ತುರ್ತು ಚಿಕಿತ್ಸೆ ಮಾಡೋವಾಗ ಈ 9 ವಿಷಯಗಳು ನೆನಪಲ್ಲಿದ್ರೆ ಜಾಸ್ತಿ ಅಪಾಯ ಆಗೋದನ್ನ ತಡೀಬೋದು

ಉಳ್ಕಿರೋ ಜಾಗಕ್ಕೆ ಶಾಖ ಕೊಡ್ಬೇಡಿ

ನೀವೆಲ್ಲೇ ಇದ್ದು ನಿಮ್ಮ ಕಣ್ಣ ಮುಂದೆ ಯಾರಿಗಾದರೂ ಏನಾದರೂ ತೊಂದರೆ ಆದರೆ ಡಾಕ್ಟರ್ ಹತ್ತಿರ ಕರ್ಕೊಂಡು ಹೋಗೋ ಮುಂಚೆ ನಮಗೆ ನೆನಪಾಗೋದು ಮನೆಯವರೋ ಅಥವಾ ಸ್ನೇಹಿತರೋ ಹೇಳಿಕೊಟ್ಟ ಅಂತೆಕಂತೆ. ಆದರೆ ಬರೀ ಹೇಳಿಕೆಗಳನ್ನ ಕೇಳಿ ಕೆಲವೊಮ್ಮೆ ತಪ್ಪು ಮಾಡೋ ಸಾಧ್ಯತೆ ಇರುತ್ತೆ. ಇದನ್ನ ತಪ್ಪಿಸೋಕೆ ಅಂತೆಕಂತೆ ನಿಮಗಾಗಿ ಮಾಹಿತಿ ಹೊತ್ತು ತಂದಿದೆ ನೋಡಿ.

1. ಊದ್ಕೊಂಡಿರೋ ಗಾಯಕ್ಕೆ ಐಸ್ ಇಟ್ಟರೆ ಕಡಿಮೆ ಆಗುತ್ತೆ ಅಂತ ನೇರವಾಗಿ ಇಡೋದು ತಪ್ಪು

ಅದರ ಬದಲು ಒಂದು ಬಟ್ಟೇಲಿ ಐಸ್ ಇಟ್ಟು ಊತ ಬಂದ ಗಾಯದ ಮೇಲಿಡಿ. 20 ನಿಮಿಷ ಐಸ್ ಪ್ಯಾಕ್ ಕೊಟ್ಟು, 20 ನಿಮಿಷ ಬಿಡಿ. ಇದೇ ತರ ಪದೇ ಪದೆ ಮಾಡಿ, ಊತ ಇಳಿಯತ್ತೆ. 

ಮೂಲ

2. ಮೂರ್ಚೆ ಹೋದೋರ್ನ ಎಬ್ಸೋದು ಅಥವಾ ಅವ್ರ ಮೇಲೆ ನೀರು ಚುಮುಕ್ಸೋದು ತಪ್ಪು

ಇದರಿಂದ ಅವರ ಸ್ಥಿತಿ ಇನ್ನೂ ಹದಗೆಡುತ್ತೆ. ಜೊತೇಲಿ ಅವರಿಗೆ ಪ್ರಜ್ಞೆ ಬಂದ ತಕ್ಷಣ ಕುಡಿಯೋಕೆ ಕಾಫೀ ಕೊಡಬೇಡಿ. ಕೊಟ್ಟರೆ ಅವರ ದೇಹದಲ್ಲಿರೋ ನೀರಿನ ಅಂಶ ಇನ್ನಷ್ಟು ಕಡಿಮೆ ಆಗುತ್ತೆ.

ಇದರ ಬದಲು ಮೂರ್ಚೆಹೋದವರ ಕಾಲನ್ನ ಎತ್ತಿ, ಅವರ ಬಟ್ಟೆ ಸಡಿಲ ಮಾಡಿ. ಇನ್ನೊಂದು ಮುಖ್ಯವಾದ ವಿಷಯ ಅಂದರೆ ಅವರಿಗೆ ಉಸಿರಾಡೋಕೂ ಜಾಗ ಇರದ ಹಾಗೆ ಮುತ್ತಿಕೊಳ್ಳಬೇಡಿ.

ಮೂಲ

3. ಸುಟ್ಟ ಗಾಯಕ್ಕೆ ಬೆಣ್ಣೆ ಅಥವಾ ಕ್ರೀಂ ಹಚ್ಚೋದು ತಪ್ಪು

ಇದರಿಂದ ಚರ್ಮದ ಮೇಲೆ ಪದರ ಆಗಿ ತಾಕಿರೋ ಬಿಸಿ ಮೇಲೆ ಸರಿಯಾಗಿ ಗಾಳಿ ಆಡಲ್ಲ. 

ಇದರ ಬದಲು ಬಿಸಿ ತಾಕಿದ ಚರ್ಮದ ಭಾಗಾನ 15 ನಿಮಿಷ ನಲ್ಲಿ ನೀರಲ್ಲಿ ಹಿಡಿದರೆ ಸಾಕು. ಇನ್ನು ಮುಂದೆ ಹೋಗಿ ಬೊಬ್ಬೆ ಬಂದರೆ ಅದನ್ನು ಒಡೆಯೋ ಪ್ರಯತ್ನ ಮಾಡಬೇಡಿ. ಇದರಿಂದ ಇನ್ಫೆಕ್ಷನ್ ಆಗೋ ಸಾಧ್ಯತೆ ಹೆಚ್ಚು.

ಮೂಲ

4. ಮೂಳೆ ಮುರಿದಿದೆ ಅಂತ ಗೊತ್ತಾಗಿ ಅದನ್ನ ನೀವೇ ಸರಿ ಮಾಡಕ್ಕೆ ಹೋಗೋದು ತಪ್ಪು

ಇದರಿಂದ ತೊಂದರೆ ಇನ್ನೂ ಹೆಚ್ಚಾಗುತ್ತೆ.

ಇದರ ಬದಲು ಕ್ರೇಪ್ ಬ್ಯಾಂಡೇಜ್ ಅಥವಾ ಬಟ್ಟೆಯಿಂದ ಏಟಾಗಿರೋ ಮೂಳೇನ ಅಲುಗಾಡದ ಹಾಗೆ ಕಟ್ಟಿ ಡಾಕ್ಟರ್ ಹತ್ತಿರ ಕರ್ಕೊಂಡ್ ಹೋಗಿ. ಬರೀ ಏಟಾದ ಮೂಳೆ ಅಷ್ಟೇ ಅಲ್ಲ ಅದರ ಪಕ್ಕದಲ್ಲಿರೋ ಮೂಳೆ ಸೇರ್ಸಿ ಕಟ್ಟಿದ್ರೂ ಒಳ್ಳೇದೆ.

ಮೂಲ

5. ಉಳುಕಿರೋ ಜಾಗಕ್ಕೆ ಬೆಚ್ಚನೆ ಶಾಖ ಕೊಡೋದು ತಪ್ಪು

ಇದರಿಂದ ರಕ್ತ ಸಂಚಾರ ಹೆಚ್ಚಾಗಿ ಊತ ಇನ್ನೂ ಹೆಚ್ಚಾಗುತ್ತೆ.

ಅದರ ಬದಲು ಐಸ್ ಪ್ಯಾಕ್ ಹಾಕೋದು ಉತ್ತಮ. ಇದ್ರಿಂದ ಊತ ಮತ್ತು ನೋವು ಎರಡೂ ಕಮ್ಮಿಯಾಗತ್ತೆ. ಇನ್ನೊಂದು ವಿಷಯ ಏನಪ್ಪಾ ಅಂದ್ರೆ, ಉಳುಕಿರೋ ಕಾಲ್ಮೇಲೆ ಕಮ್ಮಿ ಅಂದ್ರೂ 48 ಗಂಟೆಕಾಲ ಆದಷ್ಟೂ ಜಾಸ್ತಿ ಭಾರ ಹಾಕ್ಬೇಡಿ.

ಮೂಲ

6. ವಿಷ ಕುಡಿದಿರೋರ್ಗೆ ವಾಂತಿ ಮಾಡಕ್ಕೆ ಬಲವಂತ ಮಾಡೋದು ತಪ್ಪು

ಆಸಿಡ್ ಅಥವಾ ಬೇರೆ ಹಾನಿಕರ ಕೆಮಿಕಲ್ಸ್ ಕುಡಿದಿದ್ರೆ ಇದು ಸಮಸ್ಯೆನ ಹೆಚ್ಚು ಮಾಡುತ್ತೆ.

ಇಂತಹ ಸಾಹಸ ಮಾಡೋ ಬದಲು ಆಂಬುಲೆನ್ಸ್ ಗೆ ಫೋನ್ ಮಾಡಿ ಹಾಸ್ಪಿಟಲ್ ಗೆ ಕರ್ಕೊಂಡ್ ಹೋಗಿ.

ಮೂಲ

7. ಕಣ್ಣಿಗೇನಾದ್ರೂ ಬಿದ್ರೆ ಅದನ್ನ ನಾವೇ ತೆಗೆಯೋದು ತಪ್ಪು

ನೀವು ಕಣ್ಣಿಗೆ ಕೈ ಹಾಕಿ ಅದ್ರಿಂದ ಮತ್ತಷ್ಟು ಹಾನಿ ಆಗ್ಬೋದು.

ಅದರ ಬದಲು ಕಣ್ಣನ್ನ  ಹತ್ತಿಯಿಂದ ಮುಚ್ಚಿ ಡಾಕ್ಟರ್ ಹತ್ತಿರ ಹೋಗಿ. ಯಾವುದಾದರೂ ಕೆಮಿಕಲ್ ಬಿದ್ದಿದ್ರೆ ಮಾತ್ರ ಆದಷ್ಟು ಬೇಗ ಕಣ್ಣ್  ತೊಳ್ಕೊಳಿ.

ಮೂಲ

8. ಚೂಪಾದ ವಸ್ತು ಚುಚ್ಕೊಂಡಿದ್ರೆ ಅದನ್ನ ಗಾಯದಿಂದ ತೆಗೆಯೋದು ತಪ್ಪು

ಸಣ್ಣಾ ಪುಟ್ಟದ ಗಾಯ ಆದ್ರೆ ಸರಿ. ದೊಡ್ಡ ದೊಡ್ಡ ಗಾಯ ಆದ್ರೆ ಈ ಸಾಹಸ ಮಾಡ್ಬೇಡಿ. ಯಾಕಂದ್ರೆ ಒಂದು... ನೀವು ತೆಗೆಯೋ ಪ್ರಯತ್ನದಲ್ಲಿ ಅಕ್ಕಪಕ್ಕದ ಅಂಗಗಳಿಗೆ ತೊಂದರೆ ಮಾಡಬಹುದು. ಇಲ್ಲಾ ತೆಗೆದ್ಮೇಲೆ ಹೆಚ್ಚು ರಕ್ತ ಸ್ರಾವ ಆಗಿ ವ್ಯಕ್ತಿ ಪ್ರಾಣಕ್ಕೆ ಅಪಾಯ ಆಗ್ಬೋದು.

ಗಾಯ ಎಷ್ಟೇ ಭಯಾನಕವಗಿ ಕಂಡರೂ ಏನೂ ಮಾಡದೇ ಮೊದಲು ಹಾಸ್ಪಿಟಲ್ ಗೆ ಹೋಗಿ.

ಮೂಲ

9. ಗಾಯಕ್ಕೆ ಆಯಿಂಟ್ಮೆಂಟ್ ಹಚ್ಚೋದು ತಪ್ಪು

ಗಾಯ ಗಾಳೀಲಿ ಒಣಗಿದಷ್ಟೂ ಚನ್ನಾಗಿ ವಾಸಿ ಆಗುತ್ತೆ. ಆಯಿಂಟ್ಮೆಂಟ್ ಇದಕ್ಕೆ ತಡೆ ಒಡ್ಡತ್ತೆ.

ಇದರ ಬದಲು ಗಾಯ ಆದ ಜಾಗಾನ ಸೋಪಲ್ಲಿ ತೊಳೆದು ಒರೆಸಿ ಬ್ಯಾಂಡೇಜ್ ಮಾಡಿ.

ಮೂಲ

ನೋಡ್ಕೊಂಡ್ರಲ್ಲಾ... ಇನ್ಮೇಲೆ ಈ ತರ ಯಾವ್ದೇ ತಪ್ಪು ಮಾಡಕ್ಕ್ ಹೋಗ್ಬೇಡಿ. ನಿಮ್ ಚಿಕ್ಕ ತಪ್ಪು ದೊಡ್ಡ ಗಂಡಾಂತರ ತಂದಿಡ್ಬಾರ್ದು ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: