ಈಗಿರೋ‌ ಕೆಲಸ ಬಿಡದೆ ಒಂದು ಒಳ್ಳೇ ಸೈಡ್ ಬಿಸಿನೆಸ್ ಶುರು ಮಾಡೋ ಆಸೆ ಇದ್ರೆ ಹೀಗ್ ಮಾಡಿ

ನಿಮ್ಮ ಬಾಸ್ ನೀವೇ ಆದ್ರೆ ಚಿಂದಿ ಅಲ್ವಾ?

ಒಂದು ಕೆಲಸ ಮಾಡ್ತಿರುವಾಗ ಇನ್ನೊಂದು ಸೈಡ್ ಬಿಸಿನೆಸ್ ಶುರು ಮಾಡೋದು ಸುಲಭದ ಕೆಲಸ ಅಲ್ಲ, ಆದರೆ ಮಾಡಬಹುದು. ಎಷ್ಟೋ ಜನ ಮಾಡಿರೋರಿದಾರೆ. ಇದನ್ನ ಹೇಗೆ ಮಾಡೋದು ಅನ್ನಕ್ಕೆ ಒಂದು ಉತ್ತರ ಅಂತ ಇಲ್ಲ… ಒಬ್ಬೊಬ್ಬರಿಗೆ ಒಂದೊಂದ್ ಉತ್ತರ. ಆದರೆ ಕೆಳಾಗೆ ಕೊಟ್ಟಿರೋ‌ ಹೆಜ್ಜೆಗಳ್ನ ಹಾಕ್ತಾ ಹೋದರೆ ನಿಮ್ಮ ಬಾಸ್ ನೀವೇ ಆಗೋ ದಿನ ಬಂದೇ ಬರುತ್ತೆ…

1. ಸೈಡ್ ಬಿಸಿನೆಸ್ ಶುರು ಮಾಡೇ ಮಾಡ್ತೀನಿ ಅಂತ ನಿಮ್ಮ ಮನಸ್ಸಲ್ಲಿ ಗಟ್ಟಿ ಮಾಡ್ಕೊಳಿ

ಹೀಗ್ ಯಾಕ್ ಹೇಳ್ತಿದೀವಿ ಅಂದ್ರೆ ನೀವು ಮಾಡಕ್ಕೆ ಹೊರಟಿರೋ ಕೆಲಸ ಸುಲಭದ್ದಲ್ಲ. ನಿಮ್ಮ ಮನೆಯೋರ್ಗೆ ನೀವು ಈಗ ಕೊಡುವಷ್ಟು ಸಮಯ ಕೊಡಕ್ಕಾಗಲ್ಲ. ಹಲವಾರು ಕಷ್ಟದ ತೀರ್ಮಾನಗಳ್ನ ನೀವು ತೊಗೋಬೇಕಾಗುತ್ತೆ. ಆದ್ದರಿಂದ ಮೊದಲು ಮಾಡೇ ಮಾಡಬೇಕು ಅನ್ನೋ ತೀರ್ಮಾನ ತೊಗೊಳ್ಳಿ. ಆಮೇಲೆ ಒಂದು ವಾರದಲ್ಲಿ ನಿಮ್ಮ ಸಮಯ ಎಲ್ಲೆಲ್ಲಿ ಹೋಗ್ತಿದೆ ಅಂತ ಲೆಕ್ಕ ಹಾಕಿ. ಎಲ್ಲಿ ನೀವು ಸಮಯ ಉಳಿಸಬಹುದು ಅಂತ ನೋಡ್ಕೊಳಿ. ಟೀವಿ ನೋಡೋದು, ಫೇಸ್ಬುಕ್ ಗೀಸ್ಬುಕ್ಕಲ್ಲಿ ಸಮಯ ಕಳೆಯೋದು… ಇದನ್ನೆಲ್ಲ ಕಡಿಮೆ ಮಾಡ್ಕೋಬೋದಾ ನೋಡಿ. ಎಷ್ಟು ಸಮಯ ಉಳಿಸಕ್ಕಾಗತ್ತೋ ಅಷ್ಟು  ಬೇಗ ನಿಮ್ಮ ಕನಸು ನನಸಾಗುತ್ತೆ.

2. ನಿಮ್ಮ ಕೈಯಲ್ಲಿ ಏನಾಗುತ್ತೆ ಏನಾಗಲ್ಲ ಅಂತ ಸ್ಪಷ್ಟವಾಗಿ ತಿಳ್ಕೊಳಿ

ನಿಮ್ಮ ಹೊಸ ಬಿಸಿನೆಸ್ಗೆ ಯಾವ ಯಾವ ಸಾಮರ್ಥ್ಯಗಳು ಬೇಕು? ನಿಮಗೆ ಆ ಸಾಮರ್ಥ್ಯಗಳೆಲ್ಲ ಇದ್ಯಾ? ಇಲ್ಲದೆ ಹೋದರೆ ನಿಮಗೆ ಕಲಿಯಕ್ಕೆ ಸಮಯ ಬೇಕು. ಅಥವಾ ಅದು ಯಾರಿಗೆ ಬರತ್ತೋ ಅವರ ಕೈಯಲ್ಲಿ ಮಾಡಿಸ್ಕೋಬೇಕು. ಅವರಿಗೆ ಕೊಡಕ್ಕಾಗುವಷ್ಟು ದುಡ್ಡಿದ್ಯಾ ನಿಮ್ಮ ಹತ್ತಿರ? ಇದನ್ನೆಲ್ಲ ಯೋಚನೆ ಮಾಡಿ.

ಮೂಲ

3. ನಿಮ್ಮ ಬಿಸಿನೆಸ್ ಐಡಿಯಾ ಕೆಲಸ ಮಾಡೋ ಸಾಧ್ಯತೆ ಎಷ್ಟಿದೆ ಅಂತ ಜನರನ್ನ ಕೇಳಿ ತಿಳ್ಕೊಳಿ

ಎಷ್ಟೋ ಜನ ಹೊಸ ಬಿಸಿನೆಸ್ ಶುರು ಮಾಡ್ತೀನಿ ಅಂತ ಮಾಡಿಬಿಡ್ತಾರೆ, ಆದರೆ ಅವರು ಏನ್ ಮಾರಕ್ಕೆ ಹೊರಟಿರ್ತಾರೋ ಅದು ಜನರಿಗೆ ಬೇಕಗೇ ಇರಲ್ಲ! ಆದ್ದರಿಂದ ನೀವು ಪ್ಲಾನ್ ಮಾಡುವಾಗ ಮೊದಲು ನಿಮ್ಮ ಐಡಿಯಾ ಕೆಲಸ ಮಾಡುತ್ತಾ ಅಂತ ಕಂಡ್ ಹಿಡೀರಿ. ನೀವು ಏನ್ ಮಾರಕ್ಕೆ ಹೊರಟಿದೀರೋ ಅದು ಜನರಿಗೆ ಬೇಕಾ? ಎಂಥ ಜನರಿಗೆ ಬೇಕು? ಅವರನ್ನ ಮಾತಾಡಿಸಿ. ಅದು ಬಿಟ್ಟು ನಾನು ಮಾಡಿದ್ಮೇಲೆ ಚೆನ್ನಾಗಿ ಇದ್ದೇ ಇರುತ್ತೆ ಅನ್ಕೋಬೇಡಿ. ಇಲ್ಲಿ ಎಡವಿದರೆ ನಿಮ್ಮ ಹೊಸ ಬಿಸಿನೆಸ್ ಜಪ್ಪಯ್ಯ ಅಂದ್ರೂ ಉದ್ಧಾರ ಆಗಲ್ಲ.

4. ಜನರಿಗೆ ಬೇಕಾಗಿರೋದು ಏನಾದರೂ ಹೊಸದು ಮಾಡಿ

ನಿಮ್ಮ ಬಿಸಿನೆಸ್ಗೂ ಈಗಾಗಲೇ ಇರೋ ಬಿಸಿನೆಸ್ಗಳಿಗೂ ಏನಾದರೂ ವ್ಯತ್ಯಾಸ ಇರಬೇಕು. ಅಷ್ಟೇ ಅಲ್ಲ, ಆ ವ್ಯತ್ಯಾಸ ಜನರಿಗೆ ತುಂಬ ಇಷ್ಟ ಆಗಬೇಕು, ಅದಕ್ಕೆ ಅವರು ದುಡ್ಡು ಕೊಡಕ್ಕೆ ರೆಡಿ ಇರಬೇಕು. ಆಗಲೇ ಅದು ನಿಮ್ಮ ಬಿಸಿನೆಸ್ ಅನ್ನಿಸಿಕೊಳೋದು, ಮತ್ತೆ ಉದ್ಧಾರ ಆಗೋದು! ನಿಮಗೆ ಬೆಲೆ ಕಡಿಮೆ ಮಾಡಕ್ಕಾಗುತ್ತಾ? ಹೊಸ ತಂತ್ರಜ್ಞಾನ ಅಳವಡಿಸಕ್ಕಾಗುತ್ತಾ? ಹೊಸ ಸಾಧ್ಯತೆಗಳ್ನ ತೆರ್ಕೊಳೋಹಂಗೆ ಮಾಡಕ್ಕಾಗುತ್ತಾ? ಎನು ಹೊಸದು ಮಾಡ್ತೀರಿ? ಇದರ ಬಗ್ಗೆ ಎಲ್ಲ ಯೋಚನೆ ಮಾಡಬೇಕಾದರೆ ನಿಮಗೆ ನೀವೇ ಸುಳ್ಳು ಹೇಳ್ಕೋಬೇಡಿ. ಇಲ್ಲಾಂದ್ರೆ ಆಮೇಲೆ ಕಷ್ಟ ಆಗುತ್ತೆ.

ಮೂಲ

5. ಅಳೆಯಕ್ಕೆ ಮತ್ತೆ ಮುಟ್ಟಕ್ಕೆ ಆಗುವಂಥ ಗುರಿಗಳ್ನ ಇಟ್ಕೊಳಿ

ನಿಮ್ಮ ಬಿಸಿನೆಸ್ನ ಹೆಂಗ್ ನಡೆಸ್ತೀರಿ ಅನ್ನೋದು ನಿಮಗೆ ಗೊತ್ತಿರಬೇಕು. ಗುರಿ ಅಂತ ಇಲ್ಲದೆ ಹೋದ್ರೆ, ಅಥವಾ ಅದನ್ನ ಅಳೆಯಕ್ಕಾಗದೆ ಹೋದ್ರೆ, ಅಥವಾ ನಿಮ್ಮ ಕೈಯಲ್ಲಿ ಮುಟ್ಟಕ್ಕೇ‌ ಆಗದೆ ಹೋದ್ರೆ ನಿಮ್ಮ ಬಿಸಿನೆಸ್ ಉದ್ಧಾರ ಆಗಲ್ಲ. ಅದಕ್ಕೇ ಪ್ರತಿದಿನದ ಗುರಿಗಳು, ಪ್ರತಿ ವಾರದ ಗುರಿಗಳು, ಪ್ರತಿ ತಿಂಗಳ ಗುರಿಗಳು ಅಂತ ಇರಬೇಕು.

6. ಹೇಗೆ ಶುರು ಮಾಡ್ತೀರಿ, ಶುರು ಆದಮೇಲೆ ಏನ್ ಮಾಡ್ತೀರಿ ಅನ್ನೋದು ಸ್ಪಷ್ಟವಾಗಿರಬೇಕು

ಗುರಿಗಳ್ನ ಹಾಕ್ಕೊಂಡ್ರೆ ಕೆಲಸ ಆಗೋಗಲ್ಲ. ಆ ಗುರಿಗಳ್ನ ಮುಟ್ಟಕ್ಕೆ ಎನೇನ್ ಮಾಡ್ತೀರಿ? ಬಿಸಿನೆಸ್ ಶುರು ಆದಮೇಲೆ ಏನೇನ್ ಮಾಡ್ತೀರಿ? ಇದರ ಬಗ್ಗೆಯೆಲ್ಲ ಆಳವಾಗಿ ಯೋಚನೆ ಮಾಡಿ. ಇದನ್ನ ನಿಮ್ ಬಿಟ್ರೆ ಬೇರೆ ಯಾರಿಗೂ ಮಾಡಕ್ಕಾಗಲ್ಲ. ನೆನಪಿಡಿ: ನೀವು ಇವತ್ತು ಏನೇ ಪ್ಲಾನ್ ಮಾಡಿದರೂ ನಾಳೆ ಅದು ನಡಿಯದೆ ಇರಬಹುದು. ಯಾಕಂದ್ರೆ ಪರಿಸ್ಥಿತಿ, ವಾತಾವರಣ ಎಲ್ಲಾ ಬದಲಾಗ್ತಾನೇ ಇರುತ್ತೆ. ಆದ್ದರಿಂದ ನೀವು ಎನೇ ಬಂದರೂ ಅದನ್ನ ನಿಮ್ಮ ಪ್ಲಾನಲ್ಲಿ ಅಳವಡಿಸಿಕೊಳ್ಳೊ ಕಲೆನೂ ಕಲಿತುಕೊಳ್ಳಬೇಕು. ನೀವು ಶುರು ಮಾಡಬೇಕು ಅಂತಿರೋ ಬಿಸಿನೆಸ್ ನಿಮಗೆ ನಿಜವಾಗಲೂ ತುಂಬ ಇಷ್ಟವಾದರೆ ಇದನ್ನೆಲ್ಲ ಮಾಡೇ ಮಾಡ್ತೀರಿ.

ಮೂಲ

7. ನಿಮಗೆ ಆಗದೆ ಇರೋ ಕೆಲಸ ಬೇರೆಯೋರ ಕೈಯಲ್ಲಿ ಮಾಡಿಸಿ

ನಿಮಗೆ ಯಾವ ಕೆಲಸವನ್ನ ಚೆನ್ನಾಗಿ… ಎಲ್ಲರಿಗಿಂತ ಚೆನ್ನಾಗಿ ಮಾಡಕ್ಕಾಗುತ್ತೋ ಅದನ್ನ ಮಾತ್ರ ನೀವು ಮಾಡಬೇಕು. ಮಿಕ್ಕಿದ್ದನ್ನ ಬೇರೆಯೋರ ಕೈಯಲ್ಲಿ ಮಾಡಿಸಬೇಕು. ಎಲ್ಲಾ ನಾನೇ ಮಾಡ್ತೀನಿ ಅಂತ ಹೊರಟರೂ ಕಷ್ಟ, ಎಲ್ಲಾ ಕೊಟ್ಟು ಮಾಡಿಸ್ತೀನಿ ಅಂದರೂ ಕಷ್ಟ. ಅದಕ್ಕೇ ಹೇಳಿದ್ದು… ಸರಿಯಾಗಿ ಯೋಚನೆ ಮಾಡಿ ಮಾಡಬೇಕು ಅಂತ.

8. ನಿಮ್ಮ ವಸ್ತು ಅಥವಾ ಸೇವೆ ಜನರಿಗೆ ಇಷ್ಟ ಆಗ್ತಿದ್ಯಾ ಅಂತ ತಿಳ್ಕೊಳಿ

ಜನರಿಗೆ ಉಪಯೋಗ ಆಗುವಂಥ ವಸ್ತು ಅಥವಾ ಸೇವೆ ಮಾರೋದೇ ನಿಮ್ಮ ಮೊಟ್ಟಮೊದಲ ಗುರಿ. ಆದ್ದರಿಂದ ಜನರನ್ನೇ ಕೇಳಿ. ಮುಲಾಜಿಲ್ಲದೆ ಅವರಿಗೇನನ್ನಿಸುತ್ತೆ ಅದನ್ನ ಹೇಳಕ್ಕೆ ಹೇಳಿ. ಇದನ್ನ ಆದಷ್ಟು ಬೇಗ ಮಾಡಿ, ಮಾಡ್ತಾನೇ ಇರಿ. ಎಂದಿಗೂ ನಿಲ್ಲಿಸಬೇಡಿ. ಈಗ ಫೇಸ್ಬುಕ್, ಟ್ವಿಟರ್ ಮುಂತಾದ ಕಡೇನೂ ನೀವು ಸರ್ವೇಗಳ್ನ ಮಾಡಬಹುದು. ಅದನ್ನೆಲ್ಲ ಉಪಯೋಗಿಸಿಕೊಳ್ಳಿ.

ಮೂಲ

9. ಹೊಸ ಬಿಸಿನೆಸ್ಗೂ ಈಗಿನ ಕೆಲಸಕ್ಕೂ ವ್ಯತ್ಯಾಸ ಚೆನ್ನಾಗಿ ನೆನಪಿಟ್ಟುಕೊಳ್ಳಿ

ಈಗ ನೀವಿರೋ ಕಂಪನಿ ಥರದ್ದೇ‌ ಇನ್ನೊಂದು ಕಟ್ಟೋದು ಸುಲಭ ಅನ್ನಿಸಬಹುದು, ಆದರೆ ಹಾಗೆ ಮಾಡಿದರೆ ಕಾನೂನಿನ ತೊಂದರೆಗಳು ಏಳಬಹುದು. ಅಷ್ಟೇ ಅಲ್ಲ, ಈಗಿನ ಕೆಲಸದಲ್ಲಿ ನಿಮ್ಮ ಸಂಬಂಧಗಳೂ ಹಾಳಾಗುತ್ತವೆ. ಅಷ್ಟೇ ಅಲ್ಲ, ಈಗಿನ ಕೆಲಸ ಮಾಡಬೇಕಾಗಿದ್ದಾಗ ಹೊಸ ಬಿಸಿನೆಸ್ ಕೆಲಸ ಮಾಡಕ್ಕೆ ಹೋದರೂ ಕಷ್ಟಾನೇ. ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನೋಹಂಗೆ ಆಗಿಬಿಡಬೇಡಿ. ಹುಷಾರಾಗಿರಿ.

10. ಹೊಸ ಬಿಸಿನೆಸ್ ಒಂದು ಹಂತಕ್ಕೆ ಬರೋ ವರೆಗೂ ಈಗಿರೋ ಕೆಲಸ ಬಿಡಬೇಡಿ

ಆ ಹಂತ ಯಾವುದು ಅಂತ ನಿಮಗೇ ಗೊತ್ತಿರಬೇಕು. ಇಷ್ಟು ದುಡ್ಡು ಅಂತ ಮಾಡಕ್ಕೆ ಶುರು ಮಾಡಿರಬೇಕು, ಅಥವಾ ಇಷ್ಟು ಹೆಸರು ಅಂತ ಮಾಡಿರಬೇಕು… ಇಷ್ಟು ಬಳಕೆದಾರರು ಅಂತ ಇರಬೇಕು…. ಇದೆಲ್ಲ ನಿಮಗೆ ಬಿಟ್ಟಿದ್ದು. ಆದರೆ ಆ ಹಂತ ಮುಟ್ಟೋ ಮುಂಚೇನೆ ನೀವು ಈಗಿನ ಕೆಲಸ ಬಿಟ್ಟುಬಿಟ್ಟರೆ ಕಷ್ಟ ಆಗುತ್ತೆ. ನಿಮ್ಮ ಹತ್ತಿರದವರನ್ನ ಈ ವಿಷಯದ ಬಗ್ಗೆ ಕೇಳಿ. ನಿಮ್ಮ ಮನೆಯೋರ ಹತ್ತಿರಾನೂ ಮಾತಾಡಿ. ಅವಸರದಲ್ಲಿ ಏನೇನೋ‌ ಮಾಡಕ್ಕೆ ಹೋಗಿ ಕೈ ಸುಟ್ಕೋಬೇಡಿ.

ಮೂಲ

ಸರಿ ಹಾಗಾದ್ರೆ, ಹೊಸ ಬಿಸಿನೆಸ್ ಶುರು ಮಾಡ್ಕೊಳಕ್ಕೆ ರೆಡಿ ನಾ? ಏನ್ ಶುರು ಮಾಡ್ತೀರಿ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

ನಿಮ್ಮ ಲೈಕೇ ನಮಗೆ ಪ್ರೇರಣೆ. ಕಳ್ಕೊಳಕ್ಕೇನಿದೆ? ಮಾಡಿಬಿಡಿ!

ಈ 6 ವಿಷಯ ತಿಳ್ಕೊಂಡ್ರೆ ಇನ್ಮೇಲೆ ಫೋನು, ಚಾರ್ಜರ್ ಎಲ್ಲಾ ತಗೊಳೋವಾಗ ಮೋಸ ಹೋಗಲ್ಲ

ಸ್ವಲ್ಪ ಹುಷಾರಾಗಿ ನೋಡ್ಬೇಕಷ್ಟೆ

ಹೆಸರಾಂತ ಬ್ರಾಂಡುಗಳನ್ನ ನಕಲು ಮಾಡಿ ಕಳಪೆ ಪ್ರಾಡಕ್ಟುಗಳನ್ನ ಮಾರ್ಕೆಟ್ಟಿಗೆ ಬಿಡೋದು ಮಾಮೂಲಿ. ತೆಗೊಳ್ವಾಗ ನಾವು ಹುಷಾರಾಗಿರ್ಬೇಕು. ಈ 6 ವಿಷ್ಯಗಳ್ನ ತಿಳ್ಕೊಂಡ್ರೆ, ಮೋಸ ಹೋಗೋದು ತಪ್ಪಿಸ್ಬಹುದು.

1. ಪ್ಯಾಕ್ ಮಾಡಿರೋ ರೀತಿ ಗಮನಿಸಿ- ದೊಡ್ಡ ಬ್ರಾಂಡುಗಳು ಪ್ಯಾಕೇಜಿಂಗ್ ಬಗ್ಗೆ ಕೂಡ ತುಂಬಾ ಗಮನ ಕೊಟ್ಟಿರ್ತಾರೆ

ಸಾಮಾನ್ಯವಾಗಿ ನಕಲಿ ಕಂಪೆನಿಗಳು ಪ್ಯಾಕೇಜಿಂಗ್ ಬಗ್ಗೆ ಜಾಸ್ತಿ ತಲೆ ಕೆಡಿಸ್ಕೊಳೊಲ್ಲ. ದೊಡ್ಡ ಬ್ರಾಂಡುಗಳು ಅವರ ಪ್ರಾಡಕ್ಟಿಗೆ ಯಾವ್ದೇ ಡ್ಯಾಮೇಜ್ ಆಗ್ದಿರೋ ರೀತಿ ತುಂಬ ಎಚ್ಚರಿಕೆಯಿಂದ ಪ್ಯಾಕ್ ಮಾಡಿರ್ತಾರೆ. ಫೋನಿನ ಮೂಲೆಗಳೆಲ್ಲ ಸರಿಯಾಗಿ ಹೊಂದ್ಕೊಂಡು ಕೂರೋ ರೀತಿ ಬಾಕ್ಸ್ ಡಿಸೈನ್ ಮಾಡಿರ್ತಾರೆ. ಇದನ್ನೆಲ್ಲ ಪರೀಕ್ಷೆ ಮಾಡಿ ನೋಡಿ. ಇದಲ್ಲದೆ ಬಾಕ್ಸಿನಲ್ಲಿ ಪ್ರಿಂಟ್ ಆಗಿರೋದನ್ನ ನೋಡಿ, ಫಾಂಟು ಒಂದೇ ರೀತಿ ಇರ್ಬೇಕು, ಪ್ರಿಂಟ್ ಆಗಿರೋದೆಲ್ಲ ಓದೋಕೆ ಆಗೋ ಹಾಗಿರ್ಬೇಕು.

ಮೂಲ

2. ಯೂಸರ್ ಮಾನ್ಯುವಲ್ ಇಂಗ್ಲಿಷ್ ಅಥವಾ ಭಾರತದ ಅಫಿಷಿಯಲ್ ಭಾಷೆಗಳಲ್ಲಿರ್ಬೇಕು, ನಿಮ್ಗೆ ಅರ್ಥಾನೇ ಆಗ್ದಿರೋ ಯಾವ್ದೋ ಭಾಷೆಯಲ್ಲಿರ್ಬಾರ್ದು

 ಯೂಸರ್ ಮ್ಯಾನ್ಯುವಲ್ ಯಾವುದೋ ನಿಮ್ಗೆ ಅರ್ಥ ಆಗ್ದಿರೋ ಭಾಷೆಯಲ್ಲಿದ್ರೆ ಅಥವಾ ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕುಗಳಿದ್ರೆ, ಅದು ಸ್ಮಗಲ್ ಆಗಿರೋ ಮಾಲು ಅಥವಾ ನಕಲಿ ಮಾಲು ಆಗಿರೋ ಸಂಭವ ಜಾಸ್ತಿ.

ಮೂಲ

3. ರಬ್ಬರ್, ಪ್ಲಾಸ್ಟಿಕ್, ಅಲ್ಯೂಮಿನಿಯಮ್ - ಯಾವ್ದೇ ಆದ್ರೂ ಒಳ್ಳೆ ಕ್ವಾಲಿಟೀದಿದ್ಯಾ ನೋಡಿ

ಎಲ್ಲೂ ಚೂಪುಚೂಪಾಗಿರೋ ಪ್ಲಾಸ್ಟಿಕ್ ಇರ್ಬಾರ್ದು. ಅದರ ಮೈ ಸಮವಾಗಿ ಇರ್ಬೇಕು, ಮೆತ್ತಗಿರ್ಬೇಕು. ಒಂದೊಂದು ಕಡೆ ಒಂದೊಂದು ರೀತಿ ಇದ್ರೆ, ನಕಲಿ ಆಗಿರೋ ಸಾಧ್ಯತೆ ಹೆಚ್ಚು. ಫೋನಿನ ಕ್ಯಾಮೆರಾ ಮತ್ತು ಫ್ಲ್ಯಾಶ್ಲೈಟಿನ ಕ್ವಾಲಿಟಿಯನ್ನೂ ನೋಡಿ. ಕೆಳಗಿನ ಚಿತ್ರದಲ್ಲಿ ಗೋಲ್ಡನ್ ಫ್ರೇಮ್ ಇರೋದು ಒರಿಜಿನಲ್, ಇನ್ನೊಂದು ನಕಲಿ. ಎರಡರಲ್ಲೂ ಕ್ಯಾಮೆರಾ ಮತ್ತು ಫ್ಲ್ಯಾಶ್ ಲೈಟ್ ಕೂರಿಸಿರೋ ರೀತಿ ನೋಡಿ. ಅಸಲಿಯಲ್ಲಿ ಸ್ಮೂತ್ ಫಿನಿಶಿಂಗ್ ಇದೆ, ನಕಲಿಯಲ್ಲಿ ಕಳಪೆ ಅಂತ ಗೊತ್ತಾಗೋ ರೀತಿ ಇದೆ.

ಮೂಲ

 

4. ಕಂಪೆನಿ ಲೋಗೋ ಗಮನಿಸಿ - ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ಯಾ ಅಥ್ವಾ ಅವರ ಒರಿಜಿನಲ್ ಪ್ರಾಡಕ್ಟಿಗೆ ಹೋಲ್ಸಿದ್ರೆ ಏನಾದ್ರೂ ವ್ಯತ್ಯಾಸ ಇದ್ಯಾ ನೋಡಿ

ಯಾವ್ದೇ  ಕಂಪೆನಿಗೆ ಅದರ ಲೋಗೋ ಬಹಳ ಮುಖ್ಯ. ಅದರಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗ್ಲಿ, ತಪ್ಪು ಫಾಂಟ್ ಆಗ್ಲಿ ಇರೋಕೆ ಸಾಧ್ಯಾನೇ ಇಲ್ಲ. ಅಲ್ಲದೆ ಲೋಗೋ ಅಳಿಸಿ ಹೋಗೋ ಥರ ಇರೊಲ್ಲ, ಎಷ್ಟೋ ವರ್ಷ ಉಪ್ಯೋಗ್ಸಿದ್ರೂ ಓದ್ಲಿಕ್ಕೆ ಆಗೋ ಹಾಗೆ ಇರುತ್ತೆ. ಆ ಕಂಪೆನಿಯ ವೆಬ್ಸೈಟಿನಲ್ಲಿ ಇರೋ ಪ್ರಾಡಕ್ಟುಗಳಲ್ಲಿರೋ ಲೋಗೋ ಜೊತೆ ಹೋಲಿಸಿ ನೋಡಿ. ಏನಾದ್ರೂ ವ್ಯತ್ಯಾಸ ಇದ್ರೆ ನಕಲಿ ಅನ್ನೋದ್ರಲ್ಲಿ ಸಂಶಯ ಇಲ್ಲ. ಕೆಳಗಿನ ಫೋಟೋದಲ್ಲಿರೋದು ನಕಲಿ ಪವರ್ ಬ್ಯಾಂಕು. ಅದರಲ್ಲಿರೋ ಲೋಗೋ ನಕಲಿ. ಅವರ ಅಫಿಷಿಯಲ್ ವೆಬ್ಸೈಟಿನಲ್ಲಿರೋ ಲೋಗೋ ನೋಡಿದ್ರೆ ಇದು ನಕಲಿ ಅಂತ ಗೊತ್ತಾಗುತ್ತೆ.

5. ಚಾರ್ಜರಿನ ಪ್ಲಾಸ್ಟಿಕ್ ಗಮನಿಸಿ - ಒಳ್ಳೆ ಕ್ವಾಲಿಟಿ ಇದ್ಯಾ, ಸಮವಾಗಿ ಮೆತ್ತಗಿರೋ ಪ್ಲಾಸ್ಟಿಕ್/ರಬ್ಬರ್ ಉಪ್ಯೋಗ್ಸಿದಾರಾ ನೋಡಿ

ಮೊದಲ್ನೆದಾಗಿ ಫೋನ್ ತೆಗೊಂಡಾಗ ಚಾರ್ಜರ್ ಇರ್ಲೇಬೇಕು. ಅದೇನಾದ್ರೂ ಸೆಪರೇಟ್ ಆಗಿ ತೆಗೋಬೇಕು ಅಂತ ಇದ್ರೆ ಇದು ಸ್ಮಗಲ್ ಮಾಡಿದ ಮಾಲು ಅಥ್ವಾ ನಕಲಿ ಮಾಲು ಅನ್ನೋದು ಖಂಡಿತ. ಚಾರ್ಜರ್ ಕೂಡ ಒಳ್ಳೆ ಕ್ವಾಲಿಟಿಯಲ್ಲಿರ್ಬೇಕು. ಚಾರ್ಜರಿನ ಪ್ಲಾಸ್ಟಿಕ್ಕು ಬೇರೆ ಬೇರೆ ಬಣ್ಣದಲ್ಲಿದ್ರೆ, ಎರಡು ಬಣ್ಣಗಳ ಮಧ್ಯೆ ಯಾವ್ದೇ ಗೆರೆ ಇರೊಲ್ಲ, ಅದು ಮೆತ್ತಗೆ ಇರುತ್ತೆ, ಮುಟ್ಟಿದಾಗ ಗೊತ್ತೇ ಆಗದ ಹಾಗೆ ಇರುತ್ತೆ. ಏನಾದ್ರೂ ಚೂಪಾಗಿರೋ ಗೆರೆಗಳು ಮಧ್ಯದಲ್ಲಿದ್ರೆ ನಕಲಿ ಆಗಿರೋ ಚಾನ್ಸ್ ಜಾಸ್ತಿ. ಕೆಳಗಿನ ಚಿತ್ರದಲ್ಲಿ ಎಡಗಡೆ ಇರೋದು ಅಸಲಿ, ಬಲಗಡೆಯದ್ದು ನಕಲಿ. ಎರಡರ ಫಿನಿಶಿಂಗ್ ಹೋಲಿಸಿ ನೋಡಿ.

ಮೂಲ

6. ವೈರು, ಪ್ಲಗ್ಗು ಸಾಕೆಟ್ಟಲ್ಲಿ ಸರಿಯಾಗಿ ಕೂರುತ್ತಾ, ರಬ್ಬರ್ ಒಳ್ಳೆ ಕ್ವಾಲಿಟಿ ಇದ್ಯಾ ನೋಡಿ

ವೈರು ಕೂಡ ಒಳ್ಳೆ ಕ್ವಾಲಿಟಿ ರಬ್ಬರಲ್ಲಿ ಮಾಡಿರ್ಬೇಕು. ಪ್ಲಗ್ ಮಾಡಿದಾಗ ಸ್ಮೂತ್ ಆಗಿ ಕೂರ್ಬೇಕು, ಸ್ವಲ್ಪ ಉದ್ದ ಹೆಚ್ಚಿದ್ರೆ, ಅಥ್ವಾ ಸ್ಮೂತ್ ಆಗಿ ಕೂರದಿದ್ರೆ ನಕಲಿ ಮಾಲಾಗಿರ್ಬಹುದು. ವೈರು ಫ್ಲೆಕ್ಸಿಬಲ್ ಇರ್ಬೇಕು, ಬಣ್ಣ ಸಮವಾಗಿರ್ಬೇಕು. ವೈರು, ಪ್ಲಗ್ಗುಗಳ ಮೇಲೆ ಏನಾದ್ರೂ ಸಿಂಬಲ್ಗಳಿದ್ರೆ ಅದು ಅಳಿಸಿ ಹೋಗೋ ಹಾಗಿರ್ಬಾರ್ದು. ನೋಡಿದಾಗ ಕಳಪೆ ಕ್ವಾಲಿಟಿ ಕಂಡ್ರೆ ಹುಷಾರಾಗಿ.

ಮೂಲ

ಅಫಿಷಿಯಲ್ ವೆಬ್ಸೈಟುಗಳು, ಹೆಸರುವಾಸಿ ಅಂಗಡಿಗಳಲ್ಲಿ ತೆಗೊಳ್ವಾಗ ನಕಲಿ ಆಗಿರೋ ಸಾಧ್ಯತೆ ಕಡಿಮೆ. ಬೇರೆ ಕಡೆ ತೆಗೊಳ್ವಾಗ ಹುಷಾರಾಗಿರ್ಬೇಕು. ಯಾವಾಗ್ಲೂ ನಮ್ಮ ಎಚ್ಚರಿಕೆಯಲ್ಲಿ ನಾವಿರೋದು ಒಳ್ಳೇದು. ಸರಿ ಅಲ್ವಾ?

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: