ಉತ್ತರಪ್ರದೇಶದಲ್ಲಿ ಒಬ್ಬಳು ಸಾಯಕ್ಕೆ ಹೊರಟಾಗ ಔಳ್ನ Google ಕಾಪಾಡಿದ್ದು ಕೇಳಿ ಖುಷಿ ಪಡ್ತೀರಿ

ತಂತ್ರಜ್ಞಾನ ಹಿಂಗೆ ಉಪಯೋಗಕ್ಕೆ ಬರಬೇಕಪ್ಪ

ಈ ಹಳೇ ಬರಹ ಸದ್ಯದಲ್ಲೇ ನಿಮಗೆ ಸಿಗುತ್ತೆ… ಒಂದು ಹೊಸ ರೀತೀಲಿ!

ಕಳ್ಳರ ಕಾಟ ಜಾಸ್ತಿ ಆಗಿರೋದ್ರಿಂದ ನಮ್ಮ ಹಳೇ ಬರಹಗಳಿಗೆ ತಾತ್ಕಾಲಿಕವಾಗಿ ಬೀಗ ಹಾಕಬೇಕಾಗಿ ಬಂದಿದೆ. ಇದರಿಂದ ನಿಮಗೆ ತೊಂದರೆ ಆಗ್ತಿರೋದು ನಮಗೆ ಬಹಳ ಬೇಜಾರಿನ ವಿಷಯ. ಆದ್ದರಿಂದ ಸದ್ಯದಲ್ಲೇ ಈ ಬರಹವನ್ನ ನಿಮ್ಮ ಮುಂದೆ ಒಂದು ಹೊಸ ರೀತೀಲಿ ತಲುಪಿಸ್ತೀವಿ.

ಗಮನಿಸಿ: ಈ ಬೀಗ ಹಳೇ ಬರಹಗಳಿಗೆ ಮಾತ್ರ. ಹೊಸ ಬರಹಗಳಿಗೆ ಈ ಬೀಗ ಇಲ್ಲ. ಈ ಕಳ್ಳರ ಕಾಟಕ್ಕೆ ನಾವು ಒಂದು ಒಳ್ಳೇ ಪರಿಹಾರ ಕೊಟ್ಟೇ ಕೊಡ್ತೀವಿ. ಅಲ್ಲೀವರೆಗೆ ನಿಮ್ಮ ಪ್ರೀತಿ, ಬೆಂಬಲಗಳು ಎಂದಿನಂತೆ ಇರಲಿ ಅಂತ ಈ ಮೂಲಕ ಬೇಡಿಕೊಳ್ತಾ ಇದೀವಿ.

ಬಡೆಸೋಪಿನಿಂದಾ ನಮ್ಮ ಆರೋಗ್ಯಕ್ಕ ಈ 16 ಲಾಭ ಅವ ಅಂದರ ನಂಬಾಕಾಗಂಗಿಲ್ಲ

ಊಟಾದ ಮ್ಯಾಲೆ ಬಾಯಿ ಚಪ್ಪರಿಸೋ ಬಡೆಸೋಪನ್ಯಾಗೂ ಇಷ್ಟ ಶಕ್ತಿ ಅದನಾ...

ನಿಮ್ಮ ಅಡುಗಿಮನಿಯಾಗ, ಎಲಿ ಅಡಿಕಿ ತಾಟನ್ಯಾಗ ನೀವು ನೋಡೇ ಇರತೀರಿ. ಆದರೂ ಈ ಕಾಳಿಗೆ ಅಷ್ಟೆನ ಮಹತ್ವ ಕೊಟ್ಟಿರಂಗಿಲ್ಲ. ಅವು ಸಲ್ಪ ಮದರಂಗಿ ಹಸರ ಬಣ್ಣ ಇರತಾವ ನೋಡ್ರಿ... ಹಾ! ಅವ ಬಡೇಸೋಪು. ಭಾಳ ಹಳೇಕಾಲದಿಂದಾನೂ ಎಲಿ- ಅಡಿಕಿ ಒಳಗ ಬಳಸತಾರ ಅವನ್ನ. ಉತ್ತರ ಕರ್ನಾಟಕದ ಮಂದಿ ಸಜ್ಜಕ, ಮಾಲ್ದಿ, ಚಕೋಲಿಯಂತಾ ಸಿಹಿ ತಿಂಡಿಯೊಳಗೂ ಬಡೆಸೋಪ ಹಾಕತಾರ. ಸೋಂಪು, ಸೋಪಿನಕಾಳು, ಬಡೇಸೋಪು ಹಿಂಗ ಈ ಕಾಳ ಒಂದ ಆದರೂ ಇದಕ್ಕ ಹೆಸರ ಭಾಳ ಅವನೋಡ್ರಿ.

ವೈಜ್ಞಾನಿಕವಾಗಿ ‘ಫೀನಿಕುಲಮ್ ವಲ್ಗರೆ’ ಅಂತ ಕರಸಕೊಳ್ಳೊ ಈ ಗಿಡಾ, ಗಜ್ಜರಿ ಕುಟುಂಬದ್ದು. ಇದು ಒಂದು ಸುವಾಸನೆ ಇರೋವಂಥಾ ಗಿಡಾ. ಹಿಂದಿನ ಕಾಲದಾಗ ಇದನ್ನ ಭಾರತ, ಚೀನಾ ಮತ್ತು ಮಧ್ಯಪ್ರಾಚ್ಯದೊಳಗ ಸಾಂಪ್ರದಾಯಿಕ ಅಡಗಿಗ ಅಷ್ಟ ಅಲ್ಲದ ಔಷಧ ಆಗಿನೂ ಬಳಸತಿದ್ದರು. ಪ್ರಾಚೀನ ಗ್ರೀಕ್ ವೈದ್ಯರು ಸ್ತನ್ಯಪಾನ ಮಾಡೋವಂಥಾ ತಾಯಂದಿರಿಗೆ ಬಡೇಸೋಪಿನ ಚಹಾ ಕುಡಿಯಾಕ ಸೂಚಿಸತಿದ್ದರಂತ. ಇವತ್ತ ಇಡೀ ಜಗತ್ತ ಬಳಸತದ ಬಡೆಸೋಪನ್ನ.

ಭಾರತ ಮತ್ತ ಚೀನಾ ದೇಶಗಳ ಒಳಗ ಇದನ್ನ ಹಾವು ಮತ್ತ ಬ್ಯಾರೆ ಹುಳಾ ಕಡದರ ಚಿಕಿತ್ಸೆ ಸಲುವಾಗಿ ಬಳಸತಿದ್ದರಂತ. ಪ್ರಾಚೀನ ಗ್ರೀಸ್ ನಾಗ ಒಲಿಂಪಿಕ್ ಕ್ರೀಡಾಪಟುಗಳು ಬಡೇಸೋಪನ್ನ ತ್ರಾಣ ಹೆಚ್ಚಿಸಾಕ ಮತ್ತ ದೀರ್ಘಾಯುಷ್ಯದ ಸಲುವಾಗಿ ಬಳಸತಿದ್ದರು. ಇದರ ಒಳಗ ವಿಟಾಮಿನ ಎ, ಬಿ-ಕಾಂಪ್ಲೆಕ್ಸ್, ಸಿ , ಡಿ, ಅಮೈನೋ ಆಮ್ಲಗಳು ಮತ್ತ ಇತರೆ ಪೋಷಕಾಂಶಗಳು, ಹೆಚ್ಚಿನ ಪ್ರಮಾಣದಾಗ ಅದಾವು.

ಖರೆ ಅಂದ್ರ…ಬಡೇಸೋಪಿನ ಚಹಾ ಭಾಳ ಜನಪ್ರಿಯ. ಆರೋಗ್ಯಕ್ಕ ಭಾಳ ಪ್ರಯೋಜನ ಅವ.

htv.com.pk

1. ಇದು ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನ ಪರಿಹರಿಸತದ ಮತ್ತ ಜೀರ್ಣಕ್ರಿಯೆಯನ್ನ ಸುಧಾರಿಸತದ.

ಸ್ನಾಯುಗಳಿಗೆ ವಿಶ್ರಾಂತಿ ನೀಡತದ ಮತ್ತು ಪಿತ್ತರಸದ ಹರಿವನ್ನು ಉತ್ತೇಜಿಸತದ. ನೋವನ್ನ ಕಮ್ಮಿ ಮಾಡತದ. ದೇಹದಿಂದ ಗ್ಯಾಸ್ ಹೊರಹಾಕತದ ಮತ್ತ ಹೊಟ್ಟೆ ಉಬ್ಬರ ನಿವಾರಿಸತದ. ಇದು ರಕ್ತ ಪರಿಚಲನೆನೂ ಪ್ರೋತ್ಸಾಹಿಸತದ.

2. ತೂಕ ಕಳಕೋಳಾಕೂ ಸಹಾಯ ಮಾಡತದ.

ಜೀರ್ಣಕ್ರಿಯೆ ಚೊಲೋ ಇತ್ತಂದರ ನಿಮ್ಮ ದೇಹ ಊಟದಾಗಿನ ಪೋಷಕಾಂಶಗಳನ್ನ ಹೀರಕೊಂಡು ಬ್ಯಾಡಾದ ಪದಾರ್ಥಾನ ಹೊರಗ ಹಾಕತದ. ಹಿಂಗ ಹೊರಗ ಹೋಗೋ ಪದಾರ್ಥದ ಜೋಡಿ ಬ್ಯಾಡಾದ ಕೊಬ್ಬೂ ಇರತದ. ಹಿಂಗ ಬಡೇಸೋಪ ತಿನ್ನೋದರಿಂದಾ ಕ್ರಮೇಣ ನಿಂ ತೂಕ ಕಮ್ಮಿ ಆಗತದ.
ಇದರೊಳಗಿರೋ ಸೀರಮ್ ದೇಹದಾಗಿನ ಗ್ಲೂಕೋಸ್ ಮಟ್ಟ ಕಮ್ಮಿ ಮಾಡಿದರ ನಾರಿನಂಶ ಬ್ಯಾಡಾದ ಪದಾರ್ಥಾನ ಹೊರಗ ಹಾಕಾಕ ಸಹಾಯಾ ಮಾಡತದ. ಅಲ್ಲದ  ಬಡೆಸೋಪನ್ನ ಜಗಿತಿದ್ದರ  ಹಸಿವನ್ನೂ ನಿಗ್ರಹಿಸಬೌದು.

3.  ಉಸಿರಾಟದ ತೊಂದರೆ ಆದರ ಚಿಕಿತ್ಸೆನೂ ಬಡೆಸೋಪಿಂದಾ ಮಾಡಬೌದು

ಈಜಿಪ್ತಿನ ಜನಾ , ಉಸಿರಾಟದ ಸಮಸ್ಯೆಗಳನ್ನ  ಅದರಾಗೂ ಶ್ವಾಸನಾಳದಾಗ ಸಿಂಬಳದಂತಾದೇನರ ತ್ತು ಅಂದರ ಅದನ್ನ ಗುಣಪಡಿಸೋ ಸಲುವಾಗಿ ಶತಮಾನಗಳಿಂದಾನೂ ಬಡೇಸೋಪನ್ನ ಬಳಸಾಕತ್ಯಾರಾ. ಇದು ಶ್ವಾಸನಾಳದ ದಾರಿ ಸ್ವಚ್ಛ ಮಾಡತದ. ಮತ್ತು ಕೊಲ್ಲಿಯಲ್ಲಿ ಉಸಿರಾಟದ ಕಾಯಿಲೆಗಳನ್ನು ಉಂಟುಮಾಡುತ್ತದೆ.

 ಶ್ವಾಸಕೋಶಗೋಳಿಗೆ ಬಡೆಸೋಪು ಭಾಳಚೊಲೊ. ಮನಷ್ಯಾರದ್ದ ಅಷ್ಟ ಅಲ್ಲಾ ಕುದರಿಗೋಳಿಗೆ ಏನರ ಸಿರಾತದ್ದ ತ್ರಾಸ ಆದರೂ ಬಡೇಸೋಪನ್ನ ಬಳಸತಾರಂತ.  ಶ್ವಾಸನಾಳದ ಉರಿಯೂತ ಮತ್ತು ದೀರ್ಘಕಾಲದ ಕೆಮ್ಮಿನಂತಾ  ಉಸಿರಾಟದ ತೊಂದರೆಗುಳು ಬಟೆಸೋಪಿನಿಂದಾ ಗುಣಾ ಆಗತಾವು.

gomerblog.com

4. ಹೃದಯದ್ ಆರೋಗ್ಯಾನ ಉತ್ತೇಜಿಸತದ

ಯಕೃತ್ತು ಮತ್ತು ಹೃದಯದ ಆರೋಗ್ಯದ ನಡುವೆ ಒಂದು ಲಿಂಕ್ ಇರತದ. ಭಾಳ ಮಂದಿಗೆ ಅದು ಗೊತ್ತಿಲ್ಲಾ. ಹಂಗ ಯಕೃತ್ತನ್ಯಾಗ ಕೊಬ್ಬ ಕರಗಿ ಶಕ್ತಿ ಬಿಡುಗಡೆ ಆಗತದ.ನಂ ಯಕೃತ್ತು ಅಂದರ ಪಿತ್ತಜನಕಾಂಗ ಆರೋಗ್ಯವಾಗಿದ್ದರ ಕೊಬ್ಬನ್ನ ಚೊಲೋತನ್ಯಾಗಿ ಕರಗಸತದ. ಕೊಬ್ಬ ಶೇಖರನೆ ಆಗಲಿಲ್ಲಾ ಅಂದರ ಹೃದಯ ಆರೋಗ್ಯವಾಗಿರತದ. ಯಕೃತ್ತಿನ ಆರೋಗ್ಯಾ ಚೊಲೊ ಇಡೊ ಆಹಾರ ಅದರ  ಬಡೇಸೋಪು. ಇದರೊಳಗ ನಾರಿನಂಶ ಅದ. ನಂ ಶರೀರಕ್ಕಬ್ಯಾಡಾದ್ದನೆಲ್ಲಾ ಹೊರಗ ಹಾಕತದ.

ಅಷ್ಟಅಲ್ಲಾ ಬಡೇಸೋಪನ್ಯಾಗ  ಪೊಟಾಷಿಯಂ ಭಾಳ ಹೆಚ್ಚಗಿ ಪ್ರಮಾಣದಾಗ ಇರತದ.ಇದು ರಕ್ತದೊತ್ತಡ ನಿಯಂತ್ರಿಸಾಕ ಸಹಾಯ ಮಾಡತದ ಮತ್ತ ಸೋಡಿಯಂನಿಂದಾ ಆಗೋ ಕೆಟ್ಟ ಪರಿಣಾಮಗಳನ್ನು ಪ್ರತಿರೋಧಿಸತದ. ಹಂಗಾಗಿ ಬಡೆಸೋಪು ನಂ ಹೃದಯನ ಆರೋಗ್ಯವಾಗಿರೋ ಹಂಗ ನೋಡಕೋತದ.

5. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದ

ಬಡೇಸೊಪನಾಗ ಸಿ ಜೀವಸತ್ವ ಎತೆಚ್ಚವಾಗಿರತದ.ಇದರೊಳಗ ಸೆರೆನಿಯಂ ಇರೋದರಿಂದಾ ಟಿ-ಕೋಶಗಳ ಉತ್ಪಾದನೆನೂ ಚೊಲೋ ಆಗತದ.( ಟಿ-ಕೋಶಗಳು ನಂ ದೇಹದಾಗ ರಕ್ಷಣಾ ವ್ಯವಸ್ಥೆನ್ನ ಹಟ್ಟಿ ಮಾಡತಾವು)
ಅಲ್ಲದ ಈ ಬಡೇಸೋಪನ್ಯಾಗ ಆಂಟಿಮೈಕ್ರೊಬಿಯಲ್ ಗುಣಲಕ್ಷಣನೂ ಇರೋದರಿಂದ  ಪ್ರತಿರಕ್ಷೆ ಮತ್ತಷ್ಟು ವರ್ಧಿಸಾಕ  ಸಹಾಯ ಆಗತದ.

6. ಕಣ್ಣಿನ ಆರೋಗ್ಯನೂ ಚೊಲೋ ಇಡತದ

ಬಡೇಸೋಪುನ ರಸಾನ ಗ್ಲುಕೋಮಾದ ಚಿಕಿತ್ಸೆಗೆ ಬಳತಾರಾ. ಇದರ ಚಹಾನ ಕಣ್ಣಿನ ಟಾಣಿಕ್ ಹಂಗ ಬಳಸಬಹುದು ಅಥವಾ ಕಣ್ಣಾಗ ಹನಿ-ಹನಿ ಬಿಟಗೊಬೌದು ಅಥವಾ ಅಳ್ಳಾಗ ಎದ್ದಿ ಕಣ್ಣಿನ ಮ್ಯಾಲೆ ಒತ್ತಗೊಳ್ಳೂಬೌದು.

ಬಡೆಸೋಪನ್ಯಾಗ ರೋ ಸಿ-ಜೀವಸತ್ವ ದೃಷ್ಟಿ ಸುಧಾರಣೆಗೆ ಸಹಾಯಾ ಮಾಡತದ. ಕಣ್ಣಿನ ರಕ್ಷಣೆ ಒಳಗೂ ಇದು ಭಾಳ ಮುಖ್ಯಪಾತ್ರ ವಹಿಸತದ. ಕಣ್ಣಿನ ಸಮಸ್ಯೆ ಇದ್ದೌರು ಬಡೆಸೋಪಿನ ಚಹಾದಿಂದ ಕಣ್ಣ ತೊಳಕೋಳ್ಳೊ ಪದ್ದತಿ ಅದ.

watchfit.com

7. ಹಾರ್ಮೋನುಗಳ ಸಮತೋಲನವನ್ನು ಸುಧಾರಿಸತದ

ಫೆಟೋಸ್ಟ್ರೊಜೆನ್ ಹೊಂದಿರುವ ಆಹಾರಗಳ ಒಳಗ ಬಡೇಸೋಪೂ ಒಂದು. ಇದು ಹಾರ್ಮೋನ್ ಸಮತೋಲನಾನ ಉತ್ತೇಜಿಸತದ .ಅಲ್ಲದ ಇದು PCOS (ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ ) ಅಂದ್ರ ಹೆಣ್ಣಮಕ್ಕಳೊಳಗ ಸಂತಾನೋತ್ಪತ್ತಿಗೆ ಸಂಭಂದಿಸಿದ್ದ ಹಾರ್ಮೋನ್ ಏರುಪೇರಿಗೂ ಬಡೇಸೋಪು ರಾಮಬಾಣ ಇದ್ದಂಗ ನೋಡ್ರಿ. ಥೈರಾಯ್ಡ್, ಇನಸುಲಿನ್ ನಂತಾ ಅನೇಕ ಹಾರ್ಮೋನುಗಳನ್ನ ನಿಯಂತ್ರಿಸದಲ್ಲದ ಮುಂದ ಯಾವುದೇ ಸಂಭಾವ್ಯ ಅಸಮತೋಲನ ಆಗಲಾರದಂಗ ತಡಿತದ.

8. ಸಂಧಿವಾತ ನಿವಾರಿಸೋದ್ರೊಳಗೂ ಸಹಾಯ ಮಾಡತದ

ಉರಿಯೂತ, ಸಂಧಿವಾತದಂತಾ ರೋಗಲಕ್ಷಣಗ ಚಿಕಿತ್ಸೆಯೊಳಗ ಬಡೆಸೋಪನ್ನ ಬಳಸೋ ರೂಡಿ ಅನಾದಿ ಕಾಲದಿಂದಾನೂ ಅದ.

 9. ಮುಟ್ಟಿನ ತೊಂದರೆಗಳನ್ನ ನಿಭಾಯಿಸಾಕೂ ಸಹಾಯ ಮಾಡತದ

ಮುಟ್ಟಿನ ನೋವು, ವಾಕರಿಕಿ, ಸೆಳೆತಗಳ ಚಿಕಿತ್ಸೆಗಾಗಿ ಬಡೆಸೋಪಿನ ಚಹಾನ್ನ ಬಳಸತಾರ.  ಮುಟ್ಟಿನ ನೋವು ಬಹುಶಃ ಗರ್ಭಾಶಯದ ಸ್ನಾಯುಗಳು ಅತಿಯಾಗಿ ಕುಗ್ಗೋದರಿಂದ ಬರತದ.  ಬಡೇಸೋಪಿನ ಚಹಾ ಅಂತಾ ಸ್ನಾಯುಗಳಿಗೆ ವಿಶ್ರಾಂತಿ ನೀಡೋದರ ಮೂಲಕ ನೋವನ್ನ ನಿವಾರಸತದ.

img.healthable.org

10. ವಸಡಿನ ಆರೋಗ್ಯಾ ಉತ್ತೇಜಿಸತದ.

ಬಡೆಸೋಪಿನಾಗ ಚೊಲೊ ಆಂಟಿಮೈಕ್ರೊಬಿಯಲ್ ಇರೋದರಿಂದ ಅದು ವಸಡಿನ ಉರಿಯೂತದ ಚಿಕಿತ್ಸೆಗೆ ಸಹಾಯ ಮಾಡತದ.

11. ಮಕ್ಕಳಿಗಾಗಿ ಬಡೇಸೋಪಿನ ಚಹಾ

ಮಕ್ಕಳಿಗೆ ಹೊಟ್ಟಿ ನೋವು ಬಂತಂದ್ರ, ಗ್ಯಾಸ ಹಿಡದಿರತದಲ್ಲಾ ಅಜೀರಣ ಆಗಿರತದ.ಆವಾಗ ಬಡೆಸೋಪಿನ ಚಹಾ ಕುಡಿಸಿದ್ರ ಹೊಟ್ಟಿ ನೋವು ಲೊಗೂ ಕಮ್ಮಿ ಆಗತದ. ಆದರ 6 ತಿಂಗಳ ಒಳಗಿನ ಮಕ್ಕಳ ಮ್ಯಾಲೆ ಇದನ್ನ ಪ್ರಯೋಗಿಸಬ್ಯಾಡರಿ. ಹಾಲ ಕುಡಸೋ ತಾಯಿನ ಚಹಾ ಕುಡದ್ರ ಹಾಲಿನ ಮುಕಾಂತರಾ ಕೂಸಿಗೂ ಬಡೆಸೊಪಿನ ಸತ್ವ ಸಿಗತದ.

12. ಒಳಗಿನ ಪರಾವಲಂಬಿಗಳನ್ನು ಕೊಲ್ಲಾಕ ಸಹಾಯ ಮಾಡತದ.

ಬಡೆಸೋಪನ್ನ ಸಸ್ಯವಿಜ್ಞಾನದೊಳಗ ಬ್ಯಾಕ್ಟೇರಿಯಾಗಳ ಹಂತಕ ಅಂತ ಪರಿಗಣಿಸಲಾಗತದ ಮತ್ತು ಇದನ್ನ ಆಂತರಿಕ ಪರಾವಲಂಬಿಗಳನ್ನ ನಾಶಾ ಮಾಡಾಕಬಳಸತಾರಾ. ಇದರೊಳಗಿರೋ ವಿರೇಚಕ ಗುಣ ಕರುಳಿನ ಚಲನೆಯನ್ನ ಉತ್ತೇಜಿಸಿ  ಒಳಗಿರೂ ಬ್ಯಾಕ್ಟೇರಿಯಾಗಳನ್ನ ತೊಡೆದು ಹಾಕಾಕ ಸಹಾಯಾ ಮಾಡತದ.

13. ಸಕ್ಕರಿ ಖಾಯಿಲೆ ಚಿಕಿತ್ಸೆಗೂ ಬಡೆಸೋಪ ಬಳಸತಾರ.

ಸಕ್ಕರಿ ಖಾಯಿಲೆ ವಿರುದ್ದ ಬಳಸೋ 10 ಆಹಾರದೊಳಗ ಬಡೇಸೊಪುನೂ ಒಂದು. ಇದು ರಕ್ತದೊಳಗಿನ ಗ್ಲುಕೊಸನ ಕಮ್ಮಿ ಮಾಡತದ. ಇದರೊಳಗ ಸಿ ಜೀವಸತ್ವ ರೋದರಿಂದ 2ನೇತರದ ಸಕ್ಕರಿ ಖಾಯಿಲೆಯವರಿಗೆ ಭಾಳ ಪಕಾರಿ ಆಗೆದ. ಅಲ್ಲದ ಸಕ್ಕರಿ ಖಾಯಿಲೆ ಮಂದಿ ತೊಗೊಳ್ಳೊ ಗ್ಲುಕೋನಾರ್ಮ-5 ಅನ್ನೊ ಔಷಧಿ ಒಳಗೂ ಬಡೇಸೋಪಿನ ಅಂಶ ಇರತದಂತ ನೋಡ್ರಿ. ಇದರೊಳಗ  ಇರೋ ಮೆಗ್ನಿಷಿಯಂ ಮತ್ತ ಪೊಟ್ಯಾಷಿಯಂನಿಂದಾ ದೇಹದಾಗ ಇನಸುಲಿನ್ ಸಂವೇದನೆ ಹೆಚ್ಚತದ ಅಂತ.

www.wiseshe.com

14. ಕ್ಯಾನ್ಸರ ತಡಿಯೊದರೊಳಗೂ ಬಡೆಸೋಪು ಸಹಾಯಾ ಮಾಡತದ

ಇದರೊಳಗಿರೊ ಆಂಟಿಆಕ್ಸಿಡೆಂಟಗಳು,ಅನಾತೋಲ ಅಂತಾ ಕರಸ್ಕೊಳ್ಳೋ ಫೈಟೋನ್ಯೂಟ್ರಿಯಂಟಗೊಳು ಉರಿಯೂತ ತಡಿಯೊದರ ಜೊತಿಗೆ ಕೋಶಗಳು ಕ್ಯಾನ್ಸರ ಕೋಶಾಗಿ ಬದಲಾಗೋದನ್ನೂ ತಡಿತಾವು. ಅಲ್ಲದ ಇದರೊಳಗಿರೋ ನಾರಿನಂಶ ಮತ್ತ ಸಿ ಜೀವಸತ್ವಗೊಳು ಕ್ಯಾನ್ಸರ ಚಿಕಿತ್ಸೆ ಒಳಗ ಬಳಕಿ ಆಗತಾವ.

ಹಂಗಾಗಿ ಸ್ತನ,ಯಕೃತ್ತು,ಶ್ವಾಸಕೋಶ ಮತ್ತ ಕೊಲೊನಿನ ಕ್ಯಾನ್ಸರಗಳನ್ನ ತಡೆಗಟ್ಟಾಕ ಬಡೇಸೋಪ ಬಳಸತಾರ.

15. ಗಂಡಸರಿಗೂ ಬಡೇಸೋಪಿಂದಾ ಭಾರೀ ಉಪಯೋಗ ಐತಿ.

ಗಂಡಸರಿಗೆ ಸಂಭಂದ ಪಟ್ಟಂಗ ಬಡೇಸೋಪನ್ನ ಲಿಬಿಡೋ-ಬೂಸ್ಟರ್ ಅಂತಾ ಕರೀಬೌದು. ಇದು ಅವರೊಳಗ ಲೈಂಗಿಕ ಆಸಕ್ತಿಗಳನ್ನ ಉತ್ತೇಜಿಸತದ. ಗಾಳಿಗುಳ್ಳಿ ಮತ್ತ ಪ್ರಾಸ್ಟೆಟ್ಗೆ ಸಂಬಂಧಿಸಿದ ಸಮಸ್ಯೆಗಳನ್ನ ನಿವಾರಸತದ. ಮತ್ತ ದೀರ್ಘಕಾಲದ ಸಂಬೋಗೋದ್ರೇಕದ ಪರಾಕಾಷ್ಠೆಗಳನ್ನೂ ನಿವಾರಸತದ.

16. ಮೊಡವೆಗಳ ಚಿಕಿತ್ಸೆಗೂ ಬಳಕೆ ಆಗತದ

ಬಡೇಸೋಪಿನೊಳಗ ಎನಿಟೊಲ, ಮೈರ್ಸಿನ, ಲಿಮೊನೆನ ನಂಥಾ ಎಣ್ಣಿ ಅಂಶ ಇರತದ. ಅವು ನಂ ಚರ್ಮದಾಗಿನ ಎಣ್ಣಿ ಅಂಶಾ ತಗದ ಹಾಕೋದ್ರ ಜೋಡಿ ಮೊಡವಿಗಳನ್ನೂ ಬತ್ತಸತಾವು.

totalmedsolutions.com
ಇಲ್ಲಿ ತನಕಾ ಬಡೇಸೋಪಿನ ಉಪಯೋಗಾ ತಿಳಕೊಂಡವಿ, ಈಗ ಯಾರ್ಯಾರು ಎಷ್ಟೆಷ್ಟ ಪ್ರಮಾಣದ್ ಚಹಾ ತೊಗೋಬೇಕು ಅಂತಾನೂ ತಿಳಕೊಳ್ಳೊಣ.

ನಮ್ಮ ಒಂದ ದಿನದ್ದ ಚಹಾದೊಳಗ 5 ರಿಂದಾ 7 ಗ್ರಾಂ ಬಡೇಸೋಪ ಬಳಸಬೇಕು. ಹೆಚ್ಚಗಿ ಬಳಸಿದರ ಎಡವಟ್ಟ ಆಗಬೌದು, ಎಚ್ಚರ.

ಹಂಗಾರ ಬಡೇಸೋಪಿನ ಚಹಾ ಹೆಂಗ ಮಾಡೋದು?

1. ಸಾದಾ ಬಡೇಸೋಪಿನ ಚಹಾ

ಮಾಡಾಕ ಬೇಕಾಗೋ ಸಾಮಾನು :-  ಬಡೇಸೋಪು ಮತ್ತ ನೀರು

ವಿಧಾನ: ಒಂದೆರಡ ಚಮಚೆ ಬಡೇಸೋಪನ್ನ ಚೊಲೋತ್ನಾಗಿ ಕುಟ್ಟಿ, ನಿರಾಗ ಹಾಕಿ ಕುದಸರಿ. ಚನ್ನಾಗಿ ಕುದ್ದಿದ್ದ ರಸಾನ ಒಂದ ಲೋಟಾಕ್ಕ ಸೋಸಿಕೊಂಡು ತುಸಾ ಜೇನತುಪ್ಪಾ ಸೇರಿಸಿಕೊಂಡ ಕುಡದಬಿಡ್ರಿ.

ಕುಡಿಬೌದು ಆದರ ಜೇನ ಬೆರಸಿದರ ರುಚಿ ಚೊಲೊ ಇರತದ.

2. ಜೀರಿಗಿ,ಕೊತಂಬರಿ, ಬಡೇಸೋಪಿನ ಚಹಾ

ಬೇಕಾಗೋ ಸಾಮಾನು :- 1 ½ ಲೋಟಾ ನೀರು, 2 ಚಮಚೆ ಬಡೇಸೋಪು, 2 ಚಮಚೆ ಕೊತಂಬರಿ, 2 ಚಮಚೆ ಜೀರಿಗಿ

ವಿಧಾನ: ಜೀರಗಿ, ಕೊತಂಬರಿ, ಬಡೇಸೋಪನ್ನ ಚೊಲೊತ್ನಾಗಿ ಕುಟ್ಟಿ, ನೀರಾಗ ಹಾಕಿ ಕುದಸರಿ. ಆಮೇಲೆ ಸೋಸಿಕೊಂಡ ಕುಡಿರಿ.

3. ಪುದಿನಾ ಬಡೆಸೋಪಿನ ಚಹಾ

ಬೇಕಾಗೋ ಸಾಮಾನು :- 2 ಚಮಚಾ ಪುದಿನಾ ಎಲಿ, ½ ಚಮಚಾ ಬಡೆಸೋಪು

ವಿಧಾನ: ಬಡೇಸೋಪ ಕುಟ್ಟಿ ಗಾಜಿನ ಡಬ್ಬಿಗೆ ಹಾಕರಿ, ಅದರೊಳಗ ಪುದಿನಾ ಎಲಿ ಮತ್ತ ಬಿಸಿ ನೀರ ಹಾಕಿ 5 ನಿಮಿಷ ಮುಚ್ಚಿಡರಿ. ಆಮೇಲ ಕುಡಿರಿ.

4. ಬಡೆಸೋಪು, ಶುಂಠಿ ಚಹಾ

ಬೇಕಾಗೋ ಸಾಮಾನು :- 1 ಚಮಚ ಶುಂಠಿ, 1 ಚಮಚ ನಿಂಬೆ ರಸ, 2 ಚಮಚ ಬಡೇಸೊಪು

ವಿಧಾನ: ಬಡೇಸೋಪ ಕುಟ್ಟಿ, ಶುಂಠಿ ಜೋಡಿ ನೀರಾಗ ಹಾಕಿ ಕುದಿಸರಿ. ಆಮೇಲೆ ಸೋಸಿ ಕೊಂಡ ಕುಡಿರಿ.  ಆನ್ ಲೈನ ನ್ಯಾಗೂ ಬಡೆಸೋಪಿನ ಚಹಾದ ಡಬ್ಬಿಗಳು ಸಿಗತಾವು ನೀವು ಅವನ್ನೂ ಬೇಕಾರ ಬಳಸಬೌದು.

ಆಹಾರ, ಅದು ಎಷ್ಟ ಅದ್ಬುತ ಆಗಿದ್ದರೂ ಕೆಲವು ಅಡ್ಡಪರಿಣಾಮಗಳು ಇದ್ದ ಇರತಾವ. ಬಡೆಸೋಪಿನ ಚಹಾನೂ ಇದಕ್ಕ ಹೊರತಾಗಿಲ್ಲ.

  1. ಸನ್ಬರ್ನ ಆಗಬಹುದು – ನಂ ಚರ್ಮಾನ ಸೂರ್ಯಾನ ಶಾಖಾ ತದಕೊಳ್ಳಾಕ ಆಗಲಾರದಷ್ಟ ಸೂಕ್ಷ್ಮ ಮಾಡಬೌದು.
  2. ಅಲರ್ಜಿ ಆಗಬೌದು – ಕೆಲವು ಮಂದಿಗೆ ಇದರ ಅಲರ್ಜಿ ಆಗಿ ತಲಿ ತಿರಗೋದು, ಗಂಟಲು ನೋವು ಮತ್ತ ಮೈಬಾವು ಆಗಬೌದು.
  3. ಬಸರಿದ್ದವರಿಗೆ ತ್ರಾಸ ಆಕ್ಕೆತಿ – ಬಸರ ದ್ದವರು ಮತ್ತ ಹಾಲ ಕುಡಿಸೋ ತಾಯಂದರಿಗೆ ಮುಟ್ಟಿನ ಸಮಸ್ಯೆ, ಗರ್ಭಪಾತಗಳಾಗೋ ಸಾಧ್ಯತೆ ಅದ.
  4. ಬೇರೆ ಔಷಧಿಗಳ ಜೋಡಿ ಸಂವಹನ ಮಾಡತದ – ಬಡೆಸೋಪಿನಾಗೂ ಔಷಧಿ ಗುಣ ರೋದರಿಂದ ದು ಬೇರೆ ಔಷಧಿ ಜೊಡಿ ಕೂಡಿದರ ಆರೋಗ್ಯದ ಮ್ಯಾಲೆ ಕೆಟ್ಟ ಪರಿಣಾಮ ಆಗತದ. ಒಂದೋ ಈ ಚಹಾಕ್ಕೂ ಔಷಧಿಗೂ ಎರಡ ತಾಸ ಅಂತರಾ ಕೊಡರಿ ಅಥವಾ ಔಷಧಿ ತೊಗೊಳೊ ಅಷ್ಟ ದಿನಾ ಚಹಾ ಬಿಟ್ಟಬಿಡರಿ.
  5. ಎಂಡೋಕ್ರೈನ ವ್ಯವಸ್ಥೆಗೆ ಹಾನಿ ಆಗಬೌದು – ರಕ್ತಸ್ರಾವದ ಸಮಸ್ಯೆ ಇದ್ದರ  ಚಹಾ ಕುಡಿಬ್ಯಾಡರಿ. ನಿಂ ಎಂಡೋಕ್ರೈನ ವ್ಯವಸ್ಥೆಗೆ ಹಾನಿ ಆಗೋ ಸಾದ್ಯತೆ ಇರತದ.
  6. ನವಜಾತ ಶಿಶುಗಳಿಗೆ ಈ ಚಹಾ ಒಳ್ಳೆದಲ್ಲ – ಬೆಳಿಯೋ ನರಗಳ ಮ್ಯಾಲೆ ಕೆಟ್ಟ ಪರಿಣಾಮಾ ಬೀರತದ . ನರ ದೌರಭಲ್ಯಾನೂ ಆಗಬೌದು. ಶಿಶುಗಳಿಗೆ ಈ ಚಹಾ ಕೊಡಬ್ಯಾಡರಿ.

ಕೊನೇ ಮಾತು

 ಈ ಬಡೇಸೋಪಿನ ಚಹಾ ಆರೋಗ್ಯಕ್ಕ ಒಳ್ಳೆದು, ಕಮ್ಮಿ ರೊಕ್ಕದ್ದು ಮತ್ತ ಬಳಸಾಕ ಸುಲಭವಾದಂತಹದ್ದು. ಮಿತವಾಗಿ ಬಳಸರಿ. ಆರೋಗ್ಯ ವೃದ್ಧಿಸಿಕೊಳ್ಳರಿ.

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: