ಸಕತ್ ತಲೆ ಉಪ್ಯೋಗಿಸಿ ಕಂಡುಹಿಡಿದಿರೋ ಈ 14 ಆವಿಷ್ಕಾರಗಳ್ನ ನೋಡಿದ್ರೆ ಸಾಕು ಬಳಸಕ್ಕೆ ನೀವು ರೆಡಿ ಆಗ್ತೀರಿ

ಸಮಯ ಉಳಿಸಕ್ಕೆ ಏನೇನು ಮಾಡ್ಬೇಕೋ?

ಪ್ರತಿ ನಿತ್ಯ ನಾವು ಮಾಡೋ ಕೆಲಸ ಅಥವಾ ಸಣ್ಣ ಪುಟ್ಟ ವಿಷಯಗಳಿಗೆ ಒಂದು ಸ್ವಲ್ಪ ಬದಲಾವಣೆ ತಂದ್ರೆ ಆ ಕೆಲಸ ತುಂಬಾ ಸಲೀಸಾಗುತ್ತೆ. ಅಂತ ಕೆಲವು ಈ ಕೆಳಗಿನ ಪಟ್ಟಿಯಲ್ಲಿದೆ.

1.ದಾರೀಲೆ ಲಿಫ್ಟ್ ಬಟನ್. 

ಲಿಫ್ಟ್ ಹತ್ತಿರೋ ಹೋಗಿ ಅದು ಬರ್ಲಿ ಅಂತ ಒತ್ತೋ ಬಟನ್ ಸಾಮಾನ್ಯವಾಗಿ ಲಿಫ್ಟ್ ಹತ್ರ ಇರುತ್ತೆ. ಆಮೇಲೆ ಅದು ಬರೋವರ್ಗು ಕಾಯ್ಬೇಕಾಗುತ್ತೆ. ಅದನ್ನ ತಪ್ಪಿಸೋದಕ್ಕೆ ಅಂತಾನೆ ಇಲ್ಲಿ ಲಿಫ್ಟ್ ಗೆ ಹೋಗೋ ದಾರೀಲಿರೋ ಗೋಡೆ ಮೇಲೆ ಬಟನ್ ಇಟ್ಟಿದ್ದಾರೆ. ಇದನ್ನ ಒತ್ತಿ ನೀವು ಲಿಫ್ಟ್ ಇತೋ ಜಾಗಕ್ಕೆ ಹೋಗೋ ಹೊತ್ತಿಗೆ ಲಿಫ್ಟ್ ಬರುತ್ತೆ ಅಂತ.

https://files.brightside.me/files/news/part_39/394860/16913210-eDr2xAL-1509355071-650-f0145c3c6e-1510091738.jpg

2. ಹೋಟೆಲ್ಗೆ ಹೋದಾಗ ಯಾರು ನಿಮ್ಮ ಹತ್ತಿರ ಬರ್ತಿಲ್ಲ ಅಂತ ಅನ್ನಿಸ್ತಿದ್ರೆ ಮಾಣಿ / ವೈಟರ್ ಕರೆಯೋದಕ್ಕೆ, ನಿಮ್ಮ ಟೇಬಲ್ ಕ್ಲೀನ್ ಮಾಡೋವ್ರನ್ನ ಕರಿಯೋದಕ್ಕೆ ಹಾಗೆ ಬಿಲ್ ತಂದುಕೊಡಿ ಅಂತ ಹೇಳೋದಕ್ಕೆ ಅಂತ ಮಾಡಿರೋ ಪುಟ್ಟ ರಿಮೋಟ್ ಕಂಟ್ರೋಲ್.

https://files.brightside.me/files/news/part_39/394860/16913160-rv8fxGQ-1509322115-650-b1f919b2bc-1510091738.jpg

3. ಹೋಟೆಲ್ನಲ್ಲಿ ತಿಂದ್ಮೇಲೆ ಟಿಪ್ಸ್ ಕೊಡೋದಕ್ಕೆ ದುಡ್ಡು ಉಳಿಲಿಲ್ಲ ಅಂದ್ರೆ ತಲೆಕೆಡಿಸ್ಕೊಬೇಕಾಗಿಲ್ಲ. ಟಿಪ್ಸ್ ಕೊಡೊ ಮನಸ್ಸಿದ್ರೆ ನಿಮ್ಮ ಕಾರ್ಡ್ ಬಳಸಿನೂ ಟಿಪ್ಸ್ ಕೊಡಬಹುದು.ಅದಕ್ಕೆ ಅಂತಾನೆ ಈ ಮಷೀನ್ ಇರೋದು.

https://files.brightside.me/files/news/part_39/394860/16913110-GKtl7Bm0BRlFHbECRpu_rZfqlsVQVmqOI7MEp9aobDM-1509354355-650-9ad8be1444-1510091738.jpg

4. ಸಾಸ್ ಇಡಕ್ಕೆ ಅಂತಾನೆ ಪ್ರತ್ಯೇಕವಾಗಿ ಒಂದು ವಿಭಾಗ ಮಾಡಿರೋ ಡಬ್ಬಿ.

https://files.brightside.me/files/news/part_39/394860/16913060-QUWm7k4-1509355275-650-8f2b699599-1510091738.jpg

5. ಟ್ರಯಲ್ ರೂಮ್ನಲ್ಲಿ ಬಟ್ಟೆ ಹಾಕ್ಕೊಂಡು ನೋಡೋವಾಗ ಯಾವುದು ತೊಗೊಳ್ಳೋದು ಯಾವುದು ಬಿಡೋದು ಅಂತ ಗೊಂದಲ ಇದ್ದಾಗ, ನಿಮ್ಮ ಗೊಂದಲ ಕಮ್ಮಿಮಾಡಕ್ಕೆ ಅಂತ ಮಾಡಿರೋ ಹುಕ್.

ಬಟ್ಟೆ ಹಾಕ್ಕೊಂಡು ನೋಡಿದಮೇಲೆ ಖಂಡಿತ ತೊಗೊಳ್ಳೋದು, ಬೇರೆ ಇದಕ್ಕಿಂತ ಚೆನ್ನಾಗಿರೋದು ಸಿಕ್ಕಿಲ್ಲ ಅಂದ್ರೆ ತೊಗೊಳ್ಳೋದು ಅಂತ ಬೇರೆ ಬೇರೆ ಮಾಡಿ ನೇತು ಹಾಕ್ಕೋಬಹುದು.

https://files.brightside.me/files/news/part_39/394860/16913010-25548560-474030-0-1509510943-1509510952-0-1510075935-0-1510080379-1510080382-650-1-1510080382-650-5407fdfad3-1510091738.jpg

6. ಕ್ಯಾಲ್ಕುಲೇಟರ್ ಇರೋ ಟ್ರಾಲಿ

ದೊಡ್ಡ ದೊಡ್ಡ ಅಂಗಡಿಗಳಿಗೆ ಹೋಗಿ ಟ್ರಾಲಿಯಲ್ಲಿ ಸಾಮಾನು ತುಂಬಿಕೊಂಡು ಬಂದು ಬಿಲ್ ಮಾಡಿಸ್ಕೊಂಡಾಗ, ಅಯ್ಯೋ ಇಷ್ಟೊಂದು ಹೆಚ್ಚಾಯ್ತ ಅಂತ ಆಶ್ಚರ್ಯ ಪಾದೋದನ್ನ ತಪ್ಪಿದಕ್ಕೆ ಅಂತ ಈ ಟ್ರಾಲಿಗೇ ಒಂದು ಕ್ಯಾಲ್ಕುಲೇಟರ್ ಹಾಕಿದ್ದಾರೆ. ಒಂದೊಂದೇ ಸಾಮಾನು ಇದರೊಳಗೆ ಇಡ್ತಾ ಇರೋ ಹಾಗೆ ಇದು ಬಿಲ್ ಎಷ್ಟು ಆಗುತ್ತೆ ಅಂತ ತೋರಿಸ್ತಾ ಇರುತ್ತೆ.

7. ಮಗೂನ ಎತ್ತಿಕೊಂಡು ಹೋಗೋದು ಕಷ್ಟ ಅಂತ ಮಾಡಿದ್ದ ಈ ತಳ್ಳೋ ಗಾಡಿಗೆ ಈಗ ತಂದೆ/ ತಾಯಿಯರು ತಳ್ಳಿ ಕಾಲು ಇಟ್ಕೊಂಡು ಆರಾಮಾಗಿ ನಿಂತುಕೊಂಡು ಹೋಗೋತರ ಡಿಸೈನ್ ಮಾಡಿರೋ ಗಾಡಿ.

https://files.brightside.me/files/news/part_39/394860/16912960-QArIXmu--SJy7LEekEyo_ZJuj5wmcrMqs4_WT1wWpWI-1509355575-650-61c8ee7748-1510091738.jpg

8. ಪಾರ್ಕಲ್ಲಿ ಮನುಷ್ಯರಿಗೆ ಅಷ್ಟೇ ಅಲ್ಲ ನಾಯಿಗೂ ನೀರು ಕುಡಿಯೋದಕ್ಕೆ ಸುಲಭವಾಗಲಿ ಅಂತ ವಿನ್ಯಾಸ ಮಾಡಿರೋ ನಲ್ಲಿ .

https://files.brightside.me/files/news/part_39/394860/16912510-4Gy7iwc-1509321246-650-f8ad4c556b-1510091738.jpg

9. ಟೀ ಬ್ಯಾಗ್ ಇಟ್ಟಾಗ ಕಪ್ ಒಳಗೆ ಜಾರಿ ಹೋಗದೆ ಇರ್ಲಿ ಅಂತ ಚಿಕ್ಕ ತೂತು ಮಾಡಿರೋ ಕಪ್. 

ಇದು ಟೀ ಬ್ಯಾಗ್ ಜಾರಿ ಒಳಗೆ ಹೋಗದಂತೆ ತಡೆಯುತ್ತೆ.

https://files.brightside.me/files/news/part_39/394860/16912860-EymNGP3-1509354578-650-f978f27b69-1510091738.jpg

10. ಮಕ್ಕಳಿಗೆ ವಾಶ್ ಬೇಸಿನ್ ನಲ್ಲಿ ಸಿಗದೇ ಪರದಾಡೋದನ್ನ ತಪ್ಪಿಸಕ್ಕೆ ಅಂತ ಮಾಡಿರೋ ಎಕ್ಸಟೆನ್ಶನ್.

https://files.brightside.me/files/news/part_39/394860/16912810-parenting-inventions-kids-babies-gadgets-06-59034548c8372__700-1509318872-650-3da0d617a6-1510091738.jpg

11. ಬಬಲ್ ಗಮ್ ತಿಂದು ಎಲ್ಲಿ ಅಂದ್ರೆ ಅಲ್ಲೇ ಬಿಸಾಡಿ ಬೇರೆಯವರಿಗೆ ಅಂಟಿಕೊಳ್ಳೋದನ್ನ ತಪ್ಪಿಸಕ್ಕೆ ಅಂತ, ಈ ಕಂಪನಿಯವರು ಬಬಲ್ ಗಮ್ ಜೊತೆ ಪೇಪರ್ ಕೊಟ್ಟಿದ್ದಾರೆ, ತಿಂದ್ಮೇಲೆ ಇದ್ರಲ್ಲಿ ಸುತ್ತಿ ಬಿಸಾಡಕ್ಕೆ ಅಂತ.

https://files.brightside.me/files/news/part_39/394860/16912760-HsklVrWw_4gSh6PK3W3OrgwQz6zVb2q2aMf6PsbqG0c-1509355764-650-9431587daf-1510091738.jpg

12. ಮನೆ ತುಂಬಾ ವೈರ್, ಫ್ಲೆಕ್ಸ್  ಬಾಕ್ಸ್ ಇಟ್ಕೊಂಡು ಪರದಾಡೋದನ್ನ ತಪ್ಪಿಸೋದಕ್ಕೆ ಅಂತಾನೆ ಕಂಡುಹಿಡಿದಿರೋ ಸಾಕೆಟ್ ಏಕ್ಸ್ಟೆಂಡರ್.

https://files.brightside.me/files/news/part_39/394860/16912710-DddGnvrO4l5x5UfMOjE_KDRm7qe74_cb9jLoB-sGfK4-1509096377-650-22152782c2-1510091738.jpg
 

13. ನೀರು ವೇಸ್ಟ್ ಮಾಡದೇ ಮರುಬಳಕೆ ಮಾಡಕ್ಕೆ ಉಪಯೋಗ ಆಗೋಹಾಗೆ ಟಾಯ್ಲೆಟ್ ಮೇಲೆ ಇರೋ ವಾಶ್ ಬೇಸಿನ್. ಕೈ ತೊಳೆದ ನೀರು ಸರಿಯಾದ ರೀತೀಲಿ ಮರುಬಳಕೆ ಆಗುತ್ತೆ.

https://files.brightside.me/files/news/part_39/394860/16912660-2016060547-1509450932-650-bc1e0385f1-1510091738.jpg

14. ತುಂಬಾನೇ ಚಾಣಾಕ್ಷತನದಿಂದ ಮಾಡಿರೋ ಜಾರಾಬಂಡೆ ಇದೇ ಅನ್ನೋದ್ರಲ್ಲಿ ಅನುಮಾನಾನೇ ಇಲ್ಲ.

https://files.brightside.me/files/news/part_39/394860/16912560-cc9651deba327d83164c86b466265def-blank-should-blank16-1509308191-650-6a26ca7351-1510091738.jpg

ಈಗ ಹೇಳಿ ಈ ಸಿಂಪಲ್ ಡಿಸೈನ್ ಎಷ್ಟು ಬದಲಾವಣೆ ತರುತ್ತೆ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಮಕ್ಕಳು ಸ್ಕೂಲಿಗೆ ಹೋಗೇ ಕಲೀಬೇಕೋ ಅಥ್ವಾ ಬೇರೆ ದಾರೀನೂ ಇದ್ಯೊ? ಉತ್ತರ ಇಲ್ಲಿದೆ

ಇತ್ತೀಚೆಗೆ ಚರ್ಚೆ ಆಗ್ತಿರೋ ವಿಷಯ.

ಸಾಮಾನ್ಯವಾಗಿ ಕಲಿಬೇಕು ಅಂದ್ರೆ ಮಕ್ಕಳು ಎಲ್ರ ಥರ ಸ್ಕೂಲ್ಗೆ ಹೋಗ್ಲೇಬೇಕು ಅಂದ್ಕೋತಾರೆ ಅಪ್ಪ-ಅಮ್ಮ. ಆದ್ರೆ, ಮಗು ನಂಗೆ ಎಲ್ಲರ ಥರ ಕಲ್ಯಕ್ ಆಗಲ್ಲ; ನಂಗೆ ಅವ್ರು-ಇವ್ರು ಕಲೀತಾರೆ ನೀನ್ ಮಾತ್ರ ಕಲೀತಿಲ್ಲ ಅಂದ್ರೆ ಕಷ್ಟ ಆಗತ್ತೆ; ಸ್ಕೂಲಲ್ ಕಲ್ಸೋ ಎಷ್ಟೋ ವಿಷಯ ಬೋರ್ ಆಗತ್ತೆ ಅಂದ್ರೆ ಏನ್ ಗತಿ? ಗಾಬರಿ ಆಗ್ಬೇಡಿ, ಅಂಥ  ಮಕ್ಕಳ್ಗಾಗೆ ಸರ್ಕಾರ ಶುರು ಮಾಡಿರೋ ಕಾರ್ಯಕ್ರಮದ ಬಗೆ ತಿಳಿಸ್ತೀವಿ. ಓದಿ...

1) ಮಕ್ಕಳು ಶಾಲೆ ಬಿಡಕ್ಕೆ ದುಡ್ಡೊಂದೇ ಕಾರಣ ಅಲ್ಲ

ತುಂಬಾ ಮಕ್ಕಳು ದುಡ್ಡಿಲ್ದೇನೋ, ಬೇರೆ ಯಾವ್ದೋ ಸಾಮಾಜಿಕ ಕಾರಣಕ್ಕೋ ಸ್ಕೂಲ್ ಬಿಡ್ತಿದ್ದಾರೆ. ಇನ್ನೂ ಕೆಲವ್ರು ಗಣಿತ, ವಿಜ್ಞಾನದಂಥ ಕಡ್ಡಾಯ ವಿಷಯ ಪಾಸಾಗ್ದೆ ಆಚೆ ಹೋಗ್ತಿದ್ದಾರೆ.

https://antekante.com/sites/default/files/images/e2b9befc3c6a3729c61e61487edd402c_1.jpg

2)  ಬಿಟ್ಟ ಮೇಲೆ ಮನಸ್ಸು ಬದ್ಲಾಯ್ತು ಅಂದರೆ ಏನ್ ಮಾಡೋದು ?

ಸ್ಕೂಲ್ ಒಂದ್ ಸರ್ತಿ ಬಿಟ್ಟ ಮೇಲೆ ಮತ್ತೆ ಸೇರ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಹೆಚ್ಚಿನ ಓದಿಗಾಗಿ ಕಾಲೇಜು ಸೇರ್ಕೊಳ್ಳಕ್ಕೆ ಇನ್ನೂ ಪರದಾಡಬೇಕು. ಕೈಕಾಲು, ಆರೋಗ್ಯ ಎಲ್ಲ ಸರಿ ಇದ್ದು, ದುಡ್ಡು ಇದ್ದು, ದೊಡ್ಡ ಊರು ಹತ್ತಿರ ಇದ್ರೆ ಮಾತ್ರ ಹೇಗೋ ಓದು ಮುಗಿಸ್ಬೋದು. ಇಲ್ಲ ಅಂದ್ರೆ ಬೋ ಕಷ್ಟ.

opensocietyfoundations.org

3) ಸ್ಕೂಲ್ಗ್ ಹೋಗಿ ಓದಕ್ಕೆ ಆಗಲ್ಲ ಅನ್ನೋರ್ಗೆ ಅಂತಾನೇ ಸರ್ಕಾರ "ನ್ಯಾಷನಲ್  ಇನ್ಸ್ಟಿಟ್ಯೂಟ್ ಆಫ್  ಓಪನ್ ಸ್ಕೂಲ್" (NIOS) ತೆಗ್ದಿದೆ

ಹೀಗೆ, ಸ್ಕೂಲ್ ಬಿಟ್ಟೋರ್ಗೆ, ಸ್ಕೂಲ್ಗೆ ಸೇರ್ದೆ ಇರೋರ್ಗೆ, ಶಾಲೆಗಿಂತ ಬೇರೆ ರೀತಿ ಓದ್ಗೆ ಅವಕಾಶ ಮಾಡ್ಕೊಡ್ಬೇಕಿತ್ತು. ಇದಕ್ಕಾಗಿ ಓಪನ್ ಸ್ಕೂಲಿಂಗ್ ಎಂಬ ಬೇರೆ ಥರಾ ಕಲಿಸೋ ಯೋಜನೆ ಶುರು ಆಯ್ತು. ಇದೇ ಮುಂದೆ ೨೦೦೨ರಲ್ಲಿ "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್"(NIOS) ಅಂತ ಹೊಸ ಹೆಸ್ರು ತೊಗೋತು.

4) ಬಲವಂತ, ಒತ್ತಾಯ ಇಲ್ದೆ ಈ ಥರ ಕಲಿಯೋದು ಎಷ್ಟು ಆರಾಮ್ ಅಲ್ವ?

ಸುಲಭವಾಗಿ ಅರ್ಥ ಆಗೋ ಅಂತ ರೀತಿ ಮತ್ತು ಒಳ್ಳೇ ಕಲಿಕೆ ಎಲ್ಲಾರ್ಗೂ ಸಿಗ್ಬೇಕು, ಬೇಕಾದೋರ್ಗೆಲ್ಲಾ ತಲುಪಬೇಕು ಅನ್ನೋದೊಂದೇ ಉದ್ದೇಶ. ಪಿ.ಯು.ಸಿ.ವರೆಗೆ ಮಕ್ಕಳು ತಂತಂ ಭಾಷೇಲೇ, ಯಾವುದೇ ಬಲವಂತ, ಒತ್ತಾಯ ಇಲ್ದೆ ಕಲಿಯಕ್ಕೆ ಇರೋ ಒಳ್ಳೆ ಅವಕಾಶ.


5) ನಮ್ಗೆ ಇಷ್ಟವಾದ 5 ವಿಷಯ ಆಯ್ಕೆ ಮಾಡ್ಕೋಬೋದು. ಅಂದ್ರೆ, ಸ್ಕೂಲಲ್ ಕಲಿಸೊ ಯಾವ್ದಾದ್ರೂ ವಿಷಯ ಬೇಡ ಅನ್ಸಿದ್ರೆ ಕೈ ಬಿಡ್ಬೋದು !

ಸ್ಕೂಲಲ್ಲಿ ಬಲವಂತವಾಗಿ 6 ವಿಷಯ ಕಲೀಬೇಕು ಅನ್ನದು ಮಾಮೂಲಿ ಆದ್ರೆ, ಇಲ್ಲಿ ಯಾವ್ದಾದ್ರೂ 5 ವಿಷಯಾನ ಆರಿಸ್ಕೊಬೋದು—ಒಂದು ಭಾಷೆ ಕಡ್ಡಾಯ, ಬೇಕು ಅನ್ಸಿದ್ರೆ ಎರಡು ತೊಗೋಬೋದು. ಜಾಸ್ತಿ ವಿಷಯ ಬೇಕು ಅಂದ್ರೂನೂ ಕಲೀಬೋದು. ಮಧ್ಯೆ ಬೋರಾದ್ರೆ ಬದ್ಲಾಯಿಸ್ಕೋಬೋದು. ಯಾವ್ದು ಸುಲಭಾನೋ ಅದ್ರಲ್ಲಿ ಪರೀಕ್ಷೇಗೆ ಕೂತ್ಕೋಬೋದು.


6) ಮೂರು ಹಂತದಲ್ಲಿ ಈ ಕಾರ್ಯಕ್ರಮ ನಡೆಯತ್ತೆ.  ಜೀವನೋಪಾಯಕ್ಕಾಗಿ ಏನು ಬೇಕೋ ಅದನ್ ಕಲಿಯೋ ಅವಕಾಶಾನೂ ಇರುತ್ತೆ.

 

NIOS ಕಾರ್ಯಕ್ರಮ ಹೀಗಿರುತ್ತೆ, ನೋಡಿ: 3, 5 ಮತ್ತು 8ನೇ ತರಗತಿಗೆ ಸಮವಾಗಿ 3 ಹಂತ ಇರುತ್ತೆ. 4 ಎಸ್.ಎಸ್.ಎಲ್.ಸಿ. ಮತ್ತೆ, 5 ಪಿ.ಯು.ಸಿ. ಪ್ರತಿ ಹಂತ ದಾಟಿದ್ದಕ್ಕೆ NIOS ಪರೀಕ್ಷೆ ಮಾಡಿ, ಪಾಸಾದ್ರೆ ಪ್ರಮಾಣಪತ್ರಾನೂ ಕೊಡತ್ತೆ. ಈ ಪ್ರಮಾಣಪತ್ರಕ್ಕೆ ಬೇರೆ ಬೋರ್ಡ್ಗಳ ಪ್ರಮಾಣಪತ್ರದಷ್ಟೇ ಪವರ್ರು.

 

7)  ಆನ್ಲೈನ್ ಮೂಲಕ ಕೋರ್ಸ್ ಸೇರ್ಬೋದು, ಒಂದು ಕೋರ್ಸ್ ಮುಗ್ಸಕ್ಕೆ 5 ವರ್ಷ ಸಮಯ ಇದೆ, ಪಾಸ್ ಮಾಡೋಕೆ ಬೇಜಾನ್ ಅವಕಾಶ ಇದೆ.

ಈ ಕಾರ್ಯಕ್ರಮನ್ನ ನಡೆಸೋ ರೀತೀನೂ ಬೇರೇನೇ: ಮಾಧ್ಯಮಗಳ ಮೂಲಕ ಪುಕ್ಕಟೆ ಕಲಿಸೋ ಕಾರ್ಯಕ್ರಮಗಳು ಇರತ್ತೆ. ನೀವ್ ಕಲೀತಿದ್ದೀರೋ ಇಲ್ವೋ ಅಂತ ನೀವೆ ಕಂಡ್ಕೋಬೋದು. ನೀವ್ ಬೇಕು ಅಂದ್ರೆ, ಓದ್ಗೆ ಬೇಕಾಗೋ ಪುಸ್ತಕ, ವೀಡಿಯೋ, ಆಡಿಯೋ ಎಲ್ಲ NIOS ಪೂರೈಸತ್ತೆ. ಕನ್ನಡ್ದೋರಿಗೆ ಇದೆಲ್ಲ ಬರೀ ಇಂಗ್ಲೀಷಲ್ ಸಿಗತ್ತೆ. ಆದ್ರೆ ಎಸ್.ಎಸ್.ಎಲ್.ಸಿ. ಮತ್ತೆ ಪಿ.ಯು.ಸಿ. ಪರೀಕ್ಷೇನ ಮಾತ್ರ ಇಂಗ್ಲಿಷಲ್ಲೇ ಬರೀಬೇಕು ಅಂತಿಲ್ಲ, ಕನ್ನಡದಲ್ಲೂ ಬರೀಬೋದು.

8) ಪರೀಕ್ಷೆ ಹೇಗಿರತ್ತೆ ಅಂದ್ರೆ, ಮಕ್ಕಳು ಎಲ್ಲಾ ವಿಷಯಾನು ಒಂದೇ ಸಲ ಬರ್ದು ಮುಗಿಸ್ಬೇಕು ಅಂತೇನಿಲ್ಲ.

ವರ್ಷಕ್ಕೆ ಎರ್ಡು ಸರ್ತಿ ಪರೀಕ್ಷೆ ನಡೆಸ್ತಾರೆ. ಬೇಕು ಅನ್ನಿಸಿದಾಗ, ನಾನು ತಯಾರಾಗಿದೀನಿ ಅನ್ನಿಸ್ದಾಗ ಪರೀಕ್ಷೆಗ್ ಕೂತ್ಕೋಬೋದು. ಪಾಸಾಗಕ್ಕೆ 33% ಬೇಕೇ ಬೇಕು. ಆದ್ರೆ, ಜಾಸ್ತಿ ಬರ್ಬೇಕು ಅಂತ ಅನ್ಸಿದ್ರೆ ಮತ್ತೆ-ಮತ್ತೆ ಪರೀಕ್ಷೆ ತೊಗೋಬೋದು.

ಇನ್ನೂ ಹೆಚ್ಚು ಮಾಹಿತಿ ಬೇಕಿದ್ರೆ ಈ ವೆಬ್ ಸೈಟ್ ನೋಡಿ: www.nios.ac.in  ಅಥ್ವಾ ಇಲ್ಲಿಗೆ ಮಿಂಚಂಚೆ ಬರ್ದು ವಿಚಾರ್ಸಿ: rcdelhi@nios.ac.in, rcbengaluru@nios.ac.in.

ಇದಲ್ದೆ,  ದುಡ್ಡಿಲ್ದೆ ಈ ನಂಬರ್ಗೆ ಫೋನ್ ಮಾಡಿ ಕೇಳಿ: 18001809393.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: