ಜಗತ್ತಲ್ಲಿರೋ ಈ ಎಳು ದಾಖಲೆಗಳನ್ನ ಮುರಿಯೋದಕ್ಕೆ ಜನ ಹಿಂದೆ ಮುಂದೆ ನೋಡ್ತಾರೆ

ಗುಂಡಿಗೆ ಗಟ್ಟಿಯಾಗಿರ್ಬೇಕು ಇಲ್ಲಾಂದ್ರೆ ಶ್ರೀ ಮದ್ ರಮಾರಮಣ ಗೋವಿಂದ ಗೋವಿಂದ!

ಕೆಲ್ವೊಂದ್ ದಾಖಲೆಯೇ ಹಾಗೆ ಅದ್ನ ಯಾವತ್ತೂ ಮುರೀಲಿಕ್ಕೆ ಆಗೋದಿಲ್ಲ. ಎನ್ರೀ ಇದು ದಾಖಲೆ ಇರೋದೆ ಮುರಿಯೋದಕ್ಕೆ. ಅಂತದ್ರಲ್ಲಿ ಇದೇನ್ ಮಾತು ಅಂತೀರಾ ? ನಾನ್ ಹೇಳ್ತಾ ಇರೋದು ಆ ದಾಖಲೆಯನ್ನ ಮುರೀಯೋದಕ್ಕೆ ಜನ ಇಷ್ಟ್ ಪಡಲ್ಲಂತೆ. ಅಲ್ಲಾರೀ ಅದ್ ಯಾವ್ ಯಾವ್ ದಾಖಲೆ ಇದೆಯಂತ ಸ್ವಲ್ಪ ಹೇಳಿ ನೋಡೋಣ ನಾವ್ ಒಂದ್ಕೈ ನೋಡೆ ಬಿಡ್ತಿವೀ ಅಂತಿದ್ದೀರಾ ?ಹಾಗಾದ್ರೆ ಇಲ್ನೋಡಿ. 

1) ವಿಚಿತ್ರವಾಗಿರೋ ಡಯಟ್ನಲ್ಲಿ ಇವ್ನ ಮಾಡಿರೋ ದಾಖಲೆಯ ಹತ್ರಕ್ಕೂ ಯಾರೂ ಹೋಗೋದಕ್ಕೆ ಬಯಸೋದಿಲ್ಲಂತೆ

ದಪ್ಪ ಆಗ್ಬಾರ್ದು ಅಂತ ನಾವ್ ಎನೇನೋ ಡಯಟ್ ಮಾಡ್ತೀವಿ. ಆದ್ರೆ ಇಲ್ಲೊಬ್ಬ ಮನುಷ್ಯನ ಡಯಟ್ಟೆ ವಿಚಿತ್ರ. ಮೈಕೈಲ್ ಲೋಟಿಟೋ ಅನ್ನೋ ಫ್ರೆಂಚ್ ವ್ಯಕ್ತಿಯೊಬ್ಬ ತನ್ನ ಜೀವಿತಾವಧಿಯಲ್ಲಿ 18 ಬೈಸಿಕಲ್ , 15 ಸೂಪರ್ ಮಾರ್ಕೆಟ್ ಟ್ರಾಲಿಗಳನ್ನ , 7 ಟಿ ವಿ ಸೆಟ್ಗಳನ್ನ , 6 ಚಾಂಡೇಲಿಯರ್ಸ್ , 2 ಬೆಡ್ , ಒಂದ್ಜೊತೆ ಸ್ಕೀಸ್ , ಒಂದು ಕಂಪ್ಯೂಟರ್ ಇದಲ್ದೇ ಸೆಸೆನಾ ಲೈಟ್ ಎರಕ್ರಾಫ್ಟನ್ನ ಕೂಡಾ ತಿಂದಿದ್ದಾನಂತೆ. 

worldtruth.tv

2) ಎತ್ತರದಿಂದ ಕೆಳ್ಗಡೆ ಬಿದ್ದು ಈಜಾಡೋದ್ರಲ್ಲಿ ಇವ್ನನ್ನ ಮೀರಿಸೋರೇ ಇಲ್ಲಂತೆ

ಮೇಲಿಂದ ಕೆಳ್ಗಡೆ ನೀರಿಗೆ ಧುಮುಕಿ ಈಜಾಡೋದು ಅಂದ್ರೆ ಎಲ್ರಿಗೂ ಇಷ್ಟ್ ಅಲ್ವಾ. ಹಾಗಾದ್ರೆ ನೀವ್ ಎಷ್ಟು ಮೇಲಿಂದ ಕೆಳ್ಗಡೆ ಬಿದ್ದಿದ್ದಿರಾ ಒಂದತ್ತು ಹದಿನೈದು ಅಡಿಯಾ ? ಬ್ರೆಜಿಲ್ನಲ್ಲಿ ಹುಟ್ಟಿ ಸ್ವಿಸ್ನಲ್ಲಿ ನೆಲೆಸಿರೋ ಲಾಸೋ ಸ್ಕಾಲೇರ್ ಅನ್ನೋ ಅಸಾಮಿ ಕ್ಯಾಸ್ಕಡಾ ಡಿ ಸಾಲ್ಟೋ ಅನ್ನೋ ಜಲಪಾತದಿಂದ ಕೆಳ್ಗಡೇ ಧುಮುಕಿದ್ದಾನಂತೆ. ಅವ್ನು ಧುಮುಕಿದ್ದು ಬರೋಬ್ಬರಿ 59 ಅಡಿ ಅಂದ್ರೆ 193 ಪೀಟ್ ಎತ್ತರದಿಂದ ಜಂಪ್ ಹೊಡೆದಿದ್ದಾನಂತೆ. ನೀರಿಗೆ ಬಿದ್ದ ರಭಸ ಇದೆಯಲ್ಲ ಅದು ಅಂದಾಜು ಗಂಟೆಗೆ 122 ಕೀ ಮೀ ಅಂತೆ. ಬಿದ್ದ ರಭಸಕ್ಕೆ ಅವ್ನ ಸೊಂಟದ ಮೂಳೆ ಮುರಿದಿದೆಯಂತೆ. ಈಗ ಅವ್ನು ಆರಾಂಗಿದ್ದಾನಂತೆ. 

laughingsquid.com

3) ಬಿಕ್ಕಳಿಕೆ ಪರಮಾತ್ಮ ಇವ್ನಂತೆ

ಚಾರ್ಲ್ಸ್ ಒಸ್ಬರ್ನೇ ಅನ್ನೋ ವ್ಯಕ್ತಿಗೆ 1922 ರಲ್ಲಿ ಬಿಕ್ಕಳಿಕೆ ಶುರುವಾಯ್ತಂತೆ. ಅದು ನಿಂತಿದ್ದು ಅರವತ್ತೆಂಟು ವರ್ಷ (1990)  ಆದ್ಮೇಲೆ ಅಂತೆ. ಮೊದಲೆಲ್ಲ ನಿಮಿಷಕ್ಕೆ 40 ಬಾರಿ ಬಿಕ್ಕಳಿಸ್ತಾ ಇದ್ರೆ ಆಮೇಲೆ 20 ಕ್ಕೆ ಇಳಿತಂತೆ. ಕೊನೆಗೊಂದು ದಿನ ಅದು ನಿಂತೇ ಹೋಯ್ತಂತೆ.

todayifoundout.com

4) ಗಂಡಸ್ಥನವನ್ನ ಪ್ರೂವ್ ಮಾಡಿದ ಧೀರ ಇವ್ನಂತೆ

ತೊಡೆಸಂಧಿಗೆ ಯಾರಾದ್ರೂ ಹೊಡೆದ್ರೇ ಹೇಗಿರತ್ತೆ ಅಂತ ನೀವ್ ಹೇಳ್ತೀರಾ ? ರೀ ನಾವ್ ಗಂಡಸರಿಗೆ ಮಾತ್ರ ಕೇಳಿದ್ದು . ಆ ನೋವನ್ನ ತಡ್ಕೊಳ್ಳೋಕೆ ತುಂಬಾ ದೊಡ್ಡ ಮನ್ಸು ಬೇಕು ಆದ್ರೂ ಕಷ್ಟ ಬಿಡಿ. ಈ ರೀತಿ ಹೊಡೆಯೋದ್ರಲ್ಲಿಯೂ ಕೂಡಾ ಒಂದ್ ದಾಖಲೆಯಿದೆಯಂತೆ ಎಮ್ ಎಮ್ ಎ ಪೈಟರ್ ಆಗಿರೋ ಜಸ್ಟೀಸ್ ಸ್ಮಿತ್ನ ಹೆಸ್ರಲ್ಲಿದೆ. ಯುದ್ದದಲ್ಲಿ ಪಳಗಿರೋ ರೋರಿ ಕಿರ್ಬಿಗೆ ಹೊಡೆದ ಪೆಟ್ಟಿದೆಯಲ್ಲ ಅದು 35.4 ಕೀ ಮೀ ವೇಗದಲ್ಲಿದೆಯಂತೆ ಜೊತೆಗೆ 500 ಕೆ ಜಿನಷ್ಟು ತೂಕದ ಪೆಟ್ಟಂತೆ. 

img1.mxstatic.com

5) ಸಿಡಿಲು ಮಿಂಚು ಇವ್ನ ಬೆಸ್ಟ್ ಫ್ರೆಂಡ್ ಅಂತೆ

ವರ್ಜೀನಿಯಾದಲ್ಲಿರೋ ರಾಯ್ ಸಿ ಸುಲೇವಿಯ್ನ್ ಅನ್ನೋ ವ್ಯಕ್ತಿಗೆ ಸಿಡಿಲು ಮಿಂಚಿಗೆ ಎನೋ ಒಂದು ಗಾಢವಾಗಿರೋ ಸಂಬಂಧವಿದೆ.  ಯಾರಿಗಾದ್ರೂ ಒಂದ್ಸಲ ಹೊಡೆದ್ರೆ ಆ ವ್ಯಕ್ತಿಯ ಜೀವನವೇ ಮುಗ್ದೋಯ್ತು ಅಂತರ್ಥ. ಅಂತಹದ್ರಲ್ಲಿ ಈ ವ್ಯಕ್ತಿಗೆ ಸುಮಾರು ಎಳು ಬಾರಿ ಈ ರೀತಿ ಹೊಡೆದಿದೆಯಂತೆ ಜೊತೆಗೆ ಅದ್ರಿಂದ ಬದುಕಿ ಬೇರೆ ಬಂದಿದ್ದಾನಂತೆ. ಬದುಕಿದ್ದು ಯಾತಕ್ಕೆ ಅಂದ್ರೆ ಈ ಕತೆಯನ್ನ ಹೇಳೋದಕ್ಕೆ ಅನ್ಸತ್ತೆ. 

gosocial.co

6) ಡ್ರೈವಿಂಗ್ ಲೈಸೈನ್ಸ್ ತಗೋಳ್ಳೊದ್ರಲ್ಲಿ ಕೂಡಾ ದಾಖಲೆಯಿದೆಯಂತೆ

ದಕ್ಷಿಣ ಕೊರಿಯಾದಲ್ಲಿರೋ ಚಾ ಸಾ ಸೂನ್ ಅನ್ನೋಳು ಅಲ್ಲಿನ ದೇಶದ ದೊಡ್ಡ್ ತಾರೆಯಾಗಿದ್ದಾಳಂತೆ. ಇವ್ಳಿಗೇನೂ ನಟನೆ ಬರಲ್ಲ ಎನೇನೂ ಬರಲ್ಲ. ಇವ್ಳ ದಾಖಲೆ ಎನಿದ್ರೂ ಡ್ರೈವಿಂಗಲ್ಲಿ. ಸುಮಾರು 959 ಸಲ ಡ್ರೈವಿಂಗ್ ಪರಿಕ್ಷೆಯಲ್ಲಿ ಫೇಲಾಗಿ ಅಂತೂ 960 ನೇ ಸಲ ಪಾಸಾದ್ಳಂತೆ. ನೀವ್ ಕೇಳಬಹುದು ತಲೇಲ್ ಎನು ಲದ್ದಿಯಿದೆಯಾ ಅಂತ ಅಲ್ವಾ ?

assets.nydailynews.com

7) ಮೂಳೆ ಮುರ್ಕೊಳ್ಳೋದು ಕೂಡಾ ಒಂದು ದಾಖಲೆಯಂತೆ

ನಿಮ್ಗೆ ಯಾವಾಗ್ಲಾದ್ರೂ ಮೂಳೆ ಮುರ್ದಿದೆಯಾ ? ಇಲ್ವಾ ಒಕೆ ಹಾಗಾದ್ರೆ ಇನ್ನೊಂದ್ ಕೇಳ್ತೀನಿ ಒಬ್ಬ ಮನುಷ್ಯ ತನ್ನ ಜೀವೀತಾವಧಿಯಲ್ಲಿ ಎಷ್ಟು ಸಲ ಮೂಳೆ ಮುರ್ಕೋಬಹುದು ಹೇಳಿ. ಒಂದ್ಸಲ ಮುರ್ಕೊಂಡ್ರೆ ಮುಂದಿನ ಸಲ ಜಾಗ್ರತರಾಗ್ತೀವಿ ಅಂತಹದ್ರಲ್ಲಿ ಎಷ್ಟ್ ಸಲ ಅಂತ ಕೇಳಿದ್ರೆ , ನೀವ್ ನಂಬ್ತೀರೋ ಬಿಡ್ತಿರೋ ಗೊತ್ತಿಲ್ಲ  ಅಮೇರಿಕಾದ ಸ್ಟಂಟ್ ಫರ್ಪಾಮರ್ ಎವಿಲ್ ನಿವಿಲ್ ಅನ್ನೋನು ತನ್ನ ಜೀವೀತಾವಧಿಯಲ್ಲಿ 433 ಸಲ ಮೂಳೆ ಮುರ್ಕೊಂಡಿದ್ದಾನಂತೆ. ಶಾಕ್ ಆಗ್ಬೇಡಿ ಆಯ್ತಾ . 

http://cdn.silodrome.com/wp-content/uploads/2014/08/Evel-Knievel-1200x785.jpg
ಎಲ್ಲದಕ್ಕೂ ಒಂದ್ಸಲ ಯೋಚ್ನೆ ಮಾಡಿ :-)

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೋಡಿದ ತಕ್ಷಣ ಅರ್ಥವಾಗದಿರೋ ಈ 10 ಚಿತ್ರಗಳು ತಲೆಗೆ ಸಕತ್ ಕಸರತ್ತು ಕೊಡತ್ವೆ

ಹಾ! ಇನ್ನೊಂದು ಸಲ ನೋಡ್ಬೇಕಾ?

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.