ಕೆಲಸದಲ್ಲಿ ದೊಡ್ಡ ಮಟ್ಟಕ್ಕೆ ಹೋಗೋ ಆಸೆ ಇದ್ರೆ ಈ 12 ತಪ್ಪುಗಳನ್ನ ಮಾಡ್ಬೇಡಿ

ಮರಳಿ ಯತ್ನವ ಮಾಡು ಅಂತ ದೊಡ್ಡೋರ್ ಹೇಳಿಲ್ವಾ?

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ನಿಮ್ಮ ಕಾಲಿನ ಪಾದ ಬೆರಳು ಎಲ್ಲಾ ಹೆಂಗಿದೆ ಅನ್ನೋದರ ಮೇಲೆ ನಿಮ್ಮ ವ್ಯಕ್ತಿತ್ವದ ಬಗ್ಗೆ ಇಷ್ಟು ಹೇಳಬಹುದು

ಇದು ಹಸ್ತಸಾಮುದ್ರಿಕ ಅಲ್ಲಾರೀ ಇದೊಂತರಾ ಪಾದಸಾಮುದ್ರಿಕ

ನಿಮ್ಮ ಪಾದಗಳೂ ಕೂಡ ನಿಮ್ ವ್ಯಕ್ತಿತ್ವ ನಿರ್ಧಾರ ಮಾಡುತ್ತಂತೆ. ಅದೆಂಗಪ್ಪಾ ಅಂತೀರ!?

ನಿಮ್ ಪಾದಗಳಿಂದ ನೀವ್ ಯಾವ್ ತರದ ವ್ಯಕ್ತಿ, ನಿಮ್ಮ ಶಕ್ತಿ ಏನು? ನಿಮ್ಗೆ ಸರಿಹೊಂದೋ ವಿಷ್ಯ ಯಾವ್ ಯಾವುದು ಅಂತೆಲ್ಲಾ ತಿಳ್ಕೋಬೋದಂತೆ. ಕೈ ನೋಡಿ ಹೇಳೋ ಶಾಸ್ತ್ರದ ಹಾಗೆ ಪಾದಗಳನ್ನೂ ಕೂಡ ನೋಡಿ ವ್ಯಕ್ತಿತ್ವ, ಭವಿಷ್ಯ ಹೇಳೋ ಶಾಸ್ತ್ರ ಚೀನಾ ದೇಶದಲ್ಲಿ ಮತ್ತೆ ನಮ್ ದೇಶದಲ್ಲಿ ಕೂಡ ಸುಮಾರು 5000 ವರ್ಷಗಳಿಂದ ಬಳಕೆಯಲ್ಲಿದೆ. ಅದರ ಬಗ್ಗೆ ಸ್ವಲ್ಪ ಜಾಸ್ತಿ ವಿಷ್ಯ ಕೊಟ್ಟಿದ್ದೀವಿ ನೋಡಿ.

ಹೆಬ್ಬೆರಳು

ಬೇರೆ ಎಲ್ಲಾ ಕಾಲ್ಬೆರಳುಗಳಿಗಿಂತ ಹೆಬ್ಬೆರಳು ಸ್ವಲ್ಪ ಜಾಸ್ತೀನೇ ಉದ್ದವಾಗಿದ್ರೆ...

ನೀವು ತುಂಬಾನೇ ಕ್ರಿಯೇಟೀವ್ ವ್ಯಕ್ತಿ ಅಂತ. ಏನೇ ತೊಂದ್ರೆ ಬಂದ್ರೂ ಅದಕ್ಕೇನೋ ಒಂದು ಸಲ್ಯೂಷನ್ ತಕ್ಷಣಕ್ಕೆ ಹುಡುಕ್ತೀರಿ. ಯಾವ್ದೇ ಸಂದರ್ಭ ಇರ್ಲಿ ಬೇರೆ ಬೇರೆ ಕೋನಗಳಿಂದ ಯೋಚನೆ ಮಾಡೋ ತಾಳ್ಮೆ ಹೊಂದಿರ್ತೀರಿ.

ಅದೇ ಹೆಬ್ಬೆರಳು ಬೇರೆ ಎಲ್ಲಾ ಕಾಲ್ಬೆರಳುಗಳಿಗಿಂತ ಚಿಕ್ಕದಾಗಿದ್ರೆ...

ನೀವು ಒಂದೇ ಸಮಯದಲ್ಲಿ ಎರಡ್ಮೂರು ಕೆಲಸಗಳನ್ನ ಮಾಡೋ ಸಾಮರ್ಥ್ಯ ಹೊಂದಿರ್ತೀರಿ. ನಿಮ್ಗೆ ಹೊಸೊಸ ಐಡಿಯಾಗಳು ಆಗಾಗ ಬರ್ತಾನೇ ಇರುತ್ತೆ. ಇದನ್ನ ಕೇಳ್ದೋರೆಲ್ಲಾ ತುಂಬಾನೆ ಮೆಚ್ಕೋತಾರೆ.

aos.iacpublishinglabs.com

ಹೆಬ್ಬೆರಳ ಪಕ್ಕದ್ದು ಎರಡನೇ ಬೆರಳು

ನಿಮ್ಮ ಬೇರೆ ಎಲ್ಲಾ ಕಾಲ್ಬೆರಳುಗಳಿಗಿಂತ ಎರಡನೇ ಬೆರಳು ಉದ್ದವಾಗಿದ್ರೆ...

ನೀವು ಹುಟ್ತಾನೇ ನಾಯಕತ್ವದ ಗುಣ ಹೊತ್ಕೊಂಡೇ ಹುಟ್ಟಿರ್ತೀರಿ. ನೀವು ತುಂಬಾನೇ ಕ್ರಿಯೇಟೀವ್ ವ್ಯಕ್ತಿ. ನಿಮ್ಮದೇ ಒಂದು ಸ್ಟೈಲ್ ಇರುತ್ತೆ. ನಿಮ್ಮ ಗುಂಪಲ್ಲಿ ನೀವು ಎದ್ದು ಕಾಣ್ತೀರಿ.

ಅದೇ ಎರಡನೇ ಬೆರಳು ಚಿಕ್ಕದಾಗಿದ್ರೆ...

ಬೇರೆಯವ್ರ ಪ್ರಭಾವಕ್ಕೆ ಬಾಳ ಬೇಗನೆ ಒಳಗಾಗೋಗ್ತೀರಿ. ನಿಮ್ಮನ್ನ ಯಾಮಾರ್ಸೋದು ತುಂಬಾ ಸುಲಭ. ನೀವು ಶಾಂತಿಯಿಂದ ಇರೋದನ್ನ ಇಷ್ಟಪಡ್ತೀರಿ.

dy6g3i6a1660s.cloudfront.net

ಮಧ್ಯದ ಬೆರಳು

ಬೇರೆ ಎಲ್ಲಾ ಕಾಲ್ಬೆರಳುಗಳಿಗಿಂತ ಮಧ್ಯದ ಬೆರಳು ದೊಡ್ಡದಾಗಿದ್ರೆ...

ನಿಮ್ಮ ಕನಸುಗಳ್ನ ನನಸು ಮಾಡ್ಕೋಳ್ಳೋದಕ್ಕೆ ತುಂಬಾ ಶ್ರಮ ಪಡ್ತೀರಿ. ನಿಮ್ಗೆ ಶಕ್ತಿ ಸ್ಥೈರ್ಯ ಎಲ್ಲವು ಜಾಸ್ತಿ. ಇರೋ ಬರೋ ಕೆಲ್ಸನೆಲ್ಲಾ ಹಚ್ಕೊಂಡು ನಿಮ್ಮ ಮನೆಯವ್ರಿಗೆ ಸಮಯ ಕೊಡೋದನ್ನೇ ಮರೀತೀರಿ.

ಅದೇ ಮಧ್ಯದ ಬೆರಳು ಬೇರೆ ಎಲ್ಲಾ ಕಾಲ್ಬೆರಳುಗಳಿಗಿಂತ ಚಿಕ್ಕದಾಗಿದ್ರೆ...

ನೀವು ನಿಮ್ ಪೂರ್ತಿ ಜೀವನ ಜೀವಿಸ್ತೀರಿ. ನಿಮ್ಗೆ ಎಷ್ಟು ಬೇಕೋ ಅಷ್ಟು ಸಮಯ ನಿಮ್ಗೋಸ್ಕರ ಇಟ್ಕೋತೀರಿ.

media.indiatimes.in

ನಾಲ್ಕನೇ ಬೆರಳು

ನಾಲ್ಕನೇ ಬೆರಳು ಉದ್ದವಾಗಿದ್ರೆ ಏನರ್ಥ ಗೊತ್ತಾ... 

ನಿಮಗೆ ನಿಮ್ಮ ಕುಟುಂಬಾನೇ ಮುಖ್ಯ. ಒಮ್ಮೊಮ್ಮೆ ಈ ಬೆರಳು ಬೇರೆಲ್ಲಾ ಬೆರಳುಗಳ್ಗಿಂತ ಸ್ವಲ್ಪ ಮೇಲ್ ಬೆಳ್ದಿರುತ್ತೆ ಹಾಗೇನಾದ್ರೂ ಇದ್ರೆ ಬಹುಶಃ ನಿಮ್ಮ ವೈವಾಹಿಕ ಜೀವನದಲ್ಲಿ ಅಷ್ಟು ಸಂತೋಷ ಇಲ್ಲ ಅಂತರ್ಥ. ಇನ್ನೊಬ್ಬರು ಮಾತಾಡೋವಾಗ ತುಂಬಾ ಶ್ರದ್ದೆಯಿಂದ ಕೇಳಿಸ್ಕೋತೀರಿ. ನೀವು ಬೇರೆ ಯಾರೋ ಅವ್ರ ಜೀವನದಲ್ಲಿ ಅನುಭವ್ಸೋ ತೊಂದ್ರೆಗಳಿಗೂ ಕೂಡ ಚಿಂತೆ ಹಚ್ಕೋತೀರಿ.

ಅದೇ ನಾಲ್ಕನೇ ಬೆರಳು ಚಿಕ್ಕದಾಗಿದ್ರೆ...

ನಿಮ್ಗೆ ಏಕಾಂತ ಅಂದ್ರೆ ಭಾರೀ ಇಷ್ಟ ಅಂತರ್ಥ. ನಿಮ್ಗೆ ಕುಟುಂಬದ ಗೊಡವೆ ಬೇಕಿಲ್ಲ. ನಿಮ್ಮದೇ ಲೋಕದಲ್ಲಿ ನೀವಿರ್ತೀರಿ. ಮತ್ತೊಬ್ಬರು ಹೇಳದಿದ್ರೆ ನೀವು ಯಾವ ವಿಷ್ಯಕ್ಕೂ ಅಷ್ಟಾಗಿ ತಲೆ ಕೆಡಿಸ್ಕೋಳ್ಳೋದಿಲ್ಲ.

1.bp.blogspot.com

ಕಿರು ಬೆರಳು

ನಮ್ಗೆಲ್ಲಾ ಗೊತ್ತೇ ಇದೆ. ಕಾಲಲ್ಲಿರೋ ಐದೂ ಬೆರಳುಗಳಲ್ಲಿ ಇದೇ ಪುಟಾಣಿದು. ಅದ್ರಲ್ಲೂ ಇರೋ ಎಲ್ಲಾ ಬೆರಳುಗಳಿಗಿಂತ್ಲೂ ತುಂಬಾನೇ ಚಿಕ್ಕದಾಗಿದ್ರೆ...

ನಿಮ್ಮ ಸ್ವಭಾವ ಮಗುವಿನ ಹಾಗೆ. ನಿಮ್ಗೆ ಬಹಳ ಬೇಗ ಕೆಲಸಗಳು ಬೋರ್ ಹೊಡೆಸುತ್ವೆ ಅಷ್ಟೇ ಅಲ್ಲ ಜವಾಬ್ದಾರಿ ಹೊರೋದ್ರಿಂದ ತಪ್ಪಿಸ್ಕೋತೀರಿ. ತುಂಬಾ ಖುಷ್ ಖುಷ್ಯಾಗಿರ್ತೀರಿ.

ಬೇರೆ ಎಲ್ಲಾ ಬೆರಳುಗಳ್ಗಿಂತ ಬೇರೇ ತರಾನೇ ಈ ಕಿರುಬೆರಳಿದ್ರೆ ಅದರರ್ಥ ನೀವು ಬೇಗ್ನೆ ಉದ್ವೇಗಕ್ಕೊಳಗಾಗ್ತೀರಿ. ನಿಮ್ಗೆ ಸಾಹಸಗಳು ಅಂದ್ರೆ ಪಂಚಪ್ರಾಣ.

ಅದೇ ನಿಮ್ ಕೊನೇ ಬೆರ್ಳು ಎಲ್ಲಾ ಬೆರಳ ಜೊತೆ ಅಂಟಾಕ್ಕೊಂಡಿದ್ರೆ, ನೀವು ತುಂಬಾ ನಂಬಿಕಸ್ಥರಾಗಿರ್ತೀರಿ. ಜನ ನಿಮ್ಮನ್ನ ಈ ಗುಣಕ್ಕಾಗೇ ಇಷ್ಟ ಪಡ್ತಾರೆ.

ae01.alicdn.com

ಜೋಡಿಸಿಟ್ಟಹಾಗಿರೋ ಬೆರಳುಗಳು

ಚಂದ್ರಾಕಾರದಲ್ಲಿ ಎಲ್ಲಾ ಬೆರಳುಗಳು ಜೋಡಿಸಿಟ್ಟಹಾಗಿದ್ರೆ ನೀವು ಲೌಕಿಕ ವ್ಯಕ್ತಿ. ನಿಮಗೆ ನಿಮ್ಮ ಹೊಸ ಯೋಜನೆಗಳನ್ನ ಕೈಗೂಡಿಸ್ಕೊಳ್ಳೋ ಕಲೆ ಇರುತ್ತೆ. ಕೆಲ್ಸದ ವಿಷ್ಯದಲ್ಲಿ ನಿಮಗೆ ತುಂಬಾ ನಿಯತ್ತು ಹಾಗೇನೆ ಸ್ನೇಹದ ವಿಶ್ಯದಲ್ಲಿ ನೀವು ತುಂಬಾನೇ ನಂಬಿಕಸ್ಥರು.

blog.zesty.co.uk

ಕಾಲು ಚಪ್ಪಟೆಯಾಗಿದ್ರೆ

ಎಷ್ಟೇ ಕಷ್ಟಾ ಆದ್ರೂ ನೀವು ಕೆಲ್ಸ ಮಾಡೋದಕ್ಕೆ ಹಿಂಜರಿಯೋದಿಲ್ಲ. ಎಷ್ಟು ಬ್ಯುಸಿಯಾಗಿರ್ತೀರೋ ಅಷ್ಟೇ ಸಂತೋಷವಾಗಿರ್ಬೋದು ಅನ್ನೋದು ನಿಮ್ಮ ನಂಬಿಕೆ. ಆದ್ರೆ ಅದೇ ಸಮಯದಲ್ಲಿ ನಿಮಗೆ ಶಾಂತಿಯಿಂದ ಜೀವನ ನಡ್ಸೋದು ಅಷ್ಟೇ ಮುಖ್ಯವಾಗಿರುತ್ತೆ.

nicershoes.com

ಕಾಲು ಪಾದ ತೆಳ್ಳಗಿದ್ರೆ

ನೀವು ಸ್ವಲ್ಪ ಜಾಸ್ತಿನೇ ಸೋಮಾರಿಗಳು ಆದ್ರೆ ಒಳ್ಳೇ ಸೌಂದರ್ಯ ಪ್ರಜ್ಞೆ ಹೊಂದಿರ್ತೀರಿ. ನೀವು ಹೇಗೆ ಜೀವನ ನಡೆಸ್ತಿದ್ರೂ ನಿಮ್ಮ ಮನೆ ಅಂದವಾಗೇ ಇರೋ ಹಾಗೆ ನೋಡ್ಕೋತೀರಿ.

thebrunettediaries.com

ಮಡಚಿಕೊಂಡಿರೋ ಬೆರಳುಗಳು

ಹೀಗಿರೋ ಪಾದದೋರು ನೀವಾಗಿದ್ರೆ ನೀವು ದುಡ್ಡಿನ ವಿಷ್ಯದಲ್ಲಿ ತುಂಬಾನೇ ಇಂಡಿಪೆಂಡೆಂಟು. ಕೆಲ್ಸವನ್ನ ಪ್ರೀತಿಸ್ತೀರಿ. ಸ್ವಲ್ಪ ಕ್ರಾಂತಿಕಾರಿ ಧೋರಣೆ ನಿಮ್ಮಲ್ಲಿರುತ್ತೆ. ನಿಮ್ಗೆ ಸ್ನೇಹನೇ ಎಲ್ಲಾ, ಅದಕ್ಕೋಸ್ಕರ ಏನೂ ಮಾಡೋದಕ್ಕೆ ಹಿಂಜರಿಯೋದಿಲ್ಲ. ಬೇರೆಯವ್ರನ್ನ ಹುರಿದುಂಬಿಸೋದ್ರಲ್ಲಿ ನಿಮ್ಮದು ಎತ್ತಿದ ಕೈ.

footvitals.com

ನೋಡ್ಕೋಳ್ಳಿ , ನಿಮ್ಮ ಪಾದ ಹೇಗಿದೆ ಅಂತ!!!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: