ಈ 7 ಕಾರಣಗಳಿಗೂ ಟೊಮೆಟೊ ಜ್ಯೂಸ್ ಭಾಳ ಉಪಯೋಗ ಆಗತ್ತೆ ಅಂತ ಇವತ್ತೇ ಗೊತ್ತಾಗಿದ್ದು

ತೂಕ ಇಳ್ಸಕೊಳ್ಳೋಕೂ ಟೊಮೆಟೋ ಜ್ಯೂಸ್ ಬೇಕೇ ಬೇಕು!

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ದಾಳಿಂಬೆ ಸಿಪ್ಪೆ ಈ 10 ರೀತಿಯಲ್ಲಿ ಆರೋಗ್ಯಕ್ಕೆ ಒಳ್ಳೇದು ಅಂತ ಗೊತ್ತಾದ್ಮೇಲೆ ಯಾರೂ ಬಿಸಾಕಲ್ಲ

ಹಣ್ಣು ತಿಂದ್ರೆ ಆಯಿತು ಅನ್ಕೋತೀವಿ, ಆದರೆ ಸಿಪ್ಪೇನಲ್ಲಿ ಅಮೃತಾನೇ ಇದೆ!

ಹಣ್ಣು ತಿಂದಾದ್ಮೇಲೆ ಎನ್ ಮಾಡ್ತೀವಿ ಹೇಳಿ. ಸಿಪ್ಪೆ ತಗೊಂಡು ಕಸದ ಬುಟ್ಟಿಗೆ ಹಾಕ್ತೀವಿ.  ನಿಜ ಏನಂದ್ರೆ ಹಣ್ಣಿನ ಜೊತೆಗೆ ಸಿಪ್ಪೆಗೂ ಬೆಲೆ ಇರುತ್ತೆ ಗೊತ್ತಾ.? ಹಣ್ಣಿನ ಸಿಪ್ಪೆಯಿಂದಾ ಏನೇನೋ ಮಾಡ್ಬಹುದು. ದಾಳಿಂಬೆ ಹಣ್ಣಿನ ಸಿಪ್ಪೇನೂ ಹಾಗೇನೇ..ಹಣ್ಣು ಆರೋಗ್ಯಕ್ಕೆ ಹೇಗೆ ಒಳ್ಳೆದೋ ಸಿಪ್ಪೇನೂ ಹಾಗೆ ಅಂತೆ. ಹೇಗೆ ಅಂತೀರಾ ?? ಕೆಳ್ಗಡೆ ಓದ್ತಾ ಹೋಗಿ....

1. ಮುಖದಲ್ಲಿ ಮುತ್ತಿನಂಥ ಮೊಡವೆಗಳಿದ್ಯಾ?

ದಾಳಿಂಬೆ ಹಣ್ಣಿನ ಸಿಪ್ಪೇನಾ, ಬಿಸಿಲಲ್ಲಿ ಒಣಗಿಸಿ, ಚೆನ್ನಾಗಿ ಪುಡಿ ಮಾಡಿಟ್ಕೊಳ್ಳಿ. ಇದಕ್ಕೆ ಸ್ವಲ್ಪ ನೀರ್ ಮಿಕ್ಸ್ ಮಾಡಿ, ಪೇಸ್ಟ್ ತರ ಮಾಡ್ಕೊಂಡು ಮುಖಕ್ಕೆ ಹಚ್ಕೊಳ್ಳಿ. 30 ನಿಮಿಷದ ನಂತ್ರಾ ಉಗುರು ಬೆಚ್ಚಗಿನ ನೀರಿಂದ ಮುಖ ತೊಳ್ಕೊಳ್ಳಿ. ಮೊಡವೆ ಮತ್ತೆ ಮೊಡವೆ ಕಲೆ ಹೋಗಿಲ್ಲ ಅಂದ್ರೆ ಕೇಳಿ.

2. ಮುಖದ ತುಂಬಾ ಸುಕ್ಕಿದ್ಯಾ?

ನಿಮ್ದು ಡ್ರೈ ಸ್ಕಿನ್ ಇದ್ರೆ ದಾಳಿಂಬೆ ಪುಡಿನಾ ಹಾಲಿನ ಜೊತೆ ಮಿಕ್ಸ್ ಮಾಡಿ, ಆಯಿಲೀ ಸ್ಕಿನ್ ಇದ್ರೆ ದಾಳಿಂಬೆ ಪುಡಿ ಜೊತೆ ರೋಸ್ ವಾಟರ್ ಮಿಕ್ಸ್ ಮಾಡಿ, ಮುಖಕ್ಕೆ ಹಚ್ಕೊಳ್ಳಿ. ವಾರಕ್ಕೆ ಎರ್ಡ್ ಸಲ ಈರೀತಿ ಮಾಡಿದ್ರೆ ಆಯ್ತು. ಹೊಳೆಯುವಂಥಾ ಸ್ಕಿನ್ ನಿಮ್ಮದಾಗುತ್ತೆ.

3. ಚಳಿಗೆ ಮುಖ ಒಡೆದಿದ್ಯಾ?

ದಾಳಿಂಬೆ ಇದೆ ಅಲ್ವಾ.?ಇದು ನಿಮ್ಮ ಸ್ಕಿನ್ನ್ನ ಮಾಯ್ಸ್ಚರಿಸ್ ಮಾಡುತ್ತೆ. ಜೊತೆಗೆ ಮುಖದಲ್ಲಿ ಅನಾವಶ್ಯಕವಾದ ಕೊಳೆ ಇದ್ರೆ ಕ್ಲೀನ್ ಮಾಡುತ್ತೆ. ಜೊತೆಗೆ ಸನ್‌ಬರ್ನ್ ಕೂಡ ಆಗದಹಾಗೆ ತಡೆಯುತ್ತೆ. ದಾಳಿಂಬೆ ಸಿಪ್ಪೆ ಪುಡಿಗೆ ಸ್ವಲ್ಪ ಮೊಸರು ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿ 10 ನಿಮಿಷ ಇಟ್ಕೊಳ್ಳಿ. ಡೇಲೀ ಹೀಗೆ ಮಾಡ್ತಿದ್ರೆ ಮುಖ ಮಾಯ್ಸ್ಚರಿಸ್ ಆಗುತ್ತೆ ಜೊತೆಗೆ ಟ್ಯಾನ್ಕೂಡ ಆಗಲ್ಲಾ.

4. ಮುಖಕ್ಕೆ ಮನೆಲೇ ಸ್ಕ್ರಬ್ ಮಾಡ್ಬೇಕಾ?

ಮುಖದ ತುಂಬೆಲ್ಲ ಡೆಡ್ ಸೆಲ್ಸ್ ತುಂಬ್ಕೊಂಡಿದ್ರೆ  ಎನ್ ಚೆನ್ನಾ?. ಮುಖ ಸ್ಕ್ರಬ್ ಮಾಡ್ಲೇಬೇಕು. ಅದಕ್ಕೂ ದಾಳಿಂಬೆ .ಪುಡಿನೇ ಬೇಕು ಗೊತ್ತಾ!!.2 ಚಮಚ ದಾಳಿಂಬೆ ಪುಡಿಗೆ. 1 ಚಮಚ ಬ್ರೌನ್ ಶುಗರ್,1 ಚಮಚ ಜೇನುತುಪ್ಪ ಆಮೇಲೆ 1 ಚಮಚ ಎಣ್ಣೆ ಹಾಕಿ ಪೇಸ್ಟ್ ತರ ಮಾಡ್ಬೇಕು. ಇದ್ರಿಂದ  ಮುಖಾನ್ನಾ ಚೆನ್ನಾಗಿ ಉಜ್ಜಿ ಬೆಚ್ಚಗಿನ ನೀರಲ್ಲಿ ಮುಖ ತೊಳ್ಕೊಂಡ್ರೆ ಆಯ್ತಪ್ಪ. ಬ್ಯೂಟಿಪಾರ್ಲರ್ ಗೆ ಹೋಗೋದೇ ಬೇಡ ನೀವು.

5. ಮುಖಕ್ಕೆ ಪೌಡರ್ ಹಾಕ್ಬೇಕಾ?

ದಾಳಿಂಬೆ ಹಣ್ನಿಂದಾ ನಯವಾದ ಪುಡಿ ಮಾಡ್ಕೊಂಡು, ಬಿಸಿಲಿಗೆ ಹೋಗ್ತಾ ಹಾಕ್ಕೊಂಡ್ರೆ ಆಯ್ತಪ್ಪ. ಇದು ಪೌಡರ್ ಜೊತೆ ಸನ್‌ಸ್ಕ್ರೀನ್ ತರ ಕೂಡ ಕೆಲ್ಸ ಮಾಡುತ್ತೆ.

6. ಮೂಳೆಗಳು ಆರೋಗ್ಯವಾಗಿರಬೇಕಾ?

ಒಂದು ಗ್ಲಾಸ್ ಬಿಸಿನೀರಿಗೆ, ಒಂದು ಸ್ಪೂನ್ ದಾಳಿಂಬೆ ಸಿಪ್ಪೆಯ ಪೌಡರ್, 1 ಚಮಚ ನಿಂಬೆ ಹಣ್ಣಿನ ರಸ ಜೊತೆಗೆ ಸ್ವಲ್ಪ ಉಪ್ಪು ಸೇರ್ಸಿ, ದಿನ ಕುಡಿದ್ರೆ ಮೂಳೆಗಳ ಆರೋಗ್ಯ ಮತ್ತೆ ಶಕ್ತಿಗೆ ಸಹಕಾರಿ ಅಂತೆ.

7.  ಹೊಟ್ಟೆ ಚೆನ್ನಾಗಿರಬೇಕಾ?

ಜೀರ್ಣಕ್ರಿಯೆ ಸರಾಗ್ವಾಗಿ ಮಾಡಿ, ಹೊಟ್ಟೆ ಜೊತೆ ಕರುಳುಎಲ್ಲ ಕ್ಲೀನ್ ಆಗಿರ್ಬೇಕು ಅಂದ್ರೆ, ದಾಳಿಂಬೆ ಸಿಪ್ಪೆಯ ಪುಡಿ ಬೇಕೇ ಬೇಕು. ಅರ್ಧ ಕಪ್ ದಾಳಿಂಬೆ ಸಿಪ್ಪೆ ಪುಡಿನ್ನ 30 ನಿಮಿಷ ನೀರಲ್ಲಿ ನೆನ್ಸಿ. ಇದಕ್ಕೆ ಸ್ವಲ್ಪ ಜೀರಿಗೆ, ಮುಕ್ಕಾಲು ಲೋಟ ಮಜ್ಜಿಗೆ ಮತ್ತೆ ಸ್ವಲ್ಪ ಉಪ್ಪು ಹಾಕಿ, ಲೂಸ್ ಮೋಶನ್ ಇದ್ರೆ ದಿನಕ್ಕೆ 3 ಸಲ , ಇನ್ನೂ ಕರುಳು ಕ್ಲೀನ್ ಆಗ್ಬೇಕು ಅಂದ್ರೆ ವಾರಕ್ಕೆ 3 ಸಲ ಕುಡೀರಿ.

8. ತಲೆ ಹೊಟ್ಟು ಜಾಸ್ತಿ ನಾ? ಕೂದ್ಲೂ ಉದುರ್ತಾ ಇದ್ಯಾ?

ದಾಳಿಂಬೆ ಸಿಪ್ಪೆ ಪೌಡರ್ನಾ ತಲೆಗೆ ಹಾಕೊ ಎಣ್ಣೆ ಜೊತೆ ಮಿಕ್ಸ್ ಮಾಡಿ, ರಾತ್ರಿ ಮಲಗ್ತಾ ಇದನ್ನ ಹಚ್ಚಿ ಸ್ವಲ್ಪ ಮಸಾಜ್ ಮಾಡಿ, ಬೆಳಿಗ್ಗೆ ಎದ್ದು ತೋಳೀರಿ. ಕೂದ್ಲಉದ್ರೋದು ಕಡ್ಮೆ ಆಗುತ್ತೆ ಜೊತೆಗೆ  ಹೊಟ್ಟು ಸಹ ಮಾಯಾ.!!!

9. ಗಂಟಲು ನೋವಾ?

ದಾಳಿಂಬೆ ಹಣ್ಣಿನ ಸಿಪ್ಪೆನ್ನಾ ನೀರಲ್ಲಿ ಕುದ್ಸಿ, ಆ ನೀರಲ್ಲಿ ಗಂಟ್ಲು ಮುಕ್ಕಳಿಸ್ಬೇಕು. ಗಂಟ್ಲು ಕೆರೆತ, ಗಂಟ್ಲು ನೋವು ಏನಿದ್ರೂ ದೂರ ಓಡುತ್ತಂತೆ.

10. ಹಲ್ಲು ಚೆನ್ನಾಗಿರಬೇಕಾ?

ಸಿಪ್ಪೆ ಪೌಡರ್ ಜೊತೆ ಸ್ವಲ್ಪ ನೀರ್ ಮಿಕ್ಸ್ ಮಾಡಿ ಬಾಯಿ ಮುಕ್ಕಳಿಸಿದ್ರೆ ಆಯ್ತು ಬಾಯಿ ವಾಸ್ನೆ ಎಲ್ಲ ದೂರ ಆಗುತ್ತೆ. ಇನ್ನು ಒಸ್ಡಲ್ಲಿ ಏನಾದ್ರೂ ರಕ್ತ ಬರ್ತಾ ಇದ್ರೆ, ದಾಳಿಂಬೆ ಹಣ್ಣಿನ ಸಿಪ್ಪೆ ಪೌಡರ್ ನಾ ಒಸ್ಡಿಗೆ ಉಜ್ಜಬೇಕು ಗೊತ್ತಾ! ಇನ್ನೂ ಈ ಪೌಡರ್ಗೆ ಸ್ವಲ್ಪ ಕಾಳುಮೆಣ್ಸಿನ ಪೌಡರ್ ಸೇರ್ಸಿ ಹಲ್ಲಿಗೆ ಹಚ್ಕೊಳ್ತ ಇದ್ರೆ ಹಲ್ಲು ಹುಳುಕಾಗಲ್ವಾಂತೆ.!!!

 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: