ಧೃತರಾಷ್ಟ್ರನ 102 ಮಕ್ಕಳ ಬಗ್ಗೆ ನಿಮಗೆಷ್ಟು ಗೊತ್ತು?

ಅವರಲ್ಲಿ ಒಬ್ಬ ಮಗಳೂ ಇದ್ಳು

ರಾಮಾಯಣ,ಮಹಾಭಾರತ ನಮ್ಮಲ್ಲಿ ಎಷ್ಟು ಪ್ರಚಲಿತವಾಗಿದೆ ಅಂದ್ರೆ, ಇದ್ರಲ್ಲಿ ಬರೋ ನಾಯಕರ ಬಗ್ಗೆ ಸಾಮಾನ್ಯವಾಗಿ ನಮಗೆಲ್ಲಾ ಗೊತ್ತೇ ಇದೆ. ಪಾಂಡವರ ಬಗ್ಗೆ ನೆನಪಿದ್ದೇ ಇದೆ, ಆದ್ರೆ ಕೌರವರಲ್ಲಿ ದುರ್ಯೋಧನ, ದುಶ್ಯಾಸನ ಹೀಗೆ ಒಂದೆರಡು ಹೆಸರು ಬಿಟ್ಟು ಅವರ ಬಾಕಿ ತಮ್ಮಂದಿರ ಬಗ್ಗೆ ಹೆಚ್ಚಾಗಿ ಜಾಸ್ತಿ ಜನಕ್ಕೆ ಗೊತ್ತಿಲ್ಲ.

ಹಸ್ತಿನಾಪುರದ ರಾಜ ಧೃತರಾಷ್ಟ್ರ ಮತ್ತವನ ಹೆಂಡತಿ ಗಾಂಧಾರಿಯ ಮಕ್ಕಳೇ ಈ ಕೌರವರು. ಒಂದು ಕಾಲದಲ್ಲಿ ಅಷ್ಟು ವೈಭವದಿಂದ ತುಂಬಿದ್ದ ಈ ಊರು ಈಗ ಒಂದು ಪುಟ್ಟ ಹಳ್ಳಿ. ಇದು ಉತ್ತರ ಪ್ರದೇಶದ ಮೀರಟ್ ಹತ್ರ ಇದೆ. ಈಗ ಇಲ್ಲಿ ಕೆಲವು ಜೈನ ಮಂದಿರಗಳು ಮತ್ತು ಮಹಾಭಾರತದ ಕಾಲದ ಕೆಲವು ಅವಶೇಷಗಳು ಮಾತ್ರ ಉಳ್ಕೊಂಡಿದೆ.

ಕೌರವರು ಹುಟ್ಟಿದ ಬಗ್ಗೆ ಒಂದಿಷ್ಟು...

ಸುಮಾರು 3500 ವರ್ಷಗಳ ಹಿಂದೆ ವೇದವ್ಯಾಸ ಋಷಿ ಹಸ್ತಿನಾಪುರಕ್ಕೆ ಭೇಟಿ ಕೊಟ್ಟಾಗ, ರಾಣಿ ಗಾಂಧಾರಿ ಅವರನ್ನ ಚೆನ್ನಾಗಿ ನೋಡಿಕೊಂಡು, ಅವರ ಸೇವೆ ಮಾಡಿದ್ಳಂತೆ. ಅದಕ್ಕೆ ಪ್ರತಿಯಾಗಿ ವೇದವ್ಯಾಸ ಗಾಂಧಾರಿಗೆ ಏನಾದ್ರೂ ಒಂದು ವರ ಕೇಳು ಅಂತ ಹೇಳಿದ್ರಂತೆ. ಗಾಂಧಾರಿ ತನಗೆ 100 ಗಂಡು ಮಕ್ಕಳು ಬೇಕು ಅಂತ ಕೇಳ್ಕೊಂಡ್ಳಂತೆ. ವರದ ಪ್ರಭಾವದಿಂದ ಗಾಂಧಾರಿ ಗರ್ಭಿಣಿ ಆಗಿ 2 ವರ್ಷಗಳಾದ್ರೂ ಪ್ರಸವ ಆಗ್ಲೇ ಇಲ್ಲ. ಈ ಹೊತ್ತಿಗಾಗಲೇ ಕುಂತಿ ತನ್ನ ಮಗ ಯುಧಿಷ್ಠಿರನಿಗೆ ಜನ್ಮ ಕೊಟ್ಟಿದ್ಲು.

 ಇದೇ ಸಮಯದಲ್ಲಿ ಗಾಂಧಾರಿ ಜನ್ಮ ಕೊಟ್ಟಿದ್ದು ಒಂದು ಮಾಂಸದ ತುಂಡಿಗೆ! ಗಾಂಧಾರಿ ಈ ಮಾಂಸದ ತುಂಡನ್ನ ಬಿಸಾಡಬೇಕು ಅನ್ನೋ ತಯಾರಿಯಲ್ಲಿದ್ದಾಗ, ವೇದವ್ಯಾಸರು ಮಧ್ಯ ಪ್ರವೇಶ ಮಾಡಿ, ತಾನು ಕೊಟ್ಟಿರೋ ವರ ವ್ಯರ್ಥ ಆಗಲ್ಲ, 100 ತುಪ್ಪ ತುಂಬಿರೋ ಮಡಕೆಗಳನ್ನ ತೊಗೊಂಡು ಬಾ ಅಂತ ಹೇಳ್ತಾರೆ. ಈ ಟೈಮಲ್ಲಿ ಗಾಂಧಾರಿ ತನಗೆ 100 ಗಂಡು ಮಕ್ಕಳ ಜೊತೆ ಒಬ್ಬಳು ಹೆಣ್ಣು ಮಗಳೂ ಬೇಕು ಅಂತ ಕೇಳ್ಕೊಂಡಾಗ, ಅದಕ್ಕೆ ಒಪ್ಪಿ ವೇದವ್ಯಾಸ ಆ ಮಾಂಸದ ತುಂಡನ್ನ 101 ತುಂಡುಗಳಾಗಿ ಮಾಡಿ, ಅದನ್ನ ಮಡಿಕೆಗಳಿಗೆ ಹಾಕಿ ಎರಡು ವರ್ಷ ಅದನ್ನ ತೆಗದು ನೋಡ್ಬಾರ್ದು ಅಂತ ಎಚ್ಚರಿಕೆ ಕೊಡ್ತಾರೆ. 2 ವರ್ಷ ಕಾತರದಿಂದ ಕಾದ ಗಾಂಧಾರಿ, ಮೊದಲನೇ ಮಡಕೆ ತೆಗದು ನೋಡಿದ್ಲಂತೆ. ಅದ್ರಿಂದ ಒಂದು ಗಂಡು ಮಗು ಹುಟ್ತು. ಅವನಿಗೆ ದುರ್ಯೋಧನ ಅಂತ ಹೆಸರಿಟ್ಳು. (ಇವನಿಗೆ ಮೊದಲು ಸುಯೋಧನ ಅಂತ ಹೆಸರು ಇಟ್ಟಿದ್ರು, ಆದ್ರೆ ಆಮೇಲೆ ಅದನ್ನ ದುರ್ಯೋಧನ ಅಂತ ತಾನೇ ಸ್ವತಃ ಬದಲಾಯಿಸ್ಕೊಂಡ).

ಮೂಲ

ದುರ್ಯೋಧನ ಹುಟ್ದಾಗ ಅವನನ್ನ ಕೊಲ್ಲೋ ಸಲಹೆ ಬಂದಿತ್ತು!

ಆದಿ ಪರ್ವದ 114 ನೇ ಅಧ್ಯಾಯದ 17 ನೇ ಶ್ಲೋಕದಲ್ಲಿ ಹೇಳಿರೋ ಹಾಗೆ, ದುರ್ಯೋಧನ ಹುಟ್ಟಿ ಅಳ್ತಾ ಇದ್ದಾಗ, ಹಲವಾರು ಪ್ರಾಣಿಗಳೂ ಕೂಗ್ತಾ ಇತ್ತಂತೆ. ಇದನ್ನ ಗಮನಿಸಿದ ವಿದುರ, ಧೃತರಾಷ್ಟ್ರ ಹಾಗೂ ಗಾಂಧಾರಿಗೆ ಇದು ಒಳ್ಳೆ ಶಕುನ ಅಲ್ಲ, ಇದ್ರಿಂದ ಎಲ್ಲರಿಗೂ ಕೆಟ್ಟದಾಗುತ್ತೆ, ಈ ಮಗೂನ ಕೊಂದು ಬಿಡಿ ಅಂತ ಹೇಳಿದ್ನಂತೆ. ಆದ್ರೆ ಅವರು ಹಾಗೆ ಮಾಡ್ಲಿಲ್ಲ. ನಮಗೆಲ್ಲಾ ಗೊತ್ತಿರೋ ಹಾಗೆ ಮುಂದೆ ನಡೆದಿದ್ದೆಲ್ಲ ಇತಿಹಾಸ... ಅಲ್ಲ...ಮಹಾಭಾರತ!

ಮೂಲ

ಕೌರವರಿಗೆ ಒಬ್ಬ ತಂಗಿ ಇದ್ಳು

ಮಡಿಕೆಯಿಂದ ಕೌರವರ ಜನನ ಆಗುತ್ತಿದ್ದ ಸಮಯದಲ್ಲೇ, ಕಾಡಲ್ಲಿದ್ದ ಕುಂತಿ ಭೀಮನಿಗೆ ಜನ್ಮ ಕೊಟ್ಲಂತೆ. ಮಹಾಭಾರತದ ಆದಿ ಪರ್ವದಲ್ಲಿ ಕೌರವ ಹಾಗೂ ಪಾಂಡವರ ಹುಟ್ಟಿನ ಬಗ್ಗೆ ವಿವರವಾಗಿ ಹೇಳಿದ್ದಾರೆ.  ನೂರು ಜನ ಗಂಡುಮಕ್ಕಳ ನಂತರ 101ನೇ ಮಡಿಕೆಯಲ್ಲಿ ಸಿಕ್ಕಿದ ಹೆಣ್ಣು ಮಗೂನೇ ದುಃಶಲ. ಮುಂದೆ ಇವಳು ಜಯದ್ರಥನನ್ನ ಮದ್ವೆ ಆಗ್ತಾಳೆ. ಮುಂದೆ ಕುರುಕ್ಷೇತ್ರ ಯುದ್ಧ ನಡೆದಾಗ ಪಾಂಡವರು ಜಯದ್ರಥನ್ನ ಕೊಲ್ತಾರೆ. 

ಈ 101 ಕೌರವರು ಯಾರ್ಯಾರು?

 1. ದುರ್ಯೋಧನ
 2. ದುಶ್ಯಾಸನ
 3. ದುಸ್ಸಹ
 4. ದುಸ್ಸಾಲನ
 5. ಜಲಗಂಧ
 6. ಸಮ
 7. ಸಹ
 8. ವಿಂಧ
 9. ಅನುವಿಂದ
 10. ದುರ್ದರ್ಶ
 11. ಸುಬಾಹು
 12. ದುಷ್ಪ್ರದರ್ಶ
 13. ದುರ್ಮರ್ಷಣ
 14. ದುರ್ಮುಖ
 15. ದುಷ್ಕರ್ಣ
 16. ವಿಕರ್ಣ
 17. ಸಲ
 18. ಸತ್ವಾನ
 19. ಸುಲೋಚನ
 20. ಚಿತ್ರ
 21. ಕಪಚಿತ್ರ
 22. ಚಿತ್ರಾಕ್ಷ
 23. ಚಾರುಚಿತ್ರ
 24. ಶರಾಸನ
 25. ದುರ್ಮದ
 26. ದುರ್ವಿಗಾಹ
 27. ವಿವಿತ್ಸು
 28. ವಿಕತಿನಂದ
 29. ಊರ್ಣನಾಭ
 30. ಸುನಾಭ
 31. ನಂದ
 32. ಉಪನಂದ
 33. ಚಿತ್ರಬಾಣ
 34. ಚಿತ್ರವರ್ಮ
 35. ಸುವರ್ಮ
 36. ದುರ್ವಿಮೋಚ
 37. ಅಯೋಬಾಹು
 38. ಮಹಾಬಾಹು
 39. ಚಿತ್ರಮಾಗ
 40. ಚಿತ್ರಕುಂಡಲ 
 41. ಭೀಮವೇಗ
 42. ಭೀಮಬೇಲ
 43. ವಾಲಕಿ
 44. ಬೇಲವರ್ಧನ
 45. ಉಗ್ರಾಯುಧ
 46. ಸುಷೇಣ
 47. ಕುಂಧಾಧಾರ
 48. ಮಹೋದರ
 49. ಚಿತ್ರಾಯುಧ
 50. ನಿಶಾಂಗಿ
 51. ಪಾಸಿ
 52. ವೃಂದಾರಕ
 53. ದೃಢವರ್ಮ
 54. ದೃಢಕ್ಷಾತ್ರ
 55. ಸೋಮಕೀರ್ತಿ
 56. ಅಂತುದರ
 57. ದ್ರಿಢಸಂಧ
 58. ಜರಾಸಂಧ 
 59. ಸತ್ಯಸಂಧ
 60. ಸದಾಸುವಾಕ
 61. ಉಗ್ರಶ್ರವಸ್
 62. ಉಗ್ರಸೇನ
 63. ಸೇನಾನಿ
 64. ದುಷ್ಪರಾಜ
 65. ಅಪರಾಜಿತ
 66. ಕುಂದಶೈ
 67. ವಿಶಾಲಾಕ್ಷ
 68. ದುರಾಧರ  
 69. ದೃಢಹಸ್ತ
 70. ಸುಹಸ್ತ
 71. ವತವೇಗ
 72. ಸುವರ್ಚ
 73. ಆದಿತ್ಯಕೇತು
 74. ಬಹವಾಸಿ
 75. ನಾಗದತ
 76. ಉಗ್ರಸಾಯಿ
 77. ಕವಚಿ
 78. ಕೃಧಾನ
 79. ಕುಂಧಿ
 80. ಭೀಮವಿಕ್ರ
 81. ಧನುರ್ಧರ
 82. ವೀರಬಾಹು
 83. ಅಲೋಲುಪ
 84. ಅಭಯ
 85. ದುರಾಧರ
 86. ದೃಢಹಸ್ತ
 87. ಧೃಢರತಾಶ್ರಯ
 88. ಅನಾದೃಷ್ಯ
 89. ಕುಂದಬೇಡಿ
 90. ವೀರಾವಿ
 91. ಚಿತ್ರಕುಂಡಲ
 92. ಪ್ರಧಾಮಾ
 93. ಅಮಪ್ರಮಾಧಿ
 94. ಧೀರಕರೋಮಾ
 95. ಸುವೀರ್ಯವಾನ್ 
 96. ದೀರ್ಘಬಾಹು
 97. ಸುಜಾತಾ
 98. ಕಾಂಚನಧ್ವಜ
 99. ವಿರಸಜ
 100. ರೌದ್ರಕರ್ಮ
 101. ದುಃಶಲ

ಮೂಲ

ಧೃತರಾಷ್ಟ್ರಂಗೆ ದಾಸಿಯಿಂದ 102ನೇ ಮಗ ಒಬ್ಬ ಇದ್ದ!

ಇವರಲ್ಲದೆ ಧೃತರಾಷ್ಟ್ರಂಗೆ ಯುಯುತ್ಸು ಅನ್ನೋ ಮತ್ತೊಬ್ಬ ಮಗ ಇರ್ತಾನೆ. ಇವನು ದುರ್ಯೋಧನನಿಗಿಂತ ಚಿಕ್ಕೋನು... ಆದ್ರೆ ಮಿಕ್ಕ ಎಲ್ಲ ಕೌರವರಿಗಿಂತ ದೊಡ್ಡೋನು. ಯುಯುತ್ಸು ತಾಯಿ, ಅರಮನೆಯ ಸೇವಕಿ ಸುಗಧ. ಮಹಾಭಾರತ ಯುದ್ಧದಲ್ಲಿ ಬದುಕುಳಿದ ಒಬ್ಬನೇ ಒಬ್ಬ ಕೌರವ ಅಂದ್ರೆ ಈ ಯುಯುತ್ಸು. ದಾಸಿಯ ಮಗನಾಗಿದ್ರಿಂದ ಇವನನ್ನ ಕೌರವರು ತುಂಬಾ ಕೀಳಾಗಿ ನೋಡ್ತಿರ್ತಾರೆ, ಹಾಗಾಗೇ ಯುದ್ಧದಲ್ಲಿ ಇವನು ಪಾಂಡವರ ಪಕ್ಷ ಸೇರ್ಕೊಂಡಿರ್ತಾನೆ. ಯುದ್ಧದ ನಂತರ, ಯುಯುತ್ಸು ಹಸ್ತಿನಾಪುರದ ರಾಜನ ರಕ್ಷಕನಾಗಿ ಅಧಿಕಾರ ವಹಿಸ್ಕೊತಾನೆ.

ಮೂಲ

ನಮಗೆ ಮಹಾಭಾರತದ ಬಗ್ಗೆ ಸಾಕಷ್ಟು ವಿಷಯ ಗೊತ್ತಿದೆ ಅನ್ಕೊಂಡ್ರೂ ಪ್ರತಿ ಸಲ ಹೊಸ ಹೊಸ ವಿಚಾರ ಗೊತ್ತಾಗ್ತಾನೆ ಇರುತ್ತೆ, ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: