ಬಟ್ಟೆ ಮೇಲೆ ಇಂಕು, ಸಾರು, ಕಾಫಿ, ಟೀ, ಏನೇ ಬಿದ್ರೂ ಸುಲಭವಾಗಿ ಹೋಗುಸ್ಕೊಳೋದು ಹೆಂಗೆ ಅಂತ ಕೇಳಿ

ಬಿದ್ದಿದ್ದೇ ಗೊತ್ತಾಗಲ್ಲ

ಬಟ್ಟೆಗಳ ಮೇಲೆ ಅಂಟಿರೋ ಕಲೇನ ತೆಗೆಯೋದು ಒಂದು ಕಲೇನೆ! ಅದ್ರಲ್ಲೂ ತುಂಬಾ ಬೆಲೆ ಬಾಳೋ ಬಟ್ಟೆ ಮೇಲೆ ಬಿದ್ರಂತೂ ಮುಗ್ದೇ ಹೋಯ್ತು. ಬಟ್ಟೆಗೆ ಅಂಟ್ಕೊಂಡಿರೋ ಕಲೇನ ತೆಗೆಯಕ್ಕೆ ಅಂಗಡೀಗ್ಳಲ್ಲಿ ನೂರಾರು ತರದ ಸೋಪು ಪೌಡ್ರು ಸಿಗ್ತಾವೆ. ಆದ್ರೆ ಜಾಹೀರಾತಿನಲ್ಲಿ ಹೇಳ್ದಷ್ಟು ಸುಲಭ ಅಲ್ಲ ಕಲೇನೆ ತೆಗೆಯೋದು. ಬಿಳಿ ಬಟ್ಟೆಗಳಿಗಾದ್ರೆ ಎಷ್ಟೇ ಕಲೆ ತೆಗೆದ್ರೂ ಒಂಚೂರು ಅದ್ರ ಶೇಡ್ ಹಾಗೇ ಉಳ್ಕೊಂಡ್ ಬಿಟ್ಟಿರುತ್ತೆ.

  1. ಬಟ್ಟೆಗೆ ಅಂಟಿಕೊಂಡ ಕಾಫಿ ಮತ್ತೆ ಟೀ ಕಲೆಗಳನ್ನ ತೆಗೀಬೇಕು ಅಂದ್ರೆ ಆದಷ್ಟು ಬೇಗ ಅದನ್ನ ಸ್ಪಂಜಿನಿಂದ ಒರೆಸ್ಬೇಕು, ಆಮೇಲೆ ಕಲೆ ಇರೋ ಜಾಗಕ್ಕೆ ಸ್ವಲ್ಪ ಉಪ್ಪು ಹಾಕ್ಬೇಕು. ಕಲೆ ಒಣಗಿದ ಮೇಲೆ ಅರ್ಧ ಗಂಟೆ ತಣ್ಣೀರಲ್ಲಿ ನೆನಸಿ ಆಮೇಲೆ ಮಾಮೂಲಿ ತರಹ ಒಗೆದುಕೋ ಬೇಕು. 

  s-media-cache-ak0.pinimg.com

  2. ಒಂದ್ ವೇಳೆ ಬೆವರಿನ ಕಲೆಗಳೇನಾದ್ರೂ ಆಗಿದ್ರೆ, ಮೊದಲು ಪುಡಿಯುಪ್ಪಿನಿಂದ ಉಜ್ಜಿ, ಆಮೇಲೆ ಬಿಸಿಲಲ್ಲಿ ಒಣಗಿಸಿದ ಮೇಲೆ ಬಟ್ಟೇನ ಒಗೀರಿ.

  thestyleexpress.files.wordpress.com

  3. ಇಂಕ್ ಕಲೆಗಳನ್ನ ತೆಗೀಬೇಕು ಅಂದ್ರೆ ಹೇರ್-ಸ್ಪ್ರೇ ಅಥವಾ ಆಲ್ಕೋಹಾಲ್ ಹಾಕಿ ತೆಗೀಬೋದು. 

  anthonyscleaners.com

  4. ಎಣ್ಣೆ ಕಲೆ ತೆಗೀಬೇಕು ಅಂದ್ರೆ ಜೋಳದಹಿಟ್ಟು ಅಥವಾ ಟಾಲ್ಕ್ ಪೌಡರನ್ನ ಕಲೆ ಮೇಲೆ ಉಜ್ಜಿ 20 ನಿಮಿಷ ಬಿಡಿ. ಆಮೇಲೆ ಮೆತ್ತಗಿರೋಂತ ಬಟ್ಟೆ ಅಥವಾ ಬ್ರಶ್ ಹಾಕಿ ತೊಳೀರಿ.

  aos.iacpublishinglabs.com

  5. ಲಿಪ್-ಸ್ಟಿಕ್ ಕಲೆ ಆಗಿದ್ರೆ (ಕಂಗ್ರಾಟ್ಸ್!) ಪಾತ್ರೆ ತೊಳೆಯೋ ಲಿಕ್ವಿಡ್ ಸೋಪು + ನೀರು ಬೆರಸಿಕೊಂಡು ಒರೆಸಿ, ಮಂಗಮಾಯ!

  t2.uccdn.com

  6. ಬಟ್ಟೆಗೆ ಬಬ್ಬಲ್ ಗಮ್ ಅಥವಾ ಚ್ಯೂಯಿಂಗ್ ಗಮ್ ಅಂಟಿಕೊಂಡಿದ್ರೆ ಮೊದಲು ಅದರ ಮೇಲೆ ಐಸ್ ಇಡಿ. ಚೆನ್ನಗಿ ತಣ್ಣಗಾಗಿ ತಾನೇ ಬಂದುಬಿಡುತ್ತೆ.

  onmogul.s3.amazonaws.com

  7. ಟೀ ಮತ್ತೆ ಕಾಫಿ ಕಲೆಗಳನ್ನ ಗ್ಲಿಸರಿನ್ ಹಾಕಿ ಕೂಡ ತೆಗೀಬೋದು.

  media2.intoday.in

  8. ಸಾರು, ಹುಳಿ ಏನಾದರೂ‌ ಬಿದ್ದರೆ ನೀರು ಮತ್ತೆ ಗ್ಲಿಸರಿನನ್ನ ಅರ್ಧ-ಅರ್ಧ ಬೆರೆಸಿಕೊಂಡು, ಕಲೆ ಆಗಿರೋ ಜಾಗದಲ್ಲಿ ಬಟ್ಟೆ ಹಿಂದ್-ಗಡೆ ಹಾಕಿ ತೊಳೀಬೇಕು.

  pad1.whstatic.com

  9. ಹುಲ್ಲು ಗಿಡಬಳ್ಳಿಗಳಿಂದ ಆದ ಕಲೆಗಳನ್ನ ತೆಗೀಬೇಕು ಅಂದ್ರೆ ಮೆತ್ತಗಿರೋ ಹತ್ತಿಬಟ್ಟೆ ಆಲ್ಕೋಹಾಲಲ್ಲಿ ಅದ್ದಿ ಕಲೆ ಇರೋ ಜಾಗಕ್ಕೆ ಹಾಕ್ಬೇಕು. ಆಮೇಲೆ ಬಟ್ಟೆ ವಾಶ್ ಮಾಡ್ಕೋಬೇಕು.

  cdn5.littlethings.com

  10. ಆಗ್ತಾನೇ ಬಟ್ಟೆಗೆ ಅಂಟಿಕೊಂಡಿರೋ ಹಣ್ಣು ಮತ್ತೆ ವೈನ್ ಕಲೆಗಳನ್ನ ತೆಗೀಬೇಕು ಅಂದ್ರೆ ನಿಂಬೆರಸಕ್ಕೆ ಉಪ್ಪು ಸೇರಿಸಿಕೊಂಡು ಉಜ್ಜಿ.

  img.wonderhowto.com

  11. ತುಕ್ಕಿನ ಕಲೆ ಆಗಿದ್ರೆ ಮೊದ್ಲು ಒಂದು ನಿಂಬೇಹಣ್ಣಿಗೆ ಉಪ್ಪು ಹಚ್ಚಿಕೊಂಡು ರಸ ಅಂತುಕೊಳೋಹಾಗೆ ಆ ಜಾಗದಲ್ಲಿ ಮೆಲ್ಲಗೆ ಒರೆಸಿ. ಆಮೇಲೆ ಬಿಸಿಲಲ್ಲಿ ಒಣಗಾಕಿ. ಒಣಗಿದ ಮೇಲೆ ಬಟ್ಟೆ ಒಗೀರಿ. ಕಲೆ ಮಾಯ!

  jtbmetaldesigns.files.wordpress.com

  ಅಂದಹಾಗೆ, ಕಲೆ ಆದ ಕೂಡಲೆ ಏನ್ ಮಾಡಬೇಕು, ಏನ್ ಮಾಡಬಾರದು ಅಂತ ಗೊತ್ತಿರಲಿ:

  1. ಒಂದು ಬಿಳೀ ಕಾಗದ ಅಥವಾ ಬಟ್ಟೆಯನ್ನ ನೀರಲ್ಲಿ ನೆನಸ್ಕೊಂಡು ಒರೆಸಿ.
  2. ಪೇಸ್ಟು, ಗಟ್ಟಿಯಾಗಿರೋಂತ ಪದಾರ್ಥ ಅಂಟ್ಕೊಂಡಿದ್ರೆ ಚಾಕು ಉಪಯೋಗಿಸಿ.
  3. ಯಾವುದೇ ಕಾರಣಕ್ಕೂ ಸೋಪು ಹಾಕಿ ಉಜ್ಜೋದಕ್ಕೆ ಹೋಗ್ಬೇಡಿ. ಆಗತಾನೆ ಆಗಿರೋ ಕಲೆ ಆದ್ರಿಂದ ಅದು ಬಟ್ಟೆಗೆ ಇನ್ನಷ್ಟು ಅಂಟಿಕೊಳ್ಳುತ್ತೆ.
  4. ಕಲೇನ ತೆಗಿಬೇಕಾದ್ರೆ ತುಂಬಾ ಉಜ್ಜೋದಕ್ಕೆ ಹೋಗ್ಬೇಡಿ. ಇದ್ರಿಂದ ಬಟ್ಟೆ ಹರಿಯೋ ಚಾನ್ಸ್ ಇರುತ್ತೆ, ಬಣ್ಣ ಹೋಗ್ಬೋದು, ಬಟ್ಟೆ ಹಾಳಾಗ್ಬೋದು.
  5. ತುಂಬಾ ಬಿಸಿ ನೀರು ಹಾಕಿ ತೊಳೀಬೇಡಿ. ಕಲೆ ಇನ್ನಷ್ಟು ಅಂಟಿಕೊಳ್ಳತ್ತೆ. ಬೆಚ್ಚಗಿನ ಅಥವಾ ತಣ್ಣೀರನ್ನೇ ಉಪಯೋಗಿಸಿ.
  6. ಬಟ್ಟೆ ಮೇಲಿರೋ ಕಲೆ ಸಂಪೂರ್ಣವಾಗಿ ಹೋಗೋ ತನಕ ಐರನ್ ಮಾಡಕ್ಕೆ ಹೋಗ್ಬೇಡಿ. ಯಾಕಂದ್ರೆ ಆ ಕಲೆ ಇನ್ನಷ್ಟು ಅಂಟಿಕೊಳ್ಳುತ್ತೆ.
  7. ಕಲೆ ತೆಗೆಯಕ್ಕೆ ಮೊದಲು ಮೈಲ್ಡ್ ಆಗಿರೋ ಸ್ಟೈನ್ ರಿಮೂವರ್ ಬಳಸಿ, ಆಮೇಲೆ ಸ್ವಲ್ಪ ಸ್ಟ್ರಾಂಗ್ ಆಗಿರೋದನ್ನ ಬಳಸಿ.
  8. ಕೆಲವೊಂದು ಬಟ್ಟೆಗಳಿಗೆ ಕಲೆ ಅಂಟಿಕೊಂಡ್ರೆ ಹೋಗುತ್ತೋ ಇಲ್ವಾ ಅಂತ ಸ್ಪಾಟ್ ಟೆಸ್ಟ್ ಮಾಡಿಕೊಳ್ಳೋದು ಉತ್ತಮ. ಯಾಕಂದ್ರೆ ಆಮೇಲೆ ಒದ್ದಾಡೋ ಪರಿಸ್ಥಿತಿ ಬರಲ್ಲ.

  ಇಷ್ಟು ಗೊತ್ತಿದ್ದರೆ ನೀವು ಬಟ್ಟೆ ಮೇಲೆ ಬಿದ್ದಿರೋ ಕಲೆ ತೆಗೆಯೋ ತಜ್ಞರು :-)

  ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

  ನಮ್ಮ ದೇಶದ ಬಗ್ಗೆ ಈ 13 ಸಂಗತಿಗಳ್ನ ತಿಳ್ಕೊಂಡ್ರೆ ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಾಗತ್ತೆ

  ಸಕ್ಕರೆ ಉತ್ಪಾದನೆ ಕಂಡುಹಿಡಿದದ್ದು ನಮ್ಮ ದೇಶ!

  ನಮ್ಮ ದೇಶ, ನಮಗೆ ಉಳಿಯಲು ನೆಲ, ಮಾಡಲು ಕೆಲಸ, ಹೊಟ್ಟೆಗೆ ಊಟ ಕೊಟ್ಟ ದೇಶ ನಮ್ಮ ದೇಶ. ನಮ್ಮ ದೇಶದ ಬೆಗ್ಗೆ ಕೆಲವು ವಿಷಯ ಚೆನ್ನಾಗೆ ತಿಳ್ಕೊಂಡಿರ್ತೀವಿ, ಆದ್ರೆ ಕೆಲವು ವಿಷಯ ಕೇಳಿದರೆ ನಮಗೆ ಹೌದಾ ಅಂತ ಆಶ್ಚರ್ಯ ಆಗತ್ತೆ. ಕೆಲವು ಅಂತ ವಿಷಯಗಳನ್ನ ನಾವಿಲ್ಲಿ ಹೇಳಿದೀವಿ. ನೋಡ್ಕೊಂಡ್ ಬನ್ನಿ 

  1. ಪ್ರಪಂಚದಲ್ಲಿ ಅತಿ ಹೆಚ್ಚು ಅಂಚೆ ವ್ಯವಸ್ಥೆ ಇರೋದು ನಮ್ಮ ದೇಶದಲ್ಲೇ

  1 ಲಕ್ಷದ 55 ಸಾವಿರ ಅಂಚೆ ಕಚೇರಿ ಇದೆ ನಮ್ಮ ದೇಶದಲ್ಲಿ. ಶ್ರೀನಗರದಲ್ಲಿ ತೆಲಾಡೋ ಅಂಚೆ ಕಚೇರಿ ಕೂಡ ಇದೆ 

  amazingindiablog.in

  2. ಕುಂಭಮೇಳಕ್ಕೆ ಸೇರೋ ಜನರ ಹಿಂದೂ ಬಾಹ್ಯಾಕಾಶದಿಂದ ಕಾಣಿಸತ್ತೆ 

  2011ರ ಕುಂಭಮೇಳದಲ್ಲಿ 75 ಲಕ್ಷ ಜನ ಸೇರಿದ್ದರು. ಹಾಗೆ ಇಷ್ಟು ಜನರ ಹಿಂಡನ್ನು ಬಾಹ್ಯಾಕಾಶದಿಂದ ಗುರುತಿಸಲಾಗಿತ್ತು 

  festivalsherpa-wpengine.netdna-ssl.com

  3. ಪ್ರಪಂಚದಲ್ಲಿ ಅತಿ ಹೆಚ್ಚು ಮಳೆ ಬೀಳೋ ಜಾಗ : ಮಿಝೋರಾಂ, ಚಿರಾಪುಂಜಿ 

  ಯಾವಾಗ್ಲೂ ಮಳೆ ಸುರಿಯೋದು ಇಲ್ಲೇನೇ.

  cdn.pixabay.com

  4. ಅತೀ ಎತ್ತರದಲ್ಲಿ ಕ್ರಿಕೆಟ್ ಮೈದಾನ ಇರೋದು ನಮ್ಮ ದೇಶದಲ್ಲಿ 

  ಹಿಮಾಚಲ ಪ್ರದೇಶದ ಚೈಲ್ ಅಲ್ಲಿ ಇರೋದು 

  statics.sportskeeda.com

  5. ಶಾಂಪೂ ಅನ್ನೋದನ್ನ ಕಂಡು ಹಿಡಿದದ್ದು ನಮ್ಮವರೇ 

  ಬಾಟಲಿನಲ್ಲಿರೋ, ಮರೆಕೆಟ್ನಲ್ಲಿ ಸಿಗೋ ಶಾಂಪೂ ಅಲ್ಲದೆ ಇದ್ರೂ ಗಿಡಮೂಲಿಕೆಗಳ ಮೂಲಕ ತಲೆಗೆ ಮಸಾಜ್ ಮಾಡ್ಕೊಳೋದನ್ನ ನಮ್ಮವರು ಕಂಡು ಹಿಡಿದದ್ದು. ಮೂಲತಃ ಶಾಂಪೂ ಅನ್ನೋ ಶಬ್ದ ಸಂಸ್ಕೃತದ ಚಂಪೂ ಅನ್ನೋ ಶಬ್ದದಿಂದ ಹುಟ್ಟಿರೋದು.

  balancemebeautiful.com

  6. ನಮ್ಮ ದೇಶದ ಕಬ್ಬಡ್ಡಿ ತಂಡ ಇಲ್ಲಿ ವರೆಗೂ ಎಲ್ಲ ವಿಶ್ವ ಕಪ್ ಗೆದ್ದಿದೆ 

  ste.india.com

  7. ಚಂದ್ರನ ಮೇಲೆ ನೀರಿದೆ ಅಂತ ಕಂಡುಹಿಡಿದದ್ದು ನಮ್ಮ ದೇಶದವರು 

  ISRO ಚಂದ್ರಯಾನ-1 ಮೂಲಕ ಇದನ್ನು 2009 ರಲ್ಲಿ ಸಾಧಿಸಲಾಯಿತು 

  svs.gsfc.nasa.gov

  8. ನಮ್ಮ ಮಾಜಿ ಪ್ರಧಾನಿ ಅಬ್ದುಲ್ ಕಲಾಂ ಅವರಿಗೆ ಮುಡಿಪಾಗಿ ಸ್ವಿಟ್ಜರ್ಲ್ಯಾಂಡ್ ತನ್ನ ಸೈನ್ಸ್ ದಿನವನ್ನ ಆಚರಿಸತ್ತೆ 

  ಅಬ್ದುಲ್ ಕಲಾಂ ಅವರು ಮೇ 26 ಸ್ವಿಟ್ಜರ್ಲ್ಯಾಂಡ್ಗೆ ಭೇಟಿ ಕೊಟ್ಟ ದಿನ. ಈ ದಿನ ಅಲ್ಲಿನ ಸೈನ್ಸ್ ದಿನವನ್ನ  ಎಂದು ಆಚರಿಸುತ್ತಾರೆ 

  images.indianexpress.com

  9. ನಮ್ಮ ದೇಶದಿಂದ ಹಾರಿಸಿದ ಮೊದಲನೇ ರಾಕೆಟ್ ಸಾಗಿಸಿದ್ದು ಸೈಕಲ್ಲಿನಲ್ಲಿ 

  ಮೊದಲ ರಾಕೆಟ್ ಸಿಕ್ಕಾಪಟ್ಟೆ ಸಣ್ಣದು, ಇದನ್ನ ಕೆರೆಳದ "ತುಂಬಾ" ಲಾಂಚಿಂಗ್ ಸ್ಟೇಷನ್ನಿಗೆ ಸೈಕಲ್ಲಿನಲ್ಲಿ ತೊಗೊಂಡು ಹೋಗಿದ್ರು 

  s-media-cache-ak0.pinimg.com

  10. ಅತಿ ಹೆಚ್ಚು ಸಸ್ಯಹಾರಿ ಆಹಾರ ತಿನ್ನೋರು ನಮ್ಮ ದೇಶದಲ್ಲೇ ಇರೋದು 

  scontent-frt3-2.cdninstagram.com

  11. ಪ್ರಪಂಚದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡೋ ದೇಶ ನಮ್ಮದು 

  media.istockphoto.com

  12. ಸಕ್ಕರೆ ಉತ್ಪಾದನೆ ಕಂಡುಹಿಡಿದದ್ದು ನಮ್ಮ ದೇಶ 

  besthealthmag.ca

  13. ವಜ್ರಗಳ ಗಣಿಗಾರಿಕೆ ಮೊದಲ ನಡೆದದ್ದು ನಮ್ಮ ದೇಶದಲ್ಲೇ

  ಗುಂಟೂರ್ ಮತ್ತು ಕೃಷ್ಣ ನದಿಯ ತೀರದ ಜಿಲ್ಲೆಯಲ್ಲಿ. ಆಮೇಲೆ ದಕ್ಷಿಣ ಆಫ್ರಿಕಾದಲ್ಲಿ ಶುರುವಾಗಿದ್ದು 

  scientificamerican.com
  ನಿಮಗೆಷ್ಟು ಗೊತ್ತಿತ್ತು? ಇನ್ನು ಗೊತ್ತಿದ್ದರೆ ನಮಗೂ ತಿಳಿಸಿ...

  ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: