋದೂ ಕಷ್ಟ, ಮಕ್ಕಳನ್ನ ನೋಡ್ಕೊಳೋದೂ ಕಷ್ಟ. ಹಾಗೇ, ಗಂಡ ಹೆಂಡ್ತಿ ಹೊಂದ್ಕೊಂಡು ಹೋಗೋದೂ ಬರ್ತಾ ಬರ್ತಾ ಕಷ್ಟ ಆಗುತ್ತೆ.

news2.onlinenigeria.com

10. ಒಬ್ಬರೇ ಬದುಕಿ ನೋಡಿ

ಮದ್ವೆಗಿಂತ ಮೊದ್ಲು ತಂದೆ ತಾಯಿ ಅಕ್ಕ ತಮ್ಮ ಅಣ್ಣ ತಂಗಿ ನೆಂಟರು ಸ್ನೇಹಿತರು ಎಲ್ಲರನ್ನೂ ಬಿಟ್ಟು ದೂರಹೋಗಿ ಒಂಟಿಯಾಗಿ ಜೀವನದ ಅನುಭವ ಪಡೆಯೋದೇ ಒಂತರಾ ಮಜಾ. ನೀವೀಗ ಅದನ್ನ ಮಾಡದೆ ಇದ್ರೆ ಮುಂದೆ ಅಂತ ಸಮಯ ಬರೋದಿಲ್ಲ. ಒಂಟಿಯಾಗಿದ್ದಾಗ ನಿಮ್ಮನ್ನ ನೀವು ಹೆಚ್ಚು ಅರ್ಥ ಮಾಡ್ಕೋತೀರಿ. ಹೊಸ ವಿಷ್ಯ ಕಲೀತೀರಿ.

media.nomadicmatt.com

11. ಸ್ನೇಹಿತರನ್ನ ಉಳಿಸಿಳ್ಳಿ, ಕಳ್ಕೋಬೇಡಿ

ದೊಡ್ಡವರಾಗ್ತಾ ಆಗ್ತಾ ಪ್ರತಿಯೊಬ್ಬರ ಜೀವನ ದಿಕ್ಕೂ ಬದಲಾಗ್ತಾ ಹೋಗುತ್ತೆ. ಆಗ ಸ್ನೇಹಿತರೆಲ್ಲಾ ತಮ್ಮ ತಮ್ಮ ದಿಕ್ಕಿನ ಕಡೆ ಮುಖ ಮಾಡಿ ಹೊರಟೋಗ್ತಾರೆ. ಆದ್ರೆ ಸ್ನೇಹವನ್ನ ಸ್ನೇಹಿತರನ್ನ ನಿಭಾಯಿಸೋದು ಕೂಡ ಒಂದು ಕಲೆ. ಯಾವ್ಯಾವ್ದೋ ಬೇಡದ ವಿಚಾರಕ್ಕೆ ತಲೆ ಕೆಡಿಸ್ಕೊಂಡು ಸ್ನೇಹ ಕಳ್ಕೊಂಡ್ರೆ ನಷ್ಟ ತುಂಬೋದು ಸಾಧ್ಯ ಇಲ್ಲ.

pixelstalk.net

12. ಅತಿ ಹೆಚ್ಚು ಚಿಂತೆಯಿಂದ ದೂರ ಇರಿ

ಇವತ್ತು ನಿಮ್ಮ ಪಾಲಿಗೆ ತುಂಬಾ ದೊಡ್ಡ ಕಷ್ಟ ಅಂತ ಕಾಣ್ತಿರೋ ವಿಷ್ಯ ಕೆಲವು ವರ್ಷದ ನಂತರ ಏನೇನೂ ಅಲ್ವೇ ಅಲ್ಲ ಅನ್ನಿಸ್ಬಿಡುತ್ತೆ. ನಿಮ್ಮ ಪರೀಕ್ಷೆ, ಕೆಲಸದ ಒತ್ತಡ ಯಾವುದೇ ಆಗಿರ್ಲಿ ತುಂಬಾ ಚಿಂತೆ ಮಾಡೋದಕ್ಕೆ ಹೋಗ್ಬೇಡಿ. ಆಗ್ಬೇಕಾದ್ದು ನಾವ್ ಏನೇ ಯೋಚಿಸಿದ್ರೂ ಆಗೇ ಆಗುತ್ತೆ. ಸಮಯ ಮುಂದೆ ಹೋಗೋದಕ್ಕೆ ಬಿಡಿ ಸಾಕು ಎಲ್ಲಾದಕ್ಕೂ ಉತ್ತರ ಸಿಕ್ಕೇ ಸಿಗುತ್ತೆ.

anxietybegone.com

13. ತಪ್ಪು ಒಪ್ಕೊಳಿ

ಯಾವತ್ತೋ ಒಂದಿನ ನೀವು ಕಳ್ಕೊಂಡ ಸ್ನೇಹ ಸಂಬಂಧಕ್ಕೋಸ್ಕರ ಕೊರಗೋದು ಗ್ಯಾರೆಂಟಿ. ಹಾಗೆ ಆಗ್ಬಾರ್ದು ಅಂದ್ರೆ ಆಗಿಂದ್ದಾಗ್ಗೆ ತಪ್ಪಾಯ್ತು ಅಂತ ಹೇಳಿ ಸಂಬಂಧ ಉಳಿಸ್ಕೊಳ್ಳಿ. ಹಾಗೆ ಮಾಡೋದ್ರಿಂದ ನಿಮ್ಮ ಜೀವನಕ್ಕೆ ತುಂಬಾ ಮುಖ್ಯವಾದವ್ರನ್ನ ಕಳ್ಕೊಳ್ಳೋ ಸಂದರ್ಭ ಬರೋದೇ ಇಲ್ಲ.

blogs.psychcentral.com

14. ಕೂತಲ್ಲೇ ಕೂತಿರಬೇಡಿ, ಎದ್ದು ಕೆಲಸಗಳ್ನ ಕೈಗೆ ತೊಗೊಳ್ಳಿ

ಸ್ವಲ್ಪ ಫೋನ್ ಪಕ್ಕಕ್ಕಿಟ್ಟು ಹೊರಗೋಗಿ ಸ್ವಲ್ಪ ಹೊಸದೇನಾದ್ರೂ ಮಾಡೋ ಪ್ರಯತ್ನ ಮಾಡಿ. ಹೊಸ ಪ್ರೆಂಡ್ಸ್ ಮಾಡ್ಕೊಳ್ಳಿ, ಹೊಸ ಜಾಗಕ್ಕೆ ಹೋಗ್ಬನ್ನಿ, ಹೊಸ ತಿಂಡಿ ರುಚಿ ನೋಡಿ. ಸುಮ್ನೆ ಯಾವಾಗ್ಲೂ ಫೋನ್ಗೆ ಅಂಟಾಕ್ಕೊಂಡು ಒಳ್ಳೊಳ್ಳೆ ಅನುಭವಗಳು ಇಲ್ಲದ ಹಾಗೆ ಮಾಡ್ಕೋಬೇಡಿ.

s-media-cache-ak0.pinimg.com

15.  ಹುಡುಗಿ/ಗ ಇಷ್ಟ ಆದ್ರೆ "ನೀನಂದ್ರೆ ನಂಗಿಷ್ಟ" ಅಂತ ಮುಲಾಜಿಲ್ದೆ ಹೇಳಿಬಿಡಿ

ಹೂ ಮತ್ತೆ …ಹಾಗೆ ಯಾವ್ದಾದ್ರೂ ಹುಡುಗಿ ನಿಮ್ಮ ಮನಸ್ಸಿಗೆ ಹಿಡ್ಸಿದ್ರೆ ಮೊದ್ಲು ಅದನ್ನ ಹೇಳೋ ಬಗ್ಗೆ ಚಿಂತೆ ಮಾಡಿ. ಸುಮ್ನೆ ಆಮೇಲೆ ಪೇಚಾಡಿಕೊಂಡ್ರೆ ಏನ್ ಉಪಯೋಗ?

s2.favim.com

16. ನಿಮಗೆ ಕೊಡಬೇಕಾದ ಬೆಲೆ ಯಾರು ಕೊಡದೆ ಹೋದ್ರೂ ಪರವಾಗಿಲ್ಲ, ನೀವು ಕೊಡಿ

ಯಾವಾಗ್ಲೂ ಅವ್ರಿವರಿಗೆ ಏನ್ ಬೇಕೋ ? ಹೇಗಿರ್ಬೇಕೋ , ಅವ್ರೆನ್ ಅಂದ್ಕೊತಾರೋ ಅಂತ ನಿಮ್ಮನ್ನ ನೀವು ಕಟ್ಟಕ್ಕೊಳ್ಳೋದನ್ನ ಬಿಡಿ. ನಿಮ್ಮ ಆಸೆ ಇಷ್ಟ ಕಷ್ಟ ಎಲ್ಲದ್ರ ಬಗ್ಗೆನೂ ಗಮನ ಕೊಡಿ.

media.new.mensxp.com

17. ಜನ ಹುಚ್ಚು ಅಂದರೇನಂತೆ, ನಿಮಗನ್ನಿಸಿದ್ದು ನೀವು ಮಾಡಿ

ವಯಸ್ಸು ಚಿಕ್ಕಂದಿರೋವಾಗ ಏನಾದ್ರೂ ಹುಚ್ಚು ಆಲೋಚನೆ ಬಂದ್ರೆ ಹೀಗ್ ಮಾಡ್ಲೆಬೇಕು ಅನ್ಸಿದ್ರೆ ಮಾಡ್ಬಿಡಿ. ಆಮೇಲೆ ಇದನ್ನೆಲ್ಲಾ ಯೋಚನೇ ಮಾಡೋದಕ್ಕೂ ಟೈಮ್ ಇರೋದಿಲ್ಲ.

bungeeadventures.net

    ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

    ಮಕ್ಕಳು ಸ್ಕೂಲಿಗೆ ಹೋಗೇ ಕಲೀಬೇಕೋ ಅಥ್ವಾ ಬೇರೆ ದಾರೀನೂ ಇದ್ಯೊ? ಉತ್ತರ ಇಲ್ಲಿದೆ

    ಇತ್ತೀಚೆಗೆ ಚರ್ಚೆ ಆಗ್ತಿರೋ ವಿಷಯ.

    ಸಾಮಾನ್ಯವಾಗಿ ಕಲಿಬೇಕು ಅಂದ್ರೆ ಮಕ್ಕಳು ಎಲ್ರ ಥರ ಸ್ಕೂಲ್ಗೆ ಹೋಗ್ಲೇಬೇಕು ಅಂದ್ಕೋತಾರೆ ಅಪ್ಪ-ಅಮ್ಮ. ಆದ್ರೆ, ಮಗು ನಂಗೆ ಎಲ್ಲರ ಥರ ಕಲ್ಯಕ್ ಆಗಲ್ಲ; ನಂಗೆ ಅವ್ರು-ಇವ್ರು ಕಲೀತಾರೆ ನೀನ್ ಮಾತ್ರ ಕಲೀತಿಲ್ಲ ಅಂದ್ರೆ ಕಷ್ಟ ಆಗತ್ತೆ; ಸ್ಕೂಲಲ್ ಕಲ್ಸೋ ಎಷ್ಟೋ ವಿಷಯ ಬೋರ್ ಆಗತ್ತೆ ಅಂದ್ರೆ ಏನ್ ಗತಿ? ಗಾಬರಿ ಆಗ್ಬೇಡಿ, ಅಂಥ  ಮಕ್ಕಳ್ಗಾಗೆ ಸರ್ಕಾರ ಶುರು ಮಾಡಿರೋ ಕಾರ್ಯಕ್ರಮದ ಬಗೆ ತಿಳಿಸ್ತೀವಿ. ಓದಿ...

    1) ಮಕ್ಕಳು ಶಾಲೆ ಬಿಡಕ್ಕೆ ದುಡ್ಡೊಂದೇ ಕಾರಣ ಅಲ್ಲ

    ತುಂಬಾ ಮಕ್ಕಳು ದುಡ್ಡಿಲ್ದೇನೋ, ಬೇರೆ ಯಾವ್ದೋ ಸಾಮಾಜಿಕ ಕಾರಣಕ್ಕೋ ಸ್ಕೂಲ್ ಬಿಡ್ತಿದ್ದಾರೆ. ಇನ್ನೂ ಕೆಲವ್ರು ಗಣಿತ, ವಿಜ್ಞಾನದಂಥ ಕಡ್ಡಾಯ ವಿಷಯ ಪಾಸಾಗ್ದೆ ಆಚೆ ಹೋಗ್ತಿದ್ದಾರೆ.

    https://antekante.com/sites/default/files/images/e2b9befc3c6a3729c61e61487edd402c_1.jpg

    2)  ಬಿಟ್ಟ ಮೇಲೆ ಮನಸ್ಸು ಬದ್ಲಾಯ್ತು ಅಂದರೆ ಏನ್ ಮಾಡೋದು ?

    ಸ್ಕೂಲ್ ಒಂದ್ ಸರ್ತಿ ಬಿಟ್ಟ ಮೇಲೆ ಮತ್ತೆ ಸೇರ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಹೆಚ್ಚಿನ ಓದಿಗಾಗಿ ಕಾಲೇಜು ಸೇರ್ಕೊಳ್ಳಕ್ಕೆ ಇನ್ನೂ ಪರದಾಡಬೇಕು. ಕೈಕಾಲು, ಆರೋಗ್ಯ ಎಲ್ಲ ಸರಿ ಇದ್ದು, ದುಡ್ಡು ಇದ್ದು, ದೊಡ್ಡ ಊರು ಹತ್ತಿರ ಇದ್ರೆ ಮಾತ್ರ ಹೇಗೋ ಓದು ಮುಗಿಸ್ಬೋದು. ಇಲ್ಲ ಅಂದ್ರೆ ಬೋ ಕಷ್ಟ.

    opensocietyfoundations.org

    3) ಸ್ಕೂಲ್ಗ್ ಹೋಗಿ ಓದಕ್ಕೆ ಆಗಲ್ಲ ಅನ್ನೋರ್ಗೆ ಅಂತಾನೇ ಸರ್ಕಾರ "ನ್ಯಾಷನಲ್  ಇನ್ಸ್ಟಿಟ್ಯೂಟ್ ಆಫ್  ಓಪನ್ ಸ್ಕೂಲ್" (NIOS) ತೆಗ್ದಿದೆ

    ಹೀಗೆ, ಸ್ಕೂಲ್ ಬಿಟ್ಟೋರ್ಗೆ, ಸ್ಕೂಲ್ಗೆ ಸೇರ್ದೆ ಇರೋರ್ಗೆ, ಶಾಲೆಗಿಂತ ಬೇರೆ ರೀತಿ ಓದ್ಗೆ ಅವಕಾಶ ಮಾಡ್ಕೊಡ್ಬೇಕಿತ್ತು. ಇದಕ್ಕಾಗಿ ಓಪನ್ ಸ್ಕೂಲಿಂಗ್ ಎಂಬ ಬೇರೆ ಥರಾ ಕಲಿಸೋ ಯೋಜನೆ ಶುರು ಆಯ್ತು. ಇದೇ ಮುಂದೆ ೨೦೦೨ರಲ್ಲಿ "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್"(NIOS) ಅಂತ ಹೊಸ ಹೆಸ್ರು ತೊಗೋತು.

    4) ಬಲವಂತ, ಒತ್ತಾಯ ಇಲ್ದೆ ಈ ಥರ ಕಲಿಯೋದು ಎಷ್ಟು ಆರಾಮ್ ಅಲ್ವ?

    ಸುಲಭವಾಗಿ ಅರ್ಥ ಆಗೋ ಅಂತ ರೀತಿ ಮತ್ತು ಒಳ್ಳೇ ಕಲಿಕೆ ಎಲ್ಲಾರ್ಗೂ ಸಿಗ್ಬೇಕು, ಬೇಕಾದೋರ್ಗೆಲ್ಲಾ ತಲುಪಬೇಕು ಅನ್ನೋದೊಂದೇ ಉದ್ದೇಶ. ಪಿ.ಯು.ಸಿ.ವರೆಗೆ ಮಕ್ಕಳು ತಂತಂ ಭಾಷೇಲೇ, ಯಾವುದೇ ಬಲವಂತ, ಒತ್ತಾಯ ಇಲ್ದೆ ಕಲಿಯಕ್ಕೆ ಇರೋ ಒಳ್ಳೆ ಅವಕಾಶ.


    5) ನಮ್ಗೆ ಇಷ್ಟವಾದ 5 ವಿಷಯ ಆಯ್ಕೆ ಮಾಡ್ಕೋಬೋದು. ಅಂದ್ರೆ, ಸ್ಕೂಲಲ್ ಕಲಿಸೊ ಯಾವ್ದಾದ್ರೂ ವಿಷಯ ಬೇಡ ಅನ್ಸಿದ್ರೆ ಕೈ ಬಿಡ್ಬೋದು !

    ಸ್ಕೂಲಲ್ಲಿ ಬಲವಂತವಾಗಿ 6 ವಿಷಯ ಕಲೀಬೇಕು ಅನ್ನದು ಮಾಮೂಲಿ ಆದ್ರೆ, ಇಲ್ಲಿ ಯಾವ್ದಾದ್ರೂ 5 ವಿಷಯಾನ ಆರಿಸ್ಕೊಬೋದು—ಒಂದು ಭಾಷೆ ಕಡ್ಡಾಯ, ಬೇಕು ಅನ್ಸಿದ್ರೆ ಎರಡು ತೊಗೋಬೋದು. ಜಾಸ್ತಿ ವಿಷಯ ಬೇಕು ಅಂದ್ರೂನೂ ಕಲೀಬೋದು. ಮಧ್ಯೆ ಬೋರಾದ್ರೆ ಬದ್ಲಾಯಿಸ್ಕೋಬೋದು. ಯಾವ್ದು ಸುಲಭಾನೋ ಅದ್ರಲ್ಲಿ ಪರೀಕ್ಷೇಗೆ ಕೂತ್ಕೋಬೋದು.


    6) ಮೂರು ಹಂತದಲ್ಲಿ ಈ ಕಾರ್ಯಕ್ರಮ ನಡೆಯತ್ತೆ.  ಜೀವನೋಪಾಯಕ್ಕಾಗಿ ಏನು ಬೇಕೋ ಅದನ್ ಕಲಿಯೋ ಅವಕಾಶಾನೂ ಇರುತ್ತೆ.

     

    NIOS ಕಾರ್ಯಕ್ರಮ ಹೀಗಿರುತ್ತೆ, ನೋಡಿ: 3, 5 ಮತ್ತು 8ನೇ ತರಗತಿಗೆ ಸಮವಾಗಿ 3 ಹಂತ ಇರುತ್ತೆ. 4 ಎಸ್.ಎಸ್.ಎಲ್.ಸಿ. ಮತ್ತೆ, 5 ಪಿ.ಯು.ಸಿ. ಪ್ರತಿ ಹಂತ ದಾಟಿದ್ದಕ್ಕೆ NIOS ಪರೀಕ್ಷೆ ಮಾಡಿ, ಪಾಸಾದ್ರೆ ಪ್ರಮಾಣಪತ್ರಾನೂ ಕೊಡತ್ತೆ. ಈ ಪ್ರಮಾಣಪತ್ರಕ್ಕೆ ಬೇರೆ ಬೋರ್ಡ್ಗಳ ಪ್ರಮಾಣಪತ್ರದಷ್ಟೇ ಪವರ್ರು.

     

    7)  ಆನ್ಲೈನ್ ಮೂಲಕ ಕೋರ್ಸ್ ಸೇರ್ಬೋದು, ಒಂದು ಕೋರ್ಸ್ ಮುಗ್ಸಕ್ಕೆ 5 ವರ್ಷ ಸಮಯ ಇದೆ, ಪಾಸ್ ಮಾಡೋಕೆ ಬೇಜಾನ್ ಅವಕಾಶ ಇದೆ.

    ಈ ಕಾರ್ಯಕ್ರಮನ್ನ ನಡೆಸೋ ರೀತೀನೂ ಬೇರೇನೇ: ಮಾಧ್ಯಮಗಳ ಮೂಲಕ ಪುಕ್ಕಟೆ ಕಲಿಸೋ ಕಾರ್ಯಕ್ರಮಗಳು ಇರತ್ತೆ. ನೀವ್ ಕಲೀತಿದ್ದೀರೋ ಇಲ್ವೋ ಅಂತ ನೀವೆ ಕಂಡ್ಕೋಬೋದು. ನೀವ್ ಬೇಕು ಅಂದ್ರೆ, ಓದ್ಗೆ ಬೇಕಾಗೋ ಪುಸ್ತಕ, ವೀಡಿಯೋ, ಆಡಿಯೋ ಎಲ್ಲ NIOS ಪೂರೈಸತ್ತೆ. ಕನ್ನಡ್ದೋರಿಗೆ ಇದೆಲ್ಲ ಬರೀ ಇಂಗ್ಲೀಷಲ್ ಸಿಗತ್ತೆ. ಆದ್ರೆ ಎಸ್.ಎಸ್.ಎಲ್.ಸಿ. ಮತ್ತೆ ಪಿ.ಯು.ಸಿ. ಪರೀಕ್ಷೇನ ಮಾತ್ರ ಇಂಗ್ಲಿಷಲ್ಲೇ ಬರೀಬೇಕು ಅಂತಿಲ್ಲ, ಕನ್ನಡದಲ್ಲೂ ಬರೀಬೋದು.

    8) ಪರೀಕ್ಷೆ ಹೇಗಿರತ್ತೆ ಅಂದ್ರೆ, ಮಕ್ಕಳು ಎಲ್ಲಾ ವಿಷಯಾನು ಒಂದೇ ಸಲ ಬರ್ದು ಮುಗಿಸ್ಬೇಕು ಅಂತೇನಿಲ್ಲ.

    ವರ್ಷಕ್ಕೆ ಎರ್ಡು ಸರ್ತಿ ಪರೀಕ್ಷೆ ನಡೆಸ್ತಾರೆ. ಬೇಕು ಅನ್ನಿಸಿದಾಗ, ನಾನು ತಯಾರಾಗಿದೀನಿ ಅನ್ನಿಸ್ದಾಗ ಪರೀಕ್ಷೆಗ್ ಕೂತ್ಕೋಬೋದು. ಪಾಸಾಗಕ್ಕೆ 33% ಬೇಕೇ ಬೇಕು. ಆದ್ರೆ, ಜಾಸ್ತಿ ಬರ್ಬೇಕು ಅಂತ ಅನ್ಸಿದ್ರೆ ಮತ್ತೆ-ಮತ್ತೆ ಪರೀಕ್ಷೆ ತೊಗೋಬೋದು.

    ಇನ್ನೂ ಹೆಚ್ಚು ಮಾಹಿತಿ ಬೇಕಿದ್ರೆ ಈ ವೆಬ್ ಸೈಟ್ ನೋಡಿ: www.nios.ac.in  ಅಥ್ವಾ ಇಲ್ಲಿಗೆ ಮಿಂಚಂಚೆ ಬರ್ದು ವಿಚಾರ್ಸಿ: rcdelhi@nios.ac.in, rcbengaluru@nios.ac.in.

    ಇದಲ್ದೆ,  ದುಡ್ಡಿಲ್ದೆ ಈ ನಂಬರ್ಗೆ ಫೋನ್ ಮಾಡಿ ಕೇಳಿ: 18001809393.

    ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: