ರೋಡ್ ಟ್ರಾಫಿಕ್ ಬೇಡ ಅನ್ನೋರು ಇನ್ಮೇಲೆ ಬೆಂಗಳೂರಲ್ಲಿ ಹೆಲಿ ಟ್ಯಾಕ್ಸಿ ಉಪಯೋಗಿಸಿ ನೋಡಿ

ದುಬಾರಿಯೇನಲ್ಲ... ಕ್ಯಾಬಷ್ಟೇ ದುಡ್ಡು!

ನಮ್ ಬೆಂಗ್ಳೂರಿನ್ ಟ್ರಾಫಿಕ್ ಬಗ್ಗೆ ಜೋಕ್ ಮಾಡೋರು ಒಬ್ರಿಬ್ರಲ್ಲ. ಭಾರತದಲ್ಲೇ ದೊಡ್ಡ ಮೆಟ್ರೋಪಾಲಿಟನ್ ಸಿಟಿ ಅನ್ನಿಸ್ಕೊಂಡಿದ್ರೂ, ಇಲ್ಲಿ ಟ್ರಾಫಿಕ್ ಗೋಳ್ ತೋಡ್ಕೊಳಕ್ಕೆ ನಮ್ಮ ಪದ ಪುಂಜ ಸಾಲಲ್ಲ ಬಿಡಿ! ಇನ್ನೇನ್ರಿ? ಒಂದೆರಡ್ ಕಿಲೋ ಮೀಟರ್ ಇರೋ ಜಾಗಕ್ ಹೋಗಕ್ಕೆ ಗಂಟೆ ಗಟ್ಲೆ ಹಿಡಿದ್ರೆ, ಮೈ ಉರಿಯಲ್ವಾ ಮತ್ತೆ? ಅದೂ ಅಲ್ದೇ, ನಮ್ ಸಂಬಳದ ಅರ್ಧ ಭಾಗ ಈ ಪೆಟ್ರೋಲಿಗೆ ಸುರಿಯೋದ್ರಲ್ಲೇ ಆಗೋಗತ್ತೆ! ಈ ತಲೆನೋವಿಂದ ನಮ್ಗೆಲ್ಲಾ ಸ್ವಲ್ಪ ರಿಲೀಫ್ ಕೊಡಕ್ಕೆ ಏನ್ ಬರ್ತಿದೆ ನೋಡಿ...

ದೇಶದ ಮೊದಲ್ನೇ ಹೆಲಿ ಟ್ಯಾಕ್ಸಿ!

ಏನಿದು ಹೆಲಿ ಟ್ಯಾಕ್ಸಿ ಅಂತ ಅನ್ಕೋತಿದ್ದೀರಾ? ಹೆಲಿ ಟ್ಯಾಕ್ಸಿ ಅನ್ನೋದು, ಹೆಲಿಕಾಫ್ಟರ್ ಟ್ಯಾಕ್ಸಿಗೆ ಶಾರ್ಟ್ ಫಾರ್ಮ್. ಮಾಮುಲಿ ಟ್ಯಾಕ್ಸಿ ತರಾನೇ... ಆದ್ರೆ ಹೆಲಿಕಾಫ್ಟರ್. ಈ ಟ್ಯಾಕ್ಸಿ, ಬೆಂಗ್ಳೂರಲ್ಲಿರೋ ಬೇರೆ ಬೇರೆ 90 ಹೆಲಿಪ್ಯಾಡಿಂದ ಬೆಂಗಳೂರು ಅಂತರಾಷ್ಟೀಯ ಏರ್ಪೋರ್ಟ್ಗೆ ನಿಮ್ಮನ್ನ ತಲುಪ್ಸತ್ತೆ. ಅದೂ ತೀರಾ ಕಮ್ಮಿ ಟೈಮಲ್ಲಿ! 

ಡಿಸೆಂಬರ್ರಲ್ಲಿ ಓಡಾಟ ಶುರುವಾಗತ್ತೆ

ಈ ಹೆಲಿ ಟ್ಯಾಕ್ಸಿಗಳು ಡಿಸೆಂಬರ್ 2017ರಿಂದ ಬೆಂಗ್ಳೂರಲ್ಲಿ ಕೆಲಸ ಮಾಡಕ್ಕೆ ಶುರುಮಾಡುತ್ವಂತೆ. ಬೆಂಗಳೂರು ಅಂತರಾಷ್ಟ್ರೀಯ ಏರ್ಪೋರ್ಟ್ನೋರು, ಕೇರಳದ ತಂಬೀ ಏವಿಯೇಷನ್ ಅನ್ನೋ ಹೆಲಿಕಾಫ್ಟರ್ ಕಂಪನಿ ಜೊತೆ ಕೈಗೂಡಿಸಿ ಈ ಹೆಲಿ ಟ್ಯಾಕ್ಸಿ ಸರ್ವೀಸ್ ಶುರುಮಾಡ್ತಿದ್ದಾರೆ.

ಮೂಲ

ಹೆಲಿ ಟ್ಯಾಕ್ಸೀಲಿ ನಿಮ್ಮ ಪ್ರಯಾಣದ ಸಮಯ ಹತ್ತುಪಟ್ಟು ಕಮ್ಮಿಯಾಗತ್ತೆ!

 ಆಗ್ಲೇ ಹೇಳ್ದಾಗೆ, ಈ ಹೆಲಿ ಟ್ಯಾಕ್ಸಿ ನಗರದಲ್ಲಿರೋ ಬೇರೆ ಬೇರೆ 90 ಹೆಲಿಪ್ಯಾಡಿಂದ ಬೆಂಗಳೂರು ಅಂತರಾಷ್ಟೀಯ ಏರ್ಪೋರ್ಟ್ಗೆ ನಿಮ್ಮನ್ನ ತಲುಪ್ಸತ್ತೆ.  ಸಾಮಾನ್ಯವಾಗಿ ಎಲೆಕ್ಟಾನಿಕ್ ಸಿಟಿಯಿಂದ ಏರ್ಪೋರ್ಟ್ ತಲ್ಪಕ್ಕೆ ಏನಿಲ್ಲಾ ಅಂದ್ರೂ 90 ರಿಂದ 150 ನಿಮಿಷ ಬೇಕು. ಆದ್ರೆ, ಈ ಹೆಲಿ ಟ್ಯಾಕ್ಸೀಲಿ ಬರೀ 15 ನಿಮಿಷಕ್ಕೆ ನೀವು ಏರ್ಪೋರ್ಟ್ ತಲುಪ್ಬೋದು ಗೊತ್ತಾ? ಆದ್ರೆ ಇದಕ್ಕೆಲ್ಲಾ ಸಖತ್ ದುಡ್ಡು ಕೊಡ್ಬೇಕು ಅಂತ ಚಿಂತೆ ಮಾಡ್ತಿದ್ರೆ, ಚಿಂತೆ ಬಿಟ್ಬಿಡಿ... ಈ ಹೆಲಿ ಟ್ಯಾಕ್ಸೀಲಿ ನೀವು ಮಾಮುಲಿ ಕ್ಯಾಬ್ಗೆ ಕೊಡೋ ಅಷ್ಟೇ ದುಡ್ಡು ಕೊಡೋದು!

ಸದ್ಯಕ್ಕೆ 6 ಸೀಟಿನ್ ಬೆಲ್ 407 ಚಾಪರ್ರಿಂದ ಈ ಸೇವೆ ಶುರುಮಾಡ್ತಾರೆ. ಆಮೇಲೆ ಈ ಸೇವೇನ ಇನ್ನೂ ಜಾಸ್ತಿ ಹೆಲಿ ಟ್ಯಾಕ್ಸಿಗಳ ಮೂಲಕ ವೈಟ್ ಫೀಲ್ಡ್ ಮತ್ತೆ ಎಚ್ ಎ ಎಲ್ ಏರ್ಪೋರ್ಟ್ಗೂ ಶುರುಮಾಡ್ತರಂತೆ.

ಏನು? ಅಂತೂ ಇಂತೂ ಈ ಬೆಂಗ್ಳೂರಿನ್ ಕೆಟ್ಟ ಟ್ರಾಫಿಕ್ಕಿಂದ ಸ್ವಲ್ಪ ಮುಕ್ತಿ ಸಿಗತ್ತೆ ಅಂತ ಖುಷಿ ಆಗ್ತಿದ್ಯಾ? 

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: