ನಮ್ಮ ದೇಶದ ಈ 20 ಜಾಗಗಳ ಪ್ರಕೃತಿ ಸೌಂದರ್ಯ ನೋಡಿ ಇವುಗಳ ಮುಂದೆ ಯಾವ್ ಫಾರಿನ್ನೂ ಇಲ್ಲ ಅಂತೀರ

ಸ್ವರ್ಗ ಭೂಮಿ ಭಾರತ ಅಂತ ಸುಮ್ನೆ ಹೇಳಿಲ್ಲ

ನಮ್ಮ ದೇಶದಲ್ಲಿ ಟ್ರಿಪ್ ಹೋಗ್ಬೇಕು ಅಂದ್ರೆ ಜಾಗಗಳಿಗೇನೂ ಕಮ್ಮಿ ಇಲ್ಲ ಬಿಡಿ. ಇನ್ನು ಪ್ರಕೃತಿ ಸೌಂದರ್ಯ ಇಷ್ಟಪಡೋರ್ಗಂತೂ ಹಬ್ಬ. ಯಾಕಂದ್ರೆ ಪ್ರಕೃತಿ ಪ್ರಿಯರಿಗೆ ನಮ್ಮಲ್ಲಿ ಕಾಡು, ಬೆಟ್ಟ, ಗುಡ್ಡ, ಕಣಿವೆ, ನದಿ ಅಂತ ಸಿಕ್ಕಾಪಟ್ಟೆ ಒಂದಕ್ಕಿಂತಾ ಒಂದು ಸೂಪರ್ ಜಾಗಗಳಿವೆ. ಒಂದೊಂದ್ ಜಾಗ ನೋಡಕ್ಕೂ ಎರಡು ಕಣ್ಣೂ ಸಾಲಲ್ಲ!

ಇನ್ನು "ದೇಶ ಸುತ್ತಿ ನೋಡು, ಕೋಶ ಓದಿ ನೋಡು" ಅಂತಾರೆ... ಎಲ್ಲಾರೂ ದೇಶ ಸುತ್ತೋ ಪ್ಲಾನ್ ಮಾಡೇ ಮಾಡಿರ್ತಾರೆ, ಆದ್ರೆ ವಿಚಿತ್ರ ಅಂದ್ರೆ ಎಲ್ಲರೂ ಹೆಚ್ಚಾಗಿ ಬೇರೆ ಬೇರೆ ದೇಶ ಸುತ್ತಬೇಕು ಅಂತ ಪ್ಲಾನ್ ಮಾಡೋದೇ ಜಾಸ್ತಿ. ಯಾವ್ಯಾವ್ದೋ ದೇಶ ಸುತ್ತಕ್ಕಿಂತಾ ಮುಂಚೆ ನಮ್ಮ ದೇಶದ ಸೌಂದರ್ಯಾನ ಒಮ್ಮೆ ನೋಡಿ ಬನ್ನಿ. 

1. ಪ್ಯಾಂಗೊಂಗ್ ಲೇಕ್ - ಲಡಾಕ್

ಹಿಮಾಲಯದಲ್ಲಿ ಶುರುವಾಗಿ ಚೀನಾ ತಂಕ ಈ ಲೇಕ್ ಹರಡಿದೆ. ಮೇ ತಿಂಗಳಿಂದ ಸೆಪ್ಟೆಂಬರ್ ತಂಕ ಇದನ್ನ ಹೋಗಿ ನೋಡಬಹುದು. ಯಾವ್ದೋ ಶೂಟಿಂಗ್ ಸ್ಪಾಟಲ್ಲಿ ಇದ್ದಂಗಾಗತ್ತೆ. ಲೇ ಇಂದ ನಾಲ್ಕು ಗಂಟೆ ಪ್ರಯಾಣ ಇಲ್ಲಿಗೆ.

ಮೂಲ

2. ತೇಕಡಿ - ಕೇರಳ 

ಇಲ್ಲಿರೋ ಬೆಟ್ಟಗಳು ಮತ್ತೆ ಟೀ ತೋಟಗಳನ್ನ ನೋಡ್ತಾ ಎಲ್ರೂ ಕವಿಯಾಗ್ಬಿಡ್ತಾರೆ. ಇಲ್ಲಿರೋ ಪೆರಿಯಾರ್ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿ-ಪಕ್ಷಿಗಳನ್ನ ನೋಡೋದೇ ಕಣ್ಣಿಗೆ ಒಂಥರಾ ಆನಂದ.

ಮೂಲ

3. ವಯ್ನಾಡ್ - ಕೇರಳ 

ಯಾವ್ದ್ ನೋಡದಿದ್ರೂ ಇಲ್ಲಿನ ಚೆಮ್ಬ್ರಾ ಪೀಕಿನ ಹಾರ್ಟ್ ಶೇಪ್ ಕೊಳ ಮಾತ್ರ ನೋಡಲೇಬೇಕು. ಸಕ್ಕತ್ತಾಗಿರತ್ತೆ! ಇದು ಟ್ರೆಕ್ಕಿಂಗಿಗೂ ಹೇಳಿ ಮಾಡಿಸಿದ ಜಾಗ. ಕೇರಳ ಎಷ್ಟು ಚನ್ನ ಅಂತ ತಿಳ್ಕೊಬೇಕು ಅಂದ್ರೆ ಈ ಜಾಗಕ್ಕೆ ನೀವು ಜೀವನದಲ್ಲಿ ಒಂದ್ಸರ್ತಿ ಹೋಗ್ಲೇಬೇಕು!

ಮೂಲ

4. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ 

ಈ ಜಾಗದ ಸೌಂದರ್ಯ ವರ್ಣಿಸಕ್ಕೆ ಪದಗಳೇ ಸಾಲಲ್ಲ ಬಿಡಿ. ಇಲ್ಲಿನ ಸ್ವಚ್ಚಂದ ಆಕಾಶ, ತಿಳಿ ನೀರಲ್ಲಿ ಬೀಳೋ ಆ ಆಕಾಶದ ಪ್ರತಿಬಿಂಬ... ಅಬ್ಬಾ! ಅಲ್ಲಿಂದ ವಾಪಸ್ ಬರಕ್ಕೇ ಮನಸ್ಸು ಬರಲ್ಲ!

ಮೂಲ

5. ಹೂವಿನ ಕಣಿವೆ - ಉತ್ತರಾಖಂಡ್ 

ಸುತ್ತ ಮುತ್ತ ಮಂಜು ಮುಚ್ಚಿದ ಬೆಟ್ಟ, ಸಿಕ್ಕಾಪಟ್ಟೆ ಚೆನ್ನಾಗಿರೋ ಹೂವುಗಳು... ಅದರ ಪರಿಮಳ... ಅಲ್ಲಲ್ಲೇ ಹರಿಯೋ ಚಿಕ್ಕ ಚಿಕ್ಕ ನೀರಿನ ತೊರೆಗಳು! ಅಯ್ಯೋ ಇಲ್ಲಿ ಹೋದ್ರೆ ದೇವಲೋಕಕ್ಕೇ ಹೋದಂಗೆ ಫೀಲ್ ಆಗತ್ತೆ! ಈ ಜಾಗ ವರ್ಲ್ಡ್ ಹೆರಿಟೇಜ್ ಸೈಟ್ ಪಟ್ಟೀಲೂ ಇದೆ.

ಮೂಲ

6. ಝೀರೋ - ಅರುಣಾಚಲಪ್ರದೇಶ 

ಇದು ಅರುಣಾಚಲದ ಅತ್ಯಂತ ಹಳೇ ಹಳ್ಳಿ. ಇಲ್ಲಿ ಅಪಟಾನಿ ಜನಾಂಗ ವಾಸ ಮಾಡತ್ತೆ. ಪ್ರಕೃತಿ ಸೌಂದರ್ಯಕ್ಕೇನೂ ಕಮ್ಮಿ ಇಲ್ಲ. ಮಂಜು ಮುಚ್ಚಿದ ಬೆಟ್ಟಗಳು... ಸುತ್ತಾ ಭತ್ತದ ಗದ್ದೆ... ಆಹಾ! ಸ್ವರ್ಗಕ್ಕೆ ಮೂರೇ ಗೇಣು!

ಮೂಲ

7. ಪಲೋಲೆಮ್ ಬೀಚ್ - ಗೋವಾ 

ಇಡೀ ಗೋವಾದಲ್ಲಿ ಇದು ತುಂಬಾ ಕ್ಲೀನಾಗಿರೋ ಬೀಚ್ ಅಂದ್ರೆ ಇದು. ಏಕಾಂತವಾಗಿರೋಕ್ಕೆ ಇಷ್ಟಪಡೋರು ಪಕ್ಕದಲ್ಲೇ ಇರೋ ಬಟರ್ ಫ್ಲೈ ಬೀಚಿಗೆ ಹೋಗ್ಬೋದು.

ಮೂಲ

8. ಕೂನೂರ್ - ತಮಿಳುನಾಡು 

ಟೀ ಎಸ್ಟೇಟ್, ವಿಧವಿಧವಾದ ಹಕ್ಕಿಗಳು, ಹಸಿರು, ನೀಲಗಿರಿ ಟೀ ಗಿಡಗಳು... ಪ್ರಕೃತಿಯ ಮಡಿಲಲ್ಲೇ ಕೂತಿರೋ ಹಾಗನ್ಸತ್ತೆ. ಈ ಜಾಗ ಯಾವಾಗ್ಲೂ ಸೂಪರ್ರು... ಊಟಿಯಿಂದ ಬರಿ 18 ಕಿ.ಮೀ. ದೂರದಲ್ಲಿದೆ.

ಮೂಲ

9. ಡಾರ್ಜಿಲಿಂಗ್ - ಟೀ ತೋಟಗಳು 

ಜೀವನದಲ್ಲಿ ಒಂದ್ಸರ್ತಿ ಇಲ್ಲಿಗೆ ಹೋಗಿ ಬರ್ಲೇಬೇಕು ಕಣ್ರಿ! ಗಾಳಿ ಪೂರ್ತಿ ಟೀ ಎಲೆಗಳ ಸುಗಂಧ, ಅಲ್ಲಲ್ಲೇ ಟೀ ಎಲೆ ಕಿತ್ತುತ್ತಿರೋ ಜನ... ಇವೆಲ್ಲಾ ನಿಮ್ಮನ್ನ ಬೇರೇನೇ ಲೋಕಕ್ಕೆ ಕರ್ಕೊಂಡು ಹೋಗತ್ತೆ.

ಮೂಲ

10. ಕೊಡಗು - ಕರ್ನಾಟಕ 

ನಮ್ಮ ಕೊಡಗು. ಚೆಂದವೋ ಚೆಂದ ಇದರ ಬೆಡಗು... ಭಾರತದ ಸ್ಕಾಟ್ಲೆಂಡ್ ಅಂತಾರೆ ಇದನ್ನ. ಇಲ್ಲಿನ ಕಾಫಿ ತೋಟಗಳು, ಜಲಪಾತಗಳು, ಮರ ಮುಚ್ಚಿರೋ ಬೆಟ್ಟಗಳು... ಯಾರ್ಗ್ತಾನೆ ಇಷ್ಟ ಆಗಲ್ಲ ಹೇಳಿ?

ಮೂಲ

11. ಮಜೂಲಿ ದ್ವೀಪ - ಅಸ್ಸಾಂ

ಇದನ್ನ ಅಸ್ಸಾಮಿನ್ ಸಾಂಸ್ಕೃತಿಕ ರಾಜಧಾನಿ ಅಂತಾನೇ ಕರೀತಾರೆ. ಬ್ರಹ್ಮಪುತ್ರ ಇಲ್ಲಿ ಹರಿಯುತ್ತೆ... ತುಂಬಾ ಕ್ಲೀನಾಗಿದೆ ಈ ಜಾಗ. ಅದೂ ಅಲ್ದೆ  ಇದು ದೇಶದ ಅತೀ ಉದ್ದನೆಯ ರಿವರ್ ಐಲ್ಯಾಂಡಂತೆ. ಈ ಜಾಗ ಬೇರೆಲ್ಲಾ ಜಾಗಗಳಿಗಿಂತಾ ಭಿನ್ನವಾಗಿದೆ. ನೋಡ್ಕೊಂಡ್ ಬನ್ನಿ.

ಮೂಲ

12. ಜೈಸಲ್ಮೇರ್ - ರಾಜಸ್ಥಾನ್ 

ರಾಜಸ್ಥಾನದ ಮರುಳುಗಾಡಿನ ಸೌಂದರ್ಯಕ್ಕೆ ಯಾರ್ ಮನಸೋತಿಲ್ಲ ಹೇಳಿ? ಇಲ್ಲಿ ಎಲ್ನೋಡಿದ್ರೂ ಮರುಳೇ ಆದ್ರೂ ಪ್ರತೀ ಹೆಜ್ಜೆಗೂ ನಿಮಗೊಂದು ಅನುಭವ ಸಿಕ್ಕತ್ತೆ... ಜೊತೆಗೆ ಒಂಟೆಗಳು ಬೇರೆ. ಫೋಟೋ ತೆಗೆಯೋರ್ಗೆ ಒಳ್ಳೆ ಜಾಗ.

ಮೂಲ

13. ಕಾಸ್ ಪ್ಲಾಟ್ಯು - ಮಹಾರಾಷ್ಟ್ರ

ಹೂವು, ಚಿಟ್ಟೆ, ಗಿಡ, ಮರ, ಬಳ್ಳಿ, ನದಿ - ಪರಿಸರ ಇಲ್ಲಿ ಮೈಕೊಡವಿ ನಿಂತಂಗಿದೆ. ಇದನ್ನ ಈಗ ರಿಸರ್ವ್ ಫಾರೆಸ್ಟ್ ಮಾಡ್ಬಿಟ್ಟಿದ್ದಾರೆ. ಇದೂ ಕೂಡ ವರ್ಲ್ಡ್ ಹೆರಿಟೇಜ್ ಸೈಟ್ಗಳಲ್ಲಿ ಒಂದು.

ಮೂಲ

14. ಲಕ್ಷ ದ್ವೀಪ 

ದೇಶದಲ್ಲಿ ಕೋರಲ್ ರೀಫ್ಸ್(ಹವಳದ ಬಂಡೆಗಳು) ನೋಡಕ್ಕಾಗೋದು ಇದೊಂದೇ ಜಾಗದಲ್ಲಿ. ಇಲ್ಲಿ ಡೀಪ್ ಸೀ ಡೈವಿಂಗ್ ಮಾಡೋದರ ಮಜಾನೇ ಬೇರೆ ಬಿಡಿ! 

ಮೂಲ

15. ಗುರುಡೊಂಗಮಾರ್ ಐಸ್ ಲೇಕ್ - ಸಿಕ್ಕಿಂ 

ಪ್ರಪಂಚದ ಅತೀ ಎತ್ತರದಲ್ಲಿ ಇರೋ ಕೆರೆಗಳಲ್ಲಿ ಇದೊಂದು. ಇದು ಪೂರ್ತಿ ಮರಗಟ್ಟಿದ್ದಾಗ ಇದನ್ನ ನೋಡೋ ಖುಷೀನೇ ಬೇರೆ. ಆದ್ರೆ ನದೀನೇ ಮರಗಟ್ಟತ್ತೆ ಅಂದ್ರೆ ಆಗ ಅಲ್ಲೆಷ್ಟು ಚಳಿ ಇರ್ಬೇಕು ಅಂತ ನೀವೇ ಊಹಿಸ್ಕೊಳಿ. 

ಮೂಲ

16. ಹೊಗೇನಕಲ್ ಫಾಲ್ಸ್ - ತಮಿಳುನಾಡು 

ಭಾರತದ ನಯಾಗರ ಫಾಲ್ಸ್ ಅಂತ ಕರೀತಾರೆ ಇದನ್ನ. ಇಲ್ಲಿ ಕಾವೇರಿ ಎಷ್ಟೋ ದಿಕ್ಕುಗಳಲ್ಲಿ ಕವಲೊಡೆದು ಹರೀತಾಳೆ. ಇಲ್ಲಿನ ನೀರಲ್ಲಿ ಜೌಷಧೀಯ ಗುಣಗಳಿರತ್ತೆ ಅಂತ ಕೂಡ ಹೇಳ್ತಾರೆ.

ಮೂಲ

17. ದಾವ್ಕಿ ನದಿ - ಮೇಘಾಲಯ 

ನೀರು ಇಲ್ಲಿ ಎಷ್ಟು ಕ್ಲಿಯರ್ ಆಗಿ ಇದೆ ಅಂದ್ರೆ, ನೀರಿನ ಬುಡದಲ್ಲಿ ಏನಿದೆ, ಹೆಂಗಿದೆ ಅಂತ ಗೊತ್ತಾಗತ್ತೆ.

ಮೂಲ

18. ಪಾಂಡಿಚೆರಿ 

ಸಿನೆಮಾದವರಿಗಂತೂ ದಕ್ಷಿಣ ಭಾರತದ ಫೆವರೇಟ್ ಶೂಟಿಂಗ್ ಜಾಗ ಇದು. ಇಲ್ಲಿನ ಮನೆ ಮತ್ತು ಬೇರೆ ಕಟ್ಟಡಗಳಲ್ಲಿ ಈಗ್ಲೂ ಫ್ರೆಂಚರ ಪ್ರಭಾವ ಎದ್ದು ಕಾಣತ್ತೆ. 

ಮೂಲ

19.ಚಿರಾಪೂಂಜಿ - ಮೇಘಾಲಯ 

ಭಾರತದಲ್ಲಿ ಅತೀ ಹೆಚ್ಚು ಮಳೆ ಬೀಳೋ ಜಾಗ ಅಂದ್ರೆ ಇದೇನೇ ಅಂತ ಎಲ್ರಿಗೂ ಗೊತ್ತೇ ಇದೆ. ಇಲ್ಲಿರೋ ಹಸಿರು ಸಂಪತ್ತಿಗೆ ಕಮ್ಮೀನೇ ಇಲ್ಲ. ಇಲ್ಲಿಗೆ ಹೋಗಕ್ಕೆ ಅಕ್ಟೋಬರ್ ತಿಂಗಳಿಂದ ಮೇ ತಿಂಗಳು ಒಳ್ಳೆ ಸಮಯ. 

ಮೂಲ

20. ಝುಕೋ ವ್ಯಾಲಿ - ನಾಗಾಲ್ಯಾಂಡ್ ಮಣಿಪುರ್ ಗಡಿ

ಇಲ್ಲೂ ಒಂದು ಫ್ಲವರ್ ವ್ಯಾಲಿ ಇದೆ. ಇಲ್ಲಿನ ಗರ್ಗಂಟುವನ್ ರೈನ್ ಫಾರೆಸ್ಟಲ್ಲಿ ಟ್ರೆಕ್ಕಿಂಗ್ ಹೋಗೋ ಮಜಾನೇ ಬೇರೆ. ಅಲ್ಲಿ ಪರಿಸರ ಹೇಗಿದೆ ಅಂದ್ರೆ, ಆಕಾಶಾನೇ ತಬ್ಗೊಳಕ್ಕೆ ಬರ್ತಿದ್ಯೇನೋ ಅನ್ನೋ ಅನುಭವ ಕೊಡತ್ತೆ.

ಮೂಲ

ಇಷ್ಟೊಂದು ಜಾಗಗಳನ್ನ ಪಟ್ಟಿ ಮಾಡಿ ಕೊಟ್ಟಿದ್ದೀವಿ. ಹಾಗಿದ್ರೆ ಇವುಗಳಲ್ಲಿ ನಿಮ್ಮ ಮುಂದಿನ ಟ್ರಿಪ್ ಎಲ್ಲಿಗ್ ಹಾಕ್ತೀರ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: