ನಿಮ್ಗೆ ಈ 5 ರಹಸ್ಯಗಳು ಗೊತ್ತಿದ್ದರೆ ಮೊಬೈಲಲ್ಲೇ DSLR ಕ್ಯಾಮರಾ ಲೆವಲ್ಲಿಗೆ ಫೋಟೋ ತೆಗೀಬೋದು

ಎಷ್ಟೋ‌ ಸಲ ಬೇಕಾಗಿರೋದು ಹೊಸ ಸಾಮಾನಲ್ಲ… ತಲೆ

ಡಿ.ಎಸ್.ಎಲ್.ಆರ್ ಇಲ್ಲ ಅಂತ ಬೇಜಾರಾಗ್ಬೇಡಿ. ಒಳ್ಳೆ ಫೋಟೋ ತೆಗಿಯೋಕೆ ಕ್ಯಾಮೆರಾ ಮುಖ್ಯ ಅಲ್ಲ, ನಿಮ್ಮ ಫೋಟೋಗ್ರಾಫರ್ ಕಣ್ಣು ಮುಖ್ಯ. ನೀವು ಮನಸಲ್ಲಿ ಹಿಡಿದ ಫೋಟೋನ ಪರದೆ ಮೇಲೆ ಬರಿಸೋಕಷ್ಟೆ ಕ್ಯಾಮೆರಾ ಬೇಕು. ನಿಮ್ಮ ಆಂಡ್ರಾಯ್ಡ್ ಫೋನಿನಿಂದ್ಲೇ ಒಳ್ಳೆ ಫೋಟೋ ಹಿಡಿಯೋಕೆ ಕೆಲವು ಟಿಪ್ಸ್ ಇದೆ.

1. ಬೆಳಕನ್ನ ಉಪ್ಯೋಗಿಸೋದು ತಿಳ್ಕೊಳ್ಳಿ

ಫೋಟೋ ಚೆನ್ನಾಗಿ ಬರ್ಬೇಕಿದ್ರೆ ಬೆಳಕು ತುಂಬಾ ಮುಖ್ಯ. ಸೂರ್ಯನ ಬೆಳಕನ್ನೇ ಉಪ್ಯೋಗಿಸ್ಕೊಂಡು ಫೋಟೋ ತೆಗೀರಿ, ಆರ್ಟಿಫಿಶಿಯಲ್ ಬೆಳಕಿನಲ್ಲಿ ಫೋಟೋ ಚೆನ್ನಾಗಿ ಬರೊಲ್ಲ. ಆದರೆ ಸೂರ್ಯ ನೆತ್ತಿ ಮೇಲಿರ್ವಾಗ ಫೋಟೋ ತೆಗಿಯೋಕೆ ಹೋಗ್ಬೇಡಿ, ಅದ್ರಿಂದ ಫೋಟೋ ಓವರ್-ಎಕ್ಸ್ಪೋಸ್ ಆಗುತ್ತೆ ಅಲ್ಲದೆ ಅಲ್ಲಲ್ಲಿ ನೆರಳು ಬಂದು ಚೆನ್ನಾಗಿರೊಲ್ಲ. ಸಾಧ್ಯವಾದಷ್ಟೂ ಫ್ಲಾಶ್ ಇಲ್ದೆ ಫೋಟೋ ತೆಗಿಯೋಕೆ ನೋಡಿ. ಫ್ಲಾಶಿನಿಂದಾಗಿ ಫೋಟೋದ ಬಣ್ಣ ಕೆಡುತ್ತೆ. ಕೆಲವು ಕಡೆ ಬೆಳಕು ಬೀಳದೆ ನೆರಳು ಎದ್ದು ಕಾಣೋ ಹಾಗಾಗುತ್ತೆ. ಅಷ್ಟೂ ಬೇಕು ಅನ್ಸಿದ್ರೆ ಎಕ್ಸ್ಟರ್ನಲ್ ಫ್ಲಾಶ್ ಉಪ್ಯೋಗ್ಸಿ ಅದರ ಬೆಳಕು ಗೋಡೆ ಅಥ್ವಾ ಯಾವ್ದಾದ್ರೂ ಸ್ಕ್ರೀನ್ ಮೇಲೆ ಬಿದ್ದು ಪ್ರತಿಫಲಿಸೋ ಹಾಗೆ ಮಾಡಿ.

play.google.com

2. ಫೋನನ್ನ ಸರಿಯಾಗಿ ಹಿಡಿಯೋದು ತಿಳ್ಕೊಳ್ಳಿ

ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಎರಡು ಥರ ಫೋಟೋ ಅಥ್ವಾ ವೀಡಿಯೋ ತೆಗೀಬಹುದು – ಉದ್ದಕ್ಕೆ ಹಿಡಿದು ತೆಗಿಯೋದು ಒಂದು ಥರ, ಅಡ್ಡಕ್ಕೆ ಹಿಡಿದು ತೆಗಿಯೋದು ಇನ್ನೊಂದು ಥರ. ಉದ್ದಕ್ಕೆ ಹಿಡಿಯೋದನ್ನ ಪೋರ್ಟ್ರೈಟ್ (ಭಾವಚಿತ್ರ) ಮೋಡ್ ಅಂತ ಕರೀತಾರೆ, ಅಡ್ಡಕ್ಕೆ ಹಿಡಿಯೋದನ್ನ ಲ್ಯಾಂಡ್-ಸ್ಕೇಪ್ (ಪ್ರಕೃತಿಚಿತ್ರ) ಅಂತ ಕರೀತಾರೆ. ಹಾಗೆ ಕರಿಯೋಕೆ ಕಾರಣ ಇದೆ. ಮನುಷ್ಯರ ಫೋಟೋ ತೆಗೀಬೇಕಿದ್ರೆ ಫೋನನ್ನ ಉದ್ದಕ್ಕೆ ಹಿಡೀರಿ. ಯಾವ್ದಾದ್ರೂ ಒಳ್ಳೆ ಸೀನರಿ ಹಿಡಿಯೋಕೆ ಫೋನನ್ನ ಅಡ್ಡಕ್ಕೆ ಹಿಡೀರಿ. ಒಂದು ಹೂವಿನ ಫೋಟೋ ಹಿಡೀತಿದ್ರೆ, ಸಾದಧ್ಯವಾದಷ್ಟೂ ಅದರ ಹತ್ತಿರ ಹೋಗಿ. ಆಗ ಅದರ ಬ್ಯಾಕ್-ಗ್ರೌಂಡಿನಲ್ಲಿರೋದೆಲ್ಲ ಫೋಕಸ್ ಕಳ್ಕೊಂಡು ಹೂವು ಎದ್ದು ಕಾಣುತ್ತೆ. ಯಾವತ್ತೂ ಝೂಮ್ ಮಾಡೋಕೆ ಹೋಗ್ಬೇಡಿ. ಫೋನನ್ನ ಅಲುಗಾಡದ ಹಾಗೆ ಮತ್ತು ನೇರವಾಗಿ ಹಿಡೀರಿ. ಬೇಕಿದ್ರೆ ಟ್ರೈಪಾಡ್ ಅಥ್ವಾ ನೇರವಾಗಿ ಹಿಡಿಯೋಕೆ ನಿಮ್ಗೆ ಸಹಾಯ ಮಾಡೋ ವಿ.ಎಸ್.ಸಿ.ಓ ಥರದ್ ಆಂಡ್ರಾಯ್ಡ್ ಆಪ್ಗಳನ್ನ ಉಪ್ಯೋಗ್ಸಿ.

support.docusign.com

3. ಗ್ರಿಡ್ ಉಪಯೋಗಿಸಿ ಒಳ್ಳೆ ಫೋಟೋ ತೆಗೀರಿ

ನಿಮ್ಮ ಆಂಡ್ರಾಯ್ಡ್ ಫೋನಿನ ಕ್ಯಾಮೆರಾದ ವ್ಯೂ-ಫೈಂಡರಿನಲ್ಲಿ 3x3 ಗ್ರಿಡ್ ಇದ್ಯಾ ತಿಳ್ಕೊಳ್ಳಿ. ಇದು ನಿಮ್ಮ ಸ್ಕ್ರೀನನ್ನ ಒಂಬತ್ತು ಭಾಗವಾಗಿ ಮಾಡುತ್ತೆ. ನಿಮ್ಮ ಫೋಟೋದಲ್ಲಿ ನಿಮ್ಗೆ ಏನು ಮುಖ್ಯ ಅನ್ಸುತ್ತೋ ಅದನ್ನ ಯಾವಾಗ್ಲೂ ಉದ್ದಕ್ಕಿರುವ ಹಾಗೂ ಅಡ್ಡಕ್ಕಿರುವ ಗೆರೆಗಳು ಸೇರುವ ಪಾಯಿಂಟಲ್ಲಿ ಬರುವ ಹಾಗೆ ಫೋಟೋ ಹಿಡೀರಿ. ಅಂದ್ರೆ ಒಂದು ಗುಲಾಬಿಯ ಫೋಟೋ ಅಂದ್ರೆ, ಗುಲಾಬಿ ಹೂವಿನ ಮಧ್ಯ ಭಾಗ ಈ ರೀತಿ ಗೆರೆಗಳು ಸೇರುವ ಕಡೆ ಇರ್ಬೇಕು. ಫೋಟೋಗ್ರಾಫಿಯಲ್ಲಿ ಇದು ಒಂದು ಮುಖ್ಯ ನಿಯಮ. ಯಾವಾಗ್ಲೂ ನಿಮ್ಮ ಫೋಟೋದ ಮುಖ್ಯ ವಿಷಯ ಫೋಟೋದ ಮಧ್ಯದಲ್ಲಿ ಇರ್ಬಾರ್ದು, ಸ್ವಲ್ಪ ಸೈಡಿಗೆ ಇದ್ರೆ ನೋಡೋರ ಕಣ್ಣು ಅಲ್ಲಿ ಹೋಗುತ್ತೆ.

photographyconcentrate.com

4. ಫೋಟೋದಲ್ಲಿ ಖಾಲಿ ಜಾಗವನ್ನ ಸರಿಯಾಗಿ ಉಪಯೋಗಿಸಿ

ಡಿ.ಎಸ್.ಎಲ್.ಆರ್ ಕ್ಯಾಮೆರಾಗಳಲ್ಲಿ ನಿಮ್ಮ ಸಬ್ಜೆಕ್ಟನ್ನ ಫೋಕಸ್ ಮಾಡಿ, ಬ್ಯಾಕ್-ಗ್ರೌಂಡ್ ಬ್ಲರ್ ಮಾಡಿ ‘ಬೊಕೆ ಎಫೆಕ್ಟ್’ ಬರಿಸ್ಬಹುದು. ಆದರೆ ಆಂಡ್ರಾಯ್ಡ್ ಫೋನಿನಲ್ಲಿ ಅದು ಸಾಧ್ಯವಿಲ್ಲ. ಅದರ ಬದಲಿಗೆ ಫೋಟೋದಲ್ಲಿ ತುಂಬ ಖಾಲಿ ಜಾಗ ಇರೋ ಹಾಗೆ ಮಾಡ್ಬಹುದು. ಆಗ ನೋಡೋರ ಕಣ್ಣು ಫೋಟೋದ ಸಬ್ಜೆಕ್ಟ್ ಮೇಲೆ ತಾನೇತಾನಾಗಿ ಹೋಗುತ್ತೆ. ಖಾಲಿ ಜಾಗ ಅಂದ್ರೆ ಅದು ನೀಲಿ ಆಕಾಶ ಇರ್ಬಹುದು, ಅಥ್ವಾ ನಿಮ್ಮ ಡೈನಿಂಗ್ ಟೇಬಲ್ಲೇ ಇರ್ಬಹುದು. ಒಟ್ಟಿನಲ್ಲಿ ಅದು ಒಂದೇ ಬಣ್ಣದಲ್ಲಿದ್ರೆ ನಿಮ್ಮ ಸಬ್ಜೆಕ್ಟ್ ಮೇಲೆ ಫೋಕಸ್ ಇರುತ್ತೆ.

uk.pinterest.com

5. ಪೋಸ್ಟ್-ಪ್ರೊಸೆಸಿಂಗ್ ಕಲಿತ್ಕೊಳ್ಳಿ

ಬೇರೆ ಬೇರೆ ಆಂಗಲ್ಲುಗಳನ್ನ ಟ್ರೈ ಮಾಡಿ. ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಪ್ರೊಫೆಶನಲ್ ಮೋಡ್ ಇದ್ರೆ, ಅದನ್ನ ಉಪ್ಯೋಗಿಸಿ ನೋಡಿ. ಐ.ಎಸ್.ಒ ಕಡಿಮೆ ಮಾಡೋದ್ರಿಂದ ಫೋಟೋದಲ್ಲಿರುವ ‘ನಾಯ್ಸ್’ ಕಡಿಮೆ ಮಾಡ್ಬಹುದು. ಪೋಸ್ಟ್-ಪ್ರೊಸೆಸಿಂಗ್ ಅಥ್ವಾ ಎಡಿಟಿಂಗ್ ಕೂಡಾ ತುಂಬಾ ಮುಖ್ಯ. ಎಡಿಟಿಂಗ್ ಅಂದ್ರೆ ಬರೀ ಫಿಲ್ಟರ್ ಹಾಕೋದಲ್ಲ, ನಿಮ್ಮ ಫೋಟೋದಲ್ಲಿ ಹೈಲೈಟ್, ನೆರಳು, ಕಾಂಟ್ರಾಸ್ಟ್, ಸ್ಯಾಚುರೇಷನ್, ಟೆಂಪರೇಚರ್ – ಇದನ್ನೆಲ್ಲ ಬದಲಿಸಿ ನೋಡ್ಬಹುದು. ಸ್ನಾಪ್-ಸೀಡ್, ಪಿಕ್ಸಾರ್ಟ್, ಲೈಟ್-ರೂಮ್ ಮುಂತಾದ ಆಂಡ್ರಾಯ್ಡ್ ಆಪ್ಗಳನ್ನ ಇದಕ್ಕೆ ಉಪ್ಯೋಗಿಸ್ಬಹುದು. ಫೋಟೋಶಾಪ್ ಉಪ್ಯೋಗಿಸಿ ಮುಖದಲ್ಲಿರೋ ಪಿಂಪಲ್ಲಿನಿಂದ ಹಿಡಿದು ನಿಮ್ಗೆ ಫೋಟೋದಲ್ಲಿ ಬೇಡದಿರೋ ವೈರನ್ನ ತೆಗ್ದು ಹಾಕ್ಬಹುದು.

petapixel.com

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಮಕ್ಕಳು ಸ್ಕೂಲಿಗೆ ಹೋಗೇ ಕಲೀಬೇಕೋ ಅಥ್ವಾ ಬೇರೆ ದಾರೀನೂ ಇದ್ಯೊ? ಉತ್ತರ ಇಲ್ಲಿದೆ

ಇತ್ತೀಚೆಗೆ ಚರ್ಚೆ ಆಗ್ತಿರೋ ವಿಷಯ.

ಸಾಮಾನ್ಯವಾಗಿ ಕಲಿಬೇಕು ಅಂದ್ರೆ ಮಕ್ಕಳು ಎಲ್ರ ಥರ ಸ್ಕೂಲ್ಗೆ ಹೋಗ್ಲೇಬೇಕು ಅಂದ್ಕೋತಾರೆ ಅಪ್ಪ-ಅಮ್ಮ. ಆದ್ರೆ, ಮಗು ನಂಗೆ ಎಲ್ಲರ ಥರ ಕಲ್ಯಕ್ ಆಗಲ್ಲ; ನಂಗೆ ಅವ್ರು-ಇವ್ರು ಕಲೀತಾರೆ ನೀನ್ ಮಾತ್ರ ಕಲೀತಿಲ್ಲ ಅಂದ್ರೆ ಕಷ್ಟ ಆಗತ್ತೆ; ಸ್ಕೂಲಲ್ ಕಲ್ಸೋ ಎಷ್ಟೋ ವಿಷಯ ಬೋರ್ ಆಗತ್ತೆ ಅಂದ್ರೆ ಏನ್ ಗತಿ? ಗಾಬರಿ ಆಗ್ಬೇಡಿ, ಅಂಥ  ಮಕ್ಕಳ್ಗಾಗೆ ಸರ್ಕಾರ ಶುರು ಮಾಡಿರೋ ಕಾರ್ಯಕ್ರಮದ ಬಗೆ ತಿಳಿಸ್ತೀವಿ. ಓದಿ...

1) ಮಕ್ಕಳು ಶಾಲೆ ಬಿಡಕ್ಕೆ ದುಡ್ಡೊಂದೇ ಕಾರಣ ಅಲ್ಲ

ತುಂಬಾ ಮಕ್ಕಳು ದುಡ್ಡಿಲ್ದೇನೋ, ಬೇರೆ ಯಾವ್ದೋ ಸಾಮಾಜಿಕ ಕಾರಣಕ್ಕೋ ಸ್ಕೂಲ್ ಬಿಡ್ತಿದ್ದಾರೆ. ಇನ್ನೂ ಕೆಲವ್ರು ಗಣಿತ, ವಿಜ್ಞಾನದಂಥ ಕಡ್ಡಾಯ ವಿಷಯ ಪಾಸಾಗ್ದೆ ಆಚೆ ಹೋಗ್ತಿದ್ದಾರೆ.

https://antekante.com/sites/default/files/images/e2b9befc3c6a3729c61e61487edd402c_1.jpg

2)  ಬಿಟ್ಟ ಮೇಲೆ ಮನಸ್ಸು ಬದ್ಲಾಯ್ತು ಅಂದರೆ ಏನ್ ಮಾಡೋದು ?

ಸ್ಕೂಲ್ ಒಂದ್ ಸರ್ತಿ ಬಿಟ್ಟ ಮೇಲೆ ಮತ್ತೆ ಸೇರ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಹೆಚ್ಚಿನ ಓದಿಗಾಗಿ ಕಾಲೇಜು ಸೇರ್ಕೊಳ್ಳಕ್ಕೆ ಇನ್ನೂ ಪರದಾಡಬೇಕು. ಕೈಕಾಲು, ಆರೋಗ್ಯ ಎಲ್ಲ ಸರಿ ಇದ್ದು, ದುಡ್ಡು ಇದ್ದು, ದೊಡ್ಡ ಊರು ಹತ್ತಿರ ಇದ್ರೆ ಮಾತ್ರ ಹೇಗೋ ಓದು ಮುಗಿಸ್ಬೋದು. ಇಲ್ಲ ಅಂದ್ರೆ ಬೋ ಕಷ್ಟ.

opensocietyfoundations.org

3) ಸ್ಕೂಲ್ಗ್ ಹೋಗಿ ಓದಕ್ಕೆ ಆಗಲ್ಲ ಅನ್ನೋರ್ಗೆ ಅಂತಾನೇ ಸರ್ಕಾರ "ನ್ಯಾಷನಲ್  ಇನ್ಸ್ಟಿಟ್ಯೂಟ್ ಆಫ್  ಓಪನ್ ಸ್ಕೂಲ್" (NIOS) ತೆಗ್ದಿದೆ

ಹೀಗೆ, ಸ್ಕೂಲ್ ಬಿಟ್ಟೋರ್ಗೆ, ಸ್ಕೂಲ್ಗೆ ಸೇರ್ದೆ ಇರೋರ್ಗೆ, ಶಾಲೆಗಿಂತ ಬೇರೆ ರೀತಿ ಓದ್ಗೆ ಅವಕಾಶ ಮಾಡ್ಕೊಡ್ಬೇಕಿತ್ತು. ಇದಕ್ಕಾಗಿ ಓಪನ್ ಸ್ಕೂಲಿಂಗ್ ಎಂಬ ಬೇರೆ ಥರಾ ಕಲಿಸೋ ಯೋಜನೆ ಶುರು ಆಯ್ತು. ಇದೇ ಮುಂದೆ ೨೦೦೨ರಲ್ಲಿ "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್"(NIOS) ಅಂತ ಹೊಸ ಹೆಸ್ರು ತೊಗೋತು.

4) ಬಲವಂತ, ಒತ್ತಾಯ ಇಲ್ದೆ ಈ ಥರ ಕಲಿಯೋದು ಎಷ್ಟು ಆರಾಮ್ ಅಲ್ವ?

ಸುಲಭವಾಗಿ ಅರ್ಥ ಆಗೋ ಅಂತ ರೀತಿ ಮತ್ತು ಒಳ್ಳೇ ಕಲಿಕೆ ಎಲ್ಲಾರ್ಗೂ ಸಿಗ್ಬೇಕು, ಬೇಕಾದೋರ್ಗೆಲ್ಲಾ ತಲುಪಬೇಕು ಅನ್ನೋದೊಂದೇ ಉದ್ದೇಶ. ಪಿ.ಯು.ಸಿ.ವರೆಗೆ ಮಕ್ಕಳು ತಂತಂ ಭಾಷೇಲೇ, ಯಾವುದೇ ಬಲವಂತ, ಒತ್ತಾಯ ಇಲ್ದೆ ಕಲಿಯಕ್ಕೆ ಇರೋ ಒಳ್ಳೆ ಅವಕಾಶ.


5) ನಮ್ಗೆ ಇಷ್ಟವಾದ 5 ವಿಷಯ ಆಯ್ಕೆ ಮಾಡ್ಕೋಬೋದು. ಅಂದ್ರೆ, ಸ್ಕೂಲಲ್ ಕಲಿಸೊ ಯಾವ್ದಾದ್ರೂ ವಿಷಯ ಬೇಡ ಅನ್ಸಿದ್ರೆ ಕೈ ಬಿಡ್ಬೋದು !

ಸ್ಕೂಲಲ್ಲಿ ಬಲವಂತವಾಗಿ 6 ವಿಷಯ ಕಲೀಬೇಕು ಅನ್ನದು ಮಾಮೂಲಿ ಆದ್ರೆ, ಇಲ್ಲಿ ಯಾವ್ದಾದ್ರೂ 5 ವಿಷಯಾನ ಆರಿಸ್ಕೊಬೋದು—ಒಂದು ಭಾಷೆ ಕಡ್ಡಾಯ, ಬೇಕು ಅನ್ಸಿದ್ರೆ ಎರಡು ತೊಗೋಬೋದು. ಜಾಸ್ತಿ ವಿಷಯ ಬೇಕು ಅಂದ್ರೂನೂ ಕಲೀಬೋದು. ಮಧ್ಯೆ ಬೋರಾದ್ರೆ ಬದ್ಲಾಯಿಸ್ಕೋಬೋದು. ಯಾವ್ದು ಸುಲಭಾನೋ ಅದ್ರಲ್ಲಿ ಪರೀಕ್ಷೇಗೆ ಕೂತ್ಕೋಬೋದು.


6) ಮೂರು ಹಂತದಲ್ಲಿ ಈ ಕಾರ್ಯಕ್ರಮ ನಡೆಯತ್ತೆ.  ಜೀವನೋಪಾಯಕ್ಕಾಗಿ ಏನು ಬೇಕೋ ಅದನ್ ಕಲಿಯೋ ಅವಕಾಶಾನೂ ಇರುತ್ತೆ.

 

NIOS ಕಾರ್ಯಕ್ರಮ ಹೀಗಿರುತ್ತೆ, ನೋಡಿ: 3, 5 ಮತ್ತು 8ನೇ ತರಗತಿಗೆ ಸಮವಾಗಿ 3 ಹಂತ ಇರುತ್ತೆ. 4 ಎಸ್.ಎಸ್.ಎಲ್.ಸಿ. ಮತ್ತೆ, 5 ಪಿ.ಯು.ಸಿ. ಪ್ರತಿ ಹಂತ ದಾಟಿದ್ದಕ್ಕೆ NIOS ಪರೀಕ್ಷೆ ಮಾಡಿ, ಪಾಸಾದ್ರೆ ಪ್ರಮಾಣಪತ್ರಾನೂ ಕೊಡತ್ತೆ. ಈ ಪ್ರಮಾಣಪತ್ರಕ್ಕೆ ಬೇರೆ ಬೋರ್ಡ್ಗಳ ಪ್ರಮಾಣಪತ್ರದಷ್ಟೇ ಪವರ್ರು.

 

7)  ಆನ್ಲೈನ್ ಮೂಲಕ ಕೋರ್ಸ್ ಸೇರ್ಬೋದು, ಒಂದು ಕೋರ್ಸ್ ಮುಗ್ಸಕ್ಕೆ 5 ವರ್ಷ ಸಮಯ ಇದೆ, ಪಾಸ್ ಮಾಡೋಕೆ ಬೇಜಾನ್ ಅವಕಾಶ ಇದೆ.

ಈ ಕಾರ್ಯಕ್ರಮನ್ನ ನಡೆಸೋ ರೀತೀನೂ ಬೇರೇನೇ: ಮಾಧ್ಯಮಗಳ ಮೂಲಕ ಪುಕ್ಕಟೆ ಕಲಿಸೋ ಕಾರ್ಯಕ್ರಮಗಳು ಇರತ್ತೆ. ನೀವ್ ಕಲೀತಿದ್ದೀರೋ ಇಲ್ವೋ ಅಂತ ನೀವೆ ಕಂಡ್ಕೋಬೋದು. ನೀವ್ ಬೇಕು ಅಂದ್ರೆ, ಓದ್ಗೆ ಬೇಕಾಗೋ ಪುಸ್ತಕ, ವೀಡಿಯೋ, ಆಡಿಯೋ ಎಲ್ಲ NIOS ಪೂರೈಸತ್ತೆ. ಕನ್ನಡ್ದೋರಿಗೆ ಇದೆಲ್ಲ ಬರೀ ಇಂಗ್ಲೀಷಲ್ ಸಿಗತ್ತೆ. ಆದ್ರೆ ಎಸ್.ಎಸ್.ಎಲ್.ಸಿ. ಮತ್ತೆ ಪಿ.ಯು.ಸಿ. ಪರೀಕ್ಷೇನ ಮಾತ್ರ ಇಂಗ್ಲಿಷಲ್ಲೇ ಬರೀಬೇಕು ಅಂತಿಲ್ಲ, ಕನ್ನಡದಲ್ಲೂ ಬರೀಬೋದು.

8) ಪರೀಕ್ಷೆ ಹೇಗಿರತ್ತೆ ಅಂದ್ರೆ, ಮಕ್ಕಳು ಎಲ್ಲಾ ವಿಷಯಾನು ಒಂದೇ ಸಲ ಬರ್ದು ಮುಗಿಸ್ಬೇಕು ಅಂತೇನಿಲ್ಲ.

ವರ್ಷಕ್ಕೆ ಎರ್ಡು ಸರ್ತಿ ಪರೀಕ್ಷೆ ನಡೆಸ್ತಾರೆ. ಬೇಕು ಅನ್ನಿಸಿದಾಗ, ನಾನು ತಯಾರಾಗಿದೀನಿ ಅನ್ನಿಸ್ದಾಗ ಪರೀಕ್ಷೆಗ್ ಕೂತ್ಕೋಬೋದು. ಪಾಸಾಗಕ್ಕೆ 33% ಬೇಕೇ ಬೇಕು. ಆದ್ರೆ, ಜಾಸ್ತಿ ಬರ್ಬೇಕು ಅಂತ ಅನ್ಸಿದ್ರೆ ಮತ್ತೆ-ಮತ್ತೆ ಪರೀಕ್ಷೆ ತೊಗೋಬೋದು.

ಇನ್ನೂ ಹೆಚ್ಚು ಮಾಹಿತಿ ಬೇಕಿದ್ರೆ ಈ ವೆಬ್ ಸೈಟ್ ನೋಡಿ: www.nios.ac.in  ಅಥ್ವಾ ಇಲ್ಲಿಗೆ ಮಿಂಚಂಚೆ ಬರ್ದು ವಿಚಾರ್ಸಿ: rcdelhi@nios.ac.in, rcbengaluru@nios.ac.in.

ಇದಲ್ದೆ,  ದುಡ್ಡಿಲ್ದೆ ಈ ನಂಬರ್ಗೆ ಫೋನ್ ಮಾಡಿ ಕೇಳಿ: 18001809393.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: