ಹಣ್ಣು-ತರಕಾರಿಗಳ ಮೇಲೆ ಹಚ್ಚೋ ವಾಕ್ಸ್ ಎಲ್ಲಿಂದ ಬರತ್ತೆ ತಿಳ್ಕೊಂಡ್ರೆ ನಿಮ್ಮ ಸಾಮಾನ್ಯ ಜ್ಞಾನ ಹೆಚ್ಚಾಗತ್ತೆ

ಫಳ ಫಳ ಅಂತ ಹೊಳೆದ್ರೆ ತಿನ್ನಕ್ಕೆ ಒಳ್ಳೇದಾ?

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ನಮ್ಮ ಜೀವನದ ಆಗುಹೋಗುಗಳಿಗೆ ಈ 16 ಅಭ್ಯಾಸಗಳು ಹೇಗೆ ಕಾರಣ ತಿಳ್ಕೊಳಿ

ಒಳ್ಳೇದೋ ಕೆಟ್ಟದ್ದೋ ಏನೇ ಇರ್ಲಿ…

ನಾವು ಒಂದು ಕೆಲಸಾನ ಪದೇ ಪದೇ ಮಾಡ್ತಿದ್ದಾಗ ಅದು ಯಾವಾಗ ನಮ್ಮ ಅಭ್ಯಾಸ ಆಗುತ್ತೋ ಗೊತ್ತೇ ಆಗಲ್ಲ. ಈ ಅಭ್ಯಾಸಗಳೇ ನಮ್ಮ ವ್ಯಕ್ತಿತ್ವಾನ ಹೇಳೋದು. ಈ ಅಭ್ಯಾಸಗಳು ನಾವು ಮಾತಾಡದೆ ಇದ್ರೂ ನಾವು ಏನು ಹೇಳ್ಬೇಕು ಅನ್ಕೋಡಿರ್ತಿವೋ ಅದನ್ನ ತಿಳಿಸುತ್ತೆ. ಉದಾಹರಣೆಗೆ ದಿನ ಬೆಳಗ್ಗೆ ಕಾಫಿ ಕುಡಿಯೋದು, ಪಕ್ಕದಲ್ಲಿ ಕೂತಿರೋವ್ರ ಕುರ್ಚಿ ಮೇಲೆ ಕಾಲಿಡೋದು, ಉಗುರು ಕಚ್ಚೋದು, .. ಹೀಗೆ.

ಹಿಂದೆ ಇದನ್ನೆಲ್ಲಾ ನೋಡಿ ಒಬ್ಬ ಮನುಷ್ಯ ಹೇಗೆ ಅಂತ ತಿಳ್ಕೋತಿದ್ರು, ಅದಕ್ಕಿಂತ ಆಶ್ಚರ್ಯ ಏನು ಅಂದ್ರೆ ಇದು ನಮ್ಮ ಜೀವನ ಹೇಗಿರುತ್ತೆ ಅಥವಾ ಹೇಗಾಗುತ್ತೆ ಅಂತಾನೂ ತೋರ್ಸುತ್ತೆ . ನಮ್ಮ ದಿನ ನಿತ್ಯದ ಅಭ್ಯಾಸಗಳು ಒಳ್ಳೇದೋ ಕೆಟ್ಟದ್ದೋ ಏನೇ ಇರ್ಲಿ ಅದ್ರಿಂದ ಏನು ಪರಿಣಾಮ ಆಗುತ್ತೆ, ನಮ್ಮ ಜೀವನದ ಬಗ್ಗೆ ಏನು ಹೇಳುತ್ತೆ ಅಂತ ಓದಿ ತಿಳ್ಕೊಳಿ. ಅಂತೆಕಂತೆ ನಿಮಗೋಸ್ಕರ ಈ 16ರ ಪಟ್ಟಿ ಮಾಡಿದೆ.   

1. ಬಚ್ಚಲನ್ನ ಕ್ಲೀನಾಗಿ ಇಟ್ಕೊಳ್ದೆ ಇರೋದು  

ಯಾರು ತಮ್ಮ ಬಚ್ಚಲು ಮನೆ ಕ್ಲೀನಾಗಿಟ್ಟುಕೊಳ್ಲವೋ, ಬಚ್ಚಲು ಮನೇಲಿ ಅಲ್ಲಲ್ಲೇ ಬಟ್ಟೆ ಬಿಸಾಕಿರೋದು ಮಾಡ್ತಾರೋ ಅಂತವ್ರಿಗೆ ವೃತ್ತಿ ಜೀವನದಲ್ಲಿ ಒಳ್ಳೇದಾಗಲ್ವಂತೆ. ವೃತ್ತಿಯಲ್ಲಿ ಮುಂದುವರಿಯಕ್ಕೆ ತುಂಬಾ ಕಷ್ಟ ಪಡ್ಬೇಕಾಗುತ್ತಂತೆ. ಇದು ನಮ್ಮ ವ್ಯವಹಾರ, ಕೆಲಸ ಕಾರ್ಯಗಳಲ್ಲಿ ಏನಾಗುತ್ತೆ ಅಂತ ತೋರ್ಸುತ್ತೆ. 

2. ಕಾಲು ಎಳ್ಕೊಂಡು ಓಡಾಡೋದು / ನೆಲ ಸವರಿಕೊಂಡು ಓಡಾಡೋದು

ಕಾಲು ಎಳ್ಕೊಂಡು ಓಡಾಡೋದನ್ನ ಕೆಟ್ಟ ಅಭ್ಯಾಸ ಅಂತ ತುಂಬಾ ಜನ ಹೇಳ್ತಾರೆ. ಇದ್ರಿಂದ ನಾವು ಸಾಧಿಸಬೇಕಾಗಿರೋ ಗುರಿ ಮೇಲೆ ನಾವೇ ಧೂಳು  ಬೆಳ್ಕೊಂಡು ಬಂದು ಹಾಕಿ ಮುಳುಗಿಸ್ತೀವಿ. ನಮ್ಮ ಗುರಿ ನಾವು ಮುಟ್ಟಲ್ಲ ಅಂತ ತೋರ್ಸುತ್ತೆ.

3. ತಿಂದ ತಟ್ಟೆ ಹಾಗೆ ಇಡೋದು

ತುಂಬಾ ಜನ ತಾವು ಊಟ ಮಾಡಿದಮೇಲೆ ತಿಂದ ತಟ್ಟೆ, ಚಮಚ ಇವನ್ನೆಲ್ಲ ಯಾರಾದ್ರೂ ಬಂದು ತೊಗೊಂಡು ಹೋಗಿ ತೊಳೀಲಿ ಅಂತ ಕಾಯ್ತಿರ್ತಾರೆ. ಇಂತವರು ಪ್ರಯತ್ನಗಳನ್ನ ತುಂಬಾನೇ ಕಡೆಗಣಿಸ್ತಾರೆ ಅಷ್ಟೇ ಅಲ್ಲ ಯಶಸ್ಸನ್ನು ಪಡೆದು ಅದನ್ನ ಕಾಪಾಡ್ಕೊಳಕ್ಕೆ ತುಂಬಾ ಕಷ್ಟ ಪಡ್ತಾರೆ.ನಮ್ಮ ಜೀವನದಲ್ಲಿ ಯಾವ ಮಟ್ಟದಲ್ಲಿ ಯಶಸ್ಸು ಕಾಣ್ತಿದೀವಿ ಅಂತ ಇದು ತೋರ್ಸುತ್ತೆ. ಊಟ ಮಡಿದ ತಟ್ಟೆ, ಚಮಚ, ಅಷ್ಟೇ ಅಲ್ಲ ಊಟ ಮಡಿದ ಜಾಗ ಕ್ಲೀನ್ ಮಾಡಿದ್ರೆ ಒಳ್ಳೇದು ಅಂತಾರೆ.

4. ಹೊರಗೆ ಹೋಗಿ ಸುತ್ತಾಡಿಕೊಂಡು ಬಂದ್ಮೇಲೆ ಕೈಕಾಲು, ಮುಖ ತೊಳೀದೆ ಇರೋದು

ಕೆಲವೊಬ್ರು ದಿನವಿಡೀ ಕೆಲಸ ಅಥವಾ ಇನ್ನ್ಯಾವುದೋ ಕಾರಣಕ್ಕಾಗಿ ಸುತ್ತಾಡಿಕೊಂಡು ಮನೆಗೆ ಬರ್ತಾರೆ. ಹಾಗೆ ಬಂದ ತಕ್ಷಣ ಕೈಕಾಲು ಮುಖ ತೊಳ್ಕೊಬೇಕು. ಹೀಗೆ ಮಾಡೋದ್ರಿಂದ ನೀವು ಹೊರಗೆ ಹೋಗಿ ಬಂದಾಗ ನಿಮ್ಮ ಜೊತೆ ಬರೋ ನಕಾರಾತ್ಮಕ ಶಕ್ತಿಯಿಂದ ನಿಮ್ಮ ಒತ್ತಡ ಕಮ್ಮಿಯಾಗಿ ಮನಃ ಶಾಂತಿ ಇರುತ್ತೆ. ಈ ಅಭ್ಯಾಸ ಇಲ್ದಿದ್ರೆ ಏನಾಗುತ್ತೆ ಅಂತ ಅರ್ಥ ಆಯ್ತಾ?

5. ಪೂಜೆ ಮಾಡೋ ಜಾಗ ಕ್ಲೀನ್ ಇಟ್ಕೊಳ್ಳೋದು

ಪ್ರತಿದಿನ ಅಲ್ದೆ ಇದ್ರೂ ಆಗಾಗ ದೇವರ ಕೋಣೆ, ಪೂಜೆ ಮಾಡೋ ಜಾಗ, ವಿಗ್ರಹಗಳನ್ನ ಇಟ್ಟಿದ್ರೆ ಅದನ್ನ ಕ್ಲೀನ್  ಮಾಡ್ತಿರ್ಬೇಕು. ಇದು ಕ್ಲೀನ್ ಇಲ್ಲ ಅಂದ್ರೆ ಮನೇಲಿ ಓದೋ ಮಕ್ಕಳಿದ್ರೆ ಅವರ ಓದಿನಲ್ಲಿ ತೊಂದರೆ ಆಗೋದು, ಹಣಕಾಸಿನ ವಿಚಾರದಲ್ಲಿ ತೊಂದರೆ ಆಗೋದು ಅಷ್ಟೇ ಅಲ್ಲ ಸಂಸಾರದಲ್ಲಿ ಜಗಳ, ಮನಸ್ತಾಪ ಆಗೋದನ್ನ ತೋರ್ಸುತ್ತೆ.

6. ರಾತ್ರಿ ತುಂಬಾ ಹೊತ್ತು ಎದ್ದಿರೋದು 

ಬೇಗ ಮಲಗಿ ಬೇಗ ಏಳ್ಬೇಕು ಅಂತ ಹೇಳೋದನ್ನ ಕೇಳಿರ್ತೀರಿ. ರಾತ್ರಿ ಹೊತ್ತು ಮಲಗೋದು ಒಳ್ಳೇದು ಯಾಕೆ ಅಂದ್ರೆ ಚಂದ್ರನ ಬೆಳಕು ನಮ್ಮ ದೇಹದ ಆರೋಗ್ಯಕ್ಕೆ ಒಳ್ಳೇದು. ದೇಹ ತಂಪಾಗಿಡಕ್ಕೆ ಸಹಾಯ ಆಗುತ್ತೆ (ಈ ಹಿಂದೆ ನಾವು ಇದರಬಗ್ಗೆ ಒಂದು ಪ್ರಕ್ಯೆಕ ಬರಹ ಪ್ರಕಟಣೆ ಮಾಡಿದ್ದೀವಿ). ನಾವು ರಾತ್ರಿ ತುಂಬಾ ಹೊತ್ತು ಎದ್ದಿರೋದ್ರಿಂದ ಬಲವಂತವಾಗಿ ಚಂದ್ರನ ತನ್ನ ಕೆಲಸಾನ ಸ್ವಾಭಾವಿಕವಾಗಿ ಮಾಡದೇ ಇರೋ ಹಾಗೆ ಮಾಡ್ತೀವಿ. ಇದ್ರಿಂದ ಮಾನಸಿಕ ಒತ್ತಡ ಹೆಚ್ಚಾಗೋದಲ್ದೆ ನಮ್ಮ ಆರೋಗ್ಯದಮೇಲೂ ಕೆಟ್ಟ ಪರಿಣಾಮ ಬೀರುತ್ತೆ.

7. ಮನೆಗೆ ಬಂದವರಿಗೆ ಕುಡಿಯಕ್ಕೆ ನೀರು ಕೊಡೋದು

ಮನೆಗೆ ಬಂದವರಿಗೆ ಕೂರಕ್ಕೆ ಹೇಳಿ ಮೊದಲು ಕುಡಿಯಲು ನೀರು ಕೊಡಿ ಅಂತ ಹಿಂದಿನಿಂದಲೂ ಹೇಳ್ತ ಬಂದಿದ್ದಾರೆ. ಪ್ರತಿಯೊಬ್ಬರ ದೇಹದಲ್ಲೂ ಅವರದೇ ಆದ ಶಕ್ತಿ ಇರುತ್ತೆ. ಹೊರಗಿನಿಂದ ಬೇರೆಯವರು ಬಂದಾಗ ಅವರ ದೇಹದಲ್ಲಿರೋ ಶಕ್ತಿ ನಮ್ಮ ದೇಹದಲ್ಲಿರೋ ಶಕ್ತಿಗೆ ಅಡ್ಡಿಪಡಿಸುತ್ತೆ. ಹೊರಗಿನಿಂದ ಬಂದವರಿಗೆ ಕುಡಿಯಕ್ಕೆ ತಣ್ಣೀರು ಕೊಡೋದ್ರಿಂದ ಅವರ ದೇಹದ ಬಿಸಿ ತಣ್ಣಗಾಗಿ ನಮ್ಮ ಶಕ್ತಿಗೆ ಏನೂ ಅಡ್ಡಿ ಆಗಲ್ವಂತೆ.  ಈಗ ಗೊತ್ತಾಯ್ತ ಯಾಕೆ ಮೊದಲು ಕೊಡಿಯಾಕ್ಕೆ ನೀರು ಕೊಡ್ತಾರೆ ಅಂತ?

8. ಚಪ್ಪಲಿಗಳನ್ನ ಸಿಕ್ಕ ಸಿಕ್ಕ ಜಾಗದಲ್ಲೆಲ್ಲ ಬಿಡೋದು

ಕೆಲವೊಬ್ಬರಿಗೆ ಚಪ್ಪಲಿನ ಎಲ್ಲಿ ಅಂದ್ರೆ ಅಲ್ಲಿ ಬಿಡೋ ಅಭ್ಯಾಸ ಇರುತ್ತೆ. ಸರಿಯಾಗಿ ಒಂದು ಜಗದಲ್ಲಿ ಬಿಡಲ್ಲ. ಎಲ್ಲೆಲ್ಲೋ ಚಪ್ಪಲಿ ಬಿಡೋದ್ರಿಂದ ನಮ್ಮ ಶತ್ರುಗಳು ಹೆಚ್ಚಾಗ್ತಾರಂತೆ, ಅಷ್ಟೇ ಅಲ್ಲ ಇದು ಸಮಾಜದಲ್ಲಿ ನಮ್ಮ ಸ್ಥಿತಿ ಗತಿ ಏನು, ನಮ್ಮ ಸ್ಥಾನ ಮಾನ ಏನು ಅನ್ನೋದನ್ನ ತೋರ್ಸುತ್ತೆ.

9. ಅಡುಗೆ ಮನೆ ಕ್ಲೀನ್ ಆಗಿಲ್ದೇ, ಅಲ್ಲಿರೋ ಎಲ್ಲ ವಸ್ತುಗಳೂ ಹೆಗ್ಹೇಗೋ ಹರಡಿದ್ರೆ

ಅಡುಗೆ ಮನೆ ಕ್ಲೀನ್ ಆಗಿಲ್ದೇ, ಅಲ್ಲಿರೋ ಎಲ್ಲ ವಸ್ತುಗಳೂ ಹೆಗ್ಹೇಗೋ ಹರಡಿದ್ರೆ ಮುಂದೆ ಊಟ ಸಿಗೋದೂ ಕಷ್ಟ ಆಗುತ್ತಂತೆ. ಅಡುಗೆ ಮನೆ ಅನ್ನಪೂರ್ಣೇಶ್ವರಿ ಇರೋ ಜಾಗ, ಅದು ಕ್ಲೀನ್ ಆಗಿಲ್ಲ ಅಂದ್ರೆ ಅವಳು ನಮ್ಮ ಹತ್ರ ಇರಲ್ಲ ಅಂತಾರೆ. ಇನ್ನು ಕ್ಲೀನ್ ಆಗಿಲ್ಲ ಅಂದ್ರೆ ಆ ಜಾಗದಲ್ಲಿ ಅಡುಗೆ ಮಾಡಿ ತಿಂದ್ರೆ ನಮ್ಮ ಆರೋಗ್ಯದ ಗತಿ ಏನು ಅಂತ ನಿಮಗೇ ಗೊತ್ತಿರುತ್ತೆ.

10. ಗಿಡ ಮರಗಳಿಗೆ ನೀರು ಹಾಕೋದು

ಕೆಲವರಿಗೆ ಗಿಡ ಮರಗಳಿಗೆ ನೀರು ಹಾಕೋದು ಅಂದ್ರೆ ತುಂಬಾನೇ ಇಷ್ಟ. ಹೀಗೆ ಮಾಡೋವ್ರಿಗೆ ತಮ್ಮ ಸಂಸಾರದಲ್ಲಿ, ಪ್ರೀತಿ ಪ್ರೇಮದ ವಿಷಯದಲ್ಲಿ ಯಾವುದೇ ತೊಂದರೆ ಬರಲ್ವಂತೆ. ನಿಮ್ಮ ಮನೇಲಿರೋ ಗಿಡಗಳಿಗೆ ಆಗ್ಲಿ ಅಥವಾ ಮನೆ ಮುಂದಿರೋ ಗಿಡ ಮರಗಳಿಗೆ ಆಗ್ಲಿ ಆಗಾಗ ನೀರು ಹಾಕೋ ಅಭ್ಯಾಸ ಇದ್ರೆ ಒಳ್ಳೇದು.

 

 

11. ಹಾಸಿಗೆ, ಹೊದಿಕೆ ಸರಿಯಾಗಿ ಇಟ್ಕೊಳ್ದೆ ಇರೋದು

ಕೆಲವೊಬ್ರು ಆಗಾಗ ಬೆಡ್ ಶೀಟ್ ಚೇಂಜ್ ಬದಲಾಯಿಸಲ್ಲ, ಹಾಸಿಗೆಯಿಂದ ಎದ್ದಮೇಲೆ ಹಾಸಿಗೆ ಸುತ್ತಿಡದೆ ಇರೋದು, ಹೊದಿಕೆಗಳನ್ನ ಹಾಗೆ ಬಿಡೋದು ಮಾಡ್ತಾರೆ . ಹೀಗೆ ಮಾಡೋವ್ರಿಗೆ ಸೋಮಾರಿತನ ಇದ್ದೆ ಇರುತ್ತೆ, ಅಷ್ಟೇ ಅಲ್ಲ ಇಂತವರಿಗೆ ತಾವು ಮಾಡೋ ಕೆಲಸದ ಕಡೆ ಗಮನ ಇರಲ್ಲ. ಅವರು ಎಷ್ಟೇ ಕಷ್ಟ ಪಟ್ರು ಅವರ ಆಸೆ ಪೂರೈಸ್ಕೊಳ್ಳೋದು ಕಷ್ಟ.

12. ಜೋರಾಗಿ ಮಾತಾಡೋದು

ಕೆಲವೊಬ್ರು ತಮ್ಮ ಸಾಮಾನ್ಯ ಧ್ವನಿಗಿಂತ ಜೋರಾಗಿ ಮಾತಾಡ್ತಾರೆ. ಹೀಗೆ ಮಾಡೋದ್ರಿಂದ ಸಂಭಂದಗಳನ್ನ ಉಳಿಸಿಕೊಳ್ಳೋದಷ್ಟೇ ಅಲ್ಲ ನಮ್ಮ ಜೀವನದಲ್ಲಿ ವಿವೇಕದಿಂದ ಇರೋದಕ್ಕೂ ಕಷ್ಟ ಪಡ್ಬೇಕಾಗುತ್ತಂತೆ.

13. ಕಾಲುಗಳನ್ನ ಸರೀಗೆ ತೊಳೀದೆ ಇರೋದು

ಕೆಲವರು ತಮ್ಮ ದೇಹದ ಶುಚಿ ಕಡೆ ಗಮನ ಕೊಡೋದೇ ಇಲ್ಲ. ಅದರಲ್ಲೂ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ವಹಿಸಲ್ಲ. ನಿಜ ಹೇಳ್ಬೇಕು ಅಂದ್ರೆ ನಮ್ಮ ಇಡೀ ದೇಹದ ಭಾರ ಈ ಕಾಲಿನ ಮೇಲೆ ನಿಂತಿರೋದು. ಇದು ನಮ್ಮ ದೇಹದ ಆಧಾರ ಕಂಬದ ಹಾಗೆ. ಇದು ಕ್ಲೀನ್ ಆಗಿಲ್ದೇ ಇದ್ರೆ ನಮ್ಮ ಇಡೀ ದೇಹಕ್ಕೆ ಅಪಾಯ ಗ್ಯಾರಂಟಿ. ಇದು ಗೊತ್ತಿರೋದೇ.. ಅದ್ರಲ್ಲೇನಿದೆ ಹೊಸದು ಅಂದ್ರ... ಯಾರು ಕಾಲನ್ನ ಕ್ಲೀನ್ ಆಗಿ ಇಟ್ಕೊಳಲ್ವೋ ಅವರು ತಮ್ಮ ಮನೆತನದ ಗೌರವ ಹೆಚ್ಚಿಸೋ ಯಾವುದೇ ಕೆಲಸ ಮಾಡಲ್ಲ, ತಮ್ಮ ಮನೆತನಕ್ಕೆ ಬೆಲೆ ಕೊಡಲ್ಲ ಅಂತಾರೆ. ಇದ್ರಿಂದ ನಮ್ಮ ಭವಿಷ್ಯ ನೆಮ್ಮದಿಯಿಂದ ಇರಲ್ವಂತೆ.

14. ಹಿರಿಯರಿಗೆ ಗೌರವ ತೋರಿಸದೆ ಇರೋದು

ಯಾರು ತಮ್ಮ ಮನೆಯಲ್ಲಿರೋ ಹಿರಿಯರಿಗೆ ಗೌರವ ತೋರಿಸದೆ ಇರೋದು, ಅವರನ್ನ ಕೀಳಾಗಿ ನೋಡೋದು, ಅವರ ಬಗ್ಗೆ ಅಸಡ್ಡೆ ತೋರ್ಸೋದು ಮಾಡ್ತಾರೋ ಅಂತವರ ಮನೆ ಉದ್ದಾರ ಆಗಲ್ಲ. ಇದು ಸಂಸಾರ, ಸಮಾಜದಲ್ಲಿ ಸ್ಥಾನಮಾನ ಹಾಗೆ ನಮ್ಮ ವೃತ್ತಿ ಜೀವನಕ್ಕೂ ಅಪಾಯ ತರುತ್ತೆ. ಮನೆಯ ಹಿರಿಯರು ಸಂತೋಷವಾಗಿದ್ರೆ ಯಾವುದೇ ತೊದರೆ ಇರಲ್ಲ.

15. ಎಲ್ಲಿ ಅಂದ್ರೆ ಅಲ್ಲಿ ಉಗಿಯೋದು

ಕೆಲವೊಬ್ಬರಿಗೆ ಸಿಕ್ಕ ಸಿಕ್ಕ ಜಾಗದಲ್ಲೆಲ್ಲ ಉಗಿಯೋ ಅಭ್ಯಾಸ ಇರುತ್ತೆ. ಮನೆ ಸುತ್ತ ಮುತ್ತ, ಬೀದಿ, ಆಫೀಸ್ ಹೀಗೆ ಎಲ್ಲಾದ್ರೂ ಸರಿ ಉಗಿತಿರ್ತಾರೆ. ಹೀಗೆ ಪ್ರತಿಸಲ ಮಾಡಿದಾಗಲೂ ತಮ್ಮ ಯಶಸ್ಸು, ಸಮದಲ್ಲಿರೋ ಗೌರವ, ತಮ್ಮ ಸಿರಿ ಸಂಪತ್ತನ್ನ ಹೊರಗೆ ಉಗಿತಿರ್ತಾರೆ. ಈ ಅಭ್ಯಾಸ ಇರೋವ್ರು ಮುಂದಿನಸಳ ಉಗಿಯೋದಕ್ಕೆ ಮುಂಚೆ ಇದನ್ನ ನೆನಪಿಟ್ಕೊಳಿ.

16. ಮಾದಕ ವಸ್ತು ಹಾಗೂ ಹೆಂಡ ಸಾರಾಯಿ ಕುಡಿಯೋದು

ಮಾದಕ ವಸ್ತು ಹಾಗೂ ಹೆಂಡ ಸಾರಾಯಿ ಕುಡಿಯೋದು ಈ ಅಭ್ಯಾಸ ಇದ್ರೆ ಆರೋಗ್ಯ ಏನಾಗುತ್ತೆ ಅನ್ನೋದು ಗೊತ್ತಿರೋದೇ. ಈ ಅಭ್ಯಾಸ ಇರೋ ಜನ ಕಷ್ಟಪಟ್ಟು ಕೆಲಸ ಮಾಡಬಹುದು, ಆದರೆ ಅವರ ಪ್ರಯತ್ನದ ಫಲ ಅನುಭವಿಸಕ್ಕೆ ಅವಕಾಶ ಸಿಗಲ್ಲ.

ಹಿಂದಿನಕಾಲದಲ್ಲಿ ಒಳ್ಳೆ ಅಭ್ಯಾಸಗಳನ್ನ ಇಟ್ಕೊಂಡ್ರೆ ದೇವರಿಗೆ ಖುಷಿ ಆಗುತ್ತೆ, ಒಳ್ಳೇದಾಗುತ್ತೆ , ಇಂತ ಅಭ್ಯಾಸ ಬೆಳೆಸ್ಕೊಳಿ ಅಂತ ಹೇಳಿರ್ತಾರೆ. ಹಾಗೆ ಕೆಟ್ಟ ಅಭ್ಯಾಸಗಳ ಬಗ್ಗೆ ಹೇಳೋವಾಗ ಆ ಗ್ರಹದ  ಕೆಟ್ಟ ದೃಷ್ಟಿ ಬೀಳುತ್ತೆ, ಈ ಗ್ರಹದ ಕೆಟ್ಟ ದೃಷ್ಟಿ ಬೀಳುತ್ತೆ ಅಂತ ಹೇಳಿರ್ತಾರೆ. ಆದ್ರೆ ಹೀಗೆ ಸರಿಯಿಯಾಗಿ ಬಿಡಿಸಿ ಹೇಳಿರೋದು ಕಮ್ಮಿ.

ಈಗ ಇಲ್ಲಿ ನಮ್ಮ ಅಭ್ಯಾಸದಿಂದ ಏನಾಗುತ್ತೆ ಅಂತ ಹೇಳಿರೋದನ್ನ ಹಿಂದಿನವರು ಹೇಳ್ತಿದ್ದ ಮಾತಿಗೆ ಹೋಲಿಸಿ ನೋಡಿ ಯಾವ ಅಭ್ಯಾಸಕ್ಕೆ ಯಾವ ಗ್ರಹದ ಬಗ್ಗೆ, ಯಾವ ದೇವರ ಬಗ್ಗೆ ಹೇಳ್ತಿದ್ರು ಅಂತ ನಿಮಗೇ ಚೆನ್ನಾಗಿ ಅರ್ಥ ಆಗುತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: