ಮೊಬೈಲ್ ಯುಗದಲ್ಲಿ ಬೆನ್ನು ನೇರವಾಗಿ ಇಟ್ಕೊಳ್ಳಕ್ಕೆ ಈ 9 ಅಭ್ಯಾಸ ರೂಢಿಸ್ಕೊಂಡು ನಿಶ್ಚಿಂತರಾಗಿರಿ

ನೇರವಾಗಿದ್ರೆ ಚೆನ್ನಾಗೂ ಕಾಣಿಸ್ತೀರಿ.

ನಮ್ಮಲ್ಲಿ ತುಂಬಾ ಜನ ಸಾಧ್ಯವಾದಷ್ಟೂ ನಮ್ಮ ಬೆನ್ನು ನೇರವಾಗಿ ಇರೋಹಾಗೆ ನೋಡ್ಕೊಳಕ್ಕೆ ಪ್ರಯತ್ನ ಮಾಡ್ತೀವಿ. ಎಲ್ರಿಗೂ ಇದನ್ನ ಸಾಧಿಸಕ್ಕೆ ಆಗಲ್ಲ. ಈ ಕೆಳಗಿರೋ ಉಪಾಯಗಳು ನಮ್ಮ ಪ್ರಯತ್ನ ಒಳ್ಳೆ ಪ್ರತಿಫಲ ಕೊಡಬಹುದು

1. ನಿಮ್ಮ ಭಂಗಿ ಸರಿಮಾಡುವಂತ ವ್ಯಾಯಾಮ ಮಾಡಿ.

ಪ್ರತಿದಿನ ಕನಿಷ್ಠಪಕ್ಷ 10 -20 ನಿಮಿಷ ಬಿಡುವು ಮಾಡಿಕೊಂಡು ನಿಮ್ಮ ಬೆನ್ನಿನ  ಭಂಗಿ ಸರಿಯಾಗುವುದಕ್ಕೆ ಸಹಾಯ ಮಾಡೋ ವ್ಯಾಯಾಮ ಮಾಡಿ. ನಿಮಗೆ ಹೆಚ್ಚು ದಣಿವಾಗೋಹಾಗೆ ಮಾಡ್ಕೋಬೇಡಿ. ಹಾಗೇನಾದ್ರೂ ದಣಿವಾದ್ರೆ ನಿಮ್ಮ ಬೆನ್ನಿನ  ಭಂಗಿ ಸರಿ ಹೋಗೋಬದಲು ಇನ್ನೂ ಕೆಟ್ಟದಾಗುತ್ತೆ. ಆಫೀಸಲ್ಲಿ ಕೂತು ಕೆಲಸ ಮಾಡೋವ್ರು ನಿಮ್ಮ ಬೆನ್ನು, ಕತ್ತು ಹಾಗೆ ಹೆಗಲಿಗೆ ಸಂಭಂದಿಸಿದ ವ್ಯಾಯಾಮಗಳನ್ನು ಮಾಡೋದಕ್ಕೆ ಮರೀಬೇಡಿ.

2. ಆಫೀಸಲ್ಲಿ ಕೆಲಸ ಮಾಡೋವಾಗ ಸರಿಯಾದ ವ್ಯವಸ್ಥೆ ಮಾಡ್ಕೊಂಡು ಕೂತ್ಕೊಳಿ.

ಆಫೀಸಲ್ಲಿ ಕೆಲಸ ಮಾಡೋವಾಗ ಸರಿಯಾದ ವ್ಯವಸ್ಥೆ ಮಾಡ್ಕೊಂಡು ಕೂತ್ಕೊಳಿ. ಅದ್ರಲ್ಲೂ ಕಂಪ್ಯೂಟರ್ ಮುಂದೆ ದಿನ ಇಡೀ ಕೂತ್ಕೊಂಡು ಕೆಲಸ ಮಾಡೋವ್ರು ನಿಮ್ಮ ಟೇಬಲ್, ಕುರ್ಚಿ ಹಾಗೆ ಕಂಪ್ಯೂಟರ್ ಸರಿಯಾಗಿ ಅಡ್ಜಸ್ಟ್ ಮಾಡಿ ಕೂತ್ಕೊಳಿ. ನಿಮ್ಮ ಬೆನ್ನಿನ  ಭಂಗಿ ಸರಿಹೋಗಕ್ಕೆ ಸಹಾಯ ಆಗುತ್ತೆ.

ಮೂಲ

3. ನಿಮ್ಮ ಮೊಬೈಲ್, ಲ್ಯಾಪ್ಟಾಪ್ಗಳಲ್ಲಿ ವಿಶೇಷ ಆಪ್ ಹಾಕ್ಕೊಳಿ.

ಆಪ್ ಗೂ ಬೆನ್ನಿನ  ಭಂಗಿಗೂ ಏನು ಸಂಭಂದ ಅನ್ನೋ ಪ್ರಶ್ನೆನಾ?? ಹೌದು ಕೆಲವೊಂದು ಅದ್ಭುತವಾದ ಆಪ್ ಇವೆ.ಅದನ್ನ ಹಾಕ್ಕೊಂಡ್ರೆ ನಿಮ್ಮ ಬೆನ್ನು ನೇರವಾಗಿರೋಹಾಗೆ ಮಾಡಕ್ಕೆ ಸಹಾಯ ಮಾಡುತ್ತೆ. ಅದ್ರಲ್ಲಿ ಒಂದು ನೇಕೋಜ್(Nekoze). ಇದು ಇಂಮ್ಮ ಮೊಬೈಲ್ನಲ್ಲಿ ಇದ್ರೆ ಸಾಕು ಇದು ನಿಮ್ಮನ್ನ ಗಮನಿಸ್ತಾ ಇದ್ದು, ನೀವು ಯಾವಾಗ ನಿಮಗೇ ಗೊತ್ತಾಗ್ದೇ ಇರೋಹಾಗೆ ಮುಂದಕ್ಕೆ ಬಗ್ಗಕ್ಕೆ ಶುರು ಮಾಡ್ತಿರೋ ತಕ್ಷಣ ಅಲಾರಾಂ ಹೊಡೆದು ನಿಮಗೇ ಎಚ್ಚರಿಕೆ  ಕೊಡುತ್ತೆ.

4. ಮೊಬೈಲ್ ನೋಡೋವಾಗ ಸರಿಯಾದ ರೀತಿಲಿ ಹಿಡ್ಕೊಂಡು ನೋಡಿ.

ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಇದ್ದೆ ಇರುತ್ತೆ. ಸಾಮಾನ್ಯವಾಗಿ ಮೊಬೈಲ್ ನೋಡೋವಾಗ ನಾವು ಸ್ವಲ್ಪ ಮುಂದಕ್ಕೆ ಬಗ್ಗಿ ನೋಡ್ತೀವಿ. ಅದ್ರಲ್ಲೂ ಸ್ಮಾರ್ಟ್ ಫೋನ್ ನಲ್ಲಿ ಬ್ರೌಸ್ ಮಾಡೋವಾಗ, ಲ್ಯಾಪ್ಟಾಪ್ ಉಪಯೋಗಿಸೋವಾಗ ಇನ್ನೂ ಹೆಚ್ಚು. ಸಾಧ್ಯವಾದಷ್ಟೂ ಮೊಬೈಲ್ ಫೋನನ್ನ ಕಣ್ಣೆದುರಿಗೆ ಸರಿಯಾಗಿ ಇಟ್ಕೊಂಡು ನೋಡಿ. ಲ್ಯಾಪ್ಟಾಪ್ ಉಪಯೋಗಿಸೊವಾಗ್ಲೂ ನಿಮಗೆ ಸರಿ ಹೊಂದೊ ಆಂಗಲ್ ನಲ್ಲೆ ಇಟ್ಕೊಂಡು ನೋಡಿ.

ಮೂಲ

5. ಸರಿಯಾಗಿ ಉಸಿರಾಡೋದನ್ನ ಅಭ್ಯಾಸ ಮಾಡಿ.

ಉಸಿರಾಡೋದು ನಮ್ಮ ಓಡಾಟಕ್ಕೆ, ಇಂದ್ರಿಯಗಳಿಗೆ ತುಂಬಾನೇ ಮುಖ್ಯ. ನಮ್ಮ ಶ್ವಾಸಕೋಶದ ಪೊರೆ ಉಪಯೋಗಿಸಿ ಅದು ಸರಿಯಾಗಿ ಹಿಗ್ಗೋದು ಕುಗ್ಗೋದು ಆಗೋತರ ಉಸಿರಾಡಿದ್ರೆ ಸಾಕು, ಸ್ವಾಭಾವಿಕವಾಗೇ ನಮ್ಮ ಬೆನ್ನಿಗೆ ಒಳ್ಳೆ ಭಂಗಿ ಬರುತ್ತೆ.

6. ಆಗಾಗ ನಿಮ್ಮ ದೇಹದ ಭಂಗಿಯನ್ನ ಗಮನಿಸ್ತಾ ಇರಿ.

ಯಾವಾಗ್ಲೂ ನಿಮ್ಮ ಬೆನ್ನು ನೇರವಾಗಿರೋ ಹಾಗೆ ಎಚ್ಚರ ವಹಿಸಿ. ಬರಿ ಕೂತ್ಕೊಂಡು ಕೆಲಸ ಮಾಡೋವಾಗ ಅಲ್ಲ ವೆಹಿಕಲ್ ಓಡಿಸೋವಾಗ, ಮಲಗೋವಾಗ ಎಲ್ಲ ಸಮಯದಲ್ಲೂ.  


 

ಮೂಲ

7. ಯೋಗ ಅಥವಾ ಏರೋಬಿಕ್ಸ್ ನಂತಹ ವ್ಯಾಯಾಮ ಮಾಡೋ ಅಭ್ಯಾಸ ಮಾಡ್ಕೊಳಿ.

ಯೋಗ ಅಥವಾ ಏರೋಬಿಕ್ಸ್ ನಂಥ ವ್ಯಾಯಾಮ ಮಾಡೋದ್ರಿಂದ ನಮ್ಮ ಹೊಟ್ಟೆಯಿಂದ ಮೂತ್ರಪಿಂಡವಿರೋ ಜಾಗದವರೆಗಿನ ಸ್ನಾಯುಗಳಿಗೆ ಶಕ್ತಿ ತುಂಬುತ್ತೆ, ಇದು ನಿಮ್ಮ ಬೆನ್ನಿನ ಭಂಗಿ ಸರಿ ಹೋಗೋಕ್ಕೆ ಸಹಾಯ ಮಾಡುತ್ತೆ.

8. ಬೆನ್ನಿಗೆ ಹೆಚ್ಚು ಒತ್ತಡ ಆಗ್ದೇ ಇರೋಹಾಗೆ 135 ಡಿಗ್ರಿ ಆಂಗಲ್ ನಲ್ಲಿ ಕೂತ್ಕೊಳಿ.

ಯಾವಾಗ್ಲೇ ಕೂತ್ಕೊಂಡು ಅದ್ರಲ್ಲೂ ತುಂಬಾ ಹೊತ್ತು ಕೂತ್ಕೋಬೇಕಾದಾಗ ಈ ತರ ಕೂತ್ಕೊಂಡ್ರೆ ನಿಮ್ಮ ಬೆನ್ನಿಗೆ ಹೆಚ್ಚಿನ ಒತ್ತಡ ಬೀಳಲ್ಲ, ಇದು ನಿಮ್ಮ ಬೆನ್ನಿನ ಭಂಗಿ ಸರಿಹೋಗಕ್ಕೆ ಸಹಾಯ ಮಾಡುತ್ತೆ.

ಮೂಲ

9. ಸರಿಯಾಗಿ ನಿಂತ್ಕೊಳೋ ಅಭ್ಯಾಸ ಮಾಡ್ಕೊಳಿ.

ನಿಂತ್ಕೊಂಡಾಗ ಹಿಂದಕ್ಕೋ ಮುಂದಕ್ಕೂ ಬಗ್ಗದೆ ಸಾಧ್ಯವಾದಷ್ಟೂ ನೇರವಾಗಿ ನಿಂತ್ಕೊಳೋ ಪ್ರಯತ್ನ ಮಾಡಿ. ನೀವು ಸರಿಯಾಗಿ ನಿಂತ್ಕೊಂಡ್ರೆ ನಿಮ್ಮ ಬೆನ್ನು ನೆರವಾಗಿರುತ್ತೆ, ಪೃಷ್ಠದ ಭಾಗ ಸ್ವಲ್ಪ ಮುಂದಕ್ಕೆ, ಭುಜ ಸ್ವಲ್ಪ ಹಿಂದಕ್ಕೆ ಇರುತ್ತೆ. ನಿಮ್ಮ ಕಾಲು ನಿಮ್ಮ ಭುಜದ ಅಳತೆಗೆ ಸರಿಯಾಗಿ ಇಟ್ಕೊಂಡಿರ್ತೀರಿ. ನಿಮ್ಮ ಬೆನ್ನಿನ ಮೂಳೆ ನಿಮ್ಮ ದೇಹ ಸರಿಯಾಗಿಡಬೇಕು ಅಂದ್ರೆ ಇದೆ ಒಳ್ಳೆ ಭಂಗಿ. ಜೋಬಿನೊಳಗೆ ಕೈ ಹಾಕೋ ಅಭ್ಯಾಸ ಇದ್ರೆ ಅದನ್ನ ಸಾಧ್ಯವಾದಷ್ಟೂ ಬಿಡಿ, ಅದು ನೀವು ಬಗ್ಗೊ ಹಾಗೆ ಮಾಡುತ್ತೆ.

ಫಿಟ್ ಆಗಿ ಕಾಣಿಸೋದು ಅಷ್ಟೇ ಅಲ್ಲ ಆರೋಗ್ಯಕ್ಕೂ ಒಳ್ಳೇದು, ನಿಮ್ಮ ಭಂಗಿ, ಹಾವಭಾವ ನಿಮ್ಮನ್ನ ನೋಡ್ತಿರೋವ್ರಿಗೆ ಸರಿಯಾದ ಸಂದೇಶ ಕೊಡುತ್ತೆ. ಇದನ್ನ ನೋಡಿಯೂ ಮನುಷ್ಯನ ಸ್ವಭಾವ ತಿಳ್ಕೊಬಹುದು.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನೀವು ಯಾವ ತಿಂಗಳಲ್ಲಿ ಹುಟ್ಟಿದೀರಿ ಅನ್ನೋದ್ರಿಂದ ನಿಮ್ಮ ಸ್ವಭಾವದ ಬಗ್ಗೆ ಎಷ್ಟು ಗೊತ್ತಾಗುತ್ತೆ ನೋಡಿ

ಸ್ವಭಾವ ಹಿಂಗೆ ಅಂದ ಮಾತ್ರಕ್ಕೆ ನೀವು ಬದಲಾಯಿಸಿಕೊಳಕ್ಕೆ ಆಗಲ್ಲ ಅಂತ ಅಲ್ಲ

ದಿನಾ ನ್ಯೂಸ್ ಪೇಪರ್ ಮನೆಗ್ ಬಂದ್ ತಕ್ಷಣ, ದಿನ ಭವಿಷ್ಯ, ವಾರಭವಿಷ್ಯ ನೋಡೋರ್ ಪೈಕಿ ನೀವೂನಾ? ಇವತ್ತಿನ್ ದಿನ ಹೇಗಿರತ್ತಪ್ಪ? ಏನೇನ್ ಗಂಡಾಂತರ ಕಾದಿದ್ಯೋ ಏನೋ ಅಂತ ಸ್ವಲ್ಪ ಕುತೂಹಲ ಸ್ವಲ್ಪ ಆತಂಕದಿಂದ ಓದ್ತೀರ? ಬರೀ ರಾಶಿ ಮಾತ್ರ ಅಲ್ಲ ಕಣ್ರಿ, ನೀವ್ ಯಾವ್ ತಿಂಗಳಲ್ಲಿ ಹುಟ್ಟಿದಿರ ಅನ್ನೋದ್ರು ಮೇಲೂ ನಿಮ್ ವ್ಯಕ್ತಿತ್ವ, ಗುಣ ಇನ್ನೂ ಸಾಕಷ್ಟು ವಿಷ್ಯಗಳ್ನ ಹೇಳ್ಬೋದು.

ನಿಜವಾಗ್ಲೂ ಗೊತ್ತಾ, ಹುಟ್ಟಿದ್ ತಿಂಗಳ ಆಧಾರ ಇಟ್ಕೊಂಡು ನಿಮ್ ಒಟ್ಟಾರೆ ನಡವಳಿಕೆ, ಸ್ವಭಾವ, ಬೇರೆಯೋರು ನಿಮ್ಮನ್ನ ಹೇಗ್ ನೋಡ್ತಾರೆ, ಜೀವನದ್ ಬಗ್ಗೆ ನಿಮ್ಗಿರೋ ಆಲೋಚನೆ, ಭಾವನೆಗಳು ಇದೆಲ್ಲಾನೂ ಹೀಗ್ ಹೀಗೆ ಅಂತ ಹೇಳ್ಬೋದು. ಹೇಗಪ್ಪ ಇದು ಅಂತಿರ? ನಿಮ್ ಗುಣ ಲಕ್ಷಣಗಳು, ನೀವ್ ಹುಟ್ಟಿದ್ ತಿಂಗಳಲ್ಲಿ, ನಕ್ಷತ್ರಗಳು ಯಾವ್ ಯಾವ್ ಸ್ಥಾನ್ದಲ್ಲಿ ಇದ್ವು, ಯಾವ್ ಆಕಾರ್ದಲ್ಲಿ ಇದ್ವು ಅಂತ ಲೆಕ್ಕ ಹಾಕಿ ಹೇಳ್ತಾರಂತೆ.

ಯಾವ್ ತಿಂಗಳಲ್ಲಿ ಹುಟ್ಟಿದ್ರೆ, ಎಂಥಾ ಸ್ವಭಾವ, ವ್ಯಕ್ತಿತ್ವ ಇರತ್ತೆ ಅಂತ ಇಲ್ಲಿ ಕೊಟ್ಟಿದ್ದೀವಿ. ಓದಿ...ನಿಮ್ಮ ಸ್ವಭಾವಕ್ಕೆ ತಾಳೆ ಮಾಡಿ ನಮಗೂ ಹೇಳಿ...

ಜನವರೀಲಿ ಹುಟ್ಟಿರೋರು

ಕೆಲ್ಸದ್ ವಿಷ್ಯದಲ್ಲಿ ತುಂಬಾನೇ ಕಟ್ಟುನಿಟ್ಟಾಗಿರ್ತಾರೆ ಹಾಗೆನೇ ತಮ್ಮ ಅಭಿಪ್ರಾಯವನ್ನ ನಾಲಕ್ ಜನರ ಮುಂದೆ ಹೇಳಕ್ಕೆ ಯಾವ್ ಮುಲಾಜೂ ನೋಡಲ್ಲ. ಇವ್ರಲ್ಲಿ ಹಠಮಾರಿತನ ಮತ್ತೆ ಮೊಂಡುತನ ಸ್ವಲ್ಪ ಜಾಸ್ತಿ ಇರತ್ತೆ. ಜೊತೆಗೆ, ಯಾರಾದ್ರು ಹೀಗಲ್ಲ ಹಾಗೆ ಅಂತ ಹೇಳಕ್ ಬಂದ್ರೆ ಅದನ್ನ ಒಪ್ಕೊಳೋದು ಇವ್ರ ಜಾಯಮಾನ್ದಲ್ಲೇ ಇಲ್ಲ ಕಣ್ರಿ.

ಜನವರೀಲಿ ಹುಟ್ದೋರು ಒಳ್ಳೆ ಲೀಡರ್ ಆಗೋದ್ರಲ್ಲಿ ಅನುಮಾನಾನೇ ಇಲ್ಲ. ಇವ್ರಲ್ಲಿರೋ ಛಲ ಸದಾ ಯಶಸ್ಸಿನ ಕಡೆಗೇ ಕರ್ಕೊಂಡ್ ಹೋಗತ್ತೆ ಅನ್ನೋದ್ ನಿಜ. ಆದ್ರೆ ಜೊತೆಲಿರೋರ್ ಮಾತು ಕೇಳೋದ್ ಕಮ್ಮಿ.

ಇವ್ರಲ್ಲಿರೊ ಇನ್ನೊಂದು ಅದ್ಭುತವಾದ ಗುಣ ಅಂದ್ರೆ...ತಮ್ಗೆ ಗೊತ್ತಿರೋ ವಿಷ್ಯಗಳ್ನ ಇನ್ನೊಬ್ರುಗೆ ಅರ್ಥವಾಗೋ ಹಾಗೆ ಹೇಳ್ಕೊಡ್ತಾರೆ. ಅಷ್ಟೇ ಅಲ್ಲ, ಕಲಿಯೋರೂ ಕೂಡ ತುಂಬಾ ಸುಲಭವಾಗಿ, ಆಸಕ್ತಿಯಿಂದ ಇವರು ಹೇಳೋದನ್ನ ಕೇಳ್ತಾರೆ. ಇಷ್ಟಪಟ್ಟು ಕಲಿತಾರೆ.

ಫೆಬ್ರುವರಿ

ಫೆಬ್ರುವರಿ ತಿಂಗಳಲ್ಲಿ ಹುಟ್ಟಿರೋರ್ಗೆ ಕಲಾರೇಖೆ ಉದ್ದವಾಗಿರತ್ತೆ ಅನ್ಸತ್ತೆ ಕಣ್ರಿ. ಸಖತ್ ಕ್ರಿಯೇಟಿವ್ ಆಗಿರ್ತಾರೆ ಮತ್ತೆ ಹೊಸ ಹೊಸ ಕೆಲ್ಸ ಮಾಡಕ್ಕೆ ಇಷ್ಟ ಪಡ್ತಾರೆ. ಇವ್ರಿಗೆ ಬುದ್ಧಿವಂತರ ಜೊತೆ ಚರ್ಚೆ ಮಾಡೋದು, ವಿಚಾರಗಳ್ನ ಹಂಚ್ಕೊಳದು ಅಂದ್ರೆ ಉತ್ಸಾಹ ಇರತ್ತೆ. ಅದೇ ಬುದ್ಧಿವಂತಿಕೇಲಿ ತಮಗಿಂತ ಚೂರು ಕಮ್ಮಿ ಮಟ್ಟದಲ್ಲಿರೋರ್ನ ಹತ್ರನೂ ಸೇರ್ಸಲ್ಲ.

ಇವ್ರನ್ನ ಜನ ಫ್ರೀಬರ್ಡ್ ಅಂತ ಕರೀತಾರೆ. ಯಾಕಂದ್ರೆ ಸಮಾಜದ ಕಟ್ಟುಪಾಡುಗಳು, ರೂಲ್ಸು ಇದೆಲ್ಲ ಇವ್ರಿಗೆ ಆಗ್ಬರಲ್ಲ. ಯಾವಾಗ್ಲೂ ಬಿಂದಾಸಾಗಿ ತಮಗೆ ಇಷ್ಟ ಬಂದಂಗೆ ಇರಕ್ಕೆ ನೋಡ್ತಾರೆ. ಸಮಯ ಸಿಕ್ಕಾಗೆಲ್ಲಾ ವಿಮಾನ, ರೈಲು ಹತ್ಕೊಂಡು ಊರೂರ್ ಸುತ್ತೋದು ಅಂದ್ರೆ ಭಾರಿ ಪ್ರೀತಿ. ಸಾಹಸ ಮಾಡೋದು ಮತ್ತೆ ಸುತ್ತಾಮುತ್ತ ಇರೋ ಜಾಗಗಳು, ವಿಷ್ಯಗಳ್ನ ಇನ್ನೂ ಹೆಚ್ಚು ಹೆಚ್ಚು ತಿಳ್ಕೊಳಕ್ಕೆ ಕಾಯ್ತಾನೇ ಇರ್ತಾರೆ. ಇದೇ ಇವ್ರನ್ನ ಲವಲವಿಕೆಯಿಂದ ಇಡೋದು. ಹಾಗೆನೇ ಇವರ ಥರಾನೇ ಫುಲ್ಲು ಬಿಂದಾಸಾಗಿ, ಇಂಡಿಪೆಂಡೆಂಟಾಗಿ ಇರೋರ್ ಜೊತೆ ಸಖತ್ ಮಜ ಮಾಡ್ತಾರೆ, ಚೆನ್ನಾಗಿ ಕಾಲ ಕಳಿತಾರೆ.

ಇವರದ್ದು ಇನ್ನೊಂದು ಒಳ್ಳೆ ಅಂಶ ಅಂದ್ರೆ...ಗೆಳೆತನದ ವಿಷ್ಯ ಆಗ್ಲಿ ಸಂಗಾತಿ ವಿಷ್ಯ ಆಗ್ಲಿ ತುಂಬಾನೇ ನಿಯತ್ತಾಗಿರ್ತಾರೆ :-)

ಮಾರ್ಚ್

ಮಾರ್ಚ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬಾ ಕಲ್ಪನಾಶಕ್ತಿ (ಕ್ರಿಯೇಟಿವಿಟಿ) ಇರತ್ತೆ. ಆದ್ರೆ ಜಾಸ್ತಿ ಸಮಯ ಇವರು ಮೌನವಾಗಿರಕ್ಕೆ ಮತ್ತೆ ತಮ್ಮ ಆತ್ಮಾವಲೋಕನ ಮಾಡ್ಕೊಳಕ್ಕೆ ಇಷ್ಟ ಪಡ್ತಾರೆ. ಇವರು ಇನ್ನೊಬ್ರು ಜೊತೆ ವಿಷ್ಯಗಳ್ನ ಹಂಚ್ಕೊಳೊದಿಕ್ಕಿಂತ ತಮ್ಮೊಳಗೇ ಯೋಚನೆ ಮಾಡಿ ತಲೆ ಒಳಗೇ ಮಾಸ್ಟರ್ ಪೀಸ್ಗಳ್ನ ಸೃಷ್ಟಿ ಮಾಡ್ತಾರೆ ಕಣ್ರಿ. ತಮ್ಮ ಭಾವನೆಗಳ್ನ/ಅನಿಸಿಕೆಗಳ್ನ ಹೇಳ್ಕೊಳಕ್ಕೋಸ್ಕರ ಅವರಿಗೆ ಸಾಥ್ ಬೇಕಿರತ್ತೆ. ಅದನ್ನ ಕಲೆ ತುಂಬಿಸತ್ತೆ. ತಾವಿಷ್ಟ ಪಡೋ ಕಲೆ ಮೂಲಕ ಎಲ್ಲಾನೂ ಎಕ್ಸ್ಪ್ರೆಸ್ ಮಾಡ್ತಾರೆ. ಹಾಗೆನೆ ಒಳಗೊಳಗೇ ಸಿಗೋ ಏಕಾಂತವನ್ನಾ ಮನಸಾರೆ ಅನುಭವಿಸ್ತಾರೆ.

ಬೇರೆಯೋರ ಜೊತೆ ಇವರ ಸಂಬಂಧ ಚೆನ್ನಾಗಿರತ್ತೆ. ತುಂಬಾ ನಯವಾಗಿ, ಕಾಳಜಿಯಿಂದ ನಡ್ಕೊತಾರೆ ಆದ್ರೆ ತಮ್ ಬಗ್ಗೆ ಮಾತ್ರ ಜಾಸ್ತಿ ವಿಷ್ಯ ಬಿಟ್ಕೊಡಲ್ಲ. ಮುಚ್ಚಿಟ್ಕೊಳಕ್ಕೆ ನೋಡ್ತಾರೆ. ಈ ಮಾರ್ಚಲ್ಲಿ ಹುಟ್ಟಿರೋರ್ ಬಗ್ಗೆ ಇನ್ನೊಂದ್ ಮುಖ್ಯವಾದ್ ವಿಷ್ಯ ಅಂದ್ರೆ ಇವರು ಯಾವಾಗ್ಲೂ ನಿಶ್ಯಬ್ಧವಾದ, ಪ್ರಶಾಂತವಾದ ವಾತಾವರಣ ಹುಡುಕ್ಕೊಂಡ್ ಹೋಗ್ತಾರೆ. ಜನರ ಜಾತ್ರೆಯಿಂದ, ಗಲಾಟೆಯಿಂದ ದೂರ ಇರಕ್ಕೆ ಇಷ್ಟ ಪಡ್ತಾರೆ.

ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಹುಟ್ಟಿರೋರು ಯಾವಾಗ್ಲೂ ಬೇರೆಯೋರು ತಮ್ಮನ್ನ ಗಮನಿಸ್ತಿರ್ಲಿ ಅಂತ ಹಾತೊರಿತಿರ್ತಾರೆ ಜೊತೆಗೆ ಎಲ್ರೂ ತಮ್ಮ ಬಗ್ಗೆನೇ ಮಾತಾಡ್ಬೇಕು, ಹೊಗಳಬೇಕು - ಒಟ್ನಲ್ಲಿ ಸಖತ್ ಪ್ರಚಾರ ಸಿಗ್ಬೇಕು ಅಂತ ಆಸೆ ಪಡ್ತಾರೆ. ಇವ್ರಿಗೆ ಇನ್ನೊಬ್ರು ಹಾಗ್ ಮಾಡು ಹೀಗ್ ಮಾಡು ಅಂತ ಮೂಗ್ ತೂರ್ಸೋದು ಇಷ್ಟ ಆಗಲ್ಲ. ಬದಲಿಗೆ ತಮ್ಮದೇ ರೀತೀಲಿ ಕೆಲ್ಸಕಾರ್ಯನ ಮಾಡ್ತಾರೆ, ಬೇರೆಯೋರ್ನೂ ಆ ದಾರಿಲೇ ನಡೆಸ್ತಾರೆ.

ಯಾವಾಗ್ಲೂ ಹೊಸ ಹೊಸ ಸಾಹಸಗಳ್ನ ಮಾಡಕ್ಕೆ ಅವಕಾಶ ಸಿಗತ್ತಾ? ಅಂತ ನೋಡ್ತಿರ್ತಾರೆ ಮತ್ತೆ ಎಲ್ಲಾನು ಚಿಟಿಕೆ ಹೊಡಿಯೋದ್ರಲ್ಲಿ ಮಾಡ್ಬೇಕು, ಬಯಸಿದ ತಕ್ಷಣ ಸಿಗ್ಬೇಕು ಅನ್ನೋ ಆತುರದಲ್ಲಿರ್ತಾರೆ. ಯಾವ್ದೇ ವಿಷ್ಯಕ್ಕಾಗ್ಲೀ ಮೊದ್ಲು ಮನಸ್ಸಿಗೆ ಬಂದ ಹಾಗೆ ನಡ್ಕೊತಾರೆ. ಭವಿಷ್ಯದ ಬಗ್ಗೆ ತಲೆ ಕೆಡುಸ್ಕೊಳಲ್ಲ. 'ನೆನ್ನೆ ನೆನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೇ ಚಿಂತೆ ಏತಕೆ' ಹಾಡು ಇವ್ರಿಗೆ ಹೇಳಿ ಮಾಡಿಸ್ದಂಗಿದೆ ಕಣ್ರಿ. ಜೀವ್ನ ಹೇಗ್ ಬರತ್ತೋ ಹಾಗ್ ತೊಗೊಂಡ್ ಹೋಗ್ತಿರ್ತಾರೆ.

ಕೆಲ ಸಲ ಇವರು ಜಗಳಗಂಟ್ರು ಥರ, ಜಿಗುಪ್ಸೆ ಬರೋ ಥರ ಮಾತಾಡ್ತಾರೆ ಅನ್ನೋ ಅಪವಾದ ಹೊತ್ಕೊಬೇಕಾಗತ್ತೆ. ಆದ್ರೆ ಅವರು ಆಡೋ ಮಾತ್ಗಳು ಮನಸ್ಸಿಂದ ಬಂದಿರತ್ತೆ. ಯಾವ್ದೂ ಬೇಕೂಂತ ಆಡೋದಲ್ಲ. ಜೊತೆಗೆ ತಮ್ಗೆ ಏನನ್ಸತ್ತೆ ಅಂತ ಬೇರೆಯೋರಿಗೆ ಹೇಳಕ್ಕೆ ಹಿಂದೆ ಮುಂದೆ ನೋಡಲ್ಲ. ಒಂಥರ ತಮ್ ವಿಷ್ಯದಲ್ಲಿ ಫಿಲ್ಟರ್ ಇರಲ್ಲ. ಬೇಜಾರಾಗಿದ್ರೆ ಮುಲಾಜಿಲ್ದೇ ಹೇಳ್ಕೊತಾರೆ.

ಮೇ

ಮೇ ತಿಂಗಳಲ್ಲಿ ಹುಟ್ತಿರೋರು ತುಂಬಾನೇ ಚಂಚಲ ಮನಸ್ಸಿನೋರು. ಇವತ್ತು ಒಂದ್ ಬೇಕು ಅಂದ್ರೆ, ನಾಳೆ ಇನ್ನೇನೋ ಬೇಕು ಅಂತಾರೆ. ಇವ್ರು ತಮ್ ಭಾವನೆಗಳ್ನ ಚೆನ್ನಾಗಿ ಎಕ್ಸ್ಪ್ರೆಸ್ ಮಾಡ್ತಾರೆ ಮತ್ತೆ ಜೀವನದ ಬೇರೆ ಬೇರೆ ಹಿನ್ನೆಲೆ, ಹಂತದಲ್ಲಿರೋರ್ ಹತ್ರ ಮಾತಾಡಕ್ಕೆ ಇಷ್ಟ ಪಡ್ತಾರೆ. ಒಂಟಿಯಾಗಿರಕ್ಕೆ ಸುತಾರಾಮ್ ಆಗಲ್ಲ ಇವ್ರ ಕೈಲಿ. ಯಾವಾಗ್ಲೂ ಸೋಶಿಯಲ್ ಲೈಫಲ್ಲಿ ಚುರುಕಾಗಿರ್ತಾರೆ.

ಇವರು ಉತ್ತೇಜನ ಕೊಡೋವಂಥ, ಬುದ್ಧಿವಂತಿಕೆ ಇರೋವಂಥ ಮಾತುಕತೆಗಳಲ್ಲಿ ಭಾಗಿಯಾಗಕ್ಕೆ ಇಷ್ಟಪಡ್ತಾರೆ. ಆದ್ರೆ ಅಂಥಾ ಮಾತುಕಥೆ ಬೋರ್ ಹೊಡುಸ್ಬಾರ್ದು. ಬದಲಿಗೆ ತುಂಬಾ ಮೋಜು ಮಸ್ತಿ ಉತ್ಸಾಹದಿಂದ ಇರ್ಬೇಕು. ಆಗ ಖುಷಿಯಿಂದ ಆ ಗುಂಪಲ್ಲಿ ಸೆರ್ಕೊತಾರೆ.

ತುಂಬಾ ಬೇಗ ಬೋರ್ ಆಗ್ಬಿಡ್ತಾರೆ. ಒಂದ್ ವಿಷ್ಯ ಜಾಸ್ತಿ ಹೊತ್ತು ಇವ್ರನ್ನ ಹಿಡಿದು ಇಡಕ್ಕಾಗಲ್ಲ, ಆಕರ್ಷಿಸಕ್ಕೆ ಸಾಧ್ಯಯಿಲ್ಲ. ಹಾಗಾಗಿ ತಮ್ಮನ್ನ ತಾವು ಖುಷಿಯಾಗಿಟ್ಕೊಳಕ್ಕೆ, ಮಜಾ ಮಾಡಕ್ಕೆ ಸದಾ ಹೊಸ ಹೊಸ ಉಪಾಯಗಳ್ನ ಹುಡುಕ್ತಾನೆ ಇರ್ತಾರೆ.

ಜೂನ್

ಜೂನ್ ತಿಂಗಳಲ್ಲಿ ಹುಟ್ಟಿರೋರು ಇನ್ನೊಬ್ರು ಭಾವನೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿರ್ತಾರೆ. ಹಾಗೆನೆ ಬೇರೆಯೋರ್ನ ಕಾಳಜಿ ಮಾಡೋ ಗುಣ ಇದೆ. ಸಖತ್ ಸಂಕೋಚದ ಸ್ವಭಾವ್ದೋರು ಮತ್ತೆ ಮೆತ್ತಗೆ ಮಾತಾಡೊರು. ಇವ್ರ ಆ ಸ್ವಭಾವನೇ ಜನ ಮೆಚ್ಕೊಳ್ಳೊದು.

ತುಂಬಾನೇ ಕ್ರಿಯೇಟಿವಾಗಿರೋ ಇವರು ಭವಿಷ್ಯದ್ ಬಗ್ಗೆ ದೂರದೃಷ್ಟಿ ಇಟ್ಕೊಂಡಿರ್ತಾರೆ. ಹೊಸ ಹೊಸ ಆಲೋಚನೆಗಳ್ನ ಹೇಗೆಲ್ಲಾ ಸೃಷ್ಟಿಮಾಡ್ಬೋದು? ತಮ್ಮ ಐಡಿಯಾಗಳ್ನ ಹೇಗೆಲ್ಲಾ ಕಾರ್ಯರೂಪಕ್ಕೆ ತರ್ಬೋದು? ಅನ್ನೋದ್ರ ಬಗ್ಗೆ ಪ್ಲ್ಯಾನ್ ಮಾಡ್ತಿರ್ತಾರೆ.

ಇವರು ತಮ್ಮ ಭಾವನೆಗಳ್ನ, ತಮ್ಗೆ ಅನ್ಸಿದ್ದನ್ನ ಅಷ್ಟು ಸುಲಭವಾಗಿ ಹೊರಗೆ ಹೇಳ್ಕೊಳಲ್ಲ ಆದ್ರೆ ಮನಸ್ಸಿನ ಒಳಗೆ ತಮ್ಮದೇ ಒಂದ್ ಪ್ರಪಂಚ ಕಟ್ಕೊಂಡಿರ್ತಾರೆ. ಅದನ್ನ ನಿಜ ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳೊದು ಅಂತ ಮಾತ್ರ ಗೊತ್ತಾಗದೆ ಒದ್ದಾಡ್ತಾರೆ.

ಜುಲೈ

ಇವರು ತುಂಬಾ ಬಹಿರ್ಮುಖಿಗಳು ಅಂದ್ರೆ ಮನಸ್ಸಿಗೆ ಏನೇ ಬಂದ್ರೂ ಅದು ಹೊರಗೇ ಬಂದೇ ಬರತ್ತೆ. ಒಂಥರ ಮನಸ್ಸಿಗೂ ನಾಲಿಗೆಗೂ ಫಿಲ್ಟರ್ ಇರಲ್ಲ. ಜೊತೆಗೆ ಪಾದರಸದ ಥರ. ಯಾವ್ದಾದ್ರು ಕೆಲ್ಸ ಮಾಡ್ಬೇಕು ಅಂದ್ರೆ ಯಾವ್ ಕಾರಣನೂ ಬೇಡ, ಯಾರ್ ಪ್ರೇರಣೆನೂ ಬೇಡ. ಸಾಹಸ ಮಾಡೋದು ಸಖತ್ ಇಷ್ಟ ಆಗತ್ತೆ ಹಾಗೆನೇ ಚೆನ್ನಾಗಿ, ಒಳ್ಳೆ ರೀತಿಲಿ ಕಾಲ ಕಳಿಯಕ್ಕೆ ಇಷ್ಟಪಡ್ತಾರೆ.

ಹೊರಗಿಂದ ನೋಡೋರ್ಗೆ ಇವರು ತುಂಬಾ ಆತ್ಮವಿಶ್ವಾಸದಿಂದ ನಗುನಗ್ತಾ ಇರೋಹಾಗ್ ಕಾಣ್ಸಿದ್ರೂ, ಒಳಗೆ ದೊಡ್ಡ ಮಟ್ಟದಲ್ಲೇ ನೋವು, ದುಃಖ ಮತ್ತೆ ಕರಾಳವಾದ ಸತ್ಯ ಬಚ್ಚಿಟ್ಕೊಂಡಿರ್ತಾರೆ.

ಇನ್ನು ಜುಲೈನಲ್ಲಿ ಹುಟ್ಟಿರೋರ್ಗೆ ಎನರ್ಜಿ ಸಖತ್ತಾಗಿರತ್ತೆ. ಈ ಕಾರಣಕ್ಕೇ ಬೇರೆಯೋರು ಇವ್ರ ಜೊತೆ ಸುತ್ತಾಡಕ್ಕೆ, ತಿರುಗಾಡಕ್ಕೆ ಕಾಯ್ತಿರ್ತಾರೆ.

ಆಗಸ್ಟ್

ಆಗಸ್ಟ ಅಂದ ತಕ್ಷಣ, ಇವ್ರು ಹುಟ್ತಾನೇ ಲೀಡರ್ ಆಗೋ ಎಲ್ಲಾ ಗುಣ ಪಡ್ಕೊಂಡ್ ಬಂದಿರ್ತಾರೆ. ತಮ್ ಅಭಿಪ್ರಾಯಗಳ್ಗೆ ಅದೆಷ್ಟೇ ಕಷ್ಟ ಆದ್ರೂ ಭಯ ಪಡ್ದೇ ಅಂಟುಕೊಂಡಿರ್ತಾರೆ. ಬಿಟ್ಕೊಡಲ್ಲ. ಇವ್ರು ತುಂಬಾ ಬಾಸಿಸಮ್ ಮಾಡ್ತಾರೆ, ತಮ್ ಅಭಿಪ್ರಾಯಗಳ್ನ ಇನ್ನೊಬ್ರು ಮೇಲೂ ಹೇರ್ತಾರೆ ಅನ್ನಿಸ್ಬೋದು ಆದ್ರೆ ಸಿಕ್ಕಾಪಟ್ಟೆ ದೊಡ್ಡಮನಸ್ಸಿನೋರು ಕಣ್ರಿ ಇವ್ರು.

ಇನ್ನು ಎಲ್ಲಾ ವಿಷ್ಯಕ್ಕೂ ತುಂಬಾನೇ ಯೋಚನೆ ಮಾಡೊ ಇವ್ರು, ಸ್ವಲ್ಪ ಏಮಾರಿದ್ರೂ ತಮ್ಮ ಗಟ್ಟಿಯಾಗಿರೋ ಶಿಸ್ತಿನಿಂದ ನಡ್ಕೊಂಡ್ ಬರ್ತಿರೋ ಜೀವನನ ಕಗ್ಗಂಟು ಮಾಡ್ಕೊತಾರೆ. ತಮ್ಮ ವೃತ್ತಿಜೀವನದಲ್ಲಿ ಸುಖವಾಗಿ ಮೇಲೆ ಬರ್ತಾರೆ. ಯಾಕಂದ್ರೆ ಅವ್ರು ಮಾಡೋ ಕೆಲ್ಸದಲ್ಲಿ ಲಾಭ-ನಷ್ಟಗಳನ್ನ ಯೋಚೆನೆ ಮಾಡಿನೇ ಮುಂದುವರೆಯೋದು. ಜೀವನ್ದಲ್ಲೂ ಇವ್ರು ಇಡೋ ಒಂದೊಂದು ಹೆಜ್ಜೆನೂ ಲಾಜಿಕಲ್ಲಾಗಿ, ಹಂತಹಂತವಾಗಿ ಇಡೋದ್ರಿಂದ ವೃತ್ತಿನಲ್ಲೂ ನಿಭಾಯಿಸಕ್ಕೆ ಸಹಾಯ ಆಗತ್ತೆ.

ತಮ್ಮ ಭಾವನೆಗಳ್ನ ಅಷ್ಟು ಸುಲಭವಾಗಿ ವ್ಯಕ್ತಪಡಿಸಲ್ಲ. ಹಾಗಾಗಿ, ಕೆಲವು ಸೂಕ್ಷ್ಮ ಸಂದರ್ಭಗಳು ಅವರ ಕೈ ಜಾರಿ ಹೋಗತ್ವ್ಗೆ. ಜನರ ,ಮನಸ್ಸಿಗೆ ನೋವುಂಟು ಮಾಡತ್ವೆ.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರೋರ್ಗೆ ತುಂಬ ಬೇಗ, ಸುಲಭವಾಗಿ ನಿರಾಶೆಯಾಗತ್ತೆ. ಯಾಕಂದ್ರೆ ಇವರು ಇನ್ನೊಬ್ರಿಂದ ಸಿಕ್ಕಾಪಟ್ಟೆ ಅಪೇಕ್ಷೆ ಇಟ್ಕೊಂಡಿರ್ತಾರೆ. ಇನ್ನೊಂದ್ ಕಡೆ ಇವ್ರಿಗೆ ಒಂಥರ ಮೊಂಡುತನ ಇರತ್ತೆ. ಏನಂದ್ರೆ, ಬೇರೆಯೋರ್ ಗ್ರಹಚಾರ ಕೆಟ್ಟಿದ್ರೆ, ಅವ್ರ ಜೊತೆ ಮನಸ್ತಾಪ ಬಂದ್ರೆ, ಸಾಯೋತಂಕ ಹಗೆ, ದ್ವೇಷ ಸಾಧಿಸ್ತಾರೆ.

ಇವರನ್ನ ಮಿಸ್ಟರ್ ಅಥ್ವಾ ಮಿಸ್ಟ್ರೆಸ್ ಪರ್ಫೆಕ್ಟ್ ಅನ್ಬೋದು. ತಮ್ಮ ಹಾಗೇ ಬೇರೆಯೋರೂ ಇರ್ಬೇಕು ಅಂತ ಎದುರು ನೋಡ್ತಾರೆ. ಇದೆಲ್ಲದರ ಜೊತೆಗೆ, ಇವರು ತುಂಬಾನೇ ಕ್ರಿಯೇಟಿವ್ ವ್ಯಕ್ತಿ. ಕಾಳಜಿ-ಕನಿಕರ ಇರೋರು ಮತ್ತೆ ಅವಕಾಶ ಸಿಕ್ಕಾಗೆಲ್ಲಾ ಇನ್ನೊಬ್ರುಗೆ ಸಹಾಯ ಮಾಡೋ ಗುಣ ಇರೋರು.

ಅಕ್ಟೋಬರ್

ಅಕ್ಟೋಬರ್ ತಿಂಗಳಲ್ಲಿ ಹುಟ್ಟಿರೋರು, ತಾವು ಮಾಡೋ ಎಲ್ಲಾ ಕೆಲ್ಸದಲ್ಲೂ ಬ್ಯಾಲೆನ್ಸ್ ಇರ್ಬೇಕು ಮತ್ತೆ ಕೆಲ್ಸ ಮಾಡೋ ಹಂತದಲ್ಲಿ ಗಟ್ಟಿತನ ಇರ್ಬೇಕು ಅಂತ ಬಯಸ್ತಾರೆ. ಜೊತೆಗೆ ಜೀವನದ ಬಗ್ಗೆ ಒಂದು ಪಾಸಿಟಿವ್ ದೃಷ್ಟಿಕೋನ ಇರತ್ತೆ. ಇವ್ರಿಗೆ ಹೊಡೆದಾಟ, ಜಗಳ ಇವಲ್ಲ ಇಷ್ಟ ಆಗಲ್ಲ. ಸಾಧ್ಯವಾದಷ್ಟೂ ಮಟ್ಟಿಗೆ ತಡಿಯಕ್ಕೆ ನೋಡ್ತಾರೆ.

ಇವ್ರ ಸೋಶಿಯಲ್ ಲೈಫ್ ಸಖತ್ ಚುರುಕಾಗಿರತ್ತೆ ಮತ್ತೆ ಗೆಳೆತನ ಅಂದ್ರೆ ಪ್ರಾಣ ಬಿಡ್ತಾರೆ. ತುಂಬಾ ಆಕರ್ಷಕವಾಗಿರ್ತಾರೆ ಮತ್ತೆ ಮಾತುಗಾರರೂ ಕೂಡ. ಯಾವಾಗ್ಲೂ ಜನರ ಮಧ್ಯ ಇರಕ್ಕೆ ಇಷ್ಟಪಡೋ ಇವ್ರು, ಇಂಡಿಪೆಂಡೆಂಟ್ ವ್ಯಕ್ತಿಗಳು ಕಣ್ರಿ.

ನವಂಬರ್

ನವಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾ ಗುಟ್ಟುಗಳ್ನ ಇಟ್ಕೊಂಡಿರ್ತಾರೆ ಮತ್ತೆ ತಮ್ಮ ನಿಜವಾದ ಭಾವನೆಗಳ್ನ ಬೇರೆಯೋರಿಂದ ಬಚ್ಚಿಡ್ತಾರೆ. ಬೇರೆಯೋರ ಸಲಹೆ, ಮಾರ್ಗದರ್ಶನ ಇಷ್ಟಪಡಲ್ಲ. ತಮ್ಮ ಜೀವನನ ತಾವೇ ಒದ್ದಾದ್ಕೊಂಡಾದ್ರೂ ರೂಪುಸ್ಕೊಳ್ತಾರೆ.

ಇವ್ರಿಗೆ ಈ ಭಯ, ಹೆದರಿಕೆ ಅನ್ನೋದೆಲ್ಲಾ ದೂರ. ಹಾಗಾಗಿ ಎಂಥಾ ಪರಿಸ್ಥಿತಿ ಎದುರಾದ್ರೂ, ಹಿಂದೆ ಮುಂದೆ ಯೋಚನೆ ಮಾಡ್ದೆ ಮೊದ್ಲು ಅದನ್ನ ಪರಿಹಾರಮಾಡಕ್ಕೆ ಹೊರಟುಬಿಡ್ತಾರೆ. ಅದನ್ನ ಸರಿಯಾಗಿ ಅರ್ಥ ಮಾಡ್ಕೊಂಡು ಆಮೇಲೆ ಮುಂದುವರಿಯೋಣ ಅಂತೆಲ್ಲಾ ಇಲ್ವೇ ಇಲ್ಲ. ಪರಿಣಾಮ ಏನಾಗ್ಬೋದು ಅನ್ನೋದ್ರು ಬಗ್ಗೆ ಕಿಂಚಿತ್ತೂ ತಲೆಕೆಡುಸ್ಕೊಳಲ್ಲ.

ಇವರ ಜೀವನದಲ್ಲಿ ಯಾವ್ ಅಡೆತಡೆ ಬಂದ್ರೂ ನಿಲ್ಲಲ್ಲ - ನುಗ್ತಾನೇ ಇರ್ತಾರೆ. ಅವ್ರ ದೊಡ್ದ ಆಸ್ತಿ ಅಂದ್ರೆ ಮೊಂಡು ಧೈರ್ಯ ಮತ್ತೆ ಜೀವನದ ಬಗ್ಗೆ ಇರೋ ಅತಿಯಾದ ಭಾವುಕತೆ.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಹುಟ್ಟಿರೋರು ತುಂಬಾನೆ ಸಾಹಸ ಮಾಡೊ ಜನ ಮತ್ತೆ ಉದಾರ ಮನೋಭಾವದೋರು. ಆದ್ರೆ ಕೆಲವುಸಲ ತಮ್ಮ ಪ್ರತಿಷ್ಟೆ, ಅಹಂಕಾರ್ದಿಂದ ಬೇರೆಯೋರ್ ಜೊತೆ ಸಣ್ಣ ಪುಟ್ಟ ಮನಸ್ತಾಪ ಆಗತ್ತೆ. ಇವ್ರು ಯಾವಾಗ್ಲೂ ಹರಿಯೊ ನದಿ ಥರ. ಒಂದೇ ಕಡೆ ಅಥವಾ ಒಂದೇ ಪರಿಸ್ಥಿತೀಲಿ ಜಾಸ್ತಿ ಕಾಲ ಇರಕ್ಕಾಗಲ್ಲ ಇವ್ರ ಕೈಲಿ.

ಸ್ವಲ್ಪ ಸಿಡುಕುತನ ಜಾಸ್ತಿ. ಆದ್ರೆ ಬೇರೆಯೊರಿಗೆ ಸಖತ್ತಾಗಿ ನಗೆಹನಿ ಮಾಡ್ಕೊಂಡು ಟೈಮ್ ಪಾಸ್ ಮಾಡಿಸ್ತಾರೆ. ಅವರ ಉದಾರತೆ ಇದ್ಯಲ್ಲ... ಅದು ಅವರ ಜೀವನದ ಎಲ್ಲಾ ಏರಿಳಿತಗಳ್ನೂ ಪರ್ಫೆಕ್ಟಾಗಿ ಬ್ಯಾಲೆನ್ಸ್ ಮಾಡತ್ತೆ.

ಏನಂತೀರಾ? ನೀವು ಯಾವ ತಿಂಗಳಲ್ಲಿ ಹುಟ್ಟಿದ್ದು? ನಿಮ್ಮ ಸ್ವಭಾವ ನೋಡ್ಕೋಂಡ್ರಾ? ಸರಿ ಇದ್ಯಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: