ದುಬಾರಿ ವಾಟರ್ ಫಿಲ್ಟರ್ಗಳ ಕಾಲದಲ್ಲಿ ನಿರಂಜನ್ ಬರೀ 20 ರೂಪಾಯಿಗೆ ಒಂದು ಫಿಲ್ಟರ್ ಮಾಡಿದಾನೆ ನೋಡಿ

ಇದನ್ನ ಸೀದಾ ಬಾಟ್ಲಿಗೇ ಸಿಕ್ಕಿಸ್ಕೋಬೋದು!

ನೀರು ನಮ್ಮೆಲ್ಲರ್ಗೂ ಅವಶ್ಯಕವಾಗಿರೋ ಮೂಲಭೂತ ವಸ್ತು. ಆದ್ರೆ ನೋವಿನ ಸಂಗತಿ ಏನಪ್ಪಾ ಅಂದ್ರೆ, ನಮ್ಮ ದೇಶ್ದಲ್ಲಿ ಎಷ್ಟೋ ಜನಕ್ಕೆ ಕ್ಲೀನಾಗಿರೋ ಕುಡಿಯೋ ನೀರೇ ಸಿಗ್ತಿಲ್ಲ. ಈ ಪೊಲ್ಯೂಷನ್ನು, ಸಂಪನ್ಮೂಲದ ಕೊರತೆ, ಈ ದುಬಾರಿ ನೀರಿನ್ ಫಿಲ್ಟರ್ಗಳು... ಎಲ್ಲಾ ಸೇರ್ಕೊಂಡು ಬಡವ್ರಿಗೆ ಕ್ಲೀನಾಗಿರೋ ಕುಡಿಯೋ ನೀರೇ ಸಿಗ್ದೇ ಇರೋ ಹಾಗ್ ಆಗಿದೆ! ಆದ್ರೆ, ನಮ್ಮ ಬೆಳಗಾಮಿನ ಹುಡ್ಗ ಹುಡ್ಕಿರೋ ಒಂದ್ ಉಪಾಯದಿಂದ ಈ ಸಮಸ್ಯೆ ಪರಿಹಾರ ಆಗಿದೆ ನೋಡಿ.

ನಿರಂಜನ್ ಕರಗಿ ’ನಿರ್ನಲ್’ ಅನ್ನೋ ನೀರಿನ್ ಫಿಲ್ಟರ್ ತಯಾರ್ಸಿದ್ದಾರೆ. ಅದೂ ಬರೀ 20 ರುಪಾಯಿಗೆ!

ಈ ನಿರಂಜನ್ ಕರಗಿ, ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟಲ್ಲಿ ಕೊನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ. ಅವನ ಮನೆ ಸುತ್ತ ಮುತ್ತಾ ಸ್ಕೂಲಿಗ್ ಹೋಗೋ ಮಕ್ಕಳು, ಅಲ್ಲೇ ಇರೋ ಗ್ರೌಂಡಲ್ಲಿ ಆಟ ಆಡಿ ಬಾಯಾರಿಕೆಯಿಂದ ನಿರಂಜನ್ ಮನೆ ಹತ್ರದ ನಲ್ಲೀಲಿ ಬರೋ ಕೊಳೆ ನೀರ್ನೇ ಹಿಡ್ಕೊಂಡು ಕುಡೀತಿದ್ರಂತೆ. ಇದನ್ನ ನೋಡಿ ಬೇಜಾರಾಗಿ, ಇಂಥೋರಿಗೆ ಸಹಾಯ ಆಗೋತರ ಒಂದು ಚಿಕ್ಕ ವಾಟರ್ ಫಿಲ್ಟರ್ ಮಾಡ್ಬೇಕು ಅನ್ನೋ ಯೋಚನೆ ಬಂತು. ಆದ್ರೆ, ಇದು ದುಬಾರಿಯಾಗ್ದೇ, ಕಮ್ಮಿ ರೇಟಿಗೆ ಜನಕ್ಕ್ ಸಿಗ್ಬೇಕು ಅನ್ನೋ ಆಸೆ ಇತ್ತು.

ಮೂಲ

ನೀರಿನ ಬಾಟಲ್ ಒಳಗೆ ತೂರೊವಂತಾ ವಾಟರ್ ಫಿಲ್ಟರ್ ತಯಾರಾಯ್ತು!

ನಿರಂಜನ್ ತಲೆ ಓಡ್ಸೇಬಿಟ್ರು... ಆಕ್ಟಿವೇಟೆಡ್ ಕಾರ್ಬನ್, ಹತ್ತಿ ಮತ್ತೊಂದು ಜಾಲರೀನ ಅಸೆಂಬಲ್ ಮಾಡಿ ಅದಕ್ಕೊಂದು ಪ್ಲಾಸ್ಟಿಕ್ ಕವರಿಂಗ್ ಕೊಟ್ಟು, ಒಂದ್ ಚಿಕ್ಕ ಫಿಲ್ಟರ್ ತಯಾರ್ ಮಾಡೇಬಿಟ್ರು ನೋಡಿ. ಒಂದು ಪ್ಲಾಸ್ಟಿಕ್ ಬಾಟ್ಲಿಗೆ ನೀರು ತುಂಬಿ, ಅದಕ್ಕೆ ಈ ಫಿಲ್ಟರ್ ಸಿಕ್ಕಿಸಿ, ಬಾಟಲ್ನ ಹಿಂಡ್ತಾ ಇದ್ರೆ, ನೀರು ಫಿಲ್ಟರ್ ಆಗತ್ತೆ...ಕುಡೀಬೋದು. ಇದು ಊರಿಂದ ಊರಿಗೆ ಪ್ರಯಾಣ ಮಾಡೋರಿಗೆ, ವಿದ್ಯಾರ್ಥಿಗಳಿಗೆ ತುಂಬಾನೇ ಉಪಯೋಗ ಆಗತ್ತೆ. ಅಷ್ಟೇ ಅಲ್ದೇ ಈ ಫಿಲ್ಟರ್ರಿಂದ 100 ಲೀಟರ್ ನೀರು ಶೋಧಿಸ್ಬೋದಂತೆ. ಆಮೇಲೆ ಹೊಸಾದ್ ತಗೋಬೇಕಷ್ಟೆ.

ಮೂಲ

ಸರ್ಕಾರದ ಜೊತೆ ಮಾತುಕತೆ ನಡ್ಸಿ ರಾಜ್ಯದ ಎಲ್ಲಾ ಸ್ಕೂಲ್ ಮಕ್ಕಳಿಗೂ ಫ್ರೀಯಾಗಿ ಸಿಗೋಹಾಗೆ ಮಾಡೋ ಉದ್ದೇಶ ಇದೆ

ಇದ್ರಿಂದ ಸ್ವಲ್ಪ ನೀರನ್ನ ಶೋಧಿಸಿ, ಟೆಸ್ಟಿಂಗ್ ಗೆ ಕಳ್ಸಿದ್ರು. ಅಲ್ಲಿ ಒಳ್ಳೆ ರಿಸಲ್ಟ್ ಬಂದಿದ್ರಿಂದ, ಇದನ್ನ ಮುಂದೆ ತಗೊಂಡ್ ಹೋಗ್ಬೇಕು ಅಂತ, ಪ್ರತಿಷ್ಟಿತ ದೇಶ್ಪಾಂಡೆ ಫೌಂಡೇಷನ್ ಮತ್ತು ಹುಬ್ಬಳ್ಳೀಲಿರೋ ಸ್ಯಾಂಡ್ ಬಾಕ್ಸ್ ಸ್ಟಾರ್ಟಪ್ ಜೊತೆ ಚರ್ಚೆ ಮಾಡಿದ್ರು. ಈ ಎರ್ಡೂ ಸಂಸ್ಥೆಗಳು ನಿರಂಜನ್ಗೆ ಹಣ ಸಹಾಯ ಮಾಡಿ ಈ ಫಿಲ್ಟರ್ ಬಿಡುಗಡೆ ಮಾಡಿದ್ರು.ಇಲ್ಲೀವರ್ಗೂ ಈ ಫಿಲ್ಟರ್ನ ಒಟ್ಟು 8,000 ಪೀಸ್ಗಳು ಬೇರೆ ಬೇರೆ ಸರ್ಕಾರಿ ಶಾಲೆಗಳಿಗೆ, ಕಾಲೇಜ್ಗಳಿಗೆ, ಮತ್ತು  ಕುಟುಂಬಗಳಿಗೆ ಮಾರಾಟ ಆಗಿದೆ! ಈ ಫಿಲ್ಟರ್ಗೆ ಪ್ರಶಸ್ತಿ ಸುರಿಮಳೇನೂ ಆಗಿದೆ!

ಮೂಲ

 ಈ ಫಿಲ್ಟರ್ಗೆ ಅಫ್ರಿಕಾ ಮತ್ತು ಕತಾರ್ ದೇಶಗಳಿಂದಾನೂ ಬೇಡಿಕೆ ಬರ್ತಿದ್ಯಂತೆ. ಆದ್ರೆ, ಮೊದಲು ಸರ್ಕಾರದ ಜೊತೆ ಮಾತುಕತೆ ನಡ್ಸಿ ರಾಜ್ಯದ ಎಲ್ಲಾ ಸ್ಕೂಲ್ ಮಕ್ಕಳಿಗೂ ಫ್ರೀಯಾಗಿ ಈ ಫಿಲ್ಟರ್ ಸಿಗೋಹಾಗೆ ಮಾಡೋ ಉದ್ದೇಶ ನಿರಂಜನ್ದು. ಅದರ ಜೊತೆಗೆ, ಸದ್ಯಕ್ಕೆ ಈ ಫಿಲ್ಟರ್ ಎಲ್ಲಾ ಸೈಜಿನ ಬಾಟಲ್ಲಲ್ಲೂ ತೂರಲ್ಲ. ಆದ್ರಿಂದ ಎಲ್ಲಾ ಬಾಟ್ಲಲ್ಲೂ ತೂರೋ ಫಿಲ್ಟರ್ ತಯಾರ್ಸೋ ಕೆಲಸ್ದಲ್ಲಿ ಈಗ ನಿರಂಜನ್ ಬಿಝಿಯಾಗಿದ್ದಾರೆ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: