ಒಬ್ಬ ಗುಜರಾತಿ ಹೈದ Google.com ನ ಪುಟ್ಕೋಸಿ 12 ಡಾಲರ್ಗೆ ಕೊಂಡುಕೊಂಡಿದ್ದಾನೆ

ಆದರೆ 1 ನಿಮಿಷ ಮಾತ್ರ ಅವನದಾಗಿತ್ತು

ಗೂಗಲ್

ಗೂಗಲ್ ನಲ್ಲಿ ಕೆಲಸ ಮಾಡುತ್ತಿದ್ದ ಸನ್ಮಯ್ ವೇದ್ ಅನ್ನೋ ಗುಜರಾತಿ ಸೆಪ್ಟೆಂಬರ್ 29ಕ್ಕೆ ಒಂದು ಕೈ ನೋಡೇ ಬಿಡೋಣ ಅಂತ ಗೂಗಲ್ ಡೊಮೇನ್ಸ್ ತಾಣದಲ್ಲಿ google.com ಕೊಂಡುಕೊಳ್ಳಕ್ಕೆ ಕೈ ಹಾಕಿದನಂತೆ.

patrika

ಅವನ ಆಶ್ಚರ್ಯಕ್ಕೆ ಆ ಡೊಮೇನ್ ಕೊಂಡುಕೊಳಕ್ಕೆ ಖಾಲಿ ಇದೆ,  $12 (ಅಂದರೆ ರೂ. 786 ಕೊಟ್ಟರೆ ಸಿಗುತ್ತೆ) ಅಂತ ಬಂದಿದೆ:

ಸರಿ, ಸಿಕ್ಕರೆ ಕೊಂಡುಕೊಂಡೇ ಬಿಡೋಣ ಅಂತ ಹೊರಟ, ಪಾಲ್ಟಿ:

ಏನಾದರೂ ಎರರ್ ಬಂದು ಮಧ್ಯದಲ್ಲೇ ಕೈ ಕೊಡಬಹುದು ಅಂದುಕೊಂಡಿದ್ದ. ಆದರೆ ಯಾವುದೇ ತೊಂದರೆ ಆಗದೆ ಅವನಿಗೆ ಈ ಮೆಸೇಜ್ ಬಂದಿದೆ:

ಸರಿ, ಪ್ರಪಂಚದ ಅತ್ಯಂತ ಮುಖ್ಯವಾದ ಸೈಟ್ ನನ್ನ ಕೈಗೆ ಸಿಕ್ಕಿದೆ ಅನ್ಕೊಂಡ ಸನ್ಮಯ್! ಆದರೆ ಒಂದು ನಿಮಿಷದ ಒಳಗೆ ಗೂಗಲ್ ನಿಂದ ಕ್ಯಾನ್ಸಲೇಶನ್ ಸಂದೇಶ ಬಂತಂತೆ. ಗುರುವೇ, ಇವೆಲ್ಲ ನಡ್ಯಲ್ಲ ಅಂತ:

ಈ ಇಡೀ ವ್ಯವಹಾರ ಗೂಗಲ್ ನವರ ಒಂದು ವೆಬ್ಸೈಟ್ ನಲ್ಲೇ ನಡೆದಿದ್ದರಿಂದ ಗೂಗಲ್ ಕಂಪನಿಗೆ ಈ ಟ್ರಾನ್ಸಾಕ್ಷನ್ನ ರದ್ದು ಮಾಡಲಿಕ್ಕ ಆಯಿತು ಅನ್ನುತ್ತಾರೆ.

ಒಟ್ಟಿನಲ್ಲಿ ಈ ಗುಜರಾತಿ ಹೈದ ಸುಮ್ಮನೆ ಅಲ್ಲ!

ಮಾಹಿತಿ, ಚಿತ್ರಗಳು: linkedin

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಸೇಬ್ನ ಹೀಗೆ ವಾರೆಯಾಗಿ ಕತ್ತರಿಸಿದರೆ ಏನ್ ಲಾಭ ಇದೆ ಅಂತ ನೋಡಿ ಆಶ್ಚರ್ಯ ಪಡ್ತೀರಿ

ನೋಡ್ ನೋಡ್ತಾ ಏನೇನೋ ಆಗೋಗುತ್ತೆ

ಇವನು ನಮ್ಮ ಥರ ಮಾಮೂಲಿಯಾಗಿ ಕತ್ತರಿಸಲ್ಲ. ಆದರೆ ಕಡೆಗೆ ಏನ್ ಮಾಡ್ತಾನೆ ಅಂತ ನೋಡಿ. ನಮಗಂತೂ ಮೊದಲು ಟ್ರೈ ಮಾಡಬೇಕು ಅನ್ನಿಸ್ತಿದೆಯಪ್ಪ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: