ಮದುವೆ ಆಗಕ್ಕೆ ಸರಿಯಾದ ವಯಸ್ಸೇನು ಅಂತ ವಿಜ್ಞಾನಿಗಳು ಕೊನೆಗೂ ಕಂಡ್ ಹಿಡ್ದಿದಾರೆ, ಕೇಳಿ

ಆ ವಯಸ್ಸಿಗೆ ಮಾಡ್ಕೊಂಡ್ರೆ ಎಲ್ಲಾ ಸರಿಯಾಗಿ ಹೋಗುತ್ತಂತೆ

ಮದುವೆ ಅನ್ನೋ ಸುದ್ದಿ ಬಂದತಕ್ಷಣ ಸಾಕಷ್ಟು ಗೊಂದಲಗಳಿವೆ. ಆಗಬೇಕೋ ಬೇಡವೋ? ಆಗೋದಾದರೆ ಯಾರನ್ನ? ಹೀಗೆಲ್ಲಾ. ಈಗ ಇದರ ಜೊತೆ ಮದುವೆ ಆಗೋಕೆ ಸರಿಯಾದ ಸಮಯದ ಬಗ್ಗೆನೂ ಯೋಚನೆ ಮಾಡೋ ಸಮಯ ಬಂದಿದೆ.

ಇತ್ತೀಚಿನ ಸಂಶೋಧನೆ ಪ್ರಕಾರ 28ರಿಂದ 32 ವರ್ಷದೊಳಗೆ ಮದುವೆ ಆದರೆ ಉತ್ತಮ

ಅಮೇರಿಕದ ಹೆಸರಾಂತ ವಿ.ವಿ. ಯುನಿವರ್ಸಿಟಿ ಆಫ್ ಯೂಟಾನಲ್ಲಿ ನಿಕೊಲಸ್ ಹೆಚ್. ವುಲ್ಫಿಂಗರ್ ಅನ್ನೋ ಪ್ರೊಫೆಸರ್ ಗುಂಪಲ್ಲಿ ನಡೆದಿರೋ ಸಂಶೋಧನೆ ಇದು.

indianholiday.com

ನೀವು 30ರ ಹತ್ತಿರದಲ್ಲಿದ್ದರೆ ಖಂಡಿತ ನಿಮ್ಮ ಮನೇಲಿ ಮದುವೆ ಓಡಾಟ ಕಾವೇರಿರ್ಬೋದು. ನಿಮ್ಮ ತಂದೆ-ತಾಯಂದಿರಿಗೆ ಮದುವೆ ಈ ವಯಸ್ಸಲ್ಲೇ ಯಾಕಾಗಬೇಕು ಅಂತ ಗೊತ್ತಾದರೆ ಇನ್ನು ನೀವು ಮದುವೆಗೆ ಸಿದ್ಧ ಆಗಲೇ ಬೇಕು.

ಇನ್ನು ಸಮಾಜ, ನೆಂಟರು-ಇಷ್ಟರು ಅಂತ ಯೋಚನೆ ಮಾಡಿ 22-23ಕ್ಕೆ ಮಗಳ ಮದುವೆ ಬಗ್ಗೆ ಯೋಚನೆ ಮಾಡೋ ತಂದೆ-ತಾಯಿಗಳು ಇದರ ಬಗ್ಗೆ ಓದಿದ್ರೆ ಸ್ವಲ್ಪ ಯೋಚನೆ ತಲೆ ಹತ್ತೋದಂತೂ ಖಂಡಿತ. ಈ ಮಾಹಿತೀನ ನಂಬಿ ನಿಮಗೆ ಸ್ವಲ್ಪ ಸಮಯ ಕೊಟ್ಟರೆ ಖುಷೀನೆ ಆದರೆ ನಂಬದೇ ಇರೋರಾದರೆ ಇದನ್ನ ತಪ್ಪು ಅಂತ ನಿರೂಪಿಸೋಕೆ ಹೊಗೋದೂ ಇರುತ್ತೆ!!

ಈ ಸಂಶೋಧನೆ ಪ್ರಕಾರ 28ರಿಂದ 32ರ ಒಳಗೆ ಮದುವೆ ಆದ್ರೆ ಡೈವೋರ್ಸ್ ಆಗೋದು ಕಡಿಮೆ

s-media-cache-ak0.pinimg.com

32ರ ನಂತರ ಮದುವೆಯಾಗೋರಲ್ಲಿ ವರ್ಷ ಕಳೆದಂತೆ ಡೈವೋರ್ಸ್ ಪ್ರಮಾಣ 5% ಹೆಚ್ಚಾಗುತ್ತಾ ಹೋಗುತ್ತಂತೆ. ಇನ್ನು ಮದುವೆ ಆಗಕ್ಕೆ ಜಾಸ್ತಿ ಆಸಕ್ತಿ ಇಲ್ಲದೆ ಇರೋರು 32ರ ನಂತರ ಮದುವೆ ಆಗೋಕೆ ಆಯ್ಕೆ ಮಾಡ್ಕೋತಾರೆ.

ಇನ್ನು ಮದುವೆ ಆಗೋಕೆ ಈ ವಯಸ್ಸೇ ಸೂಕ್ತ ಅನ್ನೋಕೆ ಇನ್ನೊಂದು ಕಾರಣ ಏನಪ್ಪ ಅಂದರೆ ಈ ವಯಸ್ಸಲ್ಲಿ ಸಾಮಾನ್ಯವಾಗಿ ಹುಡುಗ ಹುಡುಗೀರು ಪ್ರಬುದ್ಧರಾಗಿರ್ತಾರೆ. ಈ ವಯಸ್ಸಲ್ಲಿ ಮದುವೆ ಆದೋರು ಆರ್ಥಿಕವಾಗಿ ಸಬಲರೂ ಅಗಿರ್ತಾರೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಹುಟ್ಟಿದ ದಿನದ ಪ್ರಕಾರ ಯಾವ ತರದ ಉದ್ಯೋಗ ಮಾಡಿದ್ರೆ ನಿಮಗೆ ಸರಿಹೋಗತ್ತೆ ಅಂತ ತಿಳ್ಕೊಳಿ

ಆ ತರ ಮಾಡಿದ್ರೆ ಸಲೀಸು ಇಲ್ಲಾಂದ್ರೆ ತುಂಬಾ ಕಷ್ಟ ಅನ್ಸತ್ತೆ

ಎಲ್ಲೋ ಮನುಷ್ಯನಿಗೂ ಅವನು ಹುಟ್ಟಿದ ಸಮಯ್, ದಿನ ಘಳಿಗೆ, ಅವನು ಮಾಡೋ ಕೆಲಸ ಎಲ್ಲದಕ್ಕೂ ಒಂದು ಲಿಂಕ್ ಇದೆ ಅಂತ ಅನ್ಸಲ್ವಾ? ಖಂಡಿತ ಇದ್ದೆ ಇದೆ. ಕೆಲವೊಮ್ಮೆ ಕೆಲವೊಂದಕ್ಕೆ ಕೈ ಹಾಕಿ ಯಾಕೋ ಅಷ್ಟಾಗಿ ಸರಿ ಹೋಗಿಲ್ಲ ಅಂದಾಗ ನಾವೇ ಅಂದ್ಕೊಂಡಿರಲ್ವ ಯಾಕೋ ಈ ಟೈಮ್, ಈ ನಂಬರ್ ನನಗೆ ಆಗ್ಬರಲ್ಲ ಅಂತ. ಹಾಗೆ ಎಲ್ಲಾದಕ್ಕೂ ಒಂದು ಲಿಂಕ್ ಇದ್ದೆ ಇರತ್ತೆ.

ಹುಟ್ಟಿದ ದಿನದ ಪ್ರಕಾರ ನೀವು ಯಾವ ತರದ ಉದ್ಯೋಗ ಮಾಡಿದ್ರೆ ನಿಮಗೆ ಸರಿಹೋಗತ್ತೆ ಅಂತ ಇವತ್ತು ತಿಳ್ಕೊಳಿ...

1, 10, 19, 28ನೇ ತಾರೀಕು

ನೀವೊಂಥರ ಹುಟ್ಟುತ್ತಾನೆ ನಾಯಕರು. ಯಾವದಕ್ಕೂ ಆಗಲ್ಲ ಅಂತ ಹೇಳದೆ ಇಲ್ಲ. ನೀವು ಸುಲಭವಾಗಿ ರಿಸ್ಕ್ ತೊಗೊಳಕ್ಕೆ ರೆಡಿ ಆಗ್ತೀರಿ. ನಿಮಗೆ ಬಿಸಿನೆಸ್ ಸರಿಯಾದ ಕೆಲಸ. ಅಂಬಾನಿ, ಟಾಟಾ, ಬಿಲ್ ಗೇಟ್ಸ್ ಎಲ್ಲ ಈ ದಿನಾಂಕಕ್ಕೆ ಸೇರಿದೋರು.

images.newindianexpress.com

2, 11, 20, 29

ನೀವು ಕ್ರಿಯೇಟಿವ್ ಜನ. ಕಲೆ, ನೃತ್ಯ, ಆಕ್ಟಿಂಗ್ ಇದ್ರಲ್ಲಿ ನೀವು ಹೋದ್ರೆ ನಿಮಗೆ ಒಳ್ಳೆ ಭವಿಷ್ಯ ಇರತ್ತೆ. ಗಣೇಶ್, ಎಂ.ಪಿ ಶಂಕರ್ ಇವ್ರೆಲ್ಲ ಇದೆ ದಿನಾಂಕಕ್ಕೆ ಸೇರಿದೋರು 

3, 12, 21, 30

ನಿಮಗೆ ಲೆಕ್ಕ ಅಂದ್ರೆ ನೀರ್ ಕುಡಿದಷ್ಟು ಸುಲಭ. ನಿಮಗೆ ಫೈನಾನ್ಸ್, ಬ್ಯಾಂಕ್, ರಿಟೈಲ್ ಕೆಲಸ ಸಿಕ್ಕಾಪಟ್ಟೆ ಸರಿಹೊಂದತ್ತೆ. 

akm-img-a-in.tosshub.com

4, 13, 22, 31

ನಿಮ್ಮದು ಸ್ವಲ್ಪ ವಿಶೇಷವಾದ ವ್ಯಕ್ತಿತ್ವ, ನೀವು ರಿಸ್ಕ್ ತೊಗೊಳಕ್ಕೆ ಹಿಂದೇಟಾಕಲ್ಲ ಆದ್ರೆ ಸುಮಾರ್ ಸತಿ ನಿಮ್ಮ ತಪ್ಪು ನಿರ್ಧಾರದಿಂದ ಒಳ್ಳೆ ಪಾಠ ಕಲಿತೀರಿ. ನಿಮಗೆ ಆಕ್ಟಿಂಗ್, ಕಲೆ ವಿಭಾಗದಲ್ಲಿ ಒಳ್ಳೆ ಬೆಳವಣಿಗೆ ಇರತ್ತೆ  

5, 14, 23

ಒಳ್ಳೆ ಮಾತಾಡ್ತೀರಿ ನೀವು. ಸಿಕ್ಕಾಪಟ್ಟೆ ಹುಮ್ಮಸ್ಸು ನಿಮಗೆ. ಪಟ-ಪಟ ಅಂತ ಮಾತಾಡ್ತೀರಿ. ಶೇರ್ ಮಾರ್ಕೆಟ್, ಮಾರ್ಕೆಟಿಂಗ್, ಸ್ಪೋರ್ಟ್ಸ್ ಕ್ಷೇತ್ರದಲ್ಲಿ ನಿಮಗೆ ಒಳ್ಳೆ ಬೆಳವಣಿಗೆ ಇರತ್ತೆ 

wigzo.com

6, 15, 24

ನಿಮ್ಮ ವ್ಯಕ್ತಿತ್ವ ಹೆಂಗೆ ಅಂದ್ರೆ ಯಾರಾದ್ರೂ ನಿಮ್ಮನ್ನ ನೋಡಿದರೆ "ವಾವ್" ಅಂತ ಅನ್ನದೆ ಸುಮ್ಮನೆ ಇರಲ್ಲ. ನಿಮಗೆ ದೊಡ್ಡ ಹೋಟೆಲ್, ಸಿನೆಮಾ ಕ್ಷೇತ್ರ ಸಕತ್ತಾಗಿ ಹೊಂದಿಕೊಳ್ಳತ್ತೆ.  

7, 16, 25

ನೀವ್ ಸಿಕ್ಕಾಪಟ್ಟೆ ಟಾಲೆಂಟೆಡ್. ನಿಮಗೆ ಸಿಕ್ಕಾಪಟ್ಟೆ ಬುದ್ದಿವಂತಿಕೆ ಇದೆ. ಆದಷ್ಟು ನೀವು ಜಾಸ್ತಿ ಓದಿನ ಕ್ಷೇತ್ರಕ್ಕೆ ಹೋಗ್ಬೇಕು. ರಿಸರ್ಚ್, ವಿಜ್ಞಾನ ಕ್ಷೇತ್ರದಲ್ಲಿ ನಿಮಗೆ ಒಳ್ಳೆ ಬೆಳವಣಿಗೆ ಸಿಗತ್ತೆ 

orwh.od.nih.gov

8, 17, 26

ನಿಮಗೆ ಹೆಚ್ಚು ಕಮ್ಮಿ 35ನೇ ವರ್ಷ ಆಗೋತನಕ ಸ್ವಲ್ಪ ಕಷ್ಟ ಇದ್ದೆ ಇರತ್ತೆ. ನೀವು ಶ್ರಮ ಜೀವಿ ಅದಕ್ಕೆ ನಿಮಗೆ ಯಾವತ್ತೂ ಮೋಸ ಆಗಲ್ಲ, ನಿಧಾನ ಆದ್ರೂ 35ರ ನಂತರ ಗೆದ್ದೇ ಗೆಲ್ತೀರಿ. ರಾಜಕೀಯ, ಕಬ್ಬಿಣದ ಕಾಮಗಾರಿ, ರಿಯಲ್ ಎಸ್ಟೇಟ್ ನಿಮಗೆ ಕೈ ಹಿಡಿಯೋ ಕ್ಷೇತ್ರಗಳು. 

9, 18, 27

ನೀವು ಸಕತ್ ಫಿಟ್. ಸ್ಪೋರ್ಟ್ಸ್ ಕ್ಷೇತ್ರಕ್ಕೆ ಹೋಗಬಹುದು. ಇಲ್ಲ ಅಂತ ಅಂದ್ರೆ ನಿಮಗೆ ಡಿಫೆನ್ಸ್, ಕೆಮಿಕಲ್, ರಿಯಲ್ ಎಸ್ಟೇಟ್ ಕ್ಷೇತ್ರ ಕೂಡ ಸಕತ್ತಾಗಿ ಹೊಂದತ್ತೆ 

blog.playo.co

ನಿಮಗೆ ಸರಿ ಅನ್ನಿಸ್ತಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: