ಹಲ್ಲು ಫಳ ಫಳ ಹೊಳೆಯಕ್ಕೆ ಡಾಕ್ಟರ್ ಹತ್ರ ಹೋಗೋ ಅವಶ್ಯಕತೆ ಇಲ್ಲ, ಈ 5 ರೀತಿ ಮಾಡಿದ್ರೆ ಸಾಕು

ಸ್ಟ್ರಾಬೆರಿ ಜಾಸ್ತಿ ತಿನ್ನಿ

ಯಾರ್ಗೆ ತಾನೆ ಹಳ್ದಿ ಹಲ್ಲನ್ನ ತೋರ್ಸಕಂಡ್ ಮಾತಾಡಕ್ ಇಷ್ಟ್ ಇರತ್ತೆ ಹೇಳಿ? ಮಾತಾಡ್ಬೇಕಂದ್ರೆ ಬಾಯ್ ತೆಗೀಬೇಕು... ಬಾಯ್ ತೆಗೆದ್ರೆ ಹಳ್ದಿ ಹಲ್ಲಿನ ದರ್ಶನ ಆಗತ್ತೆ. ಒಂದಾ... ಎರಡಾ? ಹೇಳೋದ್ ಬೇಡ ಬಿಡಿ ಹಳ್ದಿ ಹಲ್ಲಿನವ್ರ ಕಷ್ಟ. ಅದ್ಕೆ ಇಡೀ ಜಗತ್ತಲ್ಲಿ ಹಳ್ದಿ ಹಲ್ಲನ್ನ ಬಿಳಿ ಹಲ್ಲಾಗಿ ಮಾಡೋದು ಸಕ್ಕತ್ತಾಗಿರೋ ಬಿಸ್ನೆಸಂತೆ. ನಮ್ಗೆ ಕೆಲ್ವೊಂದ್ ಕಾಯಿಲೆಗಳು ಹೇಗೆ ನಮ್ ತಾತ ಮುತ್ತಾತನ ಕಾಲದಿಂದ ಬಂದಿರತ್ತೋ ಅದೇ ತರ ನಮ್ ಹಲ್ಲು ಕೂಡಾ ಇದ್ಕೆ ಹೊರ್ತಾಗಿಲ್ಲ. ಅದೇ ತರ ದಿನನಿತ್ಯದ ಜೀವ್ನದಲ್ಲಿ ನಮ್ ಹಲ್ಲನ್ನ ನಾವ್ ಹೇಗ್ ಚೆನ್ನಾಗಿಟ್ಕೊಳ್ತೇವೆ ಅನ್ನೋದ್ ಕೂಡಾ ಇಂಪಾರ್ಟೆಂಟ್. ಅಮೇರಿಕಾದಲ್ಲಿ ನಿಮ್ ಹಲ್ಲನ್ನ ಬಿಳಿ ಹಲ್ಲನ್ನಾಗಿ ಬದ್ಲಾಯಿಸ್ಬೇಕಾದ್ರೆ ಬರೋಬ್ಬರಿ 650 ಡಾಲರ್ ಹಣ ಕೊಡ್ಬೇಕಾಗತ್ತೆ! ಅದ್ಕೆ 80ರಷ್ಟು ಜನ ಹಲ್ ಡಾಕ್ಟರ್ ಹತ್ರ ಹೋಗೋದೆ ಇಲ್ಲ. ಹಾಗಂತ ಆ ಹಳ್ದಿ ಹಲ್ಲನ್ನ ಇಟ್ಕೊಂಡು ಬೇರೆಯವ್ರ ಹತ್ರ ಮಾತಾಡಾಕ್ ಆಗತ್ತಾ ಹೇಳಿ? ಅದ್ಕಂತಾನೇ ಒಂದಿಷ್ಟು ಸರಳವಾಗಿರೋ ಕೆಲ್ಸಗಳನ್ನ ಕೊಟ್ಟಿದ್ದೀವಿ ನೋಡಿ. 

1. ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಬೇಕಿಂಗ್ ಸೋಡ ಉಪಯೋಗ್ಸಿ 

ಹೈಡ್ರೋಜನ್ ಪೆರಾಕ್ಸೈಡಲ್ಲಿ ಒಳ್ಳೆ ಜೀವ ವಿರೋಧಿ ( ಆಂಟಿ ಬ್ಯಾಕ್ಟೀರಿಯಾ ) ಅಂಶ ಇದೆ. ಯಾವಾಗ ಅದ್ನ ಬೇಕಿಂಗ್ ಸೋಡಾದ ಜೊತೆ ಮಿಶ್ರಣ ಮಾಡ್ತೀರೋ ನಿಮ್ಗೆ ಪೇಸ್ಟ್ ತರ ಸಿಗತ್ತೆ. ಇದ್ನ ನೀವು ಬೆಳಿಗ್ಗೆ ಹಲ್ಲುಜ್ಜುವಾಗ ಉಪಯೋಗ್ಸಿದ್ರೆ ಹಳ್ದಿ ಹಲ್ಲು ಬಿಳಿಯಾಗೋದು ಗ್ಯಾರಂಟಿ. ಹಾಗೆ ಇದ್ನ ನೀವು ಬಾಯ್ಮುಕ್ಕಳಿಸೋಕು ಬಳ್ಸಬಹುದು. ಯಾವಾಗ ಪೆರಾಕ್ಸೈಡ್ ಸೋಡಾದ ಜೊತೆ ಮಿಶ್ರಣವಾಗತ್ತೋ ಅದ್ನ ನೀವು ಪೇಸ್ಟ್ ತರ ಉಪಯೋಗ್ಸದ್ರೆ ಹಲ್ಲಿನ ಮಧ್ಯದಲ್ಲಿರೋ ಬಿರುಕನ್ನ ಕಮ್ಮಿ ಮಾಡ್ಸತ್ತೆ. ಇನ್ನೇಕ್ ತಡ ಇದ್ನ ಇವಾಗ್ಲೇ ಮಾಡ್ಬಹುದಲ್ವಾ? 

ಮೂಲ

2. ಆಗಾಗ ಹಲ್ಲುಜ್ಜೋ ಅಭ್ಯಾಸ ಇಟ್ಕೊಳಿ

ಕಾಫೀನೋ ಟೀನೋ ಕುಡ್ದಾದ್ಮೇಲೆ ಹಲ್ಲುಜ್ಜೋ ಅಭ್ಯಾಸ ಇದ್ರೆ ಒಳ್ಳೇದು. ಅದ್ಕೆ ಡಾಕ್ಟರ್ ಹೇಳ್ತಾರಲ್ವ ದಿನಕ್ಕೆ ಎರ್ಡ್ ಸಲ ಆದ್ರೂ ಹಲ್ಲುಜ್ಜಿ ಅಂತ. ಒಟ್ನಲ್ಲಿ ನಿಮ್ ಇಡೀ ಬಾಯಿ ಮತ್ತೆ ಹಲ್ಲು ಆರೋಗ್ಯವಾಗಿರ್ಬೇಕಂದ್ರೆ ನೀವ್ ಆಗಾಗ ಹಲ್ಲುಜ್ಲೇಬೇಕು. 

ಮೂಲ

3. ತೆಂಗಿನೆಣ್ಣೆಯಿಂದ ಬ್ರಷ್ ಮಾಡಿ

ತೆಂಗಿನೆಣ್ಣೆಯ ಮಹತ್ವವನ್ನ ನಾವೀಗಾಗ್ಲೇ ಹೇಳಿದ್ದೀವಿ. ಯಾವ್ದೇ ಕಾಯ್ಲೇ ಇದ್ರೂ  ನಾವ್ ತೆಂಗಿನೆಣ್ಣೆಯನ್ನ ಉಪಯೋಗಿಸ್ತೇವೆ. ತೆಂಗಿನೆಣ್ಣೆಯಿಂದ ನಮ್ ಹಲ್ಲನ್ನ ಚೆನ್ನಾಗ್ ಇಟ್ಕೊಳ್ಬಹುದು ಅಂದ್ರೆ ನೀವ್ ನಂಬ್ಲೇಬೇಕಾಗತ್ತೆ. ಇದ್ರಲ್ಲಿರೋ ಜೀವ ವಿರೋಧಿ (ಆಂಟಿ ಬ್ಯಾಕ್ಟೀರೀಯಾ ) ಲಕ್ಷಣಗಳು ಹಲ್ಲನ್ನ ಚೆನ್ನಾಗಿಡಕ್ಕೆ ಸಹಾಯ ಮಾಡತ್ತೆ. ಇದ್ನ "ಜರ್ನಲ್ ಆಫ್ ಡೆಂಟಲ್ ಹೈಜೀನ್ " ಹೌದು ಅಂತ ಒಪ್ಕೊಂಡ್ ಬಿಟ್ಟಿದೆ. ಸ್ವಲ್ಪ ಶುಚಿಯಾಗಿರೋ ತೆಂಗಿನೆಣ್ಣೆಯನ್ನ ತಗೊಂಡು ಬಾಯಲಿಟ್ಕೊಳ್ಳಿ. ಒಂದಿಪ್ಪತ್ತ ಸೆಕೆಂಡು ಮುಕ್ಕಳಿಸಿ ಬಿಡಿ. ಇಲ್ಲಾಂದ್ರೆ ಬ್ರಷ್ಗೆ ಒಂದ್ ಸ್ವಲ್ಪ ಹಾಕಿ ಹಲ್ಲುಜ್ಜಿ.

ಮೂಲ

4. ಹಲ್ಲಿಗೆ ಅಂಟ್ಕೊಂಡಿರೋದ್ನ ತೆಗ್ದಾಕ್ಲಿಕ್ಕೆ ಆಪಲ್ ಸಿಡರ್ ವಿನೆಗರ್ ಉಪಯೋಗ್ಸಿ 

ಆಪಲ್ ಸಿಡರ್ ವಿನೆಗರ್ ಕೂಡಾ ನಮ್ ಹಲ್ಲನ್ನ ಗಟ್ಟಿಯಾಗಿಡೋಕೆ ಸಹಾಯ ಮಾಡತ್ತೆ.  ಅಂಗಡಿಯಲ್ಲಿ ಅದೆಂತದ್ನಲ್ಲಾ ತಿಂದ್ಕೊಂಡು ಬಂದಿರ್ತೇವೆಯಲ್ವಾ ಅದು ಹಲ್ಲಿಗೆ ಅಂಟ್ಕೊಂಡಿರತ್ತೆ. ಅದ್ನ ತೆಗಿದೇ ಹಾಗೇ ಇಟ್ಕೊಂಡ್ರೆ ನಿಧಾನ ನಿಧಾನವಾಗಿ ಹಲ್ಲು ಹುಳುಕಾಗತ್ತೆ. ಈ ಆಪಲ್ ಸೀಡರ್ ವಿನೆಗರ್ ಅದ್ನ ತೆಗ್ದ್ ಹಾಕಾಕ್ಕೆ ಸಹಾಯ ಮಾಡತ್ತೆ. ಇದ್ರಲ್ಲಿ ಆಸಿಟಿಕ್ ಆಮ್ಲ, ಕಿಣ್ವ, ಮೆಗ್ನೇಷಿಯಂ , ಪೊಟ್ಯಾಷ್ಯಿಯಂ ಇರತ್ತೆ. ಈ ಎ ಸಿ ವಿ ಅನ್ನೋದು ಆಸಿಡ್ಡಾಗಿರೋದ್ರಿಂದ ನೀವು ದಿನನಿತ್ಯ ಉಪಯೋಗ್ಸೋ ಪೇಸ್ಟ್ ಬದ್ಲಾಗಿ ಬಳ್ಸಬೇಕು. ಬಳ್ಸದ್ಮೇಲೆ ನೀರಲ್ಲಿ ಇಲ್ಲಾ ಹೈಡ್ರೋಜನ್ ಪೆರಾಕ್ಸೈಡ್ನಿಂದ ಬಾಯ್ ಮುಕ್ಕಳ್ಸಿದ್ರಾಯ್ತು. 

ಮೂಲ

5. ಜಾಸ್ತಿ ಹಣ್ಣು-ತರಕಾರಿ ತಿನ್ನಿ

ಕೆಲ್ವೊಂದು ಹಣ್ಣು ತರ್ಕಾರಿಗಳನ್ನ ನೀವು ಉಪಯೋಗ್ಸಬಹುದು. ಸೆಲರಿ , ಸೇಬು , ಕ್ಯಾರಟ್ , ಸ್ಟ್ರಾಬರಿ ಹಣ್ಣುಗಳೆಲ್ಲಾ ಹಲ್ಲಿನ ಆರೋಗ್ಯ ಕಾಪಾಡ್ಕೊಳ್ಳೊಕೆ ಸಹಾಯ ಮಾಡತ್ತೆ. ಇದ್ರಲ್ಲಿ ಸ್ಟ್ರಾಬರಿಯಂತೂ ತುಂಬಾನೇ ಒಳ್ಳೆಯದು. ಯಾಕಂದ್ರೆ ಇದ್ರಲ್ಲಿರೋ ವಿಟಮಿನ್ ಸಿ ನಮ್ ಹಲ್ಲನ್ನ ಬೆಳ್ಳಗಿಡೋಕೆ ಸಹಾಯ ಮಾಡತ್ತೆ. ವಾರದಲ್ಲಿ ಎರ್ಡ್ ಸಲ ಆದ್ರೂ ತಿನ್ನಿ ಅಂತ ನಮ್ಮ ಸಲಹೆ.

ಮೂಲ

ನಮ್ ಜೊತೆ ಯಾರಾದ್ರೂ ಒಳ್ಳೆ ರೀತಿಯಲ್ ಮಾತಾಡ್ಬೇಕಂದ್ರೆ ನಮ್ ಹಳ್ದಿ ಹಲ್ಲನ್ನ ತೋರ್ಸಕ್ಕಾಗಲ್ಲ ಅಲ್ವಾ? ಅದ್ಕೆ ಫಳ ಫಳ ಹಲ್ಲು ಬೇಕೇ ಬೇಕು. 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: