ಈ 18 ಪೈಂಟಿಂಗ್ ನಿಮ್ಮ ಕಣ್ಣಿಗೆ ಮೋಸ ಮಾಡದಿದ್ರೆ ಕೇಳಿ

ನೋಡ್ತಿದ್ರೆ ನೋಡ್ತಾನೇ ಇರೋಣ ಅನ್ಸತ್ತೆ!

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ಹೆಚ್ಚುಕಮ್ಮಿ ನೀವೆಲ್ಲಾ ಇಷ್ಟಪಡೋ ಈ 10 ಬೈಕ್ ಬಗ್ಗೆ ಸ್ವಲ್ಪ ತಿಳ್ಕೊಂಡ್ರೆ ಜಮಾನದ ನೆನಪೆಲ್ಲಾ ವಾಪಸ್ಸು ಬರತ್ತೆ

ಇವುಗಳ ಗಮ್ಮತ್ತು ಪ್ರತಿಯೊಬ್ಬನಿಗೂ ಗೊತ್ತು

ನಮ್ಮ ದೇಶದಲ್ಲಿ ಮೊದಲಿಂದ ಕೆಲವು ಬೈಕ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್. ಆದರು ಜಮಾನದಿಂದ ಒಂಥರಾ ರೂಲ್ ಮಾಡ್ಕೊಂಡ್ ಬಂದಿರೋ ಗಾಡಿಗಳು ಸುಮಾರಿವೆ ಅಂತಾ ಗಾಡಿಗಳಲ್ಲಿ ಯಾವತ್ತೂ ನಮ್ಮ ನೆನಪಲ್ಲಿ ಉಳಿಯೋ ಕೆಲವು ಗಾಡಿಗಳು ಇಲ್ಲಿವೆ. ನಿಮ್ಮ ಫೆವರೇಟ್ ಗಾಡಿ ಯಾವ್ದು ಅಂತ ಹೇಳಿ 

1 ರಾಯಲ್ ಎನ್ಫೀಲ್ಡ್ 

ಈ ಬೈಕನ್ನ ಭಾರತ ಪಾಕಿಸ್ತಾನದ ಗಡಿ ಕಾಯಕ್ಕೆ ಪೆಟ್ರೋಲಿಂಗಿಗೆ ಅಂತ ನಮ್ಮ ಭಾರತ ಸರ್ಕಾರ್ರ ೧೯೫೫ ರಲ್ಲಿ ಇಂಗ್ಲೆಂಡಿನಿಂದ ೮೦೦ ಬೈಕ್ ತರಿಸಿತು. ಇವತ್ತಿಗೂ ಬುಲೆಟ್ ಬೈಕ್ ಅಂದ್ರೆ ಭಯಂಕರ ಕ್ರೇಜ್...

images.thrillophilia.com

2 ಜಾವ 

ಇದರಂತ ಅದ್ಬುತ ಗಾಡಿ ಇನ್ನೊಂದಿಲ್ಲ, ಗಾಡಿಮೇಲೆ ಕೂತು ಹೋಗ್ತಿದ್ರೆ ಆ ಗತ್ತೇ ಬೇರೆ.

assets.catawiki.n

3 ಎಜ್ಡಿ 

ಇವತ್ತಿಗೂ ಅಲ್ಲೊಂದು ಇಲ್ಲೊಂದು ಕಾಣತ್ತೆ, ಎಜ್ಡಿ ರೋಡ್ಕಿಂಗ್ ಇದ್ರಲ್ಲಿ ಭಯಂಕರ ಫೇಮಸ್ಸು

rediff.com

4 ರಾಜದೂತ್ 

ಬುಲೆಟ್ ಮತ್ತು ಎಜ್ಡಿ ಇವೆರಡಕ್ಕಿಂತ ರೇಟ್ ಕಮ್ಮಿ, ಇದನ್ನ ನಟ ಧರ್ಮೇಂದ್ರ ಪ್ರಮೋಟ್ ಮಾಡಿದ್ರು. ಇದು ಭಯಂಕರ ಕ್ರೇಜ್ ಹುಟ್ಟಿಹಾಕಿತ್ತು 

zamroo.com

5 ಯಮಹಾ RD350

ಬುಲೆಟ್, ಎಜ್ಡಿ, ರಾಜದೂತ್ ಇವುಗಳ ಮಧ್ಯೆ ಅದ್ಭುತವಾದ ಪರ್ಫಾರ್ಮೆನ್ಸ್ ಇಟ್ಕೊಂಡು ಗೆದ್ದ ಬೈಕ್ ಇದು.

cdn7.bigcommerce.com

6 ಯಮಹಾ RX 100

ಸಕತ್ ಬ್ಯಾಲೆನ್ಸ್ ಈ ಬೈಕಿಗೆ. ಸಿನೆಮಾ ಸ್ಟಂಟ್, ಸರ್ಕಸ್ ಇಲ್ಲೆಲ್ಲಾ ಜಾಸ್ತಿ ಬಳಕೆಯಾದ ಬೈಕ್ ಇದು. ಎಲ್ಲರಿಗೂ ಇಷ್ಟ ಆಗ್ತಿತ್ತು 

qph.fs.quoracdn.net

7 ಹೀರೋ ಹೋಂಡಾ ಸಿ.ಡಿ 100

ನಮ್ಮ ದೇಶದ ಮೊದಲ 4 ಸ್ಟ್ರೋಕ್ ಇಂಜಿನ್ ಬೈಕ್ ಇದು 

bikes4sale.in

8 ಬಜಾಜ್ ಚೇತಕ್ 

ರಾಜ ಮಹಾರಾಣಾ ಪ್ರತಾಪ್ ಓಡಿಸುತ್ತಿದ್ದ ಕುದುರೆ ಹೆಸರು ಚೇತಕ್, ಹೆಚ್ಚುಕಮ್ಮಿ ಎಲ್ಲರಿಗೂ ಈ ಗಾಡಿಯಲ್ಲಿ ಕೂತಿರೋ ನೆನಪಿರತ್ತೆ

3.bp.blogspot.com

9 ಹೀರೋ ಪುಕ್ 

ಹೆಚ್ಚುಕಮ್ಮಿ ಅತಿ ಹೆಚ್ಚು ಸೇಲ್ ಕಂಡಿದ್ದು ಇದೆ ಗಾಡಿ, ಇದ್ರಲ್ಲಿ ಮಾಡೆಲ್ ಇತ್ತು. ಆಟೊಮ್ಯಾಟಿಕ್ಕು, ಶಕ್ತಿ ಮತ್ತೆ 3G ಅಂತ 

mlstatic.com

10 ಲ್ಯಾಂಬ್ರೆಟ್ಟಾ

ನಮ್ಮ ದೇಶದಲ್ಲೇ ತಯಾರಾದ ಮೊದಲ ದ್ವಿಚಕ್ರ ವಾಹನ ಇದು. ಇದು ಸುಮಾರ್ ದಿನ ಚಾಲ್ತಿಯಲ್ಲಿ ಇತ್ತು 

i.ndtvimg.com

ಎಲ್ಲ ಒಂಥರಾ ಲೆಜೆಂಡರಿ ಬೈಕುಗಳೇ :-)

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: