ಸಾಮಾನ್ಯವಾಗಿ ಹೆಂಡತಿ ಮೇಲಿನ ಪ್ರೀತಿ, ವಿಶ್ವಾಸ ತೋರ್ಸಕ್ಕೆ ಗಂಡಸರು ಈ 8 ರೀತಿ ನಡ್ಕೊತಾರೆ

ನಿಮ್ಮ ಜೊತೆ ಜಗಳ ಆಡೋದು ಒಂದು :-)

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ಈ 10 ಅಭ್ಯಾಸಗಳಿರೋರನ್ನ ಮದುವೆಯಾಗದಿರೋದು ಒಳ್ಳೇದು

ಮದುವೆ ಆಗೋ ಯೋಚನೆ ಮಾಡ್ತಿದ್ದೀರಾ? ಇದು ದೊಡ್ಡ ನಿರ್ಧಾರ.

ಚೆನ್ನಾಗಿರೋ, ರಸಿಕತೆ ಇರೋ, ನಿಮಗೆ ಬೆಂಬಲ ಕೊಡೋ ವ್ಯಕ್ತಿನ ಆಯ್ಕೆ ಮಾಡಿದ್ರೆ ಸಂತೋಷವಾಗಿರ್ತೀರ. ಅದೇ ಒಬ್ಬ ತಪ್ಪು ವ್ಯಕ್ತಿಯನ್ನ ಆಯ್ಕೆ ಮಾಡಿದ್ರಿ ಅಂದರೆ ನಿಮ್ಮ ಜೀವನ ನರಕ ಆಗೋದು ಖಂಡಿತ. ನಿಮಗೆ ಯಾರು ಸರಿ ಹೊಂದಲ್ಲ ಅಂತ ಯೋಚಿಸುವಾಗ ಈ ಹತ್ತು ವಿಷಯಗಳನ್ನ ಮರೀಬೇಡಿ.

1. ಸಂಕುಚಿತ ಮನೋಭಾವ ಇರೋರು

ನೀವು ವಿಶಾಲ ಮನೋಭಾವದವರಾಗಿದ್ರೆ ಇವರ ಜೊತೆ ನಿಮ್ಮ ವಿಚಾರಗಳ ಬಗ್ಗೆ ಮಾತು ಬರೋದು ಖಂಡಿತ. ಇಂಥವರನ್ನ ಬದಲಾಯಿಸೋ ಹರಸಾಹಸಕ್ಕೆ ಕೈ ಹಾಕೋ ಬದಲು, ಸಮಾನ ಮನಸ್ಕರನ್ನ ಒಪ್ಕೊಳಿ. ಕನಿಷ್ಠ ನಿಮ್ಮ ವಿಚಾರಗಳನ್ನ ಕೇಳಿ ಅದನ್ನ ಒಪ್ಕೊಳ್ದೇ ಇದ್ರೂ ಧಿಕ್ಕರಿಸದೇ ಸುಮ್ಮನೆ ಇರೋರನ್ನ ಮದುವೆ ಆಗಿ.

2. ಪ್ರಾಣಿ ದ್ವೇಷಿಗಳು


ನಾಯೋ, ಬೆಕ್ಕೋ, ಇಲಿಯೋ, ಆನೆಯೋ ಒಟ್ನಲ್ಲಿ ಮನಸ್ಸಲ್ಲಿ ಪ್ರಾಣಿಗಳ ಬಗ್ಗೆ ಪ್ರೀತಿ ಇರೋರನ್ನ ಮದುವೆ ಆಗಿ.

3. ಸಂಬಂಧಗಳಿಗೆ ಬೆಲೆ ಕೊಡದೇರೋರು

ನಿಮ್ಮನ್ನ ಮದುವೆ ಆಗೋ ಮೊದಲು ಬೇರೊಬ್ಬರಿಗೆ ಮೋಸ ಮಾಡಿರೋ ವ್ಯಕ್ತಿ ಮುಂದೆ ನಿಮಗೂ ಮೋಸ ಮಾಡಲ್ಲ ಅನ್ನಕ್ಕೆ ಕಷ್ಟ. ಒಂದು ಸಂಬಂಧಕ್ಕೆ ಬೆಲೆ ಕೊಡದೇ ಇರೋರು ಇನ್ನೊಂದಕ್ಕೆ ಕೊಡಬಹುದು ಅಂತ ಹೇಗೆ ಹೇಳ್ತೀರ? ನಿಮಗೆ ನಿಯತ್ತಾಗಿರೋರನ್ನ ಮದುವೆ ಆಗಿ.

4. ಮಾತು ತಪ್ಪೋರು


ಊಟಕ್ಕೆ ಬರ್ತೀನಿ ಅಂದು ಬರಲ್ಲ, ಸಿನೆಮಾ ಹೋಗೋಣ ಅಂದು ಬರಲ್ಲ, ಒಟ್ನಲ್ಲಿ ನಿಮಗೆ ಕೊಟ್ಟ ಯಾವ ಮಾತನ್ನೂ ಉಳಿಸ್ಕೊಳ್ತಿಲ್ಲ ಅಂದ್ರೆ ಅವರ ಜೊತೆ ಏಗೋದು ಕಷ್ಟ. ಕೊಟ್ಟ ಮಾತಿಗೆ ತಪ್ಪದೇ ನಿಮಗೆ, ನಿಮ್ಮ ಸಂಬಂಧಕ್ಕೆ ಸಮಯ ಕೊಡೋರ ಜೊತೆ ಸಂತೋಷ ಸಿಗತ್ತೆ.

5. ಸುಳ್ಳು ಹೇಳೋರು

ನೀವು ಮದುವೆ ಆಗೋರು ತುಂಬಾ ಸುಳ್ಳು ಹೇಳ್ತಿದಾರೆ ಅನ್ಸಿದ್ರೆ ಮದುವೆಗೆ ಮುಂಚೆ ಯೋಚನೆ ಮಾಡಿ. ಸುಳ್ಳು ಎಷ್ಟು ಚಿಕ್ಕದೇ ಆದ್ರೂ ಒಂದು ಸುಳ್ಳನ್ನ ಮುಚ್ಚಕ್ಕೆ ಮತ್ತೊಂದು ಅಂತ ಸುಳ್ಳುಗಳ ಸುಳಿಯಲ್ಲಿ ನಿಮ್ಮನ್ನ ಸಿಲುಕಿಸ್ತಾರೆ.

6. ಜಗಳ ಕಾಯೋರು


ಯಾವುದೋ ಹಳೇ ವಿಷಯ ತೆಗೆದು ಪದೇ ಪದೇ ಜಗಳ ಆಡೋರ ಜೊತೆ ಇಡೀ ಜೀವನ ಕಳ್ಯೋದು ಕಷ್ಟ ಆಗತ್ತೆ. ತಪ್ಪು ಎಲ್ಲರಿಂದ ಆಗತ್ತೆ. ಕ್ಷಮಿಸಿ, ಮರೆತು ಮುಂದೆ ಸಾಗೋದೇ ದಾಂಪತ್ಯ.

7. ಕುಟುಂಬದವರನ್ನ ಗೌರವಿಸದೋರು

ತಮ್ಮ ಕುಟುಂಬದವರಿಗೆ ಗೌರವ, ಸಮಯ ಕೊಡದೇ ಇರೋರು ಮುಂದೆ ನಿಮ್ಮನ್ನೂ ಹಾಗೇ ಕಂಡರೆ ಆಶ್ಚರ್ಯ ಇಲ್ಲ. ಹತ್ತಿರದವರಿಗೆ ಹೆಚ್ಚು ನೋವು ಕೊಡೋದು ಮಾನವ ಗುಣ. ಆದರೆ ಉದ್ದೇಶಪೂರ್ವಕವಾಗಿ ಹೀಗೆ ಮಾಡೋರಿಂದ ದೂರ ಇರೋದು ಒಳ್ಳೇದು. ತಮ್ಮ ಕುಟುಂಬ, ಸ್ನೇಹಿತರಿಂದ ದೂರ ಸರಿಯೋರು ಮುಂದೆ ನಿಮ್ಮ ಜೊತೆ ಆತ್ಮೀಯವಾಗಿರ್ತಾರಾ?

8. ನಿಂದಿಸೋರು

http://www.survivors.org.au/wp-content/uploads/2016/01/Emotional-Abuse.jpg
ನಿಮ್ಮ ಬಗ್ಗೆ ನಿಮಗೆ ಜಿಗುಪ್ಸೆ ತರಿಸೋರ ಜೊತೆ ಮದುವೆ ಮಾಡ್ಕೊಳೋದು ಒಳ್ಳೆ ನಿರ್ಧಾರ ಅಲ್ಲ. ದೈಹಿಕ ನೋವಿಗಿಂತ ಮಾನಸಿಕ ನೋವು ವಾಸಿ ಆಗೋದು ಕಷ್ಟ. ಯಾವಾಗಲೂ ’ಏನು ಮಾತು ಕೇಳಬೇಕೋ’ ಅನ್ನೋ ಯೋಚನೇಲೇ ಇದ್ದೀರ ಅಂದರೆ ಈ ಸಂಬಂಧದಿಂದ ಹೊರಬರೋದು ಸೂಕ್ತ.

9. ನಿಮ್ಮ ಮಾತಿಗೆ ಬೆಲೆ ಕೊಡದೋರು

ನಿಮ್ಮನ್ನ ಮಾತಾಡಕ್ಕೆ ಬಿಡಲ್ಲ ಅಥವಾ ನೀವು ಹೇಳಿದ್ದನ್ನ ತಿದ್ದಿ, ನಿಲ್ಲಿಸಿ, ತಮ್ಮ ಅಭಿಪ್ರಾಯ ಹೇಳ್ತಾರೆ ಅಂದರೆ ನಿಮ್ಮ ಮಾತಿನ ಬಗ್ಗೆ ಅವರಿಗೆ ಗೌರವ ಇಲ್ಲ ಅಂತ. ನಿಮ್ಮ ಮೇಲೆ ಹಿಡಿತ ಸಾಧಿಸಬೇಕು ಅನ್ನೋರು ನಿಮ್ಮ ಮಾತನ್ನ ಅರ್ಧದಲ್ಲೇ ನಿಲ್ಲಿಸ್ತಾರೆ.

10. ಇನ್ನೂ ಬೆಳೆಯದೇ ಇರೋರು


ಎಷ್ಟೇ ವಯಸ್ಸಾಗಿದ್ರೂ ತಮ್ಮನ್ನ ತಾವು ನೋಡ್ಕೊಳೋಕ್ಕೆ ಬರದೋರಿಗೆ ನೀವು ಸಂಗಾತಿ ಅಲ್ಲ, ಅಪ್ಪನೋ ಅಮ್ಮನೋ ಆಗಬೇಕಾಗತ್ತೆ. ಇನ್ನೂ ದುಡ್ಡು ಕಾಸಿನ ವ್ಯವಹಾರ ಗೊತ್ತಿಲ್ಲ, ಕೆಲಸಕ್ಕೆ ಸರಿಯಾಗಿ ಹೋಗಲ್ಲ, ಮನೆ ಕ್ಲೀನ್ ಮಾಡಲ್ಲ ಅನ್ನೋರ ಜೊತೆ ಬದುಕೋ ಕಷ್ಟ ಯಾಕೆ ಮೈಮೇಲೆ ಹಾಕೊಳ್ತೀರ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: