ಕರ್ನಾಟಕದ ಈ 8 ಜಾಗಗಳು ದೆವ್ವ ಭೂತಕ್ಕೆ ಜಾಸ್ತಿ ಫೇಮಸ್ಸು

ದೆವ್ವ ಬಂದ್ಮೇಲೆ ಜಾಗ ಫೇಮಸ್ಸಾಯ್ತಾ? ಫೇಮಸ್ಸಾಗಿರೋ ಜಾಗಕ್ಕೆ ದೆವ್ವ ಬಂತಾ?

ದೆವ್ವ ಭೂತ ಇದೆಲ್ಲ ನಂಬ್ತೀರ? ಮುಕ್ಕಾಲ್ವಾಸಿ ಜನ ನಂಬಲ್ಲ, ಹೆಂಗ್ ನಂಬ್ತಾರೆ ಹೇಳಿ? ಎಷ್ಟೋ ಜನ ದೇವರನ್ನೇ ನಂಬಲ್ಲ... ಇನ್ನು ದೆವ್ವ ಅಂದ್ರೆ ನಂಬ್ತಾರಾ? ಆದ್ರೂ ನಮ್ಮ ಕರ್ನಾಟಕದಲ್ಲಿ ದೆವ್ವ  ಭೂತದ ಕಾಟ ಅಂತ ಹೇಳಿ ಇದಕ್ಕೆ ಹೆದರಿರೋ ಜನರ ಸಂಖ್ಯೆ ಕಮ್ಮಿ ಇಲ್ಲ, ದೆವ್ವ ಇಲ್ಲ ಅಂತಾರೆ ತೊಂದ್ರೆ ಆದಾಗ ದೆವ್ವ ಅಂತಾರೆ! ಯಾವ ಯಾವ್ ಜಾಗ ಇದೆ ಆ ತರದ್ದು ಅಂತ ನೋಡಣ ಬನ್ನಿ.

1. ವಿಕ್ಟೋರಿಯಾ ಆಸ್ಪತ್ರೆ

ಆಸ್ಪತ್ರೆ ಹತ್ರ ಮರದ ಮೇಲೆ ಏನೇನೋ ವಿಚಿತ್ರ ಆಕಾರ ಕಾಣ್ಸತ್ತಂತೆ, ಊಟ ಮಾಡಕ್ಕೆ ಕೂತ್ಕೊಂಡ್ರೆ ಅದಾಗದೆ ಖಾಲಿ ಆಗದು, ಈ ಥರ ವಿಚಿತ್ರ ಎಲ್ಲ ಇಲ್ಲಿ ನಡೆಯತ್ತೆ. ಆdrU ಹುಷಾರ್ ತಪ್ಪಿದಾಗ ಆಸ್ಪತ್ರೆಗೆ ಹೋಗದೆ ಇರಕ್ಕಾಗತ್ತಾ? ದೆವ್ವ ಸಿಕ್ರೆ ಹಾಗೆ ಟಾಟಾ ಹೇಳಿ ಬರೋಣ ಅಲ್ವಾ? 

ಮೂಲ

2. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 

ಸುಮ್ನೆ ಎಲ್ರಿಗೂ ಇದು ಗೊತ್ತಾಗಲ್ಲ, ಕಿವಿಕೊಟ್ಟು ಕೇಳಿದರೆ ಏನೇನೋ ಶಬ್ದ ಕೇಳಿಸತ್ತೆ, ಗಾಜಿನ ಹತ್ರ ಯಾವ್ದ್ ಯಾವ್ದೋ ಚಿತ್ರ ಕಾಣ್ಸತ್ತೆ. ರಾತ್ರಿ ಹೊತ್ತು ಯಾವ್ದ್ ಯಾವ್ದೋ ಶಬ್ದ ಕೇಳಿಸತ್ತೆ ಅಂತ ಸುಮಾರ್ ಜನ ಹೇಳಿದಾರೆ.

ಮೂಲ

3. ಬಿಜಾಪುರದ ದೆವ್ವದ ಬಾವಿ 

ಈ ಬಾವಿಯಲ್ಲಿ 60 ಜನ ಹೆಂಗಸರು ಬಿದ್ದು ಸತ್ತಿದ್ದಾರೆ! ಆದಿಲ್ ಶಾಹ್ ಆಳ್ವಿಕೆ ಸಮಯದಲ್ಲಿ ಆಫ್ಝಲ್ ಖಾನ್ ಅನ್ನೋ ಕಮಾಂಡೋವಿನ ಹೆಂಡ್ತೀರು ಇಲ್ಲಿ ಸತ್ತಿರೋದು. ಕಥೆ ಏನಪ್ಪಾ ಅಂದ್ರೆ ಆಫ್ಝಲ್ ಖಾನ್ ವಿರುದ್ಧ ಛತ್ರಪತಿ ಶಿವಾಜಿ ಹೋರಾಡಕ್ಕೆ ಬಂದಾಗ ಆಫ್ಝಲ್ ಖಾನಿಗೆ ತಾನು ಸೋಲ್ತೀನಿ ಅಂತ ಗೊತ್ತಾಗಿ ತನ್ನ ಹೆಂಡತೀರೆಲ್ಲ ಮತ್ತೆ ಬೇರೆ ಮದುವೆಯಾಗ್ತಾರೆ ಅನ್ನೋ ಹೊಟ್ಟೆಕಿಚ್ಚಿಂದ ಅಷ್ಟೂ ಜನನ್ನ ಸಾಯಿಸ್ತಾನೆ. ಈ ಬಾವಿಯಲ್ಲಿ ಇವತ್ತು ಯಾರೋ ಅರಚುವ, ಕಿರುಚುವ ಶಬ್ದ ಕೇಳತ್ತೆ!

ಮೂಲ

4. ಏನ್ ಹೆಚ್ 4 

ನಡೆದಿರೋ ಘಟನೆ - ದಾರಿಯಲ್ಲಿ ಒಬ್ಬ ರಾತ್ರಿ ಬೈಕ್ ಓಡಿಸಿಕೊಂಡು ಹೋಗ್ತಿದ್ದ, ಆಗ ಒಂದು ಹೆಂಗಸು ದಾರಿಯಲ್ಲಿ ಇವನಿಗೆ ಡ್ರಾಪ್ ಕೇಳಿದಾಳೆ, ಇವನು ಸರಿ ಅಂತ ಹತ್ತಿಸ್ಕೊಂಡಿದಾನೆ... ಎಲ್ಲಿ ಡ್ರಾಪ್ ಮಾಡಬೇಕು ಅಂತ ಕೇಳಕ್ಕೆ ಹಿಂದೆ ತಿರುಗಿದರೆ ಯಾರು ಕೂತೆ ಇಲ್ಲ! ಸರಿ ಅಂತ ಮುಂದಕ್ ಹೋದ್ರೆ ಸ್ವಲ್ಪ ದೂರದಲ್ಲಿ ಮತ್ತೆ ಅದೇ ಹೆಂಗಸು ಡ್ರಾಪ್ ಕೇಳಕ್ಕೆ ನಿಂತಿರದಾ... ಅಯ್ಯೋ ಅವನಿಗೆ ಗಾಬರಿಯಾಗಿ ಗಾಡಿ ಡಿವೈಡರ್ಗೆ ಗುದ್ದಿ... ... ರಾತ್ರಿ ಹೊತ್ತು ಹುಷಾರಪ್ಪ ಈ ರೋಡಲ್ಲಿ... 

ಮೂಲ

5. ಟೆರ್ರಾ - ವೆರಾ 

ಇದು ಡೋಲ್ಸ್ ವಾಜ್ ಮತ್ತು ವೀರಾ ವಾಜ್ ಅನ್ನೋ ಅಕ್ಕ ತಂಗೀರಿಗೆ ಸೇರಿದ ಮನೆ. ಬೆಂಗಳೂರಿನ ಮಾರ್ಕ್ಸ್ ರೋಡಲ್ಲಿ ಇದೆ.  ಡೋಲ್ಸ್ ವಾಜ್ ಅವರ ಮರ್ಡರ್ ಆಗತ್ತೆ! ಯಾರೋ ಅನಾಮಿಕ ವ್ಯಕ್ತಿ ಸಾಯಿಸೋದು. ಮನೇಲಿ ಇದ್ದಕ್ಕಿದ್ದಂತೆ ತಾಪಮಾನ ಜಾಸ್ತಿ ಆಗೋದು, ಏಸುವಿನ ಶಿಲುಬೆ ಉಲ್ಟಾ ಪಲ್ಟಾ ಆಗೋದು, ಯಾರೋ ವಿಕಾರವಾಗಿ ನಕ್ಕಂತೆ ಸೌಂಡ್ ಕೇಳಿಸೋದು ಶುರು ಆಗತ್ತೆ. ಆಗ ಇನ್ನೊಬ್ಬ ತಂಗಿ ವೀರಾ ವಾಜ್ ಮನೆ ಖಾಲಿ ಮಾಡಿದಳು. ಮನೆ ಈಗ ಡೆಮಾಲಿಶ್ ಆಗಿದೆ ಆದರೂ ಜಾಗ ಭಯಾನಕವಾಗಿದೆ.

ಮೂಲ

6. ಉಡುಪಿಯ ಭೂತಯ್ಯನ ಮನೆ 

ಒಬ್ಬ ಸಭ್ಯಸ್ತ, ಒಳ್ಳೆಯ ಮನುಷ್ಯ ಊರಿನ ಮುಖ್ಯಸ್ಥ ಆಗಿದ್ದ. ಎಲ್ಲಾರೂ ಇವನ ಮಾತಿಗೆ ಬೆಲೆ ಕೊಡ್ತಿದ್ರು. ಇವನ ಮಗ ಕೊಲೆಗಡುಕನಾದ, ಈ ವಿಷಯ ತಿಳಿದು ಅಪ್ಪ ಆತ್ಮಹತ್ಯೆ ಮಾಡಿಕೊಂಡ... ಈಗ ಆ ಮನೆ ಸುತ್ತ ಅಪ್ಪನ ಆತ್ಮ ಓಡಾಡತ್ತೆ. ಎಷ್ಟೋ ಜನಕ್ಕೆ ಇದರ ಅನುಭವ ಆಗಿದೆ!

ಮೂಲ

7. ಮಂಗಳೂರಿನ ಬಲ್ಲಾಳಭಾಗ

ಮಂಗಳೂರಿನಲ್ಲಿ ಇನ್ನೂ ಕಾಮಗಾರಿಯಲ್ಲಿ ಇರುವ ಬಿಲ್ಡಿಂಗ್ ಇದು. ವಿಚಿತ್ರ ಅಂದ್ರೆ ಈ ಕಟ್ಟಡದಿಂದ ಆಗಾಗ ಸಣ್ಣ ಮಗು ಅಳುವ ಸದ್ದು ಹಾಗು ಯಾವುದೋ ಹೆಂಗಸು ಸಹಾಯಕ್ಕಾಗಿ ಕಿರುಚುವ ಸದ್ದು ಕೇಳತ್ತೆ... ಜನ ಸಹಾಯ ಮಾಡುವ ಅಂತ ಎಷ್ಟೋ ಸಲ ಹೋಗಿದಾರೆ ಆದ್ರೆ ಯಾರು ಇಲ್ಲದ್ದು ನೋಡಿ ಗಾಬರಿಯಿಂದ ಬಂದಿದ್ದಾರೆ! 

ಮೂಲ

8. ಹುಬ್ಬಳ್ಳಿಯ ಪಿಶಾಚಿ ಫ್ಲಾಟ್ 

ಈ ಪ್ಲಾಟಿಗೆ 2012ರಲ್ಲಿ ಒಂದು ಜೋಡಿ ವಾಸ ಮಾಡಕ್ಕೆ ಬಂತು. ಮನೆಯಲ್ಲಿ ಸ್ವಲ್ಪ ವಿಚಿತ್ರ ಘಟನೆಗಳು ಶುರು ಆಯ್ತು. ಹೆಂಡತಿಗೆ ಮೈ ಕೈ ಮೇಲೆ ಸಣ್ಣ ಸಣ್ಣ ಗಾಯ... ಯಾರೂ ಯೇಟ್ ಮಾಡ್ತಿರ್ಲಿಲ್ಲ ಆದ್ರೆ ಕಲೆ ಮಾತ್ರ ಇರೋದು, ಆಗಾಗ ಕರೆಂಟ್ ಹೋಗಿ ಬಂದು ಆಗೋದು, ಬಲ್ಬ್ ಮಾತ್ರ ಆನ್ ಆಫ್ ಆಗೋದು!

ಮೂಲ

ನಂಬ್ತೀರಾ? ಬಿಡ್ತೀರಾ? ಅನುಭವ ಪಡೆದವನು ನಂಬ್ತಾನೆ, ಇಲ್ದೆ ಇರೋನು ಅನುಭವಕ್ಕಾಗಿ ಕಾಯ್ತಾನೆ ಅಂತೀರಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ಈ 10 ಚಿಕ್ಕ ಚಿಕ್ಕ ಬದಲಾವಣೆ ಮಾಡ್ಕೊಂಡ್ರೆ ನಿಮ್ಮ ಜೀವನ ದೊಡ್ಡ ರೀತೀಲಿ ಬದಲಾಗತ್ತೆ ಅನ್ನೋದ್ರಲ್ಲಿ ಸಂದೇಹಾನೆ ಇಲ್ಲ

ಒಂದೊಂದ್ಸರ್ತಿ ಊಹೂಂ ಅನ್ನೋಕ್ಕೂ ಗೊತ್ತಿರ್ಬೇಕು

ಜೀವನ ಅದರ ಎಲ್ಲ ರೂಪದಲ್ಲೂ ಕೆಲವೊಮ್ಮೆ ನಮಗೆ ಎಷ್ಟು ಮಾಡಿದ್ರೂ ಅಷ್ಟೇ ಅನ್ನೋ ಭಾವನೆ ಬರೋಹಾಗೆ ಮಾಡಬಹುದು. ಆದ್ರೆ ಜೀವನದಲ್ಲಿ ಒಂದೊಂದ್ಸರ್ತಿ ಎಷ್ಟೇ ಕಷ್ಟ ಬಂದ್ರೂ ಮನಸ್ಸಿದ್ದರೆ ಮಾರ್ಗ ಇದ್ದೇ ಇದೆ ಅನ್ನೋದು ನೆನಪಿರ್ಲಿ.

ಈ 10 ವಿಷಯದ ಬಗ್ಗೆ ಗಮನ ಕೊಟ್ರೆ ನಿಮ್ಮ ಜೀವನ ಬದಲಾಯಿಸಿಕೊಳ್ಳೋದಕ್ಕೆ ಸಹಾಯ ಆಗುತ್ತೆ. ಆದ್ರೆ ಒಂದು ನೆನಪಿರ್ಲಿ... ಇವೆಲ್ಲಾ ಝಟ್ ಪಟ್ ಅಂತ ಆಗೋ ಬದಲಾವಣೆಗಳಲ್ಲ... ಸಮಯ ಹಿಡಿದೇ ಹಿಡಿಯತ್ತೆ. ಆದ್ರೆ ಕೊನೇಲಿ ಖುಷಿಯಾಗೋದು ಖಂಡಿತಾ. 

1. ಬೆಳಗ್ಗೆ ಲೇಟಾಗಿ ಏಳೋ ಬದ್ಲು ಬೇಗ ಏಳೋ ಅಭ್ಯಾಸ ಮಾಡ್ಕೊಳಿ

ಹಲವಾರು ಸಂಶೋಧನೆ, ಅಧ್ಯಯನಗಳಿಂದ ಗೊತ್ತಾಗಿರೋದು ಏನಪ್ಪಾ ಅಂದ್ರೆ ಬೆಳಗ್ಗೆ ಬೇಗ ಎದ್ದವರು ಬೇರೆಯವರಿಗಿಂತ ಕೆಲಸ ತುಂಬಾ ಚೆನ್ನಾಗಿ ಮಾಡ್ತಾರೆ, ತುಂಬಾ ಖುಷಿಯಾಗೂ ಇರ್ತಾರೆ ಅಂತ. ದಿನದಲ್ಲಿ ಕೆಲವೇ ಗಂಟೆಗಳು ನಮಗೆ ಸಿಗೋದು, ಅದ್ರಲ್ಲಿ ನಿದ್ದೆಯಲ್ಲೇ ಹೆಚ್ಚು ಸಮಯ ಹಾಳಾದ್ರೆ ನಿಮಗೆ ಬೇರೆದಕ್ಕೆ ಇನ್ನೆಲ್ಲಿಂದ ಟೈಮ್ ಸಿಗುತ್ತೆ?

ಇನ್ನು ನಿಮ್ಮ ಆಫೀಸ್ 24 ಗಂಟೇನೂ ಕೆಲಸ ಮಾಡೊತರದ್ದಾದ್ರೆ, ಬೆಳಗ್ಗೆ ಬೇಗ ಹೋಗಿ, ಬೇಗ ವಾಪಸ್ ಬಂದ್ರೆ ನಿಮ್ಮ ಸ್ವಂತಕ್ಕೆ, ಮನೆಯವರ ಜೊತೆ ಕಳೆಯೋದಕ್ಕೆ... ಹೀಗೆ ಎಲ್ಲದಕ್ಕೂ ನಿಮಗೆ ಸಾಕಷ್ಟು ಟೈಮ್ ಸಿಗುತ್ತೆ.

ಮೂಲ

2. ಎಲ್ಲದಕ್ಕೂ ಸರಿ, ಆಯ್ತು, ಮಾಡ್ತೀನಿ ಅಂತ ಒಪ್ಕೊಳೋ ಬದ್ಲು ಆಗಾಗ ಇಲ್ಲ, ಮಾಡಕ್ಕಾಗಲ್ಲ ಅಂತ ಹೇಳೋ ಅಭ್ಯಾಸ ಬೆಳೆಸ್ಕೊಳಿ

ಎಲ್ಲ ಟೈಮಲ್ಲೂ ಸರಿ, ಆಯ್ತು , ಮಾಡ್ತೀನಿ ಅಂತ ಒಪ್ಕೋಳೋದು ಸರಿಯಲ್ಲ. ಹೀಗೆ ಒಪ್ಕೋಳೋದ್ರಿಂದ ನಿಮ್ಮ ಮಾಡ್ಬೇಕಾಗಿರೋ ಕೆಲಸದ ಪಟ್ಟಿಗೆ ಇನ್ನಷ್ಟು ಸೇರುತ್ತೆ, ಕೆಲಸದಲ್ಲಿ ಎಷ್ಟು ಮುಳುಗಿ ಹೋಗ್ತೀರಾ ಅಂದ್ರೆ ನಿಮಗೆ ಅಂತ ಸ್ವಲ್ಪ ಬಿಡುವು ಮಾಡ್ಕೊಳೋದು ತುಂಬಾ ಕಷ್ಟ ಆಗುತ್ತೆ.

ಆಗಾಗ ಸಮಯಕ್ಕೆ ತಕ್ಕಂತೆ ನೀವು ಇಲ್ಲ, ಆಗಲ್ಲ, ಅಂತ ಹೇಳೋ ರೂಢಿ ಮಾಡ್ಕೊಂಡ್ರೆ ಅನವಶ್ಯಕವಾಗಿ ನೀವು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡು ಕೆಲಸ ಮಾಡ್ತೀರಾ ಅಂತ ಗೊತ್ತಿದ್ದೇ ನಿಮಗೆ ಕೆಲಸ ಹೇಳ್ತಾರಲ್ಲ... ಅದೆಲ್ಲಾ ನಿಲ್ಲುತ್ತೆ. ನಿಮ್ಮ ಕೆಲಸ, ಟೈಮ್ ಎಲ್ಲ ನಿಮ್ಮ ನಿಯಂತ್ರಣದಲ್ಲಿರುತ್ತೆ.

3. ಯಾವಾಗ್ಲೂ ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡ್ಕೊಂಡು ಕೂರೋ ಬದ್ಲು ಹೊರಗೆ ಹೋಗಿ ಸುತ್ತಾಡ್ಕೊಂಡು ಬನ್ನಿ

ಈಗಿನ ಟೆಕ್ನಾಲಜಿಯಿಂದ ನಮಗೆ ತುಂಬಾನೇ ಉಪಯೋಗ ಆಗಿದೆ. ಆದ್ರೆ ಇತ್ತೀಚಿಗೆ ನಾವು ಅದ್ರಲ್ಲಿ ಎಷ್ಟು ಮುಳ್ಗಿರ್ತಿವಿ ಅಂದ್ರೆ ಅದು ಇಲ್ಲ ಅಂದ್ರೆ ನಮಗೆ ಕೈಕಾಲೇ ಓಡಲ್ಲ ಅನ್ನೋ ಹಾಗೆ ಆಡ್ತೀವಿ. ಅದ್ರಲ್ಲೂ ಈ ಸ್ಮಾರ್ಟ್ ಫೋನ್ ಬಂದ್ಮೇಲಂತೂ ನೆಟ್ವರ್ಕ್ ಸಿಕ್ಕಿಲ್ಲ, ಇಂಟರ್ನೆಟ್ ಕನೆಕ್ಟ್ ಆಗ್ತಿಲ್ಲ ಅಂದ್ರೆ ಏನೋ ಕಳ್ಕೊಂಡಿರೋವ್ರ ಹಾಗೆ ಪರದಾಡ್ತಿವಿ ( ನಮ್ಮ ಹತ್ತಿರದವರು ದೂರ ಆದಾಗ್ಲೂ ಹೀಗೆ ನಾವು ಆಡಿರಲ್ವೇನೋ). ಈ ಮೊಬೈಲ್ ಹತ್ತಿರ ಇದ್ದಷ್ಟೂ ನಾವು ಆಗಾಗ ಅದನ್ನ ನೋಡೋದು, ಅಲ್ಲೇನಾಗ್ತಿದೆ, ಇಲ್ಲೇನಾಗ್ತಿದೆ ಅಂತ ಹುಡುಕಾಡೊ ಪ್ರಯತ್ನ ಮಾಡ್ತಾ ಇರ್ತೀವಿ.

ಆಗಾಗ ಈ ಮೊಬೈಲ್ ಮನೇಲೆ ಬಿಟ್ಟು ಕನಿಷ್ಠ 10 -15 ನಿಮಿಷನಾದ್ರೂ ಪ್ರಶಾಂತವಾಗಿರೋ ಜಾಗಕ್ಕೆ ಹೋಗಿ ಸುತ್ತಾಡಿಕೊಂಡು ಬನ್ನಿ. ನೀವು ಇಲ್ಲಿವರ್ಗೂ ಯೋಚನೆ ಮಾಡಿರದ ವಿಚಾರಗಳು ನಿಮಗೆ ಹೊಳೆಯುತ್ತೆ. ಈ ವಿಷಯಗಳು ನಿಮ್ಮ ತಲೆಗೆ ಹೋದಾಗ ನೀವು ಯೋಚನೆ ಮಾಡೋ ರೀತೀನೂ ಬದ್ಲಾಗತ್ತೆ. ಇದು ನಿಮಗೆ ಒಂಥರಾ ಖುಷಿ, ಉತ್ಸಾಹ ತುಂಬುತ್ತೆ.

ಮೂಲ

4. ನಿಮ್ಮನ್ನ ನೀವು ತೆಗಳ್ಕೊಳೋ ಬದ್ಲು ಹೊಗಳ್ಕೊಳಿ

ಸ್ವಯಂ ಟೀಕೆ ಒಂದು ಒಳ್ಳೆ ಸ್ವಭಾವಾನೆ, ಯಾಕೆ ಅಂದ್ರೆ ನಿಮ್ಮನ್ನ ನೀವು ಟೀಕೆ ಮಾಡ್ಕೊಳ್ತಾ ಇದ್ರೆ ನಿಮಗೆ ಸಿಕ್ಕ ಸಣ್ಣ ಪುಟ್ಟ ಗೆಲುವಿಗೇ ಸುಮ್ಮನಿದ್ದು ವಿಶ್ರಾಂತಿ ತೊಗೊಳಕ್ಕೆ ಅದು ಬಿಡಲ್ಲ, ಯಾವಾಗ್ಲೂ ಇನ್ನೂ ಮುಂದೆ ಸಾಗೋ ಹಾಗೆ ಮಾಡತ್ತೆ.

ಆದ್ರೆ ಬರಿ ಟೀಕೆ ಮಾಡ್ತಿದ್ರೆ ಆಗಲ್ಲ, ನೀವು ನಿಮ್ಮ ಸಾಧನೆ, ಯಶಸ್ಸಿನ ಬಗ್ಗೆ ಹೆಮ್ಮೆ ಪಟ್ಕೊಳಕ್ಕೆ ಆಗಾಗ ಹೊಗಳಿಕೇನೂ ಬೇಕು. ಇಲ್ಲ ಅಂದ್ರೆ ನಿಮ್ಮ ಸಾಧನೆ ಬಗ್ಗೆ ನಿಮಗೆ ಮೆಚ್ಚುಗೆ, ಸಮಾಧಾನ ಏನೂ ಇರಲ್ಲ.

5. ರಜಾ ಅಂತ ಹೆಚ್ಚು ಮಲ್ಕೊಳೋ ಬದ್ಲು ಬೇಗ ಎದ್ದು ವ್ಯಾಯಾಮ ಮಾಡಿ

ಬಾಕಿದಿನ ಎಲ್ಲ ಬೇಗ ಎದ್ದು ಹೋಗ್ತೀವಿ, ಇವತ್ತಾದ್ರೂ ಜಾಸ್ತಿ ಮಲಗೋಣ ಅಂತ ಮಲಗೋದು ಬಿಡಿ. ಈ ರಜಾ ದಿನದ ಅದ್ರಲ್ಲೂ ವಾರಾಂತ್ಯದ 48 ಗಂಟೆ ತುಂಬಾನೇ ಮುಖ್ಯ. ಅದು ನಿಮಗೆ ಅಂತ ಇರೋ ಟೈಮ್. ಅದರ ಉಪಯೋಗ ಸರಿಯಾಗಿ ಮಾಡ್ಕೊಳಿ.

ಮಲಗಿ ಸಮಯ ಹಾಳುಮಾಡದೆ ಬೇರೆ ದಿನ ಮಾಡಕ್ಕೆ ಆಗದಿದ್ದ ವ್ಯಾಯಾಮ ಮಾಡಿ, ಬೇಗೆ ತಿಂಡಿ ಊಟ ಮುಗಿಸಿದ್ರೆ ಸಂಜೆ ಹೊತ್ತು ನಿಮ್ಮ ಮನೆಯವರ, ಸ್ನೇಹಿತರ ಜೊತೆ ಆರಾಮಾಗಿ ಇರೋದಕ್ಕೆ ಸಮಯ ಸಿಗುತ್ತೆ. ಲೇಟಾಗಿ ಇದ್ದಷ್ಟೂ ಸಮಯ ಕಮ್ಮಿ ಸಿಗುತ್ತೆ.

ಮೂಲ

6. ಕೂಲ್ ಡ್ರಿಂಕ್ಸ್ ಬದ್ಲು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ

ಇತ್ತೀಚೆಗಂತೂ ಎಲ್ಲರೂ ಈ ಕೂಲ್ ಡ್ರಿಂಕ್ಸ್ ಕುಡಿಯೋದು ಹೆಚ್ಚು. ಇದ್ರಿಂದ ಸಕ್ಕರೆ ಕಾಯಿಲೆನೂ ಬರೋದು ಹೆಚ್ಚಾಗಿದೆ. ಅಷ್ಟೇ ಅಲ್ಲ ನಿಮ್ಮ ಹಲ್ಲು ಹಾಳು ಮಾಡೋದ್ರಲ್ಲೂ ಇದು ಎತ್ತಿದ ಕೈ. ಒಂದು ಅಧ್ಯಯನದ ಪ್ರಕಾರ, ಪ್ರತಿ 10 ಜನರಲ್ಲಿ ಒಬ್ರಿಗೆ  ಈ ಕೂಲ್ ಡ್ರಿಂಕ್ಸ್ ಕುಡಿಯೋದ್ರಿಂದ ಸಕ್ಕರೆ ಕಾಯಿಲೆ ಬಾರೋ ಸಾಧ್ಯತೆ ಹೆಚ್ಚಾಗ್ತಿದೆಯಂತೆ. ಅದನ್ನ ಬಿಟ್ಟು ನೀರು ಕುಡಿಯೋ ಅಭ್ಯಾಸ ಮಾಡ್ಕೊಳಿ.

ಇದ್ರಿಂದ ನಿಮ್ಮ ಹಲ್ಲು ಚೆನ್ನಾಗಿರೋದು ಮಾತ್ರ ಅಲ್ಲ, ಚರ್ಮದ ಆರೋಗ್ಯಕ್ಕೂ ಒಳ್ಳೇದು. ಈ ಕಾರಣಗಳು ನಿಮಗೆ ಕೂಲ್ ಡ್ರಿಂಕ್ಸ್ ಬಿಡೋದಕ್ಕೆ ಸರಿಯಾದದ್ದಲ್ಲ ಅನ್ನಿಸಿದ್ರೆ, ಒಂದು ಹಲ್ಲನ್ನ ಈ ಕೂಲ್ ಡ್ರಿಂಕ್ಸ್ ಒಳಗೆ ಹಾಕಿ ಒಂದು ರಾತ್ರಿ ಇಡೀ ಇಟ್ಟು ಮರುದಿನ ನೋಡಿ, ಅದರ ಗತಿ ಏನಾಗಿರುತ್ತೆ ಅಂತ ತಿಳ್ಕೊಂಡು ಆಮೇಲೆ ನೀವೇ ನಿರ್ಧಾರ ಮಾಡ್ಕೊಳಿ.

7. ಹಿಂದೆ ಆಗಿದ್ದನ್ನ ನೆನಸ್ಕೊಂಡು ಕೊರಗೋ ಬದ್ಲು ಮುಂದೆ ಏನ್ ಮಾಡ್ಬೋದು ಅಂತ ಪ್ಲಾನ್ ಮಾಡಿ

ಹಿಂದಿನ ನೆನಪುಗಳು ಎಷ್ಟೇ ನಮಗೆ ಖುಷಿ ಕೊಡುವಂತದ್ದಾಗಿದ್ರೂ ಅದ್ರಲ್ಲೇ ಮುಳಿಗಿರಬಾರ್ದು. ಅದು ಮುಗಿದು ಹೋಗಿರೋ ಕ್ಷಣ. ಇದು ಕೆಟ್ಟ ನೆನಪುಗಳಿಗೂ ಅನ್ವಯಿಸತ್ತೆ.

ನೀವು ನಿಮ್ಮ ಮುಂದಿನ ಗುರಿ ಏನು ಅಂತ ನಿರ್ಧಾರ ಮಾಡಿದ ಮೇಲೆ ನಿಮ್ಮ ಹಿಂದಿನ ನೆನಪುಗಳ ಬಗ್ಗೆ ಯೋಚ್ನೆ ಮಾಡೋದು ಕಮ್ಮಿ ಆಗುತ್ತೆ. ಎಲ್ಲಿ ವರೆಗೂ ನಾವು, ಹಿಂದೆ ಆಗಿದ್ರ ಬಗ್ಗೆ ತಲೆ ಕೆಡಿಸ್ಕೊತಿರ್ತೀವೋ , ಆಗ ನಮ್ಮ ಭವಿಷ್ಯ ಕಳೆದು ಹೋಗುತ್ತೆ. 

ಮೂಲ

8. ನನ್ನ್ ಕೈಯ್ಯಲ್ಲಿ ಏನೂ ಸಾಧಿಸಕ್ಕಾಗಲ್ಲ ಅಂತ ಕೈ ಚಲ್ಲೋ ಬದ್ಲು ಒಂದು ಕೊನೆ ಸರ್ತಿ ಪ್ರಯತ್ನ ಮಾಡಿ

ವಯಸ್ಸಾದಷ್ಟೂ ಕನಸುಗಳನ್ನ, ನಮ್ಮ ಗುರಿಗಳನ್ನ ಸಾಧಿಸಕ್ಕಾಗಲ್ಲ ಅಂತ ಕೈ ಬಿಡೋದೇ ಹೆಚ್ಚು. ಹೀಗೆ ನಮ್ಮ ಕನಸನ್ನ ಬಿಡೋ ಬದಲು ಯಾವುದಾದ್ರೂ ಸುಲಭವಾಗಿ ಸಾಧಿಸಬಹುದಾದ ಮೈಲಿಗಲ್ಲಿನ ಬಗ್ಗೆ ಯೋಚಿಸಿ. ಇಂತ ಕನಸಿನ, ಗುರಿ ಬಗ್ಗೆ ಯೋಚಿಸಿ, ಅದನ್ನ ಸಾಧಿಸಕ್ಕೆ ತುಂಬಾ ಹತ್ತಿರ ಹೋಗ್ತಿದ್ದೀವಿ ಅನ್ನಿಸದಾಗ ನಿಮಗೆ ತುಂಬಾನೇ ಖುಷಿ ಸಿಗುತ್ತೆ. ಮಕ್ಕಳು ಏನಾದ್ರು ಸಾಧನೆ ಮಾಡಿದಾಗ ಖುಷಿ ಪಡ್ತಾರಲ್ಲ ಆ ರೀತಿಯ ಖುಷಿ, ಸಮಾಧಾನ ಸಿಗುತ್ತೆ.

9. ಯಾವಾಗ್ಲೂ ಡಯೆಟ್ಟು ಅಂತ ತಲೆ ಕೆಡಿಸ್ಕೊಳೋ ಬದ್ಲು ಒಂದೊಂದ್ಸರ್ತಿ ರುಚಿಯಾಗಿರೋ ಊಟ ತಿಂಡಿ ತಿನ್ನಿ

ಪ್ರತಿಯೊಬ್ಬರ ಜೀವನದಲ್ಲೂ ಊಟ ತಿಂಡಿಗೆ ತಮ್ಮದೇ ಆದ ಪದ್ಧತಿ ಇರುತ್ತೆ. ಅದ್ರಲ್ಲೂ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಸರಿ ಹೊಂದೋ ಡಯಟ್ ಊಟ ತಿಂಡೀನ ಇಷ್ಟ ಇಲ್ಲ ಅಂದ್ರೂ ಬಲವಂತವಾಗಿ ತಿನ್ತಿರ್ತೀವಿ.

ಇದೆಲ್ಲ ಇದ್ದಿದ್ದೇ, ಆಗಾಗ ನಿಮಗಿಷ್ಟ ಆಗೋ ಸ್ವೀಟ್, ಐಸ್ ಕ್ರೀಮ್, ಪಿಜ್ಜಾ, ಬರ್ಗರ್ ಎಲ್ಲಾನೂ ತಿನ್ನಿ, ಆದ್ರೆ ಆಮೇಲೆ ಸರಿಯಾಗಿ ವ್ಯಾಯಾಮ ಮಾಡೋದನ್ನ ಮರೀಬೇಡಿ.

ಮೂಲ

10. ಯಾವಾಗ್ಲೂ ಕುಂಟ ನೆಪ ಕೊಡೋ ಬದ್ಲು ತಪ್ಪಾಗಿದ್ರೆ ಪ್ರಾಮಾಣಿಕವಾಗಿ ಒಪ್ಕೊಳಿ

ಪ್ರಾಮಾಣಿಕತೆ ಒಳ್ಳೇದು ಅಲ್ವ? ಕೆಲವೊಂದು ಸಲ ಅದು ನಿಮಗೆ ನೋವನ್ನೂ ಕೊಡಬಹುದು, ಆದ್ರೆ ನಿಮ್ಮಲ್ಲಿ ಬದಲಾವಣೆ ಬರ್ಬೇಕು, ನೀವು ಸುಧಾರಿಸ ಬೇಕು ಅಂದ್ರೆ ನೀವು ಪ್ರಾಮಾಣಿಕವಾಗಿರ್ಬೇಕು. ನೀವು ಪ್ರಾಮಾಣಿಕವಾಗಿರಕ್ಕೆ ಶುರು ಮಾಡಿದ್ರೆ, ನಿಮ್ಮ ಸಾಮರ್ಥ್ಯನೂ ಹೆಚ್ಚಾಗುತ್ತೆ. ಇದನ್ನ ತಿಳ್ಕೊಳೋ ಒಳ್ಳೆ ಸುಲಭ ವಿಧಾನ ಅಂದ್ರೆ ನೀವು ಪ್ರತಿಯೊಂದು ಕೆಲಸ ಮುಗಿಸಿದಾಗಲೂ ನೀವು ಮಾಡಿರೋ ಪ್ರಯತ್ನದ ಬಗ್ಗೆ ಪ್ರಶ್ನೆ ಮಾಡ್ಕೊಳಿ. ನೀವು ಯಾವುದಾದ್ರೂ ಪ್ರಾಜೆಕ್ಟ್ ಗೆ ಕೆಲಸ ಮಾಡ್ತಾ ಇದ್ರೆ, ನಿಮ್ಮ ಜೊತೇಲಿರೋ ಕೆಲಸಗಾರರಿಂದ ನಿಮ್ಮ ಸುಧಾರಣೆ ಬಗ್ಗೆ ತಿಳ್ಕೊಳಿ.

ಈ ಸಣ್ಣಪುಟ್ಟ ಬದಲಾವಣೆಗಳನ್ನ ಮಾಡ್ಕೊಂಡ್ರೆ ನಮ್ಮ ಜೀವನ ಬದಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: