ಸಣ್ಣ ಪುಟ್ಟ ತೊಂದ್ರೆಗಳಿಗೆ ಈ 20 ಮನೆ ಮದ್ದಿನ ಸಹಾಯ ತೊಗೊಂಡ್ರೆ ಒಳ್ಳೇದು

ಕಯ್ಯಲ್ಲಿ ತುಪ್ಪ ಹಿಡ್ಕೊಂಡು ಊರೆಲ್ಲಾ ಸುತ್ತಬಾರ್ದು ಅಲ್ವಾ?

ನಮಗೇನಾದರೂ ಮೈ ಹುಷಾರಿಲ್ಲದಿದ್ದಾಗ ನಮಗೆ ಡಾಕ್ಟರ್ ಹತ್ರ ಓಡೋ ಮೊದಲು ನೆನಪಾಗೋದು ಮನೆಯಲ್ಲಿರೋ ಸಾಮಾನು... ಅಂದರೆ ಮನೆ ಮದ್ದು, ಮನೆ ಮದ್ದು ಕೆಲಸ ಮಾಡದೇ ಹೋದಾಗ ಮಾತ್ರ ಡಾಕ್ಟರ್ ನೆನಪಾಗ್ತಾರೆ ಅಂದ್ರೆ ಅದು ಸುಳ್ಳಲ್ಲ. ಅದಕ್ಕೇ ನಿಮಗೆ ಸಹಾಯ ಆಗೋ ಒಂದಿಷ್ಟು ಮನೆ ಮದ್ದುಗಳು ಇಲ್ಲಿವೆ ನೋಡಿ.

1. ದಾಳಿಂಬೆ ಸೇವಿಸೋದು ಹೃದಯಕ್ಕೆ ತುಂಬ ಒಳ್ಳೇದು. ದಿನಾ ದಾಳಿಂಬೆ ಜ್ಯೂಸ್ ಕುಡಿಯೋದ್ರಿಂದ ಬಿ ಪಿ ಕಡಿಮೆ ಮಾಡ್ಕೋಬೋದು.

ಮೂಲ

2. ಗ್ಯಾಸ್ಟ್ರಿಕ್ ಅಂತ ಒದ್ದಾಡೋರೆಲ್ಲಾ, ದಿನಾ ಊಟ ಆದ್ಮೇಲೆ ಒಂದೆರೆಡು ತುಳಸೀ ಎಲೆಗಳನ್ನ ತಿಂದ್ರೆ ಆಸಿಡಿಟಿ ಕಡಿಮೆ ಆಗೋದಲ್ಲದೇ ಹೊಟ್ಟೇಲಿ ಅಲ್ಸರ್ ಕೂಡ ಆಗಲ್ಲ.

ಮೂಲ

3. ಊಟದ ನಂತರ ಒಂದು ಲವಂಗ ತಿಂದ್ರೂ ಆಸಿಡಿಟಿ ಕಡಿಮೆ ಆಗುತ್ತೆ.

ಮೂಲ

4. ನಿಮಗೆ ಅಸಿಡಿಟಿ ಮತ್ತಿನ್ಯಾವುದೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡರೂ, ದಿನಾ ಬೆಳಗ್ಗೆ ಖಾಲಿ ಹೊಟ್ಟೇಲಿ ಒಂದೆಸಳು ಬೆಳ್ಳುಳ್ಳಿನ ನೀರಲ್ಲಿ ಮಾತ್ರೆ ತರ ತಗೊಳ್ಳಿ.

ಮೂಲ

5.  ಬೇಸಿಗೆಯ ದಗೆಗೆ ಉಂಟಾಗೋ ತಲೆನೋವನ್ನ ಹೋಗಲಾಡಿಸೋಕೆ ಒಂದು ಲೋಟ ಕಲ್ಲಂಗಡಿ ಜ್ಯೂಸ್ ಸಾಕು!

 

ಮೂಲ

6. ದಿನಾ ಬೆಳಗ್ಗೆ ಖಾಲಿ ಹೊಟ್ಟೇಲಿ ಒಂದು ಸೇಬನ್ನ ತಿನ್ನೋದ್ರಿಂದ ಮೈಗ್ರೇನ್ ಕಡಿಮೆ ಆಗುತ್ತಂತೆ. ಇದು ಅಂತೆಕಂತೆ ಅಲ್ಲ... ವರ್ಷಗಳಿಂದ ನರಳಿರೋರ ಅನುಭವದ ಮಾತು!

ಮೂಲ

7.  6 ಖರ್ಜೂರಾನ ಬಿಡಿಸಿ ಅರ್ಧ ಲೀಟರ್ ಹಾಲಲ್ಲಿ ಕಡಿಮೆ ಉರೀಲಿ ಕುದಿಸಿ, ದಿನಕ್ಕೆ 3 ಲೋಟ ಕುಡಿದರೆ ಒಣ ಕೆಮ್ಮು ಮಂಗಮಾಯ!

ಮೂಲ

8.  ಕೆಮ್ಮು, ನೆಗಡಿ, ಕಫ, ಗಂಟಲು ನೋವು ಏನಾದ್ರೂ ಆಗಿದ್ರೆ, ಅದನ್ನ ಕಡಿಮೆ ಮಾಡೋಕೆ ಒಂದು ಚಮಚ ಜೇನಿಗೆ ಒಂದು ಚಮಚ ಶುಂಠಿ ರಸ ಸೇರಿಸಿ ಕುಡೀರಿ.

ಮೂಲ

9. ನಿಮಗೇನಾದ್ರೂ ಊಟ - ತಿಂಡಿ ಸರಿಯಾಗಿ ಜೀರ್ಣ ಆಗ್ತಿಲ್ಲ ಅನ್ನಿಸ್ತಿದ್ರೆ ಅಥವಾ ಮಲಬದ್ಧತೆ ಕಾಡ್ತಿದ್ರೆ, ದಿನಾ ಊಟಕ್ಕೆ ಮುಂಚೆ ಒಂದು ಬಟ್ಟಲು ಬೇಯಿಸಿದ ಬೀಟ್ರೂಟ್ ತಿನ್ನಿ.

ಮೂಲ

10. ಕೆಮ್ಮು ಕಡಿಮೆ ಮಾಡೋಕೆ ಈ ಕಾಫ್ ಸಿರಪ್ ಮಾಡ್ಕೊಳಿ

6 ಈರುಳ್ಳಿನ ಕತ್ತರಿಸಿ ಅದರ ಜೊತೆಗೆ 4 ಚಮಚ ಜೇನನ್ನ ಸೇರಿಸಿ. ಅದನ್ನ ಒಂದು ಬೋರೊಸಿಲ್ ಗಾಜಿನ ಬಾಟ್ಲಿಗೆ ಹಾಕಿ, ಚನ್ನಾಗಿ ಕುಲುಕಿ. ಆಮೇಲೆ ಅದನ್ನ ಒಂದು ನೀರಿನ ಪಾತ್ರೇಲಿಟ್ಟು ಕಮ್ಮಿ ಫ್ಲೇಮಲ್ಲಿ ಸ್ವಲ್ಪ ಹೊತ್ತು ಕುದಿಸಿ. ತಣ್ಣಗಾದ್ಮೇಲೆ, ಶೋಧಿಸಿ, 3 ಗಂಟೆಗೆ ಒಂದು ಚಮಚ ಕುಡೀರಿ.

ಮೂಲ

11. ಮೊಡವೆಗಳು ಹಾಗು ಕಪ್ಪುಕಲೆಗಳನ್ನ ಕಡಿಮೆ ಮಾಡೋಕೆ ತುರಿದ ಸೌತೇಕಾಯನ್ನ ಮುಖಕ್ಕೆ ಹಚ್ಚಿ, 15 ನಿಮಿಷ ಆದ್ಮೇಲೆ ತೊಳೀರಿ.

ಮೂಲ

12. 3 - 4 ಖರ್ಜೂರಾನ ಸ್ವಲ್ಪ ಹಾಲ್ಲಲ್ಲಿ ಹಾಕಿ ಕುಟ್ಟಿ ಅದಕ್ಕೆ ಸ್ವಲ್ಪ ತುಪ್ಪ ಸೇರಿಸಿ ದಿನಾ ತಿನ್ನಿ. ರಕ್ತಹೀನತೆ, ಸುಸ್ತಾಗೋದು... ಎಲ್ಲಾ ವಾಸಿ ಆಗುತ್ತೆ.

ಮೂಲ

13. ಡಾರ್ಕ್ ಸರ್ಕಲ್ಸ್ ಕಡಿಮೆ ಮಾಡೋಕೆ ಟೊಮಾಟೋ ಪ್ಯಾಕ್ ಹಾಕೊಳಿ

ಒಂದೆರೆಡು ಟೊಮಾಟೋ, ಒಂದು ಚಮಚ ನಿಂಬೆ ರಸ, ಒಂದು ಚಿಟಿಕೆ ಕಡಲೇಹಿಟ್ಟು ಮತ್ತೆ ಅರಿಶಿಣ ಹಾಕಿ ಮಿಕ್ಸೀಲಿ ಪೇಸ್ಟ್ ಮಾಡ್ಕೊಳ್ಳಿ. ಇದನ್ನ ಕಣ್ಣಿನ ಸುತ್ತ ಹಚ್ಚಿ 10-20 ನಿಮಿಷದ ನಂತರ ತೊಳೆಯಿರಿ. ವಾರಕ್ಕೆರೆಡು ಮೂರು ಬಾರಿ ಹೀಗೆ ಮಾಡಿದ್ರೆ ಕಣ್ಣಿನ ಸುತ್ತ ಇರೋ ಕಪ್ಪು ಹೋಗಿ ಚರ್ಮಕ್ಕೆ ಕಾಂತಿ ಬರುತ್ತೆ.

ಮೂಲ

14. ಗಂಟಲ ಕಿಚ್ ಕಿಚ್ ಗೆ ಅರಿಶಿಣ ಮತ್ತು ಉಪ್ಪಿನ ನೀರು ರಾಮಬಾಣ

ನಿಮಗೆ ಗಂಟಲು ನೋವಾಗ್ತಿದ್ರೆ, ಅರ್ಧ ಲೋಟ ಬಿಸಿನೀರಿಗೆ ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಅರಿಶಿಣ ಹಾಕಿ ಗಾರ್ಗಲ್ ಮಾಡಿ. ದಿನದಲ್ಲಿ ಸುಮಾರು ಸಾರಿ ಹೀಗೆ ಮಾಡಿ. ಜೊತೇಲಿ ಗಾರ್ಗಲ್ ಮಾಡಿದ ಅರ್ಧ ಗಂಟೆ ಏನನ್ನೂ ತಿನ್ನದೇ ಇರೋದು ಒಳ್ಳೇದು. ಆಮೇಲ್ ನೋಡಿ ಗಂಟಲು ನೋವು ಎಷ್ಟ್ ಬೇಗ ಓಡಿಹೋಗತ್ತೆ ಅಂತ!

ಮೂಲ

15. ಕಿವಿ ನೋವಾಗಿದ್ರೆ ಒಂದೆರೆಡು ಹನಿ ಬೆಳ್ಳುಳ್ಳಿ ರಸಾನ ಕಿವಿಗೆ ಹಾಕೊಳಿ ಸಾಕು. ಇನ್ಫೆಕ್ಷನ್ ಇಂದ ನೋವಾಗಿದ್ರೆ ವಾಸಿಯಾಗತ್ತೆ.

ಮೂಲ

16. ದೇಹದಿಂದ ಬರೊ ದುರ್ವಾಸನೆ ಕಡಿಮೆ ಮಾಡೋಕೆ ಬೇಕಿಂಗ್ ಸೋಡಾ ಜೊತೇಲಿ ನಿಂಬೆ ರಸ ಹಾಕಿ ಕಂಕಳಿಗೆ ಹಚ್ಚಿ.

ಮೂಲ

17. ಹೊಟ್ಟೆ ಉಬ್ಬರಕ್ಕೆ ಸೋಂಪ್ ಕಾಳು ಉಪ್ಯೋಗ್ಸಿ

* ಬಿಸಿ ನೀರಲ್ಲಿ ಸೋಂಪು ಕಾಳನ್ನ ಹಾಕಿ ಕುದಿಸಿ ಕುಡೀರಿ ಅಥವಾ ಬರೀ ಸೋಂಪು ಕಾಳನ್ನ ಅಗೀರಿ.

* ಸೋಂಪ್ ಜೊತೆ ಏಲಕ್ಕಿ ಮತ್ತು ಪುದೀನ ಎಲೆಗಳನ್ನ ನೀರಲ್ಲಿ ಹಾಕಿ ಕುದಿಸಿ ಕುಡೀರಿ.

ಇದೆಲ್ಲಾ ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತೆ.

ಮೂಲ

18. ದೇಹದಲ್ಲಿರೋ ಕಸ ಹೊರ ಹಾಕೋಕೆ ಬಿಸಿನೀರಲ್ಲಿ ನಿಂಬೆ ರಸ ಹಾಕಿ ಕುಡೀರಿ

ವಿಟಮಿನ್ ಸಿ ಹೆಚ್ಚಿರೊ ನಿಂಬೆ ಹಣ್ಣಲ್ಲಿ ವಿಟಮಿನ್ ಬಿ, ರಿಬೋಫ್ಲಾವಿನ್,  ಫಾಸ್ಫರಸ್, ಮಗ್ನೀಶಿಯಂ ಹಾಗು ಕ್ಯಾಲ್ಷಿಯಂ ಕೂಡ ಇದೆ. ಇದು ದೇಹಕ್ಕೆ ತುಂಬಾ ಒಳ್ಳೇದಂತೆ. ದಿನಾ ನಿಂಬೆರಸಾನ ಬಿಸಿನಿರಿನ ಜೊತೆ ಸೇರಿಸಿ ಕುಡಿಯೋ ಅಭ್ಯಾಸ ಇದ್ದರೆ ನಿಮ್ಮ ಹೊಟ್ಟೆಗೆ ಒಳ್ಳೇದು. ಇದು ವಾಂತಿ ಬಾರದ ಹಾಗೆ ನೋಡಿಕೊಂಡು ಬಿ ಪಿ, ಎದೆಯುರಿ, ಅಜೀರ್ಣ ಮತ್ತೆ ಡಿಪ್ರೆಷನ್ ಕೂಡ ದೂರ ಮಾಡುತ್ತಂತೆ.

ಮೂಲ

19. ಹಿಂದಿನ ರಾತ್ರಿ ಕುಡಿದಿದ್ದ ನಶೆ ಇಳಿಸಕ್ಕೆ  ಬಾಳೆಹಣ್ಣಿನ ಮಿಲ್ಕ್ ಶೇಕ್ಗೆ ಜೇನು ತುಪ್ಪ ಸೇರಿಸಿ ಕುಡೀರಿ

ತಣ್ಣಗಿರೋ ಹಾಲು ಹೊಟ್ಟೆಯ ಒಳಪದರಾನ ತಂಪಾಗಿಸಿದ್ರೆ, ಬಾಳೆ ಹಣ್ಣು ಹಾಗು ಜೇನು ದೇಹದಲ್ಲಿ ಕಡಿಮೆ ಆಗಿರೋ ಶುಗರ್ ಲೆವೆಲ್ ಜಾಸ್ತಿ ಮಾಡತ್ತೆ.

ಮೂಲ

20. ಜಾಸ್ತಿ ಕೆಮ್ಮಿರೋರು ತುಳಸಿ ರಸದ ಜೊತೆ ಬೆಳ್ಳುಳ್ಳಿ ರಸ ಹಾಗು ಜೇನು ತುಪ್ಪ ಸೇರಿಸಿ ಕುಡೀರಿ

ಇದನ್ನ 3 ಗಂಟೆಗೊಮ್ಮೆ ಕುಡಿಯೋದ್ರಿಂದ ಕೆಮ್ಮು ವಾಸಿ ಆಗುತ್ತೆ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: