ಹಿತ್ತಲ ಗಿಡ ಅಂತ ಕಡೆಗಣಿಸದೇ ಅಗಾಗ ನುಗ್ಗೆ ಬಳಸ್ತಿದ್ರೆ ಈ 18 ಉಪಯೋಗಗಳ್ನ ಪಡ್ಕೋತಿರಿ

ಚಪ್ಪರಿಸಿಕೊಂಡು ತಿನ್ನೋದು ರುಚಿಗಷ್ಟೇ ಅಲ್ಲ!

ಹಿತ್ತಲ ಗಿಡ ಮದ್ದಲ್ಲ ಅನ್ನೋದು ಹಳೇ ಅಂತೆಕಂತೆ ಆದರೆ ಹಳೇದನ್ನ ಪಕ್ಕಕ್ಕಿಟ್ಟು ಹಿತ್ತಲಲ್ಲಿ ಬೆಳೆಯೋದನ್ನೇ ಮದ್ದು ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳೋಕೆ ಮುಂದಾಗಿದ್ದಾರೆ ನಮ್ಮ ಈಗಿನವರು. ಇದರಲ್ಲಿ ಮೊದಲನೇ ಜಾಗಾನ ನುಗ್ಗೇ ಸೊಪ್ಪು, ನುಗ್ಗೆ ಕಾಯಿಗೇ ಕೊಟ್ಟಿದಾರೆ. ಯಾಕೆಂದರೆ ಅಡಿಯಿಂದ ಮುಡಿವರೆಗೂ ದೇಹದ ಎಲ್ಲಾ ಭಾಗಗಳಿಗೂ ಇದು ಒಳ್ಳೇದು.

ಏಷ್ಯಾ, ಆಫ್ರಿಕಾ ಮತ್ತೆ ದಕ್ಷಿಣ ಅಮೇರಿಕಾದಲ್ಲಿ ಸಿಗೂ ನುಗ್ಗೆ ಕಾಯಿ ಇತ್ತೀಚೆಗೆ ವಿಜ್ನಾನಿಗಳು ನುಗ್ಗೆ ಕಾಯಿ-ಸೊಪ್ಪಿನ ಬಗ್ಗೆ ಸಾಕಷ್ಟು ಮಾಹಿತಿ ಬಿಟ್ಟಿದಾರಾದರೂ ನುಗ್ಗೆ ಸೊಪ್ಪು-ಕಾಯಿ ಬಗ್ಗೆ ನಮ್ಮವರಿಗೆ ಮುಂಚೆನೇ ಗೊತ್ತಿತ್ತು ಅನ್ಸುತ್ತೆ ಅದಕ್ಕೆ ಸಾರು ಗೊಜ್ಜು ಪಲ್ಯ ಅಂತ ಹತ್ತಾರು ಅಡಿಗೆಗಳಲ್ಲಿ ಇದನ್ನ ಬಳಸೋಕೆ ತೋರಿಸಿಕೊಟ್ಟಿದಾರೆ ನಮಗೆ.

ಈಜಿಪ್ಟ್, ಗ್ರೀಸ್ ಮತ್ತೆ ರೋಮ್ ದೇಶಗಳಲ್ಲಿ ಇದನ್ನ ಔಷಧಿಯಾಗಿ ಬಳಸುತ್ತಿದ್ದರಂತೆ. ಈವತ್ತು ನುಗ್ಗೆನ ಮಕ್ಕಳಲ್ಲಿ ಅಪೌಷ್ಟಿಕತೆನ ದೂರ ಮಾಡೋಕೆ ಬಳಸುತ್ತಾರೆ. ಎಲ್ಲಕ್ಕಿಂತ ಮುಖ್ಯ ಅಂದರೆ ಇದನ್ನ ತಿನ್ನೋಕೆ ನಿಮ್ಮ ಜೇಬು ಭಾರ ಆಗಿರಬೇಕು ಅಂತೇನಿಲ್ಲ.

ನುಗ್ಗೇಲಿ ಏನೇನಿದೆ ಗೊತ್ತಾ?

ಸಾಕಷ್ಟು ಪ್ರೋಟೀನ್-ವಿಟಮಿನ್-ಮಿನರಲ್ ಗಳಿವೆ. ಇದರಲ್ಲಿ ಸಾಕಷು ಅಮೈನೋ ಆಸಿಡ್ ಕೂಡ ಇದ್ದು ದೇಹಕ್ಕೆ ಸಾಕಷ್ಟು ಉಪಯೋಗಕಾರಿ ಆಗಿದೆ. ವಿಟಮಿನ್ ಏ-ಬಿ1-ಬಿ2-ಬಿ3-ಬಿ6 ಹಾಕೆ ಸಿ ಜೊತೇಲಿ ಮಿನೆರಲ್ ಗಳಾದ ಕ್ಯಾಲ್ಷಿಯಂ, ಪೊಟ್ಯಾಷಿಯಂ, ಐರನ್, ಮಗ್ನೀಷಿಯಂ, ಫಾಸ್ಫರಸ್ ಮತ್ತೆ ಝಿಂಕ್ ಇವೆಯಂತೆ. ಅಷ್ಟೇ ಅಲ್ಲದೇ ಕಡಿಮೆ ಕೊಬ್ಬಿನ ಅಂಶ ಇರೋ ಕಾರಣ ತಿನ್ನೋಕೆ ಇದಕ್ಕಿಂದ ಒಳ್ಳೇ ಆಹಾರ ಅಂತ ಬೇರೇನು ಇರೋಕೆ ಸಾಧ್ಯ ಇಲ್ಲ ಅನ್ಸುತ್ತೆ.

ಆಫ್ರಿಕಾದಲ್ಲಿ ಇದನ್ನ "ಮಿರಾಕಲ್ ಟ್ರೀ" ಅಂತಾರೆ, ಇದರಲ್ಲಿ ಅಷ್ಟೊಂದು ಗುಣಗಳಿವೆ

ಫಿಲಿಪೈನ್ಸ್ ನಲ್ಲಿ ಇದನ್ನ " ಮದರ್ಸ್ ಬೆಸ್ಟ್ ಫ್ರೆಂಡ್" ಅಂತಾರೆ ಯಾಕಂದ್ರೆ ಇದನ್ನ ತಿನ್ನೋದ್ರಿಂದ ಎದೆ ಹಾಲು ಚೆನ್ನಾಗಿ ಉತ್ಪತ್ತಿ ಆಗುತ್ತೆ.

1. ದೇಹದಲ್ಲಾಗೋ ಊತ ಕಮ್ಮಿ ಮಾಡತ್ತೆ

ಇದರಲ್ಲಿರೋ ಊತಕಡಿಮೆ ಮಾಡೋ ಗುಣ ತುಂಬ ಸಹಾಯಕಾರಿ ಅಂತ ಸಂಶೋಧನೆಗಳ ನಂತರ ವಿಜ್ನಾನಿಗಳು ಹೇಳಿದ್ದಾರೆ. ಇದರ ಶಕ್ತಿ ಎಷ್ಟಿದೆ ಅಂದರೆ ಊತಕ್ಕೆ ಕೊಡೋ ಇಂಡೊಮೆಥಾಸಿನ್ ಅನ್ನೋ ಮಾತ್ರೆಗೆ ಸರಿ ಸಾಟಿ ಅಂದಿದಾರೆ.

ಮೂಲ

2. ಹೆಚೆಚ್ಚು ಮಾತ್ರೆ ತೊಗೊಳ್ಳೊದ್ರಿಂದ ಲಿವರ್ ಹಾಳಾಗೋದನ್ನ ತಡೆಯತ್ತೆ

ಟ್ಯೂಬರ್ಕ್ಯುಲೋಸಿಸ್ ಆದವರಲ್ಲಿ ತಗೊಳ್ಳೋ ಮಾತ್ರೆಗಳಿಂದ ಲಿವರಿಗೆ ಹಾಗೋ ಹಾನಿನ ಈ ನುಗ್ಗೆ ಕಡೀಮೆ ಮಾಡುತ್ತೆ. ಅಷ್ಟೇ ಅಲ್ಲದೇ ನುಗ್ಗೇಲಿರೊ ಗ್ಲೂಕೋಥೈಯೋನ್ ಅನ್ನೋ ಅಂಶ ಲಿವರಲ್ಲಿ ಹೆಪಾಟಿಕ್ ಲಿಪಿಡ್ ಪೆರಾಕ್ಸಿಡೇಷನ್ ಆಗದ ಹಾಗೆ ತಡೆಯುತ್ತೆ. ನುಗ್ಗೇಲಿರೋ ಕ್ಯಟೆಚಿನ್, ಎಪಿಕ್ಯಾಟೆಚಿನ್, ಫೆರೂಲಿಕ್ ಆಸಿಡ್ ಹಾಗು ವಿಟಮಿನ್ ಸಿ ಗಳಿಂದ ಇದು ಸಾಧ್ಯ ಆಗತ್ತೆ.

3. ಹೊಟ್ಟೆ ಸಮಸ್ಯೆಗೂ ರಾಮಬಾಣ

ಮಲಬದ್ಧತೆ, ಎದೆ ಉರಿ, ಹುಳಿ ತೇಗು ಅಥ್ವಾ ಹೊಟ್ಟೇಲಾಗೋ ಹುಣ್ಣು ಯಾವುದೇ ಇರಲಿ ಇದಕ್ಕೆ ನುಗ್ಗೇಲಿರೋ ಇಸೋಸಯನೇಟ್ಸ್ ಸಹಾಯ ಮಾಡುತ್ತೆ.

ಸಂಶೋಧನೆಗಳ ಪ್ರಕಾರ ಬೇರೆ ಔಷಧಿಗಳಿಗೆ ಹೋಲಿಸಿದರೆ ನುಗ್ಗೆ ಹೊಟ್ಟೆ ಹುಣ್ಣನ್ನ ವಾಸಿ ಮಾಡುತ್ತಂತೆ. ಇದರಲ್ಲಿ ಅಂಟಿಬ್ಯಾಕ್ಟೀರಿಯಾ ಹಾಗು ಅಂಟಿಬಯಾಟಿಕ್ ಗುಣಗಳು ಇಲ್ಲಿ ಕ್ರಿಮಿ ಕೀಟಗಳು ಬೆಳೆಯದ ಹಾಗೆ ನೋಡಿಕೊಳ್ಳುತ್ತೆ ಅಷ್ಟೇ ಅಲ್ಲದೇ ಭೇದಿ ಉಂಟುಮಾಡತಕ್ಕ ಕ್ರಿಮಿಗಳನ್ನೂ ಸಹ ಇದು ಕೊಲ್ಲುತ್ತಂತೆ. ಹೆಚ್ಚು ಪೌಷ್ಟಿಕಾಂಶ ಹಾಗೆ ಕಡಿಮೆ ಒಬ್ಬಿನಾಂಶ ಇರೋ ಕಾರಣ ಸಣ್ಣ ಆಗೋಕೆ ಇದನ್ನ ತಿನ್ನಬಹುದು. ಅಷ್ಟೇ ಅಲ್ಲದೇ ಇದರಲ್ಲಿರೋ ವಿಟಮಿನ್ ಬಿ ಸೇವಿಸಿದ ಊಟನೆಲ್ಲ ಶಕ್ತಿಯಾಗಿಸಿ ನಿಮನ್ನ ಆರೋಗ್ಯವಾಗಿಡುತ್ತೆ.

ಮೂಲ

4. ಕೂದಲು ಹಾಗು ಚರ್ಮಕ್ಕೆ ಕಾಂತಿ ಬರ್ಸತ್ತೆ

ನುಗ್ಗೆ ಬೀಜದಿಂದ ತೆಗೆಯೋ ಎಣ್ಣೆನ ಕೂದಲಿಗೆ ಹಚ್ಚ ಬಹುದು ಹಾಗೇ ಇದನ್ನ ಸರ್ಪಸುತ್ತಾದಾಗ ಚರ್ಮಕ್ಕೂ ಹಚ್ಚಿಕೊಳ್ಳಬಹುದು. ಇದು ವೈರಾಣುವಿಂದ ಚರ್ಮದಲ್ಲಾಗೋ ಬದಲಾವಣೆನ ಕಡಿಮೆ ಮಾಡುತ್ತೆ. ಈ ಎಣ್ಣೇಲಿರೋ ಕೆಲವು ಗುಣಗಳು ನಿಮ್ಮ ಚರ್ಮದಲ್ಲಿ ಬೇಗ ಸುಕ್ಕು ಮೂಡದ ಹಾಗೆ ನೋಡಿಕೊಳ್ಳುತ್ತೆ, ಹಾಗಾಗಿ ನಿಮ್ಮ ಚರ್ಮಕ್ಕೆ ಬೇಗ ವಯಸ್ಸಾಗಲ್ಲ. ಮರ್ಕ್ಯುರಿ ಅಥವಾ ಕ್ಯಾಡ್ಮಿಯಂನಿಂದೇನಾದರೂ ಹಾನಿ ಆಗೋದಾದರೆ ಅದನ್ನೂ ನುಗ್ಗೆ ಆಗದ ಹಾಗೆ ನೋಡಿಕೊಳ್ಳುತ್ತೆ ಅದಕ್ಕೇ ನುಗ್ಗೇನ ಕಾಸ್ಮೆಟಿಕ್ಸ್ ಗಳಲ್ಲಿ ಬಳಸಲಾಗುತ್ತೆ.

ಇನ್ನು ನುಗ್ಗೆ ಎಣ್ಣೆನ ಕೂದಲಿಗೆ ಹಚ್ಚೋದ್ರಿಂದ ಕೂದಲು ದೃಢವಾಗಿ ದಟ್ಟವಾಗಿ ಕಾಂಯಿಯುತವಾಗಿರುತ್ತಂತೆ.

5. ದೇಹದಲ್ಲಿ ಸೇರೋ ಬ್ಯಾಕ್ಟೀರಿಯಾಗಳನ್ನ ಕೊಲ್ಲತ್ತೆ

ಊಟದಲ್ಲಿ ಬೇರೆ ಬೇರೆ ಕಾರಣಗಳಿಂದ ಸೇರಬಹುದಾದ ಕ್ರಿಮಿಗಳನ್ನ ನಾವು ಸೇರಿಸೋ ನುಗ್ಗೆ ಕಡಿಮೆ ಮಾಡಬಹುದು ಅಂತೆ ಸಂಶೋಧನೆಗಳ್ಉ ಹೇಳುತ್ತವೆ. ಅಷ್ಟೇ ಅಲ್ಲದೇ ಮನೇಲಿ ಶುದ್ಧ ಮಾಡೋಕೆ ಬಳಸೋ ವಸ್ತುಗಳಲ್ಲೂ ಇದು ಜಾಗ ಉಳಿಸಿಕೊಂಡಿದೆ.

ಮೂಲ

6. ಕ್ಯಾನ್ಸರ್ ವಾಸಿಯಾಗಕ್ಕೆ ಸಹಾಯ ಮಾಡತ್ತೆ

ನುಗ್ಗೇಸೊಪ್ಪಲ್ಲಿ ಕ್ಯಾನ್ಸರ್ ವಾಸಿ ಮಾಡೋ ಅಂಶಗಳಿವೆಯಂತೆ ಆದರಿಂದ ಇದನ್ನ ಕ್ಯಾನ್ಸರ್ ಚಿಕಿತ್ಸೇಲಿ ಬಳಸಲಾಗುತ್ತಂತೆ. ಇದನ್ನ ಆಗಾಗ ಸೇವಿಸೋದ್ರಿಂದ ದೇಹದಲ್ಲಿ ಕ್ಯಾನ್ಸರ್ ಕಣಗಳು ಉತ್ಪತ್ತಿ ಆಗದ ಹಾಗೆ ಕೂಡ ನೋಡಿಕೊಳ್ಳುತ್ತಂತೆ. ಇದು ಅಂಡಾಣು, ಲಿವರ್ ಹಾಗೆ ಚರ್ಮದ ಕ್ಯಾನ್ಸರ ತಡೆಯೋದ್ರಲ್ಲಿ ಸಾಕಷ್ಟು ಪ್ರಭಾವಕಾರಿಯಂತೆ.

7. ನರಗಳಿಗೆ ಶಕ್ತಿ ಕೊಡತ್ತೆ

ಮರೆವು, ಅಲ್ಝೈ,ಮರ್ಸ್ ನಂತಹ ಖಾಯಿಲೆಗಳು ನರಗಳು ಕ್ಷೀಣಗೊಳ್ಳೋದ್ರಿಂದ ಆಗುತ್ತೆ. ಇಂತಹ ಖಯಿಲೆಗಳು ಬಾರದ ಹಾಗೆ ನುಗ್ಗೆ ಕಾಪಾಡುತ್ತೆ.

ಮೂಲ

8. ಮೂಳಗಳನ್ನ ಗಟ್ಟಿಯಾಗಿಸತ್ತೆ

ನುಗ್ಗೇಲಿ ಕ್ಯಾಲ್ಷಿಯಂ-ಫಸ್ಫರಸ್ ನಂತಹ ಮಿನರಲ್ ಗಳಿರೋ ಕಾರಣ ಮೂಲೆಗಳು ಗಟ್ಟಿಯಾಗುತ್ತವೆ. ಇನ್ನು ಊತ ಕಡಿಮೆ ಮಾಡೋ ಗುಣ ಇರೋ ಕಾರಣ ಆರ್ಥೈಟಿಸ್ ಕೂಡ ವಾಸಿ ಮಾಡೋಕೆ ನುಗ್ಗೆ ಸಹಾಯ ಮಾಡುತ್ತೆ. ದವಡೆ ಫ್ರಾಕ್ಚರ್ ಆದರೂ ನುಗ್ಗೆ ಅದನ್ನ ಒಟ್ಟುಗೂಡಿಸುತ್ತೆ.

9. ರೋಗನಿರೋಧಕ ಶಕ್ತಿ ಹೆಚ್ಚಿಸತ್ತೆ

ದೇಹದಲ್ಲಿ ಪ್ರತಿ ಕಣವನ್ನೂ ದೃಢವಾಗಿಸೋಕೆ ನುಗ್ಗೆ ಸೊಪ್ಪು ಸಹಾಯ ಮಾಡುತ್ತಂತೆ. ಅದಕ್ಕೆ ಹೇಳೋದು ಆಗಾಗ ನುಗ್ಗೆ ತಿನ್ನಿ ಅಂತ.

ಮೂಲ

10. ಆಟೋ ಇಮ್ಯೂನ್ ಖಾಯಿಲೆಗಳು ಬಾರದ ಹಾಗೆ ನೋಡಿಕೊಳ್ಳತ್ತೆ

ರುಮಾಟಾಯಿಡ್ ಆರ್ಥ್ರೈಟಿಸ್ ನಂತಹ ಆಟೋ ಇಮ್ಮ್ಯೂನ್ ಖಾಯಿಲೆಗಳು ಬಾರದ ಹಾಗೆ ನೋಡಿಕೊಳ್ಳೋದಲ್ಲದೇ, ನಿಮಗೇನಾದರೂ ಬೇರೆಯವರ ಅಂಗಾಂಗಗಳನ್ನ ಅಳವಡಿಸಲಾಗಿದ್ದರೆ ಅದನ್ನ ನಿಮ್ಮ ದೇಹ ಒಪ್ಪಿಕೊಳ್ಳೋ ಹಾಗೆ ಮಾಡೋಕೂ ನುಗ್ಗೆ ಸಹಾಯ ಮಾಡುತ್ತಂತೆ. 

11.  ಹೃದಯದ ಆರೋಗ್ಯಕ್ಕೆ ಒಳ್ಳೇದು

ನುಗ್ಗೇಲಿ ಆಂಟಿಆಕ್ಸಿಡೆಂಟ್ಸ್ ಇರೋ ಕಾರಣ ಹೃದಯವನ್ನ ಚೆನ್ನಾಗಿ ನೋಡಿಕೊಳ್ಳುತ್ತಂತೆ. ಇದು ಹೃದಯದ ನಾಳಗಳಲ್ಲಿ ಕೊಬ್ಬಿನಾಂಶ ಕೂರದ ಹಾಗೆ ಕೂಡ ನೋಡಿಕೊಳ್ಳುತ್ತೆ.

ಮೂಲ

12. ಮಧುಮೇಹ ವಾಸಿ ಆಗೋಕೂ ನುಗ್ಗೆ ಸಹಾಯ ಮಾಡುತ್ತೆ

ಮಧುಮೇಹಿಗಳ ರಕ್ತ ಹಾಗೆ ಮೂತ್ರದಲ್ಲಿ ಸಕ್ಕರೆ ಅಂಶ ಕಡಿಮೆ ಮಾಡೋದಲ್ಲದೇ ಅವರ ದೇಹದಲ್ಲಿ ರಕ್ತದ ಹಾಗೂ ಪ್ರೋಟೀನ್ ಅಂಶವನ್ನ ಹೆಚ್ಚಿಗೆ ಮಾಡುತ್ತಂತೆ ನುಗ್ಗೆ ಸೇವನೆ.

13. ಅಸ್ತಮಾ ಹಾಗೆ ಉಸಿರಾಟದ ತೊಂದರೆನ ಕಡಿಮೆ ಮಾಡುತ್ತೆ

ಅಲರ್ಜಿ ಅಥವಾ ಊತ ಉಸಿರಾಟದ ನಾಳಗಳಲ್ಲಾಗಿ ಅದರಿಂದ ಉಸಿರಾಟದ ತೊಂದರೆ ಆಗುತ್ತೆಂದರೆ ಅದನ್ನ ಕಡಿಮೆ ಮಾಡೋದ್ರಲ್ಲಿ ನುಗ್ಗೆ ಸಹಾಯ ಮಾಡುತ್ತೆ. ಅಲರ್ಜಿಯಿಂದಾಗೋ ನೆಗಡಿಗೂ ಇದು ರಾಮಬಾಣ, ನೆಗಡಿ, ಕೆಮ್ಮು, ಎದೆ ಬಿಗಿತ, ಉಸಿರಾಟದ ತೊಂದರೆ ಇಂತಹ ಯಾವುದೇ ಸಮಸ್ಯೆಗೂ ನುಗ್ಗೇನ ಬಳಸಬಹುದು. ಶ್ವಾಸಕೋಶದ ಸಮತೋಲನವನ್ನ್ನ ನೋಡಿಕೊಂಡು ಆರೋಗ್ಯವಾಗಿರಿಸುತ್ತೆ.

ಮೂಲ

14. ಮಕ್ಕಳು ಬೇಡಾ ಅನ್ನೋ ದಂಪತಿಗಳಿಗೆ ವರದಾನ

ಮಹಿಳೆಯರಲ್ಲಿ ಈಸ್ಟ್ರೋಜೆನ್ ಉತ್ಪತ್ತೀಲಿ ಸಹಾಯ ಮಾಡಿ ಗರ್ಭ ನಿಲ್ಲದ ಹಾಗೆ ಕೂಡ ನುಗ್ಗೆ ನೋಡಿಕೊಳ್ಳುತ್ತಂತೆ.

15. ಕಿಡ್ನಿ ಕಲ್ಲು ಆಗಲ್ಲ

ನುಗ್ಗೆ ಬೇರಿನ ಪುಡಿಯನ್ನ ಕ್ರಮವಾಗಿ ಬಳಸೋದ್ರಿಂದ ದೇಹದಲ್ಲಿ ಆಕ್ಸಲೇಟ್ ಅನ್ನೋ ಅಂಶ ಹೆಚ್ಚಾಗದ ಹಾಗೆ ನೋಡಿಕೊಂಡು ಕಿಡ್ನಿ ಅಥವಾ ಊರಿನರಿ ಬ್ಲಾಡರ್ ನಲ್ಲಿ ಕಲ್ಲು ಮೂಡದ ಹಾಗೆ ನೋಡಿಕೊಳ್ಳುತ್ತೆ ಅನ್ನುತ್ತೆ ಸಂಶೋಧನೆಗಳು. ಇನ್ನು ಆಗಾಗ ಕಿಡ್ನಿ ಸ್ಟೋನ್ ಸಮಸ್ಯೆ ಇರೋರು ಇದನ್ನ ಹಾಯಾಗಿ ಯಾವುದೇ ಸಮಸ್ಯೆ ಇಲ್ಲದೆ ಬಳಸಬಹುದಾಗಿದೆ. ಹತ್ತಾರು ಮಾತ್ರೆ ಔಷಧಿ ಸೇವಿಸಿ ನಿಮ್ಮ ಕಿಡ್ನಿ ಏನಾದರೂ ದಣಿದಿದ್ದರೆ, ದೇಹದಲ್ಲಿ ಮೆಟಲ್ ಅಥವಾ ಬೇರೆ ವಿಷಕಾರಿ ಅಂಶಗಳಿದ್ದರೆ ಅದನ್ನ ಹೋಗಲಾಡಿಸೋಕೆ ನುಗ್ಗೆನ ದಿನಾ ತಿನ್ನಬೇಕಂತೆ.

ಮೂಲ

16. ರಕ್ತದೊತ್ತಡ ಕಡಿಮೆ ಮಾಡುತ್ತೆ

ದೇಹದಲ್ಲಿರೊ ಕೊಲೆಸ್ಟ್ರಾಲ್ ಅಂಶವನ್ನ ಹಾಗೆ ರಕ್ತದೊತ್ತಡಾನ ಸಮತೋಲನದಲ್ಲಿಡೋಕೆ ನುಗ್ಗೆ ಸಹಾಯ ಮಾಡುತ್ತಂತೆ. ಕೊಬ್ಬಿನ ಅಂಶ ನಿಯಂತ್ರಣ ಮಾಡೋದ್ರಿಂದ ರಕ್ತನಾಳಗಳಲ್ಲಿ ಅದು ಶೇಖರಣೆ ಆಗಲ್ಲ ಹೀಗಾಗಿ ರಕ್ತದೊತ್ತಡ ಹೆಚ್ಚಾಗಲ್ಲ. ಇನ್ನು ಕಿಡ್ನಿ, ಲೀವರ್ ಹಾಗು ರಕ್ತದಲ್ಲೂ ಕೊಬ್ಬಿನ ಅಂಶ ನಿಯಂತ್ರಣ ಮಾಡುತ್ತಂತೆ ನುಗ್ಗೆ.

17. ಗಾಯ ಆದ ಜಾಗದಲ್ಲಿ ನುಗ್ಗೆ ರಸ ಹಚ್ಚಿದರೆ ಗಾಯ ಬೇಗ ವಾಸಿ ಆಗುತ್ತೆ

ಅಷ್ಟೇ ಅಲ್ಲದೇ ಕಲೆ ಉಳಿಯದ ಹಾಗೆ ನೋಡಿಕೊಳ್ಳುತ್ತೆ ಅನ್ನುತ್ತೆ ಅಂಶೋಧನೆಗಳು.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೀವು ಯಾವ ತಿಂಗಳಲ್ಲಿ ಹುಟ್ಟಿದೀರಿ ಅನ್ನೋದ್ರಿಂದ ನಿಮ್ಮ ಸ್ವಭಾವದ ಬಗ್ಗೆ ಎಷ್ಟು ಗೊತ್ತಾಗುತ್ತೆ ನೋಡಿ

ಸ್ವಭಾವ ಹಿಂಗೆ ಅಂದ ಮಾತ್ರಕ್ಕೆ ನೀವು ಬದಲಾಯಿಸಿಕೊಳಕ್ಕೆ ಆಗಲ್ಲ ಅಂತ ಅಲ್ಲ

ದಿನಾ ನ್ಯೂಸ್ ಪೇಪರ್ ಮನೆಗ್ ಬಂದ್ ತಕ್ಷಣ, ದಿನ ಭವಿಷ್ಯ, ವಾರಭವಿಷ್ಯ ನೋಡೋರ್ ಪೈಕಿ ನೀವೂನಾ? ಇವತ್ತಿನ್ ದಿನ ಹೇಗಿರತ್ತಪ್ಪ? ಏನೇನ್ ಗಂಡಾಂತರ ಕಾದಿದ್ಯೋ ಏನೋ ಅಂತ ಸ್ವಲ್ಪ ಕುತೂಹಲ ಸ್ವಲ್ಪ ಆತಂಕದಿಂದ ಓದ್ತೀರ? ಬರೀ ರಾಶಿ ಮಾತ್ರ ಅಲ್ಲ ಕಣ್ರಿ, ನೀವ್ ಯಾವ್ ತಿಂಗಳಲ್ಲಿ ಹುಟ್ಟಿದಿರ ಅನ್ನೋದ್ರು ಮೇಲೂ ನಿಮ್ ವ್ಯಕ್ತಿತ್ವ, ಗುಣ ಇನ್ನೂ ಸಾಕಷ್ಟು ವಿಷ್ಯಗಳ್ನ ಹೇಳ್ಬೋದು.

ನಿಜವಾಗ್ಲೂ ಗೊತ್ತಾ, ಹುಟ್ಟಿದ್ ತಿಂಗಳ ಆಧಾರ ಇಟ್ಕೊಂಡು ನಿಮ್ ಒಟ್ಟಾರೆ ನಡವಳಿಕೆ, ಸ್ವಭಾವ, ಬೇರೆಯೋರು ನಿಮ್ಮನ್ನ ಹೇಗ್ ನೋಡ್ತಾರೆ, ಜೀವನದ್ ಬಗ್ಗೆ ನಿಮ್ಗಿರೋ ಆಲೋಚನೆ, ಭಾವನೆಗಳು ಇದೆಲ್ಲಾನೂ ಹೀಗ್ ಹೀಗೆ ಅಂತ ಹೇಳ್ಬೋದು. ಹೇಗಪ್ಪ ಇದು ಅಂತಿರ? ನಿಮ್ ಗುಣ ಲಕ್ಷಣಗಳು, ನೀವ್ ಹುಟ್ಟಿದ್ ತಿಂಗಳಲ್ಲಿ, ನಕ್ಷತ್ರಗಳು ಯಾವ್ ಯಾವ್ ಸ್ಥಾನ್ದಲ್ಲಿ ಇದ್ವು, ಯಾವ್ ಆಕಾರ್ದಲ್ಲಿ ಇದ್ವು ಅಂತ ಲೆಕ್ಕ ಹಾಕಿ ಹೇಳ್ತಾರಂತೆ.

ಯಾವ್ ತಿಂಗಳಲ್ಲಿ ಹುಟ್ಟಿದ್ರೆ, ಎಂಥಾ ಸ್ವಭಾವ, ವ್ಯಕ್ತಿತ್ವ ಇರತ್ತೆ ಅಂತ ಇಲ್ಲಿ ಕೊಟ್ಟಿದ್ದೀವಿ. ಓದಿ...ನಿಮ್ಮ ಸ್ವಭಾವಕ್ಕೆ ತಾಳೆ ಮಾಡಿ ನಮಗೂ ಹೇಳಿ...

ಜನವರೀಲಿ ಹುಟ್ಟಿರೋರು

ಕೆಲ್ಸದ್ ವಿಷ್ಯದಲ್ಲಿ ತುಂಬಾನೇ ಕಟ್ಟುನಿಟ್ಟಾಗಿರ್ತಾರೆ ಹಾಗೆನೇ ತಮ್ಮ ಅಭಿಪ್ರಾಯವನ್ನ ನಾಲಕ್ ಜನರ ಮುಂದೆ ಹೇಳಕ್ಕೆ ಯಾವ್ ಮುಲಾಜೂ ನೋಡಲ್ಲ. ಇವ್ರಲ್ಲಿ ಹಠಮಾರಿತನ ಮತ್ತೆ ಮೊಂಡುತನ ಸ್ವಲ್ಪ ಜಾಸ್ತಿ ಇರತ್ತೆ. ಜೊತೆಗೆ, ಯಾರಾದ್ರು ಹೀಗಲ್ಲ ಹಾಗೆ ಅಂತ ಹೇಳಕ್ ಬಂದ್ರೆ ಅದನ್ನ ಒಪ್ಕೊಳೋದು ಇವ್ರ ಜಾಯಮಾನ್ದಲ್ಲೇ ಇಲ್ಲ ಕಣ್ರಿ.

ಜನವರೀಲಿ ಹುಟ್ದೋರು ಒಳ್ಳೆ ಲೀಡರ್ ಆಗೋದ್ರಲ್ಲಿ ಅನುಮಾನಾನೇ ಇಲ್ಲ. ಇವ್ರಲ್ಲಿರೋ ಛಲ ಸದಾ ಯಶಸ್ಸಿನ ಕಡೆಗೇ ಕರ್ಕೊಂಡ್ ಹೋಗತ್ತೆ ಅನ್ನೋದ್ ನಿಜ. ಆದ್ರೆ ಜೊತೆಲಿರೋರ್ ಮಾತು ಕೇಳೋದ್ ಕಮ್ಮಿ.

ಇವ್ರಲ್ಲಿರೊ ಇನ್ನೊಂದು ಅದ್ಭುತವಾದ ಗುಣ ಅಂದ್ರೆ...ತಮ್ಗೆ ಗೊತ್ತಿರೋ ವಿಷ್ಯಗಳ್ನ ಇನ್ನೊಬ್ರುಗೆ ಅರ್ಥವಾಗೋ ಹಾಗೆ ಹೇಳ್ಕೊಡ್ತಾರೆ. ಅಷ್ಟೇ ಅಲ್ಲ, ಕಲಿಯೋರೂ ಕೂಡ ತುಂಬಾ ಸುಲಭವಾಗಿ, ಆಸಕ್ತಿಯಿಂದ ಇವರು ಹೇಳೋದನ್ನ ಕೇಳ್ತಾರೆ. ಇಷ್ಟಪಟ್ಟು ಕಲಿತಾರೆ.

ಫೆಬ್ರುವರಿ

ಫೆಬ್ರುವರಿ ತಿಂಗಳಲ್ಲಿ ಹುಟ್ಟಿರೋರ್ಗೆ ಕಲಾರೇಖೆ ಉದ್ದವಾಗಿರತ್ತೆ ಅನ್ಸತ್ತೆ ಕಣ್ರಿ. ಸಖತ್ ಕ್ರಿಯೇಟಿವ್ ಆಗಿರ್ತಾರೆ ಮತ್ತೆ ಹೊಸ ಹೊಸ ಕೆಲ್ಸ ಮಾಡಕ್ಕೆ ಇಷ್ಟ ಪಡ್ತಾರೆ. ಇವ್ರಿಗೆ ಬುದ್ಧಿವಂತರ ಜೊತೆ ಚರ್ಚೆ ಮಾಡೋದು, ವಿಚಾರಗಳ್ನ ಹಂಚ್ಕೊಳದು ಅಂದ್ರೆ ಉತ್ಸಾಹ ಇರತ್ತೆ. ಅದೇ ಬುದ್ಧಿವಂತಿಕೇಲಿ ತಮಗಿಂತ ಚೂರು ಕಮ್ಮಿ ಮಟ್ಟದಲ್ಲಿರೋರ್ನ ಹತ್ರನೂ ಸೇರ್ಸಲ್ಲ.

ಇವ್ರನ್ನ ಜನ ಫ್ರೀಬರ್ಡ್ ಅಂತ ಕರೀತಾರೆ. ಯಾಕಂದ್ರೆ ಸಮಾಜದ ಕಟ್ಟುಪಾಡುಗಳು, ರೂಲ್ಸು ಇದೆಲ್ಲ ಇವ್ರಿಗೆ ಆಗ್ಬರಲ್ಲ. ಯಾವಾಗ್ಲೂ ಬಿಂದಾಸಾಗಿ ತಮಗೆ ಇಷ್ಟ ಬಂದಂಗೆ ಇರಕ್ಕೆ ನೋಡ್ತಾರೆ. ಸಮಯ ಸಿಕ್ಕಾಗೆಲ್ಲಾ ವಿಮಾನ, ರೈಲು ಹತ್ಕೊಂಡು ಊರೂರ್ ಸುತ್ತೋದು ಅಂದ್ರೆ ಭಾರಿ ಪ್ರೀತಿ. ಸಾಹಸ ಮಾಡೋದು ಮತ್ತೆ ಸುತ್ತಾಮುತ್ತ ಇರೋ ಜಾಗಗಳು, ವಿಷ್ಯಗಳ್ನ ಇನ್ನೂ ಹೆಚ್ಚು ಹೆಚ್ಚು ತಿಳ್ಕೊಳಕ್ಕೆ ಕಾಯ್ತಾನೇ ಇರ್ತಾರೆ. ಇದೇ ಇವ್ರನ್ನ ಲವಲವಿಕೆಯಿಂದ ಇಡೋದು. ಹಾಗೆನೇ ಇವರ ಥರಾನೇ ಫುಲ್ಲು ಬಿಂದಾಸಾಗಿ, ಇಂಡಿಪೆಂಡೆಂಟಾಗಿ ಇರೋರ್ ಜೊತೆ ಸಖತ್ ಮಜ ಮಾಡ್ತಾರೆ, ಚೆನ್ನಾಗಿ ಕಾಲ ಕಳಿತಾರೆ.

ಇವರದ್ದು ಇನ್ನೊಂದು ಒಳ್ಳೆ ಅಂಶ ಅಂದ್ರೆ...ಗೆಳೆತನದ ವಿಷ್ಯ ಆಗ್ಲಿ ಸಂಗಾತಿ ವಿಷ್ಯ ಆಗ್ಲಿ ತುಂಬಾನೇ ನಿಯತ್ತಾಗಿರ್ತಾರೆ :-)

ಮಾರ್ಚ್

ಮಾರ್ಚ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬಾ ಕಲ್ಪನಾಶಕ್ತಿ (ಕ್ರಿಯೇಟಿವಿಟಿ) ಇರತ್ತೆ. ಆದ್ರೆ ಜಾಸ್ತಿ ಸಮಯ ಇವರು ಮೌನವಾಗಿರಕ್ಕೆ ಮತ್ತೆ ತಮ್ಮ ಆತ್ಮಾವಲೋಕನ ಮಾಡ್ಕೊಳಕ್ಕೆ ಇಷ್ಟ ಪಡ್ತಾರೆ. ಇವರು ಇನ್ನೊಬ್ರು ಜೊತೆ ವಿಷ್ಯಗಳ್ನ ಹಂಚ್ಕೊಳೊದಿಕ್ಕಿಂತ ತಮ್ಮೊಳಗೇ ಯೋಚನೆ ಮಾಡಿ ತಲೆ ಒಳಗೇ ಮಾಸ್ಟರ್ ಪೀಸ್ಗಳ್ನ ಸೃಷ್ಟಿ ಮಾಡ್ತಾರೆ ಕಣ್ರಿ. ತಮ್ಮ ಭಾವನೆಗಳ್ನ/ಅನಿಸಿಕೆಗಳ್ನ ಹೇಳ್ಕೊಳಕ್ಕೋಸ್ಕರ ಅವರಿಗೆ ಸಾಥ್ ಬೇಕಿರತ್ತೆ. ಅದನ್ನ ಕಲೆ ತುಂಬಿಸತ್ತೆ. ತಾವಿಷ್ಟ ಪಡೋ ಕಲೆ ಮೂಲಕ ಎಲ್ಲಾನೂ ಎಕ್ಸ್ಪ್ರೆಸ್ ಮಾಡ್ತಾರೆ. ಹಾಗೆನೆ ಒಳಗೊಳಗೇ ಸಿಗೋ ಏಕಾಂತವನ್ನಾ ಮನಸಾರೆ ಅನುಭವಿಸ್ತಾರೆ.

ಬೇರೆಯೋರ ಜೊತೆ ಇವರ ಸಂಬಂಧ ಚೆನ್ನಾಗಿರತ್ತೆ. ತುಂಬಾ ನಯವಾಗಿ, ಕಾಳಜಿಯಿಂದ ನಡ್ಕೊತಾರೆ ಆದ್ರೆ ತಮ್ ಬಗ್ಗೆ ಮಾತ್ರ ಜಾಸ್ತಿ ವಿಷ್ಯ ಬಿಟ್ಕೊಡಲ್ಲ. ಮುಚ್ಚಿಟ್ಕೊಳಕ್ಕೆ ನೋಡ್ತಾರೆ. ಈ ಮಾರ್ಚಲ್ಲಿ ಹುಟ್ಟಿರೋರ್ ಬಗ್ಗೆ ಇನ್ನೊಂದ್ ಮುಖ್ಯವಾದ್ ವಿಷ್ಯ ಅಂದ್ರೆ ಇವರು ಯಾವಾಗ್ಲೂ ನಿಶ್ಯಬ್ಧವಾದ, ಪ್ರಶಾಂತವಾದ ವಾತಾವರಣ ಹುಡುಕ್ಕೊಂಡ್ ಹೋಗ್ತಾರೆ. ಜನರ ಜಾತ್ರೆಯಿಂದ, ಗಲಾಟೆಯಿಂದ ದೂರ ಇರಕ್ಕೆ ಇಷ್ಟ ಪಡ್ತಾರೆ.

ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಹುಟ್ಟಿರೋರು ಯಾವಾಗ್ಲೂ ಬೇರೆಯೋರು ತಮ್ಮನ್ನ ಗಮನಿಸ್ತಿರ್ಲಿ ಅಂತ ಹಾತೊರಿತಿರ್ತಾರೆ ಜೊತೆಗೆ ಎಲ್ರೂ ತಮ್ಮ ಬಗ್ಗೆನೇ ಮಾತಾಡ್ಬೇಕು, ಹೊಗಳಬೇಕು - ಒಟ್ನಲ್ಲಿ ಸಖತ್ ಪ್ರಚಾರ ಸಿಗ್ಬೇಕು ಅಂತ ಆಸೆ ಪಡ್ತಾರೆ. ಇವ್ರಿಗೆ ಇನ್ನೊಬ್ರು ಹಾಗ್ ಮಾಡು ಹೀಗ್ ಮಾಡು ಅಂತ ಮೂಗ್ ತೂರ್ಸೋದು ಇಷ್ಟ ಆಗಲ್ಲ. ಬದಲಿಗೆ ತಮ್ಮದೇ ರೀತೀಲಿ ಕೆಲ್ಸಕಾರ್ಯನ ಮಾಡ್ತಾರೆ, ಬೇರೆಯೋರ್ನೂ ಆ ದಾರಿಲೇ ನಡೆಸ್ತಾರೆ.

ಯಾವಾಗ್ಲೂ ಹೊಸ ಹೊಸ ಸಾಹಸಗಳ್ನ ಮಾಡಕ್ಕೆ ಅವಕಾಶ ಸಿಗತ್ತಾ? ಅಂತ ನೋಡ್ತಿರ್ತಾರೆ ಮತ್ತೆ ಎಲ್ಲಾನು ಚಿಟಿಕೆ ಹೊಡಿಯೋದ್ರಲ್ಲಿ ಮಾಡ್ಬೇಕು, ಬಯಸಿದ ತಕ್ಷಣ ಸಿಗ್ಬೇಕು ಅನ್ನೋ ಆತುರದಲ್ಲಿರ್ತಾರೆ. ಯಾವ್ದೇ ವಿಷ್ಯಕ್ಕಾಗ್ಲೀ ಮೊದ್ಲು ಮನಸ್ಸಿಗೆ ಬಂದ ಹಾಗೆ ನಡ್ಕೊತಾರೆ. ಭವಿಷ್ಯದ ಬಗ್ಗೆ ತಲೆ ಕೆಡುಸ್ಕೊಳಲ್ಲ. 'ನೆನ್ನೆ ನೆನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ' ಹಾಡು ಇವ್ರಿಗೆ ಹೇಳಿ ಮಾಡಿಸ್ದಂಗಿದೆ ಕಣ್ರಿ. ಜೀವ್ನ ಹೇಗ್ ಬರತ್ತೋ ಹಾಗ್ ತೊಗೊಂಡ್ ಹೋಗ್ತಿರ್ತಾರೆ.

ಕೆಲ ಸಲ ಇವರು ಜಗಳಗಂಟ್ರು ಥರ, ಜಿಗುಪ್ಸೆ ಬರೋ ಥರ ಮಾತಾಡ್ತಾರೆ ಅನ್ನೋ ಅಪವಾದ ಹೊತ್ಕೊಬೇಕಾಗತ್ತೆ. ಆದ್ರೆ ಅವರು ಆಡೋ ಮಾತ್ಗಳು ಮನಸ್ಸಿಂದ ಬಂದಿರತ್ತೆ. ಯಾವ್ದೂ ಬೇಕೂಂತ ಆಡೋದಲ್ಲ. ಜೊತೆಗೆ ತಮ್ಗೆ ಏನನ್ಸತ್ತೆ ಅಂತ ಬೇರೆಯೋರಿಗೆ ಹೇಳಕ್ಕೆ ಹಿಂದೆ ಮುಂದೆ ನೋಡಲ್ಲ. ಒಂಥರ ತಮ್ ವಿಷ್ಯದಲ್ಲಿ ಫಿಲ್ಟರ್ ಇರಲ್ಲ. ಬೇಜಾರಾಗಿದ್ರೆ ಮುಲಾಜಿಲ್ದೇ ಹೇಳ್ಕೊತಾರೆ.

ಮೇ

ಮೇ ತಿಂಗಳಲ್ಲಿ ಹುಟ್ತಿರೋರು ತುಂಬಾನೇ ಚಂಚಲ ಮನಸ್ಸಿನೋರು. ಇವತ್ತು ಒಂದ್ ಬೇಕು ಅಂದ್ರೆ, ನಾಳೆ ಇನ್ನೇನೋ ಬೇಕು ಅಂತಾರೆ. ಇವ್ರು ತಮ್ ಭಾವನೆಗಳ್ನ ಚೆನ್ನಾಗಿ ಎಕ್ಸ್ಪ್ರೆಸ್ ಮಾಡ್ತಾರೆ ಮತ್ತೆ ಜೀವನದ ಬೇರೆ ಬೇರೆ ಹಿನ್ನೆಲೆ, ಹಂತದಲ್ಲಿರೋರ್ ಹತ್ರ ಮಾತಾಡಕ್ಕೆ ಇಷ್ಟ ಪಡ್ತಾರೆ. ಒಂಟಿಯಾಗಿರಕ್ಕೆ ಸುತಾರಾಮ್ ಆಗಲ್ಲ ಇವ್ರ ಕೈಲಿ. ಯಾವಾಗ್ಲೂ ಸೋಶಿಯಲ್ ಲೈಫಲ್ಲಿ ಚುರುಕಾಗಿರ್ತಾರೆ.

ಇವರು ಉತ್ತೇಜನ ಕೊಡೋವಂಥ, ಬುದ್ಧಿವಂತಿಕೆ ಇರೋವಂಥ ಮಾತುಕತೆಗಳಲ್ಲಿ ಭಾಗಿಯಾಗಕ್ಕೆ ಇಷ್ಟಪಡ್ತಾರೆ. ಆದ್ರೆ ಅಂಥಾ ಮಾತುಕಥೆ ಬೋರ್ ಹೊಡುಸ್ಬಾರ್ದು. ಬದಲಿಗೆ ತುಂಬಾ ಮೋಜು ಮಸ್ತಿ ಉತ್ಸಾಹದಿಂದ ಇರ್ಬೇಕು. ಆಗ ಖುಷಿಯಿಂದ ಆ ಗುಂಪಲ್ಲಿ ಸೆರ್ಕೊತಾರೆ.

ತುಂಬಾ ಬೇಗ ಬೋರ್ ಆಗ್ಬಿಡ್ತಾರೆ. ಒಂದ್ ವಿಷ್ಯ ಜಾಸ್ತಿ ಹೊತ್ತು ಇವ್ರನ್ನ ಹಿಡಿದು ಇಡಕ್ಕಾಗಲ್ಲ, ಆಕರ್ಷಿಸಕ್ಕೆ ಸಾಧ್ಯಯಿಲ್ಲ. ಹಾಗಾಗಿ ತಮ್ಮನ್ನ ತಾವು ಖುಷಿಯಾಗಿಟ್ಕೊಳಕ್ಕೆ, ಮಜಾ ಮಾಡಕ್ಕೆ ಸದಾ ಹೊಸ ಹೊಸ ಉಪಾಯಗಳ್ನ ಹುಡುಕ್ತಾನೆ ಇರ್ತಾರೆ.

ಜೂನ್

ಜೂನ್ ತಿಂಗಳಲ್ಲಿ ಹುಟ್ಟಿರೋರು ಇನ್ನೊಬ್ರು ಭಾವನೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿರ್ತಾರೆ. ಹಾಗೆನೆ ಬೇರೆಯೋರ್ನ ಕಾಳಜಿ ಮಾಡೋ ಗುಣ ಇದೆ. ಸಖತ್ ಸಂಕೋಚದ ಸ್ವಭಾವ್ದೋರು ಮತ್ತೆ ಮೆತ್ತಗೆ ಮಾತಾಡೊರು. ಇವ್ರ ಆ ಸ್ವಭಾವನೇ ಜನ ಮೆಚ್ಕೊಳ್ಳೊದು.

ತುಂಬಾನೇ ಕ್ರಿಯೇಟಿವಾಗಿರೋ ಇವರು ಭವಿಷ್ಯದ್ ಬಗ್ಗೆ ದೂರದೃಷ್ಟಿ ಇಟ್ಕೊಂಡಿರ್ತಾರೆ. ಹೊಸ ಹೊಸ ಆಲೋಚನೆಗಳ್ನ ಹೇಗೆಲ್ಲಾ ಸೃಷ್ಟಿಮಾಡ್ಬೋದು? ತಮ್ಮ ಐಡಿಯಾಗಳ್ನ ಹೇಗೆಲ್ಲಾ ಕಾರ್ಯರೂಪಕ್ಕೆ ತರ್ಬೋದು? ಅನ್ನೋದ್ರ ಬಗ್ಗೆ ಪ್ಲ್ಯಾನ್ ಮಾಡ್ತಿರ್ತಾರೆ.

ಇವರು ತಮ್ಮ ಭಾವನೆಗಳ್ನ, ತಮ್ಗೆ ಅನ್ಸಿದ್ದನ್ನ ಅಷ್ಟು ಸುಲಭವಾಗಿ ಹೊರಗೆ ಹೇಳ್ಕೊಳಲ್ಲ ಆದ್ರೆ ಮನಸ್ಸಿನ ಒಳಗೆ ತಮ್ಮದೇ ಒಂದ್ ಪ್ರಪಂಚ ಕಟ್ಕೊಂಡಿರ್ತಾರೆ. ಅದನ್ನ ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳೊದು ಅಂತ ಮಾತ್ರ ಗೊತ್ತಾಗದೆ ಒದ್ದಾಡ್ತಾರೆ.

ಜುಲೈ

ಇವರು ತುಂಬಾ ಬಹಿರ್ಮುಖಿಗಳು ಅಂದ್ರೆ ಮನಸ್ಸಿಗೆ ಏನೇ ಬಂದ್ರೂ ಅದು ಹೊರಗೇ ಬಂದೇ ಬರತ್ತೆ. ಒಂಥರ ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇರಲ್ಲ. ಜೊತೆಗೆ ಪಾದರಸದ ಥರ. ಯಾವ್ದಾದ್ರು ಕೆಲ್ಸ ಮಾಡ್ಬೇಕು ಅಂದ್ರೆ ಯಾವ್ ಕಾರಣನೂ ಬೇಡ, ಯಾರ್ ಪ್ರೇರಣೆನೂ ಬೇಡ. ಸಾಹಸ ಮಾಡೋದು ಸಖತ್ ಇಷ್ಟ ಆಗತ್ತೆ ಹಾಗೆನೇ ಚೆನ್ನಾಗಿ, ಒಳ್ಳೆ ರೀತಿಲಿ ಕಾಲ ಕಳಿಯಕ್ಕೆ ಇಷ್ಟಪಡ್ತಾರೆ.

ಹೊರಗಿಂದ ನೋಡೋರ್ಗೆ ಇವರು ತುಂಬಾ ಆತ್ಮವಿಶ್ವಾಸದಿಂದ ನಗುನಗ್ತಾ ಇರೋಹಾಗ್ ಕಾಣ್ಸಿದ್ರೂ, ಒಳಗೆ ದೊಡ್ಡ ಮಟ್ಟದಲ್ಲೇ ನೋವು, ದುಃಖ ಮತ್ತೆ ಕರಾಳವಾದ ಸತ್ಯ ಬಚ್ಚಿಟ್ಕೊಂಡಿರ್ತಾರೆ.

ಇನ್ನು ಜುಲೈನಲ್ಲಿ ಹುಟ್ಟಿರೋರ್ಗೆ ಎನರ್ಜಿ ಸಖತ್ತಾಗಿರತ್ತೆ. ಈ ಕಾರಣಕ್ಕೇ ಬೇರೆಯೋರು ಇವ್ರ ಜೊತೆ ಸುತ್ತಾಡಕ್ಕೆ, ತಿರುಗಾಡಕ್ಕೆ ಕಾಯ್ತಿರ್ತಾರೆ.

ಆಗಸ್ಟ್

ಆಗಸ್ಟ ಅಂದ ತಕ್ಷಣ, ಇವ್ರು ಹುಟ್ತಾನೇ ಲೀಡರ್ ಆಗೋ ಎಲ್ಲಾ ಗುಣ ಪಡ್ಕೊಂಡ್ ಬಂದಿರ್ತಾರೆ. ತಮ್ ಅಭಿಪ್ರಾಯಗಳ್ಗೆ ಅದೆಷ್ಟೇ ಕಷ್ಟ ಆದ್ರೂ ಭಯ ಪಡ್ದೇ ಅಂಟುಕೊಂಡಿರ್ತಾರೆ. ಬಿಟ್ಕೊಡಲ್ಲ. ಇವ್ರು ತುಂಬಾ ಬಾಸಿಸಮ್ ಮಾಡ್ತಾರೆ, ತಮ್ ಅಭಿಪ್ರಾಯಗಳ್ನ ಇನ್ನೊಬ್ರು ಮೇಲೂ ಹೇರ್ತಾರೆ ಅನ್ನಿಸ್ಬೋದು ಆದ್ರೆ ಸಿಕ್ಕಾಪಟ್ಟೆ ದೊಡ್ಡಮನಸ್ಸಿನೋರು ಕಣ್ರಿ ಇವ್ರು.

ಇನ್ನು ಎಲ್ಲಾ ವಿಷ್ಯಕ್ಕೂ ತುಂಬಾನೇ ಯೋಚನೆ ಮಾಡೊ ಇವ್ರು, ಸ್ವಲ್ಪ ಏಮಾರಿದ್ರೂ ತಮ್ಮ ಗಟ್ಟಿಯಾಗಿರೋ ಶಿಸ್ತಿನಿಂದ ನಡ್ಕೊಂಡ್ ಬರ್ತಿರೋ ಜೀವನನ ಕಗ್ಗಂಟು ಮಾಡ್ಕೊತಾರೆ. ತಮ್ಮ ವೃತ್ತಿಜೀವನದಲ್ಲಿ ಸುಖವಾಗಿ ಮೇಲೆ ಬರ್ತಾರೆ. ಯಾಕಂದ್ರೆ ಅವ್ರು ಮಾಡೋ ಕೆಲ್ಸದಲ್ಲಿ ಲಾಭ-ನಷ್ಟಗಳನ್ನ ಯೋಚೆನೆ ಮಾಡಿನೇ ಮುಂದುವರೆಯೋದು. ಜೀವನ್ದಲ್ಲೂ ಇವ್ರು ಇಡೋ ಒಂದೊಂದು ಹೆಜ್ಜೆನೂ ಲಾಜಿಕಲ್ಲಾಗಿ, ಹಂತಹಂತವಾಗಿ ಇಡೋದ್ರಿಂದ ವೃತ್ತಿನಲ್ಲೂ ನಿಭಾಯಿಸಕ್ಕೆ ಸಹಾಯ ಆಗತ್ತೆ.

ತಮ್ಮ ಭಾವನೆಗಳ್ನ ಅಷ್ಟು ಸುಲಭವಾಗಿ ವ್ಯಕ್ತಪಡಿಸಲ್ಲ. ಹಾಗಾಗಿ, ಕೆಲವು ಸೂಕ್ಷ್ಮ ಸಂದರ್ಭಗಳು ಅವರ ಕೈ ಜಾರಿ ಹೋಗತ್ವ್ಗೆ. ಜನರ ,ಮನಸ್ಸಿಗೆ ನೋವುಂಟು ಮಾಡತ್ವೆ.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬ ಬೇಗ, ಸುಲಭವಾಗಿ ನಿರಾಶೆಯಾಗತ್ತೆ. ಯಾಕಂದ್ರೆ ಇವರು ಇನ್ನೊಬ್ರಿಂದ ಸಿಕ್ಕಾಪಟ್ಟೆ ಅಪೇಕ್ಷೆ ಇಟ್ಕೊಂಡಿರ್ತಾರೆ. ಇನ್ನೊಂದ್ ಕಡೆ ಇವ್ರಿಗೆ ಒಂಥರ ಮೊಂಡುತನ ಇರತ್ತೆ. ಏನಂದ್ರೆ, ಬೇರೆಯೋರ್ ಗ್ರಹಚಾರ ಕೆಟ್ಟಿದ್ರೆ, ಅವ್ರ ಜೊತೆ ಮನಸ್ತಾಪ ಬಂದ್ರೆ, ಸಾಯೋತಂಕ ಹಗೆ, ದ್ವೇಷ ಸಾಧಿಸ್ತಾರೆ.

ಇವರನ್ನ ಮಿಸ್ಟರ್ ಅಥ್ವಾ ಮಿಸ್ಟ್ರೆಸ್ ಪರ್ಫೆಕ್ಟ್ ಅನ್ಬೋದು. ತಮ್ಮ ಹಾಗೇ ಬೇರೆಯೋರೂ ಇರ್ಬೇಕು ಅಂತ ಎದುರು ನೋಡ್ತಾರೆ. ಇದೆಲ್ಲದರ ಜೊತೆಗೆ, ಇವರು ತುಂಬಾನೇ ಕ್ರಿಯೇಟಿವ್ ವ್ಯಕ್ತಿ. ಕಾಳಜಿ-ಕನಿಕರ ಇರೋರು ಮತ್ತೆ ಅವಕಾಶ ಸಿಕ್ಕಾಗೆಲ್ಲಾ ಇನ್ನೊಬ್ರುಗೆ ಸಹಾಯ ಮಾಡೋ ಗುಣ ಇರೋರು.

ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರೋರು, ತಾವು ಮಾಡೋ ಎಲ್ಲಾ ಕೆಲ್ಸದಲ್ಲೂ ಬ್ಯಾಲೆನ್ಸ್ ಇರ್ಬೇಕು ಮತ್ತೆ ಕೆಲ್ಸ ಮಾಡೋ ಹಂತದಲ್ಲಿ ಗಟ್ಟಿತನ ಇರ್ಬೇಕು ಅಂತ ಬಯಸ್ತಾರೆ. ಜೊತೆಗೆ ಜೀವನದ ಬಗ್ಗೆ ಒಂದು ಪಾಸಿಟಿವ್ ದೃಷ್ಟಿಕೋನ ಇರತ್ತೆ. ಇವ್ರಿಗೆ ಹೊಡೆದಾಟ, ಜಗಳ ಇವಲ್ಲ ಇಷ್ಟ ಆಗಲ್ಲ. ಸಾಧ್ಯವಾದಷ್ಟೂ ಮಟ್ಟಿಗೆ ತಡಿಯಕ್ಕೆ ನೋಡ್ತಾರೆ.

ಇವ್ರ ಸೋಶಿಯಲ್ ಲೈಫ್ ಸಖತ್ ಚುರುಕಾಗಿರತ್ತೆ ಮತ್ತೆ ಗೆಳೆತನ ಅಂದ್ರೆ ಪ್ರಾಣ ಬಿಡ್ತಾರೆ. ತುಂಬಾ ಆಕರ್ಷಕವಾಗಿರ್ತಾರೆ ಮತ್ತೆ ಮಾತುಗಾರರೂ ಕೂಡ. ಯಾವಾಗ್ಲೂ ಜನರ ಮಧ್ಯ ಇರಕ್ಕೆ ಇಷ್ಟಪಡೋ ಇವ್ರು, ಇಂಡಿಪೆಂಡೆಂಟ್ ವ್ಯಕ್ತಿಗಳು ಕಣ್ರಿ.

ನವಂಬರ್

ನವಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾ ಗುಟ್ಟುಗಳ್ನ ಇಟ್ಕೊಂಡಿರ್ತಾರೆ ಮತ್ತೆ ತಮ್ಮ ನಿಜವಾದ ಭಾವನೆಗಳ್ನ ಬೇರೆಯೋರಿಂದ ಬಚ್ಚಿಡ್ತಾರೆ. ಬೇರೆಯೋರ ಸಲಹೆ, ಮಾರ್ಗದರ್ಶನ ಇಷ್ಟಪಡಲ್ಲ. ತಮ್ಮ ಜೀವನನ ತಾವೇ ಒದ್ದಾದ್ಕೊಂಡಾದ್ರೂ ರೂಪುಸ್ಕೊಳ್ತಾರೆ.

ಇವ್ರಿಗೆ ಈ ಭಯ, ಹೆದರಿಕೆ ಅನ್ನೋದೆಲ್ಲಾ ದೂರ. ಹಾಗಾಗಿ ಎಂಥಾ ಪರಿಸ್ಥಿತಿ ಎದುರಾದ್ರೂ, ಹಿಂದೆ ಮುಂದೆ ಯೋಚನೆ ಮಾಡ್ದೆ ಮೊದ್ಲು ಅದನ್ನ ಪರಿಹಾರಮಾಡಕ್ಕೆ ಹೊರಟುಬಿಡ್ತಾರೆ. ಅದನ್ನ ಸರಿಯಾಗಿ ಅರ್ಥ ಮಾಡ್ಕೊಂಡು ಆಮೇಲೆ ಮುಂದುವರಿಯೋಣ ಅಂತೆಲ್ಲಾ ಇಲ್ವೇ ಇಲ್ಲ. ಪರಿಣಾಮ ಏನಾಗ್ಬೋದು ಅನ್ನೋದ್ರು ಬಗ್ಗೆ ಕಿಂಚಿತ್ತೂ ತಲೆಕೆಡುಸ್ಕೊಳಲ್ಲ.

ಇವರ ಜೀವನದಲ್ಲಿ ಯಾವ್ ಅಡೆತಡೆ ಬಂದ್ರೂ ನಿಲ್ಲಲ್ಲ - ನುಗ್ತಾನೇ ಇರ್ತಾರೆ. ಅವ್ರ ದೊಡ್ದ ಆಸ್ತಿ ಅಂದ್ರೆ ಮೊಂಡು ಧೈರ್ಯ ಮತ್ತೆ ಜೀವನದ ಬಗ್ಗೆ ಇರೋ ಅತಿಯಾದ ಭಾವುಕತೆ.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾನೆ ಸಾಹಸ ಮಾಡೊ ಜನ ಮತ್ತೆ ಉದಾರ ಮನೋಭಾವದೋರು. ಆದ್ರೆ ಕೆಲವುಸಲ ತಮ್ಮ ಪ್ರತಿಷ್ಟೆ, ಅಹಂಕಾರ್ದಿಂದ ಬೇರೆಯೋರ್ ಜೊತೆ ಸಣ್ಣ ಪುಟ್ಟ ಮನಸ್ತಾಪ ಆಗತ್ತೆ. ಇವ್ರು ಯಾವಾಗ್ಲೂ ಹರಿಯೊ ನದಿ ಥರ. ಒಂದೇ ಕಡೆ ಅಥವಾ ಒಂದೇ ಪರಿಸ್ಥಿತೀಲಿ ಜಾಸ್ತಿ ಕಾಲ ಇರಕ್ಕಾಗಲ್ಲ ಇವ್ರ ಕೈಲಿ.

ಸ್ವಲ್ಪ ಸಿಡುಕುತನ ಜಾಸ್ತಿ. ಆದ್ರೆ ಬೇರೆಯೊರಿಗೆ ಸಖತ್ತಾಗಿ ನಗೆಹನಿ ಮಾಡ್ಕೊಂಡು ಟೈಮ್ ಪಾಸ್ ಮಾಡಿಸ್ತಾರೆ. ಅವರ ಉದಾರತೆ ಇದ್ಯಲ್ಲ... ಅದು ಅವರ ಜೀವನದ ಎಲ್ಲಾ ಏರಿಳಿತಗಳ್ನೂ ಪರ್ಫೆಕ್ಟಾಗಿ ಬ್ಯಾಲೆನ್ಸ್ ಮಾಡತ್ತೆ.

ಏನಂತೀರಾ? ನೀವು ಯಾವ ತಿಂಗಳಲ್ಲಿ ಹುಟ್ಟಿದ್ದು? ನಿಮ್ಮ ಸ್ವಭಾವ ನೋಡ್ಕೋಂಡ್ರಾ? ಸರಿ ಇದ್ಯಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: