ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!
ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.
ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.
ಸಾಮಾನ್ಯವಾಗಿ ಕಲಿಬೇಕು ಅಂದ್ರೆ ಮಕ್ಕಳು ಎಲ್ರ ಥರ ಸ್ಕೂಲ್ಗೆ ಹೋಗ್ಲೇಬೇಕು ಅಂದ್ಕೋತಾರೆ ಅಪ್ಪ-ಅಮ್ಮ. ಆದ್ರೆ, ಮಗು ನಂಗೆ ಎಲ್ಲರ ಥರ ಕಲ್ಯಕ್ ಆಗಲ್ಲ; ನಂಗೆ ಅವ್ರು-ಇವ್ರು ಕಲೀತಾರೆ ನೀನ್ ಮಾತ್ರ ಕಲೀತಿಲ್ಲ ಅಂದ್ರೆ ಕಷ್ಟ ಆಗತ್ತೆ; ಸ್ಕೂಲಲ್ ಕಲ್ಸೋ ಎಷ್ಟೋ ವಿಷಯ ಬೋರ್ ಆಗತ್ತೆ ಅಂದ್ರೆ ಏನ್ ಗತಿ? ಗಾಬರಿ ಆಗ್ಬೇಡಿ, ಅಂಥ ಮಕ್ಕಳ್ಗಾಗೆ ಸರ್ಕಾರ ಶುರು ಮಾಡಿರೋ ಕಾರ್ಯಕ್ರಮದ ಬಗೆ ತಿಳಿಸ್ತೀವಿ. ಓದಿ...
1) ಮಕ್ಕಳು ಶಾಲೆ ಬಿಡಕ್ಕೆ ದುಡ್ಡೊಂದೇ ಕಾರಣ ಅಲ್ಲ
ತುಂಬಾ ಮಕ್ಕಳು ದುಡ್ಡಿಲ್ದೇನೋ, ಬೇರೆ ಯಾವ್ದೋ ಸಾಮಾಜಿಕ ಕಾರಣಕ್ಕೋ ಸ್ಕೂಲ್ ಬಿಡ್ತಿದ್ದಾರೆ. ಇನ್ನೂ ಕೆಲವ್ರು ಗಣಿತ, ವಿಜ್ಞಾನದಂಥ ಕಡ್ಡಾಯ ವಿಷಯ ಪಾಸಾಗ್ದೆ ಆಚೆ ಹೋಗ್ತಿದ್ದಾರೆ.
2) ಬಿಟ್ಟ ಮೇಲೆ ಮನಸ್ಸು ಬದ್ಲಾಯ್ತು ಅಂದರೆ ಏನ್ ಮಾಡೋದು ?
ಸ್ಕೂಲ್ ಒಂದ್ ಸರ್ತಿ ಬಿಟ್ಟ ಮೇಲೆ ಮತ್ತೆ ಸೇರ್ಕೊಳ್ಳೋದು ಅಷ್ಟು ಸುಲಭ ಅಲ್ಲ. ಹೆಚ್ಚಿನ ಓದಿಗಾಗಿ ಕಾಲೇಜು ಸೇರ್ಕೊಳ್ಳಕ್ಕೆ ಇನ್ನೂ ಪರದಾಡಬೇಕು. ಕೈಕಾಲು, ಆರೋಗ್ಯ ಎಲ್ಲ ಸರಿ ಇದ್ದು, ದುಡ್ಡು ಇದ್ದು, ದೊಡ್ಡ ಊರು ಹತ್ತಿರ ಇದ್ರೆ ಮಾತ್ರ ಹೇಗೋ ಓದು ಮುಗಿಸ್ಬೋದು. ಇಲ್ಲ ಅಂದ್ರೆ ಬೋ ಕಷ್ಟ.
3) ಸ್ಕೂಲ್ಗ್ ಹೋಗಿ ಓದಕ್ಕೆ ಆಗಲ್ಲ ಅನ್ನೋರ್ಗೆ ಅಂತಾನೇ ಸರ್ಕಾರ "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್" (NIOS) ತೆಗ್ದಿದೆ
ಹೀಗೆ, ಸ್ಕೂಲ್ ಬಿಟ್ಟೋರ್ಗೆ, ಸ್ಕೂಲ್ಗೆ ಸೇರ್ದೆ ಇರೋರ್ಗೆ, ಶಾಲೆಗಿಂತ ಬೇರೆ ರೀತಿ ಓದ್ಗೆ ಅವಕಾಶ ಮಾಡ್ಕೊಡ್ಬೇಕಿತ್ತು. ಇದಕ್ಕಾಗಿ ಓಪನ್ ಸ್ಕೂಲಿಂಗ್ ಎಂಬ ಬೇರೆ ಥರಾ ಕಲಿಸೋ ಯೋಜನೆ ಶುರು ಆಯ್ತು. ಇದೇ ಮುಂದೆ ೨೦೦೨ರಲ್ಲಿ "ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್"(NIOS) ಅಂತ ಹೊಸ ಹೆಸ್ರು ತೊಗೋತು.
4) ಬಲವಂತ, ಒತ್ತಾಯ ಇಲ್ದೆ ಈ ಥರ ಕಲಿಯೋದು ಎಷ್ಟು ಆರಾಮ್ ಅಲ್ವ?
ಸುಲಭವಾಗಿ ಅರ್ಥ ಆಗೋ ಅಂತ ರೀತಿ ಮತ್ತು ಒಳ್ಳೇ ಕಲಿಕೆ ಎಲ್ಲಾರ್ಗೂ ಸಿಗ್ಬೇಕು, ಬೇಕಾದೋರ್ಗೆಲ್ಲಾ ತಲುಪಬೇಕು ಅನ್ನೋದೊಂದೇ ಉದ್ದೇಶ. ಪಿ.ಯು.ಸಿ.ವರೆಗೆ ಮಕ್ಕಳು ತಂತಂ ಭಾಷೇಲೇ, ಯಾವುದೇ ಬಲವಂತ, ಒತ್ತಾಯ ಇಲ್ದೆ ಕಲಿಯಕ್ಕೆ ಇರೋ ಒಳ್ಳೆ ಅವಕಾಶ.
5) ನಮ್ಗೆ ಇಷ್ಟವಾದ 5 ವಿಷಯ ಆಯ್ಕೆ ಮಾಡ್ಕೋಬೋದು. ಅಂದ್ರೆ, ಸ್ಕೂಲಲ್ ಕಲಿಸೊ ಯಾವ್ದಾದ್ರೂ ವಿಷಯ ಬೇಡ ಅನ್ಸಿದ್ರೆ ಕೈ ಬಿಡ್ಬೋದು !
ಸ್ಕೂಲಲ್ಲಿ ಬಲವಂತವಾಗಿ 6 ವಿಷಯ ಕಲೀಬೇಕು ಅನ್ನದು ಮಾಮೂಲಿ ಆದ್ರೆ, ಇಲ್ಲಿ ಯಾವ್ದಾದ್ರೂ 5 ವಿಷಯಾನ ಆರಿಸ್ಕೊಬೋದು—ಒಂದು ಭಾಷೆ ಕಡ್ಡಾಯ, ಬೇಕು ಅನ್ಸಿದ್ರೆ ಎರಡು ತೊಗೋಬೋದು. ಜಾಸ್ತಿ ವಿಷಯ ಬೇಕು ಅಂದ್ರೂನೂ ಕಲೀಬೋದು. ಮಧ್ಯೆ ಬೋರಾದ್ರೆ ಬದ್ಲಾಯಿಸ್ಕೋಬೋದು. ಯಾವ್ದು ಸುಲಭಾನೋ ಅದ್ರಲ್ಲಿ ಪರೀಕ್ಷೇಗೆ ಕೂತ್ಕೋಬೋದು.
6) ಮೂರು ಹಂತದಲ್ಲಿ ಈ ಕಾರ್ಯಕ್ರಮ ನಡೆಯತ್ತೆ. ಜೀವನೋಪಾಯಕ್ಕಾಗಿ ಏನು ಬೇಕೋ ಅದನ್ ಕಲಿಯೋ ಅವಕಾಶಾನೂ ಇರುತ್ತೆ.
NIOS ಕಾರ್ಯಕ್ರಮ ಹೀಗಿರುತ್ತೆ, ನೋಡಿ: 3, 5 ಮತ್ತು 8ನೇ ತರಗತಿಗೆ ಸಮವಾಗಿ 3 ಹಂತ ಇರುತ್ತೆ. 4 ಎಸ್.ಎಸ್.ಎಲ್.ಸಿ. ಮತ್ತೆ, 5 ಪಿ.ಯು.ಸಿ. ಪ್ರತಿ ಹಂತ ದಾಟಿದ್ದಕ್ಕೆ NIOS ಪರೀಕ್ಷೆ ಮಾಡಿ, ಪಾಸಾದ್ರೆ ಪ್ರಮಾಣಪತ್ರಾನೂ ಕೊಡತ್ತೆ. ಈ ಪ್ರಮಾಣಪತ್ರಕ್ಕೆ ಬೇರೆ ಬೋರ್ಡ್ಗಳ ಪ್ರಮಾಣಪತ್ರದಷ್ಟೇ ಪವರ್ರು.
7) ಆನ್ಲೈನ್ ಮೂಲಕ ಕೋರ್ಸ್ ಸೇರ್ಬೋದು, ಒಂದು ಕೋರ್ಸ್ ಮುಗ್ಸಕ್ಕೆ 5 ವರ್ಷ ಸಮಯ ಇದೆ, ಪಾಸ್ ಮಾಡೋಕೆ ಬೇಜಾನ್ ಅವಕಾಶ ಇದೆ.
ಈ ಕಾರ್ಯಕ್ರಮನ್ನ ನಡೆಸೋ ರೀತೀನೂ ಬೇರೇನೇ: ಮಾಧ್ಯಮಗಳ ಮೂಲಕ ಪುಕ್ಕಟೆ ಕಲಿಸೋ ಕಾರ್ಯಕ್ರಮಗಳು ಇರತ್ತೆ. ನೀವ್ ಕಲೀತಿದ್ದೀರೋ ಇಲ್ವೋ ಅಂತ ನೀವೆ ಕಂಡ್ಕೋಬೋದು. ನೀವ್ ಬೇಕು ಅಂದ್ರೆ, ಓದ್ಗೆ ಬೇಕಾಗೋ ಪುಸ್ತಕ, ವೀಡಿಯೋ, ಆಡಿಯೋ ಎಲ್ಲ NIOS ಪೂರೈಸತ್ತೆ. ಕನ್ನಡ್ದೋರಿಗೆ ಇದೆಲ್ಲ ಬರೀ ಇಂಗ್ಲೀಷಲ್ ಸಿಗತ್ತೆ. ಆದ್ರೆ ಎಸ್.ಎಸ್.ಎಲ್.ಸಿ. ಮತ್ತೆ ಪಿ.ಯು.ಸಿ. ಪರೀಕ್ಷೇನ ಮಾತ್ರ ಇಂಗ್ಲಿಷಲ್ಲೇ ಬರೀಬೇಕು ಅಂತಿಲ್ಲ, ಕನ್ನಡದಲ್ಲೂ ಬರೀಬೋದು.
8) ಪರೀಕ್ಷೆ ಹೇಗಿರತ್ತೆ ಅಂದ್ರೆ, ಮಕ್ಕಳು ಎಲ್ಲಾ ವಿಷಯಾನು ಒಂದೇ ಸಲ ಬರ್ದು ಮುಗಿಸ್ಬೇಕು ಅಂತೇನಿಲ್ಲ.
ವರ್ಷಕ್ಕೆ ಎರ್ಡು ಸರ್ತಿ ಪರೀಕ್ಷೆ ನಡೆಸ್ತಾರೆ. ಬೇಕು ಅನ್ನಿಸಿದಾಗ, ನಾನು ತಯಾರಾಗಿದೀನಿ ಅನ್ನಿಸ್ದಾಗ ಪರೀಕ್ಷೆಗ್ ಕೂತ್ಕೋಬೋದು. ಪಾಸಾಗಕ್ಕೆ 33% ಬೇಕೇ ಬೇಕು. ಆದ್ರೆ, ಜಾಸ್ತಿ ಬರ್ಬೇಕು ಅಂತ ಅನ್ಸಿದ್ರೆ ಮತ್ತೆ-ಮತ್ತೆ ಪರೀಕ್ಷೆ ತೊಗೋಬೋದು.