ಎಷ್ಟೇ ಕಷ್ಟಪಟ್ಟು ದುಡಿದ್ರೂ ಕೈಯ್ಯಲ್ಲಿ ದುಡ್ಡು ನಿಲ್ತಿಲ್ಲ ಅಂತಿದ್ರೆ ಈ 19 ಕೆಲಸ ಮಾಡಿ

ಒಟ್ಟಿಗೇ ಮೂರು ತಿಂಗಳು ಮನೆ ಖಾಲಿ ಬಿಡ್ಬೇಡಿ

ನೀವು ಎಷ್ಟೇ ಕಷ್ಟಪಟ್ಟು ಹಣ ಸಂಪಾದನೆ ಮಾಡಿದ್ರೂ ನಿಮ್ಮ ಕೈಯಲ್ಲಿ ದುಡ್ಡು ನಿಲ್ತಿಲ್ಲ ಅನ್ಸುತ್ತಾ? ಗಳಿಸಿದ್ದೆಲ್ಲ ನೀರಿನ ಹಾಗೆ ಖರ್ಚಾಗ್ತಾ ಇದ್ಯಾ? ನಿಮಗೆ ಸಮಯಕ್ಕೆ ಬೇಕಾದಾಗ ಉಪಯೋಗಿಸ್ಕೊಳಕ್ಕೆ ದುಡ್ಡು ಉಳಿಸ್ಕೊಬೇಕಾದ್ರೆ ಈ 20  ಉಪಾಯ ಮಾಡಿ

1. ದಿನ ಬೆಳಗ್ಗೆ ದೇವರಿಗೆ ಹೂವು ಹಾಕಿ. ಸಾಯಂಕಾಲ ಆಗ್ತಿದ್ದಂಗೆ ಬಾಡಿರೋ / ಹೇಳೇ ಹೂವನ್ನ ತೆಗೆಯೋದಕ್ಕೆ ಮರೀಬೇಡಿ. ಹಳೆ ಹೂವು ಹಾಗೇ ಬಿಡೋದ್ರಿಂದ ಕೆಟ್ಟ ಶಕ್ತಿ ಮನೆ ತುಂಬ ಹರಡುತ್ತೆ.

2. ಮನೆ ತುಂಬಾ ಸಾಮಾನು ಎಲ್ಲಿ ಅಂದ್ರೆ ಅಲ್ಲಿ ಹರಡಬೇಡಿ, ಎಲ್ಲಿ ಅಂದ್ರೆ ಅಲ್ಲಿ ಗುಡ್ಡೆ ಹಾಕ್ಬೇಡಿ. ಎಲ್ಲಾ ನೀಟಾಗಿ ಎತ್ತಿಡಿ. ಆಗಾಗ ಕ್ಲೀನ್ ಮಾಡಿ ಬೇಡದೆ ಇರೋ ಸಾಮಾನು ಬಿಸಾಡಿ.

ಮೂಲ

3. ಹಾಲು, ಹಾಲಿನ ಪದಾರ್ಥಗಳಿಗೆ ಏನೂ ಮುಚ್ಚದೇ ಹಾಗೆ ಇಡ್ಬೇಡಿ. ಒಂದು ವೇಳೆ ಹಾಲು ಬಿಸಿ ಇದ್ರೆ ಒಂದು ತೆಳುವಾದ ತಟ್ಟೆ ಮುಚ್ಚಿ ಆಮೇಲೆ ಎತ್ತಿಡಿ.

4. ಚಪ್ಪಲಿ, ಶೂ-ಸಾಕ್ಸ್ ಹಾಕಿಕೊಂಡು ಮನೆ ಒಳಗೆ ಬಂದು ತೆಗಿಬೇಡಿ. ಮನೆ ಹೊರಗೆ ಒಂದು ಜಾಗ ನಿಗದಿ ಮಾಡಿ ಅಲ್ಲೇ ಬಿಟ್ಟು ಒಳಗೆ ಬನ್ನಿ. ಶೂ ಸ್ಟಾಂಡ್ ಹೊರಗೇ ಇಡಿ, ಮನೆ ಒಳಗಲ್ಲ.

ಮೂಲ

5. ರೊಟ್ಟಿ, ಚಪಾತಿಯಂತ ತಿಂಡಿ ಮಾಡಿದಾಗ ಮೊದಲನೇದು ಪ್ರಾಣಿಗಳಿಗೆ ಅಂತ ಎತ್ತಿಡಿ. ಅದ್ರಲ್ಲೂ ಇದನ್ನ ಹಸೂಗ್ ತಿನ್ಸಿ. ಇದ್ರಿಂದ ಮನೆ ಅಭಿವೃದ್ಧಿ ಹೊಂದುತ್ತೆ, ಸಮೃದ್ಧಿಯಿಂದ ಇರುತ್ತೆ. ಹತ್ತಿರದಲ್ಲಿ ಹಸು ಇಲ್ಲ ಅಂದ್ರೆ ನಾಯಿಗೆ ತಿನ್ನಿಸಿದ್ರೂ ಪರವಾಗಿಲ್ಲ.

6. ಮನೆಯೊಳಗೇ ಬೆಳೆಸಬಹುದಾದ ಕೆಲವು ಗಿಡಗಳನ್ನ ಬೆಳೆಸಿ. ಇದು ನಮಗೆ ಆಕ್ಸಿಜನ್ ಕೊಡೋದಲ್ದೆ ಮನೆಯಲ್ಲಿ ಸಮೃದ್ಧಿ ತುಂಬಕ್ಕೆ ಬೇಕಾಗಿರೋ ಒಳ್ಳೆ ವಿಷಯಗಳ, ಒಳ್ಳೆ ಶಕ್ತಿಗಳ ಮಹಾಪೂರಾ ಹರಿಯೋ ಹಾಗೆ ಮಾಡುತ್ತೆ.

ಮೂಲ

7. ಪಾಪಸ್ಕಳ್ಳಿ ತರದ (ಕ್ಯಾಕ್ಟಸ್ ) ಮುಳ್ಳಿನ ಗಿಡಗಳನ್ನ ಮನೆಯೊಳಗೆ ಇಟ್ಕೋಬೇಡಿ. ಇದು ಒಳಗಿದ್ರೆ ದರಿದ್ರ ಅಂಟಿಕೊಳ್ಳುತ್ತೆ, ಮನೆಯವರ ಆರೋಗ್ಯ ಹಾಳಾಗುತ್ತೆ ಅಂತಾರೆ.

8. ತುಳಸಿ ಇಟ್ಟು ದಿನಾ ಪೂಜೆ ಮಾಡೋದ್ರಿಂದ ಶಾಂತಿ, ನೆಮ್ಮದಿ, ಸಮೃದ್ಧಿ ಹೇಗೆ ಸಿಗುತ್ತೆ ಅಂತ ಗೊತ್ತಿರೋದೇ. ಆದ್ರೆ ಇದು ದಕ್ಷಿಣ ಮೂಲೇಲಿದ್ರೆ ನಿಮಗೂ ನಿಮ್ಮ ಮನೆಯರಿಗೂ ತೊಂದರೆಯಾಗುತ್ತಂತೆ. ಇದು ಸರಿಯಾದ ಜಾಗದಲ್ಲಿರೋಹಾಗೆ ನೋಡ್ಕೊಳಿ.

ಮೂಲ

9. ಅರಳಿ ಮರ ಆರೋಗ್ಯಕ್ಕೆ ಒಳ್ಳೇದು ಅಂತ ಗೊತ್ತಿದೆ. ಆದ್ರೆ ಇದ್ರಲ್ಲಿ ದುಷ್ಟ ಶಕ್ತೀನೂ ಇದೆ ಅಂತಾರೆ. ಇದು ಮನೆಯ ಪೂರ್ವ ಭಾಗದಲ್ಲಿದ್ರೆ ಮನೆಯವರಿಗೆ ಒತ್ತಡ, ಭಯ ಕಾಡುತ್ತಂತೆ. ಇತ್ತೀಚಿಗೆ ಬೊನ್ಸೈ ರೀತಿಯಲ್ಲಿ ಎಲ್ಲ ರೀತಿಯ ಮರ ಗಿಡ ಸಿಗುತ್ತೆ. ಹಾಗೇನಾದ್ರೂ ತಂದು ಇಟ್ಕೋಳೋವರಿದ್ರೆ ಇದರ ಬಗ್ಗೆ ಎಚ್ಚರಿಕೆ ಇರ್ಲಿ.

10. ಆಲದ ಮರ, ಅದ್ರಲ್ಲೂ ವಯಸ್ಸಾಗಿರೋ ಆಲದ ಮರ ಮನೆಯ ಪೂರ್ವ ದಿಕ್ಕಲ್ಲಿದ್ರೆ ಮನೆಯವರಿಗೆ ರಕ್ಷಣೆ ಕೊಡುತ್ತೆ, ಆರ್ಥಿಕ ಸ್ಥಿತೀನೂ ಚನ್ನಾಗಾಗತ್ತೆ.

ಮೂಲ

11. ನಿಮ ಮನೇಲಿ ವಾಸ್ತು ದೋಷ ಇದ್ರೆ ನವಚಂಡಿ ಯಾಗ, ಶಾಂತಿಪಥ ಯಾಗ ಹಾಗೆ ಅಗ್ನಿಹೋತ್ರ ಯಜ್ಞ ಆಗಾಗ ಮಾಡ್ತಾ ಇದ್ರೆ ಎಲ್ಲರಲ್ಲರೋ ನಕಾರತ್ಮಕ ಭಾವನಗಳೂ, ಕೆಟ್ಟ ಶಕ್ತಿಗಳೂ ಹೋಗುತ್ತಂತೆ.

12. ಹೊಸ ಮನೆಗೆ ಹೋಗಕ್ಕೆ ಮುಂಚೆ ಗಣೇಶ ಪೂಜೆ, ನವಗ್ರಹ ಶಾಂತಿ, ವಾಸ್ತು ಪುರುಷ ಪೂಜೆ ಮಾಡಿ ಒಳಗೆ ಹೋಗಿ.

ಮೂಲ

13. ಇಷ್ಟೆಲ್ಲಾ ಹೋಮ ಹವನ ಮಾಡೋದು ಕಷ್ಟ ಅನ್ಸಿದ್ರೆ, ಸುಲಭ ಪರಿಹಾರ ಅಂದ್ರೆ ಒಂದು ಕೆಂಪು ಬಟ್ಟೇಲಿ ಕೆಂಪು ಮಣ್ಣು. ಮರಳು, ಗೋಡಂಬಿ, ಒಂದು ಸಣ್ಣ ಕಲ್ಲು... ಇದನ್ನೆಲ್ಲಾ ಸುತ್ತಿ ಪಶ್ಚಿಮ ದಿಕ್ಕಲ್ಲಿ ಮಂಗಳವಾರ ಇಡಿ. ದಿನ ಪ್ರಾರ್ಥನೆ ಮಾಡಿ. ವಾಸ್ತು ದೋಷ ಹೋಗುತ್ತೆ.

14. ಹೊಸ ಮನೆ ಕಟ್ಟೋವಾಗ ಹಳೆ ಬಾಗಿಲು, ನಿಲವು,ಚಿಲಕ ಇದನ್ನೆಲ್ಲಾ ಬಳಸಿದ್ರೆ ವಾಸ್ತು ದೋಷ ಆಗುತ್ತೆ.

ಮೂಲ

15. ಮನೆ ಒಳಗೆ ಬರೋವಾಗ ನಿಮ್ಮ ಕಾಲು ಮುಂದಿನ ಬಾಗಿಲಿಗೆ ತಗುಲದ ಹಾಗೆ ನೋಡ್ಕೊಳ್ಳಿ. ಅಷ್ಟೇ ಅಲ್ಲ ಈ ಬಾಗಿಲಿಗೆ ಸ್ವಸ್ತಿಕ್ ಚಿಹ್ನೆ ಹಾಕಿದ್ರೆ ಸಮೃದ್ಧಿ ಗ್ಯಾರೆಂಟಿ.

16. ಪ್ರತಿಮನೇಲೂ ಒಂದಾದ್ರೂ ಗಣೇಶನ ವಿಗ್ರಹ ಇರ್ಬೇಕು, ದಿನ ಪೂಜೇನೂ ಮಾಡಿ. ಸುತ್ತ ಮುತ್ತ ಯಾವಾಗ್ಲೂ ಕ್ವೀನಾಗಿದ್ದು, ಧೂಳು, ಕೊಳೆ ಸೇರದೆ ಇರೋ ತರ ನೋಡ್ಕೊಳಿ. 

17. ವಾಸ್ತು ದೋಷ ಪರಿಹಾರ ಆಗಕ್ಕೆ ಪ್ರತಿ ಅಮಾವಾಸ್ಯೆ ರಾತ್ರಿ ರುದ್ರಾಭಿಷೇಕ ಮಾಡಿ. ಇದ್ರಿಂದ ವಾಸ್ತು ದೋಷ ಓಡಿಹೋಗುತ್ತೆ.

18. ಮನೆ ಎಷ್ಟೇ ಚಿಕ್ಕದಾಗಿದ್ರೂ ಒಂದು ದೇವರ ಕೋಣೆ ಇರೋಹಾಗೆ ನೋಡ್ಕೊಳ್ಳಿ. ದಿನ ಕ್ಲೀನ್ ಮಾಡಿ ಪೂಜೆ ಮಾಡೋದ್ ಮರೀಬೇಡಿ.

ಮೂಲ

19. ಹೊಸಮನೆಗೆ ಹೋಗಕ್ಕೆ ಮುಂಚೆ ವಾಸ್ತು ಶಾಂತಿ ಪೂಜೆ ಮಾಡಿಸಿ ಆಮೇಲೆ ಹೋಗಿ. ಆದ್ರೆ ಇದನ್ನ ಮೂರು ತಿಂಗಳಿಗಿಂತ ಹೆಚ್ಚು ಖಾಲಿ ಬಿಡಬೇಡಿ. ಯಾವಾಗ್ಲೇ ಮನೆ ಬಿಟ್ಟು ಹೊರಗೇ ಹೋಗ್ತಿದ್ರೂ ಒಂದೇ ಸಲ ಮೂರು ತಿಂಗಳು ಯಾರೂ ಇಲ್ದೆ ಖಾಲಿ ಬಿಡ್ಬೇಡಿ.

ಈ ಚಿಕ್ಕ ಚಿಕ್ಕ ವಿಷಯ ಗಮನದಲ್ಲಿಟ್ಕೊಳಿ, ಖಂಡಿತಾ ಕೈಯ್ಯಲ್ಲಿ ದುಡ್ಡು ನಿಲ್ಲತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: