ನಿಮಗ ಹಾರ್ಟ್ ಅಟ್ಯಾಕ್ ಆಗತದ ಅಂತ ಒಂದು ತಿಂಗಳ ಮದಲ ನಿಂ ದೇಹ ನಿಮಗ ತಿಳಸಿರತದ ನೋಡ್ರಿ

ದೇಹದ ಭಾಷೆ ಅರತರ ಇನ್ನೊಂದ ಎರಡ ವರ್ಷ ಜಾಸ್ತಿ ಇರಬೌದು!

ಬಂದಮ್ಯಾಲೆ ಚಿಕಿತ್ಸೆಮಾಡೋದಕ್ಕಿಂತ ಅದು ಬರಲಾರದಂಗ ತಡೆಗಟ್ಟದ ಜಾಣತನ.  ಈ ಸರಳ ನಿಯಮ ಎಲ್ಲಾ ರೋಗಕ್ಕೂ ಅನ್ವಯಿಸತದ. ವಿಶೇಷವಾಗಿ ಲಕ್ಷಣ ಸರಿಯಾಗಿ ಮತ್ತ ಲೊಗೂ ಗುರುತಿಸಾಕ ಆಗಲಾರದಂಥಾ ರೋಗಗುಳಿಗಂತೂ ಭಾಳ ಮುಖ್ಯ.

ಅಂಥಾ ಲಕ್ಷಣ ತಿಳೀಲಾರದಂಥಾ ರೋಗದೊಳಗೊಂದು ಹೃದಯಾಘಾತ. 35 ವರ್ಷದ್ದ ಮ್ಯಾಲನರು 50% ‘ಹಾರ್ಟಅಟ್ಯಾಕ’ ಇಂದಾನ ಸಾಯಿತಾರಾ. ಅದಕ್ಕ ನಿಂ ಆರೋಗ್ಯಾ ಸುದಾರಸಕೊರಿ. ನಿಂ ಶರೀರದ್ದ ಭಾಷೆ ಕಲಕೋರಿ. ಅದ ಹೇಳತದ ಇನ್ನ ಒಂದ ತಿಂಗಳಿಗೆ ಹಾರ್ಟಟ್ಯಾಕ ಆಗತದ ನೋಡು ಅಂತ... ಅದನ್ನ ತಿಳಕೊಂಡು ಆರೈಕೆ ಮಾಡಕೊಂಡು ಅಟ್ಯಾಕ ತಪ್ಪಿಸಕೋರಿ ಅಂತ ಈ ಲೇಖನಾ ತಂದೇವಿ.

1. ಆಯಾಸ

ಸಾಮಾನ್ಯವಾಗಿ ಗಂಡಸರಿಗಿಂತಾ ಹೆಂಗಸರೊಳಗ ಭಾಳ ಈ ಲಕ್ಷಣ ಕಂಡಬರತದ. ಶೇಕಡಾ 70 ಮಂದಿ ಹೆಣ್ಣಮಕ್ಕಳು ಇದಕ್ಕ ತುತ್ತ ಆಗತಾರ. ಭಾಳ ಕೆಲಸಾ ಮಾಡೋದರಿಂದಾ ಆಗೋ ಆಯಾಸಲ್ಲಾ ನಾವು ಹೇಳಾಕತ್ತಿದ್ದು. ಮನಸಿಗೆ ಮತ್ತ ಇಡೀ ಶರೀರಕ್ಕ ಗರಾ ಬಡಕೊಂಡಂಗ ಆಗಿರತದಲ್ಲಾ ಅದು. ಸಂಜಿ ಆದಾದಂಗ ಮೈಯಾನ ಸುಸ್ತು ಜಾಸ್ತಿ ಆಗತದ. ಮಿದುಳ ಕೆಲಸಾ ಮಾಡೋದ ನಿಂದರಸೇದೇನೋ ಅನಸತಿರತದ. ಗಾದಿ ಹಾಸೋದು, ಜಳಕಾ ಮಾಡೋದು... ಇಂಥಾ ಸುಲಭದ ಕೆಲಸಾನೂ ಮಾಡಾಕಾಗಂಗಿಲ್ಲಾ. ನಿಮಗೇನರ ಹಿಂಗಾಗತಿದ್ದರ ಎಚ್ಚೆತ್ತಗೋರಿ.

ಮೂಲ

2. ಕಿಬ್ಬೊಟ್ಟೆಯ ನೋವು

ಹೊಟ್ಟಿ ತುಂಬಿದಾಗ ಅಥವಾ ಖಾಲಿ ಇದ್ದಾಗ  ವಾಕರಿಕಿ ಬಂದಂಗ ಆಗೋದು, ಹೊಟ್ಟಿ ಉಬ್ಬೋದು ಅಥವಾ ಒಂದ ನಮೂನಿ ಹೊಟ್ಟ್ಯಾಗ ಏನೋ ಆಗಾಕತ್ತಂಗ ಅನಸೋದು ಹಿಂಗೆಲ್ಲಾ ಆಗತಿರತದ.

ಮೂಲ

3. ನಿದ್ರಾಹೀನತೆ

ನಿದ್ರಾಹೀನತೆ ಹೃದಯಾಘಾತ ಮತ್ತ ಲಕ್ವಾ ಎರಡರದೂ ಅಪಾಯ ಹೆಚ್ಚಿಸತದ. ಇದು ಹೆಣ್ಣಮಕ್ಕಳಿಗಂತೂ ಸಾಮಾನ್ಯ ಆಗಿಬಿಟ್ಟದ. ನಿದ್ರಾಹೀನತೆ ಸಾಮಾನ್ಯವಾಗಿ ಆತಂಕ ಮತ್ತ  ಯಾವ ಕೆಲಸದಾಗೂ ಮನಸ ಇಲ್ಲದಂಗ ಮಾಡತದ. ಏನ ಮಾಡಿದರೂ ನಿದ್ದಿ ಹತ್ತಂಗೇ ಇಲ್ಲ. ಹತ್ತಿದರೂ ಭಾಳ ಹೊತ್ತ ಇರಂಗಿಲ್ಲ. ಲೊಗೂನ ಎಚ್ಚರಾಗಿ ಬಿಡತದ. ಬೆಳಗಿನಜಾವಂತೂ ನಿದ್ದಿನ ಬರಂಗಿಲ್ಲಾ. ಅಂತ ಯಾರಿಗೇರ ಅನಸಿದರ ಹುಷಾರು ಇದು ಹಾರ್ಟಅಟ್ಯಾಕಿನ ಲಕ್ಷಣನೂ ಇರಬೌದು.

ಮೂಲ

4. ಉಸಿರಾಟದ ತೊಂದರೆ

ಸಾಮಾನ್ಯವಾಗಿ ಹೃದಯಾಘಾತ ಇರೋರಿಗೆ ಆಳವಾಗಿ ಉಸರ ತೊಗೋಳಾಕ ಆಗಂಗಿಲ್ಲ. ಇದು ಹೆಂಗಸರು, ಗಂಡಸರು ಇಬ್ಬರೊಳಗೂ ಕಂಡಬರತದ. ತಲಿ ತಿರಗದಂಗ ಆಗೋದು, ಉಸರತೊಗೊಳಾಕ ಆಗದೇ ಇರೋದು ಮತ್ತ  ವಾತಾವರಣದಾಗ ಗಾಳಿನ ಕಮ್ಮಿ ಆಗ್ಯದೇನೋ ಅನಸಾಕತ್ತಿತ್ತಂದ್ರ ಮದಲ ಡಾಕ್ಟರ ಕಡೆ ಹೋಗರಿ.

ಮೂಲ

5. ಕೂದಲು ಉದರೋದು

ಹೃದಯಾಘಾತಕ್ಕ ಒಳಗಾಗೋ ಶೇಕಡಾ 50 ರಷ್ಟ ಗಂಡಸರಿಗೆ ಸಿಕ್ಕಾಪಟ್ಟೆ ಕೂದಲ ಉದರಾಕ ಚಾಲೂ ಆಗತಾವು. ಕೆಲವು ಹೆಂಗಸರಿಗೂ ಉದರತಾವು ಆದರ ತೀರ ಬೋಡಾಗಂಗಿಲ್ಲ ಅವರು. ಕಾರಣ ಇಲ್ಲದ ಭಾಳ ಕೂದಲುದರಾಕತ್ಯಾವ ಅನ್ನಸಿದರ ಒಮ್ಮೆ ಡಾಕ್ಟರ ಕಡೆ ಹೋಗಿ ಬರ್ರಿ.

ಮೂಲ

 6. ಹೃದಯ ಬಡಿತದಾಗ ಹೆಚ್ಚು ಕಮ್ಮಿ ಆಗೋದು

ವಿಶೇಷವಾಗಿ ಹೆಣ್ಣ ಮಕ್ಕಳನ್ನ ಭಾದಸತದ ಇದು. ಕೆಲವು ಸಲ ಬಡತ ಹೆಚ್ಚು – ಕಮ್ಮಿ ಆದರ ಇನ್ನ ಕೆಲವು ಸಲ ಹೆಚ್ಚಗಿ ಆಕ್ಕೋತ ಹೋಗತದ. ಹಿಂಗ ಆಕ್ಕೋತ ಒಮ್ಮಿಲಗೆ ಹೃದಯಾಘಾತ ಆಗಿ ಬಿಡತದ. ಅದಕ್ಕ ಸಲ್ಪ ಹಗರನ್ನ ವ್ಯಾಯಾಮಾ ರೂಡಿಸಿಕೊಳ್ಳೊದ ಒಳ್ಳೆದು.

ಅಂದಹಂಗ 1-2 ನಿಮಿಷಕ್ಕಿಂತ ಜಾಸ್ತಿ ಹೃದಯ ಬಡಿತದಾಗ ಹೆಚ್ಚು ಕಮ್ಮಿ ಆಗಿ ನಿಮಗ ತಲೆ ತಿರಗಿದಂಗ, ಭಾಳ ಸುಸ್ತಾದಂಗ ಆಗಾಕತ್ತಿತ್ತಂದರ ಡಾಕ್ಟರ ಕಡೆ ಹೂಗೂದ ಚೊಲೊ.

ಮೂಲ

7. ಸಿಕ್ಕಾಪಟ್ಟೆ ಬೆವರೋದು

ಸಿಕ್ಕಾಪಟ್ಟೆ ಅಥವಾ ಎದ್ವಾತದ್ವಾ ಬೆವರೋದು ಹೃದಯಾಘಾತದ್ದ ಮುಂಚಿನ ಎಚ್ಚರಿಕೆ ಸಂಕೇತ. ಹಗಲು, ರಾತ್ರಿ ಅನ್ನಂಗಿಲ್ಲ ಯಾವಾಗ ಬೇಕ ಆವಾಗ ಬೆವರ ಬರತಿರತದ. ಈ ಲಕ್ಷಣ ಹೆಣ್ಣಮಕ್ಕಳ ಒಳಗ ಭಾಳ ಕಂಡಬರತದ. ಆದರ ಅವರು ಇದು ಋತುಬಂಧದ ಬೆವರು ಅಂತ ಅಲಕ್ಷಮಾಡತಾರ. ಅದಕ್ಕ ಕಾರಣ ಇಲ್ಲದ... ಶಕಿ ಆಗದ ಸಿಕ್ಕಾಪಟ್ಟೆ ಬೆವರಾಕತ್ತಿದ್ದರ, ಬೆಳಿಗ್ಗೆ ಏಳೋದರಾಗ ನಿಂ ಬೆವರಿಂದಾ ಹಾಸಿಗಿ ತೋಯ್ಯಿದು ತಪ್ಪಡಿ ಆಗತಿದ್ದರ ಡಾಕ್ಟರರಿಗೆ ತೋರಿಸಿ ಬಿಡ್ರಿ.

ಮೂಲ

8. ಎದೆ ನೋವು

ಹೆಂಗಸರು ಮತ್ತ ಗಂಡಸರಿಗೆ ಬ್ಯಾರ ಬ್ಯಾರೆ ತರದಾಗ ಎದಿ ನೋಯಿಸತದ. ಗಂಡಸರಿಗೆ ಬರೋ ಎದಿನೋವು ಬಾಳ ಜೋರ ಇರತದ ಮತ್ತ ಅದು ತನ್ನ ಜೋಡಿ ಹೃದಯಾಘಾತ ತೊಗೊಂಡ ಬಂದಿರತದ. ಆದರ ಇಂಥಾ ಎದಿನೋವು ಶೇಕಡಾ 30 ರಷ್ಟು ಹೆಂಗಸರೊಳಗ ಅಷ್ಟ ಕಂಡಬರತದ.

ಎದಿನೋಯಬೇಕಾರ ವಿಶೇಷವಾಗಿ ನಿಂ ಎಡಗಡೆ ಭಾಗದ ಬುಜ, ತೋಳು, ಕೆಳಗಿನ ದೌಡಿ, ಕುತ್ತಿಗಿ ಮತ್ತ ಹೊಟ್ಟಿ ಒಳಗ ನ್ನಮನಿ ಸಮಾಧಾನಲ್ಲದಂಗ ಆಗತಿದ್ದರ ನೀವ್ ಡಾಕ್ಟರ ಕಡೆ ಹೋಗಲಿಕ್ಕೇಬೇಕು.

ಮೂಲ

ಇನ್ನೊಂದಿಷ್ಟು ಅಪಾಯಕಾರಿ ಅಂಶಗಳು

ಭಾಳ ದಪ್ಪ ಇರೋದು, ದೈಹಿಕ ವ್ಯಾಯಾಮದ ಕೊರತೆ ಮತ್ತ ಧೂಮಪಾನ ಮುಂತಾದವು ಅಂತೂ ನಿಮಗ ಗೊತ್ತಿದ್ದದ್ದ ಅವ. ಆದರ ಇಲ್ಲೆ ನಿಮಗ ಗೊತ್ತಿರಲಾರದ ಕೆಲವು ಅಂಶ ಹೇಳಾಕತ್ತೇವಿ, ಇವದರ ಬಗ್ಗೆ ಜಾಗರೂಕಾಗಿದ್ದರ ಹೃದಯಾಘಾತ ತಡೀಬೌದು.

  •  ಕಣ್ಣುರೆಪ್ಪೆ ಒಳಗ ಮೂಲಿಗೆ ಹಳದಿ ಪ್ಯಾಚ್ ಇರೋದು.
  • ಸಲ್ಪ ನಡದರೂ ಮೀನಖಂಡದೊಳಗ ನೋವು ಕಂಡಬರೋದು
  • ಗಂಡಮಕ್ಕಳಿಗೆ ಕಿವಿ ಒಳಗ ಕೂದಲ ಬೆಳೆಯೋದು
  • ವಯಸ್ಸಿಗೆ ಮೊದಲ ಕೂದಲ ಬೆಳ್ಳಗಾಗೋದು.

ಇವುಗಳ ಬಗ್ಗೆ ಚೂರ ಲಕ್ಷ ಇಡರಿ, ಹೃದಯಾಘಾತದಿಂದ ಬಚಾವ ಆಗರಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: