ವಯಸ್ಸಿಗೆ ಸರಿಯಾಗಿ ಈ 8 ಗುಣಗಳ್ನ ರೂಢಿಸಿಕೊಂಡ್ರೆ ಮಾತ್ರ ದೊಡ್ಡೋರು ಅಂತಾರೆ

ಅಲ್ವಾ ಮತ್ತೆ!

ನೀವು ವಯಸ್ಸಲ್ಲಿ ಬೆಳ್ದಿದ್ದೀರಿ, ತುಂಬಾ ಎತ್ತರ್ವಾಗಿ ಬೆಳ್ದಿದ್ದೀರಿ ಅಂದ ಮಾತ್ರಕ್ಕೆ ಎಲ್ಲಾ ತಿಳುವಳಿಕೇನೂ ಇದೆ ಅಂತ ಹೇಳಕ್ಕಾಗಲ್ಲ. ನೀವು ತಿಳುವಳಿಕಸ್ಥ ಅಂತ ಹೇಳ್ಬೇಕು ಅಂದ್ರೆ ಮೊದ್ಲು ನೀವು ನಿಮ್ಮ ಸಂಬಂಧಗಳನ್ನ, ಜೀವನವನ್ನ ಹೇಗೆ ನೋಡ್ತೀರಿ ಅನ್ನೋದರ ಮೇಲೆ ನಿಂತಿರುತ್ತೆ. ಅಂತೆಕಂತೆ ನಿಮಗೋಸ್ಕರ ಈ 8ರ ಪಟ್ಟಿ ಮಾಡಿದೆ. ಈ ಗುಣಗಳು ನಿಮ್ಮಲಿದ್ರೆ ಮಾತ್ರ ಜೀವನದಲ್ಲಿ ಇನ್ನೊಬ್ಬರಿಗೆ ಮಾದರಿಯಾಗ್ತೀರಿ. ದೊಡ್ಡೋರಪ್ಪಾ! ಇವರ ಮಾತು ನಿಜ ಕಣಪ್ಪ! ಅಂತಾರೆ ಜನ!

1. ಮನಸ್ಥಿತಿ ಹತೋಟಿಯಲ್ಲಿ ಇಟ್ಕೊಬೇಕು

ನಮ್ಮ ಭಾವನೆಗಳ ಮೇಲೆ ಕಂಟ್ರೋಲ್ ಮಾಡೋದನ್ನ ನಾವು ಕಲಿತಿರ್ಬೇಕು. ಹಾಗಂತ ಈ ರೀತಿ ನಿಯಂತ್ರಣ ಸಾಧ್ಸಕ್ಕೆ ಯಾವಾಗ್ಲೂ ಕೋಪದ ಮೊರೆ ಹೋಗೋದು ಕೂಡ ಸರಿ ಅಲ್ಲ.

ಮೂಲ

2. ಜೊತೆ ಇರೋರ ಭಾವನೆಗಳನ್ನ ಸಹಿಸ್ಕೊಬೇಕು

ನಮ್ಮನ್ನ ನಾವು ನಿಯಂತ್ರಣ ಮಾಡ್ಕೊಳ್ಳೋದರ ಜೊತೆಗೆ, ಜೊತೆಗಿರೋರ ಭಾವನೆಗಳನ್ನ ಕೂಡ ಸಹಿಸಿಕೊಳ್ಳೋದನ್ನ ಕಲಿಬೇಕು. ಹಾಗಂತ ಅವ್ರ ಮೇಲೆ ಸಿಟ್ಟಾಗ್ಬೇಕಂತ ಇಲ್ಲ, ಆದ್ರೆ ಅವರ ಪರಿಸ್ಥಿತಿಯನ್ನ ಅರಿತುಕೊಳ್ಳೋದನ್ನ  ಮೊದ್ಲು ಕಲಿಬೇಕು.

ಮೂಲ

3. ಆದಷ್ಟು ತಪ್ಪು ಮಾಡ್ಬಾರ್ದು

ಆದಷ್ಟು ತಪ್ಪುಗಳನ್ನ ಮಾಡದೆ ಇರೋ ಹಾಗೆ ನೋಡ್ಕೊಳ್ಳ್ಬೇಕು. ತಾವು ತಪ್ಪು ಮಾಡೋದು ಅಥ್ವಾ ಇನ್ನೊಬ್ರನ್ನ ನಮ್ಮ ತಪ್ಪಿಗೆ ಹೊಣೆಗಾರರನ್ನಾಗಿ ಮಾಡೋದ್ರಿಂದ ನಮ್ಮ ಬೆಲೆ ಕಡಿಮೆ ಆಗುತ್ತೆ. ಹಾಗಾಗಿ ಇಂಥವುಗಳಂನ್ ಸಾಧ್ಯವಾದಷ್ಟು ಕಡಿಮೆ ಮಾಡ್ಬೇಕು. ಜೊತೆಗೆ ತಪ್ಪುಗಳಾದಾಗ ಆದ್ರಿಂದ ಒಳ್ಳೆ ಪಾಠಗಳನ್ನ ಕಲ್ತ್ಕೋಬೇಕು.

ಮೂಲ

4. ಪ್ರಾಮಾಣಿಕರಾಗಿರ್ಬೇಕು

ನಮ್ಮ ಮನಸ್ಸಲ್ಲೇನಿದೆ ಅನ್ನೋದನ್ನ ಇನ್ನೊಬ್ರಿಗೆ ನೇರವಾಗಿ ಹೇಳೋವಷ್ಟು ಧೈರ್ಯ ನಮ್ಮಲ್ಲಿರ್ಬೇಕು. ಮುಂದೆ ಒಂದು ಹಿಂದೆ ಒಂದು ಮಾಡದೆ ನೇರವಾಗಿ ಹೇಳೋ ಮನಸ್ಥಿತಿ ನಮ್ಮಲ್ಲಿ ಇರ್ಬೇಕು. ಹಾಗಾಗಿ ನಮ್ಮ ಮನಸ್ಸನ್ನ ಮೊದ್ಲು ನಾವು ತಿಳ್ಕೊಬೇಕು.

ಮೂಲ

5. ಧೈರ್ಯವಾಗಿರ್ಬೇಕು

ಮೊದಲು ಭಯ ಕಡಿಮೆ ಮಾಡ್ಕೊಂಡು ಧೈರ್ಯವಾಗಿರೋದನ್ನ ಕಲಿತಿರ್ಬೇಕು. ಯಾವ್ದಾದ್ರೂ ಕೆಲ್ಸ ಮಾಡಕ್ಕೆ ನಮಗೆ ಭಯ ಇದೆ , ಆತಂಕ ಇದೆ ಅಂದ್ರೆ ಅದನ್ನ ನಿವಾರಿಸ್ಕೊಂಡು ಹೇಗೆ ಮುಂದೆ ಬರೋದು ಅನ್ನೋದು ತಿಳ್ಕೊಂಡ್ರೆ, ಯಾವ ಕೆಲ್ಸ ಆದ್ರೂ ಆರಾಮಾಗಿ ಮಾಡ್ಬಹುದು.

ಮೂಲ

6. ತೊಂದ್ರೆಗೆ ಸಿಕ್ಕಿದಾಗ ನಿಸ್ಸಂಕೋಚವಾಗಿ ಸಹಾಯ ಕೇಳ್ಬೇಕು

ಕೆಲವೊಂದು ಕೆಲ್ಸಕ್ಕೆ ನಮಗೆ ಇನ್ನೊಬ್ರ ಸಹಾಯ ಬೇಕು ಅಂತ ಅನ್ಸಿದಾಗ ಆರಾಮಾಗಿ, ಮುಜುಗರ ಪಟ್ಕೊಳ್ಳದೆ ಸಹಾಯ ಕೇಳ್ಬೇಕು. ಆವಾಗ ನಮ್ಮ ಕೆಲ್ಸ ಸುಲಭ ಆಗುತ್ತೆ. ಜೊತೆಗೆ ಎಷ್ಟೊಂದು ಹೊಸ ವಿಷಯಗಳನ್ನ ಕಲಿಯಕ್ಕೆ ಸಹಾಯ ಆಗುತ್ತೆ.

ಮೂಲ

7. ಯೋಚಿಸಿ ಪ್ರತಿಕ್ರಿಯೆ ನೀಡ್ಬೇಕು

ಒಂದು ವಿಷಯಕ್ಕೆ ಪ್ರತಿಕ್ರಿಯೆ ನೀಡ್ಬೇಕು ಅಂತ ಅನ್ಸಿದ್ ಕೂಡ್ಲೆ ಹಿಂದೆ ಮುಂದೆ ಯೋಚ್ನೆ ಮಾಡದೆ ಪ್ರತಿಕ್ರಿಯೆ ಮಾಡೋದು ತಪ್ಪು. ಆದ್ರಿಂದ ಎಷ್ಟೋ ಜನ್ರ ಮನಸ್ಸಿಗೆ ನೋವಾಗೋ ಚಾನ್ಸಸ್ ಇರುತ್ತೆ. ಹಾಗಾಗಿ, ನಾವು ಯಾರ ಹತ್ರ ಮಾತಾಡ್ತಾ ಇದ್ದೀವಿ? ಏನು ಮಾತಾಡ್ತೀವಿ ಅನ್ನೋದನ್ನ ಯೋಚ್ನೆ ಮಾಡಿ ಪ್ರತಿಕ್ರಿಯೆ ನೋಡೋದು ಉತ್ತಮ.

ಮೂಲ

8. ನಮ್ಮ ಗುರಿ ಸಾಧನೆಗೆ ನಾವು ಬದ್ಧರಾಗಿರ್ಬೇಕು

ಒಂದು ವಿಷಯಕ್ಕೆ ಪ್ರತಿಕ್ರಿಯೆ ನೀಡ್ಬೇಕು ಅಂತ ಅನ್ಸಿದ್ ಕೂಡ್ಲೆ ಹಿಂದೆ ಮುಂದೆ ಯೋಚ್ನೆ ಮಾಡದೆ ಪ್ರತಿಕ್ರಿಯೆ ಮಾಡೋದು ತಪ್ಪು. ಆದ್ರಿಂದ ಎಷ್ಟೋ ಜನ್ರ ಮನಸ್ಸಿಗೆ ನೋವಾಗೋ ಚಾನ್ಸಸ್ ಇರುತ್ತೆ. ಹಾಗಾಗಿ, ನಾವು ಯಾರ ಹತ್ರ ಮಾತಾಡ್ತಾ ಇದ್ದೀವಿ? ಏನು ಮಾತಾಡ್ತಾ ಇದ್ದೇವಿ ಅನ್ನೋದನ್ನ ಯೋಚ್ನೆ ಮಾಡಿ ಪ್ರತಿಕ್ರಿಯೆ ನೋಡೋದು ಉತ್ತಮ.

ಮೂಲ

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನವರಾತ್ರೀಲಿ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತ ತಿಳ್ಕೊಳಿ

ಐದನೇ ದಿನ ಬಿಳಿ ಬಣ್ಣ

ದೇಶ ಪೂರ್ತಿ ನವರಾತ್ರಿ ಸಂಭ್ರಮ ಕಳೆಕಟ್ಟಿದೆ. ಕರ್ನಾಟಕದಲ್ಲಿ ದಸರ ಫೇಮಸ್ಸಾದ್ರೆ, ತಮಿಳುನಾಡಲ್ಲಿ ಗೊಲು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ... ಹೀಗೆ. ಈ ಹಬ್ಬದ ಸಂದರ್ಭದಲ್ಲಿ ಯಾವತ್ತು ದೇವಿಯ ಯಾವ ರೂಪದ ಪೂಜೆ ಮಾಡ್ತಾರೆ? ಯಾವ ದಿನ ಯಾವ ಬಣ್ಣದ ಬಟ್ಟೇ ಹಾಕ್ಕೊಂಡ್ರೆ ಒಳ್ಳೇದು?  ಯಾವ ಫಲಗಳಲನ್ನ ಪಡ್ಕೋಬೋದು ಅನ್ನೋ ಕಿರು ಪರಿಚಯ ಇಲ್ಲಿದೆ ನೋಡಿ.

1. ಮೊದಲ ದಿನ ಹಳದಿ ಬಣ್ಣ

ನವರಾತ್ರಿಯ ಮೊದಲನೇ ದಿನ ಶೈಲಪುತ್ರೀ ಅಂದ್ರೆ ಪರ್ವತ ರಾಜನ ಮಗಳ ಪೂಜೆ ಮಾಡ್ತಾರೆ.ಇವಳು ಬ್ರಹ್ಮ-ವಿಷ್ಣು- ಮಹೇಶ್ವರರ ಸಾಕಾರ ಅಂತ ಹೇಳ್ತಾರೆ. ತ್ರಿಶೂಲ ಹಾಗೂ ಕಮಲದ ಹೂವನ್ನ ಕೈಯಲ್ಲಿ ಹಿಡಿದಿರೋ ಈ ಮಾತೆಯ ವಾಹನ  ಗೂಳಿ. ಈ ದೇವಿಯನ್ನ ಸತಿ, ಭವಾನಿ, ಪಾರ್ವತಿ ಹಾಗೆ ಹೇಮಾವತಿ ಅನ್ನೋ ಹೆಸರಿಂದಾನೂ ಕರೀತಾರೆ.

ಮೊದಲನೇ ದಿನದ ಈ ದೇವಿ ಪೂಜೆಗೆ ಹಳದಿ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು ಅಂತಾರೆ.

ಮೂಲ

2. ಎರಡನೇ ದಿನ ಹಸಿರು ಬಣ್ಣ

ಕೈಯಲ್ಲಿ ಜಪಮಾಲೆ ಹಾಗೂ ಕಮಂಡಲ ಹಿಡಿದಿರೋ ದೇವಿಯ ಈ ಅವತಾರವನ್ನ ಬ್ರಹ್ಮಚಾರಿಣಿ ಅಂತ ಹೇಳ್ತಾರೆ. ಎರಡನೇ ದಿನದ ಪೂಜೆ ಬ್ರಹ್ಮಚಾರಿಣಿಗೆ ಸಲ್ಲುತ್ತೆ. ಈ ರೂಪ ಸಂತೋಷ, ಶಾಂತಿ ಹಾಗೂ ಸಮೃದ್ಧಿಯ ಸಂಕೇತ. ಬ್ರಹ್ಮಚಾರಿಣಿ ಆಶ್ರಮದಲ್ಲಿರೋ ಶ್ರದ್ದಾ ಭಕ್ತಿಯಿಂದ ಕೂಡಿರೋ ತಪಸ್ವಿನಿಯ ರೂಪ. ಹಾಗಾಗೇ ಈ ದೇವಿಯನ್ನ ಮೋಕ್ಷಕ್ಕೆ  ದಾರಿ ತೋರಿಸೋಳು ಅಂತಾನೂ ಹೇಳ್ತಾರೆ.

ಈ ರೂಪದ ದೇವಿಯನ್ನ ಪೂಜೆ ಮಾಡಕ್ಕೆ ಹಸಿರು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

3. ಮೂರನೇ ದಿನ ಬೂದು ಬಣ್ಣ

ಚಂದ್ರಘಂಟ ಅನ್ನೋ ಹೆಸರಿಂದ ಪ್ರಸಿದ್ಧಿಯಾಗಿರೋ ಈ ದೇವಿಯ ಪೂಜೆ ಮೂರನೇ ದಿನ ಮಾಡ್ಬೇಕು. ಇವಳನ್ನ ಚಂದ್ರಿಕಾ, ರಣಚಂಡಿ ಅನ್ನೋ ಹೆಸರಿಂದಾನೂ ಕರೀತಾರೆ. ಈಕೆಯ ಹಣೆ ಮೇಲೆ ಘಂಟೆಯಾಕಾರದಲ್ಲಿ ಅರ್ಧ ಚಂದ್ರ ಇದ್ದಾನೆ. ಜೀವನದಲ್ಲಿ ಶಾಂತಿ ಹಾಗೂ ಅಭ್ಯುದಯಕ್ಕಾಗಿ ಈ ದೇವಿಯ ಪೂಜೆ ಮಾಡ್ತಾರೆ. ಪ್ರಕಾಶಮಾನವಾದ ಮೈಬಣ್ಣ ಹೊಂದಿರೋ ಈ ದೇವಿ ವಾಹನ ಸಿಂಹ. ಹತ್ತು ಕೈ, ಮೂರು ಕಣ್ಣು, ಎಲ್ಲ ಕೈಯ್ಯಲ್ಲೂ ಆಯುಧಗಳನ್ನ ಹೊಂದಿರೋ ಈ ದೇವಿ ಯುದ್ಧ ಹಾಗೂ ಶೌರ್ಯದ ಅಧಿದೇವತೆ. ರಾಕ್ಷಸರ, ಕೆಟ್ಟವರ ವಿರುದ್ಧ ಯುದ್ಧ ಮಾಡಕ್ಕೆ ಅಂತಾನೆ ಇವಳ ಮೂರನೇ ಕಣ್ಣು ಯಾವಾಗ್ಲೂ ತೆಗೆದಿರುತ್ತೆ ಅಂತಾರೆ.

ಈ ದಿನದ ಪೂಜೆ ಮಾಡಕ್ಕೆ ಬೂದುಬಣ್ಣದ ಬಟ್ಟೆ ಧರಿಸಿದ್ರೆ ಒಳ್ಳೇದು.

ಮೂಲ

4. ನಾಲ್ಕನೇ ದಿನ ಕಿತ್ತಳೆ ಬಣ್ಣ

ಕೂಷ್ಮಾಂಡಾ ದೇವಿ ತನ್ನ ನಗು ಮುಖಕ್ಕೆ ಹೆಸರುವಾಸಿ. ದೇವಿಯ ಈ ರೂಪಾನ ಪ್ರಪಂಚದ ಸೃಷ್ಟಿಕರ್ತೆ ಅಂತ ಕರೀತಾರೆ. ಈ ದೇವಿ ಆರೋಗ್ಯ, ಶಕ್ತಿ ಹಾಗೂ ಸಂಪತ್ತನ್ನು ದಯಪಾಲಿಸ್ತಾಳಂತೆ. ಈ ದೇವಿಯ ಪೂಜೆ ನಾಲ್ಕನೇ ದಿನ ನಡೆಯುತ್ತೆ. ಈ ದೇವಿಗೆ 8 -10 ಕೈ ಇದೆ. ಆಯುಧಗಳು, ಜಪಮಾಲೆ ಮುಂತಾದವನ್ನು ಕೈಯಲ್ಲಿ ಹಿಡಿದಿದ್ದಾಳೆ. ಅವಳ ಪ್ರಕಾಶವು ಎಲ್ಲ ದಿಕ್ಕುಗಳಲ್ಲೂ ಹರಡುತ್ತಂತೆ.

ಈ ದೇವಿಯ ಪೂಜೆ ಮಾಡಕ್ಕೆ ಕಿತ್ತಳೆ ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದು.

ಮೂಲ

5. ಐದನೇ ದಿನ ಬಿಳಿ ಬಣ್ಣ

ನವರಾತ್ರಿಯ ಐದನೆಯ ದಿನ ಸ್ಕಂದ ಮಾತೆ ಪೂಜೆ ಮಾಡ್ಬೇಕು. ಹೆಸರೇ ಹೇಳೋ ತರ ಈ ದೇವಿ ಯುದ್ಧಗಳ ಅಧಿಪತಿ ಸ್ಕಂದ ಅಥವಾ ಕಾರ್ತಿಕೇಯನ ತಾಯಿ. ಸಿಂಹದ ಮೇಲೆ ಕೂತಿರೋ ಈ ದೇವಿಗೆ ನಾಲ್ಕು ಕೈಗಳಿದ್ದು, ಒಂದ್ಕಡೆ ಕಮಲ, ಕಮಂಡಲ, ಮಗ ಸ್ಕಂದನ್ನ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಅಭಯ ಹಸ್ತ ತೋರಿಸ್ತಾಳೆ. ಇವಳನ್ನ ಭಕ್ತಿಯಿಂದ ಪೂಜಿಸೋ ಭಕ್ತರು ಎಷ್ಟೇ ಅನಕ್ಷರಸ್ಥರಾಗಿದ್ರೂ ಜ್ಞಾನ ಸಾಗರವನ್ನೇ ನೀಡುತ್ತಾಳಂತೆ. ಅಷ್ಟೇ ಅಲ್ಲ ಈ ದೇವಿ ಮೋಕ್ಷ, ಸಂಪತ್ತು, ಸಮೃದ್ಧಿ, ಹಾಗೂ ಶಕ್ತಿ ಕೊಡ್ತಾಳೆ ಅಂತ ಹೇಳ್ತಾರೆ.

ಈ ದಿನಕ್ಕೆ ಸರಿ ಹೊಂದೋದು ಬಿಳಿ ಬಟ್ಟೆ.

ಮೂಲ

6. ಆರನೇ ದಿನ ಕೆಂಪು ಬಣ್ಣ

ಹಿಂದೆ ಕಾತ್ಯ ಅನ್ನೋ ಋಷಿ ಇದ್ದ. ಅವನಿಗೆ ದೇವೀನ ತನ್ನ ಮಗಳಾಗಿ ಪಡಿಯೋ ಆಸೆಯಾಗುತ್ತೆ. ಅದಕ್ಕಾಗಿ ಕಠಿಣ ತಪಸ್ಸು ಮಾಡಿ ದೇವಿಯ ಅನುಗ್ರಹದಿಂದ ಅವಳನ್ನೇ ತನ್ನ ಮಗಳಾಗಿ ಪಡೀತಾನೆ. ಕಾತ್ಯನ ಮಗಳಾಗಿ ಹುಟ್ಟಿದ್ರಿಂದ ದೇವಿಗೆ ಕಾತ್ಯಾಯನಿ ಅನ್ನೋ ಹೆಸರು ಬರುತ್ತೆ. ಮದುವೆ ಆಗ್ದೇ ಇರೋ ಹೆಣ್ಣು ಮಕ್ಕಳು ಈ ದೇವಿಯ ಪೂಜೆ ಮಾಡೋದ್ರಿಂದ ತಮಗೆ ಇಷ್ಟವಾಗೋ ಪುರುಷನೇ ಗಂಡನಾಗಿ ಸಿಗ್ತಾನಂತೆ.

ಈ ದಿನದ ಪೂಜೆಗೆ ಕೆಂಪು ಬಣ್ಣದ ಬಟ್ಟೆ ಹಾಕ್ಕೊಂಡ್ರೆ ಒಳ್ಳೇದಂತೆ.

ಮೂಲ

7. ಏಳನೇ ದಿನ ನೀಲಿ ಬಣ್ಣ

ನವರಾತ್ರಿಯ ಏಳನೇ ದಿನ ಕಾಳ ರಾತ್ರಿ ದೇವಿ ಪೂಜೆಗೆ ಮೀಸಲು. ಕಾಳಿ, ಭದ್ರಕಾಳಿ, ಮಹಾಕಾಳಿ, ಭೈರವಿ, ರುದ್ರಾಣಿ, ಚಂಡಿ ಅಂತಾನೂ ಈ ದೇವೀನ ಕರೀತಾರೆ. ಈ ದೇವಿಗೆ ತುಂಬಾ ಅಗಲವಾದ ಕಣ್ಣಿದೆ. ಇವಳ ಉಸಿರಲ್ಲಿ ಬೆಂಕಿ ಇದೆ. ಫಳ ಫಳ ಮಿನುಗೋ ಖಡ್ಗ ಈ ದೇವಿ ಆಯುಧ.

ನೀಲಿ ಬಣ್ಣದ ಉಡುಪು ಈ ದಿನದ ಪೂಜೆಗೆ ಒಳ್ಳೇದು

ಮೂಲ

8. ಎಂಟನೇ ದಿನ ಗುಲಾಬಿ ಬಣ್ಣ

ಎಂಟನೇ ದಿನ ಮಹಾ ಗೌರಿ ಪೂಜೆ. ಈ ದೇವಿ ಶಾಂತಿ ಹಾಗು ಬುದ್ದಿವಂತಿಕೆಗೆ ಹೆಸರುವಾಸಿ. ಈ ದೇವಿ ಹಿಮಾಲಯದ ಕಾಡಿನಲ್ಲಿ ಕಠಿಣ ತಪಸ್ಸು ಮಾಡುವಾಗ ಅವಳ ಬಿಳಿ ಬಣ್ಣ ಹೋಗಿ ಕಪ್ಪಾಯಿತಂತೆ. ಆಮೇಲೆ ಶಿವ ಗಂಗೆಯ ನೀರಿಂದ ಅವಳನ್ನ ಸ್ವಚ್ಛಗೊಳಿಸಿದಾಗ ಮತ್ತೆ ಬಿಳಿ ಬಣ್ಣ ವಾಪಸ್ ಬಂತಂತೆ.

ಮಹಾ ಗೌರಿ ಪೂಜೆಗೆ ಗುಲಾಬಿ ಬಣ್ಣದ ಬಟ್ಟೆ ಒಳ್ಳೇದಂತೆ.

ಮೂಲ

9. ಒಂಭತ್ತನೇ ದಿನ ನೇರಳೆ ಬಣ್ಣ

ಹೆಸರೇ ಹೇಳೋ ತರ ಈ ದೇವಿ ಸಿದ್ದಿ ಕೊಡೋದ್ರಿಂದ ಸಿದ್ಧಿದಾತ್ರಿ ಇವಳನ್ನ ಅಂತಾರೆ. ಈ ದೇವಿಯ ವಾಹನ ಸಿಂಹ. ನಾಲ್ಕು ಕೈಗಳಿರೋ ಈ ದೇವಿ ಕೈಯಲ್ಲಿ ಕಮಲ, ಗದೆ, ಚಕ್ರ ಹಾಗೂ ಶಂಖ ಹಿಡ್ಕೊಂಡಿದ್ದಾಳೆ.

ಈ ದಿನದ ಪೂಜೆಗೆ ನೇರಳೆ ಬಣ್ಣದ ಬಟ್ಟೆ ಒಳ್ಳೇದು ಅಂತಾರೆ.

ಮೂಲ

ನವದುರ್ಗೇರ ಬಗ್ಗೆ ಎಷ್ಟೊಂದು ವಿಷ್ಯ ಗೊತ್ತಾಯ್ತು ನೋಡಿದ್ರಾ? ದೇವೀನ ಒಳ್ಳೆ ಮನಸ್ಸಿಂದ ಪೂಜೆ ಮಾಡಿ, ಎಲ್ರೂ ಅವಳ ಕೃಪೆಗೆ ಪಾತ್ರರಾಗೋಣ!

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: