ದಿನಾ ಓಡೋದ್ರಿಂದ ಸಿಗೋ ಈ 14 ಲಾಭಗಳ ಬಗ್ಗೆ ತಿಳ್ಕೊಳಿ, ನಿಮ್ಮ ಜೀವನಾನೇ‌ ಬದಲಾಗ್ಬೋದು

ನೆನಪಿನ ಶಕ್ತಿ ಹೆಚ್ಚತ್ತೆ

ಸಣ್ಣೊರಿಂದ ಹಿಡಿದು ದೊಡ್ಡೊರು, ಮುದುಕರಿಗೂ ಒಳ್ಳೆ ವ್ಯಾಯಾಮ ಅಂದ್ರೆ ಓಡೋದು. ಇದು ಎಲ್ಲಾರ್ಗೂ ಗೊತ್ತು ಆದ್ರೂ ಮಾಡಲ್ಲ. ಮಾಡಕ್ಕೆ ಹೋಗ್ಬೇಕು ಅನ್ನೋರು ಮತ್ತೆ ಮಾಡಲ್ಲ. ಮನಸ್ಸು ಹಿಂದೇಟಾಕತ್ತೆ. ಓಡೋದ್ರಿಂದ ಏನೇಣನ್ ಲಾಭ ಇದೆ ಇಲ್ಲಿ ಮುಂದೆ ಓದಿ ಆಗ ನೀವು ರೆಡಿ ನಿಮ್ ಮನಸ್ಸು ರೆಡಿಯಾಗತ್ತೆ. ಯಾಕಂದ್ರೆ ಓಡೋದು ಬರೀ ದೇಹಕ್ಕಲ್ಲ, ಮನಸ್ಸಿಗೂ ಕೂಡ.

ದೇಹದ ಎಲ್ಲಾ ಭಾಗಕ್ಕೂ ಒಮ್ಮೇನೇ ಎಕ್ಸರ್ಸೈಸ್ ಆಗ್ಬೇಕು ಅಂದ್ರೆ ದಿನಾ ನಿಗದಿಯಾಗಿ ಇಷ್ಟೋತ್ತು ಅಂತ ಓಡಿ...ಆಮೇಲೆ ಏನ್ ಬೇಕಾದ್ರೂ ಮಾಡಿ :-)

1. ಹೃದಯಕ್ಕೆ ಶಕ್ತಿ ಬರತ್ತೆ...ಓಡಿ

ವಾರಕ್ಕೆ ಒಂದೇ ಗಂಟೆ ಓಡಿದ್ರೂ ಸಾಕು ಹೃದಯದ ಆಚೆ ಈಚೆ, ಒಳಗೆಲ್ಲಾ ರಕ್ಸ್ತ ಸಂಚಾರ ಚೆನ್ನಾಗಿ ಆಗೋದ್ರೀಂದ ನಿಮಗೆ ಬಿ.ಪಿ, ಕೊಲೆಸ್ಟ್ರಾಲ್ ಹಾಗೇ ಇನ್ನ್ಯಾವುದೇ ಹೃದಯದ ಖಾಯಿಲೆ ಬರೋ ಸಾಧ್ಯತೆ ಕಡಿಮೆ.

ಮೂಲ

2. ಬೇರೆ ಬೇರೆ ವ್ಯಾಯಾಮಕ್ಕಿಂತ ಒಳ್ಳೆ ರಿಸಲ್ಟ್ ಸಿಗತ್ತೆ

ಓಡೋದಕ್ಕೆ ವಾಕ್ ಮಾಡೊಕ್ಕಿಂತ ಹೆಚ್ಚು ಎನರ್ಜಿ ಖರ್ಚಾಗತ್ತೆ. ಒಂದು ಘಂಟೆ ಓಡಿದ್ರೆ 800 ಕ್ಯಾಲೊರಿ ವ್ಯಯ ಆಗತ್ತೆ, ಅದೇ ವಾಕ್ ಮಾಡಿದ್ರೆ ಬರೀ 300 ಕ್ಯಾಲೊರಿ ವ್ಯಯ ಆಗತ್ತೆ! ಅಂದ್ರೇ ಒಡೋ ಬದ್ಲು ವಾಕ್ ಮಾಡಿದ್ರೆ ಡಬಲ್ ಮಾಡ್ಬೇಕಾಗತ್ತೆ.

ಮೂಲ

3. ಬೇಗ ಸಣ್ಣ ಆಗಿ ತುಂಬಾ ದಿನ ಅದೇ ಮೈಕಟ್ಟು ಇರತ್ತೆ

ನೀವು ಓಡೋದ್ರಿಂದ ದೇಹದ ಕೊಬ್ಬು ಬೇಗ ಕರಗೋದ್ರಿಂದ ಬೇಗ ಸಣ್ಣ ಆಗ್ತೀರಿ. ಹಾಗೆ ಅದೇ ಮೈಕಟ್ಟು ಓಡೋದನ್ನ ನಿಲ್ಲಿಸಿದ ಮೇಲೂ ಹೆಚ್ಚು ದಿನ ಇರತ್ತೆ. ಬೇರೆ ವ್ಯಾಯಾಮ ಮಾಡಿದ್ರೆ ಎಷ್ಟ್ ಬೇಗ ಸಣ್ಣ್ ಆಗ್ತೀರೋ ಅಷ್ಟೇ ಬೇಗ ಬಿಟ್ತ ಮೇಲೆ ದಪ್ಪಾನೂ ಆಗ್ತೀರಿ ಆಲ್ವಾ?

ಮೂಲ

4. ಕಡಿಮೆ ಊಟ ಮಾಡಿ ಸ್ಟ್ರಾಂಗ್ ಆಗಿರಕ್ಕೆ ಓಡಿ

ಸಾಮಾನ್ಯವಾಗಿ ವ್ಯಾಯಮ ಮಾಡಿದ್ಮೇಲೆ ಹಸಿವು ಹೆಚ್ಚಾಗುತ್ತೆ, ಆದ್ರೆ ಸಂಶೋಧನೆಗಳ ಪ್ರಕಾರ ಓಡೋದ್ರಿಂದ ಹಸಿವು ಹುಟ್ಟಿಸೋ ಹಾರ್ಮೋನ್ "ಘ್ರೆಲಿನ್" ಉತ್ಪತ್ತಿ ಕಡಿಮೆ ಆಗೋದ್ರಿಂದ ಓಡೋರು ಕಡಿಮೆ ತಿಂತಾರಂತೆ. ತಿಂದಿದ್ದು ಅಷ್ಟೂ ಸರ್ಯಾಗಿ ಜೀರ್ಣ ಆಗಿ ಜೀವಕೋಶದ ತನಕ ಸರ್ಯಾಗಿ ತಲುಪತ್ತೆ. ಅಗ ನಾವು ಕಡಿಮೆ ತಿಂದ್ವಿ ಅಂತ ಅನ್ನಿಸಿದ್ರೂ ನಮ್ಗೇನು ಸುಸ್ತು ಸಂಕಟ ಆಗಲ್ಲ. ಯಾಕಂದ್ರೆ ತಿಂದಿದ್ದೆಲಾ ಮೈಗೆ ಹತ್ತಿರತ್ತೆ.

ಮೂಲ

5. ಮೂಳೆ, ಮಾಂಸಖಂಡ ಬಲವಾಗತ್ತೆ

ನಿಮ್ಮ ದೇಹದ ತೂಕ ಪೂರ್ತಿ ಹೊತ್ತು ವ್ಯಾಯಾಮ ಮಾಡೊದ್ರಿಂದ ಮೂಳೆ ಹಾಗು ಮಾಂಸಖಂಡಗಳಿಗೆ ಶಕ್ತಿ ಹೆಚ್ಚು ಸಿಗುತ್ತೆ. ಹಾಗೆ ದೇಹಕ್ಕೆ ಬ್ಯಾಲನ್ಸ್ ಜಾಸ್ತ್ ಆಗತ್ತೆ.

ಮೂಲ

6. ಬೆಟ್ಟ ಗುಡ್ಡ ಕಾಡು ಮೇಡು ಎಲ್ಲಿ ಬೇಕಾದ್ರೂ ಸುಲಭವಾಗಿ ಓಡಕ್ಕೆ ದಿನಾ ನಿಮ್ ಮನೆ ಹತ್ರ ಓಡಿ

ಓಡೋದ್ರಿಂದ ನಮ್ ಸೋಂಟದ ಭಾಗದ ಮೂಳೆ ಮಾಂಸಖಂಡಗಳು ಗಟ್ಟಿ ಆಗತ್ತೆ. ಸೊಂಟ ಗಟ್ಟಿ ಆದ್ರೆ ಎಲ್ಲಿ ನಡೀಬೇಕಾದ್ರೂ ಓಡ್ಬೇಕಾದ್ರೂ ನಮ್ ಮೈ ನಮ್ಗೇ ಭಾರ ಅನ್ಸಲ್ಲ.

ಮೂಲ

7. ಒಳ್ಳೆ ನಿದ್ದೆ ಮಾಡಕ್ಕೆ ಚೆನ್ನಾಗಿ ಓಡಿ

ಓಡೋವಾಗ ದೇಹದ ತಾಪ ಹೆಚ್ಚುತ್ತೆ, ಈ ತಾಪ ಓಡಿದ ನಂತರ ಕಡಿಮೆ ಆಗೋದ್ರಿಂದ ನಿದ್ದೆ ಚೆನ್ನಾಗ್ ಬರುತ್ತೆ. ಇದೆ ಕಾರಣಕ್ಕೆ ಆತಂಕ ಅಥವಾ ಖಿನ್ನತೆ ಕೂಡ ಕಾಡಲ್ಲ. 

ಮೂಲ

8. ಬೆಳಗ್ಗಿಂದ ಸಂಜೆ ತನಕ ಕೆಲ್ಸ ಮಾಡಿದ್ರೂ ಸುಸ್ಸ್ತಾಗಬಾರ್ದು ಅಂದ್ರೆ ಓಡಿ

ದಿನ ಓಡೋದ್ರಿಂದ ಕಾಲಿನ ಮಾಂಸ ಖಂಡಗಳು ಗಟ್ಟಿ ಆಗುತ್ತೆ, ಅದಕ್ಕೆ ದಿನದಿಂದ ದಿನಕ್ಕೆ ಹೆಚ್ಚು ಓಡೋಕೆ ಶಕ್ತಿ ಬರತ್ತೆ.

ಯಾವ ಕೆಲ್ಸ ಬೇಕಾದ್ರೂ ಬೆಳಗ್ಗಿಂದ ಸಂಜೆ ತನಕ ಒಂಚೂರು ಸುಸ್ತಿಲ್ಲದೆ ನಿಭಾಯ್ಸ್ತೀರಿ ಆಗ. 

ಮೂಲ

9. ಮೈ ಚರ್ಮಕ್ಕೆ ಸಿಕ್ಕಾಪಟ್ಟೆ ಕಾಂತಿ ಬರ್ಬೇಕು ಅಂದ್ರೇ ಓಡಿ

ಓಡೋದ್ರಿಂದ ನಿಮ್ಮ ಚರ್ಮ ಬೆವರುತ್ತೆ, ಜಿಡ್ಡಿನಂಶ ಉತ್ಪತ್ತಿ ಚೆನ್ನಾಗಾಗುತ್ತೆ, ಅದಕ್ಕೆ ನಿಮ್ಮ ಚರ್ಮ ಹೊಳೆಯುತ್ತೆ. ಯಾವ ಫೇಶಿಯಲ್ ಬೇಕು ಇದರ ಮುಂದೆ?

ಮೂಲ

10. ನೆನಪಿನ ಶಕ್ತಿ ಹೆಚ್ಚತ್ತೆ

ಓಡೋರಲ್ಲಿ ಮೈ ಮನಸ್ಸು ಎರಡು ಅಲರ್ಟ್ ಆಗಿರತ್ತೆ. ಮರೆವು ಅನ್ನೋ ಪದಾನೇ ನುಸುಳಲ್ಲ. ಮುದುಕ್ರಾದ ಮೇಲೂ ಮರೆವಿನ ಖಾಯಿಲೆ ಬರಲ್ಲ.

ಮೂಲ

11. ಕ್ಯಾನ್ಸರ್ ತರಹ ದೊಡ್ದ ಖಾಯಿಲೆಗಳಿಂದ ರಕ್ಷಣೆ ಮಾಡತ್ತೆ

ಓಡೋ ಮಹಿಳೆಯರಲ್ಲಿ ಕರುಳಿನ ಹಾಗೆ ಸ್ಥನದ ಕಾನ್ಸರ್ 30 % ಕಡಿಮೆ ಸಾಧ್ಯತೆ.

ಮೂಲ

12. ಟೆನ್ಶನ್ ಕಡಿಮೆ ಮಾಡ್ಕೊಂಡು ಸದಾ ಖುಷಿಯಾಗಿರಕ್ಕೆ ಓಡಿ

ಸ್ವಲ್ಪ ಹೊತ್ತು ಓಡಿದ ನಂತರ ದೇಹದಲ್ಲಿ ಎಂಡಾರ್ಫಿನ್ ಅನ್ನೋ ಹಾರ್ಮೋನ್ ಉತ್ಪತ್ತಿ ಆಗೋದ್ರಿಂದ ಟೆನ್ಶನ್ ರಿಲೀಸ್ ಆಗತ್ತೆ. ಮನಸ್ಸಿಗೂ ಖುಶಿ ಆಗತ್ತೆ.

ಮೂಲ

13. ಓಡೋದು ಶ್ವಾಸಕೋಶಕ್ಕೂ ಒಳ್ಳೇದು

ಓಡೋದ್ರಿಂದ ನಿಮ್ಮ ಕೈಕಾಲುಗಳಿಗೆ ಹೆಚ್ಚು ರಕ್ತ ಸಂಚಾರ ಬೇಕಾಗುತ್ತೆ ಇದಕ್ಕೆ ನಿಮ್ಮ ಹೃದಯ ಹೆಚ್ಚು ಬಡಿಯುತ್ತೆ, ಇದಕ್ಕೆ ನಿಮ್ಮ ಶ್ವಾಸಕೋಶ ಹೆಚ್ಚು ಉಸಿರಾಡುತ್ತೆ. ರಕ್ತ ಶುದ್ಧ ಆಗತ್ತೆ. ಇನ್ನೇನ್ ಬೇಕು?ನಮ್ ಆಯುಸ್ಸು ಹತ್ತು ವರ್ಷ ಜಾಸ್ತಿ ಆಗತ್ತೆ :-)

ಮೂಲ

14. ಓಡೋದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ

ನಿಮ್ಮ ದೇಹಕ್ಕೆ ಓಡೋದ್ರಿಂದ ರೋಗಾಣುಳ ಜೊತೆ ಫೈಟ್ ಮಾಡಕ್ಕೆ ಬೇಕಾಗಿರೋ ಅಂಟಿಜೆನ್ಸ್ ಸಾಕಷ್ಟು ಉತ್ಪತ್ತಿ ಆಗತ್ತೆ. 

ಮೂಲ

ಅರೆ ಇಷ್ಟು ಬೇಗ ಓಡೋಕೆ ರೆಡಿ ನಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಎಳ್ಳಿಂದ ಆರೋಗ್ಯದಲ್ಲಿ ಈ 10 ನಂಬಲಾರದ ಬದಲಾವಣೆ ಆಗುತ್ತೆ ನೋಡಿ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

ಎಳ್ಳು ಮೊದಲು ಬೆಳೆಸಿದ್ದು ಭಾರತದಲ್ಲೇ. ನಮ್ಮ ಪುರಾಣ ಪುಣ್ಯಕಥೇಲೆಲ್ಲಾ ಎಳ್ಳಿನ ಬಗ್ಗೆ ಹೇಳಿದಾರೆ. ಭಾರತದಿಂದ ಇದು ಬೇರೆ ದೇಶಗಳಿಗೆ, ಆಫ್ರಿಕಾ, ಏಷ್ಯಾ ಮತ್ತೆ ಅರಬ್ ದೇಶಗಳಿಗೆ ಹೋಯ್ತಂತೆ. ಇವತ್ತು ಭಾರತ, ಚೈನಾ ಮತ್ತೆ ಮೆಕ್ಸಿಕೋ ದೇಶಗಳು ಎಳ್ಳನ್ನ ತುಂಬಾ ಬೆಳ್ಯೋ ದೇಶಗಳಾಗಿವೆ. ಎಳ್ಳಿನಲ್ಲಿ ಕಾಪರ್, ಮ್ಯಾಂಗನೀಸ್ ಮಾತ್ರ ಅಲ್ಲ ಕ್ಯಾಲ್ಷಿಯಂ, ಮಗ್ನೀಷಿಯಂ, ಕಬ್ಬಿಣ, ಫಾಸ್ಪರಸ್, ವಿಟಮಿನ್ ಬಿ1, ಇನ್ನೂ ಏನೇನೋ ಇದೆ. ಇದರ ಜೊತೆ ಸೆಸಾಮಿನ್ ಮತ್ತೆ ಸೆಸಮೊಲಿನ್ ಅನ್ನೋ ಎರಡು ವಸ್ತು ಎಳ್ಳಲ್ಲಿದೆ. ಇದ್ರಲ್ಲಿರೋ ಲಿಗ್ನಾನ್ ಅನ್ನೋ ನಾರಿನಂಶ ಕೊಲೆಸ್ಟ್ರಾಲ್ ಕಮ್ಮಿ ಮಾಡುತ್ತೆ.

1. ಎಳ್ಳಲ್ಲಿರೋ ಕಾಪರ್ ಕೀಲುನೋವು ಕಮ್ಮಿ ಮಾಡತ್ತೆ

ಕಾಪರ್ ರುಮಾಟಿಡ್ ಆಥ್ರಿಟಿಸ್ ಗೆ ಒಳ್ಳೇ ಔಷಧಿ. ಇದು enzyme system ಅಲ್ಲಿನ ಊತ ಕಮ್ಮಿ  ಮಾಡತ್ತೆ. ಅಲ್ಲದೇ ರಕ್ತನಾಳ, ಮೂಳೆ ಮತ್ತು ಕೀಲುಗಳಿಗೆ ಶಕ್ತಿ ಕೊಡೋ ಕೊಲ್ಲಾಜಿನ್ ಮತ್ತೆ ಎಲಾಸ್ಟಿಕ್ ಗೆ ಲಿಂಕ್ ಮಾಡತ್ತೆ.

greatlifeandmore.com

2. ಮೆಗ್ನೀಷಿಯಂ ರಕ್ತನಾಳ ಮತ್ತೆ ಉಸಿರಾಟಕ್ಕೆ ಶಕ್ತಿ ಕೊಡತ್ತೆ

ಮಗ್ನೀಷಿಯಂ ಆಸ್ತಮಾಗೆ ಒಳ್ಳೇ ಔಷಧ. ರಕ್ತದೊತ್ತಡ, ಸ್ಟ್ರೋಕ್ ಮತ್ತೆ ಡಯಾಬಿಟಿಸ್ ಕೂಡ ಇದ್ರಿಂದ ಕಮ್ಮಿ ಆಗತ್ತೆ. ಮೈಗ್ರೇನ್ ತಲೆನೋವು ಬರಿಸೋ trigeminal blood vessel spasm ನ ಕೂಡ ಕಮ್ಮಿ ಮಾಡತ್ತೆ. ಅಲ್ಲದೆ ಮುಟ್ಟುನಿಲ್ಲೋ ಸಮಯದಲ್ಲಿ ಹೆಂಗಸರಿಗೆ ಆಗೋ ತೊಂದ್ರೆಗಳನ್ನೂ ಕಮ್ಮಿ ಮಾಡತ್ತೆ.

images.wisegeek.com

3. ವಿಟಮಿನ್-ಬಿ ಆತಂಕದ ಸ್ವಭಾವವನ್ನ ಕಮ್ಮಿ ಮಾಡತ್ತೆ

ಎಳ್ಳಿನಲ್ಲಿ ಆತಂಕ ಕಮ್ಮಿ ಮಾಡೋ ಎಷ್ಟೊಂದು ಗುಣಗಳಿವೆ. ಇದರಲ್ಲಿರೋ ಮಗ್ನೀಷಿಯಂ ಮತ್ತೆ ಕ್ಯಾಲ್ಷಿಯಂ ಸ್ನಾಯುಗಳು ಬಿಗಿಯೋದು ಮತ್ತೆ ಬಿಟ್ಟುಕೊಳ್ಳೋದಿಕ್ಕೆ ಸಹಾಯ ಮಾಡತ್ತೆ. ಇದರಲ್ಲಿರೋ ಥಯಾಮಿನ್ ಖಿನ್ನತೆ, ಮೂಡಿ ಆಗೋದು, ಸ್ನಾಯುಗಳ ಬಿಗಿತ ಎಲ್ಲಾ ಕಮ್ಮಿ ಮಾದತ್ತೆ.

media.newindianexpress.com

4. ಕೊಲೋನ್ ಕ್ಯಾನ್ಸರ್, ಆಸ್ಟಿಯೋಪೊರೋಸಿಸ್, ಮೈಗ್ರೇನ್ ಮತ್ತು ಮುಟ್ಟಿನ ನೋವುಗಳ್ನ ಕಮ್ಮಿ ಮಾಡತ್ತೆ

ಎಳ್ಳಲ್ಲಿರೋ ಕ್ಯಾಲ್ಷಿಯಂ ಕೊಲೊನ್ ಕಣಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್ಸ್ ನ ಕಮ್ಮಿ ಮಾಡತ್ತೆ. ಆಥ್ರಿಟಿಸ್, ಮುಟ್ಟುನಿಲ್ಲೋದು, ಇಂತಾ ಟೈಮಲ್ಲಿ ಮೂಳೆ ಸವೆಯೋದನ್ನ ತಪ್ಪಿಸತ್ತೆ. ಮೈಗ್ರೇನ್ ತಲೆನೋವು ಮತ್ತೆ ಮುಟ್ಟಿನ ನೋವುಗಳನ್ನ ಕೂಡ ಕಮ್ಮಿ ಆಗತ್ತೆ.

il3.picdn.net

5. ಮೂಳೆಗಳ್ನ ಗಟ್ಟಿ ಮಾಡತ್ತೆ

ಎಳ್ಳಿನಂತ ಜಿಂಕ್ ಜಾಸ್ತಿ ಇರೋ ಆಹಾರ ತಿಂದ್ರೆ ಮೂಳೆ ಗಟ್ಟಿ ಆಗತ್ತೆ. ಆಸ್ಟಿಯೋಪೊರೊಸಿಸ್ ಅಂತಾ ಮೂಳೆ ಸವೆತದ ರೋಗಗಳು ಹೆಂಗಸರಲ್ಲಿ ಜಾಸ್ತಿ ಇದ್ರೂ, ವಯಸ್ಸಾದ ಗಂಡಸರಿಗೂ ಬರತ್ತೆ. ಜಿಂಕ್ ಕಮ್ಮಿ ಆದಷ್ಟೂ ಈ ರೋಗ ಬರೋ ಛಾನ್ಸಸ್ ಜಾಸ್ತಿ. ಎಳ್ಳಲ್ಲಿರೋ ಜಿಂಕ್ ಇದನ್ನ ಕಮ್ಮಿ ಮಾಡತ್ತೆ.

finedininglovers.cdn.crosscast-system.com

6. ಕೊಲೆಸ್ಟ್ರಾಲ್ ಕಮ್ಮಿ ಮಾಡತ್ತೆ

ಕಪ್ಪು ಎಳ್ಳಿನಲ್ಲಿ ಫೈಟೋಸ್ಟಿರಾಲ್ ಅನ್ನೋ ಒಂದು ವಸ್ತು ಇರತ್ತೆ. ಇದು ಕೊಲೆಸ್ಟ್ರಾಲ್ ತರಾನೇ ಇರತ್ತಂತೆ. ಇದನ್ನ ತಿಂದ್ರೆ ರಕ್ತದಲ್ಲಿರೋ ಕೊಲೆಸ್ಟ್ರಾಲ್ ಕಮ್ಮಿ ಆಗೋದ್ ಮಾತ್ರ ಅಲ್ಲ; ಕೆಲವು ಕ್ಯಾನ್ಸರ್ ಬೆಳ್ಯೋದೂ ತಪ್ಪತ್ತೆ.

img.allw.mn

7. ಬ್ಯಾಕ್ಟಿರೀಯ, ಫಂಗಸ್ ಮತ್ತೆ ಯೀಸ್ಟ್ ಇನ್ ಫೆಕ್ಷನ್ ಕಮ್ಮಿ ಮಾಡತ್ತೆ

ಎಳ್ಳೆಣ್ಣೆ ಊತ ಕಮ್ಮಿ ಮಾಡತ್ತೆ. ಅದಿಕ್ಕೆ ಸಣ್ಣಪುಟ್ಟ ಗಾಯಗಳಿಗೆ ಹಚ್ಚಿದ್ರೆ, ಬೇಗ ವಾಸಿ ಆಗತ್ತೆ. ಇದು ಬ್ಯಾಕ್ಟಿರೀಯಾ ಮತ್ತೆ ಫಂಗಸ್ ಬೆಳ್ಯೋದನ್ನ ಕೂಡ ತಡ್ಯೋದ್ರಿಂದ ಇವುಗಳಿಂದ ಬರೋ ಎಷ್ಟೋ ರೋಗಗಳನ್ನ ಕಮ್ಮಿ ಮಾಡತ್ತೆ. ಬೆಚ್ಚಗಿರೋ ನೀರಿಗೆ ಎಳ್ಳೆಣ್ಣೆ ಹಾಕಿಕೊಂಡು ಆ ಜಾಗದಲ್ಲೆಲ್ಲಾ ಹಚ್ಕೊಂಡ್ರೆ, ಯೀಸ್ಟ್ ಇನ್ ಫೆಕ್ಷನ್ ಕಮ್ಮಿ ಆಗತ್ತೆ.

2.wlimg.com

8. ಎಳ್ಳೆಣ್ಣೆ ಚರ್ಮಕ್ಕೆ ಹೊಳಪು ನೀಡತ್ತೆ

ಎಳ್ಳೆಣ್ಣೆ ಹಚ್ಕೊಳ್ಳೋದ್ರಿಂದ ಚರ್ಮದ ಹೊಳಪು ಜಾಸ್ತಿ ಆಗತ್ತೆ. ಚರ್ಮದಲ್ಲಿರೋ ಸಣ್ಣಪುಟ್ಟ ಗಾಯಗಳು ಮತ್ತೆ ಗೀರುಗಳೂ ಮಾಯ ಆಗತ್ವೆ. ಮುಖದ ಚರ್ಮ ಗಟ್ಟಿ ಮಾಡಿ, ಚರ್ಮದ pores ಗಳು ದೊಡ್ಡದಾಗೋದನ್ನ ಎಳ್ಳೆಣ್ಣೆ ತಡ್ಯತ್ತೆ. ಎಳ್ಳೆಣ್ಣೆಯಿಂದ ಮುಖ ಚೆನ್ನಾಗಿ ತಿಕ್ಕಿ ಅಕ್ಕಿ ಅಥವಾ ಕಡ್ಲೆಹಿಟ್ಟಿನಿಂದ ಉಜ್ಜಿ ತೊಳೆದುಕೊಂಡ್ರೆ ಇಂತಾ pore ಎಲ್ಲಾ ಮುಚ್ಚೋಗತ್ತೆ.

mojepedzelki.blog.pl

9. ತಲೆಬುರುಡೆಯ ಸಮಸ್ಯೆಗಳನ್ನ ಎಳ್ಳೆಣ್ಣೆ ಕಮ್ಮಿ ಮಾಡತ್ತೆ

ತಲೆಬುರುಡೆ ಆರೋಗ್ಯವಾಗಿರಕ್ಕೆ ಬೇಕಾದ ವಿಟಮಿನ್ ಮಿನರಲ್ ಎಲ್ಲಾ ಎಳ್ಳೆಣ್ಣೆಯಿಂದ ಸಿಗತ್ತೆ. ಎಳ್ಳೆಣ್ಣೆ ಹಾಕ್ಕೊಂಡು ತಲೆ ಮಸಾಜ್ ಮಾಡಿದ್ರೆ ತಲೆಹೊಟ್ಟು, ಒಣಒಣ ಅನ್ನೋದು ಎಲ್ಲಾ ಕಮ್ಮಿ ಆಗತ್ತೆ. ಕೂದಲು ಉದುರೋದು ಕಮ್ಮಿ ಆಗತ್ತೆ.

healthadvisorgroup.com

10. ಎಳ್ಳೆಣ್ಣೆ ರೇಡಿಯೇಷನ್ ಡ್ಯಾಮೇಜಿಂದ ರಕ್ಷಣೆ ಕೊಡತ್ತೆ

ಎಳ್ಳೆಣ್ಣೆ ಮತ್ತೆ ಎಳ್ಳಿನ ಬೀಜಗಳಲ್ಲಿರೋ ಸೆಸಾಮೋಲ್ ರೇಡಿಯೇಷನ್ ನಿಂದ DNAಗೆ ಹಾನಿ ಆಗೋದನ್ನ ತಪ್ಪಿಸತ್ತೆ. ಇದು ಕರುಳು ಮತ್ತು ಸ್ಪ್ಲೀನ್ಗೆ ಹಾನಿ ಆಗೋದನ್ನೂ ತಡಿಯತ್ತೆ.

dosaikal.files.wordpress.com

ಗೊತ್ತಿತ್ತಾ?? ಇನ್ನೇನು ಮತ್ತೆ? ಎಳ್ಳುಂಡೆ ಜಮಾಯಿಸಿ ಮತ್ತೆ!!! ಎಳ್ಳಿಗೆ ಎಳ್ಳು ನೀರು ಬಿಡೋ ಬದ್ಲು ಗೊಜ್ಜು ಮಾಡಿ ಉಡಾಯಿಸಿ!!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: