ಆಲೂಗೆಡ್ಡೇನ ಈ 11 ರೀತಿ ಬಳಸೋದು ನೀವು ಇನ್ನೆಲ್ಲೂ ಕೇಳಿರಲ್ಲ

ಚರ್ಮದ ಸಮಸ್ಯೆಗಳಿಗೆ ಇದು ಒಳ್ಳೆ ಔಷಧಿ

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ಈಗೀಗ ಫೋಟೋಗ್ರಾಫಿ ಹವ್ಯಾಸ ಬೆಳೆಸಿಕೊಂಡಿದ್ರೆ ಈ 6 ವಿಷ್ಯಗಳು ನಿಮ್ಗೆ ಗೊತ್ತಾಗಬೇಕು

ಕಲೆ ಹಿಂದಿರೋ ಕಲಿಕೆಯನ್ನ ತಿಳ್ಕೊಳಿ…

ಫೋಟೋಗ್ರಫಿ - ಇತ್ತೀಚಿಗೆ ಸಿಕ್ಕಾಪಟ್ಟೆ ಟ್ರೆಂಡಲ್ಲಿರೋ ಒಂದು ಹವ್ಯಾಸ. ಕ್ಯಾಮೆರಾ ಇರೋರೆಲ್ಲ ಫೋಟೋಗ್ರಾಫರ್ ಆಗಲ್ಲ. ಫೋಟೋಗ್ರಫಿ ಒಂದು ಕಲೆ. ಈ ಕಲೆ ಆಸಕ್ತಿಯಿಂದ ಅಭ್ಯಾಸ ಮಾಡಿದ್ರೆ ಚೆನ್ನಾಗಿ ಮಾಡಕ್ಕಾಗೋದು. ಸುಮ್ನೆ ನಾನು ಕ್ಯಾಮೆರಾ ತೊಗೋತೀನಿ ಹೆಂಗೋ ಫೋಟೋ ತೆಗೀತೀನಿ ಅಂತ ಹೇಳ್ಬಾರ್ದು. ಇದನ್ನ ಸರಿಯಾಗಿ ಮಾಡಕ್ಕೆ ಬೇಕಿರೋ ಕೆಲವು ವಿಚಾರ ನಿಮಗೆ ಹೇಳಿದೀವಿ ನೋಡಿ ಬನ್ನಿ. 

1. ಕ್ಯಾಮೆರಾ ಮ್ಯಾನ್ಯುಯೆಲ್ ಮರೆಯದೆ ಓದಿ 

ಇದೆ ಎಲ್ಲರು ಮಾಡೋ ತಪ್ಪು. ಯಾರು ಓದದೇ ಇಲ್ಲ. ನಿಜವಾಗಿಯೂ ನಿಮ್ಮ ಕ್ಯಾಮರಾನ ಸರಿಯಾಗಿ ಬಳಸಬೇಕು ಅಂತಿದ್ರೆ ಮರೀದೆ ಕ್ಯಾಮೆರಾ ಮ್ಯಾನ್ಯುಯೆಲ್ ಓದಿ. ಇತ್ತೀಚೆಗೆ ಬಂದಿರೋ ಕ್ಯಾಮೆರಾಗಳು ಸಿಕ್ಕಾಪಟ್ಟೆ ಆಪ್ಷನ್ಸ್ ಕೊಡತ್ತೆ ಅದನ್ನೆಲ್ಲ ಸರಿಯಾಗಿ ಬಳಸಕ್ಕೆ ಮ್ಯಾನ್ಯುಯೆಲ್ ಓದಲೇಬೇಕು. ಬಳಸಿ ಓದಿ ಓದಿ ನಿಮಗೆ ಸೆಟ್ಟಿಂಗ್ ಚೇಂಜ್ ಮಾಡೋದು, ಫೋಕಸ್ ಶಿಫ್ಟ್ ಮಾಡೋದು ಕಯ್ಯಿಗೆ ಅಭ್ಯಾಸ ಆಗ್ಬಿಡ್ಬೇಕು 

thedailydigi.com

2. ಒಳ್ಳೆ ಕ್ಯಾಮೆರಾ ಇದ್ರೆ ಚೆನಾಗ್ ಫೋಟೋ ತೆಗಿಬೋದು ಅನ್ನೋದನ್ನ ಮರೆತುಬಿಡಿ 

ಒಳ್ಳೆ ಫೋಟೋ ತೆಗಿಯೋದು ಒಳ್ಳೆ ಕ್ಯಾಮೆರಾ ಅಲ್ಲ ಬದಲಿಗೆ ಒಳ್ಳೆ ಫೋಟೋಗ್ರಾಫರ್. ಒಳ್ಳೆ ಕ್ಯಾಮೆರಾ ನೀವು ಸೆರೆಹಿಡಿಯುವ ಫೋಟೋನ ಚೆನ್ನಾಗಿ ತೋರಿಸತ್ತೆ. ಕ್ಲಾರಿಟಿ, ಕಡಿಮೆ ನಾಯ್ಸ್... ಒಳ್ಳೆ ಕ್ಯಾಮೆರಾ ಬೇಕು ನನ್ನ ಕ್ಯಾಮೆರಾ ಸರಿ ಇಲ್ಲ ಅಂತ ಅನ್ನಬೇಡಿ. ಒಳ್ಳೆ ಫೋಟೋ ತೆಗಿಯಕ್ಕೆ ಬೇಕಿರೋದು ನಿಮ್ಮ ಕ್ರಿಯೇಟಿವಿಟಿ. ನಿಮಗೆ ಯಾವುದನ್ನ ಹೇಗೆ ಸೆರೆಹಿಡಿಬೇಕು ಅನ್ನೋ ಕಲೆ ಚೆನ್ನಾಗಿ ಗೊತ್ತಿದ್ರೆ ಸಾಕು. ಎಷ್ಟೋ ಜನ ಒಳ್ಳೆ ಹೈ ಎಂಡ್ ಕ್ಯಾಮೆರಾ ಇಟ್ಕೊಂಡು ಕೆಟ್ಟದಾದ ಫೋಟೋ ತೆಗಿತಾರೆ.

i.pinimg.com

3. ಫೋಟೋಗ್ರಫಿ ಹಿಂದೆ ಇರೋ ಸೈನ್ಸ್ ಮತ್ತು ಥಿಯರಿ ತಿಳ್ಕೊಳಿ  

ವಾಸ್ತವವಾಗಿ ಚೆನ್ನಾಗಿ ಫೋಟೋ ತೆಗೆದ್ರೆ ಸಾಕು ಆದ್ರೆ ಪ್ರತಿ ವಿಷಯದ ಹಿಂದೆ ಒಂದು ಸೈನ್ಸ್ ಇದ್ದೆ ಇರತ್ತೆ ತನ್ನದೇ ಆದ ಥಿಯರಿ ಇದ್ದೆ ಇರತ್ತೆ. ಆನ್ಲೈನಲ್ಲಿ ಸಾಕಷ್ಟು ವಿಷಯ ಸಿಗತ್ತೆ, ನಿಮಗೆ ಸಮಯ ಆದಾಗ ಸ್ವಲ್ಪ ವಿಷಯಾನ ತಿಳ್ಕೊಳಿ. ನಿಮಗೆ ಫೋಟೋಗ್ರಫಿ ಮಾಡಕ್ಕೆ ಸಹಾಯ ಆಗತ್ತೆ 

blog.vonwong.com

4. ಬೇರೆಯವರಿಗೆ ಹೋಲಿಸಿಕೊಳ್ಳೋದು ಬಿಡಿ

ನೀವು ತೆಗೆದ ಫೋಟೋ ಚೆನ್ನಾಗಿ ಬರಬೇಕು ನಿಜ, ಇನ್ಯಾರೋ ತೆಗೆದ ಫೋಟೋ ಜೊತೆಗೆ ಹೋಲಿಸಿಕೊಂಡು ಅವರ ರೀತಿ ತೆಗೀತೀನಿ ಅಂತ ಹೋಗಬೇಡಿ. ಇದೊಂದು ಕ್ರಿಯಾಶೀಲ ಕೆಲಸ ಆಗಿರೋದ್ರಿಂದ ನಿಮ್ಮ ಕ್ರಿಯಾಶೀಲತೆ ತೋರಿಸಿ. ಇನ್ನೊಬ್ಬರ ರೀತಿ ಫೋಟೋ ತೆಗ್ಯಕ್ಕೆ ಹೋಗಬೇಡಿ. ಯಾರೋ ನಿಮಗೆ ಸ್ಪೂರ್ತಿಯಾದ ವ್ಯಕ್ತಿಯ ಫೋಟೋ ರೀತಿ ತೆಗೀಬೇಕು ಅಂದ್ಕೊಳೋದು ಸರಿ ಆದ್ರೆ ಅವರದೇ ಶೈಲಿ ರೂಡಿಸಿಕೊಳ್ಳಬೇಡಿ. ನಿಮ್ಮದೇ ಶೈಲಿ ಬೆಳೆಸಿಕೊಳ್ಳಿ.

iso.500px.com

5. ನೀವು ನೀವಾಗಿರಿ 

ಫೋಟೋಗ್ರಫಿ ಕಲೆಯ ಮಜಾನೇ ಅದು. ಒಂದೇ ವಿಷ್ಯಾನ 10 ಜನ ಫೋಟೋಗ್ರಾಫರ್ಸಿಗೆ ಕೊಡಿ 10 ವೆರೈಟಿ ಫೋಟೋ ನಿಮಗೆ ಕೊಡ್ತಾರೆ. ಎಲ್ಲರದ್ದೂ ಅವರದ್ದೇ ಭಿನ್ನವಾದ ಯೋಚನೆ. ಎಲ್ಲರ ಕ್ರಿಯೇಟಿವಿಟಿ ಎಲ್ಲರ ಯೋಚನೆ ಬೇರೆ ಇರೋದ್ರಿಂದ ವಿಷಯ ಹಳತಾದ್ರು ಎಲ್ಲರ ಫೋಟೋ ಬೇರೆ ಬೇರೆ ರೀತಿ ಇರತ್ತೆ. ಇದ್ರಲ್ಲಿ ಪ್ರತಿಯೊಬ್ಬರಲ್ಲೂ ಒಂದು ಕಾಮನ್ ವಿಷ್ಯ ಇರತ್ತೆ. ಪ್ರತಿಯೊಬ್ಬರೂ ಅವರ ಕೆಲಸದ ವಿಧಾನ, ಅವರ ಶೈಲಿಯಲ್ಲೇ ಕೆಲಸ ಮಾಡೋದು. ಇನ್ನೊಬರನ್ನ ಫಾಲೋ ಮಾಡ್ಬೇಡಿ. ನೀವು ನೀವಾಗಿರಿ.

4.img-dpreview.com

6. ನಿಮಗೆ ಇಷ್ಟ ಆಗಿದ್ದನ್ನ ಮಾಡಿ 

ನಿಮಗೆ ಫೋಟೋಗ್ರಫಿ ಇಷ್ಟ ಅಂದ್ಮೇಲೆ ನಿಮಗೆ ಇಷ್ಟ ಆಗೋದನ್ನ ಫೋಟೋ ತೆಗೀರಿ. ಇನ್ಯಾರೋ ಮದುವೆ ಫೋಟೋನ ಚೆನ್ನಾಗಿ ತೆಗಿತಾರೆ, ಕಾಡಿನ ಚಿತ್ರ ಚೆನ್ನಾಗಿ ತೆಗಿತಾರೆ ಅಂತ ನೀವು ಹಾಗೆ ಮಾಡ್ಬೇಡಿ. ನಿಮಗೆ ಊರೂರು ಸುತ್ತಿ ಫೋಟೋ ತೇಗ್ರ್ಯೋದು ಇಷ್ಟ ಅಂದ್ರೆ ಅದನ್ನೇ ಮಾಡಿ. ಕಾಡು ಪ್ರಾಣಿಗಳ ಚಿತ್ರ ತೆಗೆಯೋದು ಇಷ್ಟ ಅಂದ್ರೆ ಅದನ್ನೇ ಮಾಡಿ. ಹೀಗೆ ನಿಮಗೆ ಇಶ್ಟ ಆದದ್ದನ್ನ ಮಾಡಿದಾಗ ಫೋಟೋ ಚೆನ್ನಾಗಿ ಬರೋದು 

studyabroadlife.org

ಫೋಟೋಗ್ರಫಿ ಅನ್ನೋದು ಕಲಾತ್ಮಕ ಹವ್ಯಾಸ. ನಿಮ್ಮ ಚಿಂತನೆ, ಯೋಚನೆ, ಕ್ರಿಯಾಶೀಲತೆಯಿಂದ ನಿಮಗಿಷ್ಟವಾದ ಫೋಟೋ ತೆಗೀರಿ. ಫೋಟೋ ಹಾಗು ವಿಡಿಯೋ ಎರಡಕ್ಕೂ ಏನ್ ವ್ಯತ್ಯಾಸ ಅಂದ್ರೆ ವಿಡಿಯೋ ಎಷ್ಟೊತ್ತಿರತ್ತೋ ಅಷ್ಟೂ ನೋಡಬೇಕು ಆದ್ರೆ ಫೋಟೋಗೆ  ಕೇವಲ ಒಂದೇ ಫ್ರೇಮಲ್ಲಿ ಒಂದು ಕಥೆ ಹೇಳುವ ತಾಕತ್ತಿರತ್ತೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: