ತಲೆ ಕೊರಿಯೋ ಈ 12 ಪ್ರಶ್ನೆಗಳಿಗೆ ನಾವು ಯಾವತ್ತೂ ಗೂಗಲ್ ಹತ್ತಿರ ಉತ್ತರ ಕೇಳಿರಲ್ಲ

ಒಂದಲ್ಲಾ ಒಂದು ಪ್ರಶ್ನೆ ತಲೆಗೆ ಬಂದೇ ಇರತ್ತೆ

ಚಿಕ್ಕ ಮಕ್ಕಳು ತುಂಬಾನೇ ಪ್ರಶ್ನೆ ಮಾಡ್ತಾರೆ. ಅದೇಕೆ ಹಾಗೆ ? ಇದ್ಯಾಕೆ ಹೀಗೆ ? ಅದು ಎಂತ ? ಇದು ಎಂತ ? ಇದ್ನ ಹೇಗ್ ಮಾಡೋದು?... ಇನ್ನೂ ಸಾವಿರ ಪ್ರಶ್ನೆಗಳು ಹುಟ್ಕೊಳ್ತಾನೇ ಇರತ್ತೆ. ನಿಮ್ಗೆ ಗೊತ್ತಿರೋವಷ್ಟು ನೀವು ಉತ್ರ ಕೊಟ್ಟಿರ್ತೀರಿ. ಆದ್ರೆ ಕೆಲ್ವೊಂದಕ್ಕೆ ಉತ್ರ ಗೊತ್ತಾಗ್ದೇ ಗೂಗಲ್ಲೋ , ಇಲ್ಲಾ ವೀಕೀಪಿಡೀಯಾ ಸಹಾಯ ಕೂಡಾ ತಗೊಂಡಿರ್ತೀರಿ ಬಿಡಿ. ಆದ್ರೆ ಒಂದೊಂದ್ಸರ್ತಿ ನಮ್ಗೂ ಡೌಟ್ ಬಂದೇ ಇರತ್ತೆ. ಆದ್ರೂ ಯಾರ್ ಗೂಗಲ್ ಮಾಡಿ ನೋಡ್ತಾರೆ ಅಂತ ಅನ್ಕೊಂಡು ಸುಮ್ನಾಗ್ತೀವಿ. ಅಂತಹದ್ದೇ ಒಂದಿಷ್ಟು ದಿನನಿತ್ಯದ ಪ್ರಶ್ನೆಗಳನ್ನ ಅಂತೆಕಂತೇಲಿ ಕೊಟ್ಟಿದ್ದೀವಿ ನೋಡಿ. 

1. ರೆಕಾರ್ಡ್ ಮಾಡಿದಾಗ ನಮ್ಮ ಧ್ವನಿ ಯಾಕೆ ಬೇರೆ ತರ ಕೇಳತ್ತೆ?

ನಮ್ ನಮ್ ಧ್ವನಿಯನ್ನ ನಾವ್ ರೆಕಾರ್ಡ್ ಮಾಡೇ ಇರ್ತೀವಿ. ಆದ್ರೆ ಅದೇ ರೆಕಾರ್ಡನ್ನ ನಾವ್ ಕೇಳ್ದಾಗ ಅದು ನಮ್ ಧ್ವನೀನಾ ಅಂತ ನಮ್ಗೆ ಡೌಟಾಗತ್ತೆ. ನಮ್ ಮೂಳೆ ಶಕ್ತಿ ಮೇಲೆ ನಮ್ ಧ್ವನಿ ನಿರ್ಧಾರ ಆಗಿರತ್ತಂತೆ. ನೀವ್ ಏನ್ ಕೇಳಿರ್ತಿರೋ ಅದು ಗಾಳಿ ಸಹಾಯದಿಂದ ಕೇಳಿರೋದು. ನಾವ್ ಯಾವ ಸೌಂಡ್ ಕೇಳಿರ್ತೇವೇ ಆ ಸೌಂಡು ದಿನನಿತ್ಯ ಇರೋ ಶಬ್ದ ಹಾಗೂ ಲಘು ಆವರ್ತನದಿಂದ ಕೂಡಿರ್ತದೆ. ಇದ್ನ ಪ್ರೊಡ್ಯೂಸ್ ಮಾಡೋಕೆ ತಲೆಬುರಡೇಲಿರೋ ಮೂಳೆಯ ಸಹಾಯ ಬೇಕೇ ಬೇಕು. 

2. ಜಿಲ್ಲ್ ಅನ್ನೋ ಐಸ್ ಕ್ರೀಮ್ ತಿಂದಾಗ, ನೀರು ಕುಡಿದಾಗ ತಲೆನೋವು ಯಾಕೆ ಬರತ್ತೆ?

ಐಸ್ ಕ್ರೀಮ್ ತಿಂದಾಗ್ಲೋ ಇಲ್ಲ ತಣ್ಣಗಿನ ನೀರನ್ನ ಕುಡ್ದಾಗ್ಲೋ ಅಥ್ವಾ ಬೆಳ್ಳಂಬೆಳಗ್ಗೆ ಪಾರ್ಕಲ್ಲಿ ವಾಕಿಂಗ್ ಮಾಡ್ದಾಗ್ಲೋ ನಿಮ್ಗೆ ತಲ್ನೋವು ಬರೋದು ಗ್ಯಾರಂಟಿ. ನಮ್ ಗಂಟಲಲ್ಲಿರೋ ಅಂಗುಳಿಗೆ ಸಂಕೋಚನ ಮತ್ತೆ ಉಬ್ಬರ ಇನ್ನೋ ಎರಡು ಗುಣಗಳಿವೆ. ಇವೆರಡೂ ಗುಣಗಳು ಕಮ್ಮಿ ಉಷ್ಣಾಂಶಕ್ಕೆ ಸಕ್ಕತ್ತಾಗಿ ರೆಸ್ಪಾನ್ಸ್ ಕೊಟ್ಟಾಗ ಮೇಲ್ಗಡೇ ಹೇಳಿರೋ ತಲ್ನೋವು ಬರತ್ತೆ. 

ಮೂಲ

3. ಸೂರ್ಯನ ಕಿರಣ ತಾಗಿದಾಗ ನಮ್ಮ ಚರ್ಮ ಕಪ್ಪಿಡೋ ಹಾಗೆ ಮತ್ತು ಕೂದಲು ಹೊಳಿಯೋ ಹಾಗೆ ಯಾಕೆ ಕಾಣತ್ತೆ?

ಸೂರ್ಯನ ಕಿರಣ ಮೆಲನಿನನ್ನ ತುಂಡರಿಸ್ತದೆ. ಈ ಮೆಲನಿನ್ ನಮ್ ಕೂದ್ಲಿಗೆ ಮತ್ತೆ ಚರ್ಮಕ್ಕೆ ಬಣ್ಣ ಕೊಡೋವಂತಹದ್ದು. ಚರ್ಮ ಮತ್ತೆ ಕೂದ್ಲಿಗೆ ಹೋಲಿಸಿ ನೋಡಿದ್ರೆ ಕೂದ್ಲಿನ ಆಯಸ್ಸು ಕಮ್ಮಿನೇ. ವರ್ಣದ್ರವ್ಯ ಯಾವಾಗ ಚದುರತ್ತೋ ಆವಾಗ ನಮ್ ಕೂದ್ಲೂ ಆ ಬಣ್ಣಗಳನ್ನ ಪೂರ್ತಿಯಾಗಿ ಭರ್ತಿ ಮಾಡ್ಸಕೊಳ್ಳಲ್ಲ ಅದ್ಕೇ ನಮ್ ಕೂದ್ಲು ಬೆಳಕಿಗೆ ಅಥ್ವಾ ಸೂರ್ಯನ ಕಿರಣಕ್ಕೆ ಹೊಳೆಯೋ ಹಾಗೇ ಕಾಣ್ಸತ್ತೆ . ಅದೇ ತರ ನಮ್ ಚರ್ಮ ಸಕ್ಕತ್ತಾಗಿ ಆ ಚದುರಿದ ಬಣ್ಣಗಳನ್ನ ಭರ್ತಿ ಮಾಡ್ಕೊಳ್ತದೆ. ಅದ್ಕೆ ನಮ್ ಚರ್ಮ ಅಷ್ಟು ಗಾಢವಾಗಿರೋ ಬಣ್ಣ ಪಡ್ಕೊಳ್ತದೆ. 

4. ಚಿಕ್ಕಮಕ್ಕಳಿಗೆ ಸಮಯ ಯಾಕೆ ಬೇಗ ಕಳಿಯಲ್ಲ?

ಚಿಕ್ಕ ಮಕ್ಕಳು ತಮ್ಮ ಸುತ್ತ ಮುತ್ತ ಇರೋ ವಸ್ತುಗಳನ್ನ ಆದಷ್ಟು ಪರಿಚಯ ಮಾಡ್ಸಕೊಳ್ಳೋದಕ್ಕೆ ಇಷ್ಟ ಪಡೋದ್ರಿಂದ ಅವ್ರುಗಳು ಜಾಸ್ತೀನೇ ನೆನಪಿಟ್ಕೊಂಡಿರ್ತಾರೆ.  ಒಂದು ವರ್ಷದಲ್ಲಿ ಅವ್ರು ಸಂಗ್ರಹ ಮಾಡಿರೋ ವಿಷ್ಯಗಳು ಅವ್ರ ಬೆಳವಣಿಗೆಗಿಂತ ಜಾಸ್ತಿನೇ ಅನ್ಸಬಿಡತ್ತೆ. ಯಾವಾಗ್ಲಾದ್ರೂ ಒಂದು ಸನ್ನಿವೇಶವನ್ನ ಎದ್ರುಸೋವಾಗ ನಾವು ಅವ್ರ ಜೊತೇನೇ ಬೆರ್ತುಕೊಂಡಿರೋದ್ರಿಂದ ಅವ್ರಿಗೆ ಆ ಸನ್ನಿವೇಶ ದೊಡ್ಡದಾಗಿ ಕಾಣ್ಸಲ್ಲ. 

ಮೂಲ

5. ಎಷ್ಟೇ ಚಳೀಲೂ ಕಣ್ಣು ಮಾತ್ರ ಯಾಕೆ ಮರಗಟ್ಟಲ್ಲ?

ಎಷ್ಟೇ ಚಳಿ ಇದ್ರೂ ನಮ್ ಕಣ್ಣಿಗೆ ಆ ಚಳಿ ತಾಗಲ್ಲ. ಯಾಕಂದ್ರೆ ನಮ್ ಕಣ್ಣಲ್ಲಿ ಉಷ್ಣಾಂಶವನ್ನ ಗ್ರಹಿಸೋ ಯಾವ್ದೇ ರೀತಿ ಗ್ರಾಹಕಗಳೂ ಇಲ್ಲ. 

6. ನಾವು ಯಾಕೆ ನಿಂಬೆ ಹಣ್ಣು ತಿಂದಾಗ ಕಣ್ಣು ಮುಚ್ತೀವಿ?

ನಿಂಬೆ ಹಣ್ಣನ್ನ ತಿಂದಾಗ ನಾವ್ ಕಣ್ಮುಚ್ಚೇ ಕಣ್ಮುಚ್ತೇವೆ ಅಲ್ವಾ? ಕಣ್ಮುಚ್ಚೋದ್ರಿಂದ ಹುಳಿ ಅಂಶ ಕಡ್ಮೆಯಾಗತ್ತೆ. ಕಣ್ಮುಚ್ಚಿಲ್ಲಾಂದ್ರೆ ನಮ್ ತಲೆ ಭಾಗದಲ್ಲಿರೋ ತೆಳುವಾದ ಒಳಚರ್ಮಗಳಿಗೆ ತುಂಬಾನೇ ಹಾನಿಯಾಗತ್ತೆ. 

ಮೂಲ

7. ಕಪ್ಪು ವಸ್ತು ಮೇಲೆ ಕೂತಿರೋ ಧೂಳು ಬಿಳಿ ಮತ್ತು ಬಿಳಿ ವಸ್ತು ಮೇಲೆ ಕೂತಿರೋ ಧೂಳು ಕರಿಯಾಗಿ ಯಾಕೆ ಕಾಣತ್ತೆ?

 ಕಪ್ಪು ವಸ್ತುವಿನ ಮೇಲೆ ಕೂತಿರೋ ಧೂಳು ಯಾವಾಗ್ಲೂ ಬಿಳಿಯಾಗೇ ಇರೋದು ಅದ್ರ ಸಣ್ಣ ಸಣ್ಣ ಕಣಗಳಿಂದ. ಧೂಳಿನ ಬಣ್ಣ ಕಂದು. ಆದ್ರೆ ಅದ್ರಲ್ಲಿರೋ ಸಣ್ಣ ಸಣ್ಣ ಕಣಗಳಿಂದ ನಮ್ಗೆ ಧೂಳಿನ ನಿಜವಾದ ಬಣ್ಣಾನ ಕಂಡುಹಿಡಿಯೋಕೆ ಆಗಲ್ಲ. ಅದ್ಕೆ ನಮ್ಗೆ ಕಪ್ಪು ವಸ್ತುವಿನ ಮೇಲೆ ಕೂತಿರೋ ಧೂಳು ಯಾವಾಗ್ಲೂ ಬಿಳಿಯಾಗೇ ಇರತ್ತೆ. ಬಿಳಿ ವಸ್ತುವಿನ ಮೇಲ್ಬಿದ್ದಿರೋ ಧೂಳು ಕಪ್ಪಾಗೇ ಇರತ್ತೆ.

8.  ಹಕ್ಕಿಗಳು ವಿ ಆಕಾರದಲ್ಲೇ ಯಾಕೆ ಹಾರಾಡುತ್ತವೆ?

ಹಕ್ಕಿಗಳು ವಿ ಆಕಾರದಲ್ಲಿ ಆಕಾಶದಲ್ಲಿ ಹಾರ್ತಾ ಇರತ್ತೆ. ಈ ರೀತಿ ಯಾಕ್ ಹಾರ್ತಾವೇ ಅಂದ್ರೆ ತಮ್ ಶಕ್ತಿಯನ್ನ ಉಳ್ಸಕೊಳ್ಳೋಕೆ. ಹಕ್ಕಿಗಳ ಗುಂಪಲ್ಲಿರೋ ಒಂದು ಹಕ್ಕಿ ನಾಯಕತ್ವವನ್ನ ವಹಿಸ್ಕೊಂಡು ಮುಂದಕ್ಕೆ ಇರತ್ತೆ. ಇದು ತನ್ನೆಲ್ಲಾ ಶಕ್ತಿಯನ್ನ ಉಪಯೋಗ್ಸಕೊಂಡು ಮುಂದೆ ಮುಂದೆ ನೇರವಾಗಿ ಹಾರಿ ಒಂದು ಗಾಳಿಯ ಸುರುಳಿಯನ್ನ ಉಳಿದ ಹಕ್ಕಿಗಳಿಗೆ ಮಾಡಿಕೊಡತ್ತೆ. ಈ ಸುರುಳಿಯನ್ನೇ ಹಿಂಬಾಲ್ಸಕೊಂಡು ಬರೋ ಉಳಿದ ಹಕ್ಕಿಗಳಿಗೆ ಜಾಸ್ತಿ ಶಕ್ತಿಯನ್ನ ಖರ್ಚು ಮಾಡ್ಬೇಕಂತಿಲ್ಲ ಸ್ವಲ್ಪಾನೇ ಸಾಕಾಗಿರತ್ತೆ. 

ಮೂಲ

9. ಬಸ್ಸು ಕಾರಲ್ಲಿ ಹೋಗೋವಾಗ ಮರ ಗಿಡಗಳು ಹಿಂದಕ್ಕೆ ಓಡಿದಂತಾಗೋದು ಯಾಕೆ?

ಬಸ್ಸಲ್ಲೋ ಕಾರಲ್ಲೋ ಇಲ್ಲಾ ಯಾವ್ದೇ ಗಾಡೀಲಿ ಪ್ರಯಾಣ ಮಾಡೋವಾಗ ಮರಗಿಡಗಳೂ ಹಿಂದಕ್ಕೆ ಒಡ್ದಾಗೆ ಕಾಣತ್ತೆ ಅಲ್ವಾ? ಯಾಕಂತ ಗೊತ್ತಾ ? ನಮ್ ದೇಹದ ಬೇರೆ ಬೇರೆ ಅಂಗಗಳು ಬೇರೆ ಬೇರೆ ತರದ ಸಂದೇಶಗಳನ್ನ ನಮ್ ಮಿದುಳಿಗೆ ಕೊಡ್ತಿರತ್ತೆ ಅದಕ್ಕೇ ಪಾಪ ಮಿದುಳಿಗೆ ಕನ್ ಫ್ಯೂಸ್ ಆಗೋಗತ್ತೆ.

10. ನೀರು ಮೇಲಿಂದ ಕೆಳಗಡೆ ಬೀಳೋವಾಗ ಶಬ್ದ ಯಾಕಾಗತ್ತೆ?

ಆ ತರ ಶಬ್ದ ಬರೋದು ನೀರಿನ ಗುಳ್ಳೆ ಒಡ್ದೋಗೋದ್ರಿಂದಂತೆ.

ಮೂಲ

11. ಯಾವಾಗ್ಲೂ ಯಾಕೆ ಉಂಗುರದ ಬೆರಳಿಂದಾನೇ ರಕ್ತ ತೆಗೀತಾರೆ?

ಉಂಗುರದ ಬೆರಳಿನ ಚರ್ಮ ಗಟ್ಟಿಯಾಗಿರೋದ್ರಿಂದ ಚುಚ್ದಾಗ ನೋವಾಗಲ್ಲ,  ಅದಕ್ಕೇ ರಕ್ತ ಪರೀಕ್ಷೆಗೆ ಈ ಬೆರಳಿಂದಾನೇ ರಕ್ತ ತೆಗಿಯೋದು. ಕಿರು ಬೆರಳು ಮತ್ತೆ ಹೆಬ್ಬೆರಳು ನಮ್ ಮಣಿಕಟ್ಟಿಗೆ ಹತ್ತಿರದಲ್ಲಿರೋದ್ರಿಂದ ಎನಾದ್ರೂ ಇನಫೆಕ್ಷನ್ ಆದ್ರೆ ಅದು ಕೈ ಪೂರ್ತಿ ಹರಡತ್ತೆ. ಅದೂ ಅಲ್ದೇ ಉಂಗುರ ಬೆರಳಿನ ಚರ್ಮ ತುಂಬಾನೇ ಗಡುಸಾಗಿರತ್ತೆ ಅದಕ್ಕೇನಾದ್ರೂ ಆದ್ರೆ ಬೇಗನೇ ವಾಸಿಯಾಗ್ಬಿಡತ್ತೆ. ಜೊತೆಗೆ ಉಂಗುರದ ಬೆರಳಿಗೆ ನೋವನ್ನ ತಡ್ಕೊಳ್ಳೋ ಶಕ್ತಿ ಜಾಸ್ತೀನೇ ಇರತ್ತೆ. 

12. ರೋಮಾಂಚನ ಆದಾಗ ಕೂದಲು ಯಾಕೆ ಎದ್ದು ನಿಲ್ಲತ್ತೆ?

ಮೈ ಮೇಲಿನ ರೋಮ ನಿಮಿರಿ ನಿಲ್ಲೋದಕ್ಕೆ , ಕೂದಲಿನಲ್ಲಿ ಚಿಕ್ಕ ಚಿಕ್ಕ ಕಿರುಚೀಲಗಳಂತಿರೋ ವಸ್ತುಗಳು ಸಂಕುಚಿತವಾಗೋದೇ ಕಾರಣ ಅಂತೆ. ಇದು ಹೆಚ್ಚಾಗಿ ಪ್ರಾಣಿಗಳಲ್ಲಿ ಕಂಡು ಬರತ್ತೆ. ಪ್ರಾಣಿಗಳು ಅಪಾಯದ ಸಂದರ್ಭದಲ್ಲಿ  ತಮ್ಮನ್ನ ರಕ್ಷಣೆ ಮಾಡಕೊಳ್ಳೋಕೆ  ಈ ರೀತಿ ಕೂದಲನ್ನ ನಿಮಿರಿಸಿ ಬಿಡ್ತಾವೆ. ಇದ್ರಿಂದ ಪ್ರಾಣಿಗಳ ಆಕಾರ ದೊಡ್ಡದಾಗಿ ಯಾರ್ಗಾದ್ರೂ ಹೆದ್ರಿಕೆ ಹುಟ್ಸತ್ತೆ. ಮನುಷ್ಯ ಕೂಡಾ ತುಂಬಾನೇ ಎಮೋಷನಲ್ ಆದಾಗ ಇಲ್ಲಾ ಚಳಿಯಾದ ವಾತಾವರಣದಲ್ಲಿದ್ದಾಗ ಈ ರೀತಿ ರೋಮಗಳು ನಿಮಿರ್ ನಿಲ್ಲತ್ತೆ. ಈ ರೀತಿ ನಿಮಿರ್ ನಿಲ್ಲೋದ್ರಿಂದ ನಮ್ ದೇಹದಲ್ಲಿ ಶಾಖ ಹೆಚ್ಚಾಗತ್ತೆ. ಇದೆಲ್ಲಾ ಆಗ್ಬೇಕಂದ್ರೆ ಅಡ್ರಿನಲಿನ್ ಹಾರ್ಮೋನ್ ಸ್ರವಿಸ್ಲೇ ಬೇಕು.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: