ಈ ಫೋಟೋ ನೋಡಿದ ತಕ್ಷಣ ಏನು ಕಾಣಿಸ್ತು ಹೇಳಿ. ನಿಮ್ಮ ಸ್ವಭಾವ ಹೇಗೆ ಅಂತ ಹೇಳ್ತೀವಿ

ನಿಮ್ಮ ಇನ್ನೊಂದ್ ಮುಖ ಭೇಟಿ ಮಾಡಕ್ಕೆ ತಯ್ಯಾರಾ?

ಈ ಕುತೂಹಲ ಅನ್ನೋದು ಮನುಷ್ಯಂಗೆ ವರನೂ ಹೌದು, ಶಾಪನೂ ಹೌದು. ಅದ್ರಲ್ಲೂ ತನ್ನ ಬಗ್ಗೆ, ತನ್ನ ಸ್ವಭಾವದ್ ಬಗ್ಗೆ ಯಾರಾದ್ರು ಏನಾದ್ರು ಹೇಳ್ತರೆ ಅಂದ್ರೆ ಆ ಕುತೂಹಲ ಇನ್ನೂ ಜಾಸ್ತಿ. ಇದರ ಅರ್ಥ ಯಾರೋ ನಮ್ ಬಗ್ಗೆ ಹೇಳೇ ನಮಗ್ ಗೊತ್ತಾಗ್ಬೇಕು ಅಂತಲ್ಲ. ಬದ್ಲಿಗೆ ಆ ರೀತಿ ಹೇಳೋದ್ರಿಂದ ಇನ್ನೂ ಚೆನ್ನಾಗಿ ಕ್ಲಾರಿಟಿ ಸಿಗತ್ತೆ. ಯಾಕಂದ್ರೆ ಎಷ್ಟೋ ಸಲ ನಾವು ಕೆಲವು ಅಭ್ಯಾಸ ಸ್ವಭಾವಗಳ್ನ ಪಾಸಿಟಿವ್ ಅಂದ್ಕೊಂಡಿರ್ತಿವಿ ಆದ್ರೆ ಅದು ನೆಗೆಟಿವ್ ಆಗ್ಬಹುದು ಅಂತ ಗೊತ್ತಾಗದು ಯಾರಾದ್ರು ಹೇಳ್ದಾಗ್ಲೇ. ನಮ್ ಭಾವನೆ, ಆಲೋಚನೆ, ತೊಗೊಳೋ ನಿರ್ಧಾರ ಇವೆಲ್ಲಾ ಹೇಗೆ ಏನು ಎತ್ತ ಅಂತ ಒಂದ್ ಫೋಟೋ ಇಂದ ಗೊತ್ತಾಗತ್ತೆ ಅನ್ನೋದಾದ್ರೆ ! ಕುತೂಹಲ ಹತ್ತುಪಟ್ಟು ಜಾಸ್ತಿ ಆಗತ್ತೆ ಅಲ್ವ. ನಮ್ ಇಡೀ ದೇಹದಲ್ಲಿರೋ ಅಂಗಾಂಗಗಳ್ ಪೈಕಿ ಮದುಳು ತುಂಬಾ ಸಂಕೀರ್ಣವಾದ್ ಅಂಗ. ಅದ್ರಲ್ಲಿ ಅದೇನೇನ್ ಲೆಕ್ಕಾಚರಗಳು ನಡಿತಿರತ್ತೋ, ಯಾವ್ ಯಾವ್ ದೃಷ್ಟಿಕೋನಗಳು ಹುಟ್ಕೊಳ್ತಿರತ್ತೋ ಸೃಷ್ಟಿ ಮಾಡಿದ್ ಬ್ರಹ್ಮಂಗೇ ಗೊತ್ತಾಗ್ಬೇಕು. ಅದೇ ಸಿಂಪಲ್ಲಾಗಿ ನಮ್ಗೂ ಗೊತ್ತಾಗತ್ತೆ ಅನ್ನೋಹಾಗಿದ್ರೆ? ಅಂತೆ ಕಂತೆ ನಿಮ್ಗೋಸ್ಕರ ಈ ಪುಟಾಣಿ ಪರೀಕ್ಷೆ ತಂದಿದೆ. ಫೋಟೋ ನೋಡಿದ್ ತಕ್ಷಣ ಯಾವ್ ಪ್ರಾಣಿ ಕಾಣತ್ತೆ ಅಂತ ನೀವ್ ಹೇಳಿ. ನಿಮ್ ಸ್ವಭಾವ ಎಂಥದ್ದು ಅಂತ ನಾವ್ ಹೇಳ್ತಿವಿ.

ಮೂಲ

ಇದೇ ನೋಡಿ ನಾವ್ ನಿಮಗ್ ತೋರುಸ್ತಿರೋ ಚಿತ್ರ. ನೋಡಿದ್ ತಕ್ಷಣ ಸ್ವಲ್ಪ ತಬ್ಬಿಬ್ಬಾಗತ್ತೆ ನಿಜ. ಆದ್ರೆ ಗಮನ ಇಟ್ಟು ನೋಡಿದಾಗ ಕಾಣಿಸೋ ಮೊಟ್ಟ ಮೊದಲ ಪ್ರಾಣಿ ಅಥ್ವ ಪಕ್ಷಿ ಯಾವ್ದು ಅಂತ ಗುರುತಿಸಿ. ಕೆಲವು ಬಣ್ಣದ ಚಿತ್ರದಲ್ಲಿದೆ. ಇನ್ನು ಕೆಲವು ಬರೀ ರೇಖಾಚಿತ್ರ. ಪ್ರ್ರಣಿನ ಹುಡುಕೋದು ಕಷ್ಟ ಅಂತ ಮೊದಲ್ನೇ ನೋಟಕ್ಕೆ ಅನ್ನುಸ್ಬೋದು. ಆದ್ರೆ ಅಲ್ಲೇ ಇರೋದು ಮಜ. ನಮ್ ಮನಸ್ಥಿತಿಗೆ ಅನುಗುಣವಾಗಿ ತಾನಾಗೇ ಒಂದು ಚಿತ್ರ ಸ್ಪಷ್ಟವಾಗಿ ಕಾಣತ್ತೆ. ಸೋ, ನೋಡಾಯ್ತಾ? ಪ್ರಾಣಿ ಸಿಕ್ತಾ? ಈಗ ಆ ಪ್ರಾಣಿ ಬಗ್ಗೆ ಅಂದ್ರೆ ಪರೋಕ್ಷವಾಗಿ ನಿಮ್ ಬಗ್ಗೆ ತಿಳ್ಕೊಳಕೆ ಮುಂದೆ ಓದಿ.

ಮೂಲ

ಕರಡಿ

ಮೂಲ

ಸರ್ವೇ ಪ್ರಕಾರ ಸುಮಾರು 15% ಜನ ತಮ್ಗೆ ಕರಡಿ ಕಾಣುಸ್ತು ಅಂತ ಹೇಳ್ತಾರೆ. ನಮ್ಗೆಲ್ಲಾ ಗೊತ್ತಿರೋ ಹಾಗೆ ಕರಡಿ ತುಂಬಾ ಗಂಭೀರವಾದ, ಸ್ವಲ್ಪ ದೊಡ್ಡ ಶರೀರ ಇರೋ ಪ್ರಾಣಿ. ಅಷ್ಟೇ ಅಲ್ಲ ಇದನ್ನ ಹೊಗಳೋ ಮನುಷ್ಯನೇ ಈ ಪ್ರಾಣಿನ ಯಾಕೋ ದೂರ ಇಟ್ಟಿದಾನೆ. ಏನಾದ್ರೂ ಇದು ನಿಮ್ ಕಣ್ಣಿಗ್ ಬಿದ್ದಿದ್ರೆ, ನೀವೊಬ್ಬ ನಾಯಕತ್ವದ ಗುಣ ಇರೋ, ಸುತ್ತಮುತ್ತಾ ಇರೋರೆಲ್ಲಾ ಫಾಲೋ ಮಾಡ್ಬೇಕು ಅಂತ ಬಯಸೋ ಗುಣ ನಿಮ್ಮಲ್ಲಿರತ್ತೆ. ನಿಮ್ಮನ್ನ ಹತ್ತಿರ ಸೇರುಸ್ಕೊಳಕ್ಕೆ ಜನ ಹಿಂದೆಮುಂದೆ ನೋಡ್ಬೋದು ಆದ್ರೆ ನಿಮ್ಮನ್ನ ಅನುಸರಿಸೋದ್ ಮಾತ್ರ ಖಂಡಿತಾ.

ನಾಯಿಮರಿ

ಮೂಲ

ನಾಯಿ ಮನುಷ್ಯನ ಆತ್ಮೀಯ ಗೆಳೆಯ ಅನ್ನೋ ಮಾತಿದೆ. ನಾಯಿಯಷ್ಟು ಉಪಕಾರಿ ಮತ್ತೆ ನಿಯತ್ತಿನ್ ಜೀವಿ ಇನ್ನೊಂದಿಲ್ವಂತೆ. ಅಷ್ಟೇ ಅಲ್ಲ ಒಂದ್ ತುತ್ತು ಅನ್ನ ಹಾಕಿದೋನಿಗೆ ಜನ್ಮ ಪೂರ್ತ ಋಣಿಯಾಗಿರತ್ತಂತೆ. ಅಂಥ ನಾಯಿಮರಿ ನಿಮ್ಗೆ ಚಿತ್ರದಲ್ಲಿ ಮೊದ್ಲು ಕಾಣ್ಸಿದ್ರೆ, ಅನುಮಾನನೇ ಬೇಡ ನಿಮ್ಮಲ್ಲಿ ಇನ್ನೊಬ್ಬರ ಬಗ್ಗೆ ದಯೆ ಮತ್ತೆ ಸಹಾನುಭೂತಿ ತೋರ್ಸೋ ಗುಣ ಇದೆ ಅಂತ. ನಿಮ್ಮನ್ನ ಪ್ರೀತ್ಸೋ ಜನ ಸದಾ ನಿಮ್ಮ ಹತ್ರನೇ ಇರ್ತಾರೆ. ಆದ್ರೆ ಕೆಲವು ಸಲ ಹೊರಗಿನೋರು ಈ ನಿಮ್ ಗುಣನ ದೌರ್ಬಲ್ಯ ಅಂತ ತಿಳ್ಕೊಳದೂ ಉಂಟು. ಆದ್ರೆ ಅದು ಹಾಗಲ್ಲ. ಸಮಯ ಬಂದಾಗ ನೀವೂ ಸೆಟೆದು ನಿಲ್ತೀರ. ಯಾವ್ ಮುಲಾಜೂ ತೋರ್ಸಲ್ಲ ಅನ್ನೋ ಸ್ವಭಾವನೂ ನಿಮ್ಮಲ್ಲಿದೆ.

ಬಾತುಕೋಳಿಗಳು

ಮೂಲ

ಸರ್ವೇ ಪ್ರಕಾರ ಬರೀ 5% ಜನ ಮಾತ್ರ ಈ ಬಾತುಕೋಳೀಗಳ್ನ ಚಿತ್ರದಲ್ಲಿ ನೋಡಿರದು. ಈ ವಿಷ್ಯ ತುಂಬಾ ಆಶ್ಚರ್ಯ ಆಗತ್ತೆ. ಈ ಪಕ್ಷಿ ಅಷ್ಟು ಸುಲಭವಾಗಿ ಕಾಣ್ಸಲ್ಲ. ಜೊತೆಗೆ ಹಳದಿ ಬಣ್ಣದಲ್ಲಿರೋ ಬಾತುಗಳು ಮಸುಕು ಮಸುಕಾದ ಹಿನ್ನಲೆನಲ್ಲಿ ಒಳ್ಳೆ ಬಚ್ಚಿಟ್ಕೊಂಡಿರೋ ಥರ ಕೂತಿವೆ. ಅಂಥಾದ್ರಲ್ಲಿ ನಿಮ್ಗೆ ಇದು ಕಂಡಿದೆ ಅಂದ್ರೆ ನಿಮ್ ಗುಣ ಇನ್ನೆಷ್ಟು ಉನ್ನತವಾದದ್ದು ಇರ್ಬೇಕು ಅಲ್ವ? ಇದ್ರಿಂದನೇ ಗೊತ್ತಾಗತ್ತೆ ನೀವು ಅತೀ ಸಣ್ಣ ವಿಷಯಗಳನ್ನೂ ಸೂಕ್ಷ್ಮವಾಗಿ ಗಮನಿಸ್ತೀರ ಮತ್ತೆ ಚಿಕ್ಕ ಪುಟ್ಟ ವಿಷ್ಯಗಳ ಬಗ್ಗೆನೂ ಕಾಳಜಿ ತೊಗೊತಿರ ಅಂತ. ಅಂದ್ರೆ ನಿಮ್ಗೆ ಎಲ್ಲಾ ವಿಷ್ಯದ ಮೇಲೂ ಹಿಡಿತ ಇರ್ಬೇಕು ಅಂತ ಇಷ್ಟ ಪಡ್ತಿರ ಮತ್ತೆ ಎಷ್ಟೇ ಕಷ್ಟ ಆಗ್ಲಿ, ಪ್ರಯತ್ನ ಪಟ್ಟು ಗುರಿ ಮುಟ್ತಿರ ಅಂತ.

ಡಾಲ್ಫಿನ್

ಮೂಲ

ಸಮುದ್ರ ಜೀವಿಗಳ್ ಪೈಕಿ ಡಾಲ್ಫಿನ್ ತುಂಬಾ ಬುದ್ದಿವಂತ ಪ್ರಾಣಿ ಅನ್ನೋ ಹೆಗ್ಗಳಿಕೆ ಇದೆ. ಇವಕ್ಕೆ ಮನುಷ್ಯರನ್ನ ಕಂಡ್ರೆ ಚೂರೂ ಭಯ ಇಲ್ಲ. ಹಾಗ್ ನೋಡಕ್ ಹೋದ್ರೆ ಹೆಂಗಸ್ರು ಮತ್ತೆ ಮಕ್ಳು ಅಂದ್ರೆ ತುಂಬಾ ಪ್ರೀತಿ. ಹೀಗೆ ಸ್ನೇಹದಿಂದ ಇರೋದು ಮತ್ತೆ ಒಂಥರಾ ಕೀರಲು ಧ್ವನಿನಲ್ಲಿ ನಗೋದು ಇಂಥಾ ಸ್ವಭಾವದಿಂದನೇ ಎಷ್ಟೊಂದು ನೀರಿನ ಆಟಗಳಲ್ಲಿ ಇದಕ್ಕೆ ತರಬೇತಿ ಕೊಟ್ಟು ಬಳಸ್ಕೊತಾರೆ. ನೀವೇನಾದ್ರೂ ಈ ಸ್ನೇಹಜೀವಿನ ಮೊದ್ಲು ನೋಡಿದ್ರೆ, ನೀವು ಸಿಕ್ಕಾಪಟ್ಟೆ ಕ್ರಿಯೇಟಿವ್ ಅಂತ ತೋರ್ಸತ್ತೆ. ಸದಾ ಏನಾದ್ರು ಹೊಸತರ ಬಗ್ಗೆ, ಕಲಾತ್ಮಕ ವಿಷ್ಯಗಳ ಬಗ್ಗೆ ಯೋಚನೆ ಮಾಡ್ತಿರ್ತಿರ. ಕಲೆ ಕ್ಷೇತ್ರನ ನೀವು ಆಯ್ಕೆ ಮಾಡ್ಕೊಂಡ್ರೆ ಗ್ಯಾರೆಂಟಿ ಯಶಸ್ಸು ಕಾಣ್ತಿರ.

ಕುದುರೆ

ಮೂಲ

ಕೆಚ್ಚೆದೆಗೆ ಇನ್ನೊಂದ್ ಹೆಸರೇ ಕುದುರು ಅನ್ಬೋದು. ಜೊತೆಗೆ ವ್ಯವಸಾಯದಲ್ಲಾಗ್ಲಿ ಓಡಾಟಕ್ಕಾಗ್ಲಿ ಯಾವತ್ತೂ ಮನುಷ್ಯಂಗೆ ಕುದುರೆಯಿಂದ ಸಹಾಯ ಆಗಿದೆ. ಇದರ ವಿಶೇಷತೆ ಅಂದ್ರೆ ವೇಗ. ಯಾರೂ ತನ್ನನ್ನ ಮೆಟ್ಟಿ ತುಳಿದು ಮುಂದೆಹೋಗಕ್ಕೆ ಬಿಡಲ್ಲ. ಸರ್ವೇ ಪ್ರಕಾರ ಸುಮಾರು 10% ಜನಕ್ಕೆ ಚಿತ್ರದಲ್ಲಿ ಕುದುರೆ ಕಾಣ್ಸಿದ್ಯಂತೆ. ಅವರಲ್ಲಿ ನೀವೂ ಒಬ್ಬರಾಗಿದ್ರೆ ನೀವು ಸ್ವತಂತ್ರ ಜೀವಿಗಳು, ಯಾರು ಎಷ್ಟೇ ಕಾಲೆಳಿಯಕ್ಕೆ ಪ್ರಯತ್ನ ಪಟ್ರೂ ಜಗ್ಗಲ್ಲ. ನಿಮ್ ಭವಿಷ್ಯ ಹೇಗಿರ್ಬೇಕು ಅಂತ ಆಸೆ ಪಡ್ತಿರೋ ಹಾಗೇ ರೂಪುಸ್ಕೊಳೋ ಚೈತನ್ಯ ಇದೆ ಅಂತ ಅರ್ಥ.

ಪುಟ್ಟ ಹಕ್ಕಿ

ಮೂಲ

ಮುದ್ದಾದ ಪುಟ್ಟ ಹಕ್ಕಿಗಳು ನೋಡಕ್ಕೆ ಎಷ್ಟು ಚಂದ ಅಲ್ವ. ಸಾಮಾನ್ಯ ಎಲ್ರಿಗೂ ಇಷ್ಟ ಆಗತ್ತೆ. ಸಣ್ಣದಾಗಿ ಹಾಡು ಹೇಳ್ತಾ, ಸುತಾ ಮುತ್ತಾ ಹಾರಾಡ್ತಾ ಮನಸ್ಸಿಗೆ ಖುಷಿ ಕೊಡತ್ತೆ. ಇಂಥಾ ಹಕ್ಕಿಗಳ್ನ ಹೆಚ್ಚುಕಮ್ಮಿ ಪ್ರಪಂಚದ್ ಎಲ್ಲಾ ರೀತಿಯ ಪರಿಸರದಲ್ಲೂ ನೋಡ್ಬೋದು. ಹಾರಾಟನೇ ಇದರ ಶಕ್ತಿ. ಇಂಥ ಹಕ್ಕಿ ಚಿತ್ರದಲ್ಲಿ ಮೊದ್ಲು ನಿಮ್ ಕಣ್ಣಿಗ್ ಬಿದ್ದಿದ್ರೆ ನಿಮ್ ವ್ಯಕ್ತಿತ್ವ ತುಂಬಾ ಶ್ರೇಷ್ಟವಾದದ್ದು ಅಂತ ಅರ್ಥ. ಎಲ್ಲರ್ ಜೊತೆ ಚೆನ್ನಾಗಿ ಬೆರೆಯೋ, ದಯೆ ಮತ್ತೆ ಉದಾರ ಮನೋಭಾವ ನಿಮಗಿದೆ. ಇದ್ರಿಂದ ನಿಮ್ಗೆ ಗೆಳೆಯರು ಇನ್ನೂ ಹತ್ರ ಆಗ್ತಾರೆ.

ಏಡಿ

ಮೂಲ

ಈ ಏಡಿನ ನೋಡಕ್ಕೆ ಒಂಥರಾ ಕುತೂಹಲ. ಪಕ್ಕಕ್ಕೆ ವಾಲ್ಕೊಂಡ್ ನಡಿಯದು, ಆ ಚೂಪಾಗಿರೋ ಚಿಮಟದ ಥರ ಇರೋ ಕಾಲುಗಳು, ಅಬ್ಬಾ ಒಂಥರ ವಿಚಿತ್ರ. ಚಿತ್ರದಲ್ಲಿ ಏಡಿ ಕಂಡಿರೋ ಜನ ಏನಾದ್ರೂ ಬೇಜಾರ್ ಪಟ್ಕೊಂಡು, ಛೆ ಇದೇನ್ ಅಪಶಕುನನ ಅಂತ ಗೊಣಗ್ತಿದ್ರೆ ಖಂಡಿತಾ ಇಲ್ಲ ಕಣ್ರಿ. ಇರೋದ್ರಲ್ಲೇ ತೃಪ್ತಿ ಪಡೋ ಸ್ವಭಾವ ನಿಮ್ದು. ಅತಿಯಾಗಿ ಆಸೆ ಪಡ್ದೆ, ಮುಂದೇನು ಹೇಗೆ ಅನ್ನೋ ಆತಂಕ ಇಲ್ದೇ ಜೀವಿಸೋ ವ್ಯಕ್ತಿ. ಒಂದೊಂದ್ ದಿನ ಕಳಿಯೋದೂ ವರ ಇದ್ದಹಾಗೆ ಅನ್ಸತ್ತೆ. ಲೈಫಲ್ಲಿ ಆಗಾಗ ಸಿಗೋ ಅನಿರೀಕ್ಷಿತ ತಿರುವುಗಳನ್ನ ಖುಷಿಯಿಂದ ಸ್ವೀಕರಿಸ್ತೀರ.

ಹಕ್ಕಿ ಮತ್ತೆ ಏಡಿ ಒಟ್ಟಿಗೆ

ಮೂಲ

ಸರ್ವೇ ಪ್ರಕಾರ ಸುಮಾರು 20% ಜನಕ್ಕೆ ಹಕ್ಕಿ ಮತ್ತೆ ಏಡಿ ಒಟ್ಟಿಗೆ ಕಾಣುಸ್ಕೊಂಡಿದೆ. ನಿಮ್ಗೂ ಹಾಗೇ ಕಾಣ್ಸಿದ್ರೆ, ಆ ಎರಡೂ ಜೀವಿಗಳಲ್ಲಿ ಇರೋ ಗುಣ ಸ್ವಭಾವಗಳು ನಿಮ್ಮಲ್ಲಿದೆ ಅಂತ ಅರ್ಥ. ಸ್ವಲ್ಪ ಅಪರೂಪದ್ ಜನ ಇವ್ರು.

ಇವಿಷ್ಟೂ ಬಿಟ್ಟು ಹೊಸದಾಗಿ ನಿಮ್ಗೆ ಬೇರೆ ಏನಾದ್ರೂ ಕಂಡಿದ್ರೆ, ಅಥ್ವ ಬೇರೆ ಯಾವ್ ಎರಡು ಪ್ರಾಣಿಗಳು ಒಟ್ಟಿಗೆ ಕಾಣುಸ್ಕೊಂಡಿದ್ರೆ ನೀವು ಸರ್ವೇ ಪಟ್ಟಿನಲ್ಲಿ ಇರೋರಿಗಿಂತನೂ ಅಪರೂಪ ಕಣ್ರಿ.

 

 

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೀವು ಯಾವ ತಿಂಗಳಲ್ಲಿ ಹುಟ್ಟಿದೀರಿ ಅನ್ನೋದ್ರಿಂದ ನಿಮ್ಮ ಸ್ವಭಾವದ ಬಗ್ಗೆ ಎಷ್ಟು ಗೊತ್ತಾಗುತ್ತೆ ನೋಡಿ

ಸ್ವಭಾವ ಹಿಂಗೆ ಅಂದ ಮಾತ್ರಕ್ಕೆ ನೀವು ಬದಲಾಯಿಸಿಕೊಳಕ್ಕೆ ಆಗಲ್ಲ ಅಂತ ಅಲ್ಲ

ದಿನಾ ನ್ಯೂಸ್ ಪೇಪರ್ ಮನೆಗ್ ಬಂದ್ ತಕ್ಷಣ, ದಿನ ಭವಿಷ್ಯ, ವಾರಭವಿಷ್ಯ ನೋಡೋರ್ ಪೈಕಿ ನೀವೂನಾ? ಇವತ್ತಿನ್ ದಿನ ಹೇಗಿರತ್ತಪ್ಪ? ಏನೇನ್ ಗಂಡಾಂತರ ಕಾದಿದ್ಯೋ ಏನೋ ಅಂತ ಸ್ವಲ್ಪ ಕುತೂಹಲ ಸ್ವಲ್ಪ ಆತಂಕದಿಂದ ಓದ್ತೀರ? ಬರೀ ರಾಶಿ ಮಾತ್ರ ಅಲ್ಲ ಕಣ್ರಿ, ನೀವ್ ಯಾವ್ ತಿಂಗಳಲ್ಲಿ ಹುಟ್ಟಿದಿರ ಅನ್ನೋದ್ರು ಮೇಲೂ ನಿಮ್ ವ್ಯಕ್ತಿತ್ವ, ಗುಣ ಇನ್ನೂ ಸಾಕಷ್ಟು ವಿಷ್ಯಗಳ್ನ ಹೇಳ್ಬೋದು.

ನಿಜವಾಗ್ಲೂ ಗೊತ್ತಾ, ಹುಟ್ಟಿದ್ ತಿಂಗಳ ಆಧಾರ ಇಟ್ಕೊಂಡು ನಿಮ್ ಒಟ್ಟಾರೆ ನಡವಳಿಕೆ, ಸ್ವಭಾವ, ಬೇರೆಯೋರು ನಿಮ್ಮನ್ನ ಹೇಗ್ ನೋಡ್ತಾರೆ, ಜೀವನದ್ ಬಗ್ಗೆ ನಿಮ್ಗಿರೋ ಆಲೋಚನೆ, ಭಾವನೆಗಳು ಇದೆಲ್ಲಾನೂ ಹೀಗ್ ಹೀಗೆ ಅಂತ ಹೇಳ್ಬೋದು. ಹೇಗಪ್ಪ ಇದು ಅಂತಿರ? ನಿಮ್ ಗುಣ ಲಕ್ಷಣಗಳು, ನೀವ್ ಹುಟ್ಟಿದ್ ತಿಂಗಳಲ್ಲಿ, ನಕ್ಷತ್ರಗಳು ಯಾವ್ ಯಾವ್ ಸ್ಥಾನ್ದಲ್ಲಿ ಇದ್ವು, ಯಾವ್ ಆಕಾರ್ದಲ್ಲಿ ಇದ್ವು ಅಂತ ಲೆಕ್ಕ ಹಾಕಿ ಹೇಳ್ತಾರಂತೆ.

ಯಾವ್ ತಿಂಗಳಲ್ಲಿ ಹುಟ್ಟಿದ್ರೆ, ಎಂಥಾ ಸ್ವಭಾವ, ವ್ಯಕ್ತಿತ್ವ ಇರತ್ತೆ ಅಂತ ಇಲ್ಲಿ ಕೊಟ್ಟಿದ್ದೀವಿ. ಓದಿ...ನಿಮ್ಮ ಸ್ವಭಾವಕ್ಕೆ ತಾಳೆ ಮಾಡಿ ನಮಗೂ ಹೇಳಿ...

ಜನವರೀಲಿ ಹುಟ್ಟಿರೋರು

ಕೆಲ್ಸದ್ ವಿಷ್ಯದಲ್ಲಿ ತುಂಬಾನೇ ಕಟ್ಟುನಿಟ್ಟಾಗಿರ್ತಾರೆ ಹಾಗೆನೇ ತಮ್ಮ ಅಭಿಪ್ರಾಯವನ್ನ ನಾಲಕ್ ಜನರ ಮುಂದೆ ಹೇಳಕ್ಕೆ ಯಾವ್ ಮುಲಾಜೂ ನೋಡಲ್ಲ. ಇವ್ರಲ್ಲಿ ಹಠಮಾರಿತನ ಮತ್ತೆ ಮೊಂಡುತನ ಸ್ವಲ್ಪ ಜಾಸ್ತಿ ಇರತ್ತೆ. ಜೊತೆಗೆ, ಯಾರಾದ್ರು ಹೀಗಲ್ಲ ಹಾಗೆ ಅಂತ ಹೇಳಕ್ ಬಂದ್ರೆ ಅದನ್ನ ಒಪ್ಕೊಳೋದು ಇವ್ರ ಜಾಯಮಾನ್ದಲ್ಲೇ ಇಲ್ಲ ಕಣ್ರಿ.

ಜನವರೀಲಿ ಹುಟ್ದೋರು ಒಳ್ಳೆ ಲೀಡರ್ ಆಗೋದ್ರಲ್ಲಿ ಅನುಮಾನಾನೇ ಇಲ್ಲ. ಇವ್ರಲ್ಲಿರೋ ಛಲ ಸದಾ ಯಶಸ್ಸಿನ ಕಡೆಗೇ ಕರ್ಕೊಂಡ್ ಹೋಗತ್ತೆ ಅನ್ನೋದ್ ನಿಜ. ಆದ್ರೆ ಜೊತೆಲಿರೋರ್ ಮಾತು ಕೇಳೋದ್ ಕಮ್ಮಿ.

ಇವ್ರಲ್ಲಿರೊ ಇನ್ನೊಂದು ಅದ್ಭುತವಾದ ಗುಣ ಅಂದ್ರೆ...ತಮ್ಗೆ ಗೊತ್ತಿರೋ ವಿಷ್ಯಗಳ್ನ ಇನ್ನೊಬ್ರುಗೆ ಅರ್ಥವಾಗೋ ಹಾಗೆ ಹೇಳ್ಕೊಡ್ತಾರೆ. ಅಷ್ಟೇ ಅಲ್ಲ, ಕಲಿಯೋರೂ ಕೂಡ ತುಂಬಾ ಸುಲಭವಾಗಿ, ಆಸಕ್ತಿಯಿಂದ ಇವರು ಹೇಳೋದನ್ನ ಕೇಳ್ತಾರೆ. ಇಷ್ಟಪಟ್ಟು ಕಲಿತಾರೆ.

ಫೆಬ್ರುವರಿ

ಫೆಬ್ರುವರಿ ತಿಂಗಳಲ್ಲಿ ಹುಟ್ಟಿರೋರ್ಗೆ ಕಲಾರೇಖೆ ಉದ್ದವಾಗಿರತ್ತೆ ಅನ್ಸತ್ತೆ ಕಣ್ರಿ. ಸಖತ್ ಕ್ರಿಯೇಟಿವ್ ಆಗಿರ್ತಾರೆ ಮತ್ತೆ ಹೊಸ ಹೊಸ ಕೆಲ್ಸ ಮಾಡಕ್ಕೆ ಇಷ್ಟ ಪಡ್ತಾರೆ. ಇವ್ರಿಗೆ ಬುದ್ಧಿವಂತರ ಜೊತೆ ಚರ್ಚೆ ಮಾಡೋದು, ವಿಚಾರಗಳ್ನ ಹಂಚ್ಕೊಳದು ಅಂದ್ರೆ ಉತ್ಸಾಹ ಇರತ್ತೆ. ಅದೇ ಬುದ್ಧಿವಂತಿಕೇಲಿ ತಮಗಿಂತ ಚೂರು ಕಮ್ಮಿ ಮಟ್ಟದಲ್ಲಿರೋರ್ನ ಹತ್ರನೂ ಸೇರ್ಸಲ್ಲ.

ಇವ್ರನ್ನ ಜನ ಫ್ರೀಬರ್ಡ್ ಅಂತ ಕರೀತಾರೆ. ಯಾಕಂದ್ರೆ ಸಮಾಜದ ಕಟ್ಟುಪಾಡುಗಳು, ರೂಲ್ಸು ಇದೆಲ್ಲ ಇವ್ರಿಗೆ ಆಗ್ಬರಲ್ಲ. ಯಾವಾಗ್ಲೂ ಬಿಂದಾಸಾಗಿ ತಮಗೆ ಇಷ್ಟ ಬಂದಂಗೆ ಇರಕ್ಕೆ ನೋಡ್ತಾರೆ. ಸಮಯ ಸಿಕ್ಕಾಗೆಲ್ಲಾ ವಿಮಾನ, ರೈಲು ಹತ್ಕೊಂಡು ಊರೂರ್ ಸುತ್ತೋದು ಅಂದ್ರೆ ಭಾರಿ ಪ್ರೀತಿ. ಸಾಹಸ ಮಾಡೋದು ಮತ್ತೆ ಸುತ್ತಾಮುತ್ತ ಇರೋ ಜಾಗಗಳು, ವಿಷ್ಯಗಳ್ನ ಇನ್ನೂ ಹೆಚ್ಚು ಹೆಚ್ಚು ತಿಳ್ಕೊಳಕ್ಕೆ ಕಾಯ್ತಾನೇ ಇರ್ತಾರೆ. ಇದೇ ಇವ್ರನ್ನ ಲವಲವಿಕೆಯಿಂದ ಇಡೋದು. ಹಾಗೆನೇ ಇವರ ಥರಾನೇ ಫುಲ್ಲು ಬಿಂದಾಸಾಗಿ, ಇಂಡಿಪೆಂಡೆಂಟಾಗಿ ಇರೋರ್ ಜೊತೆ ಸಖತ್ ಮಜ ಮಾಡ್ತಾರೆ, ಚೆನ್ನಾಗಿ ಕಾಲ ಕಳಿತಾರೆ.

ಇವರದ್ದು ಇನ್ನೊಂದು ಒಳ್ಳೆ ಅಂಶ ಅಂದ್ರೆ...ಗೆಳೆತನದ ವಿಷ್ಯ ಆಗ್ಲಿ ಸಂಗಾತಿ ವಿಷ್ಯ ಆಗ್ಲಿ ತುಂಬಾನೇ ನಿಯತ್ತಾಗಿರ್ತಾರೆ :-)

ಮಾರ್ಚ್

ಮಾರ್ಚ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬಾ ಕಲ್ಪನಾಶಕ್ತಿ (ಕ್ರಿಯೇಟಿವಿಟಿ) ಇರತ್ತೆ. ಆದ್ರೆ ಜಾಸ್ತಿ ಸಮಯ ಇವರು ಮೌನವಾಗಿರಕ್ಕೆ ಮತ್ತೆ ತಮ್ಮ ಆತ್ಮಾವಲೋಕನ ಮಾಡ್ಕೊಳಕ್ಕೆ ಇಷ್ಟ ಪಡ್ತಾರೆ. ಇವರು ಇನ್ನೊಬ್ರು ಜೊತೆ ವಿಷ್ಯಗಳ್ನ ಹಂಚ್ಕೊಳೊದಿಕ್ಕಿಂತ ತಮ್ಮೊಳಗೇ ಯೋಚನೆ ಮಾಡಿ ತಲೆ ಒಳಗೇ ಮಾಸ್ಟರ್ ಪೀಸ್ಗಳ್ನ ಸೃಷ್ಟಿ ಮಾಡ್ತಾರೆ ಕಣ್ರಿ. ತಮ್ಮ ಭಾವನೆಗಳ್ನ/ಅನಿಸಿಕೆಗಳ್ನ ಹೇಳ್ಕೊಳಕ್ಕೋಸ್ಕರ ಅವರಿಗೆ ಸಾಥ್ ಬೇಕಿರತ್ತೆ. ಅದನ್ನ ಕಲೆ ತುಂಬಿಸತ್ತೆ. ತಾವಿಷ್ಟ ಪಡೋ ಕಲೆ ಮೂಲಕ ಎಲ್ಲಾನೂ ಎಕ್ಸ್ಪ್ರೆಸ್ ಮಾಡ್ತಾರೆ. ಹಾಗೆನೆ ಒಳಗೊಳಗೇ ಸಿಗೋ ಏಕಾಂತವನ್ನಾ ಮನಸಾರೆ ಅನುಭವಿಸ್ತಾರೆ.

ಬೇರೆಯೋರ ಜೊತೆ ಇವರ ಸಂಬಂಧ ಚೆನ್ನಾಗಿರತ್ತೆ. ತುಂಬಾ ನಯವಾಗಿ, ಕಾಳಜಿಯಿಂದ ನಡ್ಕೊತಾರೆ ಆದ್ರೆ ತಮ್ ಬಗ್ಗೆ ಮಾತ್ರ ಜಾಸ್ತಿ ವಿಷ್ಯ ಬಿಟ್ಕೊಡಲ್ಲ. ಮುಚ್ಚಿಟ್ಕೊಳಕ್ಕೆ ನೋಡ್ತಾರೆ. ಈ ಮಾರ್ಚಲ್ಲಿ ಹುಟ್ಟಿರೋರ್ ಬಗ್ಗೆ ಇನ್ನೊಂದ್ ಮುಖ್ಯವಾದ್ ವಿಷ್ಯ ಅಂದ್ರೆ ಇವರು ಯಾವಾಗ್ಲೂ ನಿಶ್ಯಬ್ಧವಾದ, ಪ್ರಶಾಂತವಾದ ವಾತಾವರಣ ಹುಡುಕ್ಕೊಂಡ್ ಹೋಗ್ತಾರೆ. ಜನರ ಜಾತ್ರೆಯಿಂದ, ಗಲಾಟೆಯಿಂದ ದೂರ ಇರಕ್ಕೆ ಇಷ್ಟ ಪಡ್ತಾರೆ.

ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಹುಟ್ಟಿರೋರು ಯಾವಾಗ್ಲೂ ಬೇರೆಯೋರು ತಮ್ಮನ್ನ ಗಮನಿಸ್ತಿರ್ಲಿ ಅಂತ ಹಾತೊರಿತಿರ್ತಾರೆ ಜೊತೆಗೆ ಎಲ್ರೂ ತಮ್ಮ ಬಗ್ಗೆನೇ ಮಾತಾಡ್ಬೇಕು, ಹೊಗಳಬೇಕು - ಒಟ್ನಲ್ಲಿ ಸಖತ್ ಪ್ರಚಾರ ಸಿಗ್ಬೇಕು ಅಂತ ಆಸೆ ಪಡ್ತಾರೆ. ಇವ್ರಿಗೆ ಇನ್ನೊಬ್ರು ಹಾಗ್ ಮಾಡು ಹೀಗ್ ಮಾಡು ಅಂತ ಮೂಗ್ ತೂರ್ಸೋದು ಇಷ್ಟ ಆಗಲ್ಲ. ಬದಲಿಗೆ ತಮ್ಮದೇ ರೀತೀಲಿ ಕೆಲ್ಸಕಾರ್ಯನ ಮಾಡ್ತಾರೆ, ಬೇರೆಯೋರ್ನೂ ಆ ದಾರಿಲೇ ನಡೆಸ್ತಾರೆ.

ಯಾವಾಗ್ಲೂ ಹೊಸ ಹೊಸ ಸಾಹಸಗಳ್ನ ಮಾಡಕ್ಕೆ ಅವಕಾಶ ಸಿಗತ್ತಾ? ಅಂತ ನೋಡ್ತಿರ್ತಾರೆ ಮತ್ತೆ ಎಲ್ಲಾನು ಚಿಟಿಕೆ ಹೊಡಿಯೋದ್ರಲ್ಲಿ ಮಾಡ್ಬೇಕು, ಬಯಸಿದ ತಕ್ಷಣ ಸಿಗ್ಬೇಕು ಅನ್ನೋ ಆತುರದಲ್ಲಿರ್ತಾರೆ. ಯಾವ್ದೇ ವಿಷ್ಯಕ್ಕಾಗ್ಲೀ ಮೊದ್ಲು ಮನಸ್ಸಿಗೆ ಬಂದ ಹಾಗೆ ನಡ್ಕೊತಾರೆ. ಭವಿಷ್ಯದ ಬಗ್ಗೆ ತಲೆ ಕೆಡುಸ್ಕೊಳಲ್ಲ. 'ನೆನ್ನೆ ನೆನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ' ಹಾಡು ಇವ್ರಿಗೆ ಹೇಳಿ ಮಾಡಿಸ್ದಂಗಿದೆ ಕಣ್ರಿ. ಜೀವ್ನ ಹೇಗ್ ಬರತ್ತೋ ಹಾಗ್ ತೊಗೊಂಡ್ ಹೋಗ್ತಿರ್ತಾರೆ.

ಕೆಲ ಸಲ ಇವರು ಜಗಳಗಂಟ್ರು ಥರ, ಜಿಗುಪ್ಸೆ ಬರೋ ಥರ ಮಾತಾಡ್ತಾರೆ ಅನ್ನೋ ಅಪವಾದ ಹೊತ್ಕೊಬೇಕಾಗತ್ತೆ. ಆದ್ರೆ ಅವರು ಆಡೋ ಮಾತ್ಗಳು ಮನಸ್ಸಿಂದ ಬಂದಿರತ್ತೆ. ಯಾವ್ದೂ ಬೇಕೂಂತ ಆಡೋದಲ್ಲ. ಜೊತೆಗೆ ತಮ್ಗೆ ಏನನ್ಸತ್ತೆ ಅಂತ ಬೇರೆಯೋರಿಗೆ ಹೇಳಕ್ಕೆ ಹಿಂದೆ ಮುಂದೆ ನೋಡಲ್ಲ. ಒಂಥರ ತಮ್ ವಿಷ್ಯದಲ್ಲಿ ಫಿಲ್ಟರ್ ಇರಲ್ಲ. ಬೇಜಾರಾಗಿದ್ರೆ ಮುಲಾಜಿಲ್ದೇ ಹೇಳ್ಕೊತಾರೆ.

ಮೇ

ಮೇ ತಿಂಗಳಲ್ಲಿ ಹುಟ್ತಿರೋರು ತುಂಬಾನೇ ಚಂಚಲ ಮನಸ್ಸಿನೋರು. ಇವತ್ತು ಒಂದ್ ಬೇಕು ಅಂದ್ರೆ, ನಾಳೆ ಇನ್ನೇನೋ ಬೇಕು ಅಂತಾರೆ. ಇವ್ರು ತಮ್ ಭಾವನೆಗಳ್ನ ಚೆನ್ನಾಗಿ ಎಕ್ಸ್ಪ್ರೆಸ್ ಮಾಡ್ತಾರೆ ಮತ್ತೆ ಜೀವನದ ಬೇರೆ ಬೇರೆ ಹಿನ್ನೆಲೆ, ಹಂತದಲ್ಲಿರೋರ್ ಹತ್ರ ಮಾತಾಡಕ್ಕೆ ಇಷ್ಟ ಪಡ್ತಾರೆ. ಒಂಟಿಯಾಗಿರಕ್ಕೆ ಸುತಾರಾಮ್ ಆಗಲ್ಲ ಇವ್ರ ಕೈಲಿ. ಯಾವಾಗ್ಲೂ ಸೋಶಿಯಲ್ ಲೈಫಲ್ಲಿ ಚುರುಕಾಗಿರ್ತಾರೆ.

ಇವರು ಉತ್ತೇಜನ ಕೊಡೋವಂಥ, ಬುದ್ಧಿವಂತಿಕೆ ಇರೋವಂಥ ಮಾತುಕತೆಗಳಲ್ಲಿ ಭಾಗಿಯಾಗಕ್ಕೆ ಇಷ್ಟಪಡ್ತಾರೆ. ಆದ್ರೆ ಅಂಥಾ ಮಾತುಕಥೆ ಬೋರ್ ಹೊಡುಸ್ಬಾರ್ದು. ಬದಲಿಗೆ ತುಂಬಾ ಮೋಜು ಮಸ್ತಿ ಉತ್ಸಾಹದಿಂದ ಇರ್ಬೇಕು. ಆಗ ಖುಷಿಯಿಂದ ಆ ಗುಂಪಲ್ಲಿ ಸೆರ್ಕೊತಾರೆ.

ತುಂಬಾ ಬೇಗ ಬೋರ್ ಆಗ್ಬಿಡ್ತಾರೆ. ಒಂದ್ ವಿಷ್ಯ ಜಾಸ್ತಿ ಹೊತ್ತು ಇವ್ರನ್ನ ಹಿಡಿದು ಇಡಕ್ಕಾಗಲ್ಲ, ಆಕರ್ಷಿಸಕ್ಕೆ ಸಾಧ್ಯಯಿಲ್ಲ. ಹಾಗಾಗಿ ತಮ್ಮನ್ನ ತಾವು ಖುಷಿಯಾಗಿಟ್ಕೊಳಕ್ಕೆ, ಮಜಾ ಮಾಡಕ್ಕೆ ಸದಾ ಹೊಸ ಹೊಸ ಉಪಾಯಗಳ್ನ ಹುಡುಕ್ತಾನೆ ಇರ್ತಾರೆ.

ಜೂನ್

ಜೂನ್ ತಿಂಗಳಲ್ಲಿ ಹುಟ್ಟಿರೋರು ಇನ್ನೊಬ್ರು ಭಾವನೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿರ್ತಾರೆ. ಹಾಗೆನೆ ಬೇರೆಯೋರ್ನ ಕಾಳಜಿ ಮಾಡೋ ಗುಣ ಇದೆ. ಸಖತ್ ಸಂಕೋಚದ ಸ್ವಭಾವ್ದೋರು ಮತ್ತೆ ಮೆತ್ತಗೆ ಮಾತಾಡೊರು. ಇವ್ರ ಆ ಸ್ವಭಾವನೇ ಜನ ಮೆಚ್ಕೊಳ್ಳೊದು.

ತುಂಬಾನೇ ಕ್ರಿಯೇಟಿವಾಗಿರೋ ಇವರು ಭವಿಷ್ಯದ್ ಬಗ್ಗೆ ದೂರದೃಷ್ಟಿ ಇಟ್ಕೊಂಡಿರ್ತಾರೆ. ಹೊಸ ಹೊಸ ಆಲೋಚನೆಗಳ್ನ ಹೇಗೆಲ್ಲಾ ಸೃಷ್ಟಿಮಾಡ್ಬೋದು? ತಮ್ಮ ಐಡಿಯಾಗಳ್ನ ಹೇಗೆಲ್ಲಾ ಕಾರ್ಯರೂಪಕ್ಕೆ ತರ್ಬೋದು? ಅನ್ನೋದ್ರ ಬಗ್ಗೆ ಪ್ಲ್ಯಾನ್ ಮಾಡ್ತಿರ್ತಾರೆ.

ಇವರು ತಮ್ಮ ಭಾವನೆಗಳ್ನ, ತಮ್ಗೆ ಅನ್ಸಿದ್ದನ್ನ ಅಷ್ಟು ಸುಲಭವಾಗಿ ಹೊರಗೆ ಹೇಳ್ಕೊಳಲ್ಲ ಆದ್ರೆ ಮನಸ್ಸಿನ ಒಳಗೆ ತಮ್ಮದೇ ಒಂದ್ ಪ್ರಪಂಚ ಕಟ್ಕೊಂಡಿರ್ತಾರೆ. ಅದನ್ನ ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳೊದು ಅಂತ ಮಾತ್ರ ಗೊತ್ತಾಗದೆ ಒದ್ದಾಡ್ತಾರೆ.

ಜುಲೈ

ಇವರು ತುಂಬಾ ಬಹಿರ್ಮುಖಿಗಳು ಅಂದ್ರೆ ಮನಸ್ಸಿಗೆ ಏನೇ ಬಂದ್ರೂ ಅದು ಹೊರಗೇ ಬಂದೇ ಬರತ್ತೆ. ಒಂಥರ ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇರಲ್ಲ. ಜೊತೆಗೆ ಪಾದರಸದ ಥರ. ಯಾವ್ದಾದ್ರು ಕೆಲ್ಸ ಮಾಡ್ಬೇಕು ಅಂದ್ರೆ ಯಾವ್ ಕಾರಣನೂ ಬೇಡ, ಯಾರ್ ಪ್ರೇರಣೆನೂ ಬೇಡ. ಸಾಹಸ ಮಾಡೋದು ಸಖತ್ ಇಷ್ಟ ಆಗತ್ತೆ ಹಾಗೆನೇ ಚೆನ್ನಾಗಿ, ಒಳ್ಳೆ ರೀತಿಲಿ ಕಾಲ ಕಳಿಯಕ್ಕೆ ಇಷ್ಟಪಡ್ತಾರೆ.

ಹೊರಗಿಂದ ನೋಡೋರ್ಗೆ ಇವರು ತುಂಬಾ ಆತ್ಮವಿಶ್ವಾಸದಿಂದ ನಗುನಗ್ತಾ ಇರೋಹಾಗ್ ಕಾಣ್ಸಿದ್ರೂ, ಒಳಗೆ ದೊಡ್ಡ ಮಟ್ಟದಲ್ಲೇ ನೋವು, ದುಃಖ ಮತ್ತೆ ಕರಾಳವಾದ ಸತ್ಯ ಬಚ್ಚಿಟ್ಕೊಂಡಿರ್ತಾರೆ.

ಇನ್ನು ಜುಲೈನಲ್ಲಿ ಹುಟ್ಟಿರೋರ್ಗೆ ಎನರ್ಜಿ ಸಖತ್ತಾಗಿರತ್ತೆ. ಈ ಕಾರಣಕ್ಕೇ ಬೇರೆಯೋರು ಇವ್ರ ಜೊತೆ ಸುತ್ತಾಡಕ್ಕೆ, ತಿರುಗಾಡಕ್ಕೆ ಕಾಯ್ತಿರ್ತಾರೆ.

ಆಗಸ್ಟ್

ಆಗಸ್ಟ ಅಂದ ತಕ್ಷಣ, ಇವ್ರು ಹುಟ್ತಾನೇ ಲೀಡರ್ ಆಗೋ ಎಲ್ಲಾ ಗುಣ ಪಡ್ಕೊಂಡ್ ಬಂದಿರ್ತಾರೆ. ತಮ್ ಅಭಿಪ್ರಾಯಗಳ್ಗೆ ಅದೆಷ್ಟೇ ಕಷ್ಟ ಆದ್ರೂ ಭಯ ಪಡ್ದೇ ಅಂಟುಕೊಂಡಿರ್ತಾರೆ. ಬಿಟ್ಕೊಡಲ್ಲ. ಇವ್ರು ತುಂಬಾ ಬಾಸಿಸಮ್ ಮಾಡ್ತಾರೆ, ತಮ್ ಅಭಿಪ್ರಾಯಗಳ್ನ ಇನ್ನೊಬ್ರು ಮೇಲೂ ಹೇರ್ತಾರೆ ಅನ್ನಿಸ್ಬೋದು ಆದ್ರೆ ಸಿಕ್ಕಾಪಟ್ಟೆ ದೊಡ್ಡಮನಸ್ಸಿನೋರು ಕಣ್ರಿ ಇವ್ರು.

ಇನ್ನು ಎಲ್ಲಾ ವಿಷ್ಯಕ್ಕೂ ತುಂಬಾನೇ ಯೋಚನೆ ಮಾಡೊ ಇವ್ರು, ಸ್ವಲ್ಪ ಏಮಾರಿದ್ರೂ ತಮ್ಮ ಗಟ್ಟಿಯಾಗಿರೋ ಶಿಸ್ತಿನಿಂದ ನಡ್ಕೊಂಡ್ ಬರ್ತಿರೋ ಜೀವನನ ಕಗ್ಗಂಟು ಮಾಡ್ಕೊತಾರೆ. ತಮ್ಮ ವೃತ್ತಿಜೀವನದಲ್ಲಿ ಸುಖವಾಗಿ ಮೇಲೆ ಬರ್ತಾರೆ. ಯಾಕಂದ್ರೆ ಅವ್ರು ಮಾಡೋ ಕೆಲ್ಸದಲ್ಲಿ ಲಾಭ-ನಷ್ಟಗಳನ್ನ ಯೋಚೆನೆ ಮಾಡಿನೇ ಮುಂದುವರೆಯೋದು. ಜೀವನ್ದಲ್ಲೂ ಇವ್ರು ಇಡೋ ಒಂದೊಂದು ಹೆಜ್ಜೆನೂ ಲಾಜಿಕಲ್ಲಾಗಿ, ಹಂತಹಂತವಾಗಿ ಇಡೋದ್ರಿಂದ ವೃತ್ತಿನಲ್ಲೂ ನಿಭಾಯಿಸಕ್ಕೆ ಸಹಾಯ ಆಗತ್ತೆ.

ತಮ್ಮ ಭಾವನೆಗಳ್ನ ಅಷ್ಟು ಸುಲಭವಾಗಿ ವ್ಯಕ್ತಪಡಿಸಲ್ಲ. ಹಾಗಾಗಿ, ಕೆಲವು ಸೂಕ್ಷ್ಮ ಸಂದರ್ಭಗಳು ಅವರ ಕೈ ಜಾರಿ ಹೋಗತ್ವ್ಗೆ. ಜನರ ,ಮನಸ್ಸಿಗೆ ನೋವುಂಟು ಮಾಡತ್ವೆ.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬ ಬೇಗ, ಸುಲಭವಾಗಿ ನಿರಾಶೆಯಾಗತ್ತೆ. ಯಾಕಂದ್ರೆ ಇವರು ಇನ್ನೊಬ್ರಿಂದ ಸಿಕ್ಕಾಪಟ್ಟೆ ಅಪೇಕ್ಷೆ ಇಟ್ಕೊಂಡಿರ್ತಾರೆ. ಇನ್ನೊಂದ್ ಕಡೆ ಇವ್ರಿಗೆ ಒಂಥರ ಮೊಂಡುತನ ಇರತ್ತೆ. ಏನಂದ್ರೆ, ಬೇರೆಯೋರ್ ಗ್ರಹಚಾರ ಕೆಟ್ಟಿದ್ರೆ, ಅವ್ರ ಜೊತೆ ಮನಸ್ತಾಪ ಬಂದ್ರೆ, ಸಾಯೋತಂಕ ಹಗೆ, ದ್ವೇಷ ಸಾಧಿಸ್ತಾರೆ.

ಇವರನ್ನ ಮಿಸ್ಟರ್ ಅಥ್ವಾ ಮಿಸ್ಟ್ರೆಸ್ ಪರ್ಫೆಕ್ಟ್ ಅನ್ಬೋದು. ತಮ್ಮ ಹಾಗೇ ಬೇರೆಯೋರೂ ಇರ್ಬೇಕು ಅಂತ ಎದುರು ನೋಡ್ತಾರೆ. ಇದೆಲ್ಲದರ ಜೊತೆಗೆ, ಇವರು ತುಂಬಾನೇ ಕ್ರಿಯೇಟಿವ್ ವ್ಯಕ್ತಿ. ಕಾಳಜಿ-ಕನಿಕರ ಇರೋರು ಮತ್ತೆ ಅವಕಾಶ ಸಿಕ್ಕಾಗೆಲ್ಲಾ ಇನ್ನೊಬ್ರುಗೆ ಸಹಾಯ ಮಾಡೋ ಗುಣ ಇರೋರು.

ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರೋರು, ತಾವು ಮಾಡೋ ಎಲ್ಲಾ ಕೆಲ್ಸದಲ್ಲೂ ಬ್ಯಾಲೆನ್ಸ್ ಇರ್ಬೇಕು ಮತ್ತೆ ಕೆಲ್ಸ ಮಾಡೋ ಹಂತದಲ್ಲಿ ಗಟ್ಟಿತನ ಇರ್ಬೇಕು ಅಂತ ಬಯಸ್ತಾರೆ. ಜೊತೆಗೆ ಜೀವನದ ಬಗ್ಗೆ ಒಂದು ಪಾಸಿಟಿವ್ ದೃಷ್ಟಿಕೋನ ಇರತ್ತೆ. ಇವ್ರಿಗೆ ಹೊಡೆದಾಟ, ಜಗಳ ಇವಲ್ಲ ಇಷ್ಟ ಆಗಲ್ಲ. ಸಾಧ್ಯವಾದಷ್ಟೂ ಮಟ್ಟಿಗೆ ತಡಿಯಕ್ಕೆ ನೋಡ್ತಾರೆ.

ಇವ್ರ ಸೋಶಿಯಲ್ ಲೈಫ್ ಸಖತ್ ಚುರುಕಾಗಿರತ್ತೆ ಮತ್ತೆ ಗೆಳೆತನ ಅಂದ್ರೆ ಪ್ರಾಣ ಬಿಡ್ತಾರೆ. ತುಂಬಾ ಆಕರ್ಷಕವಾಗಿರ್ತಾರೆ ಮತ್ತೆ ಮಾತುಗಾರರೂ ಕೂಡ. ಯಾವಾಗ್ಲೂ ಜನರ ಮಧ್ಯ ಇರಕ್ಕೆ ಇಷ್ಟಪಡೋ ಇವ್ರು, ಇಂಡಿಪೆಂಡೆಂಟ್ ವ್ಯಕ್ತಿಗಳು ಕಣ್ರಿ.

ನವಂಬರ್

ನವಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾ ಗುಟ್ಟುಗಳ್ನ ಇಟ್ಕೊಂಡಿರ್ತಾರೆ ಮತ್ತೆ ತಮ್ಮ ನಿಜವಾದ ಭಾವನೆಗಳ್ನ ಬೇರೆಯೋರಿಂದ ಬಚ್ಚಿಡ್ತಾರೆ. ಬೇರೆಯೋರ ಸಲಹೆ, ಮಾರ್ಗದರ್ಶನ ಇಷ್ಟಪಡಲ್ಲ. ತಮ್ಮ ಜೀವನನ ತಾವೇ ಒದ್ದಾದ್ಕೊಂಡಾದ್ರೂ ರೂಪುಸ್ಕೊಳ್ತಾರೆ.

ಇವ್ರಿಗೆ ಈ ಭಯ, ಹೆದರಿಕೆ ಅನ್ನೋದೆಲ್ಲಾ ದೂರ. ಹಾಗಾಗಿ ಎಂಥಾ ಪರಿಸ್ಥಿತಿ ಎದುರಾದ್ರೂ, ಹಿಂದೆ ಮುಂದೆ ಯೋಚನೆ ಮಾಡ್ದೆ ಮೊದ್ಲು ಅದನ್ನ ಪರಿಹಾರಮಾಡಕ್ಕೆ ಹೊರಟುಬಿಡ್ತಾರೆ. ಅದನ್ನ ಸರಿಯಾಗಿ ಅರ್ಥ ಮಾಡ್ಕೊಂಡು ಆಮೇಲೆ ಮುಂದುವರಿಯೋಣ ಅಂತೆಲ್ಲಾ ಇಲ್ವೇ ಇಲ್ಲ. ಪರಿಣಾಮ ಏನಾಗ್ಬೋದು ಅನ್ನೋದ್ರು ಬಗ್ಗೆ ಕಿಂಚಿತ್ತೂ ತಲೆಕೆಡುಸ್ಕೊಳಲ್ಲ.

ಇವರ ಜೀವನದಲ್ಲಿ ಯಾವ್ ಅಡೆತಡೆ ಬಂದ್ರೂ ನಿಲ್ಲಲ್ಲ - ನುಗ್ತಾನೇ ಇರ್ತಾರೆ. ಅವ್ರ ದೊಡ್ದ ಆಸ್ತಿ ಅಂದ್ರೆ ಮೊಂಡು ಧೈರ್ಯ ಮತ್ತೆ ಜೀವನದ ಬಗ್ಗೆ ಇರೋ ಅತಿಯಾದ ಭಾವುಕತೆ.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾನೆ ಸಾಹಸ ಮಾಡೊ ಜನ ಮತ್ತೆ ಉದಾರ ಮನೋಭಾವದೋರು. ಆದ್ರೆ ಕೆಲವುಸಲ ತಮ್ಮ ಪ್ರತಿಷ್ಟೆ, ಅಹಂಕಾರ್ದಿಂದ ಬೇರೆಯೋರ್ ಜೊತೆ ಸಣ್ಣ ಪುಟ್ಟ ಮನಸ್ತಾಪ ಆಗತ್ತೆ. ಇವ್ರು ಯಾವಾಗ್ಲೂ ಹರಿಯೊ ನದಿ ಥರ. ಒಂದೇ ಕಡೆ ಅಥವಾ ಒಂದೇ ಪರಿಸ್ಥಿತೀಲಿ ಜಾಸ್ತಿ ಕಾಲ ಇರಕ್ಕಾಗಲ್ಲ ಇವ್ರ ಕೈಲಿ.

ಸ್ವಲ್ಪ ಸಿಡುಕುತನ ಜಾಸ್ತಿ. ಆದ್ರೆ ಬೇರೆಯೊರಿಗೆ ಸಖತ್ತಾಗಿ ನಗೆಹನಿ ಮಾಡ್ಕೊಂಡು ಟೈಮ್ ಪಾಸ್ ಮಾಡಿಸ್ತಾರೆ. ಅವರ ಉದಾರತೆ ಇದ್ಯಲ್ಲ... ಅದು ಅವರ ಜೀವನದ ಎಲ್ಲಾ ಏರಿಳಿತಗಳ್ನೂ ಪರ್ಫೆಕ್ಟಾಗಿ ಬ್ಯಾಲೆನ್ಸ್ ಮಾಡತ್ತೆ.

ಏನಂತೀರಾ? ನೀವು ಯಾವ ತಿಂಗಳಲ್ಲಿ ಹುಟ್ಟಿದ್ದು? ನಿಮ್ಮ ಸ್ವಭಾವ ನೋಡ್ಕೋಂಡ್ರಾ? ಸರಿ ಇದ್ಯಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: