ಆಲೂಗೆಡ್ಡೆ ತಿನ್ನೋದರ ಜೊತೆ ಈ 15 ಕೆಲಸಗಳಿಗೂ ಬಳಸ್ಬೋದು ಅಂತ ಹೆಚ್ಚು ಜನಕ್ಕೆ ಗೊತ್ತಿಲ್ಲ

ಬಲ್ಬ್ ಕೂಡ ಹತ್ತಿಸ್ಬೋದು!

ಆಲೂ ಪರೋಟ, ಸ್ಕಾಟ್ಲೆಂಡ್ನ್ ಕ್ಲ್ಯಾಪ್ ಶಾಟ್ , ಐರ್ಲೆಂಡ್ನ ಕೋಡಲ್ , ನಾರ್ವೆಯ ಲೆಪ್ಸಿ , ಜಪಾನಿನ ನಿಕುಜಾಗ್ , ಫ್ರಾನ್ಸಿನ ಗ್ರ್ಯಾಟಿನ್ , ಸ್ಪೇನಿನ ಟೊಂಬೇಟ್ , ಭಾರತದ ಆಲೂ ಟಿಕ್ಕಿನೇ ತಗೊಳ್ಳೀ ಇದ್ರಲ್ಲಿ ಇರೋದು ಆಲೂಗಡ್ಡೆ.

ಅಕ್ಕಿ ಗೋಧಿ ಜೋಳದ ನಂತರ ಯಾವ್ದಾದ್ರು ಆಹಾರ ಪದಾರ್ಥ ಹೆಚ್ಚಾಗಿ ಮಾರಾಟ ಆಗತ್ತೆ ಅಂದ್ರೆ ಅದು ಆಲೂಗಡ್ಡೆ. ಇದ್ನ ನೀವು ಕರ್ದಕೊಂಡ್ ಬೇಕಾದ್ರೂ ತಿನ್ನಿ ಇಲ್ಲಾ ಬೇಯ್ಸಕೊಂಡಾದ್ರೂ ತಿನ್ನಿ ಅದ್ರ ರುಚೀನೆ ಬೇರೆ. ಬರೇ ತಿನ್ನೋದು ಮಾತ್ರನಾ ಅಂತ ಕೇಳಿದ್ರಾ? ಇಲ್ಲಾರೀ ನೀವ್ ಇದ್ನ ಕಲೆ ತೆಗೀಲಿಕ್ಕೆ ಕೂಡಾ ಬಳ್ಸಬಹುದು, ಸುಟ್ಟ ಗಾಯದ ನೋವನ್ನ ಕಮ್ಮಿ ಮಾಡ್ಲಿಕ್ಕೆ , ಕಿಟ್ಕಿ ಗಾಜುಗಳು ಫಳ ಫಳ ಹೊಳೆಯೋದಕ್ಕೂ ಕೂಡಾ ಇದ್ನ ಬಳ್ಸಬಹುದು. ಹೇಗೆ ತಿಳ್ಕೊಳಿ…

1) ಮುಖಕ್ಕೆ ಆಲೂಗಡ್ಡೆ ಫೇಸ್ ಮಾಸ್ಕ್ ಹಾಕಿದ್ರೆ ಕಪ್ಪು ಕಲೆ ಮಾಯವಾಗತ್ತೆ

ಬೇಕಾಗಿರೋದು ಇಷ್ಟೇ…ಪುಡಿ ಮಾಡಿದ ಆಲೂಗಡ್ಡೆ ಚೂರುಗಳ ಜೊತೆಗೆ ಸ್ವಲ್ಪ ನೀರನ್ನ ಹಾಕಿ ಕಲಸಿ. ಆ ಮಿಶ್ರಣವನ್ನ ಮುಖದ್ಮೆಲೇ ಹಚ್ಕೊಂಡು ಒಂದ್ ಮೂವತ್ತು ನಿಮಿಷಗಳ ಕಾಲ ಇರಿ. ಆಮೇಲೆ ತೊಳೀರಿ. ಕಣ್ಣಿನ ಸುತ್ತ ಇರೋ ಕಪ್ಪು ಕಲೆಗೆ ಆಲೂಗಡ್ಡೆ ಸ್ಲೈಸ್ ಮಾಡಿಟ್ಕೊಳ್ಳಿ .

2) ಪಾತ್ರೆಗೆ ಅಂಟ್ಕೊಂಡಿರೋ ಕಲೆ ತೆಗಿಯತ್ತೆ

ಅರಿಶಿಣ , ಹಣ್ಣಿನ ಚೂರುಗಳು , ಬೀಟ್ರೋಟ್ ಇವೆಲ್ಲವನ್ನ ನಾವು ಮಧ್ಯಾಹ್ನದ ಊಟದಲ್ಲಿ  ಬಳ್ಸೇ ಬಳ್ಸತೇವೆ. ಆದ್ರೆ ಇದೆಲ್ಲವನ್ನ ಬಳ್ಸಿದ್ಮೇಲೆ ಅವ್ಗಳು ಬಿಟ್ಟೋಗಿರೋ ಆ ಕಲೆಯನ್ನ ಉಜ್ಜಿ ಉಜ್ಜಿ ಕೈಯಲ್ಲಿರೋ ಗೆರೆಗಳು ಅಳ್ಸಿಹೋಯ್ತೇ ಹೊರ್ತು ಕಲೆಯಂತೂ ಹೋಗ್ಲಿಲ್ಲ ಅಂದ್ರೆ…

ಉಗುರಿನ ಸಂದಿಯಲ್ಲಿ ಸಿಕ್ ಹಾಕ್ಕೊಂಡ್ರೆ ಆ ಕಲೆಯನ್ನ ತೆಗಿಯಕ್ಕಾಗ್ದೇ ಒದ್ದಾಡಿದ್ರೆ…ಒಂದರ್ಧ ಆಲೂಗಡ್ಡೆನಾ ತೆಗ್ದಿಟ್ಕೊಳ್ಳೀ. ಪಾತ್ರೆ ತೊಳಿಯೋ ಸಮಯದಲ್ಲಿ ಆಲೂಗಡ್ಡೇನಾ ಜಾಸ್ತಿ ಕಲೆ ಇರೋ ಸ್ಥಳದಲ್ಲಿ ಉಜ್ಜಿ ತೊಳೆಯಿರಿ. ಆವಾಗ್ ನೋಡಿ ಆಲೂಗಡ್ಡೆ ಮ್ಯಾಜಿಕ್. 

ಎಲಾ ಕಲೆ ಮಾಯವಾಗ್ಬಿಡತ್ತೆ. ಶಾಯಿ ಕಲೆಯಾಗಿದ್ರೂ ಕೂಡಾ ಇದೇ ಐಡಿಯಾನ ಬಳ್ಸಿ. 

rodalesorganiclife.com

3) ಇಳುವರಿ ಜಾಸ್ತಿ ಆಗತ್ತೆ

ಗಿಡ ನೆಡೋದಕ್ಕಿಂತ ಮುಂಚೆ ಆಲೂಗಡ್ಡೆಯಿಂದ ಕಸಿ ಮಾಡಿ ಇಲ್ಲಾಂದ್ರೆ ಆಲೂಗಡ್ಡೆ ರಸಾನೋ ಬಳಸಿ. ಬಿಸಾಡಿದ ಚೂರುಗಳಾದ್ರೂ ಪರ್ವಾಗಿಲ್ಲ ಹಾಕ್ಬಿಟ್ಟು ಗಿಡವನ್ನ ನೆಟ್ಟ್ ಬಿಡಿ. ಸ್ವಲ್ಪ ದಿನಗಳ ನಂತರ ನಿಮ್ಗೆ ಗೊತ್ತಾಗತ್ತೆ ಎಷ್ಟು ಬೇಗ ಮೊಳಕೆ ಬಂತು ಅಂತ!

4) ಸ್ನಾಯು ಅಥವಾ ಮಾಂಸಖಂಡಗಳ ನೋವಿಗೆ ರಿಲೀಫ್ ಕೊಡತ್ತೆ

ಸ್ನಾಯುಗಳು ಮತ್ತೆ ಮಾಂಸಖಂಡಗಳ  ನೋವಾದ್ರೆ ನಾವ್ ಎನ್ ಮಾಡ್ತೀವಿ ಹೇಳಿ ?  ಕೋಲ್ಡ್ ಬ್ಯಾಗೋ ಇಲ್ಲಾ ಹಾಟ್ ಬ್ಯಾಗೋ ಇಟ್ಕೊಳ್ತೀವಿ ತಾನೇ. ಎಷ್ಟ್ ಹೊತ್ತಿನವರೆಗೆ ನೀವು ಅದ್ನ ಇಟ್ಕೊಳ್ಭುದು. ಎನಪ್ಪಾಂದ್ರೂ ಒಂದರ್ಧಗಂಟೆ ಅದಾದ್ಮೇಲೆ ಆ ಬ್ಯಾಗಗಳಿದ್ದೂ ಎನು ಪ್ರಯೋಜನಕ್ಕೆ ಬರಲ್ಲ. ಶತಮಾನಗಳಿಂದ ನಡ್ದಕೊಂಡ್ ಬಂದಿರೋ ಒಂದ್ ವಿದ್ಯೆ ನಮ್ಗೆ ಹೆಚ್ಚಾಗಿ ಅರಿವಿಗೆ ಬರ್ತಾ ಇಲ್ಲ. ಆಲೂಗಡ್ಡೆನಾ ನಿಮ್ಗೆ ಹೇಗ್ ಬೇಕೋ ಹಾಗೆ ಬಿಸಿಯಂದ್ರೆ ಬಿಸಿ ತಣ್ಣಗೆ ಅಂದ್ರೆ ತಣ್ಣಗೆ ತಯಾರ್ಸ್ಕೊಂಡು ನಿಮ್ ಕಾಲ್ಛೀಲದ ಕೆಳ್ಗೆ ಇಟ್ಕೊಳ್ಳಿ. ಯಾಕಂದ್ರೆ ಆಲೂಗಡ್ಡೆಗೆ ಜಾಸ್ತಿ ಹೊತ್ತು ಉಷ್ಣಾಂಶವನ್ನ ತಡೆದಿಟ್ಕೊಳ್ಳೋ ಸಾಮರ್ಥ್ಯ ಇದೆ ಅದ್ಕೆ. ಪ್ರಯಾಣ ಮಾಡೋಕ್ಕಿಂತ ಮುಂಚೆ ಒಂದ್ನಾಲ್ಕೈದು ಆಲೂಗಡ್ಡೆ ಹೋಳುಗಳನ್ನ ಇಟ್ಕೊಳ್ಳಿ. ಚಳಿಯಿಂದ ನಡುಗೋದೆಲ್ಲಾ ತಪ್ಪತ್ತೆ. 

rackcdn.com

5) ತಲ್ನೋವು ಕಮ್ಮಿ ಮಾಡತ್ತೆ

ಆಲೂಗಡ್ಡೆನಾ ಬ್ಯಾಂಡೇಜ್ ರೀತಿಯಲ್ಲಿ ಕಟ್ಕೊಂಡು ಉಪಯೋಗ್ಸಿ. ನಿಮ್ಗೆ ಬೇಕಾಗಿರೋದು ಒಂದೆರಡು ಚೂರುಗಳು. ಬ್ಯಾಂಡೇಜ್ ಮಾಡಕ್ಕಾಗಲ್ಲಾಂದ್ರೆ ಎಲ್ಲೆಲ್ಲಿ ತಲ್ನೋವಿದೆಯೋ ಅಲ್ಲಲ್ಲಿ ಉಜ್ಜಿ ಒಳ್ಳೆ ಸಮಧಾನ ಸಿಗತ್ತೆ. ಇನ್ಮುಂದೆ ಮಾತ್ರೆ ನೆನಪಾಗೋ ಮುಂಚೆ ಆಲೂಗಡ್ಡೆ ನೆನಪಾಗ್ಬೇಕು!

6) ಗಾಜು ಫಳ ಫಳ ಕ್ಲೀನ್ ಆಗತ್ತೆ

ಈ ಕೆಲ್ಸಾನ ಮಾಡೊಕ್ಕಿಂತ ಮುಂಚೆ ನಿಮ್ ಹೆಂಡ್ತಿ ಹತ್ರ ಅಪ್ಪಣೆ ತಗೊಂಡು ಒಂದೆರಡು ಆಲೂಗಡ್ಡೆಯನ್ನ ಇಸ್ಕೊಳ್ಳಿ :-)

ಬೇಯ್ಸದೇ ಇರೋ ಆಲೂಗಡ್ಡೆನಾ ಗಾಜಿನ ಮೇಲೇ ಸರ್ಯಾಗ್ ಉಜ್ಜಿ. ಉಜ್ಜಿದ ನಂತರ ಸ್ವಲ್ಪ ಸಮಯ ಬಿಟ್ಟು ಒಂದೊಳ್ಳೆ ಬಟ್ಟೆಯಿಂದ ಸರ್ಯಾಗಿ ಒರೆಸಿ. ಫಳ ಫಳ ಹೊಳೆಯುತ್ತಿರೋ ಗಾಜು ನಿಮ್ ಕಣ್ಮುಂದೆ ಇರೋದಂತೂ ಖಂಡಿತ.

cdn1.autoexpress.co.uk

7) ಪೇಂಟಿಂಗ್ ಅಚ್ಚು ಆಗತ್ತೆ

ಚಿಕ್ಕವರಿರೋವಾಗ ಆಲೂಗಡ್ಡೆಯನ್ನ ಬಳಸಿ ಅದ್ರಲ್ಲೇ ಎನೇನೋ ಬಿಡ್ಸಿ ತುಂಬಾನೇ ಮಜಾ ಮಾಡಿದ್ದು ನೆನಪಿದೆಯಾ?

ಆಲೂಗಡ್ಡೆ ತಗೊಂಡು ಯಾವ್ ಚಿತ್ರಬೇಕೋ ಅದ್ನ ಅದ್ರಲ್ಲಿ ಬಿಡಿಸಿ ಫ್ಯಾಬ್ರಿಕ್ ಪೇಂಟ್ನಲ್ಲಿ ಅದ್ಬಿಟ್ಟು ತೆಗಿರಿ. ಇವಾಗ ಚಿತ್ರ ಬಿಡಿಸೋ ಹಾಳೆಯಲ್ಲಿ ಇಟ್ಬಿಟ್ಟು ನೋಡಿ ಖುಷಿ ಪಡಿ.

ಬಟ್ಟೆ ಚೀಲ, ತಲೆದಿಂಬು, ಗೋಡೆ ಮೇಲೆ ಈ ತರ ಪೇಂಟಿಂಗ್ ಮಾಡಿ ಅಂದ ಹೆಚ್ಚಿಸಿ.

8) ಹೊಟ್ಟೆ ಹುಣ್ಣು, ಸಾಯಟಿಕಾ, ಎದೆ ಉರಿ ಕಮ್ಮಿ ಮಾಡತ್ತೆ

ಆಲೂಗಡ್ಡೆಯ ಜ್ಯೂಸ್ ಕೇಳಿದ್ರಾ ? ಕೇಳಿಲ್ಲಾಂದ್ರೆ ಇವತ್ತೆ ಹೋಗಿ ಮಾಡಿ. ಕುಡೀಲಿಕ್ಕೆ ಸ್ವಲ್ಪ ಕಷ್ಟ್ ಆಗ್ಬಹುದೋ ಎನೋ ಗೊತ್ತಿಲ್ಲ ಆದ್ರೆ ಆರೋಗ್ಯದ ದೃಷ್ಟಿಯಿಂದ ನಿಮ್ಗೆ ತುಂಬಾ ಒಳ್ಳೆಯದಾಗತ್ತೆ. ಎನಿಲ್ಲಾ ಒಂದೆರಡು ಆಲೂಗಡ್ಡೆಯನ್ನ ತಗೊಂಡು ಮಿಕ್ಸಿಗೆ ಹಾಕ್ಕೊಳ್ಳೀ ಸ್ವಲ್ಪ ನೀರಿನ ಜೊತೆ ಸರ್ಯಾಗಿ ರುಬ್ಕೊಳ್ಳಿ. ಸಾಧ್ಯ ಆದ್ರೆ ಕ್ಯಾರೇಟ್ ಬೀಟ್ರೂಟ್ನ ಸೇರ್ಸಿ. ಬೇಕೇ ಬೇಕು ಅಂತಿಲ್ಲ. ಹೊಟ್ಟೆಯಲ್ಲಾಗೋ ಹುಣ್ಣು, ಸಾಯಟಿಕ ನೋವು, ಎದೆ ಉರಿ, ಸಂಧಿವಾತ ಇವೆಲ್ಲವನ್ನ ಕಮ್ಮಿ ಮಾಡ್ಸತ್ತೆ.

eathealthyplans.com

9) ಬಿಸಿ ತಾಗಿ ಸುಟ್ಟೋದ್ರೆ ಆಲೂಗಡ್ಡೆ ನೋವು ಕಮ್ಮಿ ಮಾಡತ್ತೆ

ಅಡುಗೆ ಮಾಡೋವಾಗ ಕೈ ಸುಟ್ಕೊಂಡ್ರೆ ಅಥ್ವಾ ಇನ್ನೇನಾದ್ರೂ ಮಾಡೋವಾಗ ಬಿಸಿ ತಾಗಿ ಸುಟ್ಟೋದ್ರೆ ತಕ್ಷಣ ಆಲೂಗಡ್ಡೆಯಿಂದ ಆ ಜಾಗದಲ್ಲಿ ಉಜ್ಜಿ ಅಥ್ವಾ ಇಟ್ಕೊಳ್ಳಿ. ಅಷ್ಟೆ ಸಾಕು ನೋವು ಕಮ್ಮಿ ಮಾಡ್ಸತ್ತೆ. 

10) ಮೈಮೇಲಿನ ಮಚ್ಚೆ ಕಲೆ ಮಾಸತ್ತೆ

ಮೈಮೇಲೇನಾದ್ರೂ ಮಚ್ಚೆಯ ತರ ಕಲೆಯೇನಾದ್ರೂ ಇದ್ರೆ ಅದ್ನ ತೆಗಿಯೋಕೆ ತುಂಬಾನೇ ಕಷ್ಟ. ಕೆಲವೊಬ್ರು ಇದಕ್ಕಾಗಿ ಲೇಜರ್ ಮೊರೆ ಹೋಗ್ತಾರೆ. ಅದಕ್ಕಿಂತ ಇನ್ನೂ ಸುಲಭವಾಗಿರೋ ಉಪಾಯಂದ್ರೆ ದಿನಾಲೂ ಒಂದೆರಡು ಆಲೂಗಡ್ಡೆಯ ತುಂಡುಗಳನ್ನ ತಗೊಂಡು ಕಲೆಯಾಗಿರೋ ಜಾಗದಲ್ಲಿ ದಿನಾಲೂ ರಸ ಬರೋವರೆಗೆ ಉಜ್ಜುತ್ತಾ ಬನ್ನಿ . ಒಂದೊಳ್ಳೆ ದಿನ ಆ ಕಲೆ ಮಾಯ ಆಗ್ಬಿಡತ್ತೆ. 

hickeysolution.com

11) ಅಡುಗೇಲಿ ಉಪ್ಪು ಜಾಸ್ತಿಯಾಗಿದ್ರೆ ಆಲೂಗಡ್ಡೆ ಹಾಕಿ ಹೆಚ್ಚಿನ ಹೀರ್ಕೊಳ್ಳತ್ತೆ 

ಸೂಪ್ ಎನಾದ್ರೂ ಕುಡಿಯೋವಾಗ ಉಪ್ಪು ಜಾಸ್ತಿ ಇದ್ರೆ ಅಥ್ವಾ ಇನ್ಯಾವುದೋ ಪದಾರ್ಥದಲ್ಲಿ ಉಪ್ಪಿನಾಂಶ ಜಾಸ್ತಿ ಇದ್ರೆ ತಕ್ಷಣ ಒಂದೆರಡು ಆಲೂಗಡ್ಡೆ ಹೋಳುಗಳನ್ನ ಹಾಕಿ. ಅದು ಎಲ್ಲವನ್ನ ಹೀರ್ಕೊಂಡು ನಿಮ್ಗೆ ರುಚ್ ರುಚಿಯಾಗಿರೋ ಸೂಪನ್ನ ಕುಡೀಲಿಕ್ಕೆ ಸಹಾಯ ಮಾಡತ್ತೆ. 

12) ಅರ್ಧ ಒಡೆದ ಲೈಟ್ ಬಲ್ಬನ್ನ ಭದ್ರವಾಗಿ ಹಿಡ್ಕೊಳತ್ತೆ

ಮನೆಯಲ್ಲಿರೋ ಲೈಟ್ ಬಲ್ಬು ಒಡೆದೋದ್ರೆ ಅದ್ನ ತೆಗೀಬೇಕು ಅಂದ್ರೆ ಹರಸಾಹಸ ಮಾಡ್ಲೇಬೇಕು. ಈ ದೊಡ್ಡ ಸಮಸ್ಯೆಗೆ ಆಲೂಗಡ್ಡೆ ಪರಿಹಾರ ಕೊಡತ್ತೆ. ಮೊದ್ಲಿಗೆ ಆಲೂಗಡ್ಡೆಯ ತುದಿಯನ್ನ ಕತ್ತರಿಸಿ , ಅದ್ನ ಬಲ್ಬನ ಮಧ್ಯದಲ್ಲಿರೋ ಚೂಪಾದ ವಸ್ತುವಿಗೆ ಸರ್ಯಾಗಿ ಸಿಕ್ಕಿಸಿ ಸರ್ಯಾದ್ಕಡೆ ತಿರುಗಿಸಿ . ಈಗ ನೋಡಿ ನಿಮ್ ಕೈಲೀ ಆಲೂಗಡ್ಡೆಯ ಜೊತೆ ಒಡೆದೋಗಿರೋ ಬಲ್ಬ ಕೂಡಾ ಇದೆ. ಈ ಕೆಳ್ಗಿನ ವೀಡಿಯೋದಲ್ಲಿ ಅದ್ನ ಹೇಗ್ ಮಾಡೋದಂತ ಹೇಳಿದೆ ನೋಡಿ. 

13) ತುಕ್ಕು ಹಿಡಿದೀರೋ ಚಾಕು ಚೂರಿಗಳನ್ನ ಮೊನಚು ಮಾಡತ್ತೆ

ಮನೇಲಿ ತುಕ್ಕು ಹಿಡಿದೀರೋ ಚಾಕು ಚೂರಿಗಳೇನಾದ್ರೂ ಇದ್ರೆ ಅದ್ಕೆ ಹೊಸ ರೂಪ ಕೊಡ್ಬೇಕು ಅಂತನಿಸಿದ್ರೆ ತಕ್ಷಣ ಆಲೂಗಡ್ಡೆ ಹೋಳುಗಳಿಂದ ಸರ್ಯಾಗಿ ಉಜ್ಜಿ. ಜೊತೆಗೆ ಸ್ವಲ್ಪ ನೀರು ಮತ್ತೆ ಉಪ್ಪನ್ನ ಮಿಶ್ರಣ ಮಾಡಿ ಉಜ್ಜಿದ್ರೆ ಇನ್ನೂ ಹೊಳಪಾಗಿರತ್ತೆ ಒಂದ್ಸಲ ಟ್ರೈ ಮಾಡಿ. ದುಡ್ ಕೊಟ್ಟು ತಗೊಂಡಿದ್ದು ತಾನೇ ಸುಮ್ನೇ ಹಾಳ ಮಾಡೋದೇನಕ್ಕೆ. 

14) ಬೆಳ್ಳಿ ಪಾತ್ರೆ ಕಪ್ಪು ಹಿಡಿದಿದ್ರೆ ಹೊಳಪು ಬರ್ಸತ್ತೆ

ಮನೇಲಿರೋ ಬೆಳ್ಳಿ ಸ್ಪೂನ್, ಪ್ಲೇಟು, ದೀಪ ಅಥವಾ ನೀವ್ ಚಿಕ್ಕವರಿರೋವಾಗ ಗೆದ್ಕೊಂಡ್ ಬಂದಿರೋ ಪದಕಗಳು ಕಪ್ಪಾಗಿದ್ರೆ ಸ್ವಲ್ಪ ಬಿಸಿನೀರನ್ನ ತಗೊಂಡು ಅದ್ರಲ್ಲಿ ಒಂದೆರಡೋಳು ಆಲೂಗಡ್ಡೆ ಜೊತೆಗೆ ಹಾಕಿ ಇಡಿ. ಸ್ವಲ್ಪ ಸಮಯದ ನಂತರ ಅದ್ನ ತೊಳೆಯಿರಿ. ಇದಾಗಲ್ಲಂದ್ರೆ ಆಲೂಗಡ್ಡೆಯ ತುಂಡುಗಳಿಂದ ಅದರ ಮೇಲೆ ರಸ ಬರೋವರ್ಗೂ ಉಜ್ಜಿ ತೊಳೆಯಿರಿ.

en.bcdn.biz

15) ಕರೆಂಟ್ ಕೈ ಕೊಟ್ಟಾಗ ಎಲ್.ಇ.ಡಿ ಬಲ್ಬು ಹತ್ತಿಸತ್ತೆ

ಆಲೂಗಡ್ಡೆನಾ ಬಳ್ಸಿ ಎಲ್ ಇ ಡಿ ಬಲ್ಬನ್ನ ಬೆಳಗಿಸಬಹುದು ಅಂದ್ರೆ ನೀವು ನಂಬ್ಲೇಬೇಕು. ಇದ್ಕೆ ನಿಮ್ಗೆ ಬೇಕಾಗಿರೋದು ತಾಮ್ರ ಮತ್ತೆ ಸತುವಿನ ತಂತಿಗಳು. ಆಲೂಗಡ್ಡೆ ಮಧ್ಯಭಾಗದಲ್ಲಿ ಚಿಕ್ಕ ತೂತು ಮಾಡಿ ಅದ್ರಲ್ಲಿರೋ ಆಲೂಗಡ್ಡೆಯನ್ನ ತೆಗೀರಿ. ಆಮೇಲೇ ಒಂದು ನಾಣ್ಯಕ್ಕೆ ತಾಮ್ರದ ತಂತಿಯನ್ನ ಸುತ್ತಿ ಇನ್ನೊಂದು ನಾಣ್ಯಕ್ಕೆ ಸತುವಿನ ತಂತಿಯನ್ನ ಸುತ್ತಿ ಇವಾಗ ಅದೆರಡು ತಂತಿಗಳನ್ನ ಒಂದಕ್ಕೊಂದು ಸೇರಿಸಿ. ಇವಾಗ ಮತ್ತೆ ಎಲ್.ಇ.ಡಿ ಬಲ್ಬನ್ನ ಇಟ್ರೆ ಬೆಳಕಾಗೋದು ನೀವು ನೋಡ್ತೀರಾ!!!

ಬೇಕಾದ್ರೆ ಈ ಕೆಳ್ಗಿನ ದೃಶ್ಯ ತುಣಕನ್ನ ನೋಡಿ. 

ತ್ತೆ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಮಕ್ಕಳು ಸ್ಕೂಲಿಗೆ ಹೋಗೇ ಕಲೀಬೇಕೋ ಅಥ್ವಾ ಬೇರೆ ದಾರೀನೂ ಇದ್ಯೊ? ಉತ್ತರ ಇಲ್ಲಿದೆ

ಇತ್ತೀಚೆಗೆ ಚರ್ಚೆ ಆಗ್ತಿರೋ ವಿಷಯ.

ಸಾಮಾನ್ಯವಾಗಿ ಕಲಿಬೇಕು ಅಂದ್ರೆ ಮಕ್ಕಳು ಎಲ್ರ ಥರ ಸ್ಕೂಲ್ಗೆ ಹೋಗ್ಲೇಬೇಕು ಅಂದ್ಕೋತಾರೆ ಅಪ್ಪ-ಅಮ್ಮ. ಆದ್ರೆ, ಮಗು ನಂಗೆ ಎಲ್ಲರ ಥರ ಕಲ್ಯಕ್ ಆಗಲ್ಲ; ನಂಗೆ ಅವ್ರು-ಇವ್ರು ಕಲೀತಾರೆ ನೀನ್ ಮಾತ್ರ ಕಲೀತಿಲ್ಲ ಅಂದ್ರೆ ಕಷ್ಟ ಆಗತ್ತೆ; ಸ್ಕೂಲಲ್ ಕಲ್ಸೋ ಎಷ್ಟೋ ವಿಷಯ ಬೋರ್ ಆಗತ್ತೆ ಅಂದ್ರೆ ಏನ್ ಗತಿ? ಗಾಬರಿ ಆಗ್ಬೇಡಿ, ಅಂಥ  ಮಕ್ಕಳ್ಗಾಗೆ ಸರ್ಕಾರ ಶುರು ಮಾಡಿರೋ ಕಾರ್ಯಕ್ರಮದ ಬಗೆ ತಿಳಿಸ್ತೀವಿ. ಓದಿ...

1) ಮಕ್ಕಳು ಶಾಲೆ ಬಿಡಕ್ಕೆ ದುಡ್ಡೊಂದೇ ಕಾರಣ ಅಲ್ಲ

ತುಂಬಾ ಮಕ್ಕಳು ದುಡ್ಡಿಲ್ದೇನೋ, ಬೇರೆ ಯಾವ್ದೋ ಸಾಮಾಜಿಕ ಕಾರಣಕ್ಕೋ ಸ್ಕೂಲ್ ಬಿಡ್ತಿದ್ದಾರೆ. ಇನ್ನೂ ಕೆಲವ್ರು ಗಣಿತ, ವಿಜ್ಞಾನದಂಥ ಕಡ್ಡಾಯ ವಿಷಯ ಪಾಸಾಗ್ದೆ ಆಚೆ ಹೋಗ್ತಿದ್ದಾರೆ.

https://antekante.com/sites/default/files/images/e2b9befc3c6a3729c61e61487edd402c_1.jpg

2)  ಬಿಟ್ಟ ಮೇಲೆ ಮನಸ್ಸು ಬದ್ಲಾಯ್ತು ಅಂದರೆ ಏನ್ ಮಾಡೋದು ?

ಸ್ಕೂಲ್ ಒಂದ್ ಸರ್ತಿ ಬಿಟ್ಟ ಮೇಲೆ ಮತ್ತೆ ಸೇರ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಹೆಚ್ಚಿನ ಓದಿಗಾಗಿ ಕಾಲೇಜು ಸೇರ್ಕೊಳ್ಳಕ್ಕೆ ಇನ್ನೂ ಪರದಾಡಬೇಕು. ಕೈಕಾಲು, ಆರೋಗ್ಯ ಎಲ್ಲ ಸರಿ ಇದ್ದು, ದುಡ್ಡು ಇದ್ದು, ದೊಡ್ಡ ಊರು ಹತ್ತಿರ ಇದ್ರೆ ಮಾತ್ರ ಹೇಗೋ ಓದು ಮುಗಿಸ್ಬೋದು. ಇಲ್ಲ ಅಂದ್ರೆ ಬೋ ಕಷ್ಟ.

opensocietyfoundations.org

3) ಸ್ಕೂಲ್ಗ್ ಹೋಗಿ ಓದಕ್ಕೆ ಆಗಲ್ಲ ಅನ್ನೋರ್ಗೆ ಅಂತಾನೇ ಸರ್ಕಾರ "ನ್ಯಾಷನಲ್  ಇನ್ಸ್ಟಿಟ್ಯೂಟ್ ಆಫ್  ಓಪನ್ ಸ್ಕೂಲ್" (NIOS) ತೆಗ್ದಿದೆ

ಹೀಗೆ, ಸ್ಕೂಲ್ ಬಿಟ್ಟೋರ್ಗೆ, ಸ್ಕೂಲ್ಗೆ ಸೇರ್ದೆ ಇರೋರ್ಗೆ, ಶಾಲೆಗಿಂತ ಬೇರೆ ರೀತಿ ಓದ್ಗೆ ಅವಕಾಶ ಮಾಡ್ಕೊಡ್ಬೇಕಿತ್ತು. ಇದಕ್ಕಾಗಿ ಓಪನ್ ಸ್ಕೂಲಿಂಗ್ ಎಂಬ ಬೇರೆ ಥರಾ ಕಲಿಸೋ ಯೋಜನೆ ಶುರು ಆಯ್ತು. ಇದೇ ಮುಂದೆ ೨೦೦೨ರಲ್ಲಿ "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್"(NIOS) ಅಂತ ಹೊಸ ಹೆಸ್ರು ತೊಗೋತು.

4) ಬಲವಂತ, ಒತ್ತಾಯ ಇಲ್ದೆ ಈ ಥರ ಕಲಿಯೋದು ಎಷ್ಟು ಆರಾಮ್ ಅಲ್ವ?

ಸುಲಭವಾಗಿ ಅರ್ಥ ಆಗೋ ಅಂತ ರೀತಿ ಮತ್ತು ಒಳ್ಳೇ ಕಲಿಕೆ ಎಲ್ಲಾರ್ಗೂ ಸಿಗ್ಬೇಕು, ಬೇಕಾದೋರ್ಗೆಲ್ಲಾ ತಲುಪಬೇಕು ಅನ್ನೋದೊಂದೇ ಉದ್ದೇಶ. ಪಿ.ಯು.ಸಿ.ವರೆಗೆ ಮಕ್ಕಳು ತಂತಂ ಭಾಷೇಲೇ, ಯಾವುದೇ ಬಲವಂತ, ಒತ್ತಾಯ ಇಲ್ದೆ ಕಲಿಯಕ್ಕೆ ಇರೋ ಒಳ್ಳೆ ಅವಕಾಶ.


5) ನಮ್ಗೆ ಇಷ್ಟವಾದ 5 ವಿಷಯ ಆಯ್ಕೆ ಮಾಡ್ಕೋಬೋದು. ಅಂದ್ರೆ, ಸ್ಕೂಲಲ್ ಕಲಿಸೊ ಯಾವ್ದಾದ್ರೂ ವಿಷಯ ಬೇಡ ಅನ್ಸಿದ್ರೆ ಕೈ ಬಿಡ್ಬೋದು !

ಸ್ಕೂಲಲ್ಲಿ ಬಲವಂತವಾಗಿ 6 ವಿಷಯ ಕಲೀಬೇಕು ಅನ್ನದು ಮಾಮೂಲಿ ಆದ್ರೆ, ಇಲ್ಲಿ ಯಾವ್ದಾದ್ರೂ 5 ವಿಷಯಾನ ಆರಿಸ್ಕೊಬೋದು—ಒಂದು ಭಾಷೆ ಕಡ್ಡಾಯ, ಬೇಕು ಅನ್ಸಿದ್ರೆ ಎರಡು ತೊಗೋಬೋದು. ಜಾಸ್ತಿ ವಿಷಯ ಬೇಕು ಅಂದ್ರೂನೂ ಕಲೀಬೋದು. ಮಧ್ಯೆ ಬೋರಾದ್ರೆ ಬದ್ಲಾಯಿಸ್ಕೋಬೋದು. ಯಾವ್ದು ಸುಲಭಾನೋ ಅದ್ರಲ್ಲಿ ಪರೀಕ್ಷೇಗೆ ಕೂತ್ಕೋಬೋದು.


6) ಮೂರು ಹಂತದಲ್ಲಿ ಈ ಕಾರ್ಯಕ್ರಮ ನಡೆಯತ್ತೆ.  ಜೀವನೋಪಾಯಕ್ಕಾಗಿ ಏನು ಬೇಕೋ ಅದನ್ ಕಲಿಯೋ ಅವಕಾಶಾನೂ ಇರುತ್ತೆ.

 

NIOS ಕಾರ್ಯಕ್ರಮ ಹೀಗಿರುತ್ತೆ, ನೋಡಿ: 3, 5 ಮತ್ತು 8ನೇ ತರಗತಿಗೆ ಸಮವಾಗಿ 3 ಹಂತ ಇರುತ್ತೆ. 4 ಎಸ್.ಎಸ್.ಎಲ್.ಸಿ. ಮತ್ತೆ, 5 ಪಿ.ಯು.ಸಿ. ಪ್ರತಿ ಹಂತ ದಾಟಿದ್ದಕ್ಕೆ NIOS ಪರೀಕ್ಷೆ ಮಾಡಿ, ಪಾಸಾದ್ರೆ ಪ್ರಮಾಣಪತ್ರಾನೂ ಕೊಡತ್ತೆ. ಈ ಪ್ರಮಾಣಪತ್ರಕ್ಕೆ ಬೇರೆ ಬೋರ್ಡ್ಗಳ ಪ್ರಮಾಣಪತ್ರದಷ್ಟೇ ಪವರ್ರು.

 

7)  ಆನ್ಲೈನ್ ಮೂಲಕ ಕೋರ್ಸ್ ಸೇರ್ಬೋದು, ಒಂದು ಕೋರ್ಸ್ ಮುಗ್ಸಕ್ಕೆ 5 ವರ್ಷ ಸಮಯ ಇದೆ, ಪಾಸ್ ಮಾಡೋಕೆ ಬೇಜಾನ್ ಅವಕಾಶ ಇದೆ.

ಈ ಕಾರ್ಯಕ್ರಮನ್ನ ನಡೆಸೋ ರೀತೀನೂ ಬೇರೇನೇ: ಮಾಧ್ಯಮಗಳ ಮೂಲಕ ಪುಕ್ಕಟೆ ಕಲಿಸೋ ಕಾರ್ಯಕ್ರಮಗಳು ಇರತ್ತೆ. ನೀವ್ ಕಲೀತಿದ್ದೀರೋ ಇಲ್ವೋ ಅಂತ ನೀವೆ ಕಂಡ್ಕೋಬೋದು. ನೀವ್ ಬೇಕು ಅಂದ್ರೆ, ಓದ್ಗೆ ಬೇಕಾಗೋ ಪುಸ್ತಕ, ವೀಡಿಯೋ, ಆಡಿಯೋ ಎಲ್ಲ NIOS ಪೂರೈಸತ್ತೆ. ಕನ್ನಡ್ದೋರಿಗೆ ಇದೆಲ್ಲ ಬರೀ ಇಂಗ್ಲೀಷಲ್ ಸಿಗತ್ತೆ. ಆದ್ರೆ ಎಸ್.ಎಸ್.ಎಲ್.ಸಿ. ಮತ್ತೆ ಪಿ.ಯು.ಸಿ. ಪರೀಕ್ಷೇನ ಮಾತ್ರ ಇಂಗ್ಲಿಷಲ್ಲೇ ಬರೀಬೇಕು ಅಂತಿಲ್ಲ, ಕನ್ನಡದಲ್ಲೂ ಬರೀಬೋದು.

8) ಪರೀಕ್ಷೆ ಹೇಗಿರತ್ತೆ ಅಂದ್ರೆ, ಮಕ್ಕಳು ಎಲ್ಲಾ ವಿಷಯಾನು ಒಂದೇ ಸಲ ಬರ್ದು ಮುಗಿಸ್ಬೇಕು ಅಂತೇನಿಲ್ಲ.

ವರ್ಷಕ್ಕೆ ಎರ್ಡು ಸರ್ತಿ ಪರೀಕ್ಷೆ ನಡೆಸ್ತಾರೆ. ಬೇಕು ಅನ್ನಿಸಿದಾಗ, ನಾನು ತಯಾರಾಗಿದೀನಿ ಅನ್ನಿಸ್ದಾಗ ಪರೀಕ್ಷೆಗ್ ಕೂತ್ಕೋಬೋದು. ಪಾಸಾಗಕ್ಕೆ 33% ಬೇಕೇ ಬೇಕು. ಆದ್ರೆ, ಜಾಸ್ತಿ ಬರ್ಬೇಕು ಅಂತ ಅನ್ಸಿದ್ರೆ ಮತ್ತೆ-ಮತ್ತೆ ಪರೀಕ್ಷೆ ತೊಗೋಬೋದು.

ಇನ್ನೂ ಹೆಚ್ಚು ಮಾಹಿತಿ ಬೇಕಿದ್ರೆ ಈ ವೆಬ್ ಸೈಟ್ ನೋಡಿ: www.nios.ac.in  ಅಥ್ವಾ ಇಲ್ಲಿಗೆ ಮಿಂಚಂಚೆ ಬರ್ದು ವಿಚಾರ್ಸಿ: rcdelhi@nios.ac.in, rcbengaluru@nios.ac.in.

ಇದಲ್ದೆ,  ದುಡ್ಡಿಲ್ದೆ ಈ ನಂಬರ್ಗೆ ಫೋನ್ ಮಾಡಿ ಕೇಳಿ: 18001809393.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: