http://s.ndtvimg.com/images/content/2016/apr/806/pv-sindhu-loses-in-indian-open.jpg?downsize=764:573&output-quality=80&output-format=jpg

ಕಂಚು ಗೆದ್ದ ಸಾಕ್ಷಿ ಮಲಿಕ್ಗೆ ಕೋಚಿಂಗ್ ಕೊಟ್ಟಿದ್ದು ನಮ್ಮ ಕನ್ನಡಿಗನಂತೆ.  ನಟ ದರ್ಶನ್ ಮತ್ತೆ ಮಾಜಿ ಮಿನಿಸ್ಟ್ರು ಶಾಮನೂರು ಮನೆ ಒತ್ತುವರಿ ಆಗಿದೆಯಂತೆ? KSRTC ಬಿಟ್ಟಿದೆ ಲಕಲಕ ಅಂತ ಹೊಳೆಯೋ ಹೈಟೆಕ್ ಬಸ್ಸು..ಇನ್ನಷ್ಟು ಸುದ್ದಿಗಳಿದ್ದಾವೆ ನಿಮಗಾಗಿ.

1. ರಿಯೋ ಒಲಂಪಿಕ್ಸಲ್ಲಿ ಭಾರತಕ್ಕೆ ಇನ್ನೊಂದು ಪದಕ ಸಿಕ್ಕಿದೆ

ರಿಯೊ ಡಿ ಜನೈರೊ, ಆ.18 : ಭಾರತಕ್ಕೆ ಇನ್ನೊಂದು ಪದಕ ಸಿಗೋದು ಗ್ಯಾರಂಟಿಯಾಗಿದೆ. ಬ್ಯಾಡ್ಮಿಂಟನ್ ಸೆಮಿಫೈನಲಲ್ಲಿ  ಪಿ.ವಿ. ಸಿಂಧು 21–19, 21–10 ಪಾಯಿಂಟುಗಳಿಂದ ಜಪಾನಿನ ನೊಜುಮಿ ಒಕುಹರಾರನ್ನ ಸೋಲಿಸಿದ್ದಾರೆ.  ಅವರಿಗೆ ಬೆಳ್ಳಿ ಪದಕ ಸಿಗೋದು ಗ್ಯಾರಂಟಿಯಾಗಿದೆ. ಪ್ರಜಾವಾಣಿ ಪ್ರಕಾರ ಅವರು ಈ ಹೊತ್ತು (ಆ.18) ಸಂಜೆ 7.30ಕ್ಕೆ ನಡೆಯುವ ಫೈನಲಲ್ಲಿ ಗೆದ್ರೆ ಚಿನ್ನ ಗ್ಯಾರಂಟಿ.

2. ಕಂಚು ಗೆದ್ದ ಸಾಕ್ಷಿ ಮಲಿಕ್ಗೆ ಕೋಚಿಂಗ್ ಕೊಟ್ಟಿದ್ದು ನಮ್ಮ ಕನ್ನಡಿಗನಂತೆ

ಬೆಂಗಳೂರು, ಆ.18: ಹೆಂಗಸರ ಕುಸ್ತಿ ಆಟದಲ್ಲಿ ಕಂಚು ಗೆದ್ದಿರೋ ಸಾಕ್ಷಿ ಮಲಿಕ್ಗೆ ಕೋಚಿಂಗ್ ಕೊಟ್ಟಿರೋದು ನಮ್ಮ ಕನ್ನಡಿಗ ಅಂತ ಕನ್ನಡಪ್ರಭದಲ್ಲಿ ಬರೆದಿದ್ದಾರೆ. ನಮ್ಮ ರಾಜ್ಯದ ಶ್ಯಾಮ್ ಬುಡಕಿ ಟ್ರೈನಿಂಗ್ ಕೊಟ್ಟಿದ್ದಾರಂತೆ. ರಿಯೋ ಒಲಂಪಿಕ್ಸಿಗೆ ಸೆಲೆಕ್ಟ್ ಆಗಿರೋ ಕುಸ್ತಿಪಟುಗಳಿಗೆ ಲಖನೌದಲ್ಲಿ ಶ್ಯಾಮ್ ಟ್ರೈನಿಂಗ್ ಕೊಟ್ಟಿದ್ದಾರಂತೆ.
 

3. ನಟ ದರ್ಶನ್ ಮತ್ತೆ ಮಾಜಿ ಮಿನಿಸ್ಟ್ರು ಶಾಮನೂರು ಮನೆ ಒತ್ತುವರಿ ಮಾಡ್ಕೊಂಡಿದ್ದಾರಂತೆ?

ಬೆಂಗಳೂರು, ಆ.18: ನಟ ದರ್ಶನ್ ಮತ್ತೆ ಮಾಜಿ ಮಿನಿಸ್ಟ್ರು ಶಾಮನೂರು ಶಿವಶಂಕರಪ್ಪ ರಾಜಕಾಲುವೇನ ಒತ್ತುವರಿ ಮಾಡಿಕೊಂಡು ಮನೆ ಕಟ್ಟಿದ್ದಾರೆ ಅಂತ ಕನ್ನಡಪ್ರಭದಲ್ಲಿ ಹಾಕಿದ್ದಾರಪ್ಪ. ರಾಜರಾಜೇಶ್ವರಿನಗರದಲ್ಲಿ ಸೈಟ್ ತಗೊಂಡು ಅಲ್ಲಿ ಮನೆ ಕಟ್ಟಿಸಿದ್ದರು ದರ್ಶನ್. ಅಲ್ಲಿ ರಾಜಕಾಲುವೆ ಒತ್ತುವರಿಯಾಗಿದೆಯಂತೆ. ಈಗ ಬಿಬಿಎಂಪಿ ಅವರ ಮನೇನ ಕೆಡವೋ ಛಾನ್ಸ್ ಇದೆಯಂತೆ. 
 

4. ಲಕಲಕ ಅಂತ ಹೊಳೆಯೋ ಹೈಟೆಕ್ ಬಸ್ನ KSRTC ಬಿಟ್ಟಿದೆ

ಬೆಂಗಳೂರು, ಆ.18: ಅದೇ ಕೆಂಪು ಕಲರ್ ಬಸ್ಸನ್ನ ನೋಡಿನೋಡಿ ಸಾಕಾಗಿತ್ತಾ? KSRTC ಈಗ ಹೊಸ 637 ಹೈಟೆಕ್ ಬಸ್ಸು  ಬಿಟ್ಟಿದೆ ನೋಡಿ.  ಸಿಎಂ ಸಿದ್ದರಾಮಯ್ಯ ಈ ಬಸ್ಸನ್ನ ವಿಧಾನಸೌಧದ ಮುಂದುಗಡೆ ಹಸಿರು ಕಲರ್ ಬಾವುಟ ತೋರಿಸಿ ರಿಲೀಸ್ ಮಾಡಿದ್ದಾರೆ. ಈ ಬಸ್ಸಲ್ಲಿ ಸಿಸಿಟಿವಿ ಕ್ಯಾಮೆರಾ, ಸ್ಟಾಪ್ ಬಟನ್, ಡೋರ್ ಕ್ಲೋಸ್ ಆದ್ರಷ್ಟೇ ಬಸ್ಸು ಮೂವ್ ಆಗೋ ಫೆಸಿಲಿಟಿ…ಇನ್ನೂ ಏನೇನೋ ಅನುಕೂಲಗಳು ಇವೆಯಂತೆ.   

5. ಕೆಆರ್‍ಎಸ್ ಡ್ಯಾಮಿಂದ ನೀರು ಬಿಡ್ತಾರೋ ಇಲ್ವೋ ಅಂತ ರೈತರು ಕಂಗಾಲಾಗಿದ್ದಾರೆ

ಮಂಡ್ಯ, ಆ.18: ತಿಂಗಳಲ್ಲಿ 20 ದಿನ ನಾಲೆಗೆ ನೀರು ಬಿಡ್ತೀವಿ, ಇನ್ನ 10 ದಿನ ಬಂದ್ ಮಾಡ್ತೀವಿ ಅಂತ ಹೇಳಿದ್ರಂತೆ. ಆದರೆ ಈ ನೀರನ್ನೇ ನಂಬಿಕೊಂಡಿರೋ ರೈತರು ಮುಂದಿನ ದಿನಗಳಲ್ಲಿ ನೀರು ಬಿಡ್ತಾರೋ ಇಲ್ವೋ ಅಂತ ಕಂಗಾಲಾಗಿದ್ದಾರೆ. ಆಗಸ್ಟ್‌ 17ರ ತನಕ ಜಿಲ್ಲೆಯಲ್ಲಿ ಬರೀ ಶೇ 13.2ರಷ್ಟು ಜಮೀನಲ್ಲಿ ಮಾತ್ರ ಬಿತ್ತನೆ ಮಾಡಿದ್ದಾರೆ ಅಂತ ಪ್ರಜಾವಾಣಿಲಿ ನ್ಯೂಸ್ ಹಾಕಿದ್ದಾರೆ. 

6. "ವಿಷ್ಣುವರ್ಧನ್‍ ಅಂತ ಆಕ್ಟರ್ ಏನಲ್ಲ" – ರಾಮ್‍ಗೋಪಾಲ್ ವರ್ಮಾ

ಮುಂಬೈ, ಆ.18: ಇರಲಾರದೆ ಮೈಮೇಲೆ ಇರುವೆ ಬಿಟ್ಕೊಂಡ್ರು ಅಂತಾರಲ್ಲ ಆ ತರಹ ಆಗಿದೆ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಪರಿಸ್ಥಿತಿ. ಈ ತರಹ ಏನೋ ಒಂದು ಕಿರಿಕ್ ಮಾಡ್ಕೊಳ್ಳೊದ್ರಲ್ಲಿ ವರ್ಮಾ ನಿಸ್ಸೀಮ. ”ಸುದೀಪ್ ಆಕ್ಟಿಂಗ್ ಮಾಡಿರೋ ’ಕೋಟಿಗೊಬ್ಬ 2’ ಸಿನಿಮಾ ನೋಡ್ದೆ. ಇಷ್ಟ ಆಯ್ತು. ಆದರೆ ಸುದೀಪ್‍ಗೆ ಹೋಲಿಸಿದರೆ ವಿಷ್ಣುವರ್ಧನ್ ಅಂತ ನಟನೇನಲ್ಲ” ಅಂತ ಟ್ವೀಟ್ ಮಾಡಿ ವಿಷ್ಣು ದಾದಾ ಅಭಿಮಾನಿಗಳನ್ನ ಎದ್ರಾಕ್ಕೊಂಡಿದ್ದಾನೆ ಅಂತ ಪ್ರಜಾವಾಣೀಲಿ ಬರೆದಿದ್ದಾರೆ.   

7. ರಕ್ಷಾಬಂಧನದ ದಿವಸ ಬೆಂಗಳೂರಿನ ಬಸವನಗುಡಿಯಲ್ಲಿ ಗಿನ್ನೆಸ್ ದಾಖಲೆ ಆಗಿದೆ

ಬೆಂಗಳೂರು, ಆ.18: ನೆನ್ನೆ ಬೆಂಗಳೂರಿನಲ್ಲಿ ರಕ್ಷಾಬಂಧನ ಹಬ್ಬಾನ ಜೋರಾಗಿಯೇ ಸೆಲೆಬ್ರೇಟ್ ಮಾಡ್ಕೊಂಡಿದ್ದಾರೆ. ಎಷ್ಟು ಜೋರಾಗಿ ಅಂದ್ರೆ ಈ ಸಲ ಗಿನ್ನಿಸ್ ದಾಖಲೇನೆ ಮಾಡ್ಬಿಟ್ಟಿದ್ದಾರೆ ಅಣ್ಣತಂಗಿ. 413 ಅಣ್ಣಂದಿರು ಅಷ್ಟೇ ತಂಗೀರು ಒಂದೇ ಸಲ ರಾಖಿ ಕಟ್ಟಿಸಿಕೊಂಡು ಈ ದಾಖಲೆ ಮಾಡಿದ್ದಾರೆ. ಬಸವನಗುಡಿ ನ್ಯಾಶನಲ್ ಹೈಸ್ಕೂಲು ಮೈದಾನದಲ್ಲಿ ಇದು ನಡೀತು ಅಂತ ಆಲ್ ಇಂಡಿಯಾ ರೇಡಿಯೋ ನ್ಯೂಸ್ ಫೇಸ್‍ಬುಕ್ಕಲ್ಲಿ ಹಾಕಿದೆ. 

8. ಕಾಡ್ನಲ್ಲಿ ಜಾಸ್ತಿ ದಿನ ಬದುಕಿದ ’ಮಚ್ಲಿ’ ಅನ್ನೋ ಹುಲಿ ಸತ್ತುಹೋಗಿದೆ

ರಣತಂಬೋರ್, ಆ.18: ಕಾಡಿನಲ್ಲಿ ಜಾಸ್ತಿ ವರ್ಷ ಬದುಕಿದ (19 ವರ್ಷ) ಹೆಣ್ಣು ಹುಲಿ ಅಂತ ಕರೆಸಿಕೊಂಡಿರೋ 'ಮಚ್ಲಿ' ಗುರುವಾರ ಸತ್ತುಹೋಗಿದೆ. ಇದನ್ನ 'ರಣತಂಬೋರಿನ ರಾಣಿ' ಅಂತ್ಲೇ ಕರೀತಿದ್ರಂತೆ. ಪಾಪ ಒಂದು ವಾರದಿಂದ ಹುಷಾರಿರಲಿಲ್ಲವಂತೆ ಅಂತ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೇಲಿ ಹಾಕ್ಕಿದ್ದಾರೆ.  
 

9. ಸುಷ್ಮಾ ಸ್ವರಾಜ್‌ಗೆ ವಾಷಿಂಗ್ಟನ್ ಪೋಸ್ಟ್ ಎರ್ರಾಬಿರ್ರಿ ಹೊಗಳಿಬಿಟ್ಟಿದೆ

ನ್ಯೂಡೆಲ್ಲಿ, ಆ.18: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನ ವಾಷಿಂಗ್ಟನ್ ಪೋಸ್ಟ್ ’ಸೂಪರ್ ಮಾಮ್’ ಅಂತ ಹೊಗಳಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರೋ ಸುಷ್ಮಾ ಅಲ್ಲಿಂದ್ಲೇ ಜನ್ರ ಸಮಸ್ಯೆಗಳನ್ನ ಪರಿಹರಿಸ್ತಿದ್ದಾರೆ. ಜಗತ್ತಿನಲ್ಲಿ ಬೇರೆ ಯಾವ ಫಾರಿನ್ ಮಿನಿಸ್ಟ್ರು ಇಷ್ಟು ಆಕ್ಟೀವ್ ಆಗಿಲ್ಲ ಅಂತ ಕೊಂಡಾಡಿದೆ. ಬೇಕಿದ್ರೆ ಉದಯವಾಣಿ ನ್ಯೂಸ್ ನೋಡಿ.