ಈ ಸೋತು ಗೆದ್ದವರ ಬಗ್ಗೆ ತಿಳ್ಕೊಂಡ್ರೆ ಸೋಲಿಗೆ ಭಯ ಪಡಬೇಕಾಗಲಿಲ್ಲ ಅಂತ ಅರ್ಥ ಆಗುತ್ತೆ

ಸೋಲಿಗೆ ಭಯಪಡೋ ಅಗತ್ಯ ಇಲ್ಲ, ಧೈರ್ಯವಾಗಿ ಮುನ್ನುಗ್ಗಿ

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ನಮ್ಮ ದೇಶದಾಗಿನ ಈ 10 ಮಂದಿ ಬೈಕ್ ಓಡಸೋ ಹೆಣ್ಣಮಕ್ಕಳ ಬಗ್ಗೆ ಕೇಳಿದ್ರ ಖುಷಿ ಪಡತೀರಿ

ಹೆಣ್ಮಕ್ಕಳೂ ಸ್ರ್ಟಾಂಗು ಗುರೂ..

ಗೇರ್ ಗಾಡಿ ಗಂಡಮಕ್ಕಳಿಗಷ್ಟ ಅನ್ನೋಕಾಲ ಒಂದಿತ್ತು. ಆದರ ಗ ಹಂಗಲ್ಲ ನೋಡ್ರಿ ನಂ ಹೆಂಗಸರು ಗಂಡಸರ ನಾಚೋ ಹಂಗ ಬೈಕ ಹೊಡಿತಾರ. ಗಂಡಮಕ್ಕಳಿಗಿಂತಾ ನಾವೇನ ಕಮ್ಮಿ ಅಂತ ಬೈಕ ಡಸೋ ಈ ಹತ್ತ ಮಂದಿ ನೋಡಿದ್ರಿ ಅಂದ್ರ ಮೂಗಿನ ಮ್ಯಾಲ ಬಟ್ಟ ಇಟಗೋತೀರಿ. ಅದರಾಗೂ ಅವರೆಲ್ಲಾರೂ ನಂ ದೇಶದೌರು ಅಂತ ತಿಳದರಂತೂ ಹಿರಿ ಹಿರಿ ಹಿಗ್ಗತೀರಿ. ಬರ್ರಿ ಮತ್ತ ಇನ್ಯಾಕ ತಡಾ...

1 . ರೋಶನಿ ಶರ್ಮಾ


ರೋಶನಿ ಅಂದ್ರನ “ಬೆಳಕು”. ತಂ ಹೆಸರನಂಗ ಇವ್ರು, ಹೆಂಗಸರ ಮೋಟಾರಬೈಕ ಓಡಸೋ ಕ್ಷೇತ್ರದಾಗ ಮದಲ ಬೆಳಕ ಚಲ್ಲಿದೌರು ಅಂತ ಹೇಳಬೌದು. 16 ವರ್ಷದ ಹುಡಿಗೇರನ ನಮ್ಮಲ್ಲೆ ಕಾಲೇಜಿಗೆ ಕಳಸೋದ ಹೆಚ್ಚಿನ ಮಾತು .ಅಂತಾದ್ರಾಗ ಇವ್ರು ಕಾಶ್ಮೀರದಿಂದಾ ಕನ್ಯಾಕುಮಾರಿ ತನಾ ಮೊಟಾರಗಾಡಿ ಓಡಿಸಿಗೊಂಡ ಹೋಗಿದ್ದರ ನೋಡ್ರಿ. ಆವಾಗಿಂದಾ ಮತ್ತ ಹಿಂದ ತಿರಗಿ ನೋಡೆ ಇಲ್ಲ ಈ ಇಂಜಿನೀಯರ. ಸಮಾಜದ ಕಟ್ಟಳೆಗಳನ್ನ ಮೀರಿ ಸಾಧಸರಿ ಅಂತ ಹೆಂಗಳೆಯರಿಗೆ ಪ್ರೋತ್ಸಾಹ ಕೊಟಗೋತನಾ ಅದಾರ.

2. ಊರ್ವಶಿ ಪಟೊಲೆ


ಭಾರತದೊಳಗ ಬೈಕ ಓಡಸೋ ಹೆಣ್ಣಮಕ್ಕಳಿಗೆ ಒಂದ ಕರೆಕ್ಟ ಪ್ಲಾಟಫಾರಂ ಇದ್ದಿದ್ದಿಲ್ಲ. ಈ ಊರ್ವಶಿ ಅವರ “ಬಿಕೆರ್ನಿ” ಅನ್ನೊ ಮೊಟಾರಸೈಕಲ್ ಸಂಘಾ ಕಟ್ಟಿದರು. ಆವಾಗ ಬರೇ 14 ಮಂದಿ ಇದ್ದದ್ದ ಸಂಘದಾಗ ಗ ಬರೋಬ್ಬರಿ700 ಮಂದಿ ಅದಾರ. 17 ಊರಗೊಳ  ಒಳಗ ದರ ಕಛೇರಿಗಳ ಅವ.

3. ಅಪರ್ನಾ ಬಂಡೋಡಕರ್


13ನೇ ವಯಸ್ಸನ್ಯಾಗ ಬೈಕ ಓಡಸೋದ ಕಲತ ಇವ್ರು, ವೃತ್ತಿಯಿಂದಾ ಡಾಕ್ಟರು. ಟಾಯಂ ಸಿಕ್ಕಾಗೆಲ್ಲಾ ತಂ ದೋಸ್ತರ ಜೋಡಿ ಬೈಕ ತೊಗೊಂಡ ಹೊಂಟಬಿಡತಾರ. ಮನಷ್ಯಾರನ್ನ ನೋಡ್ಯಾರೋ ಇಲ್ಲೋ ಅನ್ನೊ ಹಂಗ ಮಂದಿ ತಮ್ಮನ್ನ ನೋಡತಾರ ಅನ್ನೋದು ಅವ್ರಿಗೂ ಗೊತ್ತದ. ಆದರ ಅದ್ಯಾವಾಗೂ ಅವ್ರ ಬೈಕ ಡಸೋದಕ್ಕ ಅಡ್ಡಿ ಆಗಿಲ್ಲಾ.”ಗಂಡಸರು ಓಡಸೋಬೇಕಾರ, ನಾವು ಹೆಂಗಸರ ಯಾಕ ಓಡಸಬಾರದು”? ಅನ್ನೋದು ಅವ್ರ ಪ್ರಶ್ನೆ. ಅದೂನೂ ಖರೆ ಅದ. ಹೌದಲ್ರೀ!

4. ದೀಪಾ ಮಲ್ಲಿಕ


ಜೀವನಾನ ಒಂದು ಶರತ್ತು ಅಂತ ಸ್ವೀಕರಿಸಿ, ತಮ್ಮ ಜೀವನಾ ಜೀವಂತವಾಗಿ ಇರೋಹಂಗ ಜೀವಸಾಕತ್ತವ್ರು ದೀಪಾ ಮಲ್ಲಿಕ ಅವ್ರು. ಪ್ರಶಸ್ತಿ ವಿಜೇತ ಕ್ರೀಡಾಪಟು ಇವ್ರು. ಪ್ಯಾರಾಲಂಪಿಕದಾಗ ಸ್ಕೀಯರ್ ಅಂತ ಭಾಳ ಪುರಸ್ಕಾರಗೋಳನ್ನ ಗಳಸ್ಯಾರಾ. ಇಂತೌರಿಗೆ ಅಂತ ಇರೋ ವಿಷೇಶ ಬೈಕದಾಗ 58 ಕಿ.ಮೀ. ಸಾಗಿದ್ದಲ್ಲದ, ಲದಾಖದಂತಾ ಎತ್ತರದ್ದ ಪ್ರದೇಶದಾಗ ಸತತ 9 ದಿನ ಬೌಕ ಓಡಿಸ್ಯಾರ. ಬೈಕ ತೊಗೊಂಡು ಭಾರತದ ತುಂಬಾ ಪ್ರವಾಸಾನೂ ಮಾಡ್ಯಾರ.

5. ಮಾರಲ್ ಎಜಾರ್ಲೋ


ಹುಟ್ಟಿದ್ದ ಇರಾನದಾಗಾದ್ರೂ ಭಾರತದ ಮೊದಲನೇ ಸೂಪರ್ ಬೈಕ ಕ್ಲಬ್ ಸ್ಥಾಪಿಸಿದೌರ ಈ ಮರಾಲಾ ಅವರು. ಇವರ ಕಡೆನೂ ಭಾಳ ಬೈಕಗೋಳ ಅವ ಅಂತ. ಲೇಡಿ ರೈಡರ್ಸ ಆಫ್ ಇಂಡಿಯಾ ಅನ್ನೋ ಸಂಘಾ ಕಟ್ಟಿದ್ರು ಇವ್ರು.

6. ಸಾರಿಕಾ ಮೆಹತಾ


ಮೋಟಾರ ಸೈಕಲನಿಂದಾ ಸುರುವಾಗಿದ್ದ ಸವಾರಿ, ಈಗ 10 ದೇಶಾ ಸುತ್ತಿದ್ದ ಮದಲ ಮಳಿಳಾ ಬೈಕರ ಅನ್ನೋ  ಕಿರೀಟಾ ತಂದಕೊಟ್ಟತ್ ನೋಡ್ರಿ. ಇವ್ರು ಬೈಕಿಂಗ ಕ್ವೀನ್ಸ ಅನ್ನೋ ಸಂಘಾ ಕಟ್ಟಿದ್ರು. ಇಷ್ಟ ಅಲ್ಲದ ಸೂರತನಾಗ ‘ಬೇಟಿ ಬಚಾವ ಬೇಟಿ ಪಡಾವ’ ದೋಲನಾನೂ ಆಂಭಿಸಿದ್ರು. ಇದರ ಪ್ರಚಾರಕ್ಕಂತ 2016 ರಾಗ ತಂ ದೋಸ್ತರ ಜೋಡಿ ಕೂಡಿ 10,000 ಕಿ.ಮೀ ಬೈಕ ಓಡಸೋ ಮೂಲಕ ಜಾಗೃತಿ ಮೂಡಿಸಿದ್ರು.

7. ರೂಬಿ ಸಿಂಗ


27  ವರ್ಷದ ರೂಬಿ ಈಗ ಮೂರ ವರ್ಷ ಆತ ಬೈಕ ಓಡಸಾಕತ್ತಿ. ಆದರ ಬೆಟ್ಟದ್ದ ಮ್ಯಾಲೆ ಬೈಕ ಓಡಸೋದಂದ್ರ ಇವ್ರಿಗೆ ಬಾಳ ಇಷ್ಟಾ ಅಂತ. ಹೆಣ್ಣಮಕ್ಕಳು ಬೈಕ ಓಡಸಬಾರದು ಹಂಗ ಹಿಂಗ ಅನ್ನೋ ಸಾವಿರ ತಲಿಗಳ ನಡುವೆ ರೂಬಿ ಅವರ ಕುಡುಂಬ ರೂಬಿ ಅವರಿಗೆ ಬೆನ್ನೆಲಬಾಗಿ ನಿಂತದ. ಅವರಿಗೆ ಪ್ರೊತ್ಸಾಹಾ ನೀಡತದ. ಎಲ್ಲಾ ಹೆಣ್ಣಮಕ್ಕಲಿಗೂ ಇಂಥಾ ಕುಟುಂಬ ಸಿಗಬೇಕಲ್ಲಾ.

8. ಅಲಿಷಾ ಅಬ್ದುಲ್ಲಾ


ಆಲಿಷಾ, ದೇಶದ ಮೊದಲ ಮಹಿಳಾ ರಾಷ್ಟ್ರೀಯ ರೇಸಿಂಗ್ ಚಾಂಪಿಯನ್. ಅಕಿ ಸಣ್ಣಕಿದಾಗಿಂದಾನೂ ಅಕಿಗೆ ರೆಸಿಂಗ ಅಂದ್ರ ಪ್ರೀತಿ ಅಂತ. ಅವ್ರು ಹದಿಹರೆಯದಾಗ  ಗೋ-ಕಾರ್ಟಿಂಗ್ ಚಾಂಪಿಯನ್ ಆಗಿದ್ದರಂತ. ಮೇಲೆ ಅವರು ಕಾರ್ ಟ್ರ್ಯಾಕ್ ರೇಸಿಂಗ ಮಾಡಿ ಆಮೇಲೆ  2004 ರಾಗ ಬೈಕ ರೆಡಿಂಗ ಸುರುಮಾಡಿದರು. ಆದರ 2010 ರಾಗ ಆಕಸ್ಮಿಕವಾಗಿ ಅಗಿದ್ದ ಅಪಘಾತದಿಂದಾ ಅವರು ಮತ್ತ  ಕಾರ್ ರೇಸಿಂಗ್ಗೆ ಕಡೆ ಹೊಳ್ಳಬೆಕಾತು. ಆದರೂ ಅವರಿಗೆ ಈಗೂ  ಬೈಕ ಮ್ಯಾಲೆ ಪ್ರೀತಿ ಅದ ಅಂತ.

9. ಡಾ. ನೆಹಾರಿಕಾ ಯಾದವ್


ಸೂಪರ್ಬೈಕ್ಗಳು ಇವ್ರಿಗೆ ಪಂಚಪ್ರಾಣ ಅಂತ. ಡಾ.ನೆಹಾರಿಕಾ ಅದನ್ನ ಇನ್ನೋಂದ ಸಲ್ಪ ಮುಂದವರಿಸಿ ಬೌದ್ಧ ಇಂಟರ್ನ್ಯಾಷನಲ್ ಸರ್ಕ್ಯೂಟ್ನಾಗ 2,000 ಕಿ.ಮೀ. ಬೈಕ ಓಡಸೋ ಲೆವೆಲ್ಲಿಗ ತಂದರು. 2015 ರ ಜೆಕೆ ಟೈರ್ ಸೂಪರ್ಬೈಕ್ ಚಾಂಪಿಯನ್ಶಿಪ್ದಾಗ ಭಾಗವಹಿಸಿದೌರ ಒಳಗ ಇವ್ರು ಒಬ್ಬರ ಮಹಿಳೆ. ಅಷ್ಟ ಅಲ್ಲಾ  97 ಗಂಡಸರ ಜೋಡಿ ಕೇವಲ ಒಬ್ಬಳ ಮಹಿಳಾ ರೈಡರ್ ಆಗಿ KTM ಓಪನ್ ಟ್ರ್ಯಾಕ್ ಡೇದಾಗ ಪಾಲ್ಗೊಂಡರು.

10) ಸಾರಾ ಕಶ್ಯಪ್

http://motoxindia.com/wp-content/uploads/2016/12/Sarah-Kashyap.jpg
'ರೈಡ್ ದಿ ಹಿಮಾಲಯ' ಅನ್ನೋದು ವಿಶ್ವದ ಅತಿ ದೊಡ್ಡ  ರಾಲಿ ಮತ್ತ ಇದು ಅನುಭವ ಇದೌರಿಗೂ ಕಠಿಣ ಅನಸೋವಂತ ರಾಲಿ. ಅಂಥಾ ರಾಲಿನ ಯಶಸ್ವಿಯಾಗಿ ಪೂರೈಸಿದ್ದ ಏಕೈಕ ಮಹಿಳೆ ಸಾರಾ ಕಶ್ಯಪ. ಈ ರಾಲಿ ಟಾಯಂದಾಗ ಅಲ್ಲೆ ಮಂಜಗಡ್ಡಿ ಕರಿಗಿ ಜಾರಾಕತ್ತಿತ್ತು. ಅವರ ಕುತಿಗಿ ಮೂಳಿನೂ ಮುರಿತು. ಆದರೂ ಹಿಂದ ಸರೀದ 2015ರಾಗ ರಾಲಿ ಪೂರಾ ಮುಗಿಸೇ ಬಂದ್ರು ಸಾರಾ. ಭಾರತದ ಬಾಜಾ 2017 ರೊಳಗ ಭಾಗವಹಿಸಿದ್ದ ಒಬ್ಬರ ಮಹಿಳೆ ಇವ್ರು. 3 ದಿನ 400 ಕಿ.ಮೀ ತನಾ ಸತತ ಬೈಕ ನಡಿಸ್ಯಾರಾ ಅದೂ ರಾಜಸ್ಥಾನದ ಮರುಭೂಮಿಯಾಗ.!

ಇವ್ರ ಸಾಧನೆ ಎಲ್ಲಾ ಓದಿದರ ಹೆಣ್ಣಮಕ್ಕಳು ಯಾ ಗಂಡಸಿಗೂ ಕಮ್ಮಿ ಇಲ್ಲಾ ಅನಸತದ. ನಾವು ಅವ್ರಿಗೆ ಚೂರ ಬೆಂಬಲಾ ಕೊಡಬೇಕಷ್ಟ. ಹೌದಿಲ್ಲೋ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: