ಚಿಕ್ಕೋರು ದೊಡ್ಡೋರು ಎಲ್ಲರೂ ಕುಡಿಯೋ ಎಳನೀರಿನ 9 ವಿಶೇಷ ಗುಣಗಳು

ಹೊಟ್ಟೆ ಸಮಸ್ಯೆಗಳಿಗೆ ಇದಕ್ಕಿಂತ ಔಷಧಿ ಇನ್ನೊಂದಿಲ್ಲ

ಈ ಎಳ್ನೀರು, ಚಿಕ್ಕೋರಿಂದ ದೊಡ್ಡೋರ್ವಗೂ ಎಲ್ರಿಗೂ ಇಷ್ಟ. ಸ್ವಲ್ಪ ಜನಕ್ಕೆ ಅದ್ರಲ್ಲಿರೋ ನೀರಿಷ್ಟ ಆದ್ರೆ, ಇನ್ನೂ ಸ್ವಲ್ಪ ಜನಕ್ಕೆ ಅದ್ರೊಳಗಿರೋ ತಿರುಳಿಷ್ಟ. ಎಲ್ಲಾ ಕಾಲದಲ್ಲೂ ತುಂಬಾನೇ ಸುಲಭವಾಗಿ ಸಿಗುತ್ತೆ. ಬೇರೆ ಕೂಲ್ ಡ್ರಿಂಕ್ಸ್ ತೊಗೊಳಕ್ಕೆ ಮುಂಚೆ ಒಂದ್ಸಲ ಇದ್ರಿಂದ ಆಗೋ ಉಪಯೋಗ ತಿಳ್ಕೊಂಡು... ಕೂಲ್ ಡ್ರಿಂಕ್ಸ್ ಬೇಕಾ ಅಥವಾ ಎಳ್ನೀರ ಅಂತ ನಿರ್ಧಾರ ಮಾಡಿ.

1. ತೂಕ ಕಮ್ಮಿ ಮಾಡ್ಕೊಳಕ್ಕೆ ಸಹಾಯ ಆಗುತ್ತೆ

ಮಾರ್ಕೆಟ್ಟಲ್ಲಿ ಸಿಗೋ ಪೆಪ್ಸಿ, ಕೋಕು ಇಂತಹ ಸಕ್ಕರೆ ತುಂಬಿರೋ ಕೂಲ್ ಡ್ರಿಂಕ್ಸ್ ಕುಡಿಯೋ ಬದಲು ಎಳ್ನೀರು ಕುಡೀರಿ. ಈ ಸಕ್ಕರೆ ತುಂಬಿದ ಕೂಲ್ ಡ್ರಿಂಕ್ಸ್ ತೂಕ ಹೆಚ್ಚು ಮಾಡುತ್ತೆ, ಆರೋಗ್ಯನೂ ಹಾಳಾಗುತ್ತೆ. ಆದ್ರೆ ಎಳ್ನೀರು ಆರೋಗ್ಯಕ್ಕೂ ಒಳ್ಳೇದು ಯಾವುದೇ ಕೃತಕ ಸಕ್ಕರೆ, ಕೊಬ್ಬು ಏನೂ ಇಲ್ಲ. ಸಣ್ಣ ಆಗ್ಬೇಕು ಅಂತ ಅನ್ಕೊಂಡವ್ರು ಇದನ್ನ ಊಟಕ್ಕೆ ಸ್ವಲ್ಪ ಮುಂಚೆ ಕುಡಿದ್ರೆ ಹೊಟ್ಟೆ ತುಂಬೋದ್ರಿಂದ, ಊಟ ಸ್ವಲ್ಪ ಕಮ್ಮಿ ತಿಂತೀರ, ಇದು ನಿಮ್ಮ ತೂಕ ಕಮ್ಮಿ ಆಗತ್ತೆ.

2. ಬಿ ಪಿ ನಿಯಂತ್ರಣದಲ್ಲಿಡತ್ತೆ

ಎಳ್ನೀರು ನಮ್ಮ ದೇಹದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗೋ ಹಾಗೆ ಮಾಡಿ  ಬಿ ಪಿ ನಿಯಂತ್ರಣದಲ್ಲಿರಕ್ಕೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ... ಹಾರ್ಟ್ ಅಟ್ಯಾಕ್ ಆಗೋ ಸಾಧ್ಯತೆಗಳನ್ನ ಕಮ್ಮಿ ಮಾಡಿ ಹೃದಯ ಸಂಬಂಧಿ ಕಾಯಿಲೆಗಳಿಂದಾನೂ ದೂರ ಇಡುತ್ತೆ. ಸರಿಯಾದ ಪ್ರಮಾಣದಲ್ಲಿ ಕುಡಿದ್ರೆ  ಸಕ್ಕರೆ ಕಾಯಿಲೆನೂ ನಿಯಂತ್ರಣದಲ್ಲಿ ಇಟ್ಕೋಬಹುದು.

ಮೂಲ

3. ನಿಶ್ಯಕ್ತಿ ಕಮ್ಮಿಯಾಗತ್ತೆ

ಎಳ್ನೀರು ನಮ್ಮ ದೇಹಕ್ಕೆ ಅಗತ್ಯವಾದ ನೀರಿನ ಅಂಶ ಕಾಪಾಡಕ್ಕೆ ಸಹಾಯ ಮಾಡುತ್ತೆ. ಇದನ್ನ ಕುಡಿಯೋದ್ರಿಂದ ನಿಶ್ಯಕ್ತಿ ಓಡಿ ಹೋಗತ್ತೆ.

4. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

ಎಳ್ನೀರಲ್ಲಿ ಹೆಚ್ಚು ವಿಟಮಿನ್ಗಳು, ಪೋಷಕಾಂಶಗಳು ಇರೋದ್ರಿಂದ ಅದ್ರಲ್ಲಿ ವೈರಸ್, ಬ್ಯಾಕ್ಟೇರಿಯಾ ಜೊತೆ ಹೊಡೆದಾಡೋ ಶಕ್ತಿ ಜಾಸ್ತಿ ಇದೆ. ಇದನ್ನ ಕುಡಿಯೋದ್ರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ. ಜ್ವರ ಬಂದಾಗ ಇದನ್ನ ಕುಡೀರಿ ಅಂತ ಹೇಳೋದು ಅದೇ ಕಾರಣಕ್ಕೆ.

ಮೂಲ

5. ಅಜೀರ್ಣ ತಪ್ಪಿಸತ್ತೆ

ಎಳ್ನೀರಲ್ಲಿ ಫೈಬರ್ ಅಂಶ ಹೆಚ್ಚಾಗಿರೋದ್ರಿಂದ ನಾವು ತಿನ್ನೋ ಆಹಾರ ಚೆನ್ನಾಗಿ ಜೀರ್ಣ ಆಗೋದಕ್ಕೆ ಎಳ್ನೀರು ಸಹಾಯ ಮಾಡಿ ಅಜೀರ್ಣ ಆಗೋದನ್ನ ತಪ್ಪಿಸುತ್ತೆ. ಅದಕ್ಕೆ ಭೇದಿ, ಡಯೇರಿಯಾ ಆದಾಗ ಹೆಚ್ಚಾಗಿ ಎಳ್ನೀರು ಕುಡೀರಿ ಅಂತ ಡಾಕ್ಟರ್ ಹೇಳೋದು.

6. ಗರ್ಭಿಣಿಯರಲ್ಲಿ ಮಲಬದ್ಧತೆ, ಎದೆ ಉರಿ ಸಮಸ್ಯೆ ಕಮ್ಮಿ ಮಾಡತ್ತೆ

ಗರ್ಭಿಣಿಯರು ಎಳನೀರು ಕುಡಿಯೋದ್ರಿಂದ, ಆ ಸಮಯದಲ್ಲಿ ಸಾಮಾನ್ಯವಾಗಿ ಕಾಣಿಸ್ಕೊಳ್ಳೋ ಮಲ ಬದ್ಧತೆ, ಎದೆ ಉರಿ ಹಾಗು ತುಂಬಾ ನಿಧಾನವಾಗಿ ಜೀರ್ಣ ಆಗೋ ಸಮಸ್ಯೆ ದೂರ ಆಗುತ್ತೆ. 

ಮೂಲ

7. ಕಿಡ್ನಿ ಚೆನ್ನಾಗಿ ಕೆಲಸ ಮಾಡಕ್ಕೆ ಸಹಾಯ ಮಾಡುತ್ತೆ

ಕಿಡ್ನಿ ತೊಂದರೆ ಇರೋವ್ರು ಇದನ್ನ ಕುಡಿಯೋದು ಒಳ್ಳೇದು. ಇದ್ರಲ್ಲಿರೋ ಪೊಟ್ಯಾಸಿಯಂ, ಮ್ಯಾಗ್ನಿಷಿಯಂ ತರದ ಮಿನರಲ್ಗಳು ಮೂತ್ರ ಉತ್ಪತ್ತಿ ಹಾಗು ವಿಸರ್ಜನೆ ಎರಡೂ ಹೆಚ್ಚಾಗೋ ಹಾಗೆ ಮಾಡಿ,, ಕಿಡ್ನಿ ಚೆನ್ನಾಗಿ ಕೆಲಸ ಮಾಡೋ ಹಾಗೆ ನೋಡ್ಕೊಳ್ಳುತ್ತೆ. ಇದ್ರಿಂದ ಕಿಡ್ನಿ ಸ್ಟೋನ್ ಆಗೋದು ಕೂಡ ತಪ್ಪುತ್ತೆ.

8. ಒತ್ತಡ, ಆಯಾಸ ಕಮ್ಮಿ ಮಾಡುತ್ತೆ

ಎಳ್ನೀರಲ್ಲಿ ವಿಟಮಿನ್ಗಳು ಹೇರಳವಾಗಿರೋದ್ರಿಂದ ಇದನ್ನ ಕುಡಿದಾಗ ಆಯಾಸ, ಒತ್ತಡ ಎರಡೂ ಕಮ್ಮಿ ಆಗುತ್ತೆ. ಅದ್ರಲ್ಲೂ ಬಿಸಿಲಲ್ಲಿ ಸುತ್ತಾಡಿ ಬಳಲಿದ್ದಾಗ ಇದನ್ನ ಕುಡಿಯೋದ್ರಿಂದ ನಿಮ್ಮ ದೇಹಕ್ಕೆ ಶಕ್ತಿ ಬಂದು ಇನ್ನು ತಿರುಗಾಡೋದಕ್ಕೆ ಉತ್ಸಾಹ ಸಿಗುತ್ತೆ. ಅದಕ್ಕೇ ತುಂಬಾ ಜನ ಅಥ್ಲೆಟಿಕ್ಸ್ ಆಡೋರು ಎಳ್ನೀರು ಕುಡಿಯೋದು.

ಮೂಲ

9. ಬೇಗ ವಯಸ್ಸಾಗೋದನ್ನ ತಪ್ಪಿಸತ್ತೆ

ಎಳ್ನೀರಲ್ಲಿರೋ ಸೈಟೋಕಿನಿನ್ಸ್ ನಮ್ಮ ದೇಹಕ್ಕೆ ಬೇಗ ವಯಸ್ಸಾಗೋದನ್ನ ತಪ್ಪಿಸಿ, ಕ್ಯಾನ್ಸರ್ ತರದ ರೋಗ ಬರ್ದೇ ಇರೋ ತರ ನೋಡ್ಕೊಳತ್ತೆ.

ಮೂಲ

ಕೂಲ್ ಡ್ರಿಂಕ್ಸ್ ಆಗ್ಲಿ ಎಳ್ನೀರಾಗಲಿ ದುಡ್ಡು ಕೊಟ್ಟು ತೊಗೊಂಡು ಕುಡಿತೀವಿ. ಖರ್ಚು ಮಾಡಿ ಆರೋಗ್ಯ ಹಾಳಾಗೋ ಕೂಲ್ ಡ್ರಿಂಕ್ಸ್ ಬದ್ಲು ಎಳ್ನೀರು ಕುಡಿಯೋದು ಜಾಣತನ ಅಲ್ವ? ಇನ್ನೊಂದು ಮಾತು .. ... ಒಳ್ಳೇದು ಅಂತ ಅತಿಯಾಗಿ ಕುಡಿ ಬೇಡಿ, ಏನೇ ಆದ್ರೂ ಲಿಮಿಟಲ್ಲಿ ಇದ್ರೇನೆ ಒಳ್ಳೇದು   

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: