ಸುಖ ದಾಂಪತ್ಯದ ಈ 12 ಗುಟ್ಟುಗಳ್ನ ಕೃಷ್ಣನ ಹೆಂಡತಿ ಸತ್ಯಭಾಮಂಗೆ ದ್ರೌಪದಿ ಹೇಳ್ಕೊಟ್ಟಿದ್ಲಂತೆ

"ಅವರಿವರ ವಿಷ್ಯ ಮಾತಾಡೋ ಹೆಂಗಸರಿಂದ ದೂರ ಇರು"

ಮಹಾಭಾರತದಲ್ಲಿ ತುಂಬಾ ನಿಗೂಢ ಮತ್ತೆ ವಿಶೇಷ ಅನ್ನಿಸೋ ಹೆಂಗಸರಲ್ಲಿ ದ್ರೌಪದಿ ಹೆಸ್ರೇ ಮೊದ್ಲು ಬರೋದು. ದ್ರೌಪದಿಯಿಂದ್ಲೇ ಕುರುಕ್ಷೇತ್ರ ನಡೆದಿದ್ದು ಅನ್ನೋ ಕತೆ ಜೊತೆ ಆಕೆ ಅದೆಂಥಾ ಧೈರ್ಯವಂತೆ ಆಗಿದ್ಲೂ ಅನ್ನೋದೂ ಕೂಡ ಅದೇ ಕತೇಲಿ ನಾವ್ ನೋಡ್ಬೋದು. ಒಬ್ಬರಲ್ಲ ಇಬ್ರಲ್ಲಾ ಐದು ಜನ ಗಂಡಂದಿರ (ಪಾಂಡವರ) ಹೆಂಡತಿಯಾಗಿ ಆಕೆ ಜೀವನ ಮಾಡಿದ ರೀತಿ ನೋಡಿದ್ರೆ ಕಲೀಬೇಕಾದ್ದು ತುಂಬಾನೇ ಇದೆ.

ಮಹಾಭಾರತದ ಒಂದು ಅಧ್ಯಾಯ... ಸತ್ಯಭಾಮಾ ಕೃಷ್ಣನ ಜೊತೆಗೆ ಮದ್ವೆ ಆಗೋ ಮೊದ್ಲು... ದ್ರೌಪದಿ ಮತ್ತೆ ಸತ್ಯಭಾಮ ಮಾತಾಡ್ತಾ ಕೂತಿದ್ದಾಗ ಈ 12 ಸಂಸಾರದ ಗುಟ್ಟನ್ನ ಸತ್ಯಭಾಮಂಗೆ ಹೇಳ್ಕೊಟ್ಟಳಂತೆ. ಈಗ ನೀವೂ ಓದಿ...

1. "ಹೆಂಡತಿ ಬುದ್ದಿವಂತೆಯಾದ್ರೆ ಅವಳ ಮತ್ತು ಗಂಡನ ಮನೆಯವರ ಬಗ್ಗೆ, ನೆಂಟರ ಬಗ್ಗೆ ಸರ್ಯಾಗಿ ತಿಳ್ಕೊಂಡಿರ್ತಾಳೆ. ನೀನು ತಿಳ್ಕೊಳ್ಳೊ ಪ್ರಯತ್ನ ಮಾಡು"

ಮೂಲ

2. "ನಾನು ನಿಜವಾದ ತಮಾಷೆಗೆ ಮಾತ್ರ ನಗೋದು. ಸುಮ್ನೆ ಸುಮ್ನೆ ನಗೋಲ್ಲ. ಹಾಗಿರೋದ್ರಿಂದಾನೆ ಗಂಡಂದ್ರು ನನ್ನ ನಗಿಸೋಕ್ಕೆ ನಿಜವಾದ ಪ್ರಯತ್ನ ಮಾಡ್ತಾರೆ"

ಮೂಲ

3. "ಗಂಡನಲ್ಲಿರೋ ನ್ಯೂನತೆಗಳ್ನ ಎತ್ತಿ ಮಾತಾಡಬಾರ್ದು. ಬೆಂಕಿಯ ಜೊತೆಗೆ ಹೊಗೆ ಇರೋ ಹಾಗೆ ಪ್ರಪಂಚದ ತುಂಬೆಲ್ಲಾ ಒಂದಲ್ಲಾ ಒಂದು ನ್ಯೂನತೆ ಇದ್ದೆ ಇರುತ್ತೆ. ಅದನ್ನೆಲ್ಲಾ ಮರ್ತು ಮುಂದೆ ಹೋಗೋ ಬುದ್ಧಿವಂತಿಕೆ ಇರ್ಬೇಕು"

ಮೂಲ

4. "ಗಂಡನ ಜೊತೆಗೆ ದ್ವೇಷ ಸಾಧಿಸೋದು ಒಳ್ಳೇದಲ್ಲ ಹಾಗೇ ಎಲ್ಲ ವಿಷಯದಲ್ಲೂ ಕ್ಷಮಿಸೋದೂ ಸರಿಯಲ್ಲ. ಎರಡನ್ನೂ ತೂಗಿಸ್ಕೊಂಡು ಹೋಗೋದನ್ನ ಕಲೀಬೇಕು"

ಮೂಲ

5. "ಬುದ್ಧಿವಂತ ಹೆಂಡ್ತಿಗೆ ಕೋಪದ ಕೈಗೆ ಬುದ್ಧಿ ಕೊಡಬಾರ್ದು ಅಂತ ಗೊತ್ತಿರ್ಬೇಕು. ಇಲ್ದಿದ್ರೆ ತೊಂದ್ರೇಲಿ ಸಿಕ್ಕಾಕ್ಕೊಂಡು ಒದ್ದಾಡ್ಬೇಕಾಗುತ್ತೆ"

ಮೂಲ

6. "ಸದಾಕಾಲ ಗಂಡನ್ನ ಅಂಕೇಲಿ ಇಟ್ಕೊಳ್ಳೋದು ಬಿಡ್ಬೇಕು. ಹಾಗ್ ಮಾಡೋಕ್ಕೋಗಿ ಮಾಟ-ಮಂತ್ರ ಯಂತ್ರ-ತಂತ್ರ ಅಂತೇನಾದ್ರೂ ಮಾಡಿದ್ರೆ ಅದ್ರಿಂದ ತಾಪತ್ರಯ ಆಗ್ಬೋದು"

ಮೂಲ

7. "ಅವರಿವರ ವಿಷ್ಯ ಜಾಸ್ತಿ ಗುಸು ಗುಸು ಮಾಡೋ ಹೆಂಗಸರಿಂದ ದೂರ ಇರೊದೊಳ್ಳೆದು. ಯಾಕಂದ್ರೆ ಅವ್ರ ಪ್ರಭಾವದಿಂದ ಜೀವನಾನೇ ಹಾಳಾಗ್ಬೋದು"

ಮೂಲ

8. "ಕುಟುಂಬದಲ್ಲಿರೋರು ದೊಡ್ಡೋರೆ ಆಗಿರ್ಲಿ ಚಿಕ್ಕೋರೇ ಆಗಿರ್ಲಿ ಎಲ್ಲಾರ್ಗೂ ಪ್ರೀತಿ ಜೊತೆ ಮರ್ಯಾದೇನೂ ಕೊಡ್ಬೇಕು. ಅದು ಬಾಂಧವ್ಯ ಗಟ್ಟಿಯಾಗೋದಕ್ಕೆ ಸಹಾಯ ಮಾಡುತ್ತೆ"

ಮೂಲ

9. "ಮನೆ ಕೆಲ್ಸ ಕಾರ್ಯ ಮಾಡೋದಕ್ಕೆ ಗಂಡನ್ನ ಗಮನಿಸ್ಕೊಳ್ಳೋದಕ್ಕೆ ಸೋಮಾರಿತನ ಪಡಲೇಬಾರದು. ಮನೆ ಅಚ್ಚುಕಟ್ಟಾಗಿಡೋ ಹೆಂಡ್ತೀನ ಗಂಡ ತುಂಬಾನೇ ಪ್ರೀತಿ ಮಾಡ್ತಾನೆ"

ಮೂಲ

10. "ಸುಮ್ಸುಮ್ನೆ ಕೆಲಸ ಕಾರ್ಯ ಇಲ್ದೆ ಕಿಟಕಿ ಹತ್ರ ಬಾಲ್ಕನೀಲಿ ಮನೆ ಹೊರ ಅಂಗಳದಲ್ಲಿ ಓಡಾಡಬಾರ್ದು. ಅದ್ರಿಂದ ಸಮಾಜ ಅವಳ ಬಗ್ಗೆ ತಪ್ಪು ತಿಳ್ಕೊಳ್ಳೊ ಸಾಧ್ಯತೆ ಹೆಚ್ಚು"

ಮೂಲ

11. "ಸೋಮಾರಿಯಾಗಿ ಕೂತ್ಕೊಳ್ಳೋದು, ಗುರ್ತು ಪರಿಚಯ ಇಲ್ಲದೋರ ಹತ್ರ ಬೇಕಿಲ್ಲದ್ದೆಲ್ಲಾ ಮಾತಾಡೋದೂ ಮಾಡಬಾರ್ದು. ಅದ್ರಿಂದ ಹೆಣ್ಣಿನ ಘನತೆ ಹಾಳಾಗುತ್ತೆ"

ಮೂಲ

12. "ಅನೈತಿಕತೆ ಅನ್ನೋದು ಬದುಕಲ್ಲಿ ಬಂದ್ರೆ ಕುಟುಂಬದಲ್ಲಿರೋ ಹೆಣ್ಣೂ ದಾರಿ ತಪ್ತಾಳೆ. ಹೆಣ್ಣು ದಾರಿ ತಪ್ಪಿದ್ರೆ ಸಮಾಜದಲ್ಲಿ ಸಾವಿರ ಸಮಸ್ಯೆ ಶುರುವಾಗುತ್ತೆ"

ಮೂಲ

ಉಪಯೋಗ ಪಡ್ಕೊಳ್ಳೋದು ನಿಮಗೆ ಬಿಟ್ಟಿದ್ದು...

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ:

9 ಸಾಮಾನ್ಯ ಸೌಂದರ್ಯ ಸಮಸ್ಯೆಗಳಿಗೆ ದುಬಾರಿ ಬ್ಯೂಟಿ ಟ್ರೀಟ್ಮೆಂಟ್ ಇಲ್ಲದೆ ಪರಿಹಾರ ಕಂಡ್ಕೊಳೋದು ಹೇಗೆ ನೋಡಿ

ಏನೇನೋ ಮಾಡ್ಕೊಂಡು ಪರದಾಡೋದ್ಯಾಕೆ?

ಪ್ರತಿಯೊಂದು ಹೆಣ್ಣಿಗೂ ತಾನು ತುಂಬಾ ಸುಂದರವಾಗಿ ಕಾಣಬೇಕು ಅನ್ನೋ ಆಸೆ ಇದ್ದೇ ಇರತ್ತೆ. ಆ ಕಾರಣಕ್ಕೆ ಎಷ್ಟೆಷ್ಟೋ ರೀತೀಲಿ ತಾನು ಹೇಗೆಲ್ಲಾ ಸುಂದರವಾಗಿ ಕಾಣಬೋದು ಅಂತ ಯೋಚೆ ಮಾಡ್ತಾನೇ ಇರ್ತಾಳೆ. ಇತ್ತೀಚೆಗೆ ಅಂಗಡಿನಲ್ಲಿ ಸಿಗೋ ಯಾವ ಪದಾರ್ಥನೂ ಕೂಡ ಬಳಸೋದಿಕ್ಕೆ ಮನಸ್ಸಾಗದೆ ಇದ್ರೂ , ತಾನು ಚೆನ್ನಾಗಿ ಕಾಣದಿದ್ದರೆ ಹೇಗೋ ಏನೋ ಅನ್ನೋ ಭಯದಲ್ಲಿ ಉಪಯೋಗಿಸೋದಕ್ಕೆ ಶುರು ಮಾಡ್ತಾಳೆ. ನೀವು ಅವರಲ್ಲಿ ಒಬ್ರಾ? ಖಂಡಿತ ಬೇಡಾರಿ... ಅಂತೆಕಂತೆ ಹೇಳ್ತಾ ಇರೋ ವಿಷ್ಯ ಗಮನ ಕೊಟ್ಟು ಕೇಳಿ. ನೈಸರ್ಗಿಕವಾಗಿ ಸಿಗೋ ಪದಾರ್ಥಗಳಿಂದಾನೇ ನಿಮ್ಮ ಅಂದ ಹೆಚ್ಚಿಸ್ಕೋಬೋದು.  

1. ರೆಪ್ಪೆ ಕೂದಲು ಉದ್ದವಾಗಿ, ದಟ್ಟವಾಗಿ, ಸುಂದರವಾಗಿ ಕಾಣ್ಬೇಕು ಅಂದ್ರೆ

ಕಣ್ರೆಪ್ಪೆ ಕೂದಲು ಚೆನ್ನಾಗಿ ಕಾಣೋದಕ್ಕೆ ಮನೆಯಲ್ಲಿ ತಯಾರಿಸುವ ಎಣ್ಣೆ ಮಿಶ್ರಣ ತುಂಬಾ ಒಳ್ಳೆಯದು. ಸಮಪ್ರಮಾಣದಲ್ಲಿ ಹರಳೆಣ್ಣೆ, ಬಾದಾಮಿ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಜೊತೆಗೆ ವಿಟಮಿನ್ ಇ ಕೂಡ ಸೇರ್ಸಿ ಒಂದು ಜಾರ್ನಲ್ಲಿ ಇಡಿ. ಎಲ್ಲ ಮಿಕ್ಸ್ ಆದ್ಮೇಲೆ ಅದನ್ನ ಡ್ರೈ ಆಗಿರೋ ಕಣ್ರೆಪ್ಪೆ ಮೇಲೆ ಹಚ್ಚಿ ಇಡೀ ರಾತ್ರಿ ಬಿಡಬೇಕು. ಈ ತರ ಒಂದೆರಡ್ ವಾರ ಪ್ರತಿ ದಿನ ಮಾಡಿ ನೋಡಿ. ಚೆನ್ನಾಗಿರೋ ರೆಪ್ಪೆಕೂದ್ಲು ನಿಮ್ಮದಾಗುತ್ತೆ.

ಮೂಲ

2.  ಕೂದಲು ತುಂಬಾ ಸೀಳ್ಕೊಂಡಿದ್ರೆ

ಕೂದಲಿನ ಆರೈಕೆ ತುಂಬಾ ಮುಖ್ಯ ಮತ್ತೆ ಅಷ್ಟೇ ಕಷ್ಟ. ಆದ್ರೆ ಪ್ರತಿ ದಿನ ನಾವದನ್ನ ನಾಳೆ ಮಾಡಿದ್ರೆ ಆಯ್ತು ಅಂದ್ಕೊಂಡು ದಿನಾಗ್ಲೂ ಮರ್ತೇ ಹೋಗ್ತೀವಿ. ಏನು ಮಾಡ್ಬಹುದು ಅಂದ್ರೆ, ಮನೇಲಿ ಇದಕ್ಕೋಸ್ಕರ ಒಂದು  ಮಾಸ್ಕ್ ತಯಾರು ಮಾಡಬಹುದು. ಒಂದು ಪಾತ್ರೇಲಿ ಮೊಟ್ಟೆಯ ಬಿಳಿ ಭಾಗ ಜೊತೆಗೆ ಮನೇಲಿ ಹೆಪ್ಪು ಮಾಡಿರೋ ಮೊಸರು ಇದರ ಜೊತೇಗೆ ಒಂದು ಟೇಬಲ್ ಸ್ಪೂನ್ ನಷ್ಟು ಹರಳೆಣ್ಣೆ ಮತ್ತಿನ್ನೊಂದು ಟೇಬಲ್ ಸ್ಪೂನಷ್ಟು ಕೊಬ್ಬರಿ ಎಣ್ಣೆ ಎಲ್ಲಾ ಸೇರ್ಸಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಒಂದು ಸ್ಪೂನ್ ಬೆಣ್ಣೆ ಹಣ್ಣು ಮತ್ತು ಒಂದು ಟೇಬಲ್ ಸ್ಪೂನ್ ಜೊಜೊಬಾ ಆಯಿಲ್ ಸೇರಿಸಿ. ಎಲ್ಲಾನೂ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನ ನೇರವಾಗಿ ಕೂದಲಿಗೆ ಹಚ್ಚಿ ಅದರ ಮೇಲೆ ಒಂದು ಕವರ್ ಕ್ಯಾಪ್ ಹಾಕ್ಕೋಬೇಕು. ಹೀಗೆ ಒಂದು ಗಂಟೆ ಬಿಟ್ಟು ಆಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ಕೂದಲನ್ನು ತೊಳೀಬೇಕು.

ಮೂಲ

3. ನಿಮ್ಮ ಕೈಗಳು ಸುಂದರವಾಗಿ, ಮೃದುವಾಗಿ ಇರ್ಬೇಕು ಅಂದ್ರೆ

ಸುಂದರವಾದ ಕೈಗಳು ನಿಮ್ಮದಾಗ್ಬೇಕು ಅಂದ್ರೆ ನೀವು ನಿತ್ಯ ಬಳ್ಸೋ ಕ್ರೀಮ್ಗೆ ಅಷ್ಟೇ ಪ್ರಮಾಣದ ವಿನೆಗರ್ ಸೇರಿಸಿ, ಅದನ್ನು ಪ್ರತಿ ರಾತ್ರಿ ಮಲಗೋ ಮೊದ್ಲು ಕೈಗಳಿಗೆ ಲೇಪಿಸಿ ಮಲಗಬೇಕು. ಎರಡು ವಾರಗಳ ಕಾಲ ಹೀಗೇ ತಪ್ಪದೆ ಮಾಡಿ ನೋಡಿ. ಎರಡು ವಾರಗಳ ನಂತರ ನಿಮ್ಮ ಕೈ ಎಷ್ಟು ಮೃದುವಾಗತ್ತೆ ಅಂತ ನೋಡಿ ಆಶ್ಚರ್ಯ ಪಡ್ತೀರ.

ಮೂಲ

4. ಕೂದಲು ನುಣುಪಾಗಿ ಮಿಂಚ್ಬೇಕು ಅಂದ್ರೆ

ಚೆನ್ನಾಗಿ ಹಣ್ಣಾಗಿರೋ ಬಾಳೆಹಣ್ ತೊಗೋಳಿ. ಅದನ್ನ ಚೆನ್ನಾಗಿ ಮಿಕ್ಸರ್ಗಾಕಿ ಬ್ಲೆಂಡ್ ಮಾಡಿ ಇದಕ್ಕೆ ಒಂದು ಟೇಬಲ್ ಸ್ಪೂನಷ್ಟು ಆಲಿವ್ ಆಯಿಲ್ ಬೆರೆಸಿ. ಮನೇಲೆ ಹೆಪ್ಪು ಹಾಕಿರೋ ಮೊಸರು ಒಂದು ಟೇಬಲ್ ಸ್ಪೂನ್ ಜೊತೆಗೆ ಎರಡು ಟೇಬಲ್ ಸ್ಪೂನ್ ನಷ್ಟು ಜೇನು ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಒದ್ದೆ ಕೂದಲಿಗೆ ಈ ಮಿಶ್ರಣಾನ ಹಚ್ಚಿ ಅರ್ಧ ಗಂಟೆ ಆದ್ಮೇಲೆ ಉಗುರು ಬೆಚ್ಚಗಿರೋ ನೀರಲ್ಲಿ ತೊಳೀರಿ. ಆವಾಗ್ಲೆ ನಿಮ್ಮ ಕೂದಲು ಶೈನಿ ಶೈನಿ ಆಗಿರೋದನ್ನ ನೋಡಿ ಸಖತ್ ಖುಷಿ ಪಡ್ತೀರಿ.

ಮೂಲ

5.  ಒಣ ಚರ್ಮ ತೆಗೆದು ಹಾಕ್ಬೇಕು ಅಂದ್ರೆ

ಲೋಳೆ ಸರ ತುಂಬಾ ಒಳ್ಳೇ ಪದಾರ್ಥ. ಎಲ್ಲ ತರದ ಚರ್ಮದ ತೊಂದರೆಗಳಿಗೆ ಇದನ್ನ ಬಳಸ್ತಾರೆ. ಲೋಳೆಸರದ ಜ್ಯೂಸ್ ಗೆ ಮೂರು ಟೇಬಲ್ ಸ್ಪೂನಷ್ಟು ಬಿಸಿ ನೀರು ಹಾಕಿ ಮೂರು ಟೇಬಲ್ ಸ್ಪೂನ್ನಷ್ಟು ಆಲ್ಕೋ ಹಾಲ್ ಬೆರೆಸಿ  ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಒಡೆದ ಚರ್ಮದ ಮೇಲೆ ಹಚ್ಬೇಕು. ಹೀಗೆ ಮಾಡೋದ್ರಿಂದ ಒಣ ಚರ್ಮದ ತೊಂದರೆ ನಿವಾರಣೆ ಆಗುತ್ತೆ. 

ಮೂಲ

6. ಉಗುರು ಆರೋಗ್ಯವಾಗಿ ಇಟ್ಕೊಬೇಕು ಅಂದ್ರೆ

ಉಗುರು ಸುಂದರವಾಗಿ ಆರೋಗ್ಯವಾಗಿ ಕಾಣಬೇಕು ಅಂದ್ರೆ ನಿಮ್ಮ ಉಗುರುಗಳಿಗೆ ನಿಂಬೆರಸದ ಸ್ನಾನ ಮಾಡಿಸ್ಬೇಕು. ಹೌದು ನಿಂಬೆ ರಸದಲ್ಲಿ ಒಂದ್ ಹದಿನೈದು ನಿಮಿಷ ನಿಮ್ಮ ಉಗುರುಗಳನ್ನ ನೆನೆಸೋದ್ರಿಂದ ನಿಮ್ಮ ಉಗುರುಗಳಿಗೆ ಒಳ್ಳೆಯ ಆರೋಗ್ಯ ಮತ್ತು ಆಕಾರ ಸಿಗುತ್ತೆ.

ಮೂಲ

7. ಒಣ ತುಟಿಗಳು ಆರೋಗ್ಯವಾಗಿ ಕಾಣ್ಬೇಕು ಅಂದ್ರೆ

ಕ್ಯಾರೆಟ್ ಜ್ಯೂಸ್ ಗೆ ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನ ತುಟಿಗಳಿಗೆ ಹಚ್ಚಿ ಏಳರಿಂದ ಹತ್ತು ನಿಮಿಷಗಳ ಕಾಲ ಹಾಗೇ ಬಿಡಿ ಆಮೇಲೆ ಬೆಚ್ಚಗಿರೋ ನೀರಿಂದ ತೊಳೀರಿ. ನಿಮ್ಮ ತುಟಿಗಳು ಕೋಮಲವಾಗಿರತ್ತೆ.

ಮೂಲ

8. ಕಣ್ಣಿನ ಸುತ್ತ ಆಗಿರೋ ಡಾರ್ಕ್ ಸರ್ಕಲ್ ತೆಗಿಬೇಕು ಅಂದ್ರೆ

ತಣ್ಣಗಿರೋ ಹಾಲಲ್ಲಿ ಹತ್ತಿ ಉಂಡೆಗಳನ್ನ ನೆನೆಸಿ ಅದನ್ನ ಕಣ್ಣಿನ ಮೇಲೆ ಪ್ರತಿದಿನ ಹದಿನೈದು ನಿಮಿಷಗಳ ಕಾಲ ಇಟ್ಕೋಳೋದನ್ನ ಅಭ್ಯಾಸ ಮಾಡ್ಕೊಳಿ. ಇದ್ರಿಂದ ಕಣ್ಣಿನ ಸುತ್ತ ಇರೋ ಕಪ್ಪು ಕಲೆ ಮಾಯ ಆಗೋಗುತ್ತೆ.  

ಮೂಲ

9. ಮುಖದ ಕಾಂತಿ ಹೆಚ್ಚಾಗ್ಬೇಕು ಅಂದ್ರೆ

ಟೊಮ್ಯಾಟೋ ಕತ್ತರಿಸಿ ಅದರ ಮೇಲೆ ಸಕ್ಕರೆ ಉದುರಿಸಿ ಇದನ್ನು ಮುಖದ ತುಂಬ ವೃತ್ತಾಕಾರದಲ್ಲಿ ಮುಖದ ಮೇಲೆ ಉಜ್ಜುತ್ತಾ ಬನ್ನಿ. ಹತ್ತು ನಿಮಿಷ ಹಾಗೇ ಬಿಡಿ. ಅದಾದ್ಮೇಲೆ ತಣ್ಣೀರಿಂದ ತೊಳೀರಿ. ನೀವು ಹೀಗೆ ವಾರಕ್ಕೆ ಮೂರು ನಾಲ್ಕು ಸರ್ತಿ ಮಾಡ್ಬೇಕು. 

ಮೂಲ

ಎಷ್ಟೊಂದು ಸುಲಭ ಅಲ್ವಾ ಇವೆಲ್ಲಾ? ಈ ಉಪಾಯಗಳನ್ನ ಮಾಡಿ, ನಿಮ್ಮ ಸೌಂದರ್ಯ ಹೆಚ್ಚಿಸ್ಕೊಂಡು, ಖುಷಿಯಾಗಿರಿ.  

ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ: